ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

"ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ

February 1, 2007 - 4:50am — Shyam Kishore

ಇದೇನು, ಇಷ್ಟು ವಿಚಿತ್ರವಾದ ತಲೆಬರಹ (ಅಥವಾ ತಲೆಹರಟೆ ಬರಹ) ಅಂತ ಅಂದುಕೊಳ್ಳುತ್ತಿದ್ದೀರಾ? ಹಾಗೇನೂ ಇಲ್ಲ. ಚಿಕ್ಕದಾಗಿ-ಚೊಕ್ಕದಾಗಿ ಹೇಳುತ್ತೀನಿ, ಕೇಳುವಂಥವರಾಗಿ.
ಕಳೆದ ತಿಂಗಳು ನನ್ನ ಸ್ನೇಹಿತನೊಬ್ಬ ಒಂದು "ಅಲ್ಲಗಳೆಯುವಿಕೆ" (ಅದೇ ಸ್ವಾಮಿ disclaimerಉ) ಬರೆಯಲು ಹೋಗಿ ಬಹಳ ಪೀಕಲಾಟಕ್ಕೆ ಸಿಗಿಹಾಕಿಕೊಂಡು, ನಮ್ಮೆಲ್ಲರ ನಗೆಪಾಟಲಿಗೆ ಗುರಿಯಾದ. ಅವನ ಪೇಚಾಟವೇ ನನಗೆ ಒಂದು ಲೇಖನಕ್ಕೆ ಸರಕಾಯಿತು ಅನ್ನೋದು ಬೇರೆ ವಿಷಯ. ಈ ಬಗ್ಗೆ ಬರೆಯೋಣ ಅಂತ ಹೊರಟ ನನಗೆ ಅದರಲ್ಲಿ ಬಳಸೋದಕ್ಕೆ ಒಂದು ಪತ್ರಿಕೆಯ ಹೆಸರು ಬೇಕಾಗಿತ್ತು. ಯಾವುದೇ ಪತ್ರಿಕೆಯನ್ನು ಸುಮ್ಮನೆ "ಉದಾಹರಣೆಗೆ" ಅಂತ ಹೆಸರಿಸಿದರೂ ಜನ "ಅದನ್ನೇ ಯಾಕೆ ಉದಾಹರಿಸಬೇಕು? ಇದನ್ನು ಯಾಕೆ ಸೂಚಿಸಬಾರದು" ಅಂತ ಹೇಳಬಹುದು. ಅದೂ ಸರಿ ಅನ್ನಿ, ಅವರವರ ಭಾವ-ಭಕ್ತಿ! ಅದಕ್ಕೆ ನಾನೇ ಒಂದು ಹೊಸ ಪತ್ರಿಕೆ ಪ್ರಾರಂಭಿಸಿದ್ದೀನಿ. ಮೊನ್ನೆ ತಾನೇ ಪ್ರಾರಂಭವಾಗಿದೆ. ಇದರ ಸಂಪೂರ್ಣ "ಕಾಪಿರೈಟ್"ಗೆ ಅರ್ಜಿ ಕೂಡ ಹಾಕೋಣ ಅಂತ ಯೋಚಿಸುತ್ತಿದ್ದೀನಿ; "ಹೆತ್ತವರಿಗೆ ಹೆಗ್ಗಣ ಮುದ್ದು" ನೋಡಿ. ನನ್ನ ಪತ್ರಿಕೆಯ ಹೆಸರು "ಉದಯ ಪ್ರಭ ಕರ್ನಾಟಕ ಪ್ರಜಾ ಟೈಮ್ಸ್" ಅಂತ! ಅದರ ಸಂಕ್ಷಿಪ್ತ ರೂಪವೇ "ಉಪ್ರಕಪ್ರಟೈ". ಹೇಗಿದೆ ಹೆಸರು? ಆಕಸ್ಮಾತ್, ಈ ಹೆಸರಿನದ್ದೂ ಒಂದು ಪತ್ರಿಕೆ ಕರುನಾಡಿನ ಯಾವುದಾದರೂ ಮೂಲೆಯಲ್ಲಿ ಇದ್ದಲ್ಲಿ, ನಮೋನ್ನಮಃ, ತಪ್ಪಾಯಿತು, ದಯವಿಟ್ಟು ಒಪ್ಪಿಸ್ಕೋಬೇಕು. ಇದಿಷ್ಟೂ ನನ್ನ ಮಾತು; ಇನ್ನು ಮುಂದೆ ನನ್ನ ಸ್ನೇಹಿತನ ಕಥೆ ಕೇಳುವಿರಂತೆ, ಬನ್ನಿ.

ನನ್ನ ಸ್ನೇಹಿತ ಒಬ್ಬ ಉದಯೋನ್ಮುಖ ಬರಹಗಾರ. ಅವನ ಹೆಸರು, ಊರು, ಕೇರಿ ಈ ಮೂರರ ತಂಟೆಯೂ ನಮಗೆ ಬೇಡ. ಆತ ನಮ್ಮ "ಉಪ್ರಕಪ್ರಟೈ" ಪತ್ರಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಕೆಲವೊಂದು ವಿಚಾರಗಳ ಬಗ್ಗೆ "ವಸ್ತುನಿಷ್ಠ"ವಾಗಿ ಟೀಕಿಸಿ ಬರೆಯಬೇಕು ಅಂತ ಅಂದುಕೊಳ್ಳುತ್ತಾನೆ. ಆದರೆ "ಉಪ್ರಕಪ್ರಟೈ" ಸಿಕ್ಕಾಪಟ್ಟೆ ಜನಪ್ರಿಯ ಪತ್ರಿಕೆ. ಅದರ ಬೆಂಬಲಿಗ ಅಭಿಮಾನಿಗಳ ಪಟ್ಟಿಯಲ್ಲಿ ಕನಿಷ್ಠ ಹತ್ತು ಹೆಸರಾಂತ ಸಾಹಿತಿಗಳು/ಚಿಂತಕರಿದ್ದಾರೆ. ಹಾಗೆಯೇ ಅದನ್ನು ಟೀಕಿಸುವವರ ಪಟ್ಟಿಯಲ್ಲಿ ಕೂಡ ಒಂಭತ್ತು ಹೆಸರಾಂತ ಸಾಹಿತಿಗಳು/ಚಿಂತಕರಿದ್ದಾರೆ ಅನ್ನೋದೂ ನಿಜ!

ಅವನಿಗೆ (ನನ್ನ ಸ್ನೇಹಿತ ಬರಹಗಾರನಿಗೆ) ಪೀಕಲಾಟ. ಟೀಕಿಸಿದ್ದಕ್ಕೆ ಪತ್ರಿಕೆಯ "ಪರ"ವಾಗಿರುವ ಹತ್ತು ಜನ ಸಾಹಿತಿಗಳು ಆ ಟೀಕೆಗಳನ್ನು ವೈಯಕ್ತಿಕವಾಗಿ ಪರಿಗಣಿಸಿ, ಮುಂದೊಂದು ದಿನ ತನ್ನನ್ನು ಸಾಹಿತ್ಯ ಪ್ರಪಂಚದ ಹೊಸ್ತಿಲಿನಲ್ಲೇ ನಿಲ್ಲಿಸಿ, ನಾಲ್ಕು ಬಾರಿಸಿ ಕಳಿಸಿದಲ್ಲಿ ಏನು ಕಥೆ? ಅಥವಾ "ಉಪ್ರಕಪ್ರಟೈ"ನ ಸಹಸ್ರಾರು "ಅಭಿಮಾನಿ ದೇವರುಗಳಲ್ಲಿ" ಯಾರಾದರೂ ಒಬ್ಬಿಬ್ಬರು ಮನೆಬಾಗಿಲ ತನಕ ಬಂದು, "ಕಾನೂನು ಕೈಗೆ ತಗೊಂಡ್ರೆ" ಏನು ಗತಿ ಅಂತ? ಆದರೆ ಬರೆಯದೆ ಇದ್ದಲ್ಲಿ "ನೀನು ನನಗೆ ದ್ರೋಹ ಮಾಡುತ್ತಿದ್ದೀಯಾ" ಅಂತ ಅವನ ಆತ್ಮಸಾಕ್ಷಿ (ಅಯ್ಯಪ್ಪ, ಎಷ್ಟು ದೊಡ್ದ ಪದ!) ದಿನಕ್ಕೆ ಹತ್ತು ಬಾರಿ, ಹಾಳಾದ್ದು ಕಾಫಿ-ಟೀ ಕುಡಿಯೋ ಟೈಮಲ್ಲೋ, ಅಥವಾ ಇನ್ಯಾವುದಾದರೂ ಲೇಖನ ಬರೆಯುವಾಗಲೋ, ಪಕ್ಕದಲ್ಲೇ ಕೂತು ಕೇಳುತ್ತೆ. ಕಚೇರಿಯಲ್ಲಿ ಕೆಲಸ ಮಾಡುವಾಗ ಬಂದು ಕೇಳೋದಕ್ಕೆ ಅದಕ್ಕೇನು ಕಷ್ಟಾನೋ ಗೊತ್ತಿಲ್ಲಪ್ಪ.

"ಅಯ್ಯೋ, ಇದ್ಯಾವುದರ ರಗಳೆಯೂ ಬೇಡ" ಅಂತ ಆತ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾನೆ. ಅದೇನಪ್ಪಾ ಅಂದ್ರೆ "ಎಲ್ಲರಿಗೂ ಒಪ್ಪಿಗೆಯಾಗುವಂಥ" ಒಂದು "ಅಲ್ಲಗಳೆಯುವಿಕೆ"ಯನ್ನು ಬರೆದು, ಅದರ ನಂತರ ತನ್ನ ವಸ್ತುನಿಷ್ಠ ಲೇಖನವನ್ನು ಪ್ರಾರಂಭಿಸೋದು ಅಂತ. ಹಾಗೆ ಯೋಚಿಸಿದ್ದೇ ತಡ ಆತನ ಮನಸ್ಸು ನಿರಾಳವಾಗುತ್ತದೆ. "ನಾಳೆ ಬೆಳಗ್ಗೆ ಎದ್ದು ಅಲ್ಲಗಳೆಯುವಿಕೆಯನ್ನು ಬರೆಯೋಣ" ಅಂತ ಯೋಚಿಸಿ, ಮುಸುಕು ಹಾಕಿ ಮಲಗುತ್ತಾನೆ. ರಾತ್ರಿ ಕನಸಿನಲ್ಲಿ ನರಸಿಂಹಸ್ವಾಮಿಯವರು ಬರಬೇಕೆ? ಯಾವ ನರಸಿಂಹಸ್ವಾಮಿ ಅಂದ್ರಾ? ಅದೇ "ಮೈಸೂರು ಮಲ್ಲಿಗೆ"ಯ ಕೆ.ಎಸ್.ನರಸಿಂಹಸ್ವಾಮಿ ಕಣ್ರೀ. ಕೆ.ಎಸ್.ನ ಅವರನ್ನು ನೋಡಿ ನಮ್ಮ ಬರಹಗಾರ ತಬ್ಬಿಬ್ಬೋ ತಬ್ಬಿಬ್ಬು. ಗೌರವ, ಗಡಿಬಿಡಿಗಳಿಂದ ಎದ್ದು ಕೂರುತ್ತಾನೆ. ಆಗ ಕೆ.ಎಸ್.ನ ಹೇಳುತ್ತಾರೆ. "ನಿನ್ನ ಆಲೋಚನೆ ನನಗೆ ಗೊತ್ತಾಯಿತು. ಒಂದು ಕಿವಿಮಾತು ಹೇಳಿ ಹೋಗೋಣ ಅಂತ ಬಂದೆ. ಅಲ್ಲಾ ಕಣಯ್ಯಾ, ಜಗತ್ತಿನಲ್ಲಿ ಎಲ್ಲರನ್ನೂ ಮೆಚ್ಚಿಸೋಕೆ ಆ ದೇವರಿಗೇ ಸಾಧ್ಯವಾಗಿಲ್ಲ. ಆ ದೇವರನ್ನೇ 'ಉಂಟು-ಇಲ್ಲ, ಸಾಕಾರಿ-ನಿರಾಕಾರಿ, ನಾಲ್ಕು ಕೈ-ಎರಡೇ ಕೈ' ಹೀಗೆಲ್ಲ ಜಗಳವಾಡುತ್ತಾರೆ. ಇನ್ನು ನೀನು ಯಾವ ಗಿಡದ ತೊಪ್ಪಲು? ಅದಕ್ಕೇ ತಾನೇ ನಾನು ಬರೆದದ್ದು 'ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ' ಅಂತ".

ಕನಸಿನ ವಿವರ (ಅಂದ್ರೆ ನನ್ನ ಸ್ನೇಹಿತ ಮತ್ತು ಕೆ.ಎಸ್.ನ ಅವರ ನಡುವಣ ಸಂಭಾಷಣೆ) ಬರೆದು ನಿಮ್ಮನ್ನು ಬೋರ್ ಹೊಡೆಸುವುದಿಲ್ಲ. ಸುತ್ತಿ ಬಳಸದೇ ನೇರವಾಗಿ ಹೇಳುವುದಾದಲ್ಲಿ, ನಮ್ಮ ಬರಹಗಾರ ತನ್ನ ತಾರುಣ್ಯದ ಆವೇಶದಿಂದಲೋ, ಆದರ್ಶದ ಹುಚ್ಚಿನಿಂದಲೋ, ಒಟ್ಟಿನಲ್ಲಿ ಕೆ.ಎಸ್.ನ ಅವರ ಮಾತನ್ನು ಒಪ್ಪದೇ, ನಯವಾಗಿಯೇ ತಿರಸ್ಕರಿಸಿ, ಅವರಿಗೆ ನಮಸ್ಕರಿಸಿ, "ಮಲ್ಲಿಗೆಯ ಕವಿಗೆ" ಅಚ್ಚ ಇಂಗ್ಲೀಷಿನಲ್ಲಿ "ಗುಡ್‌ನೈಟ್" ಹೇಳಿ, ಅವರನ್ನು ಕಳಿಸಿ ಬಂದು, ಪುನಃ ಮುಸುಕು ಹೊದ್ದು ಮಲಗುತ್ತಾನೆ.

(ನನ್ನ ಬರಹಗಾರ ಸ್ನೇಹಿತ ಏನು "ಅಲ್ಲಗಳೆಯುವಿಕೆ" ಬರೆದ, ಏನು "ವಸ್ತುನಿಷ್ಠ" ಲೇಖನ ಬರೆದ ಅಂತ ತಿಳಿದುಕೊಳ್ಳುವ ಕುತೂಹಲವೇ? ಕ್ಷಮಿಸಿ, ಅದನ್ನು ಹೇಳೋದಕ್ಕೆ ನನಗೆ ಇನ್ನೊಂದು ವಾರ ಸಮಯ ಬೇಕು. "ಎಲ್ಲಾ ಓಕೆ, ಸಮಯ ಯಾಕೆ" ಅಂದ್ರಾ? ನನ್ನ ಸ್ನೇಹಿತನಿಗೆ ಅದೇನಾಯ್ತೋ ಕಾಣೆ, ನಿನ್ನೆಯಿಂದ ಊರಲ್ಲೇ ಇಲ್ಲ. ಕಚೇರಿಗೂ ರಜೆ ಹಾಕಿದ್ದಾನಂತೆ. ಮುಂದಿನ ವಾರ ಬಂದ ತಕ್ಷಣ ಕೇಳಿ ಹೇಳುತ್ತೀನಿ. ಅಲ್ಲಿಯವರೆಗೆ: "ಇನ್ನೂ ಇದೆ/ಮುಂದುವರೆಯುವುದು...")

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 519 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 5, 2007 - 9:22pm — srivathsajoshi

Re: "ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ

srivathsajoshi's picture

"ಉಪ್ರಕಪ್ರಟೈ" ಪತ್ರಿಕೆಯಲ್ಲೇ ಪ್ರಕಟವಾಗಿರುವ ವರದಿಯಂತೆ ಅದರಿಂದ(ಅಂದರೆ ಉಪ್ರಕಪ್ರಟೈ ಪತ್ರಿಕೆಯಿಂದ) ಪ್ರಭಾವಿತವಾಗಿ ಇಂಗ್ಲಿಷ್ ಅನುವಾದಿತ

"The Hindustan Times of Indian Express" (ನಾಲ್ಕು ಇಂಗ್ಲಿಷ್ ದೈನಿಕಗಳ ಮಿಶ್ರತಳಿ) ಪತ್ರಿಕೆ ಸದ್ಯದಲ್ಲೇ (ಈ ತಿಂಗಳ 30ರಂದು?) ಶುರುವಾಗಲಿದೆಯಂತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2007 - 2:14am — Shyam Kishore

ಉ: "ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ

Shyam Kishore's picture

ಚೆನ್ನಾಗಿದೆ...ಈ ತಿಂಗಳ ಮೂವತ್ತನೇ ತಾರೀಖು ರಾಹುಕಾಲದಲ್ಲಿ ಶುರು ಮಾಡಲಿ ಅಂತ ನಿಮಗೆ ಆ ಪತ್ರಿಕೆಯನ್ನು ಪ್ರಾರಂಭ ಮಾಡುತ್ತಿರುವವರು ಗೊತ್ತಿದ್ದಲ್ಲಿ, ನನ್ನ ಪರವಾಗಿ ತಿಳಿಸಿ. Wink ಪತ್ರಿಕೆ ಬರೀ ನಡೆಯೋದಿರಲಿ, ಓಡುತ್ತೆ!

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ನೀಳ್ಗತೆ
  • ಮುಕ್ತಾಯ
  • ಬೈಟೊ ಕಾಫಿ !!! - ೧
  • ನಾಳೆ ನೀವೂ ಮಾಯ.............
Syndicate content

ಲೇಖಕರು

Shyam Kishore's picture

ಪರಿಚಯ

ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 54 ಅತಿಥಿಗಳು ಆನ್ಲೈನ್ ಇರುವರು.


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator