ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಗೂಗಲ್ ಮತ್ತು ಕನ್ನಡ

February 25, 2007 - 4:10pm — ananth_hs

ಗೂಗಲ್ ಮತ್ತು ಕನ್ನಡ

ಗೂಗಲ್ ನಲ್ಲಿ ಕನ್ನಡದ ಪುಟಗಳನ್ನು ಹುಡುಕುವುದನ್ನು ಸುಲಭಗೊಳಿಸಲು ನನ್ನದೇ ಆದ ಅಂತರ್ಜಾಲ ಪುಟವನ್ನು ಸಿದ್ದಪಡಿಸಿದ್ದೇನೆ. ಇಲ್ಲಿ ಟೈಪ್ ಮಾಡಲು ಬರಹದಂತಹ ಯಾವುದೇ ತಂತ್ರಾಂಶದ ಅಗತ್ಯವಿಲ್ಲ. ನೇರವಾಗಿ ನಿಮ್ಮ ಕೀಲಿಮಣೆಯಿಂದ ಟೈಪ್ ಮಾಡಬಹುದು. ಇಲ್ಲಿ ನನ್ನದೇ ಆದ ಕೀಲಿಮಣೆ ವಿನ್ಯಾಸವನ್ನು ಬಳಸಿದ್ದು, ಇದು ಕಗಪ ಕೀಲಿಮಣೆಗಿಂತ ಭಿನ್ನವಾಗಿದೆ.

ನನ್ನ ಅಂತರ್ಜಾಲ ಪುಟದ ವಿಳಾಸ ಹೀಗಿದೆ:

http://karnataka.110mb.com/google.html

ಇದು ಗೂಗಲ್ ಕನ್ನಡಕ್ಕಿಂತ ಭಿನ್ನವೇ?

ಹೌದು. ಗೂಗಲ್ ಕನ್ನಡದ ಪುಟದಲ್ಲಿ ಕನ್ನಡದ ಸೂಚಕಗಳಿವೆ. ಆದರೆ ಕನ್ನಡದ ಪುಟಗಳನ್ನು ಹುಡುಕಲು "ಬರಹ ಡೈರೆಕ್ಟ್" ನಂತಹ ತಂತ್ರಾಂಶದ ಅಗತ್ಯವಿರುತ್ತದೆ.

ನೀವು ನನ್ನ ಪುಟವನ್ನು ಬಳಸಿ ನೋಡಿ, ಪ್ರತಿಕ್ರೀಯೆ ತಿಳಿಸಿ

  • ಭಾಷೆ-ಕನ್ನಡ
~.~
  • Login or register to post comments
  • 1325 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 25, 2007 - 10:24pm — ASHOKKUMAR

Re: ಗೂಗಲ್ ಮತ್ತು ಕನ್ನಡ-ಕೀಲಿಮಣೆ ಕಿರಿಕಿರಿ

ASHOKKUMAR's picture

ಕೀಲಿಮಣೆಯನ್ನು ಹೊಸದಾಗಿ ಕಲಿಯುವುದೇ ಕಿರಿಕಿರಿ.ಶೋಧ ಯಶಸ್ವಿಯಾಗಿ ನೆರವೇರಿತು.ಉತ್ತಮ ಯತ್ನ.ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 10:44pm — ananth_hs

Re: ಗೂಗಲ್ ಮತ್ತು ಕನ್ನಡ-ಕೀಲಿಮಣೆ ಕಿರಿಕಿರಿ

ananth_hs's picture

ನಾನು ಇದುವರೆಗೂ ಬಳಸುತ್ತಿದ್ದ ಕಗಪ ಕೀಲಿಮಣೆ ಸುಲಭವಾಗಿ ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಲ್ಲಿ ಪ್ರತಿ ಅಕ್ಷರವನ್ನು ಟೈಪ್ ಮಾಡಲು ಮೂರು, ನಾಲ್ಕು ಕೀಲಿಗಳನ್ನು ಒತ್ತಬೇಕಾಗುತ್ತದೆ. ಅದಕ್ಕಾಗಿ ನನ್ನದೇ ಆದ ಕೀಲಿಮಣೆ ನನಗಾಗಿ ಸಿದ್ದಪಡಿಸಿಕೊಳ್ಳಬೇಕು ಎಂದು ಈ ಕೆಲಸವನ್ನು ಪ್ರಾರಂಭಿಸಿದೆ. ನಂತರ ಗೂಗಲ್ ನಲ್ಲಿ ಕನ್ನಡದ ಬರಹಗಳನ್ನು ಹುಡುಕುವುದನ್ನು ಸುಲಭಗೊಳಿಸಬೇಕೆಂದು 'ಸುಲಭ ಗೂಗಲ್' ನ್ನು ತಯಾರಿಸಿದೆ.
ಅಂತರ್ಜಾಲವನ್ನು ಮನೆಯಿಂದಲೇ ಬಳಸುವವರು 'ಸುಲಭ ಗೂಗಲ್' ನ ಬಳಕೆಯನ್ನು ಕಂಡುಕೊಳ್ಳಲಾರರು. ಏಕೆಂದರೆ ಬರಹ ಡೈರೆಕ್ಟ್ ಬಳಸಿ ನೇರವಾಗಿ ಗೂಗಲ್ ಪುಟದಲ್ಲಿ ಕನ್ನಡವನ್ನು ಬಳಸಬಹುದು. ಆದರೆ ಒಂದು ಬ್ರೌಸಿಂಗ್ ಸೆಂಟರ್ ನಲ್ಲಿ ಕುಳಿತು ಅಂತರ್ಜಾಲವನ್ನು ಹುಡುಕುವವರಿಗೆ ಬರಹ ಡೈರೆಕ್ಟ್ ಬಳಸುವುದು ಸುಲಭವಲ್ಲ.
ಇನ್ನೊಂದು ಸನ್ನಿವೇಷ ಎಂದರೆ ನನ್ನ ಕಛೇರಿಯಲ್ಲಿ ಯಾವುದೇ ಹೊಸ ತಂತ್ರಾಂಶವನ್ನು ಇನ್ಸ್ಟಾಲ್ ಮಾಡುವುದನ್ನು ವೆಬ್ ಸೆನ್ಸ್ ಎಂಬ ತಂತ್ರಾಂಶವು ತಡೆಹಿಡಿಯುತ್ತದೆ. ಆದ್ದರಿಂದ ಬರಹ ಇಲ್ಲದೇ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸಲು ತಂತ್ರಾಂಶವನ್ನು ರೂಪಿಸಲು ಯೋಚಿಸಿದೆ.
ಸುಲಭ ಗೂಗಲ್ ನ್ನು ಬಹಳಷ್ಟು ಜನರು ಬಳಸಿದ್ದಾರೆ ಮತ್ತು ಬಳಸುತ್ತಿದ್ದಾರೆ. ಅವರಿಗೆ ನನ್ನ ಧನ್ಯವಾಧಗಳು.
ನನ್ನ ಗೂಗಲ್ ಪುಟವನ್ನು ಎಷ್ಟು ಜನರು ಬಳಸುತ್ತಿದ್ದಾರೆ ಎಂದು ಗೂಗಲ್ ನಿಂದ ಪಡೆದ ಗ್ರಾಫ್ ನ್ನು ಇಲ್ಲಿ ಲಗತಿಸಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 10, 2007 - 10:39pm — ASHOKKUMAR

Re: ಕನ್ನಡ ಶೋಧ

ASHOKKUMAR's picture

ನಿಮ್ಮ ಅಂತರ್ಜಾಲ ಪುಟದ ಲಾಭವೇನೆಂದು ಸ್ಪಷ್ಟವಾಯಿತು. ನಕ್ಷೆಯದೇಕೋ ಸರಿಯಾಗಿ ಬಂದಿಲ್ಲ.ಈ ಬಾರಿ ನಿಮ್ಮ ಪುಟ ನೋಡಿದಾಗ ಕೀಲಿಮಣೆ ಚಿತ್ರವೇ ಕಾಣುತ್ತಿದೆ. ಆದ್ದರಿಂದ ಟೈಪಿಸುವುದು ಸುಲಭ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 1, 2007 - 12:15pm — ananth_hs

ಎಲ್ಲ ಓಕೆ, ಕೀಲಿಮಣೆ ಏಕೆ?

ananth_hs's picture

ಕೀಲಿಮಣೆಯಿಂದ ಟೈಪ್ ಮಾಡಲು ಕಷ್ಟವೆನ್ನುವರ ಸಹಾಯಕ್ಕಾಗಿ ಮೌಸ್ ಬಳಸಿ ಅಕ್ಷರಗಳನ್ನು ಮೂಡಿಸುವ ತಂತ್ರವನ್ನು ಅಳವಡಿಸಿದ್ದೇನೆ. ಅಕ್ಷರಗಳ ಮೇಲೆ ಕ್ಲಿಕ್ ಮಾಡಿ ಸುಲಭವಾಗಿ ಪದಗಳನ್ನು ಮೂಡಿಸಿ.

೧) ಪದಗಳ ನಡುವಿನ ಜಾಗವನ್ನು ಅಥವಾ ಇಥರ ಚಿಹ್ನೆಗಳನ್ನು ಕೀಲಿಮಣೆಯ ಸಹಾಯದಿಂದಲೇ ಪಡೆಯಬೇಕು.

೨) ಒತ್ತಕ್ಷರಗಳನ್ನು ಈ ರೀತಿ ಬಿಡಿಸಿಕೊಳ್ಳಿ.

ಒತ್ತಕ್ಷರ = ಒ + ತ್ + ತ + ಕ್ + ಷ + ರ

ರಾಷ್ಟ್ರ = ರಾ + ಷ್ + ಟ್ + ರ

೨) ಕೀಲಿಮಣೆಯೇ ಉತ್ತಮ ಎನ್ನುವವರಿಗೆ ಕೀಲಿಮಣೆಯ ಬಳಕೆ ಹಿಂದಿನಂತೆ ಮುಂದುವರಿಯುತ್ತದೆ. ಕೀಲಿಮಣೆ ಚಿತ್ರವನ್ನು ಬಲಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು

 

೩) ಈ ತಾಣದ ವಿಳಾಸವನ್ನು http://searchkannada.co.nr ಎಂದು ಬದಲಾಯಿಸಿದ್ದೇನೆ. ಹಳೆಯ ವಿಳಾಸವೂ ಮುಂದುವರಿಯುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 1, 2007 - 10:14pm — ASHOKKUMAR

Re: ಸುಲಭ ಗೂಗಲ್

ASHOKKUMAR's picture

ನಿಜಕ್ಕೂ ಚೆನ್ನಾಗಿದೆ. ಅಕ್ಷರ ಕ್ಲಿಕ್ಕಿಸಿದಾಗ,ಕಾಗುಣಿತದ ಅಕ್ಷರಗಳು ಕಾಣಿಸಿಕೊಳ್ಳುವ ಐಡಿಯಾ ಚೆನ್ನಾಗಿದೆ.ಅಭಿನಂದನೆಗಳು.ಅಂದ ಹಾಗೆ ಒಪೆರಾದಲ್ಲೂ ಕೆಲಸ ಮಾಡುತ್ತದೆಯಲ್ಲಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 1, 2007 - 11:08pm — mahesha

ಕನ್ನಡದ ಹುಡುಕು ಇಂಜಿನ್

mahesha's picture

ananth_hs

ಬಹಳ ಚೆನ್ನಾದಿದೆ. ಬಹಳ ಚೆನ್ನಾಗಿ ಕೋಡಿದ್ದೀರಿ Smiling. ನನಗೆ ಈ web programming ಗೊತ್ತಿಲ್ಲ, ಅದರೂ, ನಿಮಗೆ ಬಹಳ ಕಷ್ಟವಾಗಿರಬೇಕು. ನಿಮ್ಮ ದುಡಿಮೆಗೆ ನನ್ನಿ.!!!

ನನಗೆ ಕ್ಲಿಕ್ಕುವುದಕ್ಕಿಂತ ಟೈಪುವುದೇ ಸಲೀಸು.

ಅಂದಹಾಗೆ .nr ಅಂದರೆ ಯಾವ ದೇಶ?

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 2, 2007 - 12:27am — ananth_hs

Re: ಕನ್ನಡದ ಹುಡುಕು ಇಂಜಿನ್

ananth_hs's picture

ಪ್ರತಿಕ್ರಿಯೆಗಳಿಗೆ ಧನ್ಯವಾಧಗಳು. ಅಶೋಕ್ ಕುಮಾರ್ ರವರು ತಮ್ಮ ಹಿಂದಿನ ಪ್ರತಿಕ್ರಿಯೆಯಲ್ಲಿ ಹೊಸ ಕೀಲಿಮಣೆ ಕಲಿಯುವುದು ಕಿರಿಕಿರಿ ಎಂದು ಅಭಿಪ್ರಾಯಪಟ್ಟರು. ಈ ಕಿರಿಕಿರಿಯನ್ನು ಹೋಗಲಾಡಿಸುವುದು ಹೇಗೆ ಎಂದು ಯೋಚಿಸಿದಾಗ ಹೊಳೆದ ಉಪಾಯ ಕ್ಲಿಕ್ಕಿಸುವ ಕೀಲಿಮಣೆ.

  • ಹುಡುಕುವ ಸೇವೆ ಗೂಗಲ್ ನಿಂದ ಎರವಲು ಪಡೆದಿದ್ದು. ಅವರ Google COOP ಸೇವೆ ಇದನ್ನು ಸಾಧ್ಯವಾಗಿಸಿದೆ.
  • ಕೀಲಿಮಣೆ ಬಳಸಿ ರೂಪಿಸಿದ ತಂತ್ರಕ್ಕೆ ಬಹಳ ಸಮಯ ಹಿಡಿಯಿತು. ನನಗೆ ಸಿಗುವ ಬಿಡುವಿನ ಸಮಯವೆಂದರೆ ರಾತ್ರಿ ಹತ್ತರ ನಂತರ ಮತ್ತು ಹನ್ನೆರಡರ ವರೆಗೆ. ಶನಿವಾರ ಮತ್ತು ಭಾನುವಾರದ ಕೆಲವು ಗಂಟೆಗಳನ್ನು ನನ್ನ ಈ ಕೆಲಸಕ್ಕೆ ತೊಡಗಿಸಿಕೊಂಡಿದ್ದೇನೆ. ಕ್ಲಿಕ್ಕಿಸುವ ಕೀಲಿಮಣೆ ತಂತ್ರವನ್ನು ಬಹಳ ಸುಲಭವಾಗಿ ರೂಪಿಸಿದೆ.
  • ಕನ್ನಡದ ತಂತ್ರಜ್ಞಾನ ಇನ್ನೂ ಪಕ್ವವಾಗಬೇಕಿದೆ. ತುಂಗಾ ಫಾಂಟನ್ನು ಬಳಸಿದರೆ "ಮ್ + ಊ = ಮೂ" ಮತ್ತು "ಯ್ + ಊ = ಯೂ " ಎಂದು ಮೂಡುತ್ತದೆ. ಇದನ್ನು ಸರಿಪಡಿಸಲು "Arial Unicode MS" ಫಾಂಟನ್ನು ಬಳಸಿದೆ. ಆಗ ಕಂಡುಬಂದದ್ದೇನಂದರೆ ಙ ಮತ್ತು ಞ ಅಕ್ಷರಗಳು ಅದಲು ಬದಲಾಗಿ ಮೂಡುತ್ತಿವೆ. ನೀವು ನನ್ನ ಶೋಧ ಪುಟದಲ್ಲಿ ಮ ಅಥವಾ ಯ ಅಕ್ಷರದ ಮೇಲೆ ಕ್ಲಿಕ್ ಮಾಡಿ ನೋಡಿ. ಕಾಗುಣಿತಗಳು ಸರಿಯಾಗಿ ಮೂಡಿಬರುವುದು ಕೆಲವರಾದರೂ ಕಾಣುತ್ತೀರಿ. ಹಾಗೂ ಙ ಮತ್ತು ಞ ಗಳು ಅದಲು ಬದಲಾಗಿರುವುದನ್ನು ಕಾಣುತ್ತೀರಿ.
  • ಒಪೆರಾದ ಬಗ್ಗೆ ಅಶೋಕ್ ಕುಮಾರ್ ಪ್ರಶ್ನೆ ಕೇಳಿದ್ದೊ ಅಥವಾ ಕೆಲಸ ಮಾಡುತ್ತಿದೆ ಎಂದು ಹೇಳಿದ್ದೋ ತಿಳಿಯಲಿಲ್ಲ. ನನ್ನ ಬಳಿ ಒಪೆರಾ ತಂತ್ರಾಂಶ ಇಲ್ಲ. ಆದ್ದರಿಂದ ಅದರಲ್ಲಿ ಪರೀಕ್ಷಿಸಲು ಸಾಧ್ಯವಾಗಿಲ್ಲ.
  • ಮಹೇಶರವರೆ, .nr ಯಾವ ದೇಶ ಎಂದು ನನಗೆ ತಿಳಿದಿಲ್ಲ. http://karnataka.110mb.com/google.html ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ. ಅದಕ್ಕೆ ಅದನ್ನು ಹ್ರಸ್ವಗೊಳಿಸಲು co.nr ನಿಂದ ಉಚಿತ ಸೇವೆಯನ್ನು ಎರವಲು ಪಡೆದು http://searchkannada.co.nr ನ್ನು ಮಾಡಿದ್ದೇನೆ. ಪುಟದ ಮೇಲ್ಭಾಗದಲ್ಲಿರುವ co.nr ಐಕಾನ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 2, 2007 - 6:14am — ASHOKKUMAR

Re: ಅನಂತ್‍ರ ಕನ್ನಡದ ಹುಡುಕು ಇಂಜಿನ್-ಒಪೆರಾದಲ್ಲೂ ಕೆಲಸ ಮಾಡುತ್ತದೆ!

ASHOKKUMAR's picture

ನಾನು ಕೆಲವು ಶಬ್ದಗಳನ್ನು Operaದಲ್ಲಿ ಟೈಪಿಸಿ ಪರೀಕ್ಷಿಸಿದಾಗ, ಅದು ಸರಿಯಾಗಿ ಕೆಲಸ ಮಾಡಿತು. ನನ್ನ ಟೀಕೆ ಪುಟದ ಅಭಿವೃದ್ಡಿಗೆ ಕಾರಣವಾಯಿತೆಂದು ತಿಳಿದು ಖುಷಿಯಾಯಿತು.(ನಿಮಗೆ ತೊಂದರೆಯಾಯಿತು ಕ್ಷಮೆಯಿರಲಿ).ಇನ್ನು ಧ್ವನಿ ಆದೇಶಗಳಿಗೆ ಸ್ಪಂದಿಸುವ ಪುಟವನ್ನು ಕೊಡಿ ಎಂದು ವಿನಂತಿ.Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 12:46am — ananth_hs

ಸುಲಭ ಗೂಗಲ್ ನ ವಿಳಾಸ ಬದಲಾವಣೆ

ananth_hs's picture
co.nr ನ ವಿಳಾಸ ತಾಂತ್ರಿಕ ತೊಂದರೆಯಿಂದಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸುಲಭ ಗೂಗಲ್ ಗೆ ಹೊಸ ವಿಳಾಸ ಹುಡುಕುವುದು ಅನಿವಾರ್ಯವಾಯಿತು. ಹೊಸ ವಿಳಾಸ http://www.searchkannada.c-o.in/ ಆಗಿರುತ್ತದೆ. 
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 9:14am — ASHOKKUMAR

Re: ಸುಲಭ ಗೂಗಲ್ :ಹೊಸ ಸೌಲಭ್ಯ

ASHOKKUMAR's picture

ನೇರ ಹುಡುಕಾಟ ಬಳಸಿದಾಗ, ಭೈರಪ್ಪನವರ ಪುಸ್ತಕಗಳೂ ಸೇರಿ ಹಲವು ಪುಸ್ತಕಗಳ ಅಂತರ್ಜಾಲ ಆವೃತ್ತಿ ಕನ್ನಡಸಾಹಿತ್ಯ.ಕಾಮ್ ಅಂತರ್ಜಾಲ ತಾಣದಲ್ಲಿ ಲಭ್ಯವಿರುವುದು ಗೊತ್ತಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 11:02pm — ananth_hs

ಸುಲಭ ಗೂಗಲ್

ananth_hs's picture
ತಂತ್ರಾಂಶ ರೂಪಿಸುವವರಿಗೆ ಸಹಾಯ ಮಾಡುವುದು ಜನರ ನೇರ ಅಭಿಪ್ರಾಯ. ಅಶೋಕ್ ಕುಮಾರ್ ರವರ ಅಭಿಪ್ರಾಯ ಕ್ಲಿಕ್ಕಿಸುವ ಕೀಲಿಮಣೆಯನ್ನು ರೂಪಿಸುವುದಕ್ಕೆ ಸ್ಪೂರ್ತಿಯಾಯಿತು. ಆದರೆ ಬೇಜಾರಿನ ವಿಷಯವೆಂದರೆ ಸ್ಪಷ್ಟವಾದ ಉದಾಹರಣೆಗಳನ್ನು ಕೊಟ್ಟಿದ್ದರೂ ಸಹ ಕೆಲವರು ಸೊನ್ನೆಯನ್ನು ಮೂಡಿಸುವುದು ಹೇಗೆ ಎಂದು ಕೇಳಿದರೆ, ಇನ್ನು ಕೆಲವರು ಒತ್ತಕ್ಷರಗಳನ್ನು ಮೂಡಿಸಲು ತಡಕಾಡುತ್ತಿದ್ದುದು ಕಾಣಿಸಿತು. ಇನ್ನು ಕೆಲವರಿಗೆ ಅಕ್ಷರಮಾಲೆಯಲ್ಲಿ ಅಕ್ಷರಗಳ ಸ್ಥಾನವನ್ನು ನೆನಪಿನಲ್ಲಿಟ್ಟುಕೊಳ್ಳುವುದೇ ಕಷ್ಟ. ಕನ್ನಡದ ಬಗ್ಗೆ ಜನರಿಗಿರುವ ಉದಾಸೀನತೆ ಸ್ಪಷ್ಟವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಕೀಲಿಮಣೆ ಬಳಸಿ ಎಷ್ಟು ಜನ ಹುಡುಕುತ್ತಿದ್ದಾರೋ ತಿಳಿಯದು. ಏಕೆಂದರೆ ಅದನ್ನು ಬಳಸಲು ಕನಿಷ್ಟ ಅರ್ಧ ಘಂಟೆಯಾದರೂ ಕಲಿಯಬೇಕಾಗುತ್ತದೆ.

ಇನ್ನು ಕೆಲವರಿಗೆ ಏನನ್ನು ಹುಡುಕಬೇಕು ಎನ್ನುವುದೇ ದೊಡ್ಡ ಸಮಸ್ಯೆ. ಇದಕ್ಕೆ ಉತ್ತರವಾಗಿ ನೇರ ಹುಡುಕಾಟ ವ್ಯವಸ್ಥೆ ಮಾಡಿದ್ದೇನೆ. ಪ್ರತಿದಿನ ಇಲ್ಲಿ ಹೊಸ ಹೊಸ ಪದಗಳನ್ನು ಸೇರಿಸಬೇಕು ಎಂದುಕೊಂಡಿದ್ದೇನೆ. ಇತ್ತೀಚಿನ ಚಲನಚಿತ್ರ, ಲೇಖಕರು, ಪ್ರೇಕ್ಷಣೀಯ ಸ್ಥಳಗಳು ಅಥವಾ ಇನ್ನಾವುದೇ ಪದಗಳನ್ನು ಪಟ್ಟಿಮಾಡುವುದು ನನ್ನ ಯೋಚನೆ. ಹೀಗಿದ್ದರೂ 10-15 ಜನ ಭೇಟಿ ನೀಡುತ್ತಿದ್ದ ನನ್ನ ಪುಟಕ್ಕೆ 100ಕ್ಕಿಂತಾ ಹೆಚ್ಚು ಜನರು ಪ್ರತಿದಿನ ಬರಲಾರಂಭಿಸಿದ್ದಾರೆ ಎನ್ನುವುದು ನನಗೆ ತೃಪ್ತಿಕೊಟ್ಟ ವಿಷಯ.

ಇನ್ನು ಧ್ವನಿಗೆ ಸ್ಪಂದಿಸುವಂತೆ ಮಾಡುವ ಕೆಲಸ ತುಂಬಾ ಕಷ್ಟಸಾಧ್ಯ. Windows XP ಯಲ್ಲಿ ನಾವು ಹೇಳುತ್ತಾ ಹೋದಂತೆ ಬರೆದುಕೊಳ್ಳುವ ತಂತ್ರಾಂಶ ಲಭ್ಯವಿದೆ. ಆದರೆ ಅದಕ್ಕೆ ಕನ್ನಡ ತಿಳಿಯದು. ಕನ್ನಡದಲ್ಲಿ ಈ ತಂತ್ರಜ್ಞಾನ ಬರಲು ಕೆಲವು ವರ್ಷಗಳು ಕಾಯಬೇಕಿದೆ.

ಇನ್ನೊಂದು ವಿಷಯ ಗೆಳೆಯರೆ, ನನ್ನ ಈ ಬರಹದಲ್ಲಿ ಮ + ಊ = ಮೂ ಸರಿಯಾಗಿ ಮೂಡಿದೆಯಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 11:12pm — ASHOKKUMAR

Re: ಸುಲಭ ಗೂಗಲ್ ---ಮ್+ಊ

ASHOKKUMAR's picture

ನಿಮ್ಮ ಬರಹದಲ್ಲಿ ಮ್+ಊ ಇದ್ದರೂ ಅದು ನಮ್ಮಲ್ಲಿ ಸರಿಯಾಗಿ ಗೋಚರವಾಗಲು ತುಂಗಾದಂತಹ ಅಕ್ಷರ ಬೇಕಂತೆ. ನನಗಂತೂ ಅದು ಮಾ ಎಂದೆ ಕಾಣಿಸುತ್ತಿದೆ!(ಹಳೆ ಫಾಂಟ್‍ನಿಂದಾಗಿ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 10:11am — pavanaja

Re: ಮತ್ತದೇ -ಮ್+ಊ

pavanaja's picture

ದಯವಿಟ್ಟು ಈ ಲೇಖನವನ್ನು ಓದಿ - http://vishvakannada.com/node/274

ಕನ್ನಡದ ಹೆಚ್ಚಿಗೆ ಓಪನ್‌ಟೈಪ್ ಫಾಂಟ್‌ಗಳು ಬೇಕಿದ್ದಲ್ಲಿ http://ildc.in ತಾಣಕ್ಕೆ ಭೇಟಿ ನೀಡಿ.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 2:57pm — hpn

ಉ: ಮತ್ತದೇ -ಮ್+ಊ

hpn's picture

ಅಥವ ಹೊಸ ತುಂಗಾ ಫಾಂಟು ಬೇಕಿದ್ದಲ್ಲಿ ಮೈಕ್ರೊಸಾಫ್ಟಿನ ಈ ಪುಟದಿಂದ ಸರ್ವೀಸ್ ಪ್ಯಾಕು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡ್ಕೊಳ್ಳಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 5:11pm — ASHOKKUMAR

Re: ಉ: ಮೂ ಕಾಣಿಸುತ್ತಿದೆ!!

ASHOKKUMAR's picture

ನಾಡಿಗ್ ಸೂಚಿಸಿದ ಸರ್ವೀಸ್ ಪ್ಯಾಕ್ ಸಮಸ್ಯೆ ಪರಿಹರಿಸಿತು. ಅದರ ಮೊದಲು ildc ಸೈಟಿನ ಫಾಂಟ್ ಅನುಸ್ಥಾಪಿಸಿದಾಗ ಸಮಸ್ಯೆ ಪರಿಹಾರವಾಗಲಿಲ್ಲ.ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂಥರಾ ಪ್ರೀತಿ...
  • ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ
  • ಅಲ್ಲಿಂದ ಇಲ್ಲಿಗೆ
  • ಹದಿನಾಲ್ಕರ ಆಚರಣೆ
  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
Syndicate content

ಲೇಖಕರು

ananth_hs's picture

ಪರಿಚಯ

Hi, I am Ananth Murthy. My hometown is called Asimane, near to Agumbe.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator