ಎಲ್ಲಾ ಸಂಪದಿಗರಿಗೂ ’ಶ್ರೀ ಸರ್ವಜಿತ್ ಸಂವತ್ಸರ” ದ ಹಾರ್ದಿಕ ಶುಭಾಶಯಗಳು !
ಆತ್ಮೀಯ ಸಂಪದಿಗರೆ,
"ಶ್ರೀ ಸರ್ವಜಿತ್ ಸಂವತ್ಸರ"ವು ನಿಮ್ಮ ಬಾಳಿನಲ್ಲಿ ನವಉತ್ಸಾಹ, ಸಂತೋಷ, ಸಮಾಧಾನ ಸಂತೃಪ್ತಿಯನ್ನು ತಂದುಕೊಡಲಿ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೧೯-೦೩-೨೦೦೭ ನೇ ಸೋಮವಾರದ ದಿನ ಆಚರಿಸಲಾಗುವುದು.
ಸೌರಮಾನ ರೀತಿ, ಸೂರ್ಯನು ನಿರಯಣ ಮೇಷ ರಾಶಿ ಪ್ರವೇಶಿಸುವ ಪುಣ್ಯ ಕಾಲದ ದಿನ, ತಾ. ೧೪-೦೪-೨೦೦೭ ನೇ ಶನಿವಾರವೂ ಯುಗಾದಿಹಬ್ಬವನ್ನು ಆಚರಿಸಬಹುದು.
ಪ್ರಾತಃಕಾಲದಲ್ಲಿ ಅಭ್ಯಂಜನದ ನಂತರ, ಹೊಸ ವರ್ಷದ ಪಂಚಾಂಗವನ್ನು ಪರಮಾತ್ಮನ ಬಳಿ ಇಟ್ಟು ಶ್ರೀ ಮಹಾಗಣಪತಿಯ ಪೂಜೆಯಿಂದ ಪ್ರಾರಂಭಿಸಿ, ಕುಲದೇವತಾರ್ಚನೆಯನ್ನು ನಡೆಸಬೇಕು.
ಬೇವು-ಬೆಲ್ಲಗಳ ಸೇವನೆ, ಮತ್ತು ’ಪಂಚಾಂಗ ಶ್ರವಣ” ಈ ದಿನದ ಪ್ರಮುಖ ಕಾರ್ಯಗಳು. ಇದನ್ನು ಇಷ್ಟ ಜನರ ಸಮ್ಮುಖದಲ್ಲಿ ಮಾಡಬೇಕು.
ಸಾಯಂಕಾಲ ದೇವಸ್ಥಾನಕ್ಕೆ ಹೋಗಿ ಬಂದನಂತರ, ’ಪಾಡ್ಯ” ದ ಚಂದ್ರನ ದರ್ಶನಮಾಡಿ ಹಿರಿಯರಿಗೆ ನಮಸ್ಕಾರಮಾಡಿ ಅವರ ಆಶೀರ್ವಾದ ಪಡೆಯಬೇಕು. ಚಿಕ್ಕ ರೇಖೆಯಂತಿರುವ ಚಂದ್ರನ ದರ್ಶನ ಕೆಲವೊಮ್ಮೆ ಕಷ್ಟವಾದರೆ, ಅದರ ಮುಂದಿನ ದಿನವಾದರೂ ’ಚಂದ್ರನ ದರ್ಶನ” ಅತ್ಯಾವಶ್ಯಕ. ಒಂದು ವೇಳೆ ’ಗಣೇಶನ ಹಬ್”ದ ದಿನದಂದು ಅಚಾತುರ್ಯದಿಂದ ಚಂದ್ರನ ದರ್ಶನವಾಗಿದ್ದರೆ, "ಉಗಾದಿಯ ಚಂದ್ರ ದರ್ಶನ" ದಿಂದ ’ಮಿಥ್ಯಾಪವಾದ’ದ ಪರಿಹಾರ ಸಿಗುತ್ತದೆ.
ಸರ್ವರಿಗೂ ಮಂಗಳವಾಗಲಿ. ಶುಭಮಸ್ತು.

- Login or register to post comments
- 502 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಸರ್ವಜಿತ್ ಎಂದರೆ?
ಎಲ್ಲರೂ ಗೆಲ್ಲಲಿ ಎಂದೇ ಅಥವಾ ಎಲ್ಲವನ್ನೂ ಗೆದ್ದವ ಎಂದೇ?
ಸರ್ವಜಿತ್
ಇಂದ್ರಜಿತ್ = ಇಂದ್ರನನ್ನು ಗೆದ್ದವನು/ಗೆದ್ದವಳು/ಗೆದ್ದದ್ದು
ಸರ್ವಜಿತ್ = ಎಲ್ಲರನ್ನು/ಎಲ್ಲವನ್ನು ಗೆದ್ದವನು//ಗೆದ್ದವಳು/ಗೆದ್ದದ್ದು
ಒಟ್ಟಿನಲ್ಲಿ someone/thing who/which won everything/one.
ಈ ಬಗೆಯ ರೂಪಗಳನ್ನು ಬರೀ ಸಂಸ್ಕ್ಕುತದಲ್ಲಿ ಕಾಣಬಹುದು. ಇದು ಅದರ ವಿಸೇಸ.
ಇನ್ನೂ ಒಂದು ತಮಾಸೆ ಇದೆ ಈ ’ಜಿತ್’ ಜೊತೆ.
’ಜಿತಃ’ ಅಂದರೆ ಸೋತವನು, ಗೆಲ್ಲಲಾದವನು
’ಅಜಿತ’ ಅಂದರೆ ಗೆದ್ದವನು, ಸೋಲದಿರವವನು
ಜೇಯ ಅಂದರೆ ಗೆಲ್ಲಲಾಗುವವನು
ಅಜೇಯ ಅಂದರೆ ಗೆಲ್ಲುವವನು
ಇಲ್ಲಿ ’ಸರ್ವಜಿತ’ ಅಂತ ಆಗಿದ್ದರೆ, ’ಎಲ್ಲವನ್ನು ಸೋತವನು/ಳು ಸೋತಿದ್ದು’, ಎಲ್ಲರಿಂದ ಗೆಲ್ಲಲಾದವನು