Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ತೃಣಮಾತ್ರನ ಕನಸು

July 24, 2005 - 10:40pm — tvsrinivas41

ತೃಣಮಾತ್ರನ ಕನಸು

ಎಲ್ಲ ಕರೆವರೆನ್ನ ತೃಣಮಾತ್ರ
ನೋಡುತಿಹೆನು ಯಾವಾಗಲೂ ಕನಸು ಮಾತ್ರ
ಕಂಡೆ ಕನಸಲಿ ಎಂಥ ದಿವ್ಯ ದರ್ಶನ
ಎಂದೂ ಮಂಕಾಗಿರದ ಕನ್ನಡ ಮಾತೆಯನ್ನ

ವಿಶ್ವದೆಲ್ಲೆಡೆ ಕನ್ನಡವೇ ಮನೆ ಮಾತು
ಜಾತಿ ಧರ್ಮ ಕುಲವೆಲ್ಲವೂ ಕನ್ನಡಮಯವಾಗಿತ್ತು
ಚಿನ್ನ ಬೆಳ್ಳಿ ವಜ್ರ ವೈಢೂರ್ಯಗಳ ಬೀದಿ ವ್ಯಾಪಾರ
ಎಂದೆಂದೂ ಎಲ್ಲೆಡೆ ಹಬ್ಬದ ಸಡಗರ

ನಿಸರ್ಗದತ್ತ ಸೌಂದರ್ಯ ನೋಡಿದೆಡೆಯೆಲ್ಲಾ
ಹಸಿವು ನೀರಡಿಕೆಗಳ ಸುಳಿವೇ ಇಲ್ಲ ಇಲ್ಲೆಲ್ಲೂ
ಬಡವ ಬಲ್ಲಿದ ಭೇದವೇ ತಿಳಿಯದ ಕಾಲ
ಆಡಳಿತಗಾರರ ಅವಶ್ಯಕತೆಯೇ ಬೇಕಿಲ್ಲ

ಎಲ್ಲ ಮನೆಗಳ ಕುಲದೇವಿ ಕನ್ನಡಮ್ಮ
ಎಲ್ಲ ಮನಗಳ ಚಿಂತನೆಯಲ್ಲೂ ನನ್ನಮ್ಮ
ಬೇಕಿಲ್ಲ ಯಾರಿಗೂ ಪಾರಿಭಾಷಿಕ ಕೋಶ
ಹಳದಿ ಕೆಂಪು ಬಾವುಟ ಭೂಮ್ಯಾಕಾಶ

ಹೊರಗಾದ ಗಲಾಟೆಗೆ ಬೆಚ್ಚಿ ಬಿದ್ದೆದ್ದೆ
ಪರರ ಅಟ್ಟಹಾಸ ನೋಡಿ ಕುದಿದೆದ್ದೆ
ಈ ಕನಸನ್ನು ನನಸಾಗಿಸಲು ಪಣ ತೊಟ್ಟಿರುವೆ
ನನ್ನೊಡನೆ ಕೈ ಸೇರಿಸಿರೆಂದು ನಿಮ್ಮನು ಬೇಡುತಿರುವೆ

ತ ವಿ ಶ್ರೀನಿವಾಸ,ಮುಂಬಯಿ
--------------------------

ಕನಸು ಅಂದ್ರೇನು?

ನಮ್ಮ ಮನಸ್ಸು ತುಂಬಾ ಚಂಚಲ. ಅದನ್ನು ಹಿಡಿದಿಡೋದು ಬಹಳ ಕಷ್ಟ. ಹಾಗೆ ಮಾಡಿದವನು ಪರಮಪುರುಷ ಅನ್ನಿಸಿಕೊಳ್ಳುವನು. ನಮ್ಮ ಮೆದುಳು ನಮ್ಮ ಹೃದಯದಂತೆ ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತದೆ. ಹಾಗೇ ಮನಸ್ಸಿನಲ್ಲಿ ಯಾವಾಗಲೂ ಏನಾದರೊಂದು ಯೋಚನೆಗಳು ಇದ್ದೇ ಇರುತ್ತವೆ. ಆದರೆ ಎಲ್ಲ ಯೋಚನೆಗಳನ್ನೂ ಬಹಿರಂಗಗೊಳಿಸಲಾಗುವುದಿಲ್ಲ. ಹಾಗೆ ಒಳಗೇ ಅದುಮಿಟ್ಟ ಯೋಚನೆಗಳು ಸುಷುಪ್ತಿ ಸ್ಥಿತಿಯಲ್ಲಿ ಇರುತ್ತದೆ. ಸೆರಗಿನಲ್ಲಿ ಕಟ್ಟಿಕೊಂಡ ಬೆಂಕಿಯಂತೆ ಅದು ಯಾವಾಗದರೊಮ್ಮೆ ಹೊರಗೆ ಬರಲೇ ಬೇಕು. ಸಾರ್ವಜನಿಕವಾಗಿ ಅದನ್ನು ಪ್ರದರ್ಶಿಸಲಾಗದೇ ಇದ್ದರೆ ಅದು ನಾವು ನಿದ್ದೆಮಾಡುತ್ತಿರುವಾಗ ಕನಸಿನ ರೀತ್ಯಾ ಹೊರ ಬಹುವುದು. ಎಲ್ಲರಲ್ಲೂ ಇರುವ ಇಚ್ಛೆ ಏನೆಂದ್ರೆ, ಈ ಕನಸನ್ನು ನನಸಾಗಿಸಬೇಕು ಅನ್ನುವುದು. ಸರಿಸುಮಾರು ಎಲ್ಲ ಜನಗಳಲ್ಲು ಇರುವುದು ಈ ಬಯಕೆ. ಹೇಗೆ ನಮ್ಮ ಯೋಚನೆಗಳ ಮೇಲೆ ನಮಗೆ ಕಡಿದಾಣವಿಲ್ಲವೋ ಹಾಗೇ ಯೋಚನೆಗಳು ಹುಚ್ಚುಚ್ಚಾಗಿ ಹರಿದಾಡುತ್ತಿರುತ್ತವೆ. ಹಲವು ಬಾರಿ ಹಾಗೆ ಕಂಡ ಕನಸನ್ನು ನನಸಾಗಿಸುವುದು, ತನ್ನೊಬ್ಬನಿಂದ ಸಾಧ್ಯವಿರುವಿದಿಲ್ಲ. ಆಗ ಇನ್ನೂ ಹೆಚ್ಚಿನ ಜನಗಳ ಸಹಾಯದ ಅಗತ್ಯವಿರುತ್ತದೆ. ಶತೃಗಳನ್ನು ಬಡಿದು ದೇಶವನ್ನೂ, ತನ್ನತನವನ್ನು ತಾನು ಕಾಪಾಡುವುದು ಒಬ್ಬ ರಾಜನಿಂದ ಸಾಧ್ಯವಿರದು. ಹಾಗೆ ನಾನೀ ಕನಸು ಕಾಣುತಿರುವೆ. ನನಗೆ ಅನ್ನಿಸಿದ ಹಾಗೆ ಎಲ್ಲ ಕನ್ನಡಿಗರಲ್ಲೂ ಇಂತಹ ಕನಸು ಇದ್ದೇ ಇದೆ. ಇದನ್ನು ನನಸಾಗಿವುದು ಅತ್ಯಗತ್ಯ. ನಾನೊಬ್ಬ ತೃಣಮಾತ್ರ = ನನ್ನಿಂದ ಸಾಧ್ಯವಾಗದು ಎಂದು ಕೈ ಕಟ್ಟಿ ಕೂರಲಾಗುವುದಿಲ್ಲ. ಆಗ ನಮ್ಮಂತೆಯೇ ಯೋಚಿಸುವವರನ್ನು ಕಲೆ ಹಾಕಬೇಕು. ಅಷ್ಟಕ್ಕೂ ಜನಬಲ ಸಾಕಾಗುವುದಿಲ್ಲ. ಆಗ ಕುಂಭಕರ್ಣನಂತೆ ಮಲಗಿರುವ ಸಹೋದರರನ್ನು ಎಬ್ಬಿಸಬೇಕಾದೀತು. ಅವರುಗಳೂ ಸಾಕಾಗುವುದಿಲ್ಲ. ಇದು ಹೇಳೀ ಕೇಳಿ ನಾವು ಮಾಡಲು ಹೊರಟಿರುವ ಮಹಾಯಜ್ನ್ಯ. ದ್ವಿಮನಸ್ಕರನೆಲ್ಲಾ ಈ ಹಾದಿಗೆ ತರಬೇಕು. ಇನ್ನೂ ಹೆಚ್ಚಿನದಾಗಿ ನಮ್ಮವರಲ್ಲದವರನ್ನೂ ನಮ್ಮೊಳಗೆ ತಂದುಕೊಂಡು ಅವರಿಗೆ ನಮ್ಮತನವನ್ನು ತುಂಬಿ ಅವರನ್ನೂ ಈ ಮಹತ್ಕಾರ್ಯಕ್ಕೆ ತೊಡಗಿಸಿದರೆ ಆಗ ಈ ಕನಸು ನನಸಾದೀತು ಎನ್ನುವುದು ನನ್ನ ಚಿಂತನೆ.

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 884 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಝೆನ್ ಕತೆ ೧೬: ಕನಸಿನ ಚಿಟ್ಟೆ-ಚಿಟ್ಟೆಯ ಕನಸು
  • ಕನಸು
  • ನಾಳೆ
  • ಮುಂಗಾರು ಮಳೆ v/s ಚಿಗುರಿದ ಕನಸು
  • ಕನಸು...
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 4 ಅತಿಥಿಗಳು ಆನ್ಲೈನ್ ಇರುವರು.

ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator