ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

March 29, 2007 - 3:11pm — krishnamurthy bmsce

"ನನಗೊಂದು ಹೆಣ್ಣು ಬೇಕು   

ಅವಳು ಈಗಿರಬೇಕು(ಹೀಗಿರಬೇಕು)"

ಮನದ ಮೃದಂಗ ಮೀಟಿ

ಎದೆಯಲ್ಲಿ ಪ್ರೇಮರಾಗ ಮಿಡಿವಂತೆ  

ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು

ಅಂದಕಾರದ ಬದುಕಿಗೆ ಬೆಳಕಾಗಬಲ್ಲ

ಅರಿವಿನ ಅ(ಹ)ರಿಣಿ ಅವಳಾಗಬೇಕು

ಜೀವಕ್ಕೆ ಉಸಿರು-ಹಸಿರಾಗ ಬಯಸುವ

ಚೈತ್ರ ಚಲುವ ಹೆಣ್ಣಾಗಿರಬೇಕು

ಬರಡಾದ ಬದುಕಿಗೆ ಜೀವಕಳೆಯ

ತುಂಬಬಲ್ಲ ಹೆಣ್ಣು ಅವಳಾಗಬೇಕು   

ಬತ್ತಿದೆದೆಯಲ್ಲಿ ಬರವಸೆಯ ಜಲವ

ತುಂಬುವಂತಹ ತರುಣಿ ಅವಳಾಗಬೇಕು

ಮನದ ಮೌನ ಮುರಿದು ಜೀವದಲಿ

ಹೊಸಕಳೆಯ ತರಬಲ್ಲ ಹುಡುಗಿಯಾಗಬೇಕು

ಮನದ ಬಾವ ಅರಿತು ನಡೆವ ನುಡಿವ

ನವ ತರುಣಿಮಣಿ ಅವಳಾಗಬೇಕು

ಮನದ ಹಸಿವು-ದಾಹಗಳ ಅರಿತು

ತೀರಿಸ ಬಲ್ಲ ಹೆಣ್ಣು ಅವಳಾಗಲುಬೇಕು 

ವನಪು ವಯ್ಯಾರ ಮರೆತಿರಬೇಕು

ಒಲವು-ಛಲವು ಜೊತೆಗಿದ್ದರೆ ಸಾಕು

ಬೆಳ್ಳಿಗೆಜ್ಜೆ ಯಾರಿಗೆ ಬೇಕು

ಒಳ್ಳೆ ಲಜ್ಜೆ ಅವಳಿಗಿದ್ದರೆ ಸಾಕು

ಮುತ್ತು ರತ್ನ ಯಾರಿಗೆ ಬೇಕು 

ಮುಗುಳ್ನಗೆ ಸದಾಇರಲಿ ಸಾಕು

ಸಿರಿ ಸಂಪತ್ತು ಯಾಕೆ ಬೇಕು

ಸನ್ನಡತೆಯಲಿ ಎನ್ನ ಪ್ರೀತಿಸುತಿರೆ ಸಾಕು

-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ

  • ಕಾವ್ಯ ಮತ್ತು ಕವನ
~.~
  • Login or register to post comments
  • 807 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 5, 2007 - 8:34am — poornimas

Re: ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

poornimas's picture

namaskaara,

nimma kavanagaLannu Odide, chennAgive.

aMda haage, naanu kudUrinavaLu. nimma parichayadalli ajjaLLiyavaru aMta ittalla, haagE maatADisalu mail maaDuttiddEne.

kuDuru shAleyalli Odidraa? yaava varSha?

vaMdanegaLu
poornima

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 3:57pm — krishnamurthy bmsce

Re: ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

krishnamurthy bmsce's picture

ಪೂರ್ಣಿಮಾ ರವರೇ ಹೌದು ನಾನು ಕುದೂರಿನ ಬಳಿ ಇರುವ ಅಜ್ಜಹಳ್ಳಿ ಯಲ್ಲಿ ಹುಟ್ಟಿದವನು ನಾನು ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ  ಕುದೂರಲ್ಲೇ ಓದಿದೆ ೧೯೮೬ರಲ್ಲಿಎಸ್ ಎಸ್ ಎಲ್ ಸಿ ೧೯೯೦ಪಿ ಯು ಸಿ  ಸರ್ಕಾರಿ ಪದವಿ ಪೂರ್ವ ಕಾಲೇಜು  ಹಾಗೆ ನಿಮ್ಮ ಊರು ತಿಳಿಸಿಮತ್ತು ಯಾವ ವರ್ಷ ನೀವು ಕುದೂರಿನಲ್ಲಿ ಓದಿದ್ದು

 ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 11:45am — krishnamurthy bmsce

Re: ಹಲೋ ಪೂರ್ಣಿಮಾ.........

krishnamurthy bmsce's picture

ಹಲೋ ಪೂರ್ಣಿಮಾ.........

ಹೇಗಿದೆ ನಮ್ಮೂರು ಹೇಗಿದ್ದಾರೆ ನಮ್ಮೂರೊರು

ಈಗ ಏಗಿದ್ದಾರೆ ನಮ್ಮೂರ ಜನ ಕುದೂರ ಜನ "ಪ"

ಊರಿನುದ್ದಾರಕ್ಕಾಗಿ ಶ್ರಮ ಪಡೊರಿದ್ದಾರಾ !

 ಶಾಲೆ,ಕಾಲೇಜು,ಆಸ್ಪತ್ರೆ,ಬ್ಯಾಂಕು ಹೈಟೆಕ್ ಮಾಡವರ "ಹೇಗಿದೆ"

ತುಮಕೂರ್ ರಸ್ತೆ,ಶಿವಗಂಗೆ ರಸ್ತೆ.ಮರೂರ್ ರಸ್ತೆ

ಬಿಸ್ಕೂರ್ ರಸ್ತೆ,ಸೋಲೂರ್ ರಸ್ತೆ ಸರಿಯಾಗಿ ಮಾಡವರ  "ಹೇಗಿದೆ"

ಲಕ್ಷ್ಮಮ್ಮ,ಕನ್ನಿಕಾ ಪರಮೇಶ್ವರಿ,ಆಂಜನೇಯ,ಲಕ್ಷ್ಮಿನರಸಿಂಹ ಸ್ವಾಮಿ   

ಜಾತ್ರೆ ವೈಬವ ದಿಂದ ಮಾಡ್ತಾರ ಶ್ರೀರಕ್ಷೆ ಬಿಡದೆ ಪಡೆದವರ "ಹೇಗಿದೆ" 

ರಾಜ್ಯೋತ್ಸವ,ಸ್ವಾತಂತ್ರ ನಾಡಹಬ್ಬ ಮಾಡ್ತಾರ

ಆ ಪಕ್ಷ ಈ ಪಕ್ಷ ಅನ್ಕೋಂಡು ಕಿತ್ತಾಡೊದ ಮರೆತವರ "ಹೇಗಿದೆ"

ಈ ಮೇಲು ಇಂಟರ್ ನೆಟ್ಟು ಬ್ರಾಡ್ ಬ್ಯಾಂಡು ಕಂಪ್ಯೂಟರು  

ತಾಂತ್ರಿಕ ಶಿಕ್ಷಣದ ಅನುಕೂಲ ಮಾಡವರ ಓದುವಂತ

ಹುಡುಗರಿಗೆ ಅವಕಾಶ ಕೊಟ್ಟವರ     "ಹೇಗಿದೆ"

ದಾಕ್ಷಾಯಣಮ್ಮ ಯತಿರಾಜು ಬಾಲರಾಜು ಹನುಮಂತಪ್ಪ

ನಂತವರು ಒಟ್ಟಾಗಿ ಕುದೂರಿನೇಳ್ಗೆಗಾಗಿ ದುಡಿತಾವರ  "ಹೇಗಿದೆ"

ಸರ್ಕಾರಿ ಶಾಲಾ ಕಾಲೇಜಿನ ಫಲಿತಾಂಶ ಹೇಗಿದೆ

ಖಾಸಗಿ ಶಾಲಾ ಕಾಲೇಜಿನ ಫಲಿತಾಂಶ ಹೇಗಿದೆ     "ಹೇಗಿದೆ"

ಚಿತ್ರ ಮಂದಿರಗಳ ಹೈಟೆಕ್ ಮಾಡವರ ಹೊಟೆಲ್ ಗಳ ಶುಚಿಯಾಗಿ ಇಟ್ತವರ

ಆರೋಗ್ಯ ಕೇಂದ್ರ ಹೇಗಿದೆ ಖಾಸಗಿ ಕ್ಲಿನಿಕ್ ನಲ್ಲಿ ಟ್ರೀಟ್ ಮೆಂಟು ಎಲ್ಲಿ ಸುಲಬದಲ್ಲಿ ಸಿಗ್ತದೆ              "ಹೇಗಿದೆ"

ವಿವೇಕಾನಂದ ಸಂಘದವರು ಸಾಂಸ್ಕೃತಿಕ,ಸಾಮಾಜಿಕ ಕಾರ್ಯಕ್ರಮ ಬಿಡದಂತೆ ಮಾಡ್ತಾರ

ಶಾರದಾ ಮಹಿಳಾ ಸಮಾಜದವರು ತರಬೇತಿ ನಿಲ್ಲಿಸ್ ದೇ ಮಾಡ್ತಾರ

ಬ್ರಂಹ ಕುಮಾರೀಸ್ ಕಾರ್ಯ ವೈಖರಿ ಹ್ಯಾಗಿದೆ "ಹೇಗಿದೆ"

ಕೊನೆದಾಗಿ ನನದೊಂದು ರಿಕ್ವೆಸ್ಟು ತಗೊಳಿ

ವೈ ಎನ್ ವಿ ಸಿಕ್ಕಿದ್ರೆ ನನ್ನ ವಂದನೆ ಹೇಳ್ಬಿಡಿ

ರಘು ಡಾಕ್ಟರ್ ಸಿಕ್ಕಿದ್ರೆ ನಿಮ್ಮ ಶಿಷ್ಯ ನಿಮ್ಮ ಕೇಳಿದ ಅಂದ್ ಬಿಡಿ

ನಮ್ಮೂರ ದೇವಾನು ದೇವತೆಗಳಿಗೆಲ್ಲ ನೀವು ಅಲ್ಲಿಗೋದಾಗ

ನನ್ನ ಭಕ್ತಿಪೂರ್ವಕ ನಮನಗಳ ಹೇಳ್ಬಿಡಿ  ನಿಮ್ಮ ಅನಿಸಿಕೆ

ಮರೀದೆ ಬರೆದ್ ಬಿಡಿ  

-ವೆಂ ಕೃ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ  ಬೆಂಗಳೂರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 11:45am — mahesha

ನಗೆ : ಮನದ ಮೃದಂಗ ಮೀಟಿ

mahesha's picture

ಸಾರ್‍

ವೀಣೆನೋ, ಪಿಟೀಲೋ ಮೀಟಬೋದು...

ಮೃದಂಗನ ಬಡೀಬೇಕು, ಭಾರಿಸಬೇಕು Laughing out loud

"ಮನದ ಮೃದಂಗವ ಮಟುಕೀ Laughing out loud " - ಜೋಕು...
.
.
.
ಪೋಯೆಮ್ ಸೂಪರ್‍ !!! ನಿಮ್ಮ "ಡವ ಡವ" ಸೀರೀಸಿನ ಮುಂದಿನ ಪೊಯೆಮ್ಮಾ?Smiling

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 4:04pm — krishnamurthy bmsce

Re: ನಗೆ : ಮನದ ಮೃದಂಗ ಮೀಟಿ

krishnamurthy bmsce's picture

ಸರಿ ಇನ್ನು ಮುಂದೆ ಬಡಿದು ಬಾರಿಸೋಣ ನಿಮ್ಮ ಅನಿಸಿಕೆ ಸರಿ  ಮಿತ್ರರೇ  ನಿಮ್ಮ ಪ್ರತಿಕ್ರಿಯೆಗೆ ನಮ್ಮ ವಂದನೆಗಳು

ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 10, 2007 - 1:27am — hamsanandi

Re: ನಗೆ : ಮನದ ಮೃದಂಗ ಮೀಟಿ

hamsanandi's picture

ವೀಣೆಯನ್ನ , ತಂಬೂರಿಯನ್ನ ಮೀಟಬಹುದು

ಪಿಟೀಲನ್ನು ನುಡಿಸಬೇಕು- ಮೀಟಲಾಗದು Smiling

ಮೃದಂಗವನ್ನು ಬಾರಿಸಬಹುದಾದರೂ, ನುಡಿಸು ಎಂದರೆ ಕೇಳಲು ಚೆನ್ನಾಗಿರತ್ತೆ. ಬಡಿಯುವುದು ಮಾತ್ರ ಬೇಡವೇ ಬೇಡ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 10, 2007 - 2:32am — mahesha

Re: ನಗೆ : ಮನದ ಮೃದಂಗ ಮೀಟಿ

mahesha's picture

ಪಿಟೀಲನ್ನು ಮೀಟುವುದೂ ಉಂಟು... ಬೆರಳಿಂದಲೂ, ಆ ಅಡ್ಡದ ಕಡ್ಡಿಯಿಂದಲೂ...

ಮೀಟು ಅಂದರೆ ತಿವು, to poke...

ಅದ್ ಯಾರೋ ಹಣೆಗೆ ದೊಡ್ಡದಾಗಿ ಕೆಂಪಿಡುತ್ತಾರಲ್ಲ, ಆ ತಮಿಳಯ್ಯನ ಕಚೇರಿಗಳನ್ನು ನೋಡಿ.

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 10, 2007 - 7:57am — ASHOKKUMAR

Re: ನಗೆ : ಭಾರಿಸ್ಬೇಡಿ ಎಂದರೂ...

ASHOKKUMAR's picture

ಇತ್ತೀಚೆಗೆ ನಾಡಿಗ್ ’ಭಾರಿಸಬೇಡಿ’ ಎಂದು ಕಿವಿಮಾತು(ತೂತು) ಹೇಳಿದರೂ ಮತ್ತೆ ಭಾರಿಸಿದ್ದೀರಲ್ಲಾ..ಮಹೇಶ್‍ಜೀ...?Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 10, 2007 - 12:21pm — mahesha

ನಿಮಗ್ಯಾಕೆ ನನ್ನ ಚಿಂತೆ?

mahesha's picture

ಅಣ್ಣ!!!

ಅದನ್ನು bold ಮಾಡಿ ಬರೆದಿರೋದು ಕಾಣ್ಸಲ್ವ?

HPN ಹೇಳಿದ ಸರಿ. ಅದಕ್ಕೆ?
HPNಗೂ ಗೊತ್ತು ಅಲ್ಲಿ bold ಇರೋದು

ನಾನು ನಿಮ್ಮ ಹಾಗೆ ನಿಮ್ಮ spelling mistakeಗಳನ್ನು ಹುಡುಕ-ಹತ್ತಿದ್ರೆ, ಆಮೇಲೆ ನಿಮಗೆ ದೊಡ್ಡ ತಲೆ ನೋವು. ಹುಸಾರ್‍ Laughing out loud

ನಿಮಗ್ಯಾಕೆ ನನ್ನ ಚಿಂತೆ?( ಇದು ಎರಡನೇ ಸರತಿ ನನ್ನಿಂದ ನೀವು ಹೇಳಿಸ್ಕೊತಾ ಇರೋದು Smiling )

ನಾನು ಮಹೇಶ್‌ಜೀ ಅಲ್ಲ. 'ಮಹೇಶ' ಆಟೇ. ನನ್ನ ಹೆಸರ ಜೊತೆ ಆಟ ಆಡಿದರೆ, ನನಗೆ ಭಾರಿಸಬೇಕು ಅನ್ಸುತ್ತೆ Smiling
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.
  • ಎರಡೇ ಸಾಕು
  • ದೊಡ್ಡವರಿಗಾಗಿ ಮಕ್ಕಳ ಹಾಡು "ನಾಯಿಮರಿ, ನಾಯಿಮರಿ, ತಿಂಡಿಬೇಕೆ?"
  • ಎಂದು ಹೇಳೀ ಹೇಳಿಯೇ
  • ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
Syndicate content

ಲೇಖಕರು

krishnamurthy bmsce's picture

ಪರಿಚಯ

ನಾನು ಅಜ್ಜಹಳ್ಳಿ ಕುದೂರು ಹೋಬಳಿ,ಮಾಗಡಿ ತಾಲೋಕು,ಬೆಂಗಳೂರು ಗ್ರಾಮಾಂತರಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು ನನ್ನ ವಿದ್ಯಾಬ್ಯಾಸ (ಬಿ ಎ )ಕನ್ನಡ ಸದ್ಯಕ್ಕೆ ಬೆಂಗಳೂರಿನಲ್ಲಿ ಒಂದು ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ
ಸಹಾಯಕನಾಗಿ ಕಳೆದ ಐದು ವರ್ಷಗಳಿಂದ ಸೇವೆ ಸಲಿಸುತ್ತಿದ್ದೇನೆ ನನ್ನ ಹವ್ಯಾಸ ಚುಟುಕಗಳ ಬರವಣಿಗೆ,ಹನಿಗವನಗಳ ರಚನೆ,ಸಣ್ಣಕಥೆಗಳ ರಚನೆ,ನುಡಿಮುತ್ತುಗಳ ರಚನೆ,ಮತ್ತು ಸಂಗ್ರಹ ಇತ್ಯಾದಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹನಿಗವನಗಳು
    July 9, 2008 - 3:28pm
  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator