ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕರ್ನಾಟಕ ಸಂಗೀತದ ರಸಾನುಭವ

March 6, 2007 - 6:25am — hamsanandi

 ದಾಕ್ಷಿಣಾತ್ಯ ಸಂಗೀತ ಕರ್ನಾಟಕ ಸಂಗೀತವೆಂದೇ ಪ್ರಸಿದ್ಧವಾದರೂ, ನಮ್ಮಲ್ಲಿ ಬಹುಪಾಲು ಜನಕ್ಕೆ ಶಾಸ್ತ್ರೀಯ ಸಂಗೀತದ ರಸಾಸ್ವಾದನೆ ಕಷ್ಟಸಾಧ್ಯ ಎಂಬುದು ಗಮನಕ್ಕೆ ಬಂದಿರುವ ವಿಷಯವೇ. ಹಾಗೆಂದು ನಮ್ಮವರಿಗೆ ಸಂಗೀತ ಪ್ರೀತಿ ಇಲ್ಲದೇ ಇಲ್ಲ. ಆದರೆ, ಸಾಮಾನ್ಯವಾಗಿ ಯಾವುವೇ ಶಾಸ್ತ್ರೀಯ ಕಲೆಯನ್ನು ಅನುಭವಿಸಿ ಆನಂದಿಸಲೂ ಒಂದು ಸ್ವಲ್ಪ ಮಟ್ಟಿನ ತಯಾರಿ ಬೇಕಾಗುತ್ತೆ ಎಂಬುದು ನನ್ನ ಅನುಭವ. ಇದು ಸಂಗೀತ-ಸಾಹಿತ್ಯ-ನೃತ್ಯ ನಾಟಕ ಎಲ್ಲಕ್ಕೂ ಹೊಂದಬಹುದಾದ ಮಾತಿದು. ಕೇಳುತ್ತ ಕೇಳುತ್ತ, ಸಂಗೀತಾನುಭವ ಹೆಚ್ಚಾಗುವುದು ಖಂಡಿತ.

ಹಿಂದೂಸ್ತಾನಿ ಸಂಗೀತವನ್ನು ಜನಸಾಮಾನ್ಯರಿಗೆ ಪರಿಚಯಿಸಲು ೨ ದಶಕಗಳ ಹಿಂದೆ ವಿವಿಧ ಭಾರತಿಯಲ್ಲಿ ಸಂಗೀತ್ ಸರಿತಾ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅದರಲ್ಲಿ ಒಂದು ರಾಗವನ್ನು ಪರಿಚಯಿಸುತ್ತ, ಆ ರಾಗದಲ್ಲಿ ನಿಯೋಜಿಸಿರುವ ಕೆಲವು ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಆ ರೀತಿಯಲ್ಲಿ ಕರ್ನಾಟಕ ಸಂಗೀತದ ಪರಿಚಯ ರೇಡಿಯೋದಲ್ಲಿ ಆಗಿತ್ತೋ ಇಲ್ಲವೋ ತಿಳಿಯದು. ದೂರದರ್ಶನದಲ್ಲಿ ಸ್ವರರಾಗ ಸುಧಾ ಎಂದು ಡಾ.ಬಾಲಮುರಳಿಕೃಷ್ಣರು ನಡೆಸಿಕೊಟ್ಟಿದ್ದ ಒಂದು ಕಾರ್ಯಕ್ರಮ (೧೩ ಕಂತುಗಳು ಇರಬಹುದು) ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈಚಿನ ದಿನಗಳಲ್ಲಿ ಹೊಸದಾಗಿ ಈ ರೀತಿಯ ಕಾರ್ಯಕ್ರಮಗಳು ಬಂದಿವೆಯೋ ಅರಿಯೆ.

ಕಳೆದ ಎರಡು ವರ್ಷಗಳಿಂದ ನೋಡುತ್ತಿರುವ ಉದಯ ಟೀವಿಯನ್ನು ಮಾಪನವಾಗಿಟ್ಟುಕೊಂಡರೆ ಶಾಸ್ತ್ರೀಯ ಸಂಗೀತಕ್ಕೆ ಅವರು ಕೊಡುವ ಸಮಯ ಪ್ರತಿದಿನಕ್ಕೆ ೨೦ ನಿಮಿಷಗಳು ಮಾತ್ರ! ಅದೂ ಕೂಡ ಬೆಳಗಿನ ಜಾವ ೫ ಗಂಟೆಯ ಸಮಯದಲ್ಲಿ. ನಮಗೆ ಇಲ್ಲಿ ಸಿಗುವುದು ಉದಯ ಟೀವಿ ಒಂದೇ, ಹಾಗಾಗಿ ಇತರೆ ವಾಹಿನಿಗಳ ಬಗ್ಗೆ ಮಾತಾಡಲಾರೆ. ಶನಿವಾರ ಭಾನುವಾರ ದಿನಕ್ಕೆ ೨೦ ಗಂಟೆ ಸಿನಿಮಾ ಆಧಾರಿತ ಕಾರ್ಯಕ್ರಮಗಳು ಪ್ರಸಾರವಾಗುವ ಉದಯ ವಾಹಿನಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಈ ಗತಿ ಇರುವುದು ಈಗ ಜನಕ್ಕೆ ಇರುವ ಅಭಿರುಚಿಯನ್ನು ತೋರಿಸುತ್ತದೋ ಅಥವಾ ಈ ವಾಹಿನಿಯವರ ಮನಸ್ಥಿತಿಯ (ದುಸ್ಠಿತಿ?) ಕನ್ನಡಿಯೋ ನಾನರಿಯೆ.

ನಾನು ಈ ಬರಹವನ್ನು ಸೇರಿಸಲು ಯಾವುದಾದರೂ ಸಂಗೀತ ಸಂಬಂಧಿ ವರ್ಗವಿದೆಯೇ ಎಂದು ನೋಡಿದರೆ ಸಂಪದದಲ್ಲೂ ಅದು ಕಾಣೆ ಮಾರಾಯ್ರೆSurprised. ಆದರೆ ಇಲ್ಲಿಯ ಓದುಗರಲ್ಲಿ ಕರ್ನಾಟಕ ಸಂಗೀತದ ರಾಗಗಳ ಪರಿಚಯ ಮಾಡಿಕೊಟ್ಟರೆ, ಅದನ್ನು ತಿಳಿಯುವ ಆಸಕ್ತಿಯಿರುವ ವರ್ಗವಿದೆಯೇ? ಇದ್ದರೆ ನಾನು ಪ್ರಯತ್ನಿಸಬಲ್ಲೆ. ಕನ್ನಡ ಚಿತ್ರಗಳಲಲ್ಲಿ ಬಂದಿರುವ ಪ್ರಸಿದ್ಧ ಗೀತೆಗಳನ್ನೇ ಆಧರಿಸಿ ರಾಗಗಳ ಪರಿಚಯ ಮಾಡಬಹುದು Cool! ಅನಂತರ, ನೀವು ಶಾಸ್ತ್ರೀಯ ಕಚೇರಿಯೊಂದರಲ್ಲಿ ಯಾವುದಾದರೂ ಕೃತಿಯನ್ನು ಕೇಳಿದರೆ, ಶ್ರವಣಜ್ಞಾನದಿಂದ (pattern-matching) ರಾಗದ ಪತ್ತೆ ಹಚ್ಚುವುದೂ ಸಾಧ್ಯ?

 ಏನಂತೀರಿ?

-ಹಂಸಾನಂದಿ

~.~
  • Login or register to post comments
  • 799 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 3, 2008 - 4:07pm — ಸಂಗನಗೌಡ

ಉ: ಕರ್ನಾಟಕ ಸಂಗೀತದ ರಸಾನುಭವ

ಸಂಗನಗೌಡ's picture

ಹೌದು... ತಿಳಿಸಿ ಕೊಡಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 4, 2008 - 10:41am — savithru

ಉ: ಕರ್ನಾಟಕ ಸಂಗೀತದ ರಸಾನುಭವ

savithru's picture

ಇದಕ್ಕೆ ಪ್ರತಿಕ್ರಿಯಿಸದೇ ಇರಕ್ಕೆ ನನ್ನಿಂದ ಆಗ್ಲಿಲ್ಲ. pattern-matching! ...ಓಹ್.. ಗ್ರೇಟ್ ...
ನಾನಂತೂ ಚಾತಕ ಪಕ್ಷಿ ತಾರಾ ಕಾಯ್ತಾ ಇದ್ದೀನಿ.
ದಯವಿಟ್ಟು ಶುರು ಮಾಡಿ....

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 4, 2008 - 1:58pm — ಶ್ರೀನಿವಾಸ ವೀ. ಬ೦ಗೋಡಿ

ಉ: ಕರ್ನಾಟಕ ಸಂಗೀತದ ರಸಾನುಭವ

ಶ್ರೀನಿವಾಸ ವೀ. ಬ೦ಗೋಡಿ's picture

ತುಂಬ ಆಸಕ್ತಿಯಿದೆ. ದಯವಿಟ್ಟು ತಿಳಿಸಿಕೊಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಸಂಗೀತದ ರಸಾನುಭವ
  • ಅ೦ತರ
  • ವಿಮರ್ಶೆ ಮತ್ತು ಮೀಮಾಂಸೆ
  • ದುರ್ಗದ ಸೂರ್ಯಾಸ್ತಮಾನ
  • ಕರ್ನಾಟಕ ಸಂಗೀತದ ರಸಾನುಭವ - ರಾಗ ಮೋಹನ (ಭಾಗ ೧)
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: kannada kanda
    July 5, 2008 - 9:38am
  • hamsanandi
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 5, 2008 - 9:29am
  • Narayana
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:29am
  • omshivaprakash
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20am
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 7:09am
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 5:52am
  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator