ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

March 15, 2007 - 3:05pm — krishnamurthy bmsce

*ಸಮಸ್ತ ಕನ್ನಡಿಗರಿಗೆ ವ್ಯಯನಾಮ ಸಂವತ್ಸರದ ಯುಗಾದಿಯ ಶುಭಾರೈಕೆಗಳು*

ಮರೆಯಾಗುತ್ತಿರುವ ವರ್ಷ ನೋವ ಮರೆಸಿ

ಬರಲಿರುವ ವರ್ಷ ನಲಿವ ತರಿಸಿ

ತೊಡಕು ನೂರೆಂಟು ದೂರವಾಗಿ

ಬದುಕಿನ ಬಂಡಿ ಸುಖವಾಗಿ ಸಾಗಲಿ

ಎಂದು ವ್ಯಯ ನಾಮ ಸಂವತ್ಸರದ ಯುಗಾದಿಯಂದು

ಕರುನಾಡ ಜನತೆಗೆಶುಭಾರೈಸುವೆ.

ಅರಳಿ ನಗುವ ಚೈತ್ರದ ಹಾಗೆ

ಕುಹು ಕುಹು ಕೊರಳ ದನಿಯ ಹಾಗೆ

ಅನು ದಿನವೂ ಪ್ರಜ್ವಲಿಸುವಉಷೆಯ ಹಾಗೆ

ಕರುನಾಡ ಜನರ ಬದುಕು ಪ್ರಜ್ವಲಿಸಲೆಂದು

ವ್ಯಯ ನಾಮ ಸಂವತ್ಸರದ ಯುಗಾದಿಯಂದು ಶುಭಾರೈಸುವೆ.

*ಆಶಯ*

ನೀರಿಲ್ಲದೆ ಬಳಲಿ ಬಾಯಾರಿದ ಕರುನಾಡ ಜನತೆಗೆ

ವ್ಯಯ ನಾಮ ಸಂವತ್ಸರದ ಯುಗಾದಿಯು

ದಾಹ ತಣಿಸುವ ತಂಪು ಪಾನಿಯವಾಗಲಿ

ಅನ್ನವಿಲ್ಲದೆ ಅಸಿದು ಕೃಷವಾದ ಜನತೆಗೆ

ವ್ಯಯ ನಾಮ ಸಂವತ್ಸರದ ಯುಗಾದಿಯು

ಮೃಷ್ಟಾನ್ನವಾಗಲಿ ಬೇಸರದಿ ಬಸವಳಿದ ಜನತೆಗೆ

ವ್ಯಯ ನಾಮ ಸಂವತ್ಸರದ ಯುಗಾದಿಯು

ಸುಮದುರ ಸಂಗೀತ ರಂಜನೆಯಾಗಿ ಬರಲಿ

ವ್ಯಯ ನಾಮ ಸಂವತ್ಸರದ ಯುಗಾದಿಯು ಎಂಬ ಶುಭಾರೈಕೆ.

*ಯುಗಾದಿ*

ಬಂತು ಯುಗಾದಿ ಮನೆ ಮನೆಗೆ

ತುಂಬಿ ತಳಿರು ತೋರಣ ಹೊಸ್ತಿಲಿಗೆ

ಬಣ್ಣ ಬಣ್ಣದ ರಂಗವಲ್ಲಿಮುಂಬಾಗಿಲಿಗೆ

ಅಬ್ಯಂಜನ ಸ್ನಾನ ಜಿಡ್ದು ಹಿಡಿದ ಮೈ ಮನಗಳಿಗೆ

ಸಿಹಿ ಬೆಲ್ಲ ಕಹಿ ಬೇವುಎಲ್ಲ ನಾಲಿಗೆಗೆ

ನೋವು ನಲಿವು ಸಮ ಪಾಲು ಎಲ್ಲರ ಬಾಳ್ವೆಗೆ

ಎಲೆ ಉದುರಿ ಮರಚಿಗುರಿ ಚೈತ್ರ ವಾಯ್ತು ಜಗಕೆ

ಮೈತೊಳೆದು ಮಡಿಯುಟ್ಟು ಬೇವು ಬೆಲ್ಲತಿಂದರಾಯ್ತುಯುಗಾದಿ ಜನಕೆ.

-ಕೃಷ್ಣಮೊರ್ತಿ ಅಜ್ಜಹಳ್ಳಿಬಿ ಎಂ ಎಸ್ ಸಿ ಇ ಬೆಂಗಳೂರು-೧೯

  • ಕಾವ್ಯ ಮತ್ತು ಕವನ
~.~
  • Login or register to post comments
  • 1708 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 16, 2007 - 12:29am — benaka

Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

benaka's picture

ಮೂರ್ತಿಗಳೇ,

ಹೊಸವರ್ಷದ ಸ್ವಾಗತ ಚೆನ್ನಾಗಿದೆ. ಆದರೆ ಒಂದು ಸಣ್ಣ ತಿದ್ದುಪಡಿ:

೨೦೦೭ರ ಮಾರ್ಚ್ ೧೯ರಂದು ಪ್ರಾರಂಭವಾಗುವ ಸಂವತ್ಸರ "ವ್ಯಯ" ಅಲ್ಲ! "ಸರ್ವಜಿತ್". ಅರುವತ್ತು ವರ್ಷಗಳಿಂದ ಭಾರತವು ಕಾಯುತ್ತಿರುವ ಸಾಧನೆಯ ಸಂವತ್ಸರ ಇದೇ!

ನಿಮ್ಮ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 12:53am — mahesha

Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಶಯಗಳು

mahesha's picture

ಸಮಸ್ತ ಕನ್ನಡಿಗರಿಗೆ ೨೦೦೭ರ ಮಾರ್ಚ್ ೧೯ರಂದೇ ಯುಗಾದಿ ಅಲ್ಲ..

ಅಂದು ಬರಿ ಚಂದ್ರಮಾನ ಯುಗಾದಿ.

ಸೌರಮಾನದವರ ಯುಗಾದಿ ಅಂಬೇಡ್ಕರ್‍ ಜಯಂತಿ ದಿನ ಬರುವುದು Smiling.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 10:47am — krishnamurthy bmsce

Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಶಯಗಳು

krishnamurthy bmsce's picture

ಶ್ರೀಯುತ ಮಹೆಶ ರವರೆ ನಾನು ಹೇಳಿರುವುದು ಯುಗಾದಿಯ ಶುಭಾಶಯ ಇಲ್ಲ ಸಂವತ್ಸರದ ಬಗ್ಗೆ ನನಗೆ ತಿಳಿದಿರಲಿಲ್ಲತಿಳಿಸಿದ್ದಕ್ಕೆ ವಂದನೆಗಳು-ಕೃಷ್ಣಮೂರ್ತಿ ಅಜ್ಜಹಳ್ಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 9:20pm — hpn

Unicode ಬಳಸಿ ಬರೀದಿದ್ರೆ ಕಾಮೆಂಟ್ ಕಿತ್ತುಹಾಕಲಾಗುವುದು

hpn's picture

Unicodeನಲ್ಲಿ ಬರೀರಿ! ಹೀಗೆಲ್ಲ ಕೆಂಪು, ಹಳದಿ, ಹಸಿರು ಬಣ್ಣದಲ್ಲಿ ಬರೆದರೆ ಕೂಡ ನೇರ ಕಾಮೆಂಟು ತೆಗೆದುಹಾಕಲಾಗುವುದು. ಬರಹ IME ಬಳಸಿ ಯೂನಿಕೋಡ್ ನಲ್ಲಿ ಟೈಪಿಸಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 9:41pm — ASHOKKUMAR

Re: ..ಕಾಮೆಂಟ್ ಕಿತ್ತುಹಾಕಲಾಗುವುದು..ತಪ್ಪು ಕನ್ನಡ ಬರೆದರೂ ಕಿತ್ತು ಹಾಕಿ

ASHOKKUMAR's picture

ಹಾಗೆಯೇ ಕನ್ನಡದ ಕೊಲೆಯಾದರೂ ಕಿತ್ತು ಹಾಕಿ ಬಿಡುತ್ತೀರಾ ನಾಡಿಗರೇ?Laughing

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2007 - 12:51am — hpn

ಛೆ ಛೆ

hpn's picture

ಛೆ ಛೆ, ಕಾಮೆಂಟ್ ಕಿತ್ತು ಹಾಕಿಸಬೇಕೆಂದು ಕೊಲೆ ಎಲ್ಲ ಮಾಡ್ಬೇಡಿ. Sticking out tongue

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2007 - 3:46pm — ismail

ಯೂನಿಕೋಡ್ ಬಳಸಿ

ismail's picture

ಸಂಪದದ ಕೆಲ ಸದಸ್ಯರು ಬರಹದಿಂದ ನೇರವಾಗಿ ಪೇಸ್ಟ್ ಮಾಡುವುದು, ವರ್ಡ್ ನಿಂದ ನೇರವಾಗಿ ಪೇಸ್ಟ್ ಮಾಡುವುದು ಮುಂತಾದುವುಗಳಲ್ಲಿ ತೊಡಗಿದ್ದಾರೆ. ಈ ಕುರಿತಂತೆ ಅನೇಕ ಬಾರಿ ಎಚ್ಚರಿಸಿದರೂ ಅವರಿದನ್ನು ಮುಂದುವರಿಸಿದ್ದಾರೆ. ಸದ್ಯಕ್ಕೆ ಕೃಷ್ಣ ಮೂರ್ತಿಯವರ ಕಮೆಂಟನ್ನು ನಾನು ಯೂನಿಕೋಡ್ ಗೆ ಪರಿವರ್ತಿಸಿದ್ದೇನೆ. ಈ ಹಿಂದೆಯೂ ಇದೇ ಸದಸ್ಯರ ಕೆಲವು ಕವನಗಳನ್ನು ಪರಿವರ್ತಿಸಿದ್ದೆ. ಇನ್ನು ಮುಂದಾದರೂ ಮಾನ್ಯ ಸದಸ್ಯರು ನಮಗೆ ಕೆಲಸ ಕೊಡುವುದಿಲ್ಲ ಎಂದು ಭಾವಿಸುತ್ತೇನೆ. 

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 18, 2007 - 8:41pm — ASHOKKUMAR

unicode ಮತ್ತು ಭಾಷೆ

ASHOKKUMAR's picture

ismail>>ಹೇಗೆ ಬರೆದರೂ ಅಷ್ಟೇ.
>>ಯೂನಿಕೋಡ್ ಬಳಸಿ
ಸಂಪದದಲ್ಲಿ unicode ಬಳಸಿ ಎನ್ನುವುದು ಯಾಕೆಂದು ಸ್ಪಷ್ಟವಾಗಿದೆ. ಆದರೆ ಭಾಷೆಯ ಕೆಲಸ
ಇತರರಿಗೆ ನಮ್ಮ ವಿಚಾರ ತಿಳಿಸುವುದು,ಅದು ಹೇಗೆ ಬಳಕೆಯಾದರೂ ಪರವಾಗಿಲ್ಲ ಎಂಬ ಇಸ್ಮಾಯಿಲ್‍ರ ವಿಚಾರದೊಂದಿಗೆ ಈ ಸಲಹೆ ಸರಿಹೊಂದುವುದಿಲ್ಲ.ಸಂಪದ ಸದಸ್ಯರು ಅಂತರ್ಜಾಲ ಮೂಲಕ ಕನ್ನಡದಲ್ಲಿ ಬರೆಯುವಾಗ ಯುನಿಕೋಡ್ ಬಳಸದಿದ್ದರೆ ಉಂಟಾಗುವ ಆಭಾಸ,ಗಲಿಬಿಲಿ ಕನ್ನಡವನ್ನು ತಮ್ಮಿಷ್ಟ ಬಂದಂತೆ ಬಳಸಿದಾಗಲೂ ಆಗುವುದಿಲ್ಲವೇ? ಮಾಧ್ಯಮದಲ್ಲಿ ನಮ್ಮ ಅನಿಸಿಕೆಗಳನ್ನು ಇತರರ ಜತೆ ಹಂಚಿಕೊಳ್ಳುವಾಗ ಭಾಷಾ ಶಿಸ್ತು ಬೇಡವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 10:35am — krishnamurthy bmsce

Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

krishnamurthy bmsce's picture

ಶ್ರೀಯುತ ಬೆನಕ ರವರೆ ನಾನು ಹೇಳಿರುವುದು ಯುಗಾದಿಯ ಶುಭಾಷಯ ಇಲ್ಲಿ ಚಂದ್ರಮಾನ ಸೌರಮಾನ ಎರಡರ ಬಗ್ಗೆ ವಿವರ ಬೇಡ ಒಟ್ಟಾರೆ ಎಲ್ಲ ಕನ್ನಡಿಗರೂ ಆಚರಿಸುವುದು ಯುಗಾದಿ ಅಲ್ಲವೇ ಅವರು ಯಾವಾಗಲಾದರೂ ಆಚರಿಸಲಿ ಅದನ್ನು ಯುಗಾದಿ ಎನ್ನುವುದು ಸರಿಯಲ್ಲವೇ ಅದಕ್ಕಾಗೆಯೇ ನಾವು ಯುಗಾದಿಯ ಶುಭಾಷಯ ಎಂದುಹೇಳಿರುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 6:34pm — ರಘುನಂದನ

Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

ರಘುನಂದನ's picture

ಕೃಷ್ಹ್ಣಮೂರ್ತಿಯವರೆ! ನೀವು ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತಾ ಒಬ್ಬರಿಗೆ ಹೇಳಬೇಕಾಗಿದ್ದನ್ನು ಇನ್ನೊಬ್ಬರಿಗೆ ಹೇಳಿದ್ದೀರಿ. ಸ್ವಲ್ಪ ಕನ್ಫೂಸ್ ಆಯ್ತು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 4:04pm — Rohith

Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

Rohith's picture

ಬೆನಕ‍ಅವರೆ,

ನೀವು

benaka wrote:
ಅರುವತ್ತು ವರ್ಷಗಳಿಂದ ಭಾರತವು ಕಾಯುತ್ತಿರುವ ಸಾಧನೆಯ ಸಂವತ್ಸರ ಇದೇ!

ಎಂದು ಬರೆದಿದ್ದೀರಿ. ನನಗೆ ಸಂವತ್ಸರದ ಬಗ್ಗೆ ಗೊತ್ತು, ಆದರೂ ಇದರ ಮಹತ್ವ ತಿಳಿಯಲಿಲ್ಲ. ದಯವಿಟ್ಟು ಸ್ಪಷ್ಟವಾಗಿ ಹೇಳುವಿರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2007 - 12:03am — hamsanandi

Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

hamsanandi's picture

 

ಹಿಂದಿನ ಸರ್ವಜಿತ್ ಸಂವತ್ಸರದಲ್ಲೇ ಭಾರತ ಸ್ವತಂತ್ರವಾದದ್ದು! (೧೯೪೭) 

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2007 - 1:27am — benaka

ಯುಗಾದಿಯ ಶುಭಾಶಯಗಳು!

benaka's picture

ರೋಹಿತರೇ,
ಸಂವತ್ಸರಚಕ್ರವೆಂಬುದು ಎಲ್ಲ ನಾಗರೀಕತೆಗಳಲ್ಲೂ ಕಂಡುಬರುತ್ತದೆ. ಭಾರತದಲ್ಲಿ ಸಂವತ್ಸರಗಳು ಅರುವತ್ತು ವರ್ಷಗಳ ಚಕ್ರವಾಗಿ ತಿರುಗುತ್ತಲಿರುತ್ತವೆ. ಪ್ರತಿವರ್ಷಕ್ಕೊಂದು ಹೆಸರು - ಪ್ರಭವ, ವಿಭವ, ಶುಕ್ಲ.. ಇತ್ಯಾದಿ. ಇವಕ್ಕೆ ಆಧಾರ ಜ್ಯೋತಿಷ ಶಾಸ್ತ್ರವೇ ಇರಲಿ ಪೂರ್ವಿಕರ ಸೂಕ್ಷ್ಮ ಸಂಶೋಧನೆಯೇ ಇರಲಿ, ಈ ಹೆಸರುಗಳು ಆಯಾ ವರ್ಷದ ಆಗುಹೋಗುಗಳನ್ನು ಸೂಚಿಸುವ ಪದಗಳೇ ಆಗಿರುತ್ತವೆ. ಉದಾಹರಣೆಗೆ:

ಬಹುಧಾನ್ಯ ಸಂ|| => ದೇಶದಲ್ಲಿ ಧಾನ್ಯಗಳು ವರ್ಧಿಸಿ, ಕಣಜ ತುಂಬುತ್ತದೆ(ಕ್ರಿ.ಶ. ೧೯೯೮)
ವ್ಯಯ ಸಂ|| => ಹಿರಿಯ ತಲೆಗಳ ಕಣ್ಮರೆ, ಅಧಿಕ ಖರ್ಚು (೨೦೦೬)
ಹಾಗೆಯೇ,
ಸರ್ವಜಿತ್ ಸಂ|| ಎಲ್ಲ ಕಾರ್ಯಸಿದ್ಧಿಗಳನ್ನು ಕೊಟ್ಟು ಗೆಲುವನ್ನು ನೀಡುವ ವರ್ಷ(೧೯೪೭, ೨೦೦೭)ವಾದ್ದರಿಂದ ಭಾರತಕ್ಕೆ ಉನ್ನತಿಯನ್ನು ನೀಡುವ ಕಾಲ ಎಂದು ಎಲ್ಲರ ನಂಬುಗೆ.

ಈ ಸರ್ವಜಿತ್ ನಮ್ಮ ನಿಮ್ಮೆಲ್ಲರ ಕಾರ್ಯಸಿದ್ಧಿಯನ್ನು, ಗೆಲುವನ್ನು ತರಲೆಂದು ಆಶಿಸುತ್ತಾ ಯುಗಾದಿಯ ಶುಭಾಶಯಗಳು!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 5:11pm — mahesha

ಶುಭಾಷಯ vs ಶುಭಾಶಯ

mahesha's picture

ಇದರಲ್ಲಿ ಯಾವುದು ಸರಿಯಪ್ಪ!!

ನನಗೆ ಪುಲ್ ಗಲಿಬಿಲಿ... Shocked

ಬೆಂಗಳೂರಿಂದ ಮೈಸೂರಿಗೆ ಹೋಗೋರಿಗೆ ಗೊತ್ತು. ದಾರಿಯುದ್ದಕ್ಕೋ ಈ ಶುಭಾಷಯ/ಶುಭಾಶಯದ banner ಹಾಕಿದ್ದಾರೆ.

ಹಾರ್ದಿಕ/ಹಾರ್ಧಿಕ ಶುಭಾಷಯ/ಶುಭಾಶಯ ಹೀಗೆ ಒಂದೇ ವರ್ಡನ್ನು ಬೇರೆ ಬೇರೆ ಟೈಪ್ ಬರೆದಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 5:20pm — Shyam Kishore

ಉ: ಶುಭಾಷಯ vs ಶುಭಾಶಯ

Shyam Kishore's picture

ನನಗೆ ತಿಳಿದ ಮಟ್ಟಿಗೆ "ಶುಭ + ಆಶಯ = ಶುಭಾಶಯ" ಅನ್ನೋದೇ ಸರಿ. ಅಂದಹಾಗೆ ನೀವು ಹೇಳಿದ ಮೇಲೆ ಗಮನಿಸಿದೆ. ನನ್ನ ಪ್ರತಿಕ್ರಿಯೆ ಬರೆಯುವಾಗಲೂ ಕೂಡಾ, ನನ್ನ ಅರಿವನ್ನೂ ಮೀರಿ ತಪ್ಪು ಪ್ರಯೋಗ ಮಾಡಿದ್ದೀನಿ! ಕ್ಷಮಿಸಿ. ಇನ್ನೊಂದು ಪದ (ಶುಭಾಷಯ) ತಪ್ಪೋ ಅಲ್ಲವೋ ಅಂತ ನಿಖರವಾಗಿ ತಿಳಿದಿಲ್ಲ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 6:07pm — mahesha

ಉ: ಶುಭಾಷಯ vs ಶುಭಾಶಯ

mahesha's picture

Quote:

ಅಂದಹಾಗೆ ನೀವು ಹೇಳಿದ ಮೇಲೆ ಗಮನಿಸಿದೆ. ನನ್ನ ಪ್ರತಿಕ್ರಿಯೆ ಬರೆಯುವಾಗಲೂ ಕೂಡಾ, ನನ್ನ ಅರಿವನ್ನೂ ಮೀರಿ ತಪ್ಪು ಪ್ರಯೋಗ ಮಾಡಿದ್ದೀನಿ! ಕ್ಷಮಿಸಿ.

ಇಲ್ಲಿ ಕ್ಷಮೆ ಕೇಳಕ್ಕೆ ಏನಿದೆ, ಏನಿಲ್ಲ.

ತಪ್ಪು ಬರೆಯೋದು ಯಾವ ಕ್ರೈಂ ಅಲ್ಲ.

"ಗೊತ್ತಿಲ್ಲದೆ ಬರೆದಾಗ ತಪ್ಪಾಗುತ್ತೆ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 6:20pm — shreekant.mishrikoti

Re: ಉ: ಶುಭಾಷಯ vs ಶುಭಾಶಯ- ಅದಕ್ಕೇ 'ಷ' ಕೈಬಿಡಿ ಅಂತ ......

shreekant.mishrikoti's picture

ಇಂಥ ಗೊಂದಲವನ್ನು ತಪ್ಪಿಸಲು
'ಷ' ಶಾಶ್ವತವಾಗಿ ಕೈಬಿಡಿ ; ಉಚ್ಚಾರಣೆಯಂತೆ ಬರೆಯಿರಿ . ಕ್ರಿಶ್ಣ , ರುಶಿ ಎಂದು ಬರೆಯಬೇಕು
ಎಂದು ಡಿ.ಎನ್. ಶಂಕರಭಟ್ಟರು 'ಕನ್ನಡ ಬರಹವನ್ನು ಸರಿಪಡಿಸೋಣ'ದಲ್ಲಿ ಪ್ರತಿಪಾದಿಸುತ್ತಾರೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 8:33pm — ASHOKKUMAR

Re: ಉ: .ಸಾಮಾನ್ಯರಿಗೆ ಕನ್ನಡ

ASHOKKUMAR's picture

kannada made easy!Laughing

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2007 - 12:05am — hamsanandi

Re: ಉ: ಶುಭಾಷಯ vs ಶುಭಾಶಯ- ಅದಕ್ಕೇ 'ಷ' ಕೈಬಿಡಿ ಅಂತ ......

hamsanandi's picture

ಆದರೆ, ಕೃ ಶಬ್ದದ ಉಚ್ಚಾರ ಕ್ರಿ ಅಲ್ಲ ಅನ್ನುವುದು ಗೊತ್ತಿದ್ದರೂ, ಈ ಸಲಹೆ ಮಾಡಿರುವುದು ದುರದೃಷ್ಟಕರ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2007 - 2:16am — mahesha

ಕೃ ಶಬ್ದದ ಉಚ್ಚಾರ ಕ್ರಿ ಅಲ್ಲ ಅನ್ನುವುದು ಗೊತ್ತಿದ್ದರೂ,

mahesha's picture

ಅಯ್ಯೋ ಸ್ವಾಮಿ..

ಕೃ ಶಬ್ದದ ಉಚ್ಚಾರ ಕ್ರಿ ಅಲ್ಲ, ಕ್ರು ಅಲ್ಲ ಮತ್ತೇನು?

ಸಾವಿರದಲ್ಲಿ ೯೯೯ ಮಂದಿಗೆ ಅದನ್ನು ಸರಿಯಾಗಿ ಉಲಿಯಲು ಬರದು, ತಿಳಿಯದು, ಆಗದು. ಆದರೂ ನಮ್ಮ ಕನ್ನಡ-ಪಂಡಿತರಿಗೆ ಈ ಸಂಸ್ಕ್ರುತ ’ಋ’ ಮೇಲೆ ಯಾಕೆ ಇಸ್ಟು ಮೋಹ, ಪ್ರೇಮ, ವಾತ್ಸಲ್ಯವೋ ಕಾಣೆ.

ಹಿಂದೆ ಕನ್ನಡದ್ದೇ ಆದ ಱ, ಮತ್ತು ೞ ಗಳನ್ನು ಉಲಿಯಲು ತ್ರಾಸ ಎಂದು ತಾನೆ ಬಿಟ್ಡುಬಿಟ್ಟಿದ್ದು.

ಈ ಋ ಕಾರ ಪಜೀತಿಯೋ, ಪಜೀತಿ.

’ಸಂಸ್ಕೃತ’ವನ್ನು ನಾವು ಕನ್ನಡದೋರು, ಮರಾಟಿಯೋರು, ಆಂದ್ರದೋರು ಸಮ್ಸ್ಕ್ರುತ ಅಂತ ಅಂದರೆ. ನಾರ್ತಿಂಡಿಯದೋರು ಅದನ್ನು ’ಸನ್ಸ್ಕ್ರಿತ’ ಅಂತಾರೆ.

ಹಾಗೆ

ಋಷಿ - ರುಶಿ( ಕನ್ನಡ ), ರಿಶಿ( ನಾರ್ತು )
ಹಂಸ - ಹಮ್ಸ( ಕನ್ನಡ ), ಹನ್ಸ( ನಾರ್ತು ) [ ಆದರೆ ಹಮ್ಸ ಮತ್ತು ಹನ್ಸ ಎರಡು ತಪ್ಪು ]
ಸಂಯುಕ್ತ - ಸಮ್ಯುಕ್ತ ( ಕನ್ನಡ ), ಸೈಯುಕ್ತ( ನಾರ್ತು, ಇಲ್ಲಿ ಸೈ ಮೂಗಿನಿಂದ ಬರಬೇಕು )

ಹಿಂಗೆ ಈ ಸಂಸ್ಕ್ರುತದ ಹಲವು ಉಲಿಗಳು ಬಹಳ ಗೋಜಲು.

ಅತ್ಲಾಗೆ ನಾವು ಇವೆಲ್ಲ ಪಜೀತಿಯೇ ಬ್ಯಾಡ ಅಂತ, ಅವನ್ನೆಲ್ಲ ಕನ್ನಡದಿಂದ ಬಿಟ್ಟು ಬಿಡೋದೇ ಲೇಸು. ದೊಡ್ಡ ತಲೆನೋವು ತಪ್ಪುತ್ತೆ.

ಬಿಡದೇ ಇರ್ದರೆ, ಅವು ಬರಿ ಬರೆವಣಿಗೆಯಲ್ಲಿ ಬಿದ್ದಿರ್ತಾವೆ, ಯಾವೋನು ಉಲಿಯಲ್ಲ! ಸುಮ್ನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂದ ಹಂಗೆ ಆಯ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2007 - 8:26am — venkatesh

ಬೆನಕಣ್ಣೋರ್ಗೆ, ಸರೊಜಿತ್ ಸಂಒತ್ಸರದ ಬಾರಿ ಸುಬಾಸ್ಯ ಕಣಪ್ಪೊ !

venkatesh's picture

ಏನ್ ಸೊಮಿಗೊಳು , ನಮ್ಮನ್ ಮರ್ತಂಗದೆ ? ಮೊದ್ಲಾದ್ರು ಒಸಿ; ಕವ್ತೆ, ಕವ್ನ, ಅಂತ ಒಂದಲ್ಲಾ ಒಂದ್ರಲ್ ಬೊ ಬಿಜಿ ಆಗಿರ್ತಿದ್ರಿ. ಈಗಂತೂ ನೀವ್ ಕಾಣ್ಸಂಗೇ ಇಲ್ವೆ ? ನಿಮ್ ದನಿ ಕೇಳಸ್ದೆ ಬಾಳ ದಿನ, ಮಾಸಗಳೇ ಆಗೋದ್ವು. ಗೆಪ್ತಿ ಐತಾ ಸೊಮಿ. ನಿಮ್ ದರ್ಮ. ಯಾವಾಗ್ ಲಾದ್ರು ನಮ್ಮನು ಮಾತಾಡ್ಸರಲ್ಲ !

ಅಡ್ಬಿದ್ದೆ. ನಿಮ್ಗೆ, ನಿಮ್ ಪರ್ವಾರ್ದೊರ್ಗೆ, "ಉಗಾದಿ ಸುಬಾಸಯ್ಗೊಳು” ! ಬೇವ್ನ ಊವ್ ಮತೆ ಬೆಲ್ಲ ಸವ್ದು, ರಾತ್ರಿನಾಗ ಚಂದ್ರನ್ ನೋಡೋ ಅಬ್ಯಸ್ ಐತಲ್ಲಾ !

ಬತ್ತಿನಿ. ನಮಸ್ಕಾರ ಕಣಣ್ಣ.

ಎಂಕ್ಟೇಸಪ್ಪ, ಬೊಂಬಾಯಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 3:03am — Shyam Kishore

ದನಿಗೂಡು: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

Shyam Kishore's picture

ಕೃಷ್ಣಮೂರ್ತಿಯವರೇ,  "ತೊಡಕು ನೂರೆಂಟು ದೂರವಾಗಿ ಬದುಕಿನ ಬಂಡಿ ಸುಖವಾಗಿ ಸಾಗಲಿ..." ಎಂದು ಸುಂದರವಾಗಿ ಹಾರೈಸಿದ್ದೀರಿ. ಧನ್ಯವಾದಗಳು.

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಷಯಗಳು.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2007 - 10:40am — krishnamurthy bmsce

Re: ದನಿಗೂಡು: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

krishnamurthy bmsce's picture

ಶ್ಯಾಮ್ ಕಿಶೋರ್ ರವರೇ ಧನ್ಯವಾದಗಳು.

-ಕೃಷ್ಣಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2007 - 5:06pm — ismail

Re: ದನಿಗೂಡು: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು

ismail's picture

ನಮ್ಮ ಆಶಯ ಒಳ್ಳೆಯದು ಅಂತ ಗೊತ್ತಾಗುವ ಹಾಗೆ ಬರೆದರೆ ಸಾಕಲ್ಲ. ಹೇಗೆ ಬರೆದರೂ ಅಷ್ಟೇ. ಶುಭಾಷಯ ಎಂದು ಬರೆದಾಗ ಅದನ್ನು ಓದಿದವರು ಈತ ನನಗೆ ಶುಭ ಹಾರೈಸಿದ್ದಾರೆ ಎಂದು ತಿಳಿದರೆ ಸಾಕಲ್ಲವೇ? ಭಾಷೆಯ ಕೆಲಸ ಅಷ್ಟೇ ಅನ್ನಿಸುತ್ತೆ.  

ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 18, 2007 - 2:12am — mahesha

ಭಾಷೆಯ ಕೆಲಸ ಅಷ್ಟೇ ಅನ್ನಿಸುತ್ತೆ.

mahesha's picture

ಕರೆಕ್ಟು ನಾನು ನಿಮ್ಮನ್ನು ಪುಲ್ ಒಪ್ತೇನೆ.

ಆದರೆ ನಮಗೆ sure ಇಲ್ದೇ ಇರೋ ವರ್ಡನ್ನು ಬಳಸೋಕ್ಕಿಂತ, ನಮಗೆ ಬಹಳ ಸಲೀಸಾದ "happy ugadi"ಯೇ ಸಾಕು. ಅದೂ " ಓದಿದವರು ಈತ ನನಗೆ ಶುಭ ಹಾರೈಸಿದ್ದಾರೆ " ಅಂತ ತಿಳಿಸುತ್ತೆ. ಇಂದು ಯಾರಾದರು, ಅದೂ ಸಂಪದದಂತಹ ವೆಬ್ ಪೋರ್ಟಲ್ ಬಳಸೋರಿಗೆ "happy ugadi" ಅಂದರೆ ತಿಳಿದೇ ಇರುತ್ತಾ?

ಇಲ್ಲಿ ಗೊಂದಲ ಇರೋದು ನಮಗೆ ಅಸ್ಟು ಚೆನ್ನಾಗಿ ಬರದ ಸಂಸ್ಕ್ರುತದ ವರ್ಡುಗಳನ್ನು ಬರೆಯುವಾಗ. ಏಕೆಂದರೆ ನಮ್ಮಲ್ಲಿ ಹೆಚ್ಚು ಮಂದಿ ಸಂಸ್ಕ್ರುತ ಓದಿಲ್ಲ. ಆದರೆ ಎಲ್ಲರೂ ಇಂಗಲೀಷನ್ನು ಕಂಡಿತ ಓದಿದ್ದೇವೆ.

ಅದಕ್ಕೆ ನಮಗೆ ಕನ್ನಡದಲ್ಲಿ ಇರದ/ಗೊತ್ತಿರದ ಪದಕ್ಕಾಗಿ ಸಂಸ್ಕ್ರುತಕ್ಕೆ ಮೊರೆ ಹೋಗುವುದಕ್ಕಿಂತ ಅಟ್ ಪ್ರೆಸೆಂಟು ಇಂಗಲೀಶನ್ನು ನೋಡೋದು ಹೆಚ್ಚು ಸಲೀಸು ಮತ್ತು ಕರೆಕ್ಟು.

ಏನೇ ಆದರೂ "at the end of the day" Smiling ಬಾಸೆಯ ಕೆಲಸ "message transfer" ಅಸ್ಟೇ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 18, 2007 - 10:50am — ASHOKKUMAR

Re: ಭಾಷೆಯ ಕೆಲಸ ಅಷ್ಟೇ ಅನ್ನಿಸುತ್ತೆ.

ASHOKKUMAR's picture

ವೆಂಕಟೇಶ್ >>ಚಿತ್ರ , ಬಲ್ ಪಾಡಾಗೈತೆ ಕಣಪೊ ! ಇಂಗೆ ಯಾವಾಗಾನ ಮನ್ಸ್ ಬಂದಾಗ್ ಗೀಚ್ರಿ , ನಾಡ್ಗಪ್ಪೊನ್ರಗೆ ಕಳಿಸೊದ್ ಮರ್ತೀರ >>ಜ್ವಾಕೆ !
ವಸಂತ>>ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. "ನಾಡ್ಗಪ್ಪೊನ್ರಗೆ" ಅಂದರೆ, ನಾಳಿದ್ದಿನೊಳಗೆ ಅಂತಲೇ?.
ಶ್ರೀವತ್ಸ ಜೋಷಿ>>ಅಲ್ಲ, "ನಾಡ್ಗಪ್ಪೊನ್ರಗೆ" = ನಾಡಿಗಪ್ಪನವರಿಗೆ = ಹರಿಪ್ರಸಾದ್ ನಾಡಿಗ್ ಅವರಿಗೆ = hpn ಅವರಿಗೆ = ಸಂಪದ >>ಜಾಲಾಧಿಪತಿಗೆ!

ಹೀಗೆ ಸಂವಹನ ಕಠಿನ ಆಗುವುದು ಸ್ವಾಭಾವಿಕ.ನೀವು ಬಾಸೆ ಎಂದು ಬರೆದಾಗ ಭಾಷೆಯ ಬರೆಯುತ್ತಿರುವುದು ಎಂದು ನನಗೆ ತಿಳಿಯಲು ತಲೆ ಕೆರೆಯಬೇಕಾಗುತ್ತದೆ.

ಖುಶಿ ಬಂದ ಹಾಗೆ ಬರೆದರೆ ಅಪಾರ್ಥವಾಗಲೂ ಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2007 - 8:50pm — mahesha

ಅಪಾರ್ಥವಾಗಲೂ ಬಹುದು.

mahesha's picture

ತಪ್ಪುರ್ತ ಬರಂತೆ ಬರೆಬೇಕು ಎನ್ನುವುದು ಒಪ್ಪಬೇಕಾದ ಮಾತೇ.

ಆದರೆ ಬರದುದನ್ನು ಉಲಿಯಲಬೇಕಲ್ಲ. ಬರಿ ಒಂದಸ್ಟು ಮಂದಿ, ಊ ಕ್ಲಾಸಿಗೆ ಸೇರಿದವರು ಉಲಿಯಲು ಪಾಸಿಬಲ್ಲಾದ ಕನ್ನಡ ನಮ್ಮದು ಇಂದು.

ಕನ್ನಡ ಕಡಮೆ ಆಗ್ತಾ ಇರೋದಕ್ಕೆ ಅದರ ಬರೆವಣಿಗೆಯೇ ರೀಸನ್ ಅಂತ ನಾನು ಕೇಳ್ತೇನೆ. ನಾವು ಬರೆದಂತೆ ಉಲಿಯಲ್ಲ.

ಹಲವರು ಬರೈತೇವೆ ಅಂತ ಒಂದು ಮಣ ಉಲಿಯಲಾಗದ ವರ್ಡುಗಳನ್ನು, ಅದರಲ್ಲೂ ಕನ್ನಡದ ನೇಚರ್‍ ಇಲ್ಲದ ನುಡಿಗಳಿಂದ ವರ್ಡುಗಳನ್ನು ಹಾಕ್ತಾರೆ. ಹೀಗೆ ಮಾಡಿ ಮಾಡಿ ಹಲವರಿಗೆ ಕನ್ನಡ ಓದೋದೇ ದೊಡ್ಡ ತ್ರಾಸ, ಅದಕ್ಕೆ ಅವರು ಅದನ್ನು ಓದೋದು ಇಲ್ಲ, ಮಾತಾಡೋದು ಇಲ್ಲ.

ಒಂದು ಮಾದರಿ ಸಾಲು:

Quote:

"ಹೀಗೆ ಸಂವಹನ ಕಠಿನ ಆಗುವುದು ಸ್ವಾಭಾವಿಕ"

ಇದರ ಸುತ್ತ ಒಂದಸ್ಟು ಪ್ರಸ್ನೆ.

೧) ಇದನ್ನು ಬರೆದವರು ತಮ್ಮ ಗೆಳೆಯರೊಡನೆ, ಹತ್ತಿರದವರೊಡನೆ, ಹೀಗೆ ಮಾತಾಡ್ತಾರ?
೨) ನಮ್ಮ ಹಳಿ ಮಂದಿ ಇದು ಸರಿಯಾಗಿ ತಿಳೀತದಾ?
೩) ಸಂವಹನ ಇದರ ಸರಿಯಾದ ಒಲಿ, ಸಮ್ವಹನ ವೋ, ಇಲ್ವೆ ಸ~ವಹನವೋ ? ( ~ವ nasal ವ )
೪) ಕಠಿಣ ಇದನ್ನು ಎಸ್ಟು ಮಂದಿ ಸರಿಯಾಗಿ ಹೇಳ್ತಾರೆ?
೫) ಮೇಲೆನ ಸಾಲಲ್ಲಿ ಆರ ವರ್ಡುಗಳಲ್ಲಿ ಮೂರು ಸಂಸ್ಕೃತದ್ದು(as superstrate language). ನಮ್ಮಲ್ಲಿ ಎಸ್ಟು ಮಂದಿ ಸಂಸ್ಕೃತ ಕಲಿತಿದ್ದೇವೆ/ಕಲೀತಿದ್ದೇವೆ?

೬) "ಹೀಗೆ communication hard ಆಗುವುದು natural?" vs "ಹೀಗೆ ಸಂವಹನ ಕಠಿನ ಆಗುವುದು ಸ್ವಾಭಾವಿಕ"? ಇವುಗಳಲ್ಲಿ ಯಾವುದು ಮೇಲ್ಮಟ್ಟದ್ದು ಅದು ಯಾಕೆ?

ಸ್ವಭಾವ = nature ಹೌದು

ಆದರೆ ನಮಗೆ ಹೆಚ್ಚು ಗೊತ್ತಿರುವ/ಬಳಸುವ ಸಂಸ್ಕೃತದ nature.
ಪ್ರಕೃತಿ = nature

ಹೀಗೆ ಸಂವಹನ ಕಠಿಣ ಆಗುವುದು ಪ್ರಾಕೃತಿಕ? ಅಂತ ಯಾಕೆ ಹೇಳಲ್ಲ?

ಈ ಟೈಪು ಕನ್ನಡ ಸಲೀಸಾಗಿ ತಿಳಿಯಕ್ಕೆ ಆಗದೇ ಇರೋದಕ್ಕೆ, ಅದರಲ್ಲಿ, science, maths, economics etc etc ಒಂದು ಬೆಳೀದೆ ಹಂಗೆ ಇರೋದು.

ಇನ್ನು ಕನ್ನಡ ಮೀಡಿಯಂ ಅಂತ ಸಂಸ್ಕೃತದ terminology ಬಳಸಿ science, maths, economics ಅನ್ನು ೧ ರಿಂದ ೧೦ರ ವರಗೆ ಓದಿ ಬಂದು pucಅಲ್ಲಿ science ಅನ್ನು ಇಂಗಲೀಷಲ್ಲಿ ಓದೋರ ಪಾಡು ಗೊತ್ತೇ ಇದೆ( ಬೆರಳಣಿಕೆ ಅಸ್ಟು ಬಿಟ್ಟು).

ಇನ್ನು ಇವರು ಯಾವಾಗ ಕನ್ನಡದಲ್ಲಿ engineering ಮತ್ತು ಮೆಡಿಸಿನ್ ಕಲಿಸೋದು.

ಏನಿಲ್ಲ ಕನ್ನಡವು ಬರಿ "ಜೊಟ್ಟಿಗೆ ಮಲ್ಲಿಗೆ ಹೂ" ನುಡಿ. ಕನ್ನಡ ಬರ್ತದೆ ಅಂತ ಬೇಕಾದರೆ ದುಡ್ಡುಗಳಿಸಕ್ಕೆ ಹೊಟ್ಟೆಗೆ ದಾರಿ ಮಾಡದ, ಪೊಯೆಮ್ ಇಯಮ್ ಬರೀಬೋದೇ ಹೊರತು, ಯಾವುದೇ research ಮಾಡಕ್ಕೆ ಆಗಲ್ಲ. ಮಾಡಿದರೂ ಅದು ಅವರ ಗೋಜಲು ಬರೆವಣಿಗೆಯಿಂದ ಹೆಚ್ಚು ಮಂದಿಗೆ ತಲುಪಲ್ಲ.

ಇವೊತ್ತು ಎಲ್ಲದಕ್ಕಿಂತ ಹೆಚ್ಚು ಮಂದಿ ಮೆಚ್ಚೋದು ಸಿನಿಮಾ ಕನ್ನಡವನ್ನು. ಏಕಂದರೆ ಅದು ನಮ್ಮ ಈ ಬರೆವಣಿಕೆ ಕನ್ನಡದಸ್ಟು ಗೋಜಲಿಲ್ಲ!

ನಾನು ಕೇಳೋದು ಇಸ್ಟೇ, ಕನ್ನಡ ಬರೀ "ಜೊಟ್ಟಿಗೆ ಮಲ್ಲಿಗೆ ಹೂ" ನುಡಿ ಅಂದರೆ ಬರೀ poetry ಬರೆಯಕ್ಕೆ ಆಗೋ ನುಡಿಯಾಗಬೇಕೋ, ಇಲ್ವೇ "ಹೊಟ್ಟೆಗೆ ಹಿಟ್ಟು ಕೊಡೋ" ನುಡಿ, ಅಂದರೆ ಅದರಿಂದ ಕೆಲಸ ಗಿಟ್ಟಿಸಬೋದು, research ಮಾಡಬೋದು, ಕಸ್ಟಪಡದೇ ಆರಾಮಾಗಿ ಹೇಳಬೇಕಾದುದನ್ನು ಬರೀಬೋದು. ಹಾಗೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2007 - 8:55pm — ASHOKKUMAR

ಇಂಗ್ಲೀಷ್ ಬೆರೆಸಿದರೆ natural?

ASHOKKUMAR's picture

ಮಾತಿನಲ್ಲಿ ಇಂಗ್ಲೀಷ್ ಇದ್ದರೆ ಅದು ಜನರಿಗೆ ಅರ್ಥ ಆಗುತ್ತದೆ ಎನ್ನುತ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2007 - 9:17pm — mahesha

ಇಂಗ್ಲೀಷ್ ಬೆರೆಸಿದರೆ natural? ಅಲ್ಲ ಮತ್ತು ಹವುದು

mahesha's picture

"ಮಾತಿನಲ್ಲಿ ಇಂಗ್ಲೀಷ್ ಇದ್ದರೆ ಅದು ಜನರಿಗೆ ಅರ್ಥ ಆಗುತ್ತದೆ ಎನ್ನುತ್ತೀರಾ?"

ಆಗಲ್ಲ. ಎಲ್ಲರಿಗೂ ಆಗಲ್ಲ. ಆದರೆ ಇಂಗಲೀಸು ಬಳಸೋದು, ನನಗೆ sanskrit ಬಳಸೋದಕ್ಕಿಂತ natural ಅನ್ನಿಸುತ್ದೆ. ಏಕೆಂದರೆ ನಾವೆಲ್ಲ ಇಂದು ಇಂಗಲೀಸನ್ನು ಓದೇ ಓದ್ತೇವೆ. ಆದರೆ ಎಲ್ರೂ ಸಂಸ್ಕ್ರುತ ಓದಿರಲ್ಲ.

ಹಾಗೆ

1)"ಮಾತಿನಲ್ಲಿ 50% sanskrit ಇದ್ದರೆ ಅದು ಜನರಿಗೆ ಅರ್ಥ ಆಗುತ್ತದೆ ಎನ್ನುತ್ತೀರಾ"?

2)"ಬರೆಯೋದೇ ಒಂದು ತೆರ, ಮಾತಾಡೋದೇ ಇನ್ನೊಂದು ತೆರ, ಇದರಿಂದ ಹಚ್ಚು ಮಂದಿ ಕಸ್ಟ ಆಗಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2007 - 10:45pm — ASHOKKUMAR

ಸಂಸ್ಕೃತ ಅಂತ ಗೊತ್ತಿರಲ್ಲ..

ASHOKKUMAR's picture

ಭಾಷಾತಜ್ಞರಷ್ಟೆ ಸಂಸ್ಕೃತ ಅಂತ ತಲೆ ಕೆಡಿಸಿಕೊಳ್ಳುತ್ತಾರೇನೋ...ಗೃಹ,ವೃಕ್ಷ ಅಂದರೆ ಕನ್ನಡವೆಂದೇ ನಮಗನಿಸುವುದಿಲ್ಲವೇ? ನೀವು ಉದ್ದೇಶಪೂರ್ವಕವಾಗಿ ತಪ್ಪು ಪದಪ್ರಯೋಗ ಮಾಡಿ ಏನು ಸಾಧಿಸಲು ಹೊರಟಿರುವಿರೋ ನಾನರಿಯೆ.
ಮಾತನಾಡೋದು,ಬರೆಯೋದು ಬೇರೆ ಬೇರೆ ತರ ಇರಬೇಕು ಎಂದು ವಿಧಿಸಿದವರು ಯಾರು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2007 - 11:15pm — mahesha

ಸಂಸ್ಕೃತ ಅಂತ ಗೊತ್ತಿರಲ್ಲ..

mahesha's picture

Quote:

"ಭಾಷಾತಜ್ಞರಷ್ಟೆ ಸಂಸ್ಕೃತ ಅಂತ ತಲೆ ಕೆಡಿಸಿಕೊಳ್ಳುತ್ತಾರೇನೋ...ಗೃಹ,ವೃಕ್ಷ ಅಂದರೆ ಕನ್ನಡವೆಂದೇ ನಮಗನಿಸುವುದಿಲ್ಲವೇ? ನೀವು ಉದ್ದೇಶಪೂರ್ವಕವಾಗಿ ತಪ್ಪು ಪದಪ್ರಯೋಗ ಮಾಡಿ ಏನು ಸಾಧಿಸಲು ಹೊರಟಿರುವಿರೋ ನಾನರಿಯೆ.
ಮಾತನಾಡೋದು,ಬರೆಯೋದು ಬೇರೆ ಬೇರೆ ತರ ಇರಬೇಕು ಎಂದು ವಿಧಿಸಿದವರು ಯಾರು?"

Laughing out loud

""ಭಾಷಾತಜ್ಞರಷ್ಟೆ ಸಂಸ್ಕೃತ ಅಂತ ತಲೆ ಕೆಡಿಸಿಕೊಳ್ಳುತ್ತಾರೇನೋ.?"
ಹಾಗೆ ಇಂದು ಭಾಷಾತಜ್ಷರೇ ಇಂಗಲೀಷು ವಿರೋದಿಗಳು. ಇಂಗಲೀಸು ಬರೆಸಿದರೆ ಏನು ತಪ್ಪು? ಯಾರಿಗೆ ಸಂಸ್ಕೃತ ಇಸ್ಟ, ಅವರು ಅದನ್ನು ಬೆರೆಸಿಕೊಳ್ಳಿ, ಯಾರಿಗೆ ಇಂಗಲೀಸು ಇಸ್ಟ, ಅವರು ಅದನ್ನು ಬೆರೆಸಕೋತಾರೆ. ಅದಕ್ಕೆ ಯಾಕೆ ಅಡ್ಡಿ?

ಗೃಹ, ವೃಕ್ಷ ಇವು ಕನ್ನಡವೆನುಸುವುವೇ?

ಗೃಹ ಹೇಗೆ ಉಲಿಯುವಿರಿ? ಗ್ರುಹ, ಗ್ರಿಹ? ಯಾವುದು ನಿಮ್ಮ ಆಯ್ಕೆ?

"ನೀವು ಉದ್ದೇಶಪೂರ್ವಕವಾಗಿ ತಪ್ಪು ಪದಪ್ರಯೋಗ ಮಾಡಿ "

ಇಲ್ಲಿ ತಪ್ಪು ಪ್ರಯೋಗ ಅಂತ ತೀರ್ಪು ನೀಡೋರು ಯಾರು?
ಮಾೞ್ಪುದು => ಮಾಡುವುದು ಹಾಗದರೆ ಮಾಡುವುದು ತಪ್ಪೇ? ಹಾಗೆ ಆದುದಕ್ಕೆ ಏನು ರೀಸನ್ನು?

"ಮಾತನಾಡೋದು,ಬರೆಯೋದು ಬೇರೆ ಬೇರೆ ತರ ಇರಬೇಕು ಎಂದು ವಿಧಿಸಿದವರು ಯಾರು?"

ಇದೇ ನನ್ನ ಪ್ರಸ್ನೆ?
ನಾವು ಯಾಕೆ ಬರೆದಂತೆ ಮಾತಾಡಬಾರದು Laughing out loud (ಹಳೇ ಡ್ರಾಮ ತೆರ)ಇಲ್ವೇ
ಮಾತಾಡದಂತೆ ಬರೇಬಾರ್ದು?

"ಸಂಸ್ಕೃತ ಅಂತ ಗೊತ್ತಿರಲ್ಲ"
"ಗೊತ್ತಿಲ್ಲ" ಅಂತ ಇದಕ್ಕೆ ನಿಮಗೆ ಹೆಮ್ಮೆಯೇ. ಗೊತ್ತಿಲ್ಲ ಅಂತ ಏನು ಬೇಕಾದರು ಆಡಬಹುದೇ? Laughing out loud

ನಮಗೆ ಗೊತ್ತಿರೋ ಇಂಗಲೀಸು ವರ್ಡಿಗಿಂತ, ಗೊತ್ತಿಲ್ಲದ ಸಂಸ್ಕೃತಪದಪ್ರಯೋಗ ಶ್ರೇಷ್ಠವೇ. Laughing out loud

ಹಾಗಾದರೆ ನಿಮಗೆ ಏನು ಬರೆಯುತ್ತಿದ್ದೀನಿ ಅಂತ ಗೊತ್ತಲ್ವೇ? ಯಾವ ವರ್ಡು ಕನ್ನಡ/ಇಂಗಲೀಸು ಅಂತಾನೂ ನೀವು ಬೇದಬಾವ ಮಾಡಲ್ವಾ?

ನೀವು ನಾನು ಕೇಳಿದ ಹಲವು ಪ್ರಸ್ನೆಗೆ ಉತ್ತರ ಹೇಳಿಲ್ಲ.

ನಿಮ್ಮ ಮಾತಿನ ಹರಿವು,
"ಕನ್ನಡಕ್ಕೆ ಉಲಿಯಲು ತ್ರಾಸವಾದ ಸಂಸ್ಕ್ರುತ ಪದಗಳ, ಉರ್ದು( ತಾಹಶೀಲ್ದಾರ) ಪದಗಳು, ಮರಾಠಿ(ಬಂಡವಾಳ) ಪದಗಳು etc ಓಕೆ,
ಆದರೆ ಇಂಗಲೀಸು ಮಾತ್ರ ನಾಟ್ ಓಕೆ. "

ಅಂತ ಹೇಳಿದಂತು ಇದೆ.

ಇರಲಿ.. ಮಾತು "ಸಂಸ್ಕ್ರುತ ಬೇಕೋಮ ಬೇಡವೋ"/"ಇಂಗಲೀಸು ಬೇಕೋ ಬೇಡವೋ" ಎನ್ನುವ ಕಡೆ ವೋಯ್ತಾ ಇದೆ.

ನಾವು ಮಾತಾಡ್ತಾ ಇರುವುದು ಬೇರೆ ಇಲ್ಲಿ.

"ಕಡೆ ವೋಯ್ತಾ"(ಪವರ್ಗಕ್ಕೆ ವಕಾರ ಆದೇಶ, ಶಬ್ದಮಣಿದರ್ಪಣ ನೋಡಿ). ಇದು ಇನ್ನೂ ಮಾತಲ್ಲಿದೆ. ಮಣಿದರ್ಪಣ ಓದದ ಪಂಡಿತರು ಅದನ್ನು "ಕಡೆ ಹೋಗ್ತಾ" ಅಂತ ತಪ್ಪುತಪ್ಪಾಗಿ ತಿದ್ದೇ ತಿದ್ದುವರು" Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 18, 2007 - 11:49am — Sunil Jayaprakash

ಭಾಷೆಯ ಕೆಲಸ ಇಷ್ಟೇ ಆಗಿದ್ದಿದ್ದರೆ.....

Sunil Jayaprakash's picture

೧. ಕನ್ನುಡಿ (Classical Language) ಎಂಬ ಒಂದು ನೆಗಳ್ತೆಯನ್ನು ರಚಿಸಿ ಅದನ್ನು ಕೆಲವೇ ಕೆಲವು ಭಾಷೆಗೆ ನೀಡುವ ಪ್ರಸಂಗ ಬರುತ್ತಿರಲಿಲ್ಲ.
೨. ಕನ್ನಡವು ಪುಳಿಚಾರ್ ಭಾಷೆ ಎಂದು ಹೇಳಬೇಕಾದಂತಹ ಪ್ರಸಂಗ ಬರುತ್ತಿರಲಿಲ್ಲ.
೩. ಕನ್ನಡವನ್ನು, ಕನ್ನುಡಿಯಾಗಿಸಲು ಯಾರದೋ ಮುಂದೆ ಪ್ರತಿಭಟನೆ ಮುಂತಾದವುಗಳನ್ನು ಮಾಡಬೇಕಾಗುತ್ತಿರಲಿಲ್ಲ.
೪. ತಮಿಳನ್ನು "ಗುಡ್ಡಗಾಡು ಜನರಾಡುವ ಭಾಷೆ" ಎಂದು ಹಿಂದೆ ಯಾರೂ ಹೀಯಾಳಿಸುತ್ತಿರಲಿಲ್ಲ.
೫. ಕೇರಳಕ್ಕೆ ತುಳು ಉಸಾಬರಿ ಬೇಕಾಗುತ್ತಿರಲಿಲ್ಲ.

ಇನ್ನೂ ಮುಂತಾದವು................................

ಹೀಗೆ ಹೊರನೋಟಕ್ಕೆ (ಇತ್ಯಾತ್ಮಕವಾಗಿ ಅಂತ ಕೆಲವು ಕಾದಂಬರಿಗಳಲ್ಲಿ ಮತ್ತು ಕೆಲವು ಬರಹಗಳಲ್ಲಿ ಕಾಣಸಿಗುತ್ತದೆ, ಆದರೆ ಆ ಪದ ಎಷ್ಟು ಜನಕ್ಕೆ ಅರ್ಥವಾಗುವದೋ ತಿಳಿಯದು) ಭಾಷೆಯ ಕೆಲಸ communication ಅಷ್ಟೇ ಎನಿಸಿದರೂ, ಒಳನೋಟಕ್ಕೆ(ನೇತ್ಯಾತ್ಮಕವಾಗಿ ಪರಿಶೀಲಿಸಿದಾಗ ಎಂದೂ ಬರೆಯುತ್ತಾರೆ) ಏನೆಲ್ಲಾ ಪ್ರಶ್ನೆಗಳು ಮೇಲೇದ್ದು, ಭಾಷೆಯ ಕೆಲಸ ಇಷ್ಟೇ ಅಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2007 - 9:11pm — mahesha

ರಿ:ಭಾಷೆಯ ಕೆಲಸ ಇಷ್ಟೇ ಆಗಿದ್ದಿದ್ದರೆ.....

mahesha's picture

Quote:

೧. ಕನ್ನುಡಿ (Classical Language) ಎಂಬ ಒಂದು ನೆಗಳ್ತೆಯನ್ನು ರಚಿಸಿ ಅದನ್ನು ಕೆಲವೇ ಕೆಲವು ಭಾಷೆಗೆ ನೀಡುವ ಪ್ರಸಂಗ ಬರುತ್ತಿರಲಿಲ್ಲ.

ದಯವಿಟ್ಟು ಕನ್ನಡದಲ್ಲಿ ಹೇಳಿರಿ, ಇಲ್ಲ ಇಂಗಲೀಷಲ್ಲಿ ಹೇಳಿ, ಅದು ತಿಳೀಲಿಲ್ಲ.

Quote:

೨. ಕನ್ನಡವು ಪುಳಿಚಾರ್ ಭಾಷೆ ಎಂದು ಹೇಳಬೇಕಾದಂತಹ ಪ್ರಸಂಗ ಬರುತ್ತಿರಲಿಲ್ಲ.

ಅಂದರೆ?

Quote:

೩. ಕನ್ನಡವನ್ನು, ಕನ್ನುಡಿಯಾಗಿಸಲು ಯಾರದೋ ಮುಂದೆ ಪ್ರತಿಭಟನೆ ಮುಂತಾದವುಗಳನ್ನು ಮಾಡಬೇಕಾಗುತ್ತಿರಲಿಲ್ಲ.

ಹೇಳಬೇಕಾದುದನ್ನು ಆರಾಮಕ್ಕೆ ಹೇಳಕ್ಕೆ, ಕನ್ನಡ classical ಆಗಲೇಬೇಕಾ? ಕನ್ನಡ classical ಆಗಲಿ, ಯಾರು ಬೇಡ ಅನ್ನೋರು. ಅದರಿಂದ ನನಗೂ ನಲಿವೇ. ಆದರೆ ಅದರಿಂದ ಎಸ್ಟು ಕನ್ನಡಿಗರಿಗೆ ಕೆಲಸ ಸಿಕ್ತದೆ? ಅದರಿಂದ ಎಲ್ಲ field ಅಲ್ಲಿ, ಕನ್ನಡ ಬಳಸಲು ಬರ್ತದಾ?

Quote:

೪. ತಮಿಳನ್ನು "ಗುಡ್ಡಗಾಡು ಜನರಾಡುವ ಭಾಷೆ" ಎಂದು ಹಿಂದೆ ಯಾರೂ ಹೀಯಾಳಿಸುತ್ತಿರಲಿಲ್ಲ.

Laughing out loud.. ಅದಕ್ಕೆ ತಮಿಳಿಗೆ ಇಂದು classical status sanskritಗೆ ಮುಂಚೆ ಕೊಟ್ಟಿದ್ದು. ಅದಕ್ಕೆ ತಮಿಳರು ಕೋರ್ಟಲ್ಲೂ ತಮಿಳನ್ನೇ ಮಾಡಲು ಹೋಗ್ತಾ ಇರೋದು. ಅದಕ್ಕೆ ಅದನ್ನು ಮೂರು ದೇಸಗಳಲ್ಲಿ National langauge ಮಾಡಿರೋದು. ಅದಕ್ಕೆ ತಮಿಳು ನಾಡಲ್ಲಿ ತಮಿಳು/ಇಂಗಲೀಷು ಬಿಟ್ಟು, ಬೇರೆ ಯಾವುದು, ಹಿಂದಿಯನ್ನು ಕೂಡ allow ಮಾಡಿಲ್ಲ. ಅದಕ್ಕೆ yearಗೆ ೫ ಕೋಟಿಯನ್ನು central govt ಇಂದ ಗಿಟ್ಸಿಕೋತಾ ಇರೋದು

Quote:

೫. ಕೇರಳಕ್ಕೆ ತುಳು ಉಸಾಬರಿ ಬೇಕಾಗುತ್ತಿರಲಿಲ್ಲ.

ಸರಿ, ಅದಕ್ಕೆ ಕರ್ನಾಟಕ ಏನು ಮಾಡಕ್ಕೆ ಆಯ್ತದೆ? ತುಳುವಿಗೆ ಕೇರಳ ಏನಾದರು ನೆರವು ಕೊಟ್ರೆ, ಅದು ಬೇಡ ಅನ್ನಬೇಕಾದೋರು ತುಳು ಮಂದಿ, ನಾವು ಕನ್ನಡದೋರಲ್ಲ. ತುಳುವಿಗೆ ಯಾವ recongnition ಕರ್ನಾಟಕ ಕೊಟ್ಟಿದೆ? ಕೊಡಿಸಿದೆ?

ನಾನು ಹಿಂದೆ ಹೇಳಿದಂತೆ "ಜೊಟ್ಟಿಗೆ ಮಲ್ಲಿಗೆ ಹೂ" ಸಂಗತಿಗಳಿವು. ಕನ್ನಡಿಗರಿಗೆ ಕನ್ನಡದಿಂದ ಹೊಟ್ಟೆ ತುಂಬ್ತಾ ಇಲ್ಲ. ಅದಕ್ಕೇ ನಾನು ಸೇರಿ ಎಲ್ಲ( ಹೆಚ್ಚು ಹೆಚ್ಚು ಮಂದಿ), ಇಂಗಲೀಷು ಸಕ್ಕತ್ತಾಗಿ ಕಲಿತು ಕೆಲಸ ಗಿಟ್ಸಿಕೋತಾ ಇರೋದು. ಅದಕ್ಕೆ ಮಂದಿ ಇಂಗಲೀಷು ಮೀಡಿಯಂಗೆ ಅಸ್ಟೊಂದು ದುಡ್ಡು ಕೊಟ್ಟು ಸೇರ್ಸೋದು.

ಗತಿ ಇಲ್ದೇ ಇರೋರು, ಸರಕಾರದ ಸಾಲೆಯಲ್ಲಿ ಓದಿ, ೧೦ನೇ ಅನ್ನು ಕಸ್ಟಪಟ್ಟು ಪಾಸ್ ಮಾಡಿದರೋ, ಮುಂದೆ ಓದಕ್ಕೆ ಆಗ್ದೇ ಇರೋದು.

ಬೆಂಗಳೂರಲ್ಲಿ cafe day ಅಲ್ಲಿ ಸಪ್ಲೈ ಮಾಡಬೇಕಾದರೂ, ಕನ್ನಡ ಬರದಿದ್ದರೂ, ಇಂಗಲೀಷು ಚೆನ್ನಾಗಿ ಬರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 20, 2007 - 10:22am — Shyam Kishore

ನನ್ನ ಅನಿಸಿಕೆಗಳು, ಅನುಮಾನಗಳು ಮತ್ತು ಪ್ರಶ್ನೆಗಳು

Shyam Kishore's picture

ಅಯ್ಯಪ್ಪಾ, ಸಂಪದದಲ್ಲಿ ಈ ಬಗ್ಗೆ ಅದೆಷ್ಟನೇ ಬಾರಿ ಚರ್ಚೆ ನಡೀತಾ ಇದೆಯೋ ಗೊತ್ತಿಲ್ಲ. ನನ್ನ ಕೆಲವೊಂದು ಅನುಮಾನಗಳನ್ನು ಒಬ್ಬ ಸಾಮಾನ್ಯ ಕನ್ನಡಿಗನಾಗಿ ನಿಮ್ಮಗಳ ಮುಂದಿಡುತ್ತೀನಿ. ಸ್ವಲ್ಪ ಯೋಚಿಸಿ ನೋಡಿ. ನನ್ನ ಗ್ರಹಿಕೆಗಳು ತಪ್ಪಿದ್ದರೆ ತಿದ್ದಿ. ಅಂದಹಾಗೆ ಇನ್ನು ಐದು ದಿನ ನಾನು ಈ ಕಂಪ್ಯೂಟರ್ ಮತ್ತು ಅಂತರ್ಜಾಲದ ಲೋಕದಿಂದ ದೂರ ಇರುವುದರಿಂದ ನಿಮ್ಮ ಪ್ರತಿಕ್ರಿಯೆಗಳನ್ನು ಓದಲೂ ಆಗುವುದಿಲ್ಲ ಮತ್ತು ಉತ್ತರಿಸಲೂ ಆಗೋದಿಲ್ಲ. ಮತ್ತೆ ಮುಂದಿನ ವಾರ ಸಿಗೋಣ. ಆದರೆ ಹೋಗೋ ಮುಂಚೆ ಒಂದಷ್ಟು "ತಲೆಯಲ್ಲಿ ಹುಳ" ಬಿಟ್ಟು ಹೋಗೋಣ ಅಂತ. :-) ಈ ಪ್ರತಿಕ್ರಿಯೆ ಈವರೆಗಿನ ಚರ್ಚೆಯನ್ನು ಓದಿ ಬರೀತಿರೋದು. ಇದು ಒಬ್ಬರ ಅನಿಸಿಕೆಗಳ ಬಗೆಗಿನ ಪ್ರತಿಕ್ರಿಯೆ ಖಂಡಿತ ಅಲ್ಲ.

೧. ನಮ್ಮ ನಿಲುವು ಏನು? ಜನಸಾಮಾನ್ಯರ ದೃಷ್ಟಿಯಲ್ಲಿ ಕನ್ನಡವನ್ನು ಉಳಿಸಿ ಬೆಳಸುವುದೋ ಅಥವಾ ಸಂಸ್ಕೃತವನ್ನು ಹೊರಹಾಕುವುದೋ? ಕೇವಲ ಎರಡನೆಯದೇ ನಮ್ಮ ಉದ್ದೇಶವಾದಲ್ಲಿ ಚರ್ಚೆಯ ಅಗತ್ಯವೇ ಇಲ್ಲ! ಏಕೆಂದರೆ ಅದೊಂದು ಉದ್ದೇಶವಾದ್ದರಿಂದ ಅದರ ಬಗ್ಗೆ ಚರ್ಚೆಯೇಕೆ ಅಲ್ಲವೇ? ಆದರೆ ಮೊದಲನೆಯದು (ಜನಸಾಮಾನ್ಯರ ದೃಷ್ಟಿಯಲ್ಲಿ ಕನ್ನಡವನ್ನು ಉಳಿಸಿ...) ನಮ್ಮ ಉದ್ದೇಶವಾದಲ್ಲಿ ನನಗೆ ಈ ಬಗ್ಗೆ ಬಹಳ ಅನುಮಾನಗಳಿವೆ.

೨. ಕ್ರು ಮತ್ತು ಕೃ ಉಚ್ಚಾರಗಳಿಗೆ ತುಂಬಾ ವ್ಯತ್ಯಾಸವಿದೆ. ನಿಜ, ಹೀಗೂ ಉಚ್ಚಾರ ಮಾಡೋಕ್ಕಾಗಲ್ವೇ ಅಂದ್ರೆ ಏನೂ ಹೇಳೋಕ್ಕಾಗೋಲ್ಲ. ನಿಜ, ಅಕ್ಕರವೊಂದನ್ನು ಹೇಗೆ ಬೇಕಾದರೂ ಉಚ್ಚಾರ ಮಾಡಬಹುದು. ಆದ್ರೆ ಆಯಾ ಸಿಲಬಲ್ ಸೌಂಡ್ ಪ್ರಕಾರ ಹೇಳೊದಾದ್ರೆ ಕ್ರು ಮತ್ತು ಕೃ ಉಚ್ಚಾರಗಳಿಗೆ ತುಂಬಾ ವ್ಯತ್ಯಾಸವಿದೆ. ಹಾಗೇ "ಶ" ಮತ್ತು "ಸ" ನಡುವೆ ಕೂಡ. ಒಪ್ಪುತ್ತೀನಿ, "ಶ" ಮತ್ತು "ಷ" ನಡುವೆ ಅಂತಹ ವ್ಯತ್ಯಾಸವಿಲ್ಲ. ಆದರೆ ಶ ಮತ್ತು ಸ ನಡುವೆ ಇದೆ ಅಂತ ನನ್ನ ಅನಿಸಿಕೆ.

೩. ಎಲ್ಲಾ ಭಾಷೆಗೂ, ಎಲ್ಲದಕ್ಕೂ ಒಂದು ಚೌಕಟ್ಟು ಬೇಕೇ ಬೇಕು. "ಯಾಕೆ ಬೇಕು?, ಈ ರೂಲ್ಸ್ ಮಾಡಿದೋರು ಯಾರು, ನಮ್ಮ ಭ್ರಾಂತು" ಅಂದ್ರೆ, ನಾಳೆ ಯಾರು ಯಾವ ಪದವನ್ನು ಹೇಗೆ ಬೇಕಾದರೂ ಬರೀಬಹುದು, ಉಚ್ಚಾರ ಮಾಡಬಹುದು. ಆಗ ಪ್ರತಿಯೊಬ್ಬರ ಭಾಷೆಯೂ ಸರಿಯೇ ಆಗುತ್ತೆ. ಹೌದು ನಮಗೆ ವೈಯಕ್ತಿಕವಾಗಿ ಆ ಸ್ವಾತಂತ್ರ್ಯ ಇದೆ. ಯಾರೇನೇ ಹೊಡೆದಾಡಿದರೂ ನಾನು ನನ್ನ ಹೆಸರಿನಲ್ಲಿನ "ಶ್ಯಾಮ್" ಅನ್ನೋದಕ್ಕೆ "ಸ್ಯಾಮ್" ಅನ್ನೋದೇ ಸರಿ, ನಾನು ಬರಿಯೋದೇ ಹೀಗೆ ಅಂತ ಪಟ್ಟು ಹಿಡಿದರೆ, ಅದನ್ನು ಯಾರೂ ಬೇರೆಯವರು ಬದಲಾಯಿಸಲು ಸಾಧ್ಯವಿಲ್ಲ. ಆದ್ರೆ ಸರಿಯಾದ ಬಳಕೆ ಬಗ್ಗೆ ಒಂದು ಚೌಕಟ್ಟು (guidelines) ಬೇಕಲ್ಲ. ಆಗ "ನೀನು ಸ್ಯಾಮ್ ಅಂತ ಬರ್ಕೋಪ್ಪಾ, ಆದ್ರೆ ಸರಿಯಾದ ಬಳಕೆ ಶ್ಯಾಮ್ ಅಂತ" ಹೇಳೋದಕ್ಕೆ ಒಂದು ಆಧಾರ ಇರುತ್ತೆ. ಏನಂತೀರಾ? ಬರಿಯ ಬಳಕೆಯಲ್ಲಿರೋ ಭಾಷೆಯನ್ನು ಬಳಸಿದರೆ ಮಾತ್ರ ಅದು ಜನಕ್ಕೆ ತಲುಪುತ್ತೆ ಅನ್ನೋದು ತಪ್ಪು ಅಂತ ನನ್ನ ಅನಿಸಿಕೆ. ಆ ರೀತಿ ಆಡು ಭಾಷೆ ಕೂಡಾ ಬರಹಕ್ಕೆ ಅಗತ್ಯವಿದ್ದರೆ ಬಳಸೋಣ. ಅದು ಲೇಖಕನ ಕ್ರಿಯೇಟಿವಿಟಿಗೆ ಸಂಬಂಧಿಸಿದ ವಿಷಯ. ಆದರೆ ಗ್ರಾಂಥಿಕ ಭಾಷೆ ಅಂದರೆ ಏನೋ ಒಂದು "ಗುಮ್ಮ" ಅನ್ನುವ ಭಾವನೆ ಯಾಕೆ? ಎರಡೂ ಇರಲಿ. ಆಡು ಮಾತು ತಾನಾಗೇ ಬರುತ್ತೆ. ಕಲಿಯುವಾಗ ಸ್ವಲ್ಪ ಶಿಷ್ಟ ಭಾಷೆಯನ್ನು ಕಲಿಯೋಣ. ಬಳಸುವ ಭಾಷೆಯನ್ನು ಯಾರೂ ಕಲಿಸಬೇಕಿಲ್ಲ. ಹಿಂದಿಯನ್ನು ಎಷ್ಟು ಜನ ವಯಸ್ಸಾದವರು ಅಥವಾ ನಾವೇ ಚಿಕ್ಕವರಾಗಿದ್ದಾಗ, ಬರೀ ರಾಮಾಯಣ ಮತ್ತು ಮಹಾಭಾರತ ಧಾರವಾಹಿಯನ್ನು ನೋಡ್ತಾ ನೋಡ್ತಾ ಕಲೀಲಿಲ್ಲ, ಹೇಳಿ? ಆಡೋ ಮಾತು ತಾನಾಗಿಯೇ ಬರುತ್ತೆ. ನಿಜ ಆಡು ಮಾತಿನ ಬಗ್ಗೆ ತಿರಸ್ಕಾರವೂ ಸರಿಯಲ್ಲ ಬಿಡಿ. ಕೆಲವರು ಆಡು ಮಾತನ್ನು ಬರಹದಲ್ಲಿ ಬಳಸಿದರೆ ಏನೋ ಮಾಡಬಾರದ ತಪ್ಪು ಅನ್ನುವ ಹಾಗೆ ಆಡುತ್ತಾರೆ, ಅದು ಇನ್ನೊಂದು ತುದಿ (ಅತಿ)! 

೪. ಇದಕ್ಕೆ ಕೊಡಬಹುದಾದ ಬೆಸ್ಟ್ ಹೋಲಿಕೆ ಅಂದರೆ ವಾಹನ ಚಾಲನೆಯದ್ದು. ಕಲಿಯುವಾಗ ನಾವು ಎಲ್ಲ ನಿಯಮಗಳ ಸಹಿತ ಕಲಿತರೇ ವಾಸಿ. ಕೈಬಿಟ್ಟು ಸೈಕಲ್ಲ್ ಓಡಿಸಬಹುದು ನಿಜ. ಆದರೆ ಅದು ಕಲಿತ ಮೇಲೆ. ಯಾರೂ ಕೂಡಾ ಕಲಿಯುವಾಗ ಕೈಬಿಟ್ಟು ಓಡಿಸೋದು ಕಲಿಯಲ್ಲ. ಕಲಿಯಲೂಬಾರದು. ಒಮ್ಮೆ ಕಲಿತ ನಂತರ, ಪಳಗಿದ ಮೇಲೆ, ಈ ರೀತಿಯ ಆಟಗಳು ತಾವಾಗಿಯೇ ಬರುತ್ತೆ. ಆದರೆ ಆ ಆಟಗಳನ್ನು ನಮಗೆ ಗೊತ್ತು ಅಂದಾಕ್ಷಣ ಕಲಿಯುವವರಿಗೆಲ್ಲ, "ಈ ನಿಯಮಗಳೆಲ್ಲ ಪೊಳ್ಳು, ಯಾರೋ ಯಾಕೆ ಮಾಡಿದ್ರೋ, ಎಲ್ಲವನ್ನೂ ಗಾಳಿಗೆ ತೂರಿ" ಅಂದರೆ ಅದು ತಪ್ಪಾಗೋದಿಲ್ವಾ? ಕಲಿಯುವಾಗ ಎಲ್ಲ ನಿಯಮಗಳೂ ಬೇಕು. ಕಲಿತ ನಂತರ ಕೂಡಾ ಅದು "back of the mind"ನಲ್ಲಿ ಇರುತ್ತೆ. 

೫. ಅಶೋಕ್ ಅವರು ಹೇಳಿದ ಹಾಗೆ, ಮತ್ತು ಹಿಂದೊಮ್ಮೆ ಚರ್ಚೆಯಲ್ಲಿ ನಾಡಿಗ್ ಹೇಳಿದ ಹಾಗೆ, ಕನ್ನಡದಲ್ಲಿ ಹೆಚ್ಚಾಗಿ ಬರೆದು, ಕನ್ನಡದಲ್ಲಿ ಮಾತಾಡಿ, ಅದನ್ನು ಬಳಸುವ ಬದಲು ನಾವು ಅದರ ದುಪ್ಪಟ್ಟು ಸಮಯವನ್ನು ಭಾಷೆ ಹೇಗಿರಬೇಕು ಎನ್ನುವುದರಲ್ಲೇ ಕಳೀತಿದ್ದೀವಾ ಅಂತ ಅನ್ನಿಸುತ್ತಿದೆ. ಕೊನೆಗೆ ಏನೋ ಒಂದು (ಋ ಬೇಕೋ ಬೇಡವೋ) ನಿರ್ಧಾರವಾಗುವ ಹೊತ್ತಿಗೆ, ಸಾಮಾನ್ಯ ಜನ ಮತ್ತು ಮುಂದಿನ ಪೀಳಿಗೆಯವರು, "ಅಯ್ಯೋ, ರುಷಿ v/s ಋಷಿ, ಸ v/s ಶ, ಕಂಡಿತ v/s ಖಂಡಿತ ಇವುಗಳ ಗೊಂದಲವೇ ಬೇಡಪ್ಪಾ, ಇಂಗ್ಲೀಶಿನ ಸೈಂಟ್, ಶ್ಯೂರ್ ಇವುಗಳು ಆರಾಮ್" ಅಂತ ನಿರ್ಧಾರಕ್ಕೆ ಬಂದರೆ, ಏನು ಉಪಯೋಗ? ಹಿಂದಿನ ಚರ್ಚೆಗಳಲ್ಲೂ, ಈಗಲೂ ನನ್ನ ಬಲವಾದ ನಂಬಿಕೆ ಅಂದರೆ, ಯಾರೇನೇ ಚರ್ಚೆಮಾಡಿದರೂ, ಠರಾವಿನ ತರಹ ಒಂದು ನಿಯಮವನ್ನು ಜಾರಿಗೆ ತಂದರೂ, ಕೊನೆಗೂ ಒಂದು ಪದದ "ಮಾಸ್ ಸ್ಕೇಲ್" ಬಳಕೆಯನ್ನು (ಲಕ್ಷಾವಧಿ ಜನರು ಅದನ್ನು ಬಳಸುವ ರೀತಿಯನ್ನು) ಕಾಲವೇ ನಿರ್ಧರಿಸುತ್ತದೆಯೇ ಹೊರತು ಇನ್ನೇನೂ ಅಲ್ಲ. 

೬. ನನಗೆ ಯಾಕೋ ಈ ಸಂದೇಹ ದಿನದಿಂದ ದಿನಕ್ಕೂ ಹೆಚ್ಚಾಗುತ್ತಿದೆ. ಹೇಳಲೇ ಬೇಕು  ಎನಿಸಿರುವುದರಿಂದ ಬರೆಯುತ್ತಿದ್ದೇನೆ. ಈಗಿರುವ ಪ್ರತೀ ಪದಕ್ಕೂ ಒಂದು ಅಚ್ಚಕನ್ನಡ ಪದವನ್ನು ಹೆಕ್ಕಿ ತೆಗೆಯಲೇಬೇಕೆಂಬ ಹಟಕ್ಕೆ ಬಿದ್ದು, ನಂತರ ಸಾಮಾನ್ಯರಾರೂ ಅದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಕಠಿಣವಾಗುತ್ತದಾ ಹೇಗೆ? ಯಾಕೆ ಅಂದ್ರೆ, ದಯವಿಟ್ಟು ಯೋಚಿಸಿ; ಈಗಾಗಲೇ ಕನ್ನಡದ ಬಳಕೆ ದಿನನಿತ್ಯ ಕಡಿಮೆಯಾಗುತ್ತಿದೆ. ಅಂತಹುದರಲ್ಲಿ ಈಗಿರುವ ಕನ್ನಡ ಪದಗಳನ್ನೂ (ಸಂಸ್ಕೃತದ ಪ್ರಭಾವ ಇರುವ ಕನ್ನಡ ಪದಗಳು) ಹೊಸದಾಗಿ ಹೊಸೆದರೆ ಅವನ್ನು ನಿಜಕ್ಕೂ ಜನ ಬಳಸುತ್ತಾರೆಯೇ? ಕೆಲವು ನೂರು ಜನರು, ಇಲ್ಲ ಕೆಲವು ಸಾವಿರ ಜನರು ಬಳಸಬಹುದು, ಅದಲ್ಲ ನನ್ನ ಆಶಯ. ಸಹಸ್ರ ಸಂಖ್ಯೆಯಲ್ಲಿ ಬಳಸುತ್ತಾರಾ? ಪ್ರತೀ ಪದಕ್ಕೂ ನಿಘಂಟನ್ನು ತೆಗೆದು ನೋಡುವ ಉತ್ಸಾಹ, ಸಮಯ, ಸಾಮಾನ್ಯ ಜನಕ್ಕೆ ಇರುತ್ತಾ? ಈ ಹಠ ನಮಗೆ ಅಗತ್ಯವಿದೆಯೇ?

೭. "ಇಂಗ್ಲೀಷನ್ನು ಬೇಕಾದ್ರೆ ಒಪ್ಪಿಕೊಳ್ಳೋಣ, ಆದ್ರೆ ಸಂಸ್ಕೃತ ಮಾತ್ರ ಕಟ್ಟುನಿಟ್ಟಾಗಿ ಬೇಡ" ಅನ್ನುವ ಧೋರಣೆ ನನಗಂತೂ ಅರ್ಥವೇ ಆಗುತ್ತಿಲ್ಲ. ಇದರ ಹಿಂದಿರುವ ಆಶಯವಾದರೂ ಏನು? ನನಗಂತೂ ಯಾಕೋ ಕಸಿವಿಸಿಯೆನಿಸುತ್ತಿದೆ. ನಾವು ಕನ್ನಡವನ್ನು ಬಳಕೆಯಲ್ಲಿ ತರಲು ಹೊರಟಿದ್ದೀವೋ ಅಥವಾ ಸಂಸ್ಕೃತವನ್ನು ನಿಷೇಧಿಸಲೋ? ಎರಡಕ್ಕೂ ವ್ಯತ್ಯಾಸವಿದೆ ಅಲ್ಲವೇ? ನನಗೇನೋ ಎದ್ದು ಕಾಣುತ್ತಿರುವ ಅಂಶವೆಂದರೆ ಸಂಸ್ಕೃತ ವಿರೋಧೀ ನೆಲೆ ಅಷ್ಟೇ. ಇದು ಬಹಳ "ಬ್ಲಂಟ್" ಅನ್ನಿಸಿದಲ್ಲಿ ಕ್ಷಮಿಸಿ. ನಾನು ಮೊದಲೇ ಹೇಳಿದಂತೆ, ನನಗೆ ಹೇಳಲೇ ಬೇಕೂಂತ ಅನ್ನಿಸಿದ್ದರಿಂದ ಬರೀತಿದ್ದೀನಿ. ಕೊನೆಗೆ ನಾವು ಪ್ರತೀ ಪದಕ್ಕೂ ಇಂಗ್ಲೀಷಿನ ಬಳಕೆಯನ್ನೇ ಒಪ್ಪಿಕೊಂಡು ಬಿಡುತ್ತೀವಾ ಅಂತ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 20, 2007 - 3:00pm — mahesha

ನನ್ನ ಅನಿಸಿಕೆಗಳು, ಅನುಮಾನಗಳು ಮತ್ತು ಪ್ರಶ್ನೆಗಳು

mahesha's picture

Quote:

೧. ನಮ್ಮ ನಿಲುವು ಏನು? ಜನಸಾಮಾನ್ಯರ ದೃಷ್ಟಿಯಲ್ಲಿ ಕನ್ನಡವನ್ನು ಉಳಿಸಿ ಬೆಳಸುವುದೋ ಅಥವಾ ಸಂಸ್ಕೃತವನ್ನು ಹೊರಹಾಕುವುದೋ? ಕೇವಲ ಎರಡನೆಯದೇ ನಮ್ಮ ಉದ್ದೇಶವಾದಲ್ಲಿ ಚರ್ಚೆಯ ಅಗತ್ಯವೇ ಇಲ್ಲ! ಏಕೆಂದರೆ ಅದೊಂದು ಉದ್ದೇಶವಾದ್ದರಿಂದ ಅದರ ಬಗ್ಗೆ ಚರ್ಚೆಯೇಕೆ ಅಲ್ಲವೇ? ಆದರೆ ಮೊದಲನೆಯದು (ಜನಸಾಮಾನ್ಯರ ದೃಷ್ಟಿಯಲ್ಲಿ ಕನ್ನಡವನ್ನು ಉಳಿಸಿ...) ನಮ್ಮ ಉದ್ದೇಶವಾದಲ್ಲಿ ನನಗೆ ಈ ಬಗ್ಗೆ ಬಹಳ ಅನುಮಾನಗಳಿವೆ.

ಕನ್ನಡ ಹೆಚ್ಚು ಮಂದಿ ಸುಲಬ ಆಗಬೇಕಾದರೆ ಅವರಿಗೆ ಉಲಿಯಲು ತ್ರಾಸವಾದ ಸಂಸ್ಕ್ರುತ, ಉರ್ದು ಇನ್ನು ಯಾವುದೋ ಒಂದು ಅದರ ರೂಟ್ ಬಗ್ಗೆ ತಲೆಗೆಡಿಸಿಕೊಳ್ಳದೆ, ಕಿತ್ತು ಹಾಕಿ, ಅದರ ಜಾಗದಲ್ಲಿ ಇಂಗಲೀಸೋ, ಸಂಸ್ಕ್ರುತವೋ ಯಾವುದೋ ಒಂದು ಪದ, ಹೆಚ್ಚು ಕನ್ನಡಿಗರೆ ಉಲಿಯಲು, ಕಲಿಯಲು ಸುಲಬವಾದುದನ್ನು ಬಳಸುವುದು.

ನೀವು ಹೇಳಿದ "ಜನಸಾಮಾನ್ಯರ ದೃಷ್ಟಿ," ಇಂತಹ ಬಳಕೆಗಳು, ಹೆಚ್ಚು ಮಂದಿಗೆ ಕಸ್ಟ.

Quote:

೨. ಕ್ರು ಮತ್ತು ಕೃ ಉಚ್ಚಾರಗಳಿಗೆ ತುಂಬಾ ವ್ಯತ್ಯಾಸವಿದೆ. ನಿಜ, ಹೀಗೂ ಉಚ್ಚಾರ ಮಾಡೋಕ್ಕಾಗಲ್ವೇ ಅಂದ್ರೆ ಏನೂ ಹೇಳೋಕ್ಕಾಗೋಲ್ಲ. ನಿಜ, ಅಕ್ಕರವೊಂದನ್ನು ಹೇಗೆ ಬೇಕಾದರೂ ಉಚ್ಚಾರ ಮಾಡಬಹುದು. ಆದ್ರೆ ಆಯಾ ಸಿಲಬಲ್ ಸೌಂಡ್ ಪ್ರಕಾರ ಹೇಳೊದಾದ್ರೆ ಕ್ರು ಮತ್ತು ಕೃ ಉಚ್ಚಾರಗಳಿಗೆ ತುಂಬಾ ವ್ಯತ್ಯಾಸವಿದೆ. ಹಾಗೇ "ಶ" ಮತ್ತು "ಸ" ನಡುವೆ ಕೂಡ. ಒಪ್ಪುತ್ತೀನಿ, "ಶ" ಮತ್ತು "ಷ" ನಡುವೆ ಅಂತಹ ವ್ಯತ್ಯಾಸವಿಲ್ಲ. ಆದರೆ ಶ ಮತ್ತು ಸ ನಡುವೆ ಇದೆ ಅಂತ ನನ್ನ ಅನಿಸಿಕೆ.

ಕನ್ನಡಕ್ಕೆ ಯಾಕೆ ಋ, ಮತ್ತು ಶ, ಷ ಬೇಡ ಅಂದರೆ ಹಚ್ಚು ಕನ್ನಡಿಗರಿಗೆ ಅದನ್ನು ಉಲಿಯಲು ಆಗದು. ಅಲ್ಲದೇ ಕನ್ನಡದ ಯಾವುದೇ ಪದದಲ್ಲಿ ಈ ಸೌಂಡುಗಳು ಇಲ್ಲ. ನಾವು ಒಂದಿಸ್ಟು ಮಂದಿ ಸರಿಯಾಗಿ ಉಲೀತೇವೆ ಅಂತ ಅದನ್ನೇ ಹೆಚ್ಚು ಮಂದಿ ಮೇಲೆ ಹೇರಿದರೆ, ಅವರು ಕನ್ನಡವೇ ಕಸ್ಟ ಅಂತ ಇಂಗಲೀಸನ್ನು ಹಿಡಿದುಕೋತಾರೆ.

Quote:

೩. ಎಲ್ಲಾ ಭಾಷೆಗೂ, ಎಲ್ಲದಕ್ಕೂ ಒಂದು ಚೌಕಟ್ಟು ಬೇಕೇ ಬೇಕು. "ಯಾಕೆ ಬೇಕು?, ಈ ರೂಲ್ಸ್ ಮಾಡಿದೋರು ಯಾರು, ನಮ್ಮ ಭ್ರಾಂತು" ಅಂದ್ರೆ, ನಾಳೆ ಯಾರು ಯಾವ ಪದವನ್ನು ಹೇಗೆ ಬೇಕಾದರೂ ಬರೀಬಹುದು, ಉಚ್ಚಾರ ಮಾಡಬಹುದು. ಆಗ ಪ್ರತಿಯೊಬ್ಬರ ಭಾಷೆಯೂ ಸರಿಯೇ ಆಗುತ್ತೆ. ಹೌದು ನಮಗೆ ವೈಯಕ್ತಿಕವಾಗಿ ಆ ಸ್ವಾತಂತ್ರ್ಯ ಇದೆ. ಯಾರೇನೇ ಹೊಡೆದಾಡಿದರೂ ನಾನು ನನ್ನ ಹೆಸರಿನಲ್ಲಿನ "ಶ್ಯಾಮ್" ಅನ್ನೋದಕ್ಕೆ "ಸ್ಯಾಮ್" ಅನ್ನೋದೇ ಸರಿ, ನಾನು ಬರಿಯೋದೇ ಹೀಗೆ ಅಂತ ಪಟ್ಟು ಹಿಡಿದರೆ, ಅದನ್ನು ಯಾರೂ ಬೇರೆಯವರು ಬದಲಾಯಿಸಲು ಸಾಧ್ಯವಿಲ್ಲ. ಆದ್ರೆ ಸರಿಯಾದ ಬಳಕೆ ಬಗ್ಗೆ ಒಂದು ಚೌಕಟ್ಟು (guidelines) ಬೇಕಲ್ಲ. ಆಗ "ನೀನು ಸ್ಯಾಮ್ ಅಂತ ಬರ್ಕೋಪ್ಪಾ, ಆದ್ರೆ ಸರಿಯಾದ ಬಳಕೆ ಶ್ಯಾಮ್ ಅಂತ" ಹೇಳೋದಕ್ಕೆ ಒಂದು ಆಧಾರ ಇರುತ್ತೆ. ಏನಂತೀರಾ? ಬರಿಯ ಬಳಕೆಯಲ್ಲಿರೋ ಭಾಷೆಯನ್ನು ಬಳಸಿದರೆ ಮಾತ್ರ ಅದು ಜನಕ್ಕೆ ತಲುಪುತ್ತೆ ಅನ್ನೋದು ತಪ್ಪು ಅಂತ ನನ್ನ ಅನಿಸಿಕೆ. ಆ ರೀತಿ ಆಡು ಭಾಷೆ ಕೂಡಾ ಬರಹಕ್ಕೆ ಅಗತ್ಯವಿದ್ದರೆ ಬಳಸೋಣ. ಅದು ಲೇಖಕನ ಕ್ರಿಯೇಟಿವಿಟಿಗೆ ಸಂಬಂಧಿಸಿದ ವಿಷಯ. ಆದರೆ ಗ್ರಾಂಥಿಕ ಭಾಷೆ ಅಂದರೆ ಏನೋ ಒಂದು "ಗುಮ್ಮ" ಅನ್ನುವ ಭಾವನೆ ಯಾಕೆ? ಎರಡೂ ಇರಲಿ. ಆಡು ಮಾತು ತಾನಾಗೇ ಬರುತ್ತೆ. ಕಲಿಯುವಾಗ ಸ್ವಲ್ಪ ಶಿಷ್ಟ ಭಾಷೆಯನ್ನು ಕಲಿಯೋಣ. ಬಳಸುವ ಭಾಷೆಯನ್ನು ಯಾರೂ ಕಲಿಸಬೇಕಿಲ್ಲ. ಹಿಂದಿಯನ್ನು ಎಷ್ಟು ಜನ ವಯಸ್ಸಾದವರು ಅಥವಾ ನಾವೇ ಚಿಕ್ಕವರಾಗಿದ್ದಾಗ, ಬರೀ ರಾಮಾಯಣ ಮತ್ತು ಮಹಾಭಾರತ ಧಾರವಾಹಿಯನ್ನು ನೋಡ್ತಾ ನೋಡ್ತಾ ಕಲೀಲಿಲ್ಲ, ಹೇಳಿ? ಆಡೋ ಮಾತು ತಾನಾಗಿಯೇ ಬರುತ್ತೆ. ನಿಜ ಆಡು ಮಾತಿನ ಬಗ್ಗೆ ತಿರಸ್ಕಾರವೂ ಸರಿಯಲ್ಲ ಬಿಡಿ. ಕೆಲವರು ಆಡು ಮಾತನ್ನು ಬರಹದಲ್ಲಿ ಬಳಸಿದರೆ ಏನೋ ಮಾಡಬಾರದ ತಪ್ಪು ಅನ್ನುವ ಹಾಗೆ ಆಡುತ್ತಾರೆ, ಅದು ಇನ್ನೊಂದು ತುದಿ (ಅತಿ)!

ಕಟ್ಟಳೆ, ನಿಯಮ ಅನ್ನು ಹೆಚ್ಚು ಮಂದಿಯ ಅನುಕೂಲಕ್ಕೆ ಮಾಡಬೇಕೇ ಹೊರತು, ಕೆಲವು ಕೂಚಂಬಟ್ಟರಿಗಾಗಿ ಅಲ್ಲ. ಹಿಂದಿ ರಾಮಾಯಣ ನೋಡೋ ಕಾಲದಲ್ಲಿ ಎಸ್ಟು ಮಂದೀ ಮನೇಲಿ ಟೀವಿ ಇತ್ತು? ಕೆಲವರಿಗೆ ಹಿಂದಿ ಕಲಿತಿರ ಬೋದು, ಎಸ್ಟು ಕನ್ನಡಿಗರಿಗೆ ಹಿಂದಿ ಬರತ್ದೆ?

ಅಲ್ಲದೆ ಆ ಕಟ್ಟಳೆ ಬೇಲಿಯಿಂದ ಅನುಕೂಲವಿರಬೇಕು, ಹೊರತು ಅದು ಕನ್ನಡವನ್ನಲ್ಲದೇ ಬೇರೇ ನುಡಿಯನ್ನೇ ಅರಿಯದ ಮಂದಿಗೆ, ದೊಡ್ಡ ಹೊರೆಯಾಗಬಾರದು.

ಇಂದಿನ ಹೊತ್ತಗೆಯ ಕನ್ನಡ ಎಂದಿಗೂ ಮಾಮೂಲಿ ಕನ್ನಡಿಗ, ಯಾರು ಅದನ್ನು ೨೪ ಗಂಟಿ ಬಳಸುವನೋ, ಅವನಿಗೆ ದೊಡ್ಡ ತಲೆನೋವು.

Quote:

೪. ಇದಕ್ಕೆ ಕೊಡಬಹುದಾದ ಬೆಸ್ಟ್ ಹೋಲಿಕೆ ಅಂದರೆ ವಾಹನ ಚಾಲನೆಯದ್ದು. ಕಲಿಯುವಾಗ ನಾವು ಎಲ್ಲ ನಿಯಮಗಳ ಸಹಿತ ಕಲಿತರೇ ವಾಸಿ. ಕೈಬಿಟ್ಟು ಸೈಕಲ್ಲ್ ಓಡಿಸಬಹುದು ನಿಜ. ಆದರೆ ಅದು ಕಲಿತ ಮೇಲೆ. ಯಾರೂ ಕೂಡಾ ಕಲಿಯುವಾಗ ಕೈಬಿಟ್ಟು ಓಡಿಸೋದು ಕಲಿಯಲ್ಲ. ಕಲಿಯಲೂಬಾರದು. ಒಮ್ಮೆ ಕಲಿತ ನಂತರ, ಪಳಗಿದ ಮೇಲೆ, ಈ ರೀತಿಯ ಆಟಗಳು ತಾವಾಗಿಯೇ ಬರುತ್ತೆ. ಆದರೆ ಆ ಆಟಗಳನ್ನು ನಮಗೆ ಗೊತ್ತು ಅಂದಾಕ್ಷಣ ಕಲಿಯುವವರಿಗೆಲ್ಲ, "ಈ ನಿಯಮಗಳೆಲ್ಲ ಪೊಳ್ಳು, ಯಾರೋ ಯಾಕೆ ಮಾಡಿದ್ರೋ, ಎಲ್ಲವನ್ನೂ ಗಾಳಿಗೆ ತೂರಿ" ಅಂದರೆ ಅದು ತಪ್ಪಾಗೋದಿಲ್ವಾ? ಕಲಿಯುವಾಗ ಎಲ್ಲ ನಿಯಮಗಳೂ ಬೇಕು. ಕಲಿತ ನಂತರ ಕೂಡಾ ಅದು "back of the mind"ನಲ್ಲಿ ಇರುತ್ತೆ.

ಈ ಹೋಲಿಕೆಯೇ ತಪ್ಪು. ಕನ್ನಡ ಮಾತಾಡುವುದು ಬಂಡಿ ಓಡಿಸಿದಂತೆ ಅಲ್ಲವೇ ಅಲ್ಲ. ನಾನು ಮೊದಲು ವ್ಯಾಕರಣ ಕಲಿತು, ತರುವಾಯ ಮಾತಾಡಲ್ಲ. ಮೊದಲು ಮಾತಾಡಿ, ತರುವಾಯ ಬರೆಯೋದು, ಓದೋದು.

ಹಾಗಾದರೆ ಚಿಕ್ಕ ಮಗುವಿಗೆ ಮೊದಲೇ ಸಂಧಿ ಸಮಾಸದ ನಿಯಮಗಳನ್ನು ಹೇಳಿಕೊಟ್ಟು ಆಮೇಲೆ ಮಾತಾಡು ಅಂದಹಾಗೆ ಆಯಿತು.

Quote:

೫. ಅಶೋಕ್ ಅವರು ಹೇಳಿದ ಹಾಗೆ, ಮತ್ತು ಹಿಂದೊಮ್ಮೆ ಚರ್ಚೆಯಲ್ಲಿ ನಾಡಿಗ್ ಹೇಳಿದ ಹಾಗೆ, ಕನ್ನಡದಲ್ಲಿ ಹೆಚ್ಚಾಗಿ ಬರೆದು, ಕನ್ನಡದಲ್ಲಿ ಮಾತಾಡಿ, ಅದನ್ನು ಬಳಸುವ ಬದಲು ನಾವು ಅದರ ದುಪ್ಪಟ್ಟು ಸಮಯವನ್ನು ಭಾಷೆ ಹೇಗಿರಬೇಕು ಎನ್ನುವುದರಲ್ಲೇ ಕಳೀತಿದ್ದೀವಾ ಅಂತ ಅನ್ನಿಸುತ್ತಿದೆ. ಕೊನೆಗೆ ಏನೋ ಒಂದು (ಋ ಬೇಕೋ ಬೇಡವೋ) ನಿರ್ಧಾರವಾಗುವ ಹೊತ್ತಿಗೆ, ಸಾಮಾನ್ಯ ಜನ ಮತ್ತು ಮುಂದಿನ ಪೀಳಿಗೆಯವರು, "ಅಯ್ಯೋ, ರುಷಿ v/s ಋಷಿ, ಸ v/s ಶ, ಕಂಡಿತ v/s ಖಂಡಿತ ಇವುಗಳ ಗೊಂದಲವೇ ಬೇಡಪ್ಪಾ, ಇಂಗ್ಲೀಶಿನ ಸೈಂಟ್, ಶ್ಯೂರ್ ಇವುಗಳು ಆರಾಮ್" ಅಂತ ನಿರ್ಧಾರಕ್ಕೆ ಬಂದರೆ, ಏನು ಉಪಯೋಗ? ಹಿಂದಿನ ಚರ್ಚೆಗಳಲ್ಲೂ, ಈಗಲೂ ನನ್ನ ಬಲವಾದ ನಂಬಿಕೆ ಅಂದರೆ, ಯಾರೇನೇ ಚರ್ಚೆಮಾಡಿದರೂ, ಠರಾವಿನ ತರಹ ಒಂದು ನಿಯಮವನ್ನು ಜಾರಿಗೆ ತಂದರೂ, ಕೊನೆಗೂ ಒಂದು ಪದದ "ಮಾಸ್ ಸ್ಕೇಲ್" ಬಳಕೆಯನ್ನು (ಲಕ್ಷಾವಧಿ ಜನರು ಅದನ್ನು ಬಳಸುವ ರೀತಿಯನ್ನು) ಕಾಲವೇ ನಿರ್ಧರಿಸುತ್ತದೆಯೇ ಹೊರತು ಇನ್ನೇನೂ ಅಲ್ಲ.


ಈ ಸಂಗತಿಯ ಮೇಲೆ ಮಾತಾಡುವುದು ಸಮಯದ ವೇಸ್ಟು ಅಂತ ಅನಿಸಿದರೆ, ಅಂತಹವರು ಇದರ ಕುರಿತು ಮಾತಾಡೋ ನೆಸಿಸಿಟಿ ಏನಿದೆ?
ಯಾರಿಗೆ ಅದರಲ್ಲಿ ಇನ್ಟೆರೆಸ್ಟ ಇದೆ, ಅವರು ಮಾತಾಡ್ತಾರೆ.

Quote:

೬. ನನಗೆ ಯಾಕೋ ಈ ಸಂದೇಹ ದಿನದಿಂದ ದಿನಕ್ಕೂ ಹೆಚ್ಚಾಗುತ್ತಿದೆ. ಹೇಳಲೇ ಬೇಕು ಎನಿಸಿರುವುದರಿಂದ ಬರೆಯುತ್ತಿದ್ದೇನೆ. ಈಗಿರುವ ಪ್ರತೀ ಪದಕ್ಕೂ ಒಂದು ಅಚ್ಚಕನ್ನಡ ಪದವನ್ನು ಹೆಕ್ಕಿ ತೆಗೆಯಲೇಬೇಕೆಂಬ ಹಟಕ್ಕೆ ಬಿದ್ದು, ನಂತರ ಸಾಮಾನ್ಯರಾರೂ ಅದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಕಠಿಣವಾಗುತ್ತದಾ ಹೇಗೆ? ಯಾಕೆ ಅಂದ್ರೆ, ದಯವಿಟ್ಟು ಯೋಚಿಸಿ; ಈಗಾಗಲೇ ಕನ್ನಡದ ಬಳಕೆ ದಿನನಿತ್ಯ ಕಡಿಮೆಯಾಗುತ್ತಿದೆ. ಅಂತಹುದರಲ್ಲಿ ಈಗಿರುವ ಕನ್ನಡ ಪದಗಳನ್ನೂ (ಸಂಸ್ಕೃತದ ಪ್ರಭಾವ ಇರುವ ಕನ್ನಡ ಪದಗಳು) ಹೊಸದಾಗಿ ಹೊಸೆದರೆ ಅವನ್ನು ನಿಜಕ್ಕೂ ಜನ ಬಳಸುತ್ತಾರೆಯೇ? ಕೆಲವು ನೂರು ಜನರು, ಇಲ್ಲ ಕೆಲವು ಸಾವಿರ ಜನರು ಬಳಸಬಹುದು, ಅದಲ್ಲ ನನ್ನ ಆಶಯ. ಸಹಸ್ರ ಸಂಖ್ಯೆಯಲ್ಲಿ ಬಳಸುತ್ತಾರಾ? ಪ್ರತೀ ಪದಕ್ಕೂ ನಿಘಂಟನ್ನು ತೆಗೆದು ನೋಡುವ ಉತ್ಸಾಹ, ಸಮಯ, ಸಾಮಾನ್ಯ ಜನಕ್ಕೆ ಇರುತ್ತಾ? ಈ ಹಠ ನಮಗೆ ಅಗತ್ಯವಿದೆಯೇ?

ಈ ಮಾತು ನಿಜ, ಹೇಗೆ ಅಚ್ಚಕನ್ನಡ ಕಸ್ಟವೋ, ಹಾಗೆ ಒಂದು ಮಣ ಸಂಸ್ಕ್ರುತ, ಉರ್ದು ಬೆರೆಸಿ 'ಶಿಸ್ಟ' ಬಾಸೆ ಅಂತ ಬೆರೆಯೋ ಕನ್ನಡ ಕೂಡ ದೊಡ್ಡ ಕಗ್ಗಂಟು. ಆದರೆ ಮೇಲೆ ಬಳಸಿದ "ಸಹಸ್ರ", "ಸಂಖ್ಯೆ" ಮುಂತಾದವು ಗಳಿಗಿಂತ ಇಂದು ಮಂದಿಗೆ ಹೆಚ್ಚು ತಿಳಿಯುವ ಪದಗಳು "ಸಾವಿರ", "ನಂಬರು" ಇವು.

ಈ ರೀತಿ ಹೆಚ್ಚು ಮಂದಿಗೆ ಗೊತ್ತಿಲ್ಲದ "ಸಹಸ್ರ", "ಲಕ್ಷಾವಧಿ", ಮುಂತಾದವುಗಳನ್ನು ತಿಳಿಯಲೂ ಮಂದಿ ನಿಗಂಟು ನೋಡಲೇ ಬೇಕು. ನನಗೆ ಗೊತ್ತಿದೆ ಎಂದು ಅದು ಎಲ್ಲರಿಗೂ ಗೊತ್ತಿರಬೇಕೆಂದಿಲ್ಲ.

Quote:

೭. "ಇಂಗ್ಲೀಷನ್ನು ಬೇಕಾದ