ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪತಂಜಲಿಯ ಯೋಗ ಭಾಗ ೭

September 9, 2005 - 4:35pm — R M Rao

ಪತಂಜಲಿಯ ಯೋಗ ಭಾಗ ೭
ಏಳನೆಯ ಲೇಖನ
ಪತಂಜಲಿಯ ಯೋಗದ ಬಹು ಮುಖ್ಯ ಅಂಶವೆಂದರೆ ಆಚರಣೆ. ಇದರಲ್ಲಿ ಓದಿಗೆ ಅಥವಾ ತಿಳಿಸಿದ ಜ್ಞಾನಕ್ಕೆ ಹೆಚ್ಚು ಬೆಲೆ ಇಲ್ಲ. ತಾತ್ವಿಕ ಚರ್ಚೆಯೊ ಮುಖ್ಯವಲ್ಲ. ಎಲ್ಲಾ ಜ್ಞಾನವನ್ನೂ ಸಾಧಕನು ಮಾಡಿ/ಆಚರಣೆಯಲ್ಲಿತಂದು ಅದು ನಿಜ/ಸತ್ಯ ಎಂದು ಸಾಧನೆ ಮಾಡಿದಾಗ ಮಾತ್ರ ಯೋಗದ ಹಾದಿಯಲ್ಲಿ ಮುಂದುವರೆಯುತ್ತಾನೆ. ಈಗ ಯೋಗದ ಅಷ್ಟಾಂಗಗಳ ಬಗ್ಗೆ ನೋಡೋಣ.

ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಇವೇ ಯಮ.ಯೋ.ಸೂ.ಪಾದ೨. ಸೂತ್ರ.೩೦
ಇವು ಯಾವಾಗಲೂ ಪಾಲಿಸಲೇ ಬೇಕಾದಂತಹ ವ್ರತಗಳು.ಯೋ.ಸೂ.ಪಾದ೨. ಸೂತ್ರ.೩೧
ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರನ ಬಗ್ಗೆ ಆಳವಾದ ಚಿಂತನೆ ಇವು ನಿಯಮಗಳು.ಯೋ.ಸೂ.ಪಾದ೨. ಸೂತ್ರ.೩೨
ಯಮ-ನಿಯಮಗಳನ್ನು ಪಾಲಿಸುವಾಗ ತದ್ವಿರುಧ್ಧ ಭಾವನೆಗಳು ಬಂದಾಗ ಅದರ ವಿರುಧ್ಧ ಮತವನ್ನು ಆಲೋಚಿಸಬೇಕು.
ಕೆಟ್ಟ ಯೋಚನೆಗಳು, ಹಿಂಸೆ, ಕರುಣಾಹೀನತೆಯೇ (ತಾನು ಮಾಡಿದ್ದು/ಮಾಡಿಸಿದ್ದು ಅಥವಾ ಒಪ್ಪಿಗೆ ಕೊಟ್ಟದ್ದು) ಆಗಲಿ, ಆಸೆ,ಮೋಹ,ಕೋಪವೇ ಆಗಲಿ ಇವುಗಳ ಫಲ ಎಣೆಇಲ್ಲದ ದುಃಖ, ಅಜ್ಞಾನ ಎಂಬುದೇ ವಿರುಧ್ಧ ಮತ.
ಈ ಕೆಳಕಂಡ ವಾಕ್ಯಗಳು ಯಮ-ನಿಯಮದ ಕೊನೆಯ ಸ್ಥಿತಿಗೆ ಅನ್ವಯವಾಗುತ್ತದೆ. ಇವು ತಾನಾಗಿಯೇ ಬರುವಂತಹ ಸ್ಥಿತಿಗಳು.
ಅಹಿಂಸೆಯನ್ನು ನೆಲೆಗೊಳಿಸಿದವರ ಮುಂದೆ ವೈರ ನಿಲ್ಲುವುದಿಲ್ಲ.
ಸತ್ಯವನ್ನು ನೆಲೆಗೊಳಿಸಿದವರು ಹೇಳಿದ್ದು ನಿಜವಾಗುತ್ತದೆ.
ಪರರ ವಸ್ತುಗಳ ಮೋಹ ಬಿಟ್ಟವರಲ್ಲಿ ಸಂಪತ್ತು ಬರುತ್ತದೆ(ಆಸ್ತೇಯ).
ಬ್ರಹ್ಮಚರ್ಯದಿಂದ ವೀರ್ಯದ ಲಾಭ.
ಬೇರೆಯವರಿಂದ ಏನನ್ನೂ ಸ್ವೀಕರಿಸದಿದ್ದರೆ ಜನ್ಮಗಳ ಜ್ಞಾನ ಉಂಟಾಗುತ್ತದೆ(ಅಪರಿಗ್ರಹ).
ಶೌಚದಿಂದ ಏಕಾಂತದ ಇಚ್ಚೆಯಾಗುತ್ತದೆ. (ದೇಹವನ್ನು ಶುಚಿಯಾಗಿಡಲು ಮಾಡುವ ಕೆಲಸಗಳು)
ಸಂತೋಷದಿಂದ ಆನಂದದ ಗ್ರಹಿಕೆಯಾಗುತ್ತದೆ.
ತಪಸ್ಸಿನಿಂದ ಅಶುದ್ಧಿ ಕ್ಷೀಣಿಸಿದಂತೆ ದೇಹ ಮತ್ತು ಇಂದ್ರಿಯಗಳ ಮೇಲೆ ಪ್ರಭುತ್ವವುಂಟಾಗುತ್ತದೆ.
ಸ್ವಾಧ್ಯಾಯದಿಂದ ನಾವು ಮನದಲ್ಲಿ ಅರಸುತ್ತಿದ್ದುದು ಸಿಗುತ್ತದೆ.
ಈಶ್ವರನ ಬಗ್ಗೆ ಚಿಂತನೆಯಿಂದ ಸಮಾಧಿ ಸಿದ್ದಿಸುತ್ತದೆ.
ದೇಹವು(ತೊಂದರೆ ಇಲ್ಲದೆ) ಸ್ಥಿರವಾಗಿರುವುದೇ ಆಸನ.ಯೋ.ಸೂ.ಪಾದ೨. ಸೂತ್ರ.೪೬
ಶ್ವಾಸ,ಪ್ರಶ್ವಾಸಗಳ ನಿಯಂತ್ರಣವೇ ಪ್ರಾಣಾಯಾಮ.ಯೋ.ಸೂ.ಪಾದ೨. ಸೂತ್ರ.೪೯
ಮನಸ್ಸಿನ ಬಗ್ಗೆಯೇ ಮಾಡುವ ಸ್ವ-ಅಧ್ಯಯನದಿಂದ ಇಂದ್ರಿಯಗಳು ಮನಸ್ಸನ್ನು ಹಿಂಬಾಲಿಸುತ್ತವೆ.ಇದೇ ಪ್ರತ್ಯಾಹಾರ.ಯೋ.ಸೂ.ಪಾದ೨. ಸೂತ್ರ.೫೩
ಇದರಿಂದ ಇಂದ್ರಿಯಗಳು ಹತೋಟಿಗೆ ಬರುತ್ತದೆ.
ಅಷ್ಟಾಂಗ ಯೋಗದ ಐದು ಅಂಗಗಳ ಬಗ್ಗೆ ಪ್ರಾಥಮಿಕ ಪರಿಚಯ ಮಾಡಿಕೊಡುವುದರ ಜೊತೆಗೆ ದ್ವಿತೀಯ ಸಾಧನಪಾದದ ಮುಖ್ಯಸೂತ್ರಗಳನ್ನು ಹೇಳಿದ್ದಾಯಿತು.
ಉಳಿದ ಮೊರು ಅಂಗಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯಬಹುದು.

ಮುಂದುವರೆಯುವುದು...
೯/೯/೦೫

  • ಅಧ್ಯಾತ್ಮ
~.~
  • Login or register to post comments
  • 685 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತಂಜಲಿಯ ಯೋಗ ಭಾಗ ೫
  • ಪತಂಜಲಿಯ ಯೋಗ ಭಾಗ ೮
  • ಪತಂಜಲಿಯ ಯೋಗ ಭಾಗ ೬
  • ಪತಂಜಲಿಯ ಯೋಗ ಭಾಗ ೩
  • ಪತಂಜಲಿಯ ಯೋಗ ಭಾಗ ೪
Syndicate content

ಲೇಖಕರು

R M Rao's picture

ಪರಿಚಯ

ನನ್ನ ಬಗ್ಗೆ ನಾನೇ ಹುಡುಕಾಟ ಪ್ರಾರಂಭ ಮಾಡಿ
ಈಗ ಯೋಗದ ಹಾದಿಯಲ್ಲಿ ಹುಡುಕಾಟ ಮುಂದುವರಿಸಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator