ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಕನ್ನಡ ರ೦ಗದಲ್ಲಿನ ರಾಮಾಯಣ

March 27, 2007 - 5:28pm — prasadhegde

ಮೈಸೂರಿನ ರಂಗಾಯಣದ ಆವರಣ ಮತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ನನ್ನನ್ನು ಬಹಳವಾಗಿ ಸೆಳೆಯುವ ತಾಣಗಳು. ಇಂದಿನ ಅಬ್ಬರದ ದಿನಗಳಲ್ಲಿ ಇಲ್ಲಿ ಒಂದಿಷ್ಟು ಹೊತ್ತು ಕಳೆದರೆ ವಿಶಿಷ್ಟವಾದ ಅನುಭವ ನನ್ನದಾಗುತ್ತದೆ. ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ನನ್ನೊಳಗೆ ಸಂವಾದಿಯಾಗಿ ನಿಲ್ಲಬಲ್ಲವು. ನಾನು ಮತ್ತು ನನ್ನಂಥವರು ಈ ಕಾಲಘಟ್ಟದಲ್ಲಿ ಅದ್ಯಾವುದೋ ಆವರಣದೊಳಕ್ಕೆ ಸಿಲುಕಿ ಗೊಂದಲ ಹಾಗು ಅಗತ್ಯವಾಗಿರಬಹುದಾದ,ಅನಗತ್ಯವಾಗಿರಬಹುದಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕೊನೆಗೆ ಕಾಡಹರಟೆಗೆ ಬಂದು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಗಂಭೀರರಾಗಿ ಆತಂಕಗೊಳ್ಳುವುದೂ ಇದೆ.

ನಿರಂತರ, ಕೆಲಬಾರಿ ಅನಗತ್ಯ ಅನ್ನಬಹುದಾದ ಆತಂಕ ಮತ್ತು ದಿನನಿತ್ಯದ ಜಂಜಾಟದ,ಗುದ್ದಾಟದ ಬದುಕಿನ ನಡುವೆ ಆಹ್ಲಾದ,ಆಸ್ವಾದಿಸುವ ಕ್ಷಣಗಳನ್ನು ಮೊನ್ನೆ ರವೀಂದ್ರ ಕಲಾಕ್ಷೇತ್ರದ ಆವರಣ ನನಗೆ ಒದಗಿಸಿಕೊಟ್ಟಿತ್ತು. ನೀನಾಸಂ ಮರು ತಿರುಗಾಟದ 'ಕನ್ನಡ ರಾಮಾಯಣ'ನಾಟಕ ಪ್ರದರ್ಶನ ಇತ್ತೀಚಿಗಿನ ಒಂದು ಅದ್ಭುತ ರಂಗ ಸಂವಹನ.ಮನಸ್ಸು ಮತ್ತು ಬುದ್ಧಿಯನ್ನು ಚುರುಕಾಗಿಸಿದ ಈ ಪ್ರದರ್ಶನ ಕನ್ನಡ ರಂಗಭೂಮಿಯಲ್ಲಿನ ಬದಲಾವಣೆ,ಹೊಸ ಅಲೆಯ ಅನ್ವೇಷಣೆಯ ನಡುವೆ ತನ್ನ ತಾಕತ್ತನ್ನು ತೆರೆದಿಟ್ಟಿತ್ತು.

ಹೊಸ ವಿಷಯ ವಸ್ತುವನ್ನು ತೆಗೆದುಕೊಂಡು ಅದನ್ನು ಪ್ರಸ್ತುತಪಡಿಸುವುದು ಸವಾಲು. ಆದರೆ ಜನಮಾನಸದಲ್ಲಿ ನಿತ್ಯ ನಿರಂತರವಾಗಿ ಕಾಡುವ ತುಂಬ ಹಳೆಯದಾದ,ಆಯಾ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ರಾಮಾಯಣ ಮಹಾಕಾವ್ಯವನ್ನು ರಂಗರೂಪಕ್ಕಿಳಿಸಿಯೂ ಕಾವ್ಯಾತ್ಮಕತೆಗೆ ಧಕ್ಕೆ ಬರದ ರೀತಿಯಲ್ಲಿ ಅದನ್ನು ವಿಜೃಂಭಿಸುವಂತೆ ಮಾಡಿದ ವೆಂಕಟರಮಣ ಐತಾಳರ ಅದ್ಭುತ ಪ್ರತಿಭೆ ನೋಡುಗರನ್ನು ಆವರಿಸಿತ್ತು.

ಕುವೆಂಪುರವರ ಶ್ರೀ ರಾಮಾಯಣ ದರ್ಶನಂ, ಕುಮುದೇಂದ್ರ ರಾಮಾಯಣ, ಪಾರ್ಥಿ ಸುಬ್ಬನ ಯಕ್ಷಗಾನ ಪ್ರಸಂಗ,..ಹೀಗೆ ಮಹಾ ಮಹಾ ಗ್ರಂಥಗಳನ್ನೆಲ್ಲ ತೆರೆದು, ನೋಡಿ,ಆಯ್ಕೆ ಮಾಡಿ,ಅಳೆದು-ತೂಗಿ,ಬೆಸೆದು ಕಲ್ಪಿಸಿಕೊಂಡು ರಂಗಕ್ಕೆ ತಂದು ನಮ್ಮ ಮನಸ್ಸು ತುಂಬಿಕೊಳ್ಳುವಂತೆ ಮಾಡಿ ಅಪೂರ್ವ ಅನುಭವವನ್ನು ಪ್ರೇಕ್ಷಕರು ತಮ್ಮದಾಗಿಸಿಕೊಳ್ಳುವಂತೆ ರೂಪಿಸಿದ ಐತಾಳರಿಗೆ ತುಂಬು ಧನ್ಯವಾದಗಳು.

ಅನಾಮತ್ತು ಎರಡು ಗಂಟೆ ನಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳುವಂತೆ ಅನಾವರಣಗೊಂಡ 'ಕನ್ನಡ ರಾಮಾಯಣ' ಅಚ್ಚಳಿಯದಂತೆ ಇರುತ್ತದೆ.ಅದೇ ಕಥೆ,ಅದೇ ಕಾವ್ಯ.. ಮತ್ತೆ ಮತ್ತೆ ನಮ್ಮನ್ನು ಮುಖಾ ಮುಖಿಯನ್ನಾಗಿಸಿಕೊಳ್ಳುತ್ತದೆ ರಾಮಾಯಣ. ಆ ಶ್ರೀರಾಮ,ಆ ಸೀತೆ,ಆ ಲಕ್ಷ್ಮಣ,ಆ ದಶರಥ ಮಹಾರಾಜ,ಅವನ ಅಸಹಾಯಕತೆ,ಮೋಹ,ರಾವಣನಂಥ ರಾವಣ,ಬಹುಷಃ ರಾಮನ ಆದರ್ಶಕ್ಕೆ ಪುಷ್ಠಿ ಒದಗಿಸಲೆಂದೆ,ಅದನ್ನು ಎಳೆ ಎಳೆಯಾಗಿ ಬಿಡಿಸಿಡಲೆಂದೆ ವಾಲ್ಮೀಕಿಯಿಂದ ಸೃಷ್ಟಿಯಾದ ರಾವಣ,ಕುಂಭಕರ್ಣ,ಕೈಕೇಯಿ ಒಂದೊಂದು ಪಾತ್ರಗಳು ವಿಸ್ತರಿಸಿದಷ್ಟೂ ಹಿಗ್ಗುವ ಅಥವಾ ಸಂಕ್ಷಿಪ್ತಗೊಳಿಸಿದಷ್ಟು ಕುಗ್ಗುವ ವ್ಯಕ್ತಿತ್ವಗಳನ್ನು ಸರ್ವಕಾಲದಲ್ಲೂ ನಮ್ಮ ನಿಮ್ಮ ನಡುವೆ ಇರುವ ಕೆಲವರಿಗೆ ಆರೋಪಿಸುವಂತಿರುವ,ಮಾಲೆ ಮಾಲೆಯಾಗಿ ಸರ್ವಕಾಲಕ್ಕೂ ಅಕರ್ಷಿಸುವ ಮೌಲ್ಯಗಳನ್ನೊಳಗೊಂಡ ರಾಮಾಯಣ.ಅದನ್ನು ವಿಭಿನ್ನವಾಗಿ,ಹೊಚ್ಚ ಹೊಸದೆನ್ನುವಂತೆ ಕಣ್ಣಿಗೆ ತುಂಬಿಕೊಟ್ಟಿದ್ದು ಈ ನಾಟಕದ ವೈಶಿಷ್ಟ್ಯತೆ.

ನಾಟಕದಲ್ಲಿನ ನಟರ ಸಾಮರ್ಥ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಅವರ ಆಂಗಿಕ ಅಭಿನಯ,ಮುಖಭಾವ,ಅವರ ಪವರ್ ಫುಲ್ ಎಂಟ್ರಿ,ಸುಲಲಿತವಾಗಿ ಹೇಳಿದ ಆ ಕ್ಲಿಷ್ಟ ಕನ್ನಡ,ದೃಶ್ಯಕ್ಕೆ ತಕ್ಕಂತೆ ಮೂಡುತ್ತಿದ್ದ ಬೆಳಕು,ಸಂದರ್ಭಕ್ಕನುಗುಣವಾಗಿ ಕೇಳಿಬರುತ್ತಿದ್ದ ರಂಗ ಸಂಗೀತ. ಅಲ್ಲಿ ಯಾವ ಕೊರತೆಯೂ ನನಗೆ ಕಂಡುಬರಲಿಲ್ಲ.. ಪ್ರೇಕ್ಷಕರ ಚಪ್ಪಾಳೆಯೂ ಸಹ.

ಕನ್ನಡ ರಂಗಭೂಮಿ ೨೧ ಶತಮಾನಕ್ಕೆ ಕಾಲಿಟ್ಟು ೭ ವರ್ಷಗಳಾದವು.ಈ ನಾಟಕ ನೋಡಿದ ಮೇಲೆ ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡಬೇಕು ಅನ್ನಿಸುತ್ತಿಲ್ಲ.ಸ್ಪರ್ಧೆ ಹೇಗೇ ಇರಲಿ,ಯಾವುದೇ ರಿತಿಯದಾಗಿರಲಿ ಅದನ್ನೆಲ್ಲ ಎದುರಿಸುವ ಶಕ್ತಿ ಸಾಮರ್ಥ್ಯ ನಮ್ಮ ಕನ್ನಡ ರಂಗಭೂಮಿಗಿದೆ.ಮುಂದಿನ ದಿನಗಳಲ್ಲಿ ರಾರಾಜಿಸಲಿ ನಮ್ಮ ರಂಗಭೂಮಿ.
-ಪ್ರಸಾದ ಹೆಗಡೆ.

  • ನಾಟಕ
~.~
  • Login or register to post comments
  • 653 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 28, 2007 - 1:40pm — ಪ್ರಶಾಂತ.ಪಂಡಿತ

Re: ಕನ್ನಡ ರ೦ಗದಲ್ಲಿನ ರಾಮಾಯಣ

ಪ್ರಶಾಂತ.ಪಂಡಿತ's picture

ನಿಜ, ಬಹಳ ದಿನಗಳ ನಂತರ ಒಂದು ಒಳ್ಳೆಯ ಪ್ರಯೋಗ ನೋಡಿದಂತಾಯ್ತು. ನನ್ನ ದೃಷ್ಟಿಯಲ್ಲಿದು ಈ ಸಲದ ತಿರುಗಾಟದ “ಬಿರುಗಾಳಿ”ಯಂತಹ ಪ್ರಯೋಗಕ್ಕೆ ತಕ್ಕ ಉತ್ತರದಂತಿತ್ತು. ಮಜಾ ಎಂದರೆ ಅದನ್ನೂ ಇದೇ ಕಲಾವಿದರು ಪ್ರಸ್ತುತ ಪಡಿಸಿದ್ದರು !! ಅಲ್ಲಿಯೂ ಹಳೆಗನ್ನಡದಲ್ಲಿ ನಿರರ್ಗಳವಾಗಿ ಮಾತಾಡುತ್ತಾ ಅಧ್ಬುತ ಆಂಗಿಕ, ಭಾವಾಭಿನಯ ತೋರಿದ್ದರೂ ಆ ಪ್ರಯೋಗದ ಕಣ್ಣು ಕುಕ್ಕುವ (ಅನಗತ್ಯ) ವೈಭವ ಅವರ ಶ್ರಮವನ್ನೆಲ್ಲ ನುಂಗಿಹಾಕಿತ್ತು. ಅದು ನಿರ್ದೇಶಕರ ಸೋಲು, ನಟರದ್ದಲ್ಲ. ಕೆಲ ಸಣ್ಣ ಪುಟ್ಟ ಕೊರತೆಗಳನ್ನು ಹೊರತುಪಡಿಸಿದರೆ, “ಕನ್ನಡ ರಾಮಾಯಣ” ಒಂದು ಸಾರ್ಥಕ ಪ್ರಯೋಗ. ಕಲಾವಿದರೆಲ್ಲರೂ ಅವರ ಕೀರ್ತಿಗೆ, ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನೇ ನೀಡಿದ್ದಾರೆ. ಯಾವ ಆಡಂಬರದ ಅಗತ್ಯವಿಲ್ಲದೆ ಕನಿಷ್ಠ ಪರಿಕರ, ನಟರ ಸಾಮರ್ಥ್ಯ ಇವಿಷ್ಟೇ ಕೊನೆಗೂ ಒಂದು ಒಳ್ಳೆಯ ನಾಟಕದ ಅಗತ್ಯಗಳು ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ.

ಕೊನೆಯಲ್ಲಿ ಅಡಿಗರ “ಶ್ರೀರಾಮನವಮಿಯ ದಿವಸ”ದ ಸಾಲುಗಳನ್ನು ಬಳಸಿದ ರೀತಿಯಂತೂ ಅಧ್ಬುತ. ಕವಿ ವಾಲ್ಮೀಕಿಯ ತಳಮಳದಿಂದ ಶುರುವಾಗುವ ಮಹಾಕಾವ್ಯ (ನಮ್ಮಕಾಲದ) ಕವಿಯ ತಳಮಳದೊಂದಿಗೆ ಮುಕ್ತಾಯವಾಗುವ ಬಗೆಯಲ್ಲೇ ಐತಾಳರ ಮತ್ತು ಈ ತಂಡದ ಸದಸ್ಯರೆಲ್ಲರ ಸೃಜನಕ್ರಿಯೆಯ ಶಕ್ತಿ, ಈ ರಂಗಪ್ರಯೋಗದ ಸಾರ್ಥಕತೆಯಿರುವುದು.

ಕನ್ನಡ ರಂಗಭೂಮಿಯ ಭವಿಷ್ಯದ ಬಗ್ಗೆ ನನಗಂತೂ ಅಪಾರ ಭರವಸೆಯಿದೆ. ನನ್ನ ಈ ನಿಲುವನ್ನು ಸಮರ್ಥಿಸಲೋ ಎಂಬಂತೆ ಆಗೀಗ ಇಂತಹ ಪ್ರಯೋಗಗಳು ನಡೆಯುತ್ತಲಿವೆ. ಇತ್ತೀಚೆಗೆ ನನ್ನನ್ನು ತೀವ್ರವಾಗಿ ತಟ್ಟಿದ ಹಾಗು ಇನ್ನೂ ಕಾಡುತ್ತಲೇ ಇರುವ ಇನ್ನೊಂದು ಪ್ರಯೋಗ “ಉಚಲ್ಯಾ”.

- ಪ್ರಶಾಂತ್ ಪಂಡಿತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 2:12pm — hpn

ಕನ್ನಡ ರ೦ಗದಲ್ಲಿನ ರಾಮಾಯಣ

hpn's picture

"ರಾವಣನಂಥ ರಾವಣ"

Smiling

ಕಪ್ಪಾಗಿರುವ ಕಪ್ಪು, ಬಿಳುಪಾಗಿರುವ ಬಿಳುಪು, ತಮಾಷೆಯಾಗಿರುವ ತಮಾಷೆ ಎಂದಂತಾಯಿತು. Eye-wink

****

ಕನ್ನಡ ರಂಗಭೂಮಿಯ ಬಗ್ಗೆ ಹೆಚ್ಚು ಬರಹಗಳನ್ನು ನಾನು ಓದಿಲ್ಲ. ಚಿಕ್ಕದಾದರೂ ನಿಮ್ಮ ಈ ಬರಹ ಓದಲು ಬಹಳ ಆಸಕ್ತಿ ಮೂಡಿಸಿತು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 2:35pm — ಸಂಗನಗೌಡ

Re: ಕನ್ನಡ ರ೦ಗದಲ್ಲಿನ ರಾಮಾಯಣ

ಸಂಗನಗೌಡ's picture
  • "ರಾವಣನಂಥ ರಾವಣ"

Smiling ಮನಗಂಡ(beautiful) ಬಳಕೆ ಇದು.

ಯಾರಾದರೂ ತಪ್ಪು ಮಾಡಿದವರಿಗೆ, "ರಾವಣನಂಥ ರಾವಣಾನೇ ಮಣ್ಣಾದ, ನೀನ್ಯಾವ ಲೆಕ್ಕ" ಅನ್ನುವಲ್ಲಿ ಇಂತ ಬಳಕೆ ಬರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 2:39pm — mahesha

Re: ಕನ್ನಡ ರ೦ಗದಲ್ಲಿನ ರಾಮಾಯಣ

mahesha's picture

ಒಂದು ಐಬು(ಅನುಮಾನ).....

ಇದೇ ಬಗೆಯಲ್ಲಿ "ರಾಮನಂತು ರಾಮ", "ಆಕಳಂತು ಆಕಳು" ಹೀಗೆ ಕನ್ನಡದಲ್ಲಿ ಇದೆಯೋ?
ಇಲ್ವೇ..
ಇದು ಬರಿ "ರಾಮಣನಂಥ ರಾವಣ" ಎನ್ನುವ ಬರಿ ಒಂದು ಬಳಕೆಯೋ?

ಗ್ರಾಮರ್‍ ಸಾರ್‍ ಗ್ರಾಮರ್ರು‍.. Laughing out loud

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 2:43pm — ಸಂಗನಗೌಡ

Re: ರಾಮನಂಥ ರಾಮ

ಸಂಗನಗೌಡ's picture

ಮಾದರಿಗಳು- 

ರಾಮನಂಥ ರಾಮನಿಗೇ ವನವಾಸ ತಪ್ಪಲಿಲ್ಲ, ಇನ್ನು ಹುಲು ಮಾನವರ ಪಾಡೇನು?

ದೇವರಂಥ ದೇವರಿಗೂ ಕಷ್ಟಗಳೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 2:47pm — mahesha

Re: ರಾಮನಂಥ ರಾಮ

mahesha's picture

ನನ್ನಿ.... ಗೌಡರಂಥಾ ಗೌಡರಿಗೆ Laughing out loud

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 5:07pm — ismail

ನಾಗಪ್ಪನಂಥಾ ನಾಗಪ್ಪ

ismail's picture

ಯಶವಂತ ಚಿತ್ತಾಲರ ಕಾದಂಬರಿಗಳನ್ನು ಓದಿದವರಿಗೆ ನಾಗಪ್ಪನಂಥಾ ನಾಗಪ್ಪನೂ ಸಿಗುತ್ತಾನೆ.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 31, 2007 - 2:01pm — prasadhegde

Re: ನಾಗಪ್ಪನಂಥಾ ನಾಗಪ್ಪ

prasadhegde's picture

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..ಎಲ್ಲ ಸ್ನೇಹಿತರಿಗೆ...ಶ್ರೀಯುತ ಇಸ್ಮಾಯಿಲ್ ಅವರು ,ಚಿತ್ತಾಲರ ಕಾದಂಬರಿಯನ್ನು ಪ್ರಸ್ತಾಪಿಸಿದ್ದಾರೆ..ನಾನು ಅವರ ಕಾದಂಬರಿಗಳನ್ನು ಓದಿಲ್ಲ..ಖಂಡಿತವಾಗಿ ಓದುತ್ತೇನೆ..ನಿಮ್ಮ ಮಾರ್ಗದರ್ಶನ ಯಾವತ್ತು ಇರಲಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 1, 2007 - 6:35pm — radhakrishna an...

Re: ನಾಗಪ್ಪನಂಥಾ ನಾಗಪ್ಪ

radhakrishna anegundi's picture

ಈ ಲೇಖಕನನ್ನು ತೀರಾ ಹತ್ತಿರದಿಂದ ಕಂಡವನು ನಾನು ನನಗೆ ಅದೊದು ಕೋಡು ಕೂಡಾ ಅಹುದು. ಆದರೆ ಪ್ರಸಾದ್ ಹೆಗ್ದೆಯಂತ ಹೆಗ್ಡೆ ಆನೆಗುಂಡಿಯಂತಹ ಆನೆಗುಂಡಿ ಆಗುವುದಿಲ್ಲವಲ್ಲ. ಇದು ನನ್ನನ್ನು ಇಂದಿಗೂ ಕಾಡುತ್ತಿದೆ. ನಾಟಕ ನೋಡಬಲ್ಲೆ ಅಸ್ವಾದಿಸಬಲ್ಲೆ ಆದರೆ ನಿಮ್ಮಂತೆ ಬರೆಯಲಾರೆ ಇನ್ನು ಬರೆಯಿತ್ತಿರಿ.

ಕನಸು ಆನೆಗುಂಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಮಾಯಣದೊಳಗೆ ಮತ್ತೊಮ್ಮೆ ಹೊಕ್ಕಾಗ...
  • ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
  • ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
  • ರಾಮಾಯಣ ಕಟ್ಟು ಕಥೆಯೇ??
  • ಮಿನಿ ರಾಮಾಯಣ
Syndicate content

ಲೇಖಕರು

prasadhegde's picture

ಪರಿಚಯ

ಮಾಧ್ಯಮಕ್ಷೇತ್ರದಲ್ಲಿ ವೃತ್ತಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಿಡುಗಡೆಯ ನಂತರದ ಬೇಡಿಗಳು (೩)
  • ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!
  • ಬಿಡುಗಡೆಯ ನಂತರದ ಬೇಡಿಗಳು (೨)
  • ‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!
  • ಫೈರ್ಫಾಕ್ಸಿನಲ್ಲಿ ಉದಯವಾಣಿಯನ್ನು ಓದುವ ಬಗ್ಗೆ
  • (Liberty Bell) ಸ್ವಾತಂತ್ರ್ಯದ ಕುರುಹಾದ ಘಂಟೆ !
  • ಬಿಡುಗಡೆಯ ನಂತರದ ಬೇಡಿಗಳು (೧)

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 55 ಅತಿಥಿಗಳು ಆನ್ಲೈನ್ ಇರುವರು.


ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator