ಸೋಮೇಶ್ವರ ಶತಕ ೧೬ - ೨೦
ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ |
ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನದಾಪತ್ತಿನೊಳ್ ||
ಮಣಿದುಂ ನೋಡದಾ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದಾ |
ತೃಣವೇ ಪರ್ವತವಲ್ಲವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ || ೧೬ ||
ತೆರನಂ ಕಾಣದ ಬಾಳ್ಕೆಯಲ್ಪಮತಿ ಕ್ಷುದ್ರಾರಂಭಮಲ್ಪಾಶ್ರಮಂ |
ಕಿರದೋಟಂ ಕಡೆವಳ್ಳಿ ಬೀಳುಮನೆ ಮುಂಗೆಯ್ವಾರ್ಭಟಂ ಸಾಲದಾ ||
ದೊರೆ ಕಾರ್ಯಂ ಘೃತಮಿಲ್ಲದೂಟದ ಸುಖಂ ದುರ್ಮಾರ್ಗರೊಳ್ ಸ್ನೇಹಮುಂ |
ಬರಿಗೈಯುಂ ಸುರಿದಂತೆಲೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || ೧೭ ||
ಪೊರೆದೇಂ ಬಾಳವೆ ಪಂದಿನಾಯ್ಗಳೊಡಲಂ ಮಾತಾಡಲೇ ಭೂತಗಳ್ |
ತರುಗಳ್ ಜೀವಿಗಳಲ್ಲವೇ ಪ್ರತಿಮೆಗಳ್ ಕಾದಾಡವೇ ತಿತ್ತಿಗಳ್ ||
ಮೊರೆಯುತ್ತೇನುಸಿರಿಕ್ಕವೇ ಗ್ರಹ ಗೃಹಂ ಚೆಲ್ಲಾಗಿರಲ್ ಸೇರದೇ |
ನಿರಲೇಕಜ್ಞರನೇಕದಿಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ || ೧೮ ||
ಜಡನಂ ಮೂರ್ಖನ ಕೋಪಿಯಂ ಪಿಸುಣನಂ ದುರ್ಮಾರ್ಗಿಯಂ ಪೆಂಡಿರಂ |
ಬಡಿದುಂ ಬೈವನ ನಂಟರುಣ್ಣಲುಡಲುಂಟಾಗಿರ್ದುದಂ ತಾಳದಾ ||
ಕಡು ಪಾಪಿಷ್ಠನ ಜಾಣ್ಮೆಯಿಲ್ಲದನನಿಷ್ಠ ಮಾಳ್ಪನಂ ನೋಡಿಯುಂ |
ನುಡಿಸಲ್ ಸಜ್ಜನರೊಲ್ವರೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ || ೧೯ ||
ಸತಿಯಾಲಾಪಕೆ ಸೋಲ್ವ ಜೂಜಿಗೆ ಖಳರ್ ಕೊಂಡಾಡುತಿರ್ಪಲ್ಲಿಗಂ |
ಅತಿ ಪಾಪಂ ಬಹ ಕಾರ್ಯಕಲ್ಪ ವಿಷಯಕ್ಕಂ ದಾಸಿಯಾ ಗೋಷ್ಠಿಗಂ ||
ಪ್ರತಿ ತಾನಿಲ್ಲದ ಮದ್ದು ಮಂತ್ರಂ ಮಣಿಗಂ ಸಂದೇಹಮಪ್ಪಲಿಗಂ |
ಮತಿವಂತರ್ ಮರುಳಪ್ಪರೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ || ೨೦ ||

- Login or register to post comments
- 315 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: