ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ದಿ ಬೆಸ್ಟ್ ಆಫ್ 'ಸಂಪದ' › ಲಲಿತ ಪ್ರಬಂಧ, ಹಾಸ್ಯ

ಅಂಗಳದ ಮೆಣಸಿನಕಾಯಿ

September 6, 2005 - 3:20am — gvmt

[ ಈ ಕಿರುಬರಹವನ್ನು ಹಿಂದೆ ನನ್ನ ಸ್ವಂತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಸಂಪದದ ಓದುಗರಿಗೆಂದು ಮತ್ತೆ ಇಲ್ಲಿ ಹಾಕುತ್ತಿದ್ದೇನೆ. - ವೆಂ ]

ನೆಲ್ಲಿಕಾಯಿಯ ಗಾತ್ರ. ಅಂಗೈಯಲ್ಲಿ ಹಿಡಿಯಲು ಸುಲಭಸಾಧ್ಯ. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ. ಇದೊ ಅಬನೇರೊ (Habanero). ಅಸ್ಸಾಮಿನ ಮೆಣಸಿನಕಾಯಿಯ ಬಗ್ಗೆ ಇರುವ ಚರ್ಚೆ ಇಲ್ಲಿಲ್ಲ. ಸದ್ಯಕ್ಕಂತೂ ಇದರಷ್ಟು ಖಾರದ ಮೆಣಸಿನಕಾಯಿ ಜಗತ್ತಿನಲ್ಲಿ ಬೇರೆ ಇಲ್ಲ. ಎಷ್ಟು ಖಾರ? ಗುಂಟೂರಿನ ಕಾಯಿಯಷ್ಟೆ? ಎಂದೀರಿ. ಖಾರವನ್ನೂ ಅಳೆಯಬಹುದು ಗೊತ್ತ? ಸ್ಕೋವಿಲ್ (Scoville) ಹೆಸರಿನ ವಿಜ್ಞಾನಿ, ಪುಣ್ಯಾತ್ಮ, ಒಂದಷ್ಟು ಜನರಿಗೆ ಅರೆದ ಮೆಣಸಿನಕಾಯಿಯನ್ನು ತಿನ್ನಿಸಿ ಅದರ ಬಾಯುರಿ ಕಡಿಮೆಯಾಗಲು ಎಷ್ಟು ಸಕ್ಕರೆ ನೀರು ಕುಡಿಯುತ್ತಾರೆ ಎನ್ನುವುದರ ಮೇಲೆ ಒಂದೊಂದು ಜಾತಿಯ ಕಾಯಿಗೆ ಒಂದೊಂದು ಅಂಕೆಯನ್ನು ಹಚ್ಚಿದ. ಅವನ ಪ್ರಕಾರ ದಪ್ಪ ಮೆಣಸಿನಕಾಯಿಯಲ್ಲಿ ಯಾವ ಖಾರವೂ ಇಲ್ಲವಾದ್ದರಿಂದ ಅದರ ಅಂಕೆ ೦. ಮೆಣಸಿನಕಾಯಿ ತಿನಿಸಿದ ಪುಣ್ಯ ಸ್ಕೋವಿಲ್‌ನಿಗೆ ಸೇರಬೇಕಾದ್ದರಿಂದ ಈ ಅಳತೆಗೆ ಸ್ಕೋವಿಲ್‌ನ ಹೆಸರನ್ನೆ ಇಡಲಾಗಿದೆ. ನಾವು ಸಾಮಾನ್ಯವಾಗಿ ಬಳಸುವ ಹಸಿಮೆಣಸಿನಕಾಯಿ ೫೦೦೦೦ ದಿಂದ ೨೦೦೦೦೦ ಸ್ಕೊವಿಲ್‌ಗಳಷ್ಟು ಖಾರವಂತೆ. ಅಬನೇರೊವಿನದ್ದು ೨೦೦೦೦೦ರಿಂದ ೩೫೦೦೦೦ ಎನ್ನುತ್ತಾರೆ.

Habanero
ಅಬನೇರೊ

ಅಂದಮೇಲೆ ಖಾರವೆ ಆಯಿತಲ್ಲ? ನನಗೇನೊ ಹಸಿಮೆಣಸನ್ನು ಹೆಚ್ಚುವಾಗ ಆಗದ ಕೈಯುರಿ ಅಬನೇರೊ
ಹೆಚ್ಚುವಾಗ ಆಗುತ್ತದೆ. ಹಸಿಮೆಣಸನ್ನು ಅಗೆದಷ್ಟು ಸುಲಭವಾಗಿ ಅಬನೇರೋ ಚೂರನ್ನು
ಅಗೆಯಲಾರೆ. ಆದ್ದರಿಂದ ಅಬನೇರೊ ಖಾರವೆ. ಇವಳೂ ಒಪ್ಪಿಕೊಳ್ಳುತ್ತಾಳೆ. ಅದಕ್ಕೆ ಅಬನೇರೊ
ಹಾಕಿ ಅಡುಗೆ ಮಾಡುತ್ತೇನೆ ಅಂತ ನನ್ನ ಬಾವಮೈದನನ್ನು ಹೆದರಿಸುತ್ತಲೆ ಇರುತ್ತೇನೆ. ಅವನೂ
ಹೆದರುತ್ತಾನೆ.

ಇದು ಯಾವುದೂ ಬೇಡ, ಮಜ್ಜಿಗೆ ಪಳದ್ಯಕ್ಕೆ ನಾಲ್ಕಾರು ಹಸಿಮೆಣಸಿನ ಕಾಯಿ ಹಾಕುವ ಕಡೆ
ಒಂದು ನೆಲ್ಲಿಕಾಯಿ ಗಾತ್ರದ ಅಬನೇರೊ ಸಾಕು. ಮೇಲೆ ಮಜ್ಜಿಗೆ ಹಾಕಿಕೊಂಡರೂ ತಡೆಯುವಷ್ಟು
ಖಾರವಗಿರುತ್ತದೆ. ಕಾಯಿ ಸಾಸಿವೆ ಗೊಜ್ಜಿಗಾಗಲಿ ಖಾರ ಅರೆದು ಹಾಕಿದ ಪಲ್ಯಕ್ಕಾಗಲಿ
ನಾಲ್ಕಕ್ಕೆ ಒಂದು ಸಮವಾಗಿರುತ್ತದೆ. ಈಗ ನೀವೇ ಹೇಳಿ ಖಾರವೊ ಅಲ್ಲವೊ. ಆದರೆ ನನ್ನಮ್ಮ?
ಮಧು, ನನ್ನ 'ಬಾಮೈದ', ಊರಿಗೆ ಹೋದಾಗ ಅವನ ಕೈಲಿ ಒಂದಷ್ಟು ಅಬನೇರೊವನ್ನು ನಮ್ಮ ಮನೆಗೆ
ಕಳುಹಿಸಿದೆ. ಫೋನಿನಲ್ಲಿ ಅದರ ಖಾರವನ್ನು ಸಾಕಷ್ಟು ಬಣ್ಣಿಸಿಯೂ ಇದ್ದೆ. ಅದನ್ನು ಬಳಸಿದ
ಮೇಲೆ "ನೀನು ಹೇಳುವಷ್ಟು ಖಾರವೇನೂ ಇಲ್ಲ" ಎಂದು ತೀರ್ಪು ಕೊಟ್ಟರು. ನಾನು ಎಲ್ಲರಿಗಿಂತ
ಹೆಚ್ಚಾಗಿ ಖಾರವನ್ನು ತಡೆಯಬಲ್ಲೆ ಎಂದು ಜಂಭ ಕೊಚ್ಚುತ್ತಿದ್ದೆ, ಆಯಿತಲ್ಲ?

ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ, ನಮ್ಮ ಮನೆಯ ಅಂಗಳದಲ್ಲಿ ಅಬನೇರೊವಿನ ಗಿಡ
ಬೆಳೆಸುತ್ತಿದ್ದೇವೆ. ನೆಟ್ಟು ಎರಡು ವರ್ಷದ ಮೇಲಾಯಿತು. ಹೋದ ವರ್ಷ ಮೊದಲ ಬೆಳೆ ಬಂತು,
ದಿನಕ್ಕೆ ಮೂರು ನಾಲ್ಕು ನೆಲ್ಲಿ ಗಾತ್ರದ ಮೆಣಸಿನಕಾಯಿ. ದಿನಾಲೂ ತಪ್ಪದೆ ಕಿತ್ತು
ಫ್ರಿಜ್ಜಿನಲ್ಲು ಇಟ್ಟೆವು. ಖಾರದ ಅನುಭವವಾದ ಮೇಲೆ ಕೀಳುವುದು ಕಡಿಮೆಯಾಯಿತು. ಈಗ
ಮಾಗಿಯಲ್ಲಿ ಗಿಡದ ಎಲೆಗಳೆಲ್ಲ ಉದುರಿದ್ದರೂ ಮೈತುಂಬ ಮೆಣಸಿನಕಾಯಿ ತಳೆದು ನಿಂತಿರುವ
ಗಿಡ ಅಂಗಳದಲ್ಲಿ ನಿಂತಿದೆ. ಕೆಂಪಗಿನ ಅಬನೇರೊ ಅಲ್ಲಿಂದಲೆ ಅಣಕಿಸುತ್ತಿದೆ. ತಿನ್ನಲು
ಹೇಗಾದರೂ ಇರಲಿ ನೋಡಲಿಕ್ಕಂತೂ ಚೆನ್ನಾಗಿದೆ. ನಿಮಗೆ ಬೇಕಾದರೆ ಹೇಳಿ, ಕಿತ್ತು
ಕೊಡುತ್ತೇನೆ.

ಅಂದ ಹಾಗೆ ಗುಂಟೂರಿನ ಕಾಯಿ ೧೦೦೦೦೦ ಸ್ಕೋವಿಲ್‌ನಷ್ಟು ಖಾರವಂತೆ. ಅಬನೇರೊಗೆ ಹೋಲಿಸಿದರೆ
ಸಪ್ಪೆ. ನಂಬದಿದ್ದರೆ ನಾನು ಗುಂಟೂರು ಕಾಯಿ ತಿನ್ನುತ್ತೇನೆ, ನೀವು ಅಬನೇರೊ ತಿನ್ನಿ,
ಇಬ್ಬರೂ ಸಾಟಿಮಾಡಿ ನೋಡೋಣ.

** ಅಸ್ಸಾಮಿನಲ್ಲಿ "ರೆಡ್ ಸವೀನ" ಅಥವಾ "ಇಂಡಿಯನ್
ತೇಜ್‌ಪುರ್" ಹೆಸರಿನ ಮೆಣಸಿನಕಾಯಿ ರಖಮು ಬೆಳೆಯುತ್ತದೆಯಂತೆ. ಅದರದ್ದು ೫೦೦೦೦೦
ಸ್ಕೋವಿಲ್‌ಗೂ ಮೀರಿದ ಖಾರವಂತೆ. ಆದರೆ ಇದನ್ನು ಎಲ್ಲರೂ ಒಪ್ಪುವಂತೆ ಕಾಣೆ. ಅಲ್ಲದೆ
ಇದು ಹೆಚ್ಚಾಗಿ ಎಲ್ಲೂ ಕಂಡುಬಂದಿಲ್ಲ. ನನ್ನ ಹತ್ತಿರ ಈ ಗಿಡದ ಬೀಜಗಳಿವೆ. ಬಿತ್ತು
ನೋಡಬೇಕು.

‹ ಲಲಿತ ಪ್ರಬಂಧ, ಹಾಸ್ಯಮೇಲಿನ ಪುಟಕ್ಕೆಉದಿತಾಲೋಚನೆಗಳು ›
  • ಲಲಿತ ಪ್ರಬಂಧ, ಹಾಸ್ಯ
~.~
  • Printer-friendly version
  • Login or register to post comments
  • 1273 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 6, 2005 - 3:51am — hpn

ವಿಕಿಪೀಡಿಯಾದಲ್ಲಿ

hpn's picture

ಕನ್ನಡ ವಿಕಿಪೀಡಿಯದಲ್ಲಿ ಸ್ಕೋವಿಲ್ ಬಗ್ಗೆ ಈಗ ತಾನೆ ಒಂದು ಚುಟುಕು ಲೇಖನ ಪ್ರಾರಂಭಿಸಿದೆ... ನೋಡಿ:
ಲಿಂಕ್

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 6, 2005 - 9:54am — tvsrinivas41

ಬ್ಯಾಡಗಿ?

tvsrinivas41's picture

ಹಬನೆರೋ ಬಗ್ಗೆ ಓದ್ತಿದ್ರೇ ನನಗೆ ಹೊಟ್ಟೆ ಒಳಗೆ ಉರಿಯಾಗ್ತಿರೋ ಅನಿಸಿಕೆ. ಹಬನೆರೋ ಮೆಣಸಿನಕಾಯಿಯ ಬಣ್ಣ ಹೇಗಿದೆ. ಇನ್ನು ತಿನ್ನಕ್ಕಾಗತ್ತಾ? ನೀವೇನೋ ಗುಂಟೂರು ಖಾರ ತಿನ್ನಕ್ಕೆ ಸಿದ್ದ್ಯ. ನಾನು ಬ್ಯಾಡಗಿ ಮೆಣಸಿನಕಾಯಿ ಬೇಕಾದ್ರೆ ತಿನ್ನಬಲ್ಲೆ, ಅಷ್ಟೆ. ಇನ್ನು ಚೋಟು ಮೆಣಸಿನಕಾಯಿಗೂ ನಾನು ಹೆದರುವೆ.

ಬ್ಯಾಡಗಿಗಿಂತ ಕೆಂಪಾಗಿದೆಯಾ? ಬ್ಯಾಡಗಿ ಮೆಣಸಿನಕಾಯಿ ರುಚಿಗೆ ಮತ್ತು ಬಣ್ಣಕ್ಕೆ ಪ್ರಸಿದ್ಧ, ಆದರೆ ಅಷ್ಟು ಘಾಟು ಇರೋದಿಲ್ಲ.

ನಾಡಿಗರು ವಿಕಿಪೀಡಿಯದಲ್ಲಿ ಇದರ ಬಗ್ಗೆ ಚೆನ್ನಾಗಿ ಚುಟುಕಾಗಿ ಚುರುಕು ಮುಟ್ಟಿಸಿದ್ದಾರೆ.

ಈ ಸ್ಕೋವಿಲ್ ನ ಪ್ರಕಾರ ಬ್ಯಾಡಗಿಯ ರೇಟಿಂಗ್ ಹೇಗಿದೆ?

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 6, 2005 - 12:36pm — hpn

ಬ್ಯಾಡಗಿ

hpn's picture

ಬ್ಯಾಡಗಿ ಬಿಡಿ, ಒಂದು ಅಪೂರ್ವ ತರಹದ ಮೆಣಸಿನಕಾಯಿ... ಜಗತ್ತಿನ ಮೂಲೆ ಮೂಲೆಗೂ ರಫ್ತಾಗುತ್ತದೆಂದು ಶಿವಮೊಗ್ಗದ ಮಂಡಿಯವರೊಬ್ಬರಿಂದ ತಿಳಿದೆದ್ದೆ. ಅತಿ ಖಾರ, ಅತಿ ಸಪ್ಪೆ ಒಮ್ಮೆ ತಿನ್ನಲು ಮಾತ್ರ ಸಾಧ್ಯ... ಆದರೆ ಬ್ಯಾಡಗಿ? ಎಲ್ಲರಿಗೂ ಯಾವಾಗಲೂ ಬೇಕು!

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 6, 2005 - 8:52pm — gvmt

ನೂರು ಮಾತಿಗಿಂತ ಚಿತ್ರ ಒಂದು ಮೇಲು

gvmt's picture

ಚಿತ್ರ ಇಲ್ಲಿ ಹಾಕಿದೆ. ಇನ್ನು ತಿನ್ನಲಿಕ್ಕಾಗುತ್ತಾ? ಅಂದರೆ, ಇಡಿಯ ಕಾಯನ್ನು ಹಾಗೆಯೇ ಕಚಪಚ ಅಗೆದು ತಿನ್ನಲಿಕ್ಕೆ ನನ್ನ ಕೈಲಂತೂ ಆಗದು. ಆದರೆ ಅಡುಗೆಗೆ ಬಳಸಬಹುದು. ರುಬ್ಬಿಯೋ ತಿರುವಿಯೋ ಬಳಸಿದರೆ ತಿನ್ನುವುದು ಸುಲಭವಾಗುತ್ತೆ. ಬಾಯಿಗೆ ಸಣ್ಣ ಚೂರು ಸಿಕ್ಕಿದರೂ ಮುಕ್ಕಾಲು-ಮೂರುವೀಸಪಾಲು ಮಂದಿಗೆ ಸಂಕಟವೆ.

ಇನ್ನು ಬ್ಯಾಡಗಿಯ ಸ್ಕೋವಿಲ್ ರೇಟಿಂಗು ಏನಿದ್ದರೂ ಗುಂಟೂರಿನದನ್ನು ಮೀರಿ ಇರಲಾರದು.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2005 - 12:26pm — hpn

ಚಿತ್ರಗಳು

hpn's picture

ವಿಕಿಪೀಡಿಯಾದಲ್ಲಿದ್ದ ಒಂದು ಚಿತ್ರವನ್ನು ಲೇಖನದಲ್ಲೇ ಸೇರಿಸಿರುವೆ Smiling

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
  • ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
  • ನಾವಿರೋದು ಹೀಗೇ...
  • ನೆದೇರ್ಲಂಡ್ಸ್ ಚಲನಚಿತ್ರೋತ್ಸವ - ಕನ್ನಡ ಸಿನೆಮಾ
  • ಕನ್ನಡದಲ್ಲಿ ಶಾಯರಿ ಪ್ರಯತ್ನ
Syndicate content

ಲೇಖಕರು

gvmt's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator