ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!

February 11, 2007 - 9:40pm — uniquesupri

     ಇಂತಹ ಬೇಜವಾಬ್ದಾರಿಯುತ ಸರಕಾರ ನಮಗೆ ಮತ್ತೆಲ್ಲೂ ಸಿಗುವುದಿಲ್ಲ. ಅದರಲ್ಲೂ ಕಾವೇರಿ ಸಮಸ್ಯೆಯಂತಹ ಗಂಭೀರವಾದ ವಿಚಾರದಲ್ಲಿ ಇಂತಹ ಪ್ರತಿಕ್ರಿಯೆ ಸರಕಾರದ

ವತಿಯಿಂದ ಕಂಡು ಬಂದದ್ದು ನಾಚಿಕೆಗೇಡಿನ ವಿಚಾರ. ನ್ಯಾಯ ಮಂಡಳಿ ತೀರ್ಪು ನೀಡಿ ಇಷ್ಟು ದಿನ ಕಳೆದರೂ ನಮ್ಮ ರಾಜ್ಯದ ಮುಖ್ಯಮಂತ್ರಿ ಇನ್ನೂ `ಸರ್ವ ಪಕ್ಷ ಸಭೆ' ಕರೆದು ನಂತರ ನಿಲುವು ಪ್ರಕಟಿಸುತ್ತೇವೆ ಅಂತ ಮಾತು ಹಾರಿಸುತ್ತಿದ್ದಾರೆ. ಸರಕಾರ ನ್ಯಾಯ ಮಂಡಳಿಯ ತೀರ್ಪನ್ನು ಒಪ್ಪಿಕೊಳ್ಳುತ್ತದೆಯೋ ಅಥವಾ ವಿರೋಧಿಸುತ್ತದೆಯೋ, ಒಂದು ವೇಳೆ ತೀರ್ಪನ್ನು ಒಪ್ಪಿಕೊಳ್ಳುತ್ತಿದೆ ಎಂದಾದರೆ ಅದು ಕರ್ನಾಟಕಕ್ಕೆ ಯಾವ ವಿಧದಲ್ಲಿ ನೆರವಾಗುತ್ತದೆ ಎಂಬುದನ್ನೋ, ಇಲ್ಲ ತೀರ್ಪನ್ನು ಸರಕಾರ ವಿರೋಧಿಸುತ್ತದೆಯೆಂದರೆ ತೀರ್ಪಿನ ಯಾವ ಅಂಶದಿಂದ ಕರ್ನಾಟಕಕ್ಕೆ ನಷ್ಟವಾದೀತು ಎಂಬ ಚರ್ಚೆಯನ್ನು, ಸ್ಪಷ್ಟೀಕರಣವನ್ನು ಸರಕಾರ ನೀಡುತ್ತಿಲ್ಲ. ಇತ್ತ ವಿರೋಧ ಪಕ್ಷದವರು ಬಾಯಲ್ಲಿ ಏನೋ ಸಿಕ್ಕಿಕೊಂಡಿರುವಂತೆ ಕುಳಿತಿದ್ದಾರೆ.

    ಅಸಲಿಗೆ ಪತ್ರಿಕೆಗಳಾದರೂ ತೀರ್ಪನ್ನು ವ್ಯವಸ್ಥಿತವಾಗಿ ಅಧ್ಯಯನ ನಡೆಸಿ ಒಂದು ನಿಲುವಿಗೆ ಬರುವ ಪ್ರಯತ್ನವನ್ನು ಮಾಡುತ್ತಿಲ್ಲ. ಒಂದು ದಿನ ಕರ್ನಾಟಕಕ್ಕೆ ಅನ್ಯಾಯ ಅಂತ ಬರೆದು ಮರುದಿನ ಕರ್ನಾಟಕಕ್ಕೂ ಲಾಭವಿಲ್ಲದಿಲ್ಲ ಅಂತ ಅಡ್ಡಗೋಡೆಯ ಮೇಲೆ ದಿವಿನಾಗಿ ದೀಪ ಹಚ್ಚಿಟ್ಟಿದ್ದಾರೆ.

    ಈ ಸಂದರ್ಭದಲ್ಲಿ ಈ ವಾರದ ಹಾಯ್ ಬೆಂಗಳೂರ್! ಪತ್ರಿಕೆಯ ನಿಲುವು ಹಾಗೂ ಧ್ವನಿಗಳು ಉಲ್ಲೇಖನಾರ್ಹ. `ನರ ಸತ್ತ ನಾಯಕರ ನಾಡಿನಲ್ಲಿ' `ಕಾವೇರಿ ಚಳವಳಿ ಎಲ್ಲಿದೆ ಹುಡುಕಿ?' ಎಂಬ ಮುಖಪುಟದೊಂದಿಗೆ ಮೂಡಿ ಬಂದ ಪತ್ರಿಕೆಯು ಕಾವು ಕಳೆದುಕೊಂಡ ಕಾವೇರಿ ಹೋರಾಟದಿಂದ ಹಿಡಿದು, ಬಾಯಿಚಪಲಕ್ಕಾಗಿ ಬಾಯ್ಬಿಟ್ಟು ಅಪಶಕುನವೆನ್ನಿಸಿಕೊಂಡ ಹಿರಿಯ ಸಾಹಿತಿಯ ವಿರೋಧದವರೆಗೆ ಎಲ್ಲಾ ಸ್ಥರಗಳನ್ನು ಮುಟ್ಟುವ ಪ್ರಯತ್ನ ಮಾಡಿದೆ. `ಮಂಡ್ಯದ ಜುಬಿಲಿಪಾರ್ಕ್ ಚಳುವಳಿಯನ್ನು ಹುಡುಕಿಕೊಡುತ್ತೀರಾ?' ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ ರವಿ ಬೆಳಗೆರೆ ೧೯೯೧, ೨೦೦೨ರಲ್ಲಿ ಕಂಡು ಬಂದ ರೈತ ಚಳುವಳಿಯ ಕಾವು ಹೇಗೆ ನಾನಾ ಕಾರಣಗಳಿಂದಾಗಿ ಮೌನವಾಗಿ ಈ ಬಾರಿಯ ತೀರ್ಪನ್ನು ವಿರೋಧಿಸುವಲ್ಲಿ ಧ್ವನಿಯಿಲ್ಲದಂತಾಗಿದೆಯೆಂಬುದನ್ನು ವಿವವರವಾಗಿ ಬರೆದಿದ್ದಾರೆ. ವರದಿಗಾರ ಆರ್.ಟಿ.ವಿಟ್ಠಲ ಮೂರ್ತಿಯವರು ಕರ್ನಾಟಕದ ಜನತೆಯ ಹಿತವನ್ನು ಕಾಯುವ ಕಡೆ ಗಮನ ಹರಿಸುವುದನ್ನು ಮರೆತು ನ್ಯಾಯ ಮಂಡಳಿಯ ತೀರ್ಪಿನ ಕಾವಿಂದ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳೋದು ಹೇಗೆ ಅಂತ ಯೋಚಿಸುತ್ತಿರುವ ರಾಜಕೀಯ ಪಕ್ಷಗಳ ಬಗ್ಗೆ ವರದಿ ಮಾಡಿದ್ದಾರೆ. ಜೊತೆಗೆ ಸರಕಾರ ತೀರ್ಪನ್ನು ತನ್ನ ರಾಜ್ಯದ ಹಿತಾಸಕ್ತಿಗೆ ಪೂರಕವಾಗುವಂತೆ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಗಮನ ಸೆಳೆದಿದ್ದಾರೆ. ಇವೆಲ್ಲದರ ಮಧ್ಯೆ ನಮ್ಮನ್ನು ಅಚ್ಚರಿಗೊಳಿಸುವುದು ಹೆಚ್ಚು ಸದ್ದಿಲ್ಲದ, ಸೂಕ್ಷ್ಮ ಬರಹಗಾರ ಆಲೂರು ಚಂದ್ರಶೇಖರ್ ಕೂಡ ತಮ್ಮ ಅಂಕಣದಲ್ಲಿ ಕಾವೇರಿ ಎಂದರೆ ಕೇವಲ ಒಂದು ನದಿಯಲ್ಲ, ೨೪ ಉಪನದಿಗಳ ಸಂಗಮ ಎಂಬುದಾಗಿ ಬರೆದು, ಕಾರ್ನಾಡರ ಹೇಳಿಕೆಯನ್ನು ಖಂಡಿಸಿದ್ದಾರೆ. ಇಂತಹ ವಿವಾದಗಳಿಗೆ ತಲೆಹಾಕದ ಸಾಹಿತ್ಯಿಕ ಅಂಕಣದ ಜಾನಕಿಯವರೂ ತುಂಬಾ ಚಿಕ್ಕದಾಗಿ ಹಾಗೂ ಸ್ಪುಟವಾಗಿ ಕಾರ್ನಾಡರನ್ನು ಖಂಡಿಸಿದ್ದಾರೆ.

 ಇಂತಹ ಖಚಿತ ನಿಲುವಿನ ಪತ್ರಿಕೆಯನ್ನೆ ಅಲ್ಲವೇ ನಾವು ಮೆಚ್ಚುವುದು? ಈ ಸಲದ ಹಾಯ್ ಬೆಂಗಳೂರ್! ಓದಿದರೆ ನೀವೂ ಹೌದೆನ್ನುತ್ತೀರಿ.

 

 

  • ಪ್ರಚಲಿತ
~.~
  • Login or register to post comments
  • 723 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 14, 2007 - 10:13pm — Sunil Jayaprakash

ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!

Sunil Jayaprakash's picture

uniquesupri wrote:
ಅಸಲಿಗೆ ಪತ್ರಿಕೆಗಳಾದರೂ ತೀರ್ಪನ್ನು ವ್ಯವಸ್ಥಿತವಾಗಿ ಅಧ್ಯಯನ ನಡೆಸಿ ಒಂದು ನಿಲುವಿಗೆ ಬರುವ ಪ್ರಯತ್ನವನ್ನು ಮಾಡುತ್ತಿಲ್ಲ. ಒಂದು ದಿನ ಕರ್ನಾಟಕಕ್ಕೆ ಅನ್ಯಾಯ ಅಂತ ಬರೆದು ಮರುದಿನ ಕರ್ನಾಟಕಕ್ಕೂ ಲಾಭವಿಲ್ಲದಿಲ್ಲ ಅಂತ ಅಡ್ಡಗೋಡೆಯ ಮೇಲೆ ದಿವಿನಾಗಿ ದೀಪ ಹಚ್ಚಿಟ್ಟಿದ್ದಾರೆ.

ನಿಜಕ್ಕೂ ನಮ್ಮ ಪತ್ರಿಕೆಯವರಿಗೆ ಏನಾಗಿದೆ ಅಂತಲೇ ತಿಳಿಯುತ್ತಿಲ್ಲ. ನಾನು ಅಂದೇ, ಕನ್ನಡ ಪತ್ರಿಕೋದ್ಯಮದ ಸೋಲು ಎಂಬ ಎಳೆಯಲ್ಲಿ, ಸೃಜನಶೀಲತೆಯ ವಿಷಯದಲ್ಲಿಯೂ ನಮ್ಮ ಪತ್ರಿಕೋದ್ಯಮ ಎಷ್ಟು ಸೋತಿದೆ ಅಂತ ಹೇಳಿದ್ದೆ. ಕಳೆದ ವಾರದಿಂದ ಅಷ್ಟು ಲೇಖನಗಳು ಬರುತ್ತಿವೆಯಲ್ಲ, ಬರೇ ಉಪದೇಶದ ಮಾತುಗಳು ಮಾತ್ರವೇ ಹೆಚ್ಚಾಗಿ ಬರುತ್ತಿವೆ. ಕಾರ್ನಾಡರನ್ನು ಬಯ್ಯುವುದು ತಪ್ಪು ಎಂಬ ಅಂಶಕ್ಕೇ ಹೆಚ್ಚು ಒತ್ತು ಕೊಟ್ಟಿವೆ. ಅಲ್ಲ, ಈ ಪತ್ರಿಕೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ ? ಕಾರ್ನಾಡರಿಗೆ ಹೇಗೆ ಇಂಗ್ಲೀಷ್ ಚಾನೆಲ್ಲಿಗೆ ಸಂದರ್ಶನ ನೀಡುತ್ತಾ ಏನು ಬೇಕಾದರೂ ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೋ ಅದೇ ರೀತಿ ಅವರ ನಿಲುವನ್ನು ಖಂಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಪತ್ರಿಕೆಗೂ ಇದೆ ಎಂಬುದನ್ನು ದಯವಿಟ್ಟು ನೆನಪಿಸಿಕೊಡೋಣ. ನಾನು ಕಾರ್ನಾಡರ ದ್ವೇಷಿಯಲ್ಲ, ಆದರೆ ಅವರು ದೂರವಾಣಿಯ ಮೂಲಕ ನೀಡಿದ ಹೇಳಿಕೆ ಲೈವ್ ಕೇಳಿದ್ದೆ. ಯಪ್ಪಾ ತುಂಬಾ ಕೆಟ್ಟದಾಗಿತ್ತು.

ಕೇವಲ ಕಾರ್ನಾಡ್ ಪ್ರಕರಣವಷ್ಟೇ ಅಲ್ಲ, ಕಳೆದೆರೆಡು ವಾರಗಳಿಂದ ಬರುತ್ತಿರುವ ಸುದ್ದಿಯಂತೂ ನಿಜಕ್ಕೂ ಬೇಸರ ತರುತ್ತಿದೆ. ನೆನ್ನೆಯ ಪೇಪರಿನಲ್ಲಿ ಬಂದಿದ್ದ ಸುದ್ದಿ ಹೇಗಿತ್ತು ಗೊತ್ತೇ. ಕಾವೇರಿ ತೀರ್ಪಿನಿಂದ ಕರ್ನಾಟಕಕ್ಕೆ ಮೂರರಲ್ಲಷ್ಟೇ ಅನ್ಯಾಯವಾಗಿದೆ, ಆದರೆ ಬರೋಬ್ಬರಿ ಐದು ಮುಖ್ಯ ವಿಷಯಗಳಲ್ಲಿ ನ್ಯಾಯಸಿಕ್ಕಿದೆ ಎಂಬಂತೆ ವರದಿ ಮಾಡಿತ್ತು. ಒಂಚೂರೂ ತಲೆ ಬೇಡವಾ. ಇಂತಹ ವರದಿಗಳನ್ನು ಓದಿ, ಮುಂದೆ ಹಾಸನದ ರೈತರು ಮಂಡ್ಯದ ರೈತರ ಸಹಾಯಕ್ಕೆ ನಿಲ್ಲದಿದ್ದರೆ ಆಗ ಬೇಕಿದ್ದರೆ, ಇದೆಲ್ಲ ದೇವೇಗೌಡರ ಕಿತಾಪತಿ ಮಣ್ಣುಮಸಿ ಎಂಬಂತಹ ಲೇಖನಗಳನ್ನು ಪುಂಖಾನುಪುಂಖವಾಗಿ ಅತ್ಯುತ್ಸಾಹದಿಂದ ಪ್ರಕಟಿಸುತ್ತಾರೆ ಬೇಕಿದ್ದರೆ. ರೈತರನ್ನು ಬದುಕುವುದಕ್ಕೆ ಬಿಡದೆ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸದೆ, ಪಾಪ ಅವರು ಸತ್ತಾಗ, ಆಗ ಇಂತವನು ಹೀಗ್ಹೀಗೆ ಸತ್ತ ಎಂಬ ವರದಿ ಮಾತ್ರ ಚೆನ್ನಾಗಿ ಪ್ರಕಟಿಸುತ್ತವೆ.

ಇನ್ನೊಂದು ವಿಚಾರ ಏನು ಗೊತ್ತೇ, ಕಳೆದ ವಾರ ಚೋಳರು ಹೇಗೆ ತಮ್ಮ ನಾಡನ್ನು ಶ್ರೀಮಂತಗೊಳಿಸಿದ್ದರು ಎಂಬುದರ ಬಗ್ಗೆ ವರದಿ ಪ್ರಕಟವಾಗಿತ್ತು.!@!@!@ ಯಪ್ಪಾ, ಇದನ್ನು ಪ್ರಕಟಿಸುವ ಹೊತ್ತೇ ಇದು ? ಸರಿ ಬೇರೆಯವರು ಮಾಡಿರಬಹುದಾದ ಒಳ್ಳೆಯ ಕೆಲಸಗಳನ್ನು ಹೊಗಳೋಣ. ಆದರೆ ನಮ್ಮನ್ನು ನಾವೇ ತೆಗಳಿಕೊಂಡು ಬೇರೆಯವರನ್ನು ಹೊಗಳುವ ಚಾಳಿ ಏಕೆ, ಅದೂ ಇಂತಹ ಹೊತ್ತಿನಲ್ಲಿ. ಕನ್ನಡ ಓದುಗರ ಆತ್ಮವಿಶ್ವಾಸ ಇನ್ನೂ ಕಡಿಮೆಯಾಗುವುದಿಲ್ಲವೇ ? ಅಥವಾ ಹೀಗಾಗಲೇ ಅಂತಲೇ ಪತ್ರಿಕೆಯವರ ಉದ್ದೇಶವೇ ? ತಿಳಿಯದು.

ಕಾವೇರಿಯದೊಂದೇ ನಿದರ್ಶನವಲ್ಲ. ಮತ್ತೊಂದು ಮಹತ್ವದ ವಿಚಾರವೆಂದರೆ ದಕ್ಷಿಣ ಕನ್ನಡದ್ದು ಉಡುಪಿ, ಮಂಗಳೂರು ಹೀಗೆ. ಈ ಊರುಗಳಲ್ಲಿ ಪತ್ರಿಕೆಗಳೇ ಇಲ್ಲವೇ ಎಂದು ಹೆದರಿಕೆಯಾಗುತ್ತದೆ. ಮಂಗಳೂರು ಸೇಲಂಗೆ ಎತ್ತಂಗಡಿ ಆಗುವ ವಿಚಾರವನ್ನು ಇಂಗ್ಲೀಷ್ ಪತ್ರಿಕೆಯನ್ನೋದಿ ತಿಳಿದುಕೊಳ್ಳುವ ಪರಿಸ್ಥಿತಿ ಬಂತು. ಮಂಗಳೂರನ್ನು ಸೇಲಂಗೆ ಎತ್ತಂಗಡಿ ಮಾಡುವುದರಿಂದ ಕನ್ನಡಿಗರಿಗೆ ಆಗುವ ನಷ್ಟಗಳೇನು ಎಂಬುದರ ಬಗ್ಗೆ ಚಕಾರವೇ ಇಲ್ಲ. ಇಂತಹ ವಿಷಯವನ್ನು ಸಾಮಾಜಿಕವಾಗಿಸುವಲ್ಲಿ ತುಂಬಾ ತುಂಬಾ ಎಡವಿದೆ ನಮ್ಮ ಪತ್ರಿಕೋದ್ಯಮ. ಕಾರಣ ಕೇಳಿ ನೋಡಿ, ಇಡೀ ಕರ್ನಾಟಕವೇ ಕಾವೇರಿಯ ಯೋಚನೆ(ಕೆಲವರು ಕೆಟ್ಟದಾಗಿ ಗಲಾಟೆ ಎನ್ನುತ್ತಾರೆ)ಯಲ್ಲಿ ಮುಳುಗಿದೆ ಎನ್ನುವ ಸಮಜಾಯಿಷಿ ಸಿಗಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 15, 2007 - 12:22pm — ಶಿವ

Re: ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!

ಶಿವ's picture

ಕಾವೇರಿಯದೊಂದೇ ನಿದರ್ಶನವಲ್ಲ. ಮತ್ತೊಂದು ಮಹತ್ವದ ವಿಚಾರವೆಂದರೆ ದಕ್ಷಿಣ ಕನ್ನಡದ್ದು ಉಡುಪಿ, ಮಂಗಳೂರು ಹೀಗೆ. ಈ ಊರುಗಳಲ್ಲಿ ಪತ್ರಿಕೆಗಳೇ ಇಲ್ಲವೇ ಎಂದು ಹೆದರಿಕೆಯಾಗುತ್ತದೆ. ಮಂಗಳೂರು ಸೇಲಂಗೆ ಎತ್ತಂಗಡಿ ಆಗುವ ವಿಚಾರವನ್ನು ಇಂಗ್ಲೀಷ್ ಪತ್ರಿಕೆಯನ್ನೋದಿ ತಿಳಿದುಕೊಳ್ಳುವ ಪರಿಸ್ಥಿತಿ ಬಂತು.

 ಏನ್ರೀ ಅದು? ಮಂಗಳೂರು,ಸೇಲಂ,ಎತ್ತಂಗಡಿ??

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 15, 2007 - 1:45pm — Sunil Jayaprakash

ಮಂಗಳೂರ್ ಎತ್ತಂಗಡಿ

Sunil Jayaprakash's picture

ಇದು ೨೦೦೬, ಜನವರಿ ೧೨ರ ಸುದ್ಧಿ, ಕರ್ನಾಟಕ ಎಡಿಷನ್

೨೦೦೭, ಫೆ.೨ರಂದು ಪ್ರಕಟವಾದದ್ದು, ತಮಿಳುನಾಡು ಎಡಿಷನ್

ಇದು ೨೦೦೭, ಫೆ.೧೦ರ ವಾಚಕರ ವಾಣಿಯಿಂದ..ಓದುಗರೊಬ್ಬರು ಬರೆದಿರುವುದು

ಈ ವಿಚಾರವಾಗಿ ಮತ್ತಷ್ಟು ಸಂಪಾದಕೀಯಗಳು ಬಂದು ಚರ್ಚೆಗಳಾಗಿ, ಮಂಗಳೂರು ವಿಷಯವನ್ನು ಕನ್ನಡ ಪತ್ರಿಕೆಗಳು ಒಂದು ಸಾಮಾಜಿಕ ಹೊಣಯಾಗಿಸಿದ್ದರೆ, ಎಷ್ಟು ಚೆನ್ನಾಗಿರುತ್ತಿತ್ತು, ಅಲ್ಲವೇ ?

ಅಥವಾ ಈ ವಿಚಾರವಾಗಿ ಈಗಾಗಲೇ ಕನ್ನಡ ಪತ್ರಿಕೆಗಳಲ್ಲಿ ದೀರ್ಘವಾಗಿ ಲೇಖನಗಳು ಪ್ರಕಟವಾಗಿದ್ದವೇ ? ಆಗಿದ್ದರೆ ನನಗಂತೂ ತುಂಬಾ ಸಂತೋಷವಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 15, 2007 - 4:28pm — ASHOKKUMAR

Re: ಮಂಗಳೂರು ಎತ್ತಂಗಡಿ

ASHOKKUMAR's picture

ತಮಾಷೆಗೆ ಹೀಗೆ ಹೇಳಬಹುದು:

ಈಗಾಗಲೇ ಮಂಗಳೂರು ರೈಲು ನಿಲ್ದಾಣ ಮಲೆಯಾಳೀಕರಣಗೊಂಡಿರುವುದರಿಂದ ನಷ್ಟವಾಗೋದು ಕೇರಳದವರಿಗೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 15, 2007 - 8:09am — ASHOKKUMAR

Re: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!

ASHOKKUMAR's picture

>>ಕಾವೇರಿಯದೊಂದೇ ನಿದರ್ಶನವಲ್ಲ. ಮತ್ತೊಂದು ಮಹತ್ವದ ವಿಚಾರವೆಂದರೆ ದಕ್ಷಿಣ ಕನ್ನಡದ್ದು ಉಡುಪಿ, ಮಂಗಳೂರು ಹೀಗೆ. ಈ ಊರುಗಳಲ್ಲಿ ಪತ್ರಿಕೆಗಳೇ ಇಲ್ಲವೇ ಎಂದು ಹೆದರಿಕೆಯಾಗುತ್ತದೆ. ಮಂಗಳೂರು ಸೇಲಂಗೆ ಎತ್ತಂಗಡಿ ಆಗುವ ವಿಚಾರವನ್ನು ಇಂಗ್ಲೀಷ್ ಪತ್ರಿಕೆಯನ್ನೋದಿ ತಿಳಿದುಕೊಳ್ಳುವ ಪರಿಸ್ಥಿತಿ ಬಂತು. ಮಂಗಳೂರನ್ನು ಸೇಲಂಗೆ ಎತ್ತಂಗಡಿ

ಇದೇನು ವಿಷಯ..ನನಗೆ ಕನ್ನಡ ಅಥವಾ ಆಂಗ್ಲ ಪತ್ರಿಕೆಯಲ್ಲಿ ಕಣ್ಣಿಗೆ ಬೀಳಲಿಲ್ಲ. ತುಸು ವಿವರ ಕೊಡುತ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 15, 2007 - 5:25pm — venkatesh

ಕಾವೇರಿ ನದಿ ಸಮಸ್ಯೆ, ಏನೂ ಅಂತ ಅರ್ಥ ಆಗೊದ್ ಕಷ್ಟ ಕಣಣ್ಣ ..!

venkatesh's picture

ಈಗ್ನೊಡಿದ್ರೆ , "ವಿಸಾಲ್ಕರ್ನಾಟ್ಕ ಅಂತ ಏಳಿದ್ದೇ ಏಳಿದ್ದು, ಕುಣ್ದ್ -ಕುಪ್ಪಳ್ ಸ್ತಾರಲ್ಲಪ, ಅದೇನ್ ಸುಳ್ಳಾ ? ಅಂಗಿದ್ರೆ ನಮ್ಗೇನು ನೀರು -ಗಾಳಿ, "ಉಣ್ಣಕ್ ಒಂದು ಒತ್ತಿನ್ ಕೂಳು" ಬ್ಯಾಡ ಅನ್ನು , ಅಂಗಂದ್ರೆ. ತೆಗಿ ತೆಗಿ ಎಂಕ್ಟೇಸಪ್ಪ, ಇದೇನ್ ಸರಿಕಾಣಕ್ಕಿಲ್ಲಪ್ಪ. ಸರ್ಕಾರ್ದೊರ್, "ತಿಪ್ಪೆ ಸಾರ್ಸ್ದಂಗ್ ಆಡೊ ಮಾತ್ ನೋಡಿದ್ರೆ ಕೆಟ್ಟ ಕ್ವಾಪ ಬರಕಿಲ್ವ್ರ" ?

ಅದಕ್ಕೇ ನಾನ್ ಹೇಳ್ತಾ ಇರೊದು. ಎಂಟಪ್ಪನಂಥ ಮುಗ್ಧ ರೈತಾಪಿ ಜನರ ಬಾಧೆನ ಕೇಳೋರ್ ಯಾರು ? ಎಂದೂ ಒಂದ್ ತುಟಿ ಪಿಟಕ್ ಆನ್ದೆ, ಮೂಗಿಗ್ ಕವ್ಡೆ ಕಟ್ಕಂಡ್ ದುಡಿಯೊ ಆಯಪ್ಪನ್ ರೋಶ ನೋಡ್ಬೇಕ್ ಕಣ್ರಿ. ಎಂಟಣ್ಣ, ಈಗ 'ಕಾವೇರಿ ನೀರಿನ ವಿಶ್ಯ' ಅಂದ್ರೆ ಸಿಡಿದ್ ಬೀಳೊದ್ ಸಹಜ ತಾನೇ ?
ದೇಶನ ಕಟ್ಟೋದ್ರಲ್ಲಿ ರೈತ್ರ ಪಾಲು ಭಾಳ ಹೆಚ್ರಿ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ
  • ಕಾವೇರಿ
  • ಕಾವೇರಿ ಪ್ರತಿಭಟನೆ ಮೆಗಾಧಾರಾವಾಹಿ ಆಗಬೇಕೇ?
  • ಕಾವೇರಿ
  • ರಾಜಕಾರಣಿಗಳೂ ಕಾವೇರಿಯೂ
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

I am a simple life loving person with a sensitive heart.

ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಹಾಗೂ ನನ್ನ ಗೆಳೆಯರು ಸೇರಿ ಒಂದು ಸಣ್ಣ ಪತ್ರಿಕೆಯೊಂದನ್ನು ಪ್ರತಿ ತಿಂಗಳು ಹೊರಡಿಸುತ್ತಿದ್ದೇವೆ. ಅದರ ಬ್ಲಾಗು ಇಲ್ಲಿದೆ:http://kalaravapatrike.wordpress.com/
ನನ್ನ ಬ್ಲಾಗು:
http://uniquesupri.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 8:21am
  • savithasr
    ಉ: ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
    September 8, 2008 - 7:58am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 6:37am
  • Chamaraj
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 6:31am
  • Chamaraj
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 6:25am
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 75 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator