ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

March 27, 2007 - 4:01am — anivaasi

ಭಾರತೀಯ ರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿ ಹೋದ ಬಿ.ವಿ.ಕಾರಂತರು ಪದದ ಅರ್ಥದ ಬಗ್ಗೆ ಮಾತನಾಡುತ್ತಾ "ಅರ್ಥಕೋಶದಲ್ಲಿನ ಅರ್ಥಗಳು ನಾಟಕಮಾಡುವವರಿಗೆ ಏನೇನೂ ಸಾಲದು" ಎಂದು ಹೇಳುತ್ತಿದ್ದರು. ನಾಟಕದಲ್ಲಿ ಪದಗಳನ್ನು ಹೇಳುವಾಗ ಅದರ ತದ್ವಿರುದ್ಧವಾದ ಅರ್ಥ ಬರುವ ಹಾಗೆ ಹೇಳಬಹುದು. ಅಷ್ಟೇ ಅಲ್ಲ, ನೇರಾರ್ಥ, ತದ್ವಿರುದ್ಧಾರ್ಥದ ನಡುವೆ ಹತ್ತು ಹಲವಾರು ವಿವಿಧಾರ್ಥಗಳನ್ನೂ ಪದಗಳಿಗೆ ತುಂಬಬಹುದು. ಮತ್ತು ಮೂಲಾರ್ಥದಲ್ಲಿ ಇಲ್ಲದ ಅರ್ಥವನ್ನು ನುಡಿಯ ರೀತಿಯಲ್ಲಿ ಮತ್ತು ನುಡಿಯ ಸಂದರ್ಭದಲ್ಲಿ ಆರೋಪಿಸಬಹುದು. ಹಾಗಾಗಿ ನಟರಿಗೆ ಪದದ ಅರ್ಥ ಎನ್ನುವುದು ಪ್ರತಿನಿತ್ಯ ಎದುರಿಸಬೇಕಾದ ಒಂದು ಚಲನಶೀಲ ಅಂಶ.
ಕುರ್ತುಕೋಟಿಯವರು ತಮ್ಮ ಪ್ರಬಂಧ ಒಂದರಲ್ಲಿ ಸ್ವಾತಂತ್ಯ್ರ ಎಂಬ ಪದಕ್ಕೆ ಹೇಗೆ ಅರ್ಥ ಬದಲಾವಣೆಯಾಗುತ್ತಿದೆ ಎಂದು ನಿರೂಪಿಸುತ್ತಾರೆ. ಸ್ವಾತಂತ್ಯ್ರಪೂರ್ವದಲ್ಲಿ ಆ ಪದಕ್ಕಿದ್ದ ಅರ್ಥಕ್ಕೂ, ನಂತರ ಪ್ರತಿದಶಕದಲ್ಲೂ ಅದರ ಅರ್ಥ ಬದಲಾಗತ್ತಿರುವುದನ್ನು ನಮ್ಮ ಅವಗಾಹನೆಗೆ ತರುತ್ತಾರೆ. ಮತ್ತೊಂದು ಕಡೆ, "ಬಂಗಾರ" ಒಂದು ವಸ್ತುವಿಗಿಂತ ಅದರ ಮೂಲಸತ್ವಕ್ಕಿರುವ ಪದ ಎಂದು ಹೇಳುತ್ತಾರೆ. ಪದದ ಅರ್ಥಪಲ್ಲಟವಾಗುವುದು ಒಂದು ಭಾಷಾ ಸಮುದಾಯದ ಬೆಳವಣಿಗೆಯಲ್ಲಿ ಅನಿವಾರ್ಯವೇನೋ. ಹಾಗೆಯೇ ಆ ಪಲ್ಲಟಗಳನ್ನು ಗಮನಿಸುವುದು ಕೂಡ ಆ ಸಮುದಾಯದ ಬಗ್ಗೆ ನಮಗೆ ಹೊಳಹುಗಳನ್ನು ಕೊಡುತ್ತದೆ.
ಸುಮಾರು ಎರಡು-ಮೂರು ವರ್ಷದ ಕೆಳಗೆ ಆಸ್ಟ್ರೇಲಿಯಾದ ಸರ್ಕಾರಿ ರೇಡಿಯೋ 'ಎಬಿಸಿ'ಯಲ್ಲಿ ಕಾಲ್‌ಬ್ಯಾಕ್ ಕಾರ್ಯಕ್ರಮವನ್ನು ಕೇಳುತ್ತಿದೆ. ಅಂದು "ಜೇಡರಬಲೆ" ಎಂಬ ಪದದ ಬಗ್ಗೆ ಮಾತುಕತೆ ನಡೆದಿತ್ತು. "ಕಾಬ್‌ವೆಬ್‌" ಮತ್ತು "ಸ್ಪೈಡರ್‌ ವೆಬ್‌" ಎರಡೂ ಒಂದೇ ವಸ್ತುವಿಗೆ ಸಂಬಂಧಪಟ್ಟಿದ್ದರೂ ಯಾವ ಯಾವ ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸುತ್ತೀರ ಎಂಬುದು ಚರ್ಚಾ ವಿಷಯವಾಗಿತ್ತು. ಹಲವಾರು ಜನರು ಕರೆಮಾಡಿ ತಮ್ಮ ವಿಚಾರಗಳನ್ನು ಹೇಳುತ್ತಿದ್ದರು. ಮನೆಯ ಹೊರಗಿದ್ದರೆ ಸ್ಪೈಡರ್‌ವೆಬ್‌, ಒಳಗಿದ್ದರೆ ಕಾಬ್‌ವೆಬ್‌ ಎಂದು ಕೆಲವರು ಹೇಳಿದರೆ, ಅದಕ್ಕೆ ತದ್ವಿರುದ್ಧವಾದ ಅರ್ಥದಲ್ಲಿ ಬಳಸುತ್ತೇವೆ ಎಂದು ಇನ್ನು ಕೆಲವರು ಹೇಳುತ್ತಿದ್ದರು. ಕಾಬ್‌ ಎಂಬುದು ಚಕ್ರದ ಪದವಾದ್ದರಿಂದ ಸ್ಪೈಡರ್‌ವೆಬ್‌ ಅದು ಚಕ್ರದ ರೂಪದಲ್ಲಿಲ್ಲದಾಗ ಎಂದು ಕೆಲವರು ಹೇಳಿದರು. ಧೂಳು ಹಿಡಿದಿದ್ದರೆ ಕಾಬ್‌ವೆಬ್‌ ಇಲ್ಲದಿದ್ದರೆ ಸ್ಪೈಡರ್‌ವೆಬ್‌. ಜೇಡ ಇನ್ನೂ ಅಲ್ಲಿದ್ದರೆ ಸ್ಪೈಡರ್‌ ವೆಬ್‌ ಇಲ್ಲದಿದ್ದರೆ ಕಾಬ್‌ವೆಬ್‌ ಎಂದು ಉಪಯೋಗಿಸುತ್ತೇವೆ ಎಂದು ಕೆಲವರು ವಿವರಿಸಿದರು. ಮರಗಿಡಗಳಂಥ ಪ್ರಾಕೃತಿಕ ಪರಿಸರದಲ್ಲಿದ್ದರೆ ಸ್ಪೈಡರ್‌ವೆಬ್‌, ಕುರ್ಚಿ, ಮೇಜು, ಕಿಟಕಿಯಂಥ ಮಾನವ ನಿರ್ಮಿತ ವಸ್ತುಗಳಿಗೆ ಕಟ್ಟಿದರೆ ಕಾಬ್‌ವೆಬ್‌ ಎಂದು ಇನ್ನು ಕೆಲವರು ಅರ್ಥೈಸಿದರು.
ಒಟ್ಟಾರೆ, ಇದು ಯಾವ ಪದಕ್ಕೆ ಯಾವ ಅರ್ಥ ಸರಿ ಯಾವುದು ತಪ್ಪು ಎಂಬ ಚರ್ಚೆ ಆಗಿರಲಿಲ್ಲ. ಒಂದು ರೀತಿಯಲ್ಲಿ ನೋಡಿದರೆ ಅದರ ಬಗ್ಗೆ ಚರ್ಚೆಯೇ ಬೇಕಾಗಿರುವುದಿಲ್ಲ. ಅರ್ಥಕೋಶ ತೆಗೆದು ನೋಡಿಬಿಟ್ಟರೆ ಸಾಕು. ಆದರೆ ಯಾರಿಗೆ ಯಾವಾಗ ಯಾವ ಪದಕ್ಕೆ ಯಾವ ಅರ್ಥ ಸರಿಯೆನಿಸುತ್ತದೆ ಎಂಬುದನ್ನು ಹೇಳುತ್ತಾ ಜತೆಜತೆಗೆ ಕಾರ್ಯಕ್ರಮ ನಡೆಸಿಕೊಡುವವ ಯಾಕೆ ಅವರಿಗೆ ಹಾಗೆನಿಸುತ್ತದೆ ಎಂದು ಮಾತನಾಡಿಸುತ್ತಾ ಅವರ ಜೀವನದ ಮತ್ತು ಭಾವನೆಗಳ ವಿವರವನ್ನು ಹೇಳುವಂತೆ ಪ್ರೇರೇಪಿಸುತ್ತಿದ್ದ. ಹಾಗಾಗಿ ಆ ಕಾರ್ಯಕ್ರಮ ಪದಗಳ ಬಗ್ಗೆಯಾದರೂ ನಿಜವಾಗಿಯೂ ಬದುಕುಗಳ ಬಗ್ಗೆಯೇ ಆಗಿತ್ತು!
ಆ ಕಾರ್ಯಕ್ರಮ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು. ಪದಗಳನ್ನು ಅರ್ಥೈಸುವ ಬಗೆಗಿನ ಯೋಚನೆ ವಿಶಿಷ್ಟವೆನಿಸಿದ್ದು ಬರೇ ಒಂದು ಹಂತವಷ್ಟೆ. ಆದರೆ, ಮುಂದೆ ಜನರೊಡನೆ ಮಾತಾಡುವಾಗ ಅವರು ಉಪಯೋಗಿಸುವ ಪದಗಳೇ ಅವರ ಬಗ್ಗೆ ಎಷ್ಟು ಹೇಳುತ್ತದೆ ಎಂಬುದು ಅರಿವಿಗೆ ಬಂದಿತು. ನಾನೂ ಯಾವಾಗ ಏನೇನು ಪದಗಳನ್ನು ಉಪಯೋಗಿಸುತ್ತೇನೆ ಅನ್ನುವ ಎಚ್ಚರವೂ ಗಾಢವಾಗುತ್ತಾ ಹೋಯಿತು.
ಹಲವಾರು ಸಲ ಕೇಳಿರುವ ಪದ ನನಗೆ ಏನು ಅರ್ಥ ಕೊಡುತ್ತದೆ? ಅರ್ಥಕೋಶದ ಅರ್ಥವನ್ನು ಮರೆತು, ಪದಗಳಿಗೆ ಅರ್ಥಕೊಡುವ ಮನಸ್ಸಿನ ಆಲೋಚನಾಭಾಗವನ್ನು ಪಕ್ಕಕ್ಕಿಟ್ಟು, ಭಾವನಾತ್ಮಕವಾಗಿ ಒಂದು ಪದ ನನ್ನೊಳಗೆ ಏನು ಲಹರಿಯನ್ನು ಎಬ್ಬಿಸುತ್ತದೆ? "ತೌರು" ಎಂಬ ಪದ ಗಂಡು ಮನದಲ್ಲಿ, ಹೆಣ್ಣು ಮನದಲ್ಲಿ ವಿಭಿನ್ನ ಭಾವಗಳನ್ನು ಹೊಮ್ಮಿಸುತ್ತದೆ ಅಲ್ಲವೆ? ಅಷ್ಟೇ ಯಾಕೆ, ತಾಯಿಯಿರುವ ಹೆಣ್ಣಿಗೂ, ತಾಯಿಯಿರದ ಹೆಣ್ಣಿಗೂ, ತಾಯಿ ಮನೆ ಪರವೂರಿನಲ್ಲಿರುವ ಹೆಣ್ಣಿಗೂ, ಪಕ್ಕದ ಬೀದಿಯಲ್ಲಿರುವ ಹೆಣ್ಣಿಗೂ ಬೇರೆ ಬೇರೆ ಭಾವತೀವ್ರತೆಗಳನ್ನು ತಂದುಕೊಡುತ್ತದಲ್ಲವೆ? "ಮರಳು" ಎನ್ನುವ ಪದ ಬಿಲ್ಡಿಂಗ್‌ ಕಾಂಟ್ರಾಕ್ಟರ್‌ಗೂ ಕಡಲಲ್ಲಿ ಆಡುವ ಮಗುವಿಗೂ ಎಷ್ಟು ವಿಭಿನ್ನ ಭಾವನೆಗಳನ್ನು ಹೊಮ್ಮಿಸುತ್ತದೆ. "ಬೆರಳು" ಎಂಬ ಪದ ಉಂಗುರ ಮಾಡುವ ಅಕ್ಕಸಾಲಿಗೂ, ಕೊಳಲು ನುಡಿಸುವ ಕಲಾಕಾರನಿಗೂ ಹೇಗೆ ಬೇರೆ ಬೇರೆ ಭಾವನೆಗಳನ್ನು ಹುಟ್ಟಿಸುತ್ತದೆಯಲ್ಲವೆ? ಯಶವಂತ ಚಿತ್ತಾಲರ ಬರಹವೊಂದರಲ್ಲಿ "ರಕ್ತ" ಪದ ಬಗ್ಗೆ ಇಂಥದೇ ವಿಚಾರ ಓದಿದ ನೆನಪು.
ಒಂದು ಪದ ಹಲವರಿಗೆ ಹಲವು ಅರ್ಥಗಳನ್ನು ಕೊಡುತ್ತವೆ ಎಂಬುದಷ್ಟೇ ನನ್ನ ಸೋಜಿಗಕ್ಕೆ ಕಾರಣವಲ್ಲ. ಆದರೆ, ಪದ ನನ್ನ ತಲೆಯಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಬೇರೆಯದೇ ಭಾವನೆಗಳನ್ನು ಹೊಮ್ಮಿಸುತ್ತದೆಯಲ್ಲ ಅದನ್ನು ಯಾವ ಅರ್ಥಕೋಶ ಹಿಡಿದಿಡಬಲ್ಲುದು? ಹಾಗಾಗಿಯೇ, ನಮ್ಮ ಪರಿಸರ, ಹಿನ್ನೆಲೆಗೆ ಅನುಸಾರವಾಗಿ ಪದಗಳಿಗೆ ನಮ್ಮದೇ ಭಾವಾರ್ಥಗಳನ್ನು ಕೊಟ್ಟುಕೊಂಡು ಉಪಯೋಗಿಸುತ್ತಿರುತ್ತೇವೆ. ಹಾಗೆ ಹೇಳುವಾಗ, ನಾವು ಮನೋವೈಜ್ಞಾನಿಕತೆಯ ಹೊಸ್ತಿಲಲ್ಲಿ ನಿಂತಿದ್ದೇವೆ ಎಂಬುದು ನಿಜ. ಆದರೂ ಅನುದಿನದ ಬದುಕಲ್ಲಿ, ಮತ್ತೆ ಮತ್ತೆ ನಾವು ನಮ್ಮ ತಲೆಯೊಳಗಿನ ಅರ್ಥಕೋಶದತ್ತ ಗಮನಹರಿಸುವುದು ಒಳ್ಳೆಯ ಅಭ್ಯಾಸವೇನೋ ಅನ್ನಿಸುತ್ತದೆ.
ತಲೆಯೊಳಗಿನ ಅರ್ಥಕೋಶ ಪದದ ಬಗ್ಗೆ ತೆರೆದಿಡುವುದಕ್ಕಿಂತ, ನಮ್ಮ ಬಗ್ಗೆ ಹೆಚ್ಚು ವಿವರಗಳನ್ನು ನಮಗೇ ತೆರೆದು ತೋರಬಹುದು ಅಲ್ಲವೆ?

  • ಪ್ರಬಂಧ
~.~
  • Login or register to post comments
  • 663 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2008 - 9:56am — Sunil Jayaprakash

ಉ: ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

Sunil Jayaprakash's picture

ಅನಿವಾಸಿ, ಒಳ್ಳೆಯ ಅಂಶಗಳನ್ನು ಹೇಳಿದ್ದೀರಿ. ಪದಗಳ ಅರ್ಥವ್ಯಾಪ್ತಿ ಹೆಚ್ಚಿಸಿದಷ್ಟೂ, ಅಥವಾ ಪದಗಳ ಅರ್ಥವ್ಯಾಪ್ತಿಯನ್ನು ಹೆಚ್ಚು ತಿಳಿದುಕೊಂಡಷ್ಟೂ ಸಿಕ್ಕಾಪಟ್ಟೆ ಖುಷಿಸಿಗುತ್ತಾ ಹೋಗುತ್ತದೆ. ನನಗೆ ಆಬಗೆಯ ಅನುಭವವಾದದ್ದು, "ಗಾಡಿ" ಎಂಬ ಕನ್ನಡ ಪದದ ಅರ್ಥ ತಿಳಿದುಕೊಂಡಾಗ.

ಗಾಡಿ ಅಂದರೆ ಸಾಮಾನ್ಯವಾಗಿ ತಿಳಿಯುವಂತೆ, ಅದನ್ನು "ವಾಹನ" ಎಂಬ ಅರ್ಥದಲ್ಲಿ ಬಳಸುತ್ತೇವೆಷ್ಟೇ. ಆದರೆ "ಕಬ್ಬಿಗರ ಕಾವನ್" ಓದುವಾದ, ಅದರ ಮೊದಲ ಪದ್ಯದಲ್ಲಿಯೇ, "ಆವನ ಗಾಡಿ ನೋಡಿದವರನ್ ಸಲೆ ಸೋಲಿಸುತಿರ್ಪುದು" ಎಂಬ ಬಳಕೆ ಕಾಣಿಸಿತು. ಏನಿದು ಅಂತ ತಿಳಿಯಲೆತ್ನಿಸಿದಾಗ, ತಿಳಿದದ್ದೇನೆಂದರೆ, ಕನ್ನಡದಲ್ಲಿ "ಗಾಡಿ" ಅಂದರೆ ಸೌಂದರ್ಯವಂತೆ. ಗಾಡಿಗಾರ, ಗಾಡಿಗಾರ್ತಿ(ಸೌಂದರ್ಯವತಿ). ಇದು ತಿಳಿದ ಮೇಲೆ, ಯಾರಾದರೂ "ಹೇಯ್, ಆ ಗಾಡಿ ನೋಡೋ". ಅಂದರೆ ಏನೋ ಒಳಗೊಳಗೇ ಮುಸಿಮಸಿ ನಗು. ಯಾರಪ್ಪಾ ಇದು, ಆ ಸೌಂದರ್ಯ, ಎಲ್ಲಿದ್ದಾಳೆ ಹಾಗೆ ಹೀಗೆ Laughing out loud

ಇಷ್ಟಲ್ಲದೆ, ಪದಗಳು ಕಾಲಕಾಲಕ್ಕೆ ಬೇಬೇರೆ ಅನಿಸಿಕೆಗಳನ್ನು ಹೊರಹೊಮ್ಮಿಸುತ್ತವೆ ಎಂಬುದನ್ನು ನಮ್ಮ ಸಂಪದದಲ್ಲಿಯೇ "ಬ್ರಾಹ್ಮಣ" ಪದದ ಸುತ್ತ ಚರ್ಚೆ ನಡೆದದ್ದನ್ನು ಹೆಸರಿಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2008 - 9:59am — mahesha

ಉ: ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

mahesha's picture

ಕಬ್ಬಿಗರ ಕಾವ ಗಾಡಿ ಬೇರೆ, ಬಂಡಿ ತಿಳಿವಿನ ಗಾಡಿ ಬೇರೆ!

೫. ಗಾಡಿ (ದೇ) (ನಾ) ೧ ಚೆಲುವು, ಸೊಬಗು, ಅಂದ ೨ ಚೆಲುವೆ, ಸುಂದರಿ

೬. ಗಾಡಿ (<ಹಿಂ. ಮರಾ. ಗಾಡಾ) (ನಾ) ೧ ಬಂಡಿ, ಶಕಟ ೨ ನಿಜಾಮರ ಆಳ್ವಿಕೆಯಲ್ಲಿ ಚಲಾವಣೆಯಲ್ಲಿ ಇದ್ದ ಒಂದು ಬೆಳ್ಳಿಯ ನಾಣ್ಯ ೩ ಹೆಂಗಸರು ಮೂಗಿನಲ್ಲಿ ಧರಿಸುವ ಆಭರಣ, ನತ್ತು ೪ ಮರದ ತುಂಡನ್ನು ಇನ್ನೊಂದು ಮರದ ತುಂಡಿಗೆ ಸೇರಿಸಲು ಬಡಗಿ ತೋಡುವ ಹಳ್ಳ, ವೆಜ್ಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2008 - 10:08am — kannadakanda

ಉ: ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

kannadakanda's picture

ತಲೆಯೊಳಗೊಂದನರ್ಥಕೋಶವಿರಲೂ ಬಲ್ಲುದಷ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತಾಯ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ನೀಳ್ಗತೆ
  • ಇಂದಿನ ಸುದ್ದಿ...!
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಿಡುಗಡೆಯ ನಂತರದ ಬೇಡಿಗಳು (೩)
  • ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!
  • ಬಿಡುಗಡೆಯ ನಂತರದ ಬೇಡಿಗಳು (೨)
  • ‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!
  • ಫೈರ್ಫಾಕ್ಸಿನಲ್ಲಿ ಉದಯವಾಣಿಯನ್ನು ಓದುವ ಬಗ್ಗೆ
  • (Liberty Bell) ಸ್ವಾತಂತ್ರ್ಯದ ಕುರುಹಾದ ಘಂಟೆ !
  • ಬಿಡುಗಡೆಯ ನಂತರದ ಬೇಡಿಗಳು (೧)

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator