ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಸೋಮೇಶ್ವರ ಶತಕ ೧೧ - ೧೫

January 21, 2007 - 9:41am — Sunil Jayaprakash

ಧರಣೀಶಂ ಧುರ ಧೀರನಾಗೆ ಧನಮುಳ್ಳಂ ತ್ಯಾಗಿಯಾಗಲ್ ಕವೀ |
ಶ್ವರ ಸಂಗೀತದಿ ಜಾಣನಾಗೆ ಸುಕಲಾಪ್ರೌಢಂಗಿರಲ್ ಫ್ರೌಢೆವೆಣ್ ||
ಬರೆವಂ ಧಾರ್ಮಿಕನಾಗೆ ಮಂತ್ರಿ ಚತುರೋಪಾಯಂಗಳಂ ಬಲ್ಲೊಡಂ |
ದೊರೆವೋಲ್ ಚಿನ್ನಕೆ ಸೌರಭಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೧||

ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ ಮೃಷ್ಟಾನ್ನ ಭೋ |
ಜನಕಂ ಸತ್ಫಲಕಂಜನಾದಿಯನುಲೇಪಂಗಳ್ಗೆ ಸಮ್ಮೋಹ ಸಂ ||
ಜನಕಾನಂದಕೆ ರಾಜಭೋಗಕೆ ಸುವಿದ್ಯಂಗಳ್ಗದಾರಾದೊಡಂ |
ಮನದೊಳ್ ಕಾಮಿಸದಿರ್ಪರೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೨||

ಸವಿವಣ್ಣಲ್ಲಿನಿಮಾವು ಸರ್ವರಸದೊಳ್ ಶೃಂಗಾರ ಸಂಭಾರದೊಳ್ |
ಲವಣಂ ಕೇಳಲು ಬಾಲಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್ ||
ಶಿವ ಬಿಲ್ಲಾಳ್ಗಳೊಳಂಗಜಂ ಜನಿಸುವಾ ಜನ್ಮಂಗಳೊಳ್ ಮಾನುಷಂ |
ಕವಿತಾವಿದ್ಯೆ ಸುವಿದ್ಯೆಯೊಳ್ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೩||

ಮಳೆಯೇ ಸರ್ವಜನಾಶ್ರಯಂ ಶಿವನೆ ದೇವರ್ಕಳ್ಗೆ ತಾನಾಶ್ರಯಂ |
ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆ ಸಾಧಾರಣಂ ||
ಬಳೆಯೇ ಸರ್ವ ವಿಭೂಷಣಕೆ ಮೊದಲೈ ಪುತ್ರೋತ್ಸವಂ ಸೂತ್ಸವಂ |
ಕೆಳೆಯೇ ಸರ್ವರೊಳುತ್ತಮಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೪||

ನಿಕೃಷ್ಟತೆ

ಫಲವತ್ತಿಲ್ಲದ ರಾಜ್ಯದಲ್ಲಿ ಪ್ರಭು ದಂಡಕ್ಕಾಸೆಗೆಯ್ವಲ್ಲಿ ಬಲ್ |
ಪುಲಿಗಳ್ ಸಿಂಗಗಳಿಕ್ಕೆಯಲ್ಲಿ ಪೆರವಣ್ಣಿರ್ದಲ್ಲಿ ಕುಗ್ರಾಮದೊಳ್ ||
ಗೆಲವಂ ತೋರದೆ ದುಃಖಮಪ್ಪ ಕಡೆಯೊಳ್ ಭೂತಂಗಳಾವಾಸದೊಳ್ |
ಸಲೆ ಬಲ್ಲರ್ ನಿಲೆ ಸಲ್ಲದೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೫||

ಇಕ್ಕೆ - ವಾಸಸ್ಧಳ, ಸಲೆ - ಚೆನ್ನಾಗಿ.

  • ಕಾವ್ಯ ಮತ್ತು ಕವನ
~.~
  • Login or register to post comments
  • 421 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 21, 2007 - 12:18pm — Shyam Kishore

ಸಂದೇಹ: ಸೋಮೇಶ್ವರ ಶತಕ ೧೧ - ೧೫

Shyam Kishore's picture

ಸುನಿಲ್,

೧೨ ನೇ ಪದ್ಯದ (ಧನಕಂ ಧಾನ್ಯಕೆ...) ಅರ್ಥ ಸ್ವಲ್ಪ ಬರೀತೀರಾ? ಇಲ್ಲಿ ನೋಡೋಣ ಅನ್ನೋಕೂ ಯಾವ ಪುಸ್ತಕ ಕೂಡ ಇಲ್ಲ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 21, 2007 - 1:11pm — Sunil Jayaprakash

ಸೋಮೇಶ್ವರ ಶತಕದ ೧೨ನೇ ಪದ್ಯ - ಧನಕಂ ಧಾನ್ಯಕೆ

Sunil Jayaprakash's picture

Shyam Kishore wrote:
ಶ್ಯಾಮ್ ಕಿಶೋರ್ ೧೨ ನೇ ಪದ್ಯದ (ಧನಕಂ ಧಾನ್ಯಕೆ...) ಅರ್ಥ ಸ್ವಲ್ಪ ಬರೀತೀರಾ?

ಶ್ಯಾಮ್ ಕಿಶೋರ್,

ಈ ಪದ್ಯದಲ್ಲಿ ಚತುರ್ಥೀ ವಿಭಕ್ತಿಯ(ಗೆ, ಇಗೆ, ಅಕ್ಕೆ) ಪ್ರಯೋಗವೇ ಜಾಸ್ತಿ ಇರುವುದರಿಂದ, ಹೀಗಿರಬಹುದೆನಿಸಿತು.

ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ ಮೃಷ್ಟಾನ್ನ ಭೋ |
ಜನಕಂ ಸತ್ಫಲಕಂಜನಾದಿಯನುಲೇಪಂಗಳ್ಗೆ ಸಮ್ಮೋಹ ಸಂ ||
ಜನಕಾನಂದಕೆ ರಾಜಭೋಗಕೆ ಸುವಿದ್ಯಂಗಳ್ಗದಾರಾದೊಡಂ |
ಮನದೊಳ್ ಕಾಮಿಸದಿರ್ಪರೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೨||

ಧನಕಂ - ಸಂಪತ್ತಿಗೆ, ಭೋಜನಕಂ - ಸವಿಯೂಟಕ್ಕೆ.

ಧನಕ್ಕೆ, ಧಾನ್ಯಕ್ಕೆ, ಒಡವೆ-ವಸ್ತ್ರಗಳಿಗೆ(ಭೂಷಣಾಂಬರ), ಸುವಾಸನೆಯುಳ್ಳ ಹೂವಿಗೆ, ಸವಿಯೂಟಕ್ಕೆ, ಸತ್ಫಲಕಂಜನಾದಿಯನುಲೇಪಂಗಳ್ಗೆ( ಸತ್ಫಲಕ = ಢಾಲು, ಗುರಾಣಿ, ಬರೆಯುವ ಹಾಳಿ, ಅಂಗೈ, ತೊಡೆ, ಟೊಂಕದ ಹಿಂಭಾಗ; ಅಂಜನ = ಕಾಡಿಗೆ; ಅನುಲೇಪ = ಮೈಗೆ ಬಳಿದುಕೊಳ್ಳುವ ಸುಗಂಧದ್ರವ್ಯ), ಸಮ್ಮೋಹ ಸಂಜನಕ ಆನಂದಕ್ಕೆ(ಮನಸ್ಸನ್ನು ತನ್ನತ್ತ ಸೆಳೆದುಕೊಳ್ಳುವ ಆನಂದಕ್ಕೆ) , ರಾಜಭೋಗಕ್ಕೆ, ಒಳ್ಳೆಯ ವಿದ್ಯೆಗೆ, ಆಸೆಪಡದವರು ಯಾರೂ ಇಲ್ಲ ಎಂಬರ್ಥದಲ್ಲಿ ಕವಿ ಹೇಳಿರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸೋಮೇಶ್ವರ ಶತಕ ೨೧ - ೨೫
  • ಸೋಮೇಶ್ವರ ಶತಕ ೧೬ - ೨೦
  • ಸೋಮೇಶ್ವರ ಶತಕ ೬ - ೧೦
  • ಯಾವುದು ಚೆನ್ನ...
  • ಯಾವುದು ಚೆನ್ನ ?
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ
  • ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?
  • Splendours of Royal Mysore
  • A Bicycle in Bettalli - ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಿಂದ ಆಯ್ದ ಭಾಗದ ಇಂಗ್ಲಿಶ್ ಅನುವಾದ

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: IT - ಸಿಂಪ್ಟಮ್ಸ
    September 5, 2008 - 4:16pm
  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 50 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator