ಬುದ್ಧಿಗೆ ಕಸರತ್ತು: ಸಂಪದಬಂಧ - ೨
ಆತ್ಮೀಯ ಸಂಪದಿಗರೇ,
ಸಂಪದಬಂಧ-೨ ಇದೀಗ ನಿಮ್ಮ ಮುಂದಿದೆ. ಈ ಬಾರಿ ಉತ್ತರಗಳನ್ನು ನನಗೆ "ವೈಯಕ್ತಿಕ ಸಂದೇಶ"ದ ರೂಪದಲ್ಲಿ ಕಳುಹಿಸುತ್ತೀರಾ? ಹಾಗೆ ಮಾಡಿದಲ್ಲಿ ಎಲ್ಲರಿಗೂ ಕೊನೆಯದಾಗಿ ಉತ್ತರ ಪ್ರಕಟಗೊಳ್ಳುವ ತನಕ ಕುತೂಹಲವಿರುತ್ತದೆ ಮತ್ತು ಭಾಗವಹಿಸಲು ಅವಕಾಶವಿರುತ್ತದೆ.
ಈ ಬಾರಿಯ ಸಂಪದಬಂಧದ ಉತ್ತರ ಮಾರ್ಚ್ ೨೦ (ಮುಂದಿನ ಮಂಗಳವಾರ) ಪ್ರಕಟವಾಗುತ್ತದೆ.
ಕಳೆದ ಬಾರಿಯಂತೆ ಈ ಸಾರ್ತಿ ಕೂಡಾ ಉತ್ಸಾಹದಿಂದ ಭಾಗವಹಿಸುತ್ತೀರಾ ಎಂದು ಭಾವಿಸಿದ್ದೇನೆ. ತಮ್ಮ ಸಲಹೆ-ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ.
| 1 | 2 | ||||||||||||
| 3 | 4 | 5 | |||||||||||
| 6 | |||||||||||||
| 7 | 8 | 9 | 10 | ||||||||||
| 11 | |||||||||||||
| 12 | 13 | 14 | |||||||||||
| 15 | 16 | ||||||||||||
| 17 | 18 | 19 | |||||||||||
| 20 | |||||||||||||
| ಮೇಲಿನಿಂದ ಕೆಳಕ್ಕೆ: |
| 1. ಸತ್ಯ, ಅಹಿಂಸೆಗಳ ಜತೆಗೇ ಇದನ್ನೂ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಒಂದು ಅಸ್ತ್ರವನ್ನಾಗಿ ಬಳಸಿದರು (3) |
| 2. ಗುಹೆ ಎನ್ನುವುದಕ್ಕೆ ಇನ್ನೊಂದು ಪದ (2) |
| 5. "ರತ್ನ" ಎನ್ನುವುದನ್ನು ಸ್ವಲ್ಪ ಹಿಗ್ಗಿಸಿ, ಕಾವ್ಯಾತ್ಮಕವಾಗಿ ಹೀಗೂ ಹೇಳಬಹುದು (3) |
| 7. ಪಂಪ ಕನ್ನಡದ "----" ಎಂದೇ ಹೆಸರಾಗಿದ್ದಾನೆ (4) |
| 8. ಪಾಪ, ಗರ್ಭಿಣಿ ಮಹಿಳೆ ತಿರುಗಿ ನಿಂತಿದ್ದಾಳೇಕೆ? (ಕೆಳಗಿನಿಂದ ಮೇಲಕ್ಕೆ) (3) |
| 9. ತನ್ನ ಗಂಡನಿಗಾಗಿ ಯಮನನ್ನೇ ಸೋಲಿಸಿದಾಕೆ. ಅರವಿಂದರ ಮಹಾಕಾವ್ಯದ ಹೆಸರೂ ಕೂಡಾ (3) |
| 10. "ಡಿಸ್ಕೌಂಟ್" ಎನ್ನುವುದಕ್ಕೆ ಕನ್ನಡ ಪದ ನೆನಪಿಸಿಕೊಳ್ಳಿ ನೋಡೋಣ (4) |
| 11. ಜಹ್ನು ಮಹರ್ಷಿ ತನ್ನ ಕಿವಿಯಿಂದ ಹೊರಬಿಟ್ಟ ಕಾರಣಕ್ಕೆ ಗಂಗಾನದಿಗೆ ಈ ಹೆಸರು ಬಂದಿದೆ (3) |
| 13. ಅಂಚೆಯ ಮೂಲಕ ಬರುತ್ತಿದ್ದ ಪತ್ರಗಳಿಗೆ ಹೀಗೆ ಕೂಡಾ ಕರೆಯುತ್ತಾರೆ ಗೊತ್ತೇ? (3) |
| 14. ಮುನಿಯ ಕೋಪಿಸಿಕೊಂಡು ಕುಳಿತಿದ್ದಾನೆ. ಏಕೆಂದು ಕೇಳುತ್ತೀರಾ? (3) |
| 16. ಎಲೆ-ಅಡಿಕೆಯ ಮಿಶ್ರಣಕ್ಕೆ ಹೀಗೆನ್ನುತ್ತಾರೆ. ಭಿಕ್ಷದವರು "ಇದನ್ನು ನೀಡಿ ತಾಯೀ" ಎಂದೇ ಬೇಡುತ್ತಿದ್ದದ್ದು (3) |
| 18. ಈಗ ನಮಗೆ ಕಾರುಗಳಿರುವಂತೆ, ರಾಜ-ಮಹಾರಾಜರಿಗೆ ಈ ವಾಹನಗಳಿದ್ದವು (2) |
| ಎಡದಿಂದ ಬಲಕ್ಕೆ: |
| 1. ಕನ್ನಡದ ಪ್ರಸಿದ್ಧ ಲೇಖಕರಾದ ಸುಬ್ರಹ್ಮಣ್ಯ ರಾಜೇ ಅರಸ್ ಅವರ ಕಾವ್ಯನಾಮ ಹೇಳಿ ನೋಡೋಣ? (4) |
| 3. ಶಿವ ಮತ್ತು ವಿಷ್ಣು ಇಬ್ಬರೂ ಈ ಊರಿನಲ್ಲಿ ಒಟ್ಟಿಗೇ ಇದ್ದಾರಲ್ಲ! (4) |
| 4. ಹಕ್ಕ-ಬುಕ್ಕರಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಬೆನ್ನೆಲುಬಾಗಿ ನಿಂತ ಧರ್ಮಗುರು (4) |
| 6. ಕಿತ್ತೂರು ರಾಣಿ ಚೆನ್ನಮ್ಮ ಇದನ್ನು ಕೊಡುವುದಿಲ್ಲವೆಂದೇ ಬ್ರಿಟಿಷರ ವಿರುದ್ಧ ತಿರುಗಿ ನಿಂತದ್ದು (2) |
| 7. ಅಯ್ಯೋ, ಇದು ಪ್ರಾರಂಭವಲ್ಲ! ವ್ಯವಸಾಯ ಎನ್ನುವುದಕ್ಕೆ ಹಳ್ಳಿ ಕಡೆ ಹೀಗೆ ಹೇಳುತ್ತಾರೆ. (3) |
| 9. ಧಾರವಾಡದಲ್ಲಿನ ಸುಪ್ರಸಿದ್ಧ "ಸಾಹಿತಿಗಳ ಬೀದಿ". ಇಲ್ಲಿಗೆ "ಬಾರೋ" ಎಂದೇ ಬೇಂದ್ರೆಯವರು ಕೂಗಿ ಕರೆದದ್ದು. (5) |
| 12. ತೆನಾಲಿರಾಮನಿಗಿದ್ದ ಬಿರುದು. ಎಡದಿಂದ ಅಥವಾ ಬಲದಿಂದ ಹೇಗೆ ಓದಿದರೂ ಅದೇ ಪದ! (5) |
| 14. ಗುರುವಿನ ಗುಲಾಮನಾಗದ ತನಕ ಇದು ದೊರೆಯುವುದಿಲ್ಲ (3) |
| 15. ತೆರಿಗೆ ಎನ್ನುವುದಕ್ಕೆ ಕನ್ನಡ ಪದ. ಹೋಗೀ ಹೋಗೀ "ಇವನ" ಮುಂದೆ ಸುಖ-ದುಃಖ ಹೇಳಿಕೊಡಂತೆ ಎಂಬ ಗಾದೆ ಮಾತೂ ಇದೆ. (2) |
| 17. ಹಳ್ಳಿಗಾಡಿನ ತಿಮ್ಮಕ್ಕ ಇವುಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆಯ ಬಗ್ಗೆ ಏನೆಲ್ಲ ಕ್ರಾಂತಿ ಉಂಟುಮಾಡಿದರು ಅಲ್ಲವೇ? (4) |
| 19. ಕಾಡಿನ ಹೂವು. ನಮ್ಮ ಬದುಕು ಹೀಗಿದ್ದಲ್ಲಿ ಚೆನ್ನ ಎಂದು ಡಿ.ವಿ.ಜಿ. ಹೇಳುತ್ತಾರೆ. (4) |
| 20. ಹಿತ್ತಾಳೆ ಪಾತ್ರೆಯನ್ನು ಹುಣಿಸೇಹಣ್ಣಿನಿಂದ ತಿಕ್ಕಿ ತೊಳೆದರೆ ಹೀಗೆ ಹೊಳೆಯುತ್ತದೆ ಎಂದು ಹೇಳುತ್ತಾರೆ. ಇದೊಂದು ಜೋಡಿಪದ. (4) |

- Login or register to post comments
- 579 hits
- Email this page





RSS:
ಪ್ರತಿಕ್ರಿಯೆಗಳು
ತೊಂದರೆ ಸರಿಪಡಿಸಲಾಗಿದೆ: ಬುದ್ಧಿಗೆ ಕಸರತ್ತು: ಸಂಪದಬಂಧ - ೨
ಅಡಚಣೆಗಾಗಿ ದಯವಿಟ್ಟು ಕ್ಷಮಿಸಿ!
ಮೂಲ ಲೇಖನದಲ್ಲಿ ಯಾಕೋ ಎಲ್ಲಾ ಚೌಕಗಳೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಸ್ವಲ್ಪ ತಿಣುಕಾಡಿ ಸರಿಪಡಿಸಿದೆ.
ಪ್ರಶ್ನೆಗಳು ಮಾತ್ರ ಮೊದಲ ಬರಹದಲ್ಲೇ ಸರಿಯಾಗಿ ಮೂಡಿಬಂದಿವೆ. ಇದನ್ನು ನೇರವಾಗಿ xl sheet ಒಂದಕ್ಕೆ ಕಾಪಿ-ಪೇಸ್ಟ್ ಮಾಡಿಕೊಂಡು ಬಿಡಿಸಬಹುದು.
- ಶ್ಯಾಮ್ ಕಿಶೋರ್
ಸಂಪದಬಂಧ - ೨: ಸರಿಯುತ್ತರಗಳು
ಆತ್ಮೀಯರೆ,
"ಸಂಪದಬಂಧ - ೨"ರ ಸರಿಯುತ್ತರಗಳು ಇಲ್ಲಿವೆ.
ಉತ್ತರವನ್ನು ಮತ್ತು ಸರಿಯುತ್ತರವನ್ನು ಕಳುಹಿಸಿದವರು: H.S.R. ರಾಘವೇಂದ್ರ ರಾವ್.
ಗಮನಿಸಿ: ಎಡದಿಂದ ಬಲಕ್ಕೆ ಪ್ರಶ್ನೆ ೬ಕ್ಕೆ "ಕರ" ಅಥವಾ "ಕಪ್ಪ" ಎರಡೂ ಸರಿಯುತ್ತರಗಳೇ. ನಾನು ಕಪ್ಪ ಅಂತ ಬರೆದಿದ್ದೀನಿ.
- ಶ್ಯಾಮ್ ಕಿಶೋರ್