ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕಬ್ಬಿಗರ ಕಾವದ ಮೊದಲ ಪದ್ಯ

February 24, 2007 - 1:19pm — Sunil Jayaprakash

ನೆನ್ನೆಯ ದಿನ ರಾತ್ರಿ ೭:೦೦ ಗಂಟೆಗೆ ಪ್ರಾರಂಭಿಸಿ ಕ್ರೈಂ ಡೈರಿಯ ಚೋಟಾ ರಾಜನ್ ಪುರಾಣ ಬರುವವರೆಗೆ, ಕಬ್ಬಿಗರ ಕಾವದ ಮೊದಲ ಪದ್ಯವನ್ನು ಅದೆಷ್ಟು ಬಾರಿ ಓದಿದ್ದೇನೋ ತಿಳಿಯದು. ತುಂಬಾ ಅಂದರೆ ತುಂಬಾ ಇಷ್ಟವಾಯಿತು ಈ ಪದ್ಯದ ಆಶಯ. ನೆನ್ನೆ ನಾನು ಬರೆದಿಟ್ಟುಕೊಂಡು ಅನ್ವಯಾರ್ಥ ಮತ್ತು ಪೂರ್ಣ ವಿವರಗಳನ್ನು ಹಾಕುತ್ತಿದ್ದೇನೆ. ಓದಿ, ಆನಂದಿಸಿ.

ಆವನ ಗಾಡಿ ನೋಡಿದವರಂ ಸಲೆ ಸೋಲಿಸುತಿರ್ಪುದುರ್ಕಿನಿಂ |
ದಾವನ ಪೂವಿನಂಬದಟರಂ ತಲೆವಾಗಿಸುತಿರ್ಪುದೇೞ್ಗೆಯಿಂ ||
ದಾವನ ಪಜ್ಜಳಿಪ್ಪ ಜಸಮೆಣ್ದೆಸೆಯೊಳ್ ನೆಲಸಿರ್ಪುದಾತನೀ |
ಗಾವಗಮೆನ್ನ ಜಾಣ್ಣುಡಿಗೆ ಮೆಯ್ಸಿರಿಯಂ ನನೆವಿಲ್ಲಬಲ್ಲಹಂ || ೧ ||

ಅನ್ವಯಾರ್ಥ

ಆವನ ಸಲೆ ಗಾಡಿ ನೋಡಿದವರಂ ಸೋಲಿಸುತಿರ್ಪುದು, ಆವನ ಪೂವಿನ ಅಂಬು ಅದಟರಂ ಉರ್ಕಿನಿಂದ ತಲೆಬಾಗಿಸುತಿರ್ಪುದು, ಆವನ ಏೞ್ಗೆಯಿಂದ ಎಣ್ದೆಸೆಯೊಳ್ ಪಜ್ಜಳಿಪ್ಪ ಜಸಂ ನೆಲೆಸಿರ್ಪುದು, ಆತನು ನನೆವಿಲ್ಲಬಲ್ಲಹಂ, ಎನ್ನ ಜಾಣ್ಣುಡಿಗೆ ಆವಗಂ ಮೆಯ್ಸಿರಿಯಂ ಈಗೆ.

ಸಲೆ – ಅತಿಶಯವಾಗಿ, ಚೆನ್ನಾಗಿ, ಸರಿಯಾಗಿ; ಗಾಡಿ - ಸೌಂದರ್ಯ, ಮೋಹ, ಗಾಂಭೀರ್ಯ; ಪೂವಿನ – ಹೂವಿನ; ಅಂಬು – ಬಾಣ; ಅದಟರಂ – ಪರಾಕ್ರಮಿಗಳನ್ನು, ಶೂರರನ್ನು; ಉರ್ಕು - ಶೌರ್ಯ, ಉಕ್ಕು, ಹೆಮ್ಮೆ, ಸೊಕ್ಕಿಗೆ ಬರು, ಹೆಚ್ಚಾಗು, ದಿಟ್ಟತನ; ಏೞ್ಗೆ – ಏಳಿಗೆ; ಎಣ್ದೆಸೆಯೊಳ್ – ಎಣ್(ಎಂಟು) ದೆಸೆಯೊಳ್ – ಎಂಟು ದಿಕ್ಕುಗಳಲ್ಲಿ; ಪಜ್ಜಳಿಪ್ಪ – ಪ್ರಜ್ವಲಿಸುತ್ತಿರುವ; ಜಸಂ – ಯಶಸ್ಸು; ನನೆ – ಮೊಗ್ಗು; ನನೆವಿಲ್ಲ – ನನೆ + ಬಿಲ್ಲ = ನನೆಯಂಬ = ನನೆಗಣೆಯ, ನನೆ + ಕಣೆ(ಬಾಣ) – ಮೊಗ್ಗಿನ ಬಾಣಗಳು; ಬಲ್ಲಹಂ – ತಿಳಿದವನು; ನನೆವಿಲ್ಲಬಲ್ಲಹಂ – ಮೊಗ್ಗಿನ ಬಾಣಗಳನ್ನು ಪ್ರಯೋಗಿಸುವುದನ್ನು ತಿಳಿದವನು, ಮನ್ಮಥ; ಜಾಣ್ಣುಡಿಗೆ – ಕವಿಯ ಭಾಷೆಯಾದ ಕನ್ನಡಕ್ಕೆ; ಆವಗಂ – ಯಾವಾಗಲೂ, ಹೆಚ್ಚು ಮುಂದೆ ಮುಂದೆ, ಅಧಿಕ; ಮೆಯ್ಸಿರಿ – ಶ್ರೀಮಂತಿಕೆ, ಶೋಭೆ; ಈಗೆ – ನೀಡಲಿ, ಕೊಡಲಿ, ಕರುಣಿಸಲಿ;

ಯಾರ ಅತಿಶಯವಾದ ಸೌಂದರ್ಯವು ನೋಡಿದವರನ್ನು ಮೋಹಪರವಶರನ್ನಾಗಿಸುತ್ತಿರುವುದೋ, ಯಾರ ಹೂವಿನ ಬಾಣವು ವೀರರನ್ನು ಹೆಮ್ಮೆಯಿಂದಲೇ ತಲೆಬಾಗುವಂತೆ ಮಾಡುತಿಹುದೋ, ಯಾರ ಏಳಿಗೆಯಿಂದ ಎಂಟು ದೆಸೆಯಲ್ಲಿಯೂ ಪ್ರಜ್ವಲಿಸುತ್ತಿರುವ ಯಶಸ್ಸು ನೆಲೆಸಿರುವುದೋ, ಆತನು ಮನ್ಮಥನು. ಅವನು, ನನ್ನ ಜಾಣ್ಣುಡಿಗೆ ಅಂದರೆ ಕನ್ನಡ ನುಡಿಗೆ ಯಾವಾಗಲೂ ಹೆಚ್ಚು ಹೆಚ್ಚು ಸಂಪತ್ತನ್ನು ಕರುಣಿಸುತ್ತಿರಲಿ.

ವ್ಯಾಕರಣ ವಿಶೇಷಗಳು

ಇಲ್ಲಿ ಶ್ಲೇಷಾಲಂಕಾರವಿದೆ ಎನ್ನಬಹುದೇ ತಿಳಿಯದು, ಆದರೆ ಕೊನೆಯ ಸಾಲಿಗೆ ಎರಡರ್ಥವಿದೆ.

೧. ಆವಗಂ ಮೆಯ್ಸಿರಿಯಂ ಈಗೆ - ಯಾವಾಗಲೂ ಸಂಪತ್ತನ್ನು ನೀಡುತ್ತಾ ಇರಲಿ.
೨. ಆವಗಂ ಮೆಯ್ಸಿರಿಯಂ ಈಗೆ - ಅಧಿಕ ಶ್ರೀಮಂತಿಕೆಯನ್ನು ಕರುಣಿಸಲಿ.

ಎಲ್ಲಾ ಸಾಲಿನಲ್ಲಿಯೂ ಛಂದಸ್ಸು ನಿಯಮವನ್ನು ಕೂಡ ಪಾಲಿಸಲಾಗಿದೆ.

  • ಕಾವ್ಯ ಮತ್ತು ಕವನ
~.~
  • Login or register to post comments
  • 503 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 25, 2007 - 2:42pm — ವೈಭವ

Re: ಕಬ್ಬಿಗರ ಕಾವದ ಮೊದಲ ಪದ್ಯ

ವೈಭವ's picture

ಸುನಿಲರವರೆ, 

ನೀವು ಕನ್ನಡದ ಮೇಷ್ಟ್ರಾಗ ಬೇಕಿತ್ತು.. ಅಪ್ಪಿ ತಪ್ಪಿ ತಂತ್ರಾಂಶ ಲೋಕಕ್ಕೆ ಬಂದಿದ್ದೀರ..Smile

ನಿಮ್ಮ ಹಳೆಗನ್ನಡದ ಆಸಕ್ತಿ ಮತ್ತು ಅರ್ಥೈಸುವಿಕೆ ಹಿಡಿಸಿತು...ನನಗೂ ಇಂತಹ ಪದ್ಯಗಳನ್ನು ಓದುವ ಆಸೆ ಮೂಡುತ್ತಿದೆ.

-ಜೈ ಕರ್ನಾಟಕ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2007 - 4:50pm — Sunil Jayaprakash

ಕಂದಾಚಾರಗಳನ್ನು ಮೀರಿ ನಿಲ್ಲೋಣ

Sunil Jayaprakash's picture

ಅಯ್ಯೋ ಬಿಡಿ ವೈಭವರವರೇ, ಮೇಷ್ಟ್ರುಗಳು, ವಿದ್ಯಾರ್ಥಿಗಳು ಮಾತ್ರವೇ ಕನ್ನಡ ಕಾವ್ಯವನ್ನು ಓದಬೇಕು, ತಂತ್ರಜ್ಞರು ಮಾತ್ರವೇ ತಂತ್ರಜ್ಞಾನವನ್ನು ಬಳಸಬೇಕು ಎಂಬ ಸ್ವಯಂಘೋಷಿತ, ತಲೆಕೆಟ್ಟ ನಿಯಮಗಳನ್ನು ನಾವು, ನೀವು, ಎಲ್ಲರೂ ಮೀರಿ ನಿಲ್ಲೋಣ.

ಅಂದ ಹಾಗೆ, ನೀವೂ ಕಬ್ಬಿಗರ ಕಾವವನ್ನು ಓದಬೇಕೆಂದರೆ, ಇಲ್ಲಿ ಕ್ಲಿಕ್ ಮಾಡಿ,
Interface 1
Interface 2

ಆ ಸೈಟಿನಲ್ಲಿರುವ ಎಲ್ಲಾ ಪುಟಗಳು ಪುಸ್ತಕ ರೂಪದಲ್ಲಿ ಬೇಕಿದ್ದರೆ ಒಂದು ಮೇಯ್ಲ್ ಕಳುಹಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 3:30pm — mahesha

ನನೆವಿಲ್ಲಬಲ್ಲಹಂ ಅಂದರೆ ಏನು?

mahesha's picture

ನನೆವಿಲ್ಲಬಲ್ಲಹಂ ಅಂದರೆ ಏನು?

ನನೆ = ಮೊಗ್ಗು
ಪಿಲ್ಲ => ವಿಲ್ಲ = ಹುಡುಗಿ
ಬಲ್ಲಹಂ = ವಲ್ಲಭ

ಸರಿಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 3:47pm — mahesha

ಶ್ಲೇಷಾಲಂಕಾರವಿದೆ?

mahesha's picture

Quote:

ಇಲ್ಲಿ ಶ್ಲೇಷಾಲಂಕಾರವಿದೆ ಎನ್ನಬಹುದೇ ತಿಳಿಯದು, ಆದರೆ ಕೊನೆಯ ಸಾಲಿಗೆ ಎರಡರ್ಥವಿದೆ.

೧. ಆವಗಂ ಮೆಯ್ಸಿರಿಯಂ ಈಗೆ - ಯಾವಾಗಲೂ ಸಂಪತ್ತನ್ನು ನೀಡುತ್ತಾ ಇರಲಿ.
೨. ಆವಗಂ ಮೆಯ್ಸಿರಿಯಂ ಈಗೆ - ಅಧಿಕ ಶ್ರೀಮಂತಿಕೆಯನ್ನು ಕರುಣಿಸಲಿ.

ನನಗಿದು ಶ್ಲೇಷ ಅನ್ನಿಸುವುದಿಲ್ಲ. ಶ್ಲೇಷದಲ್ಲಿ ಒಂದೇ ಸಾಲು ಎಂದು ಸನ್ನಿವೇಶಗಳನ್ನು ಹೇಳುವುದು ಅಂತ ಓದಿದ ನೆನೆಪು.

ನಾನು ಹತ್ತನೇ ತರಗತಿಯಲ್ಲಿ ಓದಿದ ಒಂದು ಶ್ಲೇಷಾಲಂಕಾರ ಉದಾಹರಣೆ ನೆನೆಪಿದೆ.

"ಸುಯೋಧನನು ಸಾಯುತ್ತಾ ಇರುತ್ತಾನೆ, ಆಗ ನೇಸರನೂ ಮುಳುಗುತ್ತಿರುತ್ತಾನೆ"

ಈಯೆರಡು ಸಂಗತಿಗಳನ್ನು ರನ್ನನು ಒಂದೇ ಸಾಲಿನಲ್ಲಿ

"ಕುರುಕುಲಾರ್ಕನುಂ ಅರ್ಕನುಂ ಅಸ್ತಮೇಯ್ದಿದರ್‍" ಎಂದು ಹೇಳ್ತಾನೆ. ಅಂದರೆ

ಕುರುಕುಲದ ಸೂರ್ಯನಾದ ಸುಯೋಧನನು ಮತ್ತು ಸೂರ್ಯನೂ ಇಬ್ಬರೂ ಮುಳುಗಿದರು ಎಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಕವನ ಸಂಪದ್ಭಾಂದವರಲ್ಲಿ ಯಾರಿಗಾದರೂ ಗೊತ್ತೆ?
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ವಿಫಲ ಪ್ರಯತ್ನ
  • ಅಕ್ಷರಗಳಿಂದ ದೂರ
  • ಎಣ್ಮಯ ಎಂದರೆ ಯಾರು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಇತ್ತೀಚಿನ ಪ್ರತಿಕ್ರಿಯೆಗಳು

  • pachhu2002
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:33am
  • savithasr
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 8:21am
  • savithasr
    ಉ: ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
    September 8, 2008 - 7:58am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 6:37am
  • Chamaraj
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 6:31am
  • Chamaraj
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 6:25am
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 83 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator