ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಶ್ರಿ. ಕಮಲೇಶ್ವರ್ - ಒಬ್ಬ ಶ್ರೇಷ್ಟ ಸಾಹಿತಿ, ಅಂದಿನ, ದೂರದರ್ಶನದ ಪಾದಾರ್ಪಣೆಯ ಸಮಯದ, ಶ್ರೇಷ್ಟ ಮಾತುಗಾರ, ಇನ್ನಿಲ್ಲ !

January 30, 2007 - 3:01pm — venkatesh

(೧೯೩೨-೨೦೦೭)

ಶ್ರಿ. ಕಮಲೇಶ್ವರ್- ಒಬ್ಬ ಶ್ರೇಷ್ಟ ಸಾಹಿತಿ, ಮಾತುಗಾರ, ದೂರದರ್ಶನ ಆಂಕರ್, ಶ್ರೇಷ್ಟ ಚಿತ್ರಪಟ ಲೇಖಕ. ಹೃದಯಾಘಾತದಿಂದ ಸ್ವಲ್ಪ ಸಮಯದಿಂದ ನರಳುತ್ತಿದ್ದ ೭೫ ವರ್ಷ ವಯಸ್ಸಿನ ಕಮಲೇಶ್ವರ್, ಶನಿವಾರದಂದು ತಮ್ಮ ಕೊನೆಯುಸಿರೆಳೆದರು. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ.

೧೯೭೩-೭೫ ರಲ್ಲಿ ದೂರದರ್ಶನದ ಕಾರ್ಯಕ್ರಮಗಳು ಆಗ ತಾನೇ ಪ್ರಾರಂಭವಾಗಿ ಗರಿಕೆದರುತ್ತಿದ್ದ ಕಾಲ. ನಾನು ದೂರದರ್ಶನದಲ್ಲಿ ಕಂಡ ಕಮಲೇಶ್ವರ್, ಒಬ್ಬ ಪ್ರಭಾವಿ, ಪ್ರತಿಭಾನ್ವಿತ ಮತುಗಾರ ; 'ಪರಿಕ್ರಮ' ಕಾರ್ಯಕ್ರಮದಲ್ಲಿ ಪ್ರೇಕ್ಷಕರಮೇಲೆ ಜಾದುಮಾಡಿದ್ದರು. ಬರವಣಿಗೆ, ದೃಷ್ಯ ಮಾಧ್ಯಮಗಳಲ್ಲೂ ಯಾವಾಗಲೂ ಹೊಸ ದಿಶೆಯನ್ನು ಅರಸಿ ಅದನ್ನು ಸಕ್ಷಮವಾಗಿ ಬೆಳೆಸಿ ನಮ್ಮೆಲ್ಲರಿಗೆ ಕೊಟ್ಟ, ಉತ್ತರ ಪ್ರದೇಶದ 'ಮೈನ್ ಪುರಿ' ಯಲ್ಲಿ ಜನಿಸಿದ ಕಮಲೇಶ್ವರ್ ಪ್ರಸಾದ್ ಸಕ್ಸೇನ, ಇಲಹಾಬಾದಿನ ವಿಶ್ವವಿದ್ಯಾಲಯದ ಹಿಂದೀ ಭಾಷೆಯ ಸ್ನಾತಕೊತ್ತರ ಪದವೀಧರರು. 'ಸರಿಕ,' ಎಂಬ ಅತ್ಯುತ್ತಮ ಸಾಹಿತ್ಯಪ್ರಿಯ ಪತ್ರಿಕೆಯ, ಸಂಪಾದಕರಾಗಿ ದುಡಿದರು. ೧೯೫೦ ರಲ್ಲಿ ಆಗತಾನೇ ಸ್ವಾತಂತ್ರ್ಯಗಳಿಸಿದ್ದ ದೇಶದ ಆಸೆಗಳನ್ನು ಗಮನದಲ್ಲಿಟ್ಟುಕೊಂಡು ಓದುಗರಿಗೆ 'ಹೊಸ ದಿಶೆ'ಯನ್ನು ಕೊಡುವಲ್ಲಿ ಶ್ರಮಿಸಿದರು. 'ನಯೀ ಕಹಾನಿಯಾ' ಅಂತಹ ಹೊಸ ಪ್ರಯತ್ನ ಎಲ್ಲರನ್ನೂ ಚಕಿತಗೊಳಿಸಿತು ! ಹೊಸ ಹೊಸ ಪ್ರತಿಭೆಗಳನ್ನು ಓದುಗರಿಗೆ ಪರಿಚಯಿಸಿದರು. ಅವರ ಜೊತೆಗೆ ಇದಕ್ಕೆ ಸ್ಪಂದಿಸಿದವರಲ್ಲಿ ಮೊಹನ್ ರಾಕೇಶ್, ರಜೀಂದ್ರಸಿಂಗ್ ಬೇಡಿ, ಯಾದವ್ ಮುಖ್ಯರು. ಅವರು ಮಾಡಿದ ಮುಖ್ಯ ಕೆಲಸವೆಂದರೆ ದಲಿತ ಮರಾಠಿ ಲೇಖಕರನ್ನೂ ಪ್ರೊತ್ಸಾಹಿಸಿ, ಬೊಹ್ರಾ ಮುಸ್ಲಿಮರ ಸಾಹಿತ್ಯಗಳನ್ನೂ ಹಿಂದಿ ಓದುಗರಿಗೆ ಪರಿಚಯಿಸಿದ್ದು. 'ರಾಜ್ ನಿರ್ಬನ್ಸಿಯಾ,' 'ಖೊಯೆ ಹುಯೆ ದಿಶಾಯೆ,' ಎಂಬ ಪುಸ್ತಕಗಳನ್ನು ಬರೆದರು.

'ಸಮನಾಂತರ' ಎಂಬ ಹೊಸ ಅಲೋಚನಾ ಲಹರಿಯನ್ನು ೧೯೭೦ ರಲ್ಲಿ ಶುರುಮಾಡಿದರು. ಆ ಸಮಯದಲ್ಲಿ ಶ್ಯಾಮ್ ಬೆನೆಗಲ್, ರಂತಹವರು, 'ಬೆಳ್ಳಿಪರದೆಯ' ಮೇಲೆ ಇದೇ ತರಹದ ಪ್ರಯೋಗ ಮಾಡುತ್ತಿದ್ದರು. 'ಕಿತನೆ ಪಾಕಿಸ್ತಾನ್' ಎಂಬ ಪುಸ್ತಕಕ್ಕೆ ಪ್ರಶಸ್ತಿ ದೊರೆಯಿತು. ಅವರ ಸ್ಥಾನ, ಪ್ರೇಮ್ ಚಂದ್, ಅಮೃತ್ ಲಾಲ್ ನಾಗರ್ ರಂತಹ ಉನ್ನತ ಮಟ್ಟದ್ದಾಗಿತ್ತು. ಸ್ವಲ್ಪದಿನ 'ಪ್ರೂಫ್ ರೀಡರ್' ಆಗಿಯೂ, 'ನೈಟ್ ವಾಚ್ ಮನ್' ಆಗಿಯೂ ಕೆಲಸಮಾಡಿದ್ದರು. ಅವರು ಬಾಲೀವುಡ್ ಗೆ ಪಾದಾರ್ಪಣೆಮಾಡಿ, 'ಮೌಸಮ್', 'ಛೋಟೀಸಿ ಬಾತ್' ಚಲನ ಚಿತ್ರಗಳನ್ನು ಮಾಡಲು ತಮ್ಮ ಯೋಗದಾನ ನೀಡಿದರು. ಇಂತಹ ಪ್ರಯತ್ನ, ಕಲೆ ಮತ್ತು ವಾಣಿಜ್ಯಗಳ ಶ್ರೇಶ್ಟ ಸಂಗಮವೆಂದು ಸಮೀಕ್ಷಕರು ಅಭಿಪ್ರಾಯ ಪಡುತ್ತಾರೆ. ಅವರ ಕಾದಂಬರಿಯನ್ನು ಆಧರಿಸಿ ತಯಾರಿಸಿದ 'ಆಂಧೀ' ಗುಲ್ಜಾರರ ಅತ್ಯುತ್ತಮ ಚಿತ್ರ. ಆದರೆ ತುರ್ತುಪರಿಸ್ಥಿತಿಯಲ್ಲಿ ಬಿಡುಗಡೆಯಾದ, ಈ ಚಿತ್ರವನ್ನು ತಡೆಹಿಡಿಯಲಾಗಿತ್ತು.'ಪದ್ಮಾಭೂಷಣ,' 'ಸಾಹಿಯ ಅಕ್ಯಾಡಮಿಯ ಪ್ರಶಸ್ತಿಗಳು' ಸ್ವಲ್ಪ ತಡವಾಗಿ ಬಂದವು.

ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಗುಲ್ಜಾರ್, ತಮ್ಮ ಚಿತ್ರಸಾಹಿತ್ಯದಲ್ಲಿ ಬಳಸಿದ 'ಕಜ್ರಾರೆ, ಮತ್ತು ಬೀದಿ' ಎಂಬ ಪದಗಳ ಬಗ್ಗೆ, ಕಮಲೇಶ್ವರರು ತಮ್ಮ ಪ್ರತಿಕ್ರಿಯೆ ನೀಡಿದ್ದನ್ನು, ಜ್ಞಾಪಿಸಿಕೊಳ್ಳುತ್ತಾರೆ. "ಈ ಬಾರಿ ದೆಹಲಿಗೆ ಹೋದರೆ, ಖಂಡಿತವಾಗಿಯೂ ಕಮಲೇಶ್ವರರ ಅನುಪಸ್ತಿಯನ್ನು ಎದುರಿಸಬೇಕಾಗುತ್ತದೆ" ! ಎನ್ನುತ್ತಾರೆ, ಅವರು.

  • ಚುಟುಕು ಬರಹ
~.~
  • Login or register to post comments
  • 409 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ವರ್ಷದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ - ಶ್ಯಾಮ್ ಬೆನೆಗಲ್ !
  • ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
  • ಅರರೆ, ಹೌದು. ಇವತ್ತು ಲತಕ್ಕಂಗೆ ೮೧ ತುಂಬ್ತಲ್ವಾ !
  • ಮಿಲಿ, ಆನಂದ್, ಗುಡ್ಡಿ ಯಂತಹ ಶ್ರೇಷ್ಟ ಹಿಂದಿ ಚಿತ್ರ ನಿರ್ಮಾಪಕ, ಹೃಷೀಕೇಶ್ ಮುಖರ್ಜಿ ನಿಧನ !
  • ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 153 ಅತಿಥಿಗಳು ಆನ್ಲೈನ್ ಇರುವರು.


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator