ಹೀಗೇ ಸುಮ್ಮನೆ : Feel my love ಗೆಳತಿ, ಒಮ್ಮೇ ಒಮ್ಮೆ.
ನಿನ್ನ ಅಪ್ಪುಗೆಯ ಬಿಗುವಲ್ಲಿ ನಾ ಕರಗಬೇಕೊಮ್ಮೆ ಗೆಳತಿ
ನಿನ್ನ ಮುತ್ತುಗಳ ಮಳೆಯಲ್ಲಿ ನಾ ತೋಯಬೇಕೊಮ್ಮೆ ಗೆಳತಿ
ನಿನ್ನ ಬಿಸಿಯುಸಿರ ಬೇಗೆಯಲ್ಲಿ ನಾ ಬೇಯಬೇಕೊಮ್ಮೆ ಗೆಳತಿ
ನಿನ್ನ ನೆನಪುಗಳ ಗುಂಗಿನಲಿ ನಾ ನನ್ನೇ ಮರೆಯಬೇಕೊಮ್ಮೆ ಗೆಳತಿ
ನಿನ್ನ ಕಂಗಳ ಬೆಳಕಲ್ಲಿ ನಾ ಕುರುಡಾಗಬೇಕೊಮ್ಮೆ ಗೆಳತಿ
ನಿನ್ನ ಗುಂಡಿಗೆಯ ನಗಾರಿಯಲ್ಲಿ ನಾ ಕಿವುಡಾಗಬೇಕೊಮ್ಮೆ ಗೆಳತಿ
ನಿನ್ನ ಪಿಸುಮಾತಿನ ನಿನಾದದಿ ನಾ ಮೂಗನಾಗಬೇಕೊಮ್ಮೆ ಗೆಳತಿ
ನಿನ್ನೊಳಗೆ ನಾನಾಗಿ, ನಾನಿಲ್ಲದಂತಾಗಿ, ನಿನಗೆ ನನ್ನನ್ನೇ ನಾ ಒಪ್ಪಿಸಿಕೊಳ್ಳಬೇಕೊಮ್ಮೆ ಗೆಳತಿ
- Login or register to post comments
- 1760 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಈ ಪೋಸ್ಟನ್ನು ತಿದ್ದಬೇಕಿದೆ, ಹೇಗೆ ದಯವಿಟ್ಟು ತಿಳಿಸಿ.
ಸಂಪದ ಆರ್ಕೈವ್ ಗೆ "ಲೇಖನ"ಗಳಾಗಿ ಸೇರಿಸಿದ ಪುಟಗಳು ಒಮ್ಮೆ ಸೇರಿಸಿದ ಬಳಿಕ ತಿದ್ದಲಾಗದು. (ಆದರೆ ನಿಮ್ಮ ಬ್ಲಾಗ್ ಪುಟಗಳನ್ನು ತಿದ್ದಬಹುದು).
ಲೇಖನ ಸೇರಿಸುವಾಗ "Preview" ಬಟನ್ ಬಳಸಿ ಲೇಖನ ಹೇಗೆ ಮೂಡುವುದೆಂದು ಪರೀಕ್ಷಿಸಿ ನೋಡಬಹುದು (ಹಾಗೂ ಹಾಗೆ ಮಾಡಿದರೆ ಬಹಳ ಒಳ್ಳೆಯದು).
ಈಗ ನಿಮಗಿರುವ ಆಯ್ಕೆಯೆಂದರೆ ಈ ಲೇಖನವನ್ನೇ ಸರಿಪಡಿಸಿ ಮತ್ತೊಮ್ಮೆ ಪೋಸ್ಟಿಸುವುದು ಅಷ್ಟೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಸರಿ ಬಿಡಿ, ಇನ್ನೇನು ಮಾಡೋದು, ಹಾಗೇ ಮಾಡ್ತೀನಿ. thanks.
ಹೀಗೆ ಮಾಡಿರುವುದರ ಹಿಂದಿರುವ ಉದ್ದೇಶ್ಯ ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆಂದು ನಂಬುತ್ತೇನೆ. ನಮ್ಮಲ್ಲಿ ಲೇಖನ ಬರೆದು - ಚರ್ಚೆಯೆಲ್ಲ ಆದ ನಂತರ ಲೇಖನವನ್ನು ತಿರುಚುವ ಮಂದಿ ಬಹಳ ಇದ್ದಾರೆ. ಲೇಖನ ಹಾಗೆ ಚರ್ಚೆಯ ಅನಂತರ ತಿರುಚಿದರೆ ಓದುಗರಿಗೆ ಪ್ರಶ್ನಾರ್ಥಕವೇ ಉಳಿಯೋದು.
ಕೆಲವರಂತೂ ಲೇಖನಗಳನ್ನು ಖಾಲಿ ಮಾಡಿ ಚರ್ಚೆಯನ್ನು ಮಾತ್ರ ಹಾಗೆಯೇ ಬಿಟ್ಟಿದ್ದಿದೆ :P
"Preview" ಬಳಸದೇ ಇದ್ರೆ ಈ ಶಿಕ್ಷೆ ಎಲ್ಲರಿಗೂ, ಕೆಲವರ unethical behaviourನಿಂದಾಗಿ ;)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"