ಕಲ್ಲರಳಿ ಹೂವಾಗಿ - ಅಕ್ಕ
ಅಕ್ಕ.. ಅಕ್ಕ.. ಅಕ್ಕಾ ಕೇಳುವ ಅಕ್ಕಯ್ಯ.. ಅಕ್ಕಯ್ಯ..
ಅಕ್ಕ.. ಅಕ್ಕ.. ಅಕ್ಕಾ ಕೇಳುವ ಅಕ್ಕಯ್ಯ.. ಅಕ್ಕಯ್ಯ..
ಅಕ್ಕ.. ಅಕ್ಕ.. ಅಕ್ಕ ಅಕ್ಕ ಕೇಳವ್ವಾ
ಅಕ್ಕಾ ಕೇಳುವ ಅಕ್ಕಯ್ಯ.. ಕೇಳವ್ವಾ..
ಕೇಳವ್ವಾ ಅಕ್ಕಯ್ಯ.. ಕೇಳವ್ವ ಅಕ್ಕಯ್ಯ..
ನಾನೊ೦ದು ನಾನೊ೦ದು ನಾನೊ೦ದು ನಾನೊ೦ದು ನಾನೊ೦ದು ನಾನೊ೦ದು ನಾನೊ೦ದು ನಾನೊ೦ದು
ನಾನೊ೦ದು ಕನಸ ಕ೦ಡೆ ನಾನೊ೦ದು ನಾನೊ೦ದು ನಾನೊ೦ದು ನಾನೊ೦ದು
ನಾನೊ೦ದು ಕನಸ ಕ೦ಡೆ.. ಅಕ್ಕಿ ಅಡಕಿ ಓಲೆ ಓಲೆ ಓಲೆ
ಅಕ್ಕಿ ಅಡಕಿ ಓಲೆ ಓಲೆ ಓಲೆ ಅಕ್ಕಿ ಅಡಕಿ ಓಲೆ ತೆ೦ಗಿನಕಾಯಿ ಕ೦ಡೆ
ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ
ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ
ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ
ಚಿಕ್ಕ ಚಿಕ್ಕ ಗರಿಗಳ ಸುಳಿಬಲ್ಲ ಗೊರವನ
ಚಿಕ್ಕ ಚಿಕ್ಕ ಗರಿಗಳ ಸುಳಿಬಲ್ಲ ಗೊರವನ
ಚಿಕ್ಕ ಚಿಕ್ಕ ಗರಿಗಳ ಸುಳಿಬಲ್ಲ ಗೊರವನ
ಭಿಕ್ಷಕೆ ಬ೦ದುದ ಕ೦ಡೆನವ್ವ, ಅಕ್ಕ ಕೇಳುವ ಅಕ್ಕಯ್ಯ ಕೇಳವ್ವಾ..
ಮಿಕ್ಕು ಮೀರಿ ಮಿಕ್ಕು ಮೀರಿ ಮಿಕ್ಕು ಮೀರಿ ಮಿಕ್ಕು ಮೀರಿ ಮಿಕ್ಕು ಮೀರಿ ಮಿಕ್ಕು ಮೀರಿ
ಮಿಕ್ಕು ಮೀರಿ ಹೋವನ.. ಬೆ೦ಬತ್ತಿ ಬೆ೦ಬತ್ತಿ ಬೆ೦ಬತ್ತಿ ಬೆ೦ಬತ್ತಿ ಬೆ೦ಬತ್ತಿ
ಕೈ ಪಿಡಿದೆನೂ.. ಚೆನ್ನಮಲ್ಲಿಕಾರ್ಜುನಯ್ಯನ ಚೆನ್ನಮಲ್ಲಿಕಾರ್ಜುನಯ್ಯನ ಕ೦ಡು ಕಣ್ತೆರೆದೆನು
ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ
ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ
ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ

- Login or register to post comments
- 361 hits
- Email this page





RSS:
ಪ್ರತಿಕ್ರಿಯೆಗಳು
ಉ: ಕಲ್ಲರಳಿ ಹೂವಾಗಿ - ಅಕ್ಕ
ಹಾಡಿನ ಸಾಲುಗಳನ್ನು ಓದುತ್ತಾ, ಹಾಗೆಯೇ ಇಲ್ಲಿಂದ ಕೇಳುತ್ತಾ ಆನಂದಿಸಿ.
ಉ: ಕಲ್ಲರಳಿ ಹೂವಾಗಿ - ಅಕ್ಕ
ಮಲ್ಲಿಕಾರ್ಜುನ ಮನ್ಸೂರರು ಈ ವಚನ ಹಾಡಿದ್ದನ್ನು ಕೇಳಿ ಆನಂದಿಸಿದ್ದ ನನಗೆ ಈ ಅವತರಣಿಕೆಯನ್ನು ಕೇಳಿ ತುಂಬಾ ಹಿಂಸೆಯಾಯಿತು. ಮೂಲ ವಚನದಲ್ಲಿರುವ ಯಾವ ಭಾವವನ್ನು ಈ ಹಾಡು ಮುಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಗೊಂದಲವಾಯಿತು.
ಮುಂಚೆಯೂ ನಾಗಾಭರಣ "ಶಿಶುನಾಳ..." ಚಿತ್ರದಲ್ಲಿ "ಮೋಹದ ಹೆಂಡತಿ" ಹಾಡನ್ನು ತುಂಬ ಅಗ್ಗವಾಗಿ ಬಳಸಿದ್ದರು. ಟಿ.ಎನ್.ಸೀತಾರಂ ಮತದಾನದಲ್ಲಿ ಅಡಿಗರ "ಅಳುವ ಕಡಲು" ಪದ್ಯದ ಸಾಲುಗಳನ್ನು ಹೆಕ್ಕಿ ವಿಚಿತ್ರವಾಗಿ ಬಳಸಿದ್ದರು. ಈಗ ಇದು. ನಮ್ಮ ಕವಿಗಳ ಹಾಡುಗಳನ್ನು ಬಳಸುವ ಬಗ್ಗೆ ಒಂದು ಕಠಿನವಾದ ಕಾಯಿದೆ ಜಾರಿಮಾಡಬೇಕೇನೋ!
ಉ: ಕಲ್ಲರಳಿ ಹೂವಾಗಿ - ಅಕ್ಕ
ಅಯ್ಯೋ ಅನಿವಾಸಿಗಳೇ, ಎಲ್ಲರು ಆನಂದಿಸಲಿ ಎಂಬ ನಲ್ಬಯಕೆಯಿಂದ ನೀಡಿದ ಲಿಂಕ್ ನಿಮ್ಮನ್ನು ಹಿಂಸಿಸಿದ್ದಕ್ಕಾಗಿ ಮನ್ನಿಸಿರಿ(ಕ್ಷಮೆಯಿರಲಿ)
ಎಲ್ಲರಿಗೂ ಮಲ್ಲಿಕಾರ್ಜುನ ಮನ್ಸೂರರು ಹಾಡಿರುವ ವಚನವನ್ನು ಎಲ್ಲಿಯಾದರೂ ಕೇಳಿಸಲು ಸಾಧ್ಯವೇ ?
ಉ: ಕಲ್ಲರಳಿ ಹೂವಾಗಿ - ಅಕ್ಕ
ಅನಿವಾಸಿ,
ಈಗೆ ಆಗುತ್ತಿರುವುದು ಇದು ಮೊದಲೇ...
"ನೀ ಹಿಂಗ ನೋಡಬ್ಯಾಡ ನನ್ನ" ಹಾಡು ಸಿನಿಮದಲ್ಲಿ ಬೇರೆ ಸನ್ನಿವೇಶದಲ್ಲಿ ಬಂದಿದೆ.
"ಗಿಳಿಯು ಪಂಜರದೊಳಿಲ್ಲ"
ಹಿಂಗಾದರೂ ಕವಿಗಳ ಕವನ ಮಂದಿಯೊಳು ಸಾರಿಕೊಳ್ಳಲಿ, ಬಿಡಿ ಮಾರಾಯ್ರೇ!
- ಮಾಯ್ಸ
ಉ: ಕಲ್ಲರಳಿ ಹೂವಾಗಿ - ಅಕ್ಕ
ಮಹೇಶರೆ,
ನಿಜ, ಇದೇನು ಮೊದಲಲ್ಲ. ಈ ಹಿಂದೆ "ಉತ್ತರ ಧೃವದಿಂ", "ದೋಣಿ ಸಾಗಲಿ", "ಮೂಡಲ ಮನೆಯ ಮುತ್ತಿನ ನೀರಿನ"(ಈ ಹಾಡಿನ ಕಾಳಿಂಗ ರಾವ್‌ರವರದೇ ನನಗೆ ಸುಖ) ಎಲ್ಲ ಆಗಿವೆ. ಆದರೂ ಈಗೀಗ ಪದ್ಯದ ಮೂಲಾರ್ಥವನ್ನು ವಿಸ್ತರಿಸುವ ಬದಲು, ಅರ್ಥದ ಬಗ್ಗೆ ಅಸಡ್ಡೆ ಇರುವಂತಿದೆ. ಇತ್ತೀಚೆಗೆ ಸಂಗೀತಕ್ಕೆ ಲಭ್ಯವಿರುವ ತಾಂತ್ರಿಕ ಸವಲತ್ತುಗಳಿಂದಾಗಿ ಸದ್ದಿನಾಡಂಬರ ಹೆಚ್ಚಾಗಿ, ಹಾಡಿನ ಅರ್ಥ ಹಿಂದಕ್ಕೆ ಸರಿಯುತ್ತಿದೆಯಲ್ಲ ಅನಿಸುತ್ತಿದೆ. ಹಳೆಯದೆಲ್ಲ ಸುಂದರ ಎಂದು ಗೋಗರೆಯುತ್ತಿಲ್ಲ. ಆದರೆ ಈಗಿರುವ ತಾಂತ್ರಿಕ ಸವಲತ್ತನ್ನು indulgent ಆಗಿ ಬಳಸದೆ, ಉದ್ದೇಶ ಸಾಧನೆಗೆ ಬಳಿಸಿದರೆ ಖುಷಿಯಾಗುತ್ತದೆ. ಉದಾಹರಣೆಗೂ ಅಂಥ ಪ್ರಯೋಗಗಳು ನೆನಪಾಗದಷ್ಟು ವಿರಳ ಅನಿಸುತ್ತಿದೆ.
ಸುನೀಲರೆ,
ಏನನ್ನುತ್ತೀರೋ, ಮಲ್ಲಿಕಾರ್ಜುನ ಮನ್ಸೂರರ ವಚನಗಳಿಗಾಗಿ ಬೆಂಗಳೂರಿಗೆ ಬಂದಾಗ ಹುಚ್ಚನಂತೆ ಅಂಗಡಿ ಅಂಗಡಿಗೂ ಅಲೆದಿದ್ದೇನೆ. ಅವರ ಶಾಸ್ತ್ರೀಯ ಸಂಗೀತದ ಹಲವಾರು ಕ್ಯಾಸೆಟ್, ಸಿಡಿಗಳು ಸಿಗುತ್ತವೆ ಆದರೆ ವಚನಗಳದು ಮಾತ್ರ ಒಂದೇ ಒಂದು ಸಿಕ್ಕಿತು. "ಸಂಯುಕ್ತ ವಚನಗಳು" ಅಂತ. ಬೇರೆ ಬೇರೆ ಗಾಯಕರ ನಡುವೆ ಇವರ ಒಂದೆರಡು ವಚನಗಳು ಅಷ್ಟೆ. ಅದರಲ್ಲೂ ಈ "ನಾನೊಂದು ಕನಸ ಕಂಡೆ" ಇಲ್ಲ! ಆ ಹಾಡು ಆಕಾಶವಾಣಿಯವರ ಭದ್ರಮುಷ್ಠಿಯಲ್ಲಿ ಸಿಲುಕಿದೆ ಎಂದು ಕಾಣುತ್ತದೆ. ಅವರೇ ಅದನ್ನು ಬಿಡುಗಡೆ ಮಾಡಿದಂತೆ ಕಾಣುವುದಿಲ್ಲ. ನಿಮಗ್ಯಾರಿಗಾದರೂ ಕಂಡರೆ/ಸಿಕ್ಕರೆ ದಯವಿಟ್ಟು ತಿಳಿಸಿ. ಆ ಹಾಡಿನ ಬಗ್ಗೆ ಏನೋ ವ್ಯಾಮೋಹ ನನಗೆ. ಅದಕ್ಕೇ ಹಿಂಸೆಯಾಯಿತು ಅಂದೆ! ಸೀರಿಯಸ್ಸಾಗಿ ತಗೋಬೇಡಿ.