ಸಂ- ಕಲಸಿದ ಪದ(ಗಳು) - ೧
ಆತ್ಮೀಯ ಸಂಪದಿಗರೆ,
ಶ್ಯಾಮರವರ ಸಂ-ಪದಬಂಧದದಿಂದ ಪ್ರೇರಣೆಗೊಂಡು ನಾನು ಈ 'ಸಂ-ಕಲಸಿ'ದ( jumbled) ಪದಗಳನ್ನು ಪಟ್ಟಿ ಮಾಡಿದ್ದೇನೆ.
೧) ವಾ ಡು ಮ್ಮ ದ ಗ ನ ನಾ ಯ ಉ ಲಿ
೨) ಸಿ ರು ರೆ ರಿ ಸಿ ದ್ದ ಹ ಉ
೩) ಲ ದಿ ಮ ಕೋ ಣಿ ಬಾ ಲ ನ ಮ
೪) ಸ್ಯ ಪ್ರೇ ಹಾ ವೆ ವೆ ಮ ಲು ನ
೫) ಕು ನ ರ ದಂ ಹಾ ಬೇ ತ್ತಿ ದ ಡಿ ರೆ ರ ನು ಮು ತಿ
೬) ದ ಳಿ ರೆ ಅ ವ ತಾ ಡಿ ಮು ರ ದು ತು
೭) ಡ ಹೀಂ ಬ್ಯಾ ನೋ ಗ ನ ನ್ನ ನೀ ಡ
೮) ಳ್ಳಿ ರ ರೆ ರ ಕೆ ಹ ಕ್ಕ ಕೂ ಕ್ಕೆ ಕು
ಮೇಲಿರುವ ಕಲಸಿದ ಅಕ್ಷರಗಳನ್ನು ಸರಿಯಗಿ ಜೋಡಿಸಿ ಅರ್ಥಯುಕ್ತ ಪದಗುಚ್ಚಗಳನ್ನಾಗಿ ಮಾಡಿ
ಉದಾ: ಸಿ ದ ಪ ದ ಲ ಕ ಳು ಗ .....ಇದಕ್ಕೆ ಉತ್ತರ ಕಲಸಿದ ಪದಗಳು
-----------------
ಉತ್ತರಗಳಿಗಾಗಿ ನಿರೀಕ್ಷಿಸಿ..ಹಾಗೆಯೆ ನಿಮಗೆ ಏನನ್ನಿಸಿತೆಂಬುದನ್ನು ದಯವಿಟ್ಟು ತಿಳಿಸಿ

- Login or register to post comments
- 522 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಸಂ- ಕಲಸಿದ ಪದ(ಗಳು) - ೧
ವೈಭವ ಅವರೆ,
ಸಂ-ಕಲಸಿದ ಪದಗಳು ಚೆನ್ನಾಗಿವೆ. ಉತ್ತರಗಳನ್ನು ಇಲ್ಲಿ ಬರೆದದ್ದು ಯುಕ್ತವೇ ಅಲ್ಲವೇ ತಿಳಿಸಿ.
ಉತ್ತರಗಳನ್ನು ತೆಗೆದುಹಾಕಿದ್ದೇನೆ.
-ಹಂಸಾನಂದಿ
Re: ಸಂ- ಕಲಸಿದ ಪದ(ಗಳು) - ೧
ಗೆಳೆಯರೆ,
ಉತ್ತರಗಳನ್ನು ದಯವಿಟ್ಟು ನನಗೆ "private message" ಮಾಡಿ
-------
"...ಎಲ್ಲ ತತ್ವದೆಲ್ಲೆ ಮೀರಿ..."
ಉ: ಸಂ- ಕಲಸಿದ ಪದ(ಗಳು) - ೧
ವೈಭವರವರೆ,
ಉತ್ತಮ ಪ್ರಯತ್ನ. ಬಿಡದೆ ಹೀಗೆಯೇ ಮುಂದುವರೆಸಿಕೊಂಡು ಹೋಗಿ. ಆದರೆ ನೀವು ಇದನ್ನು ಯಾವುದಾದರೂ "ವರ್ಗ"ಕ್ಕೆ ಸೇರಿಸಬೇಕಿತ್ತು. ಹಾಗಾಗಿಯೇ ಇದು ಲೇಖನಗಳ ಪಟ್ಟಿಯಲ್ಲಿ ಪ್ರಕಟವಾಗಿಲ್ಲ. ನಾನು ಪದಬಂಧವನ್ನು "ಜ್ಞಾನವಾಹಿನಿ" ವರ್ಗಕ್ಕೆ ಹಾಕಿದ್ದೆ.
ಮೇಲಿನ ಪಟ್ಟಿಯಲ್ಲಿ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಆದರೆ ಉತ್ತರಗಳನ್ನು ಇಲ್ಲಿ ಹಾಕೋದಕ್ಕಿಂತ ನಿಮಗೆ "ವೈಯಕ್ತಿಕ ಸಂದೇಶ"ದ ಮೂಲಕ ಕಳಿಸುತ್ತೀನಿ. ನಿಮ್ಮ ಸಂಪದ "ಇನ್‍ಬಾಕ್ಸ್"ನಲ್ಲಿರುತ್ತೆ. ನೋಡಿ, ಸರಿಯೇ ತಪ್ಪೇ ಹೇಳಿ.
ಟಿಪ್ಪಣಿ: ಉತ್ತರಗಳನ್ನು ಕಳಿಸಲೆಂದು ನಿಮ್ಮ ವೈಯಕ್ತಿಕ ವಿವರಗಳಲ್ಲಿ ಹೋಗಿ ನೋಡಿದೆ. ನೀವು "ಈ-ಪತ್ರಗಳನ್ನು ಸ್ವೀಕರಿಸುವುದಿಲ್ಲ" ಅಂತಿತ್ತು. ಆ ಆಯ್ಕೆಯನ್ನು ಆರಿಸಿಕೊಂಡು ನಿಮ್ಮ ಪ್ರೊಫೈಲನ್ನು ಅನುವುಮಾಡುತ್ತೀರಾ?
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)
Re: ಉ: ಸಂ- ಕಲಸಿದ ಪದ(ಗಳು) - ೧--- ಉತ್ತರಗಳು
ಉತ್ತರಗಳು ಕ್ರಮವಾಗಿ ಇಂತಿವೆ:-
೧) ಉದಯವಾಗಲಿ ನಮ್ಮ ನಾಡು
೨) ಹಸಿರಿದ್ದರೆ ಉಸಿರು
೩) ಬಾಲ ಕೋಮಲ ದಿನಮಣಿ
೪) ಪ್ರೇಮವೆನಲು ಹಾಸ್ಯವೆ
೫) ನುಡಿದರೆ ಮುತ್ತಿನ ಹಾರದಂತಿರಬೇಕು
೬) ಮುದುಡಿದ ತಾವರೆ ಅರಳಿತು
೭) ನೀ ಹೀಂಗ ನೋಡಬ್ಯಾಡ ನನ್ನ
೮) ಕೂರಕ್ಕೆ ಕುಕ್ಕರಹಳ್ಳಿ ಕೆರೆ
ಉತ್ತರಗಳನ್ನು ಕಳಿಸಿದವರು - ಶ್ಯಾಮ್ ಕಿಶೋರ್
ಸರಿ ಉತ್ತರಗಳನ್ನು ಕಳಿಸಿದವರು - ಶ್ಯಾಮ್ ಕಿಶೋರ್
ಸಂ-ಕಲಸಿದ ಪದ -೨ ಕ್ಕೆ ಎದುರು ನೋಡಿ