ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

hacker ಶಬ್ದದ ಬಗ್ಗೆ

February 9, 2007 - 1:26pm — ASHOKKUMAR

hacker ಶಬ್ದ hackನಿಂದ ತಾನೇ? hackಗೆ to cut, slice, chop ಮುಂತಾದ ಅರ್ಥ ಇದೆ. one who modifies programs skillfully ಎಂದೂ ಇದೆ. ಧನಾತ್ಮಕ ಅರ್ಥ ಇದ್ದರೂ hacker ಶಬ್ದ ಬಳಸುವುದು ಮುಂದುವರಿದಿದೆ. ಅದೇ ಪ್ರೇರಣೆಯಿಂದ ಮುರುಕ ಶಬ್ದ ಬಳಸಿದರೆ ಹೇಗೆ ಎನ್ನುವುದು ವಿಚಾರ. hpn ಅವರು ಇದರ ಪರವಾಗಿಲ್ಲ. ಪರ್ಯಾಯ ಶಬ್ದಗಳ ಬಗ್ಗೆ ಸಲಹೆಗಳಿವೆಯೇ?

  • ಚಿಂತನೆ
~.~
  • Login or register to post comments
  • 688 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 9, 2007 - 1:58pm — Sunil Jayaprakash

ಟಿ: hacker ಶಬ್ದದ ಬಗ್ಗೆ

Sunil Jayaprakash's picture

ಇದನ್ನು ಮುಂಚೆಯೇ ಓದಿರಬಹುದು. ಆದರೂ...ಇದನ್ನು ಓದಿದ ಮೇಲೆ ಏನಾದರು ಹೊಳೆಯುತ್ತದೆಯೇ ನೋಡಿ.
ಸಾಧ್ಯವಾದರೆ, ಬೇರೆ ಬೇರೆ ಸೀಮೆಗಳಲ್ಲಿ ಮುರುಕು, ಮುರುಕ ಇವುಗಳನ್ನು ಹೇಗೆ ಬಳಸುತ್ತಾರೆ, ಎಂಬುದನ್ನು ವಿವರಿಸುವ ಬಳಕೆಗಳನ್ನು ಪಟ್ಟಿಮಾಡಿರಿ. ನಮ್ಮ ಸೀಮೆಯಲ್ಲಿ, ಮುರುಕರು ಎಂದರೆ ಹಾಳು ಮಾಡುವವರು ಎಂಬರ್ಥದಲ್ಲಿ ಬಳಸುವುದೇ ಹೆಚ್ಚು.

hacker ಪದದ ವಿಶ್ಲೇಷಣೆಗಾಗಿ ಒಂದು ಸೈಟನ್ನೇ ಮೀಸಲಿಟ್ಟಿದ್ದಾರೆ, ನೋಡಿಯಿಲ್ಲಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2007 - 10:10am — ASHOKKUMAR

Re: ಟಿ: hacker ಶಬ್ದದ ಬಗ್ಗೆ

ASHOKKUMAR's picture

ಸುನಿಲ್  ನೀಡಿರುವ ಕೊಂಡಿಯಲ್ಲಿರುವ ಲೇಖನದಲ್ಲಿ ಜೇಸನ್ ಹೀಗೆನ್ನುತ್ತಾರೆ:

"But now a hacker is merely a computer vandal. Instead of a useful word
for a new type of person, we have a colorful synonym for a mundane type of
criminal.

So now I tell the casual acquaintance that I'm a Computer Scientist...

ನಿಮ್ಮ ಟಿಪ್ಪಣಿಯಲ್ಲಿ ಹೀಗೆಂದಿದ್ದೀರಿ:

"ನಮ್ಮ ಸೀಮೆಯಲ್ಲಿ, ಮುರುಕರು ಎಂದರೆ ಹಾಳು ಮಾಡುವವರು ಎಂಬರ್ಥದಲ್ಲಿ ಬಳಸುವುದೇ ಹೆಚ್ಚು."

ಆದುದರಿಂದ hackerಗೆ ಮುರುಕರು ಸದ್ಯಕ್ಕಂತೂ ಸರಿಯಾಗುತ್ತದೆ ಎಂದು ನನ್ನ ಅಂಬೋಣ. ಹ್ಯಾಕರ್ ಎನ್ನಬಹುದು, ಪರ್ಯಾಯವಾಗಿ ಮುರುಕರು ಅಂತಲೂ ಬಳಸಬಹುದು ಎಂದು ನನ್ನ ಅನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2007 - 5:56pm — hpn

ಟಿ: hacker ಶಬ್ದದ ಬಗ್ಗೆ

hpn's picture

".... ..... ಗೋರ್ಕಲ್ಲ ಮೇಲೆ ಮೂರ್ಕಾಲ ಮಳೆ ಸುರಿದಂತೆ.... "

ಎನ್ನಬಹುದೆ? Smiling

'ನನ್ನದೆ ಸರಿ' ಎನ್ನುವ ಅಖಂಡ ವಾದ ಯಾತಕ್ಕೆ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2007 - 6:34pm — srivathsajoshi

Re: ಟಿ: hacker ಶಬ್ದದ ಬಗ್ಗೆ

srivathsajoshi's picture

hpn ಉವಾಚ:

"'ನನ್ನದೆ ಸರಿ' ಎನ್ನುವ ಅಖಂಡ ವಾದ ಯಾತಕ್ಕೆ? "

comment:

ಅಖಂಡ = ತುಂಡಾಗದ/ಮುರಿಯದ...

'ಮುರುಕ'ನ ಬಗ್ಗೆ ಮುರಿಯದ ವಾದ...

Smiling)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2007 - 9:07pm — ASHOKKUMAR

Re: ಟಿ: hacker ಶಬ್ದದ ಬಗ್ಗೆ

ASHOKKUMAR's picture

Laughing 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2007 - 3:17pm — hpn

ಉ: hacker ಶಬ್ದದ ಬಗ್ಗೆ

hpn's picture

ಈ ಚರ್ಚೆ ಚರ್ಚೆ-ಫಾರಮ್ ನಲ್ಲಿರಬೇಕಿತ್ತು. ಬದಲಿಗೆ 'ಲೇಖನ'ವಾಗಿ ಸೇರಿಸಿದ್ದೀರಿ Smiling

ಎಷ್ಟೋ ಇಂಗ್ಲಿಷ್ ಪದಗಳು ಬಳಕೆಗೆ ತಕ್ಕಂತೆ ತಮ್ಮ ಮೂಲ ಅರ್ಥದಿಂದ ದೂರ ಹೋಗಿರುವುದುಂಟು. GREಗಾಗಿ ಆಂಗ್ಲ ಶಬ್ಧಗಳ ಅಧ್ಯಯನ ನಡೆಸಿದವರಿಗೆ ಇದರ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ.

ಹ್ಯಾಕರ್ ಪದವನ್ನು "ಹ್ಯಾಕರ್" ಎಂದೇ ಕನ್ನಡದಲ್ಲಿ ಬಳಸಿ. ಸುನೀಲ್ ಮೇಲೆ ನೀಡಿರುವ ಲಿಂಕುಗಳಲ್ಲಿ ಓದಿರುತ್ತೀರಿ - ಹ್ಯಾಕರ್ ಪದವನ್ನು ಯಾವ್ಯಾವ ಅರ್ಥದಲ್ಲೆಲ್ಲ ಬಳಸುತ್ತಿದ್ದಾರೆ ಎಂದು. "ಮುರುಕ" "ಕೆಡುಕ" ಎಂದೆಲ್ಲ ನೇರ fancy ಅನುವಾದಗಳು ಯಾಕೆ? Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2007 - 3:42pm — pavanaja

Re: hacker ಶಬ್ದದ ಬಗ್ಗೆ

pavanaja's picture

ನೋಡಿ - http://vishvakannada.com/node/71
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2007 - 6:00pm — srivathsajoshi

Re: hacker - ಅನರ್ಥಕೋಶ ಹೀಗೆನ್ನುತ್ತದೆ...

srivathsajoshi's picture

Hacker ಗೆ ಸರಳವಾದ, ಧ್ವನ್ಯರ್ಥದ ಕನ್ನಡ ಪದ 'ಹಾಕುವವನು/ಳು'

ಅವನು ದೇವರೇ ಇರಬಹುದು, ಗುರುರಾಘವೇಂದ್ರಸ್ವಾಮಿಯೇ ಇರಬಹುದು (ನೆನಪಿಸಿಕೊಳ್ಳಿ: 'ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ...' ಭಕ್ತಿಗೀತೆಯನ್ನು)

ಅಥವಾ 'ಇಸ್ತ್ರಿ ಹಾಕುವವನು = ಇಸ್ತ್ರಿ hacker', 'ಟೋಪಿ ಹಾಕುವವನು = ಟೋಪಿ hacker', 'ಲಸಿಕೆ ಹಾಕುವವನು = ಲಸಿಕೆ hacker' ಇತ್ಯಾದಿ.

ಇನ್ನೊಂದು ಸಂದರ್ಭ - ಈಗಾಗಲೇ ಹಳ್ಳದಲ್ಲಿ ಬಿದ್ದವನಿಗೆ ನನ್ನ ಪಾಲಿನದೂ ಒಂದೆರಡು ಹಾಕು...ಎಂದು ಬೇರೆಯವರಿಂದಲೂ ಹುರಿದುಂಬಿಸಲ್ಪಟ್ಟು 'ಹಾಕು'ತ್ತಲೇ ಇರುತ್ತಾನಲ್ಲಾ, ಅವನೂ hacker!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2007 - 9:32am — ASHOKKUMAR

Re: hacker - ಅತಿಕ್ರಮಿಸುವವನು:ಜಯಶ್ರೀ ಪ್ರಸಾದ್

ASHOKKUMAR's picture

ಜಯಶ್ರೀಪ್ರಸಾದ್ ಎನ್ನುವವರು ನನ್ನ ಲೇಖನಗಳಲ್ಲಿ hacker ಶಬ್ದದ ಬಳಕೆಯ ಬಗ್ಗೆ ಹೀಗೆ ಬರೆದಿದ್ದಾರೆ:

"ಇಂಗ್ಲೀಷಿನ  'hacker'  ಕನ್ನಡದ 'ಮುರುಕ' ಆಗಲು ಸಾಧ್ಯವೇ?

 ಶ್ರೀ ಅಶೋಕ್ ಕುಮಾರ್ ಅವರು ತಮ್ಮ ಇತ್ತೀಚಿಗಿನ ಲೇಖನಗಳಲ್ಲಿ, ಇಂಗ್ಲೀಷ್ ಪದಗಳಾದ `hacker' ಮತ್ತು `hack'ಗಳನ್ನು `ಮುರುಕ' ಹಾಗೂ `ಮುರಿಯುವುದು' ಎಂಬುದಾಗಿ ಕನ್ನಡೀಕರಿಸಿದ್ದಾರೆ. `hack' ಪದಕ್ಕೆ `ತುಂಡುಮಾಡು' ಎಂಬ ಅರ್ಥವಿದೆಯಾದರೂ ಗಣಕ ವಿಜ್ಞಾನದ ಪ್ರಸ್ತಾವನೆಯಲ್ಲಿ ಅದರ ಅರ್ಥ ಹೀಗಿರುತ್ತದೆ - `ನಿಯಮ ಉಲ್ಲಂಘನೆಯ ಕಾರ್ಯಾಚರಣೆಯೊಂದರ  ಹಂಚಿಕೆಯಲ್ಲಿ ಇನ್ನೊಬ್ಬರ ಗಣಕವನ್ನು ಅನುಮತಿ ಇಲ್ಲದೆ ಪ್ರವೇಶಿಸುವುದು.'{`without permission getting into someone else's computer system to do something illegal.'}  ಹೀಗಿರುವಾಗ `ಮುರಿಯುವವನು' ಎಂಬ ಅರ್ಥವನ್ನಷ್ಟೇ ಕೊಡುವ `ಮುರುಕ' ಪದ ಗಣಕದ ಪರಿಭಾಷೆಯಲ್ಲಿ ತೀರಾ ಅಪ್ರಸ್ತುತವಾಗಿಯೂ ಆಭಾಸಕಾರಿಯಾಗಿಯೂ ಕಂಡು ಬರುವುದಿಲ್ಲವೇ? ಬದಲಿಗೆ `ಅತಿಕ್ರಮಿಸುವವನು' ಹಾಗೂ `ಅತಿಕ್ರಮಿಸು' ಪದಗಳು ಹೆಚ್ಚು ಸೂಕ್ತವಲ್ಲವೇ? ಎಲ್ಲಕ್ಕಿಂತಲೂ ಮಿಗಿಲಾಗಿ `ಪೆನ್, ಪೆನ್ಸಿಲ್,ಸ್ವಿಚ್' ಇತ್ಯಾದಿ ಪದಗಳಂತೆ ಇಂಗ್ಲೀಷಿನ `hack' ಕನ್ನಡದಲ್ಲಿಯೂ `ಹ್ಯಾಕ್' ಎಂದೇ ಆಗಬಹುದಲ್ಲಾ!

- ಜಯಶ್ರೀ ಪ್ರಸಾದ್"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2007 - 7:04pm — ismail

ಅತಿಕ್ರಮಿಸುವವನಷ್ಟೇ ಹ್ಯಾಕರ್ ಅಲ್ಲ

ismail's picture

ಕಂಪ್ಯೂಟರ್ ಗಳ ಸಂದರ್ಭದಲ್ಲಿ ಹ್ಯಾಕರ್ ಪದಕ್ಕೆ ಬಹಳ ವಿಶಾಲಾರ್ಥವಿದೆ. ಮುರುಕ, ಅತಿಕ್ರಮಿಸುವನು ಮುಂತಾದುವುಗಳೆಲ್ಲಾ ಹ್ಯಾಕರ್ ನ ನೇತ್ಯಾತ್ಮಕ ಅರ್ಥಗಳು. ಈ ಪದಕ್ಕೆ ಇತ್ಯಾತ್ಮಕ ಅರ್ಥವೂ ಇರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ಇಂಗ್ಲಿಷ್ ನ ಹ್ಯಾಕರ್ ಕನ್ನಡದಲ್ಲಿದ್ದರೇನಾದೀತು? 

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ಸಖೇದಾಶ್ಚರ್ಯ’ ಮತ್ತು ’ಸನೇಕ’
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ದ್ವಿಮುಖ ಪದ ಪಟ್ಟಿ ಮಾಡಿ
  • ತುರಿಗಾರನ ನಿತಾರಗಳು
  • ಗ್ನು/ಲಿನಕ್ಸ್ ಹಬ್ಬ - Volunteers meet :: ಲಿನಕ್ಸ್ ಹ್ಯಾಕರ್ (hacker)
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator