23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಾನು ಬರೆವ ಕವಿತೆ ನನಗೆ...

November 2, 2010 - 11:35pm
vinaypatel

ನಾನು ಬರೆವ ಕವಿತೆ ನನಗೆ
ನನ್ನ ಮನದ ಕನ್ನಡಿ
ಪ್ರೀತಿ ಸ್ನೇಹ ತ್ಯಾಗ ಸ್ವಾರ್ಥ
ಎಲ್ಲ ಇದಕೆ ಮುನ್ನುಡಿ

ಮನದ ಎಲ್ಲ ಕದವು ತೆರೆಯೆ
ಭಾವ ಹೊರಗೆ ಹರಿವುದು
ಅದಕೆ ನೈಜ ರೂಪವನ್ನು
ಎನ್ನ ಕವಿತೆ ಕೊಡುವುದು

ಮನವು ಹರ್ಷದಿಂದ ಕುಣಿಯೆ
ಕವಿತೆ ತುಂಬ ಪದಗಳು
ಒಮ್ಮೆ ಮನವು ಅಳುತ ಕೂತ್ರೆ
ಕಣ್ಣ ತುಂಬ ಹನಿಗಳು

ಮನಸು ಅಳಲು ಕವಿತೆ ಬರೆಯೆ
ಎಲ್ಲ ಎಲ್ಲ ನಶ್ವರ
ಮನಸು ಕುಣಿಯೆ ಕವಿತೆ ಬರೆಯೆ
ಎಲ್ಲಾ... ಬೇಕೋ ಈಶ್ವರ

ಪ್ರೀತಿ ನೀನು ಪ್ರೇಮ ನೀನು
ಮನದ ನೂರು ಆಸೆ ನೀನು
ತ್ಯಾಗ ನೀನು ಸ್ವಾರ್ಥ ನೀನು
ಮನದ ಕವಲು ದಾರಿ ನೀನು

ನಗುವು ನೀನು ನೋವು ನೀನು
ಕಣ್ಣ ನೂರು ಹನಿಯು ನೀನು
ಬದುಕು ಸಾವು ಎಲ್ಲಾ ನೀನು
ನೀನೆ ನಾನ ಪಯಣ ಹಾದಿಯು

ನೀನೆ ಬಂಧು ನೀನೆ ಬಳಗ
ನನ್ನ ಪ್ರೀತಿ ಕವಿತೆಯೇ
ನೀನೆ ನನಗೆ ಎಲ್ಲಾ ಇಂದು
ನನ್ನ ಮನದ ಭಾವವೇ

ಮನಕೆ ಹರ್ಷ ತರುವ ನಿನಗೆ
ವರ್ಷಧಾರೆಯಾಗಲಿ
ನನ್ನು ಬರೆದ ನನ್ನ ಕವಿತೆ
ನೂರು ಮನವ ಗೆಲ್ಲಲಿ...

ಲೇಖನ ವರ್ಗ (Category): 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು