19
June
2013

ನಮ್ಮ ಮುಖವನ್ನು ಚೇತೋಹಾರಿಯಾಗಿಸುವ ಉಪಾಯ

October 26, 2010 - 11:00pm
ragosha

 

ಧಾವಂತದ ಈ ಯುಗದಲ್ಲಿ ಎಲ್ಲದರಲ್ಲೂ ಸ್ಪರ್ದೆಯೇ!

 

ಓಡುವುದರಲ್ಲಿ,  ಹಿಂದೆ ಬೀಳಿಸುವುದರಲ್ಲಿ,

 

ಅಂತೆಯೇ ಸೌಂದರ್ಯ ವರ್ಧನೆಯಲ್ಲೂ!!!!

ನಾವು ನಿತ್ಯ ಬಳಸುವ ಎಷ್ಟೋ ವಸ್ತುಗಳನ್ನು ಉಪಯೋಗಿಸಿಕೊಂಡೇ ನಾವಿದ್ದುದರಲ್ಲಿಯೇ ಇನ್ನೂ ಸುಂದರವಾಗಿ ಕಾಣಬಹುದು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಲಾರದು.
ನಾನಿಲ್ಲಿ ಇನ್ನೊಮ್ಮೆ ಅಂತಹದ್ದೇ ವಿಷಯ ( ಉಪಾಯ) ವೊಂದನ್ನು ಸಂಪದಿಗರಿಗಾಗಿ ಪ್ರಸ್ತಾಪಿಸುತ್ತಿದ್ದೇನೆ.

ನಮ್ಮ ಮುಖ ದಿನವೂ ಬಿಸಿಯ, ತಂಪಿನ , ಬಿಸಿಲಿನ, ಮಳೆಯ, ಗಾಳಿಯ , ಕಲುಶಿತ ವಾತಾವರಣದ ಕಾರಣ ಭಗ್ನಗೊಳ್ಳುತ್ತಿರುತ್ತದೆ. ದಿನವೂ ಅಸಂಖ್ಯಾತ ಕಾರಣಗಳಿಂದ ನಮ್ಮ ಮುಖವು ಯುದ್ಧ ಭೂಮಿಯಾಗುತ್ತಿರುತ್ತದೆ.
ಅದಕ್ಕೆ ಅಷ್ಟೇ ಬೇಗದಲ್ಲಿ ನಮ್ಮ ಮುಖದ ಮೇಲಿನ ಮಲೀನತೆಯನ್ನು ಕಳೆದುಕೊಂಡು ಚೇತೋಹಾರಿಯಾಗಿಸುವ ಉಪಾಯವಿದ್ದರೆ...?
ಅದೇ ನಾನು ಹೇಳಹೊರಟಿರುವುದು.

ಶುದ್ಧವಾದ ತೆಂಗಿನೆಣ್ಣೆಯನ್ನು ಎರಡೂ ಕೈಗೆ ಧಾರಾಳವಾಗಿ ಹಚ್ಚಿಕೊಂಡು ಮುಖ ಹಾಗೂ ಕತ್ತಿಗೆ ಧಾರಾಳವಾಗಿ ಹಚ್ಚಿಕೊಂಡು ಎರಡು ನಿಮಿಷ ಉಜ್ಜುತ್ತಿರಿ. ನಂತರ ಮುಖವನ್ನು ಬಿಸಿ ಬಿಸಿ ನೀರಿನ ಹಬೆಗೆ ೧೦-೧೫ ನಿಮಿಷ ಚೆನ್ನಾಗಿ ಬೆವರು ಬರುವಷ್ಟು ಹೊತ್ತು ಒಡ್ಡಿ. ನಂತರ ಹತ್ತಿಯಲ್ಲಿ ಚೆನ್ನಾಗಿ ವರೆಸಿಕೊಳ್ಳಿ , ನಿಮ್ಮ ಮುಖದ ಕೊಳೆ ಎಲ್ಲವೂ ಹತ್ತಿಯಲ್ಲಿ ವರ್ಗಾವಣೆ ಹೊಂದಿರುವುದನ್ನು ಗಮನಿಸಿ. ಹಾಗೂ ನಿಮ್ಮ ಮುಖ ಚೇತೋಹಾರೀಯಾಗಿ ಮಿಂಚುವದನ್ನೂ.

 

ವಾರಕ್ಕೆ ಎರಡು ಅಥವಾ ಮೂರು ಸಲ ಮಾಡಿಕೊಂಡು , ಪಕ್ಕದವರನ್ನು ಅಸೂಯೆಗೊಳಿಸಿ.

ಲೇಖನ ವರ್ಗ (Category): 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on

ಹಬೆಗೆ ಹತ್ತಿರವಿಟ್ಟ ಮುಖವನ್ನು ಹತ್ತಿಯಿಂದ ಒರೆಸಿಕೊಂಡು, ನಂತರ ಕನ್ನಡಿಯಲ್ಲಿ ನಿಮ್ಮ ಮುಖನೋಡಿ ಆಶ್ಚರ್ಯ ಮತ್ತು ಖುಷಿಪಡುವ ನೀವು, ನಿಮ್ಮ ಮುಖ ತೊಳೆಯುವುದನ್ನೇ ಮರೆತುಬಿಡುತ್ತೀರಿ...

ಆದರೂ ಮುಖ ತೊಳೆಯುವುದಕ್ಕೆ ಅಡ್ಡಿ ಏನೂ ಇರದು...
:)

Submitted by ragosha on

ಹಬೆ ಎಂದರೆ ನೀರೇ ಅಲ್ಲವೇ
ಹತ್ತಿಯಿಂದ ಒರೆಸಿದರೆ ನಿಮ್ಮ ಮುಖ ತೊಳೆದ ಹಾಗೇ ಆಯ್ತಲ್ಲ
ಬೇಕಿದ್ದರೆ ಒಳ್ಳೆಯ ನೀರಿನಿಂದ ಪುನಹ ಮುಖ ತೊಳೆಯ ಬಹುದು.
ಪ್ರತಿಕ್ರೀಯೆಗೆ ಧನ್ಯವಾದಗಳು

Submitted by partha1059 on

ತೆಂಗಿನೆಣ್ಣೆ ಹುಡುಕಬಹುದು, ಆದರೆ ಮುಖವನ್ನು ಹಬೆಗೆ ಹಿಡಿಯಲು ಅಡಿಗೆಮನೆಗೆ ಹೋದರೆ ನನ್ನ ಪತ್ನಿ ಹಾಗು ಮಗಳ ಪ್ರತಿಕ್ರಿಯೆ ಏನೊ ಗೊತ್ತಿಲ್ಲ (??) ಆದರು ಪ್ರಯತ್ನ ಪಡುವೆ.

Submitted by kamalap09 on

ಅದಕ್ಕೂ ಇನ್ನೊಂದು ಮಾರ್ಗವಿದೆ. ೬೦-೭೦ ರೂ ಕೊಟ್ಟು ಇನ್ಹೇಲ್ ಮೆಷೀನ್ ತಂದುಬಿಡಿ. ಎರಡೇ ನಿಮಿಷಕ್ಕೆ ನೀರು ಕುದಿಯತ್ತೆ. ಅದ್ರಲ್ಲೂ ಸಕ್ಕತ್ ಎಫೆಕ್ಟ್ ಇದೆ.

Submitted by Iynanda Prabhukumar on

ಮಾಡುತ್ತಿದ್ದೆ... ಪಕ್ಕದವರು ಅಸೂಯೆಯಿ೦ದ, "ನಿಮಗೇನ್ರೀ ಬ೦ತು, ಈ ವಯಸ್ಸಿನಲ್ಲಿ ಮುಖವನ್ನ ಚೇತೋಹಾರಿ ಮಾಡಿ, ಸೌ೦ದರ್ಯ ವರ್ಧಿಸಿಕೊಳ್ಳೋಕೇ?" ಅ೦ತ ಪ್ರೊಗ್ರಾಮನ್ನ recycle binಗೆ ಹಾಕಿ ತಾನು ನಿ೦ತಳು - ಸೌ೦ದರ್ಯವರ್ಧನೆಗೆ... ಈಗಿರೋವಷ್ಟು ಸಾಲ್ದೂ೦ತ...

Submitted by ragosha on

ಪ್ರಭು ಅವರೇ
ನಿಮ್ಮ ಜತೆ ತಿರುಗಲಾದರೂ ನಿಮಗೆ ತಕ್ಕಷ್ಟು ಚೇತೋಹಾರಿಯಾಗಬೇಕಲ್ಲ ಎಂದು ಬಿಡಿ, ಆಗಲಾದರೂ ನಿಮಗೆ ಪ್ರಯತ್ನಿಸಲು ಬಿಟ್ಟಾರು!!
ಪ್ರಯತ್ನಿಸಿ ನೋಡಿ.