ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಡ್ಯಾಶರ್

September 9, 2005 - 2:37am — hpn

ಗೂಗಲ್ ನಲ್ಲಿ ಏನೋ ಹುಡುಕುತ್ತಾ ಕಳೆದುಹೋಗಿದ್ದ ನನಗೆ ಆಕಸ್ಮಿಕವಾಗಿ ದೊರಕಿದ್ದು ಈ ಪುಟ. ತಂತ್ರಾಂಶದ ಹೆಸರು - 'ಡ್ಯಾಶರ್'. ಆಶ್ಚರ್ಯವೇನಲ್ಲದಂತೆ ಉಬುಂಟು/ಡೆಬಿಯನ್ ರೆಪಾಸಿಟರಿಯಲ್ಲಿ ದೊರಕಿ ಈ ತಂತ್ರಾಂಶ ನನಗೆ ಆಪ್ಟ್ ಉಪಯೋಗಿಸಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡಲು ಸಾಧ್ಯವಾಯಿತು. (ಮೈಕ್ರೊಸಾಫ್ಟಿನ ಎಲ್ಲ ಆಪರೇಟಿಂಗ್ ಸಿಸ್ಟಮ್ ಗಳಿಗೂ ಹಾಗೂ ಮ್ಯಾಕ್ ಓಎಸ್ ಎಕ್ಸ್ ಗೂ ಈ ತಂತ್ರಾಂಶ ಲಭ್ಯವಿದೆ). ಒಟ್ಟಾರೆ ೧೦ ಎಮ್ ಬಿ ಗಿಂತ ಒಂದಷ್ಟು ಹೆಚ್ಚು ಗಾತ್ರದ ಡೌನ್ಲೋಡ್.

ಡ್ಯಾಶರ್ ಒಂದು ಕುತೂಹಲಕಾರಿ ತಂತ್ರಾಂಶ. ಇದರ ಪ್ರಾಜೆಕ್ಟ್ ಪುಟದಲ್ಲಿ ಇದರ ವಿವರ ಹೀಗಿದೆ:

ಡ್ಯಾಶರ್ ಒಂದು ಮಾಹಿತಿ-ಸಾಮರ್ಥ್ಯವುಳ್ಳ ಬರವಣಿಗೆ ಇಂಟರ್ಫೇಸ್ (ಸಾಧನ). ಇದನ್ನು ನಡೆಸಲು ಬಳಸಿರುವುದು ಪ್ರಾಕೃತಿಕ ಎಡೆಬಿಡದ (continuous) ಪಾಂಯ್ಟಿಂಗ್ ಗೆಸ್ಚರುಗಳು. ಡ್ಯಾಶರ್ ಸಂಪೂರ್ಣ ಕೀಲಿಮಣೆಯನ್ನುಪಯೋಗಿಸಲಾಗದ ಪರಿಸ್ಥಿತಿಗಳಲ್ಲಿ ಉಪಯೋಗಿಸಲು ಸಾಧ್ಯಾವಗುವಂತ ಕಾಂಪಿಟೆಟಿವ್ ಬರಹ ಸಾಧನ. ಇದರ ಉಪಯೋಗ:
*‌ ಪಾಮ್ ಟಾಪ್ ಕಂಪ್ಯೂಟರ್ ಗಳಲ್ಲಿ
* ಧರಿಸಬಲ್ಲ, ಕೈಯಲ್ಲಿ ಹಿಡಿದು ತಿರುಗಾಡಬಲ್ಲ ಕಂಪ್ಯೂಟರ್ ಗಳಲ್ಲಿ
*‌ ಕಂಪ್ಯೂಟರನ್ನು ಒಂದೇ ಕೈಯಲ್ಲಿ ಜಾಯ್ಸ್ಟಿಕ್ ಅಥವ ಟಚ್ ಸ್ಕ್ರೀನ್, ಟ್ರಾಕ್ ಬಾಲ್ ಅಥವಾ ಮೌಸ್ ಉಪಯೋಗಿಸುವಾಗ
* ಕೈಯನ್ನು ಬಳಸದೆಯೇ ಕಂಪ್ಯೂಟರ್ ಬಳಸುವಾಗ ( ಹೆಡ್-ಮೌಸ್ ಅಥವಾ ಐ ಟ್ರಾಕರ್ ಬಳಸುವಾಗ)

ಸಾಧಾರಣವಾಗಿ, ಹಾಗೂ ನಿಶ್ವಿತವಾಗಿ ಇದನ್ನು ನಿಮ್ಮ ಕಂಪ್ಯೂಟರಿನಲ್ಲುಪಯೋಗಿಸುವಾಗ ಅಷ್ಟೊಂದು ಆಹ್ಲಾದಕರವೆನಿಸದು. (ಆದರಿದು ಹ್ಯಾಂಡ್ ಹೆಲ್ಡ್, ಪೋರ್ಟಬಲ್ ಉಪಕರಣಗಳಲ್ಲಿ ಯುನಿಕೋಡ್ ಟೈಪ್ ಮಾಡಲು ಈಗಿನಂತೆ ಒಳ್ಳೆಯ ಸಾಧನ).
ಎಲ್ಲಕ್ಕಿಂತ ಚೆಂದದ ವಿಷಯವೆಂದರೆ ಈ ತಂತ್ರಾಂಶದ ಯುನಿಕೋಡ್ ಸಪೋರ್ಟ್. ಇದು ಯುನಿಕೋಡ್ ಕನ್ನಡ, ಯುನಿಕೋಡ್ ಹಿಂದಿ, ಹಾಗೂ ಹಲವು ಇನ್ನಿತರ ಭಾಷೆಗಳನ್ನೂ ಟೈಪಿಸುವ ಸವಲತ್ತು ಕೊಡುತ್ತದೆ!

ಡ್ಯಾಶರ್

ಡ್ಯಾಶ್ ಮಾಡಿಕೊಂಡು ಹೋಗಲು ನೀವೂ ಸಿದ್ಧರೇ?

ಈ ತಂತ್ರಾಂಶ ಹಾಕಿಕೊಂಡು ನಾನು ಮೊದಲು ಬರೆಯಲು ಪ್ರಯತ್ನಿಸಿದ್ದು ನನ್ನ ಹೆಸರನ್ನು (ಸಹಜವಲ್ಲವೇ? Eye-wink
ನಾನು 'ಹ' ಕಡೆಗೆ ಮೌಸ್ ಕರ್ಸರಿನ ಪ್ರಯಾಣ ಬೆಳೆಸಿ, ಅಲ್ಲಿಂದ 'ರ' ಕಡೆ ದಂಡು ನಡೆಸಿಕೊಂಡು ಹೋಗಿ, ಅದರ ಪಕ್ಕದಲ್ಲೇ ತೇಲುತ್ತಾ ಬಂದ ಗ್ಲಿಫ್ ಗಳನ್ನು ಆಯ್ಕೆ ಮಾಡಿಕೊಂಡೆ. ಒಂದು ತರಹದ ದೃಷ್ಯವ್ಯೂಹದೊಳಗೆ ಹೊಕ್ಕಂತಿತ್ತು, ಈ ಅನುಭವ. ಬಹುಶಃ ಟಚ್ ಸ್ಕ್ರೀನಿನಲ್ಲಿ ನಮ್ಮ ಕೈ ಬೆರಳುಗಳನ್ನು ಮಾತ್ರ ಉಪಯೋಗಿಸಿ ಅಕ್ಷರಗಳನ್ನಾರಿಸುವಂತಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತೋ ಏನೋ. (ಹಾಗೊಂದು ಟಚ್ ಸ್ಕ್ರೀನಿನಲ್ಲಿ ನಾವು ನೋಡುವ ಸೈ-ಫೈ ಚಲನಚಿತ್ರಗಳಲ್ಲಿ ತೋರಿಸುವ ತಂತ್ರಜ್ಞಾನ ನಮ್ಮ ಮುಂದೆ ಬರುವ ದಿನ ದೂರವಿಲ್ಲವಷ್ಟೆ). ಆದರೂ ಎಂತಹ ತಂತ್ರಜ್ಞಾನ ಬದಲಾದರೂ ಸಹ, ಪ್ರತಿಯೊಂದು ಅಕ್ಷರವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಈ ವಿಧಾನ ಅದೆಷ್ಟು ಬೋರು ಹೊಡೆಸದೆ ಇರುತ್ತೋ ಕಾಣೆ.

ಒಂದೊಂದೇ ಅಕ್ಷರವನ್ನಟ್ಟಿಕೊಂಡು ಹೋಗುವುದು ಬಹಳ ಬೋರು ಹೊಡೆಸುವ ಸಂಗತಿಯಾಗಬಹುದು. ಇದು ಕಂಪ್ಯೂಟರಿನಲ್ಲಿ ಬರವಣಿಗೆಯ ಅತಿ ಕ್ಲಿಷ್ಟಕರ ಪದ್ಧತಿಯೂ ಆಗಬಹುದು (ಕೈಲಿದ್ದ ತುತ್ತನ್ನು ತಲೆಯ ಹಿಂಬದಿಯಿಂದ ಕೈಯಾಡಿಸಿ ತಿಂದಂತೆ). ಆದರೆ ಬೇರೆ ಸಾಧನಗಳೇ ಇಲ್ಲದ ಪುಟ್ಟ ಪುಟ್ಟ ಗಣಕಗಳಲ್ಲಿ, ಬೇರೆ ಸಾಧನಗಳನ್ನು ಇದ್ದೂ ಬಳಸಲಾಗದ ಸ್ಥಿತಿಯಲ್ಲಿ ಇದು ಬಹಳ ಉಪಕಾರಿ. ಅಲ್ಲದೆ ಕಣ್ಣಿಗೆ ಅಹಿತಕರವೆನಿಸಬಹುದು, ಮೊದಲ ನೋಟಕ್ಕೆ. ಆದರದು ಬಳಕೆಗೆ ಒಗ್ಗಿದಾಗ ಸರಿಹೋಗಿಬಿಡಬಹುದು. ಪ್ರಾಜೆಕ್ಟಿನ ಕರ್ತೃವರ್ಯರು ಇದನ್ನುಪಯೋಗಿಸುವಲ್ಲಿ ಪಳಗಿದರೆ ಒಂದು ನಿಮಿಷಕ್ಕೆ ೩೯ ಶಬ್ಧಗಳನ್ನು ಬರೆಯಬಹುದು ಎಂದು ಪ್ರತಿಪಾದಿಸಿದ್ದಾರೆ. ಏನೇ ಇರಲಿ, ನನಗಂತೂ ಯುನಿಕೋಡ್ ಟೈಪ್ ಮಾಡಲು ಕೀ ಮ್ಯಾಪ್ ಇಲ್ಲದೆ, ಇನ್ಪುಟ್ ಮೆಥಡ್ ಇಲ್ಲದೇ ಬರಿ ಅಕ್ಷರಗಳನ್ನಟ್ಟಿಸಿಕೊಂಡು ಹೋಗಿ ವಾಕ್ಯಗಳನ್ನು ಸೃಷ್ಟಿಸಬಹುದೆಂಬುದು ಸಂತಸ ತಂದಿತು.

ಈ‌ ತಂತ್ರಾಂಶ ಮಕ್ಕಳ ಆಟಕ್ಕೆ ಬಹಳ ಚೆನ್ನಾಗಿರುತ್ತದೆ... ಅಥವ ಹ್ಯಾಂಡ್ ಹೆಲ್ಡ್ ಗಳನ್ನು ಹಿಡಿದು 'ಫೀಲ್ಡ್ ವರ್ಕ್' ಎಂದು ಹೋಗುವವರಿಗೆ ಉಪಯೋಗವಾಗುತ್ತದೆ - ಮಾಡಬೇಕಾದುದಿಷ್ಟೆ... ಜೇಬಿನಿಂದ ನಿಮ್ಮ ಪುಟ್ಟ ಹ್ಯಾಂಡ್ ಹೆಲ್ಡ್ ಗಣಕವನ್ನು ಹೊರತೆಗೆದು ಅಕ್ಷರಗಳ ಹಿಂದೆ ವ್ಯೂಹದಲ್ಲಿ 'ಡ್ಯಾಶ್' ಮಾಡಿಕೊಂಡು ಹೋಗುವುದು! Smiling

  • ಜ್ಞಾನವಾಹಿನಿ
~.~
  • Login or register to post comments
  • 809 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 10, 2005 - 6:09am — olnswamy

ತುಂಬ ಕುತೂಹಲದ ಮಾದರಿ

olnswamy's picture

ಇಂಟರೆಸ್ಟಿಂಗ್ ಮಾಹಿತಿ. ಧನ್ಯವಾದ. ನೀವು ಸೂಚಿಸಿದಂತೆ ಮಕ್ಕಳಿಗೆ ಕನ್ನಡ ಅಕ್ಷರ ಕಲಿಸಲು, ಇಂಗ್ಲಿಷ್ ಪ್ರೇಮಿ ತಂದೆ ತಾಯಂದಿರಿಗೆ ಆಸಕ್ತಿ ಇದ್ದರೆ, ಈ ತಂತ್ರಾಂಶ ಬಹಳ ಉಪಯೋಗವಾದೀತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ-೧
  • ಕನ್ನಡ ಯುನಿಕೋಡ್ ಫಾಂಟ್
  • ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ
  • ಎಲ್ಲಾ ಕನ್ನಡದಲ್ಲಿ ಬರೆಯಲು... - 2
  • ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator