ಜಾನಪದಶೈಲಿಯ ಗೀತೆ
ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ
ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ
ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ
ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "ಪ"
ಹುಡುಗನ ಕಂಡ ಹುಡುಗಿ ಬೆಚ್ಚಿ ದೂರ ಸರಿದಿತ್ತ
ಎಲೆಯ ಮರೆಯಲಿ ನಿಂತು ಹುಡುಗನ ಕದ್ದು ನೋಡತಿತ್ತ
ಹುಡುಗಿ ತೊಟ್ಟಿದ್ದ ಲಂಗ ದಾವಣಿ ಹುಡುಗನ ಮನದ ಕದವನ ತಟ್ಟಿತ್ತ "ಹ"
ಎದ್ದು ಬರುವಂತಿದ್ದ ಉಬ್ಬು-ತಗ್ಗಿಗೆ ಹುಡುಗನ ಮನವು ಉಬ್ಬಿ ಹೊಗಿತ್ತ
ಹುಡುಗನ ಕಣ್ಣು ಹುಡುಗಿಯ ಉದ್ದ ಅಗಲ ಲೆಕ್ಕ ಹಾಕತಿತ್ತ
ಅದನು ಕಂಡ ಹುಡುಗಿಯ ಕಾಲು ನೆಲದಿ ರಂಗೊಲಿ ಹಾಕತಿತ್ತ "ಹ"
ಬಾಯತೆರೆದು ಮಾತಾಡಲೊದ ಹುಡುಗನ ಗಂಟಲೆ ಹಿಡಿದಿತ್ತ
ಬಯದಲಿ ಹುಡುಗನ ಕೈಕಾಲು ನಡುಗಿತ್ತ
ತೊದಲುತ-ಅಂಜುತ ಹುಡುಗಿ ಕೈಯ ಹಿಡಿದಿತ್ತ
ಹಿತವಾಗಿ ಉಲಿದ ಹುಡುಗಿಯ ಕಂಡ ಹುಡುಗನ ಮನ ಮುದವಗೊಂಡಿತ್ತ "ಹ"
ಬಳ್ಳಿ ಮರವ ಬಳಸಿದಂತೆ ಹುಡುಗಿ ಹುಡುಗನ ಬಾಚಿತಬ್ಬಿತ್ತ
ನಾಚಿ ನಡುಗುತ ಮೆಲ್ಲನೆ ನಗುವ ಚಿಮ್ಮಿತ್ತಾ
ಪ್ರೀತಿಯು ಹೊಮ್ಮಿ ಹೊಳೆಯಾಗಿ ಹರಿದಿತ್ತಾ "ಹ"
_ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ

- Login or register to post comments
- 952 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಜಾನಪದಶೈಲಿಯ ಗೀತೆ
ಇದನ್ನು ಓದಿದ ಹುಡುಗ-ಹುಡುಗಿಯರ ಎದಿ ಡವ ಡವ ಅಂದಿತ್ತ.
Re: ಜಾನಪದಶೈಲಿಯ ಗೀತೆ
ಇದು ಭಾಳ್ ಭೇಷ್ ಜಾನಪದಶೈಲಿ ಐತಿ
ಆ ಹುಡುಗೀ ಯಾಕ್ ದನ ಮೇಯ್ಸಕ್ಕ ಹತ್ತಿತ್ತ? ಹುಡುಗೂರ್ ಮೇಯ್ಸೋದು ದನಗಳ್ನ.
ಗೊಲ್ಲ ಇರ್ತಾನ, ಗೊಲ್ಲಿ ಇರಲ್ಲ!
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
Re: ಜಾನಪದಶೈಲಿಯ ಗೀತೆ
ಮಹೇಶ್ ಅವರೆ ನನ್ನ ಕವನಕ್ಕೆ ಸ್ಪೂರ್ತಿ ನಮ್ಮೊರಿನ ದನ ಮೇಯಿಸುವ ಹುಡುಗಿಯರು ಅವರೊಂದಿಗೆ ನಾನು ದನಕಾಯುವಾಗ ಆದ ಅನುಬವ ಇಲ್ಲಿ ಬರೆದಿದ್ದೇನೆ ಎಲ್ಲರ ಮನೆಯಲೂ ಗಂಡು ಮಕ್ಕಳೆ ಇರಬೇಕೆಂದೇನು ಇಲ್ಲವಲ್ಲ ಈ ಗೀತೆಯನ್ನು ನಾನು ಕೇಳಿರುವ "ಕಲಿತ ಹುಡುಗಿ ಕುದುರಿ ನಡಿಗಿ ಹಿಡಿದು ಬರತಿತ್ತ" ಗೀತೆಯ ಗುಂಗಲ್ಲೇ ಬರೆದದ್ದು ನಿಮ್ಮ ಗೊಲ್ಲ -ಗೊಲ್ಲಿಯರ ವಿವರ ನಾ ಯೋಚಿಸಲಿಲ್ಲ.
-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ
Re: ಜಾನಪದಶೈಲಿಯ ಗೀತೆ
ಅಯ್ಯೋ ಸಾರ್.....
ದನಕಾಯೋ ಹುಡುಗಿ ಇರಲಿ, ಆಕಳುಗಳ ನಡುವೆ ಅಂದದ ಬೆಡಗಿ concept ಚೆನ್ನಾಗಿದೆ( ಅದಕ್ಕೇ ಭೇಷೈತಿ ಅಂದುದು )

... ಅದು ಒಂದು ತೆರ "ಸಮಾಜ ಸುಧಾರಣೆ", women empowerment
ಅಲ್ಲಿ ನಾನು ಸುಮ್ನೆ ಹೀಗೆ ತಮಾಸೆಗೆ ಅಂದೆ. ನಿಮ್ಮ ಹಳ್ಳಿ ಬಹಳ forward ಮತ್ತು safe ಅಂತ ಅನ್ಸುತ್ತೆ.
ನಮ್ಮ ಹಳ್ಳಿಯಾಗೆ ಹೆಣ್ಣುಗಳು ದನಕಾಯೋದು, ಕುರಿ ಕಾಯೋದಕ್ಕೆ ಬಯಲಿಗೆ, ಅಡವಿಗೆ ಹೋಗಲ್ಲ, ದಿಗಿಲು. !!! ಅವರು ಏನಿದ್ರು ಹಟ್ಟಿಗೆ ಬಂದ ಆಕಳಿಂದ ಹಾಲು ಹಿಂಡೋರು, ಮೊಸರು ಕಡೆಯೋರು, ಬೆಣ್ಣೆ-ತುಪ್ಪ ಕಾಸಿ ಅಡುಗೆ ಮಾಡೋರು, ಬೋಸಿ-ಗಿಂಡಿ ತೊಳೆಯೋರು.
. ಅದಕ್ಕೆ ನಂಗೆ ತುಸು ಸೋಜಿಗ ಆಯ್ತು.
"ನಾನು ದನಕಾಯುವಾಗ ಆದ ಅನುಬವ ಇಲ್ಲಿ ಬರೆದಿದ್ದೇನೆ "
ನಿಮ್ಮ ಅದೃಷ್ಟ, ಭಾಗ್ಯ, ಸಕ್ಕತ್.
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
Re: ಜಾನಪದಶೈಲಿಯ ಗೀತೆ
ಸಂಗನ ಗೌಡರೇ ನಿಮ್ಮ ಪ್ರತಿಕ್ರಿಯೆಗೆ ನಮ್ಮ ದನ್ಯವಾದಗಳು ಇದನ್ನು ಓದಿದ ಹುಡುಗ-ಹುಡುಗಿಯರ ಎದೆ ಡವ ಡವ ಎನ್ನಲೂಬಹುದು !
ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ
ಡವ ಡವ ..
ಡವ ಡವ ಇದು ಹಳೇ ಕಾಲದ್ ಮಾತಾಯ್ತು.
ಈಗಿನ ಕಾಲ ಪಡ್ಡೆ-ಪಡತಿ ಹೈಕಳ ಗುಂಡಿಗೆ ಲವ್ ಲವ ಅಂತೈತೆ.
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
Re: ಡವ ಡವ ..
ಮಹೇಶ್ ರವರೆ ಇದು ಹೈಟೆಕ್ ಯುಗ ಕ್ಷಣ್ ಕ್ಷಣಕ್ಕೂ ಆದುನಿಕತೆ ಅನುಸರಿಸುವ ಜನರ ಮದ್ಯೆ ಪದಗಳು ಬದಲಾಗೊದರಲ್ಲಿ ಆಶ್ಚರ್ಯ ವಿಲ್ಲ ಬಿಡಿ. ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ
Re: ಡವ ಡವ ..
"ಕುಚ್ ಕುಚ್ ಹೋಗಯಾ ಎದೆ ಚುಚ್ ಚುಚ್ಚೋ ವಿಸಯಾಆಆ"
"ಚೋರಿಯಾಗಿದೆ ನನ್ನ ದೀಲ್ ... ಕಳೆದು ಕೊಳ್ಳೋದೇ ಒಂದು thrilllllllllll"
ಏನ್ ಸೂಪರ್ ಹಾಡುಗಳು.... "ಮಸ್ತ್ ಮಜಾ ಮಾಡಿ", "ಸಕ್ಕತ್ hot ಮಗಾ" ಅನ್ನೋ ಹಾಗಿವೆ
ಈ ಆದುನಿಕೆಯೂ ಒಂದು ತೆರ ಮೋಜಾಗಿದೆ. "enjoi ಮಾಡಿ" ಅಂತ tension ಮಾಡಿಕೊಳ್ದೆ ಇರಬೇಕು ಅಷ್ಟೇ.
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
Re: ಡವ ಡವ ..
CªÀgÀªÀgÀ ¨ÁªÀPÉÌ C£ÀÄߪÀºÁUÉ £Á«gÀ¨ÉÃPÀÄ «ÄvÀæ "¥ÀgÀaAvÉ £ÀªÀÄUÉÃPÉ C0iÀÄå" J£ÀÄߪÀºÁUÉ EgÀ¨ÉÃPÀÄ £ÁªÀÅ UɼÉ0iÀiÁ
ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ
Re: ಡವ ಡವ ..
^^^^
ಹಿಂದಿನ ಕಾಮೆಂಟು ಏಕೆ ಸರಿಯಾಗಿ ಕಾಣ್ಸುತ್ತಿಲ್ಲ?
Re: ಡವ ಡವ ..
ಹಿಂದಿನ ಕಾಮೆಂಟು ನಿಮಗೆ ಯಾಕೆ ಸರಿಯಾಗಿ ಕಾಣುತ್ತಿಲ್ಲ ಮಹೇಶ್ ರವರೇ ನನಗೆ ತಿಳಿಯದು ಅಲ್ಲಿ ಬರೆದಿರುವುದು ಇಷ್ಟೆ "ಎಲ್ಲವೂ ಅವರವರ ಬಾವಕ್ಕೆ ಪರಚಿಂತೆ ನಮಗೇಕೆ ಅಯ್ಯ" ಎಂದು ಕೊಂಡು ಬಾಳಿದರೆ ಸಾಕಲ್ಲವೇ
ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ
Re: ಡವ ಡವ ..
ನಿಮ್ಮ ಹಿಂದಿನ ಕಮೆಂಟ್ ಯುನಿಕೋಡ್ ಫಾಂಟ್‍ನಲ್ಲಿಲ್ಲ.
ಬಾವಕ್ಕೆ ಪರಚು
ಚೆನ್ನಾಗಿದೆ ಈ ಬಳಕೆ..
======
