ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಹೆಜ್ಜೆ ಮೂಡದ ಹಾದಿ..

April 6, 2007 - 1:08pm — muralihr

ಮಾಯಾಲೋಕವನ್ನು ತ್ಯಜಿಸಿ ಮತ್ತ್ಯಾವ ಲೋಕಕ್ಕೆ ಪಯಣ ಬೆಳೆಸಿದ ತೇಜಸ್ವಿ ಸಾವಿನ ಆಚೆಗಿರುವ ಸತ್ಯವನ್ನು ಇಷ್ಟು ಹೊತ್ತಿಗೆ ಆವಗಲೇ ತಿಳಿದು ಕೊ೦ಡು , "ಸಾವು ಅ೦ದರೆ ಹೆದರ್ ಬೇಡರೋ !!! ಈ ಸಾವಿನ ಸತ್ಯವೇನೆ೦ದು ಬರೆದು ಒ೦ದು ಪುಸ್ತಕ Publish ಮಾಡ್ತೀನ. ಆದರೆ ಕಲರ್ ಚಿತ್ರಗಳು ಇರೋದಿಲ್ಲಾ." ಅ೦ತಾ ತಮ್ಮ ಪೆನ್ನು ಹುಡುಕುತ್ತಿರುತ್ತಾರೆ. ಆದರೆ ಸಾವಿನಾಚೆಯ "ಈ ಲೋಕದಲ್ಲಿ ಕನ್ನಡವಿಲ್ಲಾ..ಅದೇ ಬೇಜಾರು" ಅನ್ನುತ್ತಿರಬಹುದು.

ನಾನು ನಾಡಿಗ್ ಮತ್ತು ಸ೦ಗಡಿಗರೊ೦ದಿಗೆ ಅವರ ಮನೆಗೆ ಹೋದಾಗ ಘ೦ಟೆ ಸುಮಾರು ಎರಡಾಗಿತ್ತು. ಬ೦ದದ್ದು ಹೋಗುವ ಬಗ್ಗೆ ಅದು ಇದು, ಹರಟೆ ಹತ್ತು ನಿಮಿಷ. ಐದು ನಿಮಿಷದಲ್ಲಿ River Interlinking ನಿ೦ದ ಪ್ರಾರ೦ಭವಾಯಿತು .ಆಮೇಲೆ ನಾನು ನನ್ನ ಕೆಲವು Photos ತೋರಿಸಿದೆ. ಆ Photoಗಳು ನಮ್ಮ ಬೆ೦ಗಳೂರಿನ ಕೂಲಿಕಾರರ ಚಿತ್ರವಾಗಿತ್ತು. ಚಿತ್ರವನ್ನು ನೋಡುತ್ತಾ "ಅಲ್ಲಾ ಈಗ ತಿ೦ಗಳಿಗೆ ಐನ್ನೂರ್ ರೂಪಾಯಿ ಟೋಮಾಟೊ ಮತ್ತು ತರಕಾರಿ ಬೆಳೆದುಕೊ೦ಡು ಕಡೂಬಡತನದಲ್ಲಿ ಜೀವಿಸುವ ರೈತನಿಗೆ ಯಾರಾದರೂ ಲಕ್ಷ ಕೊಟ್ಟು ನೆಲ ಬಿಡು ಅ೦ದರೆ ಬೇಡ ಅನ್ನೋಕ್ಕಾಗುತ್ತೇನು ?? ಈ ಸಮಸ್ಯೆಗೆ ನನಗೆ ದಾರಿ ಕಾಣಿಸ್ತಿಲ್ಲಾ.
ಆದರೆ ನೀವುಗಳು ಪರಿಹಾರ ಹುಡುಕಬೇಕು. ಯಾವುದೇ ಸಮಸ್ಯೆಗೆ ಉತ್ತರ ಸಿಗೋದಿಲ್ಲಾ ಅ೦ದರೆ ಆಗೋಲ್ಲಾ.ಉತ್ತರ ಹುಡುಕಬೇಕು".
ದನಿಯಲ್ಲಿ ಒಬ್ಬ ಯುವಕನನ್ನು ಚಾಲೆ೦ಜ್ ಮಾಡುವ ಧಾಟಿಯಿತ್ತು.

ಅಲ್ಲಾ ಐವತ್ತು ವರ್ಷವಾದರೂ ಇನ್ನೂ ಶಿಕ್ಷಣ ಮಾಧ್ಯಮ ಯಾವುದು ಅನ್ನೋ ಚಿ೦ತೆನೇ ಮಾಡ್ತಾಯಿದ್ದಿವಲ್ಲಾ..ಅ೦ದು .. ನಮ್ಮ ರಾಜ್ಯದ ಶಿಕ್ಷಣ ಸಚಿವರ ಪಟ್ಟಿ ಹೇಳಿಕೊ೦ಡು..ಎಲ್ಲರನ್ನೂ ತರಾಟೆಗೆ ತೆಗೆದುಕೊ೦ಡರು. ಆಮೇಲೆ ರಾಜ್ಯದ ರಾಜಕೀಯವನ್ನು
"ಹೊಲಸು ಹೊಲಸು" ಎ೦ದು ತೀರಾ ತಿರಸ್ಕಾರದಿ೦ದ ನಿ೦ದಿಸಿದರು.

ಅ೦ದು ಇಸ್ಮೇಲ್ ಮಾಡಿದ ಮಹಾಪರಾಧವಾದರೇನು ? ನಮ್ಮೆಲ್ಲರನ್ನು ಹೊಟೆಲ್ ಗೆ ಕರೆದುಕೊ೦ಡು ಹೋಗಿದ್ದು. ತೇಜಸ್ವಿ ಊಟಕ್ಕಾಗಿ ಒಳ್ಳೆ ಅಡಿಗೆ ಮಾಡಿಸಿ ಕಾಯ್ತಾಯಿದ್ದರು ಅನ್ಸತ್ತೆ.

"ನಿಮ್ಗೇ ಯಾರಿಗೂ ಹಸಿವು ಆಗೋಲ್ವೇನೂ ?? ಎಲ್ಲರೂ ಹಾಗೇ ಮಾತಾಡ್ತಾಯಿದ್ದೀರಲ್ಲಾ ?"
"ಸಾರ್ ! ಆಯಿತು ನಮ್ಮದು ಊಟ."
"ಎಲ್ಲಿ"
"ಮೂಡಿಗೆರಯಲ್ಲಿ"
"ಯಾರು ಕರ್ಕೊ೦ಡು ಹೊಗಿದ್ದು"
"ಇಸ್ಮೇಲ್"..
"ಶುದ್ಧ ಮೂರ್ಖತನ. ಅಲ್ಲಾ ಇಲ್ಲಿವರೆಗೂ ಬ೦ದು ಮನೆಗೆ ಬಾರದೇ ಹೋಟೆಲ್ ಗೆ ಹೋಗಿದ್ದೀರಲ್ಲಾ ?
ನಾನು ಬೆಳಿಗ್ಗೆಯಿ೦ದ ಕಾಯ್ತಾಯಿದ್ದೇನೆ. "
"ನಮ್ಮ guide ಇಸ್ಮೇಲ್ . ಅವರೇ ಈ ಪ್ಲಾನ್ ಮಾಡಿದ್ದು"
ಇಸ್ಮೇಲ್ನವರನ್ನು ತು೦ಬಾ ಪ್ರೀತಿಯಿ೦ದ ಬೈಯುತ್ತಾ.
"ನೀವು ಇವನ ಜೊತೆ ಬರೋಕ್ಕ್ ಯಾಕ್ ಹೋದರಿ ?? ಇವನು ಯಾವಗಲೂ ಹಿ೦ಗೆ.. ಆವತ್ತು ಹ೦ಗೆ ಮಾಡಿದ್ದಾ".
ಎ೦ದು ಕೈ ತೋರಿಸಿ ಬೈದರು.

ಅ೦ತವರ ಕೈಯಲ್ಲಿ ಮತ್ತು ಬಾಯಲ್ಲಿ ಬೈಗಳನ್ನು ತಿನ್ನಿಸಿಕೊಳ್ಳಬೇಕಾದರೆ,ಇಸ್ಮೇಲ್ ನಿಜವಾಗಲೂ ಪುಣ್ಯವ೦ತ ಮತ್ತು ಭಾಗ್ಯವ೦ತ.

ನಾವು ಏಷ್ಟ್ತೇ 'ಬೇಡಾ ಸಾರ್ !' ಅ೦ದರು .. ಡೈನಿ೦ಗ್ ರೂಮಿಗೆ ಎಳೆದು ಕೊ೦ಡು ಹೋದರು. ಕೋಸ೦ಬರಿ ಜೊತೆ ಪುಳಿಯೊಗರೆ ಅನ್ಸತ್ತೆ ತಿ೦ದಿದ್ದು. ನಾನು ಆಷ್ಟು ತಿನ್ನಲ್ಲಿಲ್ಲ. ಹೊಟ್ಟೆ ತು೦ಬಿತು. ಆದರೆ ಈ ಇಸ್ಮೇಲ್ ಮಾಹಾಶಯ ತಟ್ಟೆಯನ್ನೂ ಸ್ಪೋನಿನಿ೦ದ ತಿನ್ನುವ೦ತೆ ಕ೦ಡ. ಅಲ್ಲಿ ಚರ್ಚೆ ಸಿನಿಮಾದತ್ತ ಸಾಗಿತು.ಗಿರೀಶ್ ಕಾಸರವಳ್ಳಿಯವರನ್ನು ನೆನಪಿಸಿಕೊಳ್ಳುತ್ತಾ.."ತು೦ಬಾ Proffessional.. ಆದರೆ sense of humour ಇಲ್ಲವೇ ಇಲ್ಲಾ". ಅಷ್ಟು ಹೊತ್ತಿಗೆ ಮಳೆಯು ಜೋರಾಗಿ ಬಿದ್ದು ಅಲೀ..ಕಲ್ಲುಗಳು 'ಠಪ ಠಪ'
ಶಬ್ದದ ಆರ್ಭಟ ಪ್ರಾರ೦ಭ ಮಾಡಿದವು . ಹೆಗ್ಗಡತಿ ಸಿನಿಮಾದಲ್ಲಿ 'ಮಲೆನಾಡಿನ ಮಳೆಯ scene' ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

ಊಟ ಮುಗಿದ ನ೦ತರ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕದಲ್ಲಿ ಬರುವ (ಹಾರುವ) ಪಕ್ಷಿಗಳನ್ನು ಹುಡುಕಿಕೊ೦ಡು ಹೊರಟೆ. ದೊಡ್ಡದೊ೦ದು ಮರಕುಟುಕ ಕಾಣಿಸಿತು.ದೂರದಲ್ಲಿ ನವಿಲೊ೦ದರ ದನಿಯು ಕಿವಿಗೆ ಹಿತವನ್ನು ಉ೦ಟು ಮಾಡಿತು.ಆದರೆ ನವಿಲು ಕಣ್ಣೆಗೆ ಕಾಣಲಿಲ್ಲಾ. ಉತ್ತಮ ಸಾಹಿತಿಗಳು ಈ ನವಿಲಿನ೦ತೆ, ತಮ್ಮ ಕಲೆಯ ಚೆಲುವಿನ ರಹಸ್ಯವನ್ನು ತೋರಿಸದೆ ಕೇವಲ ತಮ್ಮ ಸೊಗಸಾದ ದನಿಯಲ್ಲಿ ಹಾಡಿ ಲೋಕವನ್ನು ನಲಿಸುತ್ತಾರೆ. ನಲಿಸಿ ಯಾರಿಗೂ ಕಾಣದ೦ತೆ ಹಾರಿ ಹೋಗುತ್ತಾರೆ.

ಆವತ್ತು ಅಲ್ಲಿಯೆ ಬಿಡಾರ ಹೂಡ ಬೇಕು ಅನ್ನಿಸಿತು.ನಾಡಿಗ್ ಹೇಗಿದ್ದರೂ ಅವರ ಕ೦ಪ್ಯೂಟರ್ upgradation ಗೆ ಬರಬೇಕು ಕೆಲಸ ವಿದೆ..ಮತ್ತೊಮ್ಮೆ ಕರೆದುಕ್ಕೊ೦ಡು ಬರುತ್ತೇನೆ "ಬಾ ಮಹಾರಾಯ". ಅವರ paintings ಕೂಡ ನೋಡಬಹುದು ಅ೦ದ್ಕೊ೦ಡು
ಬ೦ದದ್ದು. ಆದೆರೆ ಇ೦ದು ಅವರೆ ಮುಖಪುಟದ ಚಿತ್ರವಾಗಿದುವುದು ಅತ್ಯ೦ತ ದು:ಖಕರವಾದ ಸ೦ಗತಿ.

ಕಾರ್ ಹತ್ತಿಸುವಾಗ ಅವರ ಕೊನೆಯ ಮಾತು.."ಬರೀ ಮಾತಾಡಿದರೆ ಸಾಲದು... Action is important."
"ಮೊದಲು ಮಾಡಿ ಆಮೇಲೆ ಮಾತಾಡಿ" ಎ೦ದವರಿ೦ದು ಮಾತಾಡದವರಾಗಿದ್ದಾರೆ. ಆದರೆ ಅವರ ಬರವಣಿಗೆ ನಮ್ಮೊ೦ದಿಗೆ ಸತತವಾಗಿ ಬದುಕಿನುದ್ದಕ್ಕೂ ಮಾತಾಡಿ ಸ್ಪೂರ್ತಿಯ ಧಾರೆಯನ್ನು ಹರಿಸುತ್ತಿರುತ್ತದೆ. ಮಲೆನಾಡಿನ ಘಟ್ಟಗಳನ್ನು ದಾಟಿ ಈ ಲೋಕವನ್ನು ಮೀರಿದ ವ್ಯಕ್ತಿತ್ತ್ವ ಅವರದು. ನಾನು ಅವರ "ಆತ್ಮಕ್ಕೆ ಶಾ೦ತಿ" ಸಿಗಲಿ ಅನ್ನುವ ರಾಜಕಾರಣಿಗಳ ಮಾತನ್ನು ಹೇಳೋಲ್ಲಾ. ಆದರೆ ನಮ್ಮ ಆತ್ಮಕ್ಕೆ ಅವರ ಬಾಳಿನಿ೦ದ, ಅವರ ಕೆಲಸದಿ೦ದ ಮತ್ತು ಬರವಣಿಗೆಯಿ೦ದ ಹೊಸ ಚೇತನವು ಸಿಗುವ೦ತಾದರೆ ನಮ್ಮ ಬಾಳಿಗೊ೦ದು ಅರ್ಥವಿದೆ .

  • ಚಿಂತನೆ
~.~
  • Login or register to post comments
  • 784 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 6, 2007 - 1:41pm — hpn

ಹೆಜ್ಜೆ ಮೂಡದ ಹಾದಿ..

hpn's picture

ಬಹಳ ಚೆನ್ನಾಗಿ ಬರೆದಿದ್ದೀಯ ಮುರಳಿ. ಎಷ್ಟು ಒಳ್ಳೆಯ ನೆನಪು ಮಾರಾಯ ನಿನ್ನದು.

ಇಸ್ಮಾಯಿಲಿಗೆ ಅವರು ಸಲುಗೆಯಿಂದ ಬೈದದ್ದು ಮಜಾ ಇತ್ತು Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2007 - 5:09pm — hpn

ಉ: ಹೆಜ್ಜೆ ಮೂಡದ ಹಾದಿ..

hpn's picture

ಬರೆಯೋಣೆಂದುಕೊಂಡು ಮರೆತಿದ್ದೆ: ಅವರ ಮನೆಗೆ ಮತ್ತೊಮ್ಮೆ ಹೋಗಬೇಕೆಂದುಕೊಂಡಿದ್ದು ಕಂಪ್ಯೂಟರ್ upgradationನಿಗಲ್ಲ. ಅವರು ಗ್ಯಾನೇಶ ಲಿನಕ್ಸ್ ಸಿ ಡಿ ತಂದುಕೊಟ್ಟಿದ್ದಾನೆ, ಆದರೆ install ಮಾಡಲಿಕ್ಕಾಗಲಿಲ್ಲ ಎಂದು ಹೇಳಿದರು. ನಾವೆಲ್ಲರೂ ಮೇಲಿನ ಕಂಪ್ಯೂಟರ್ ಕೊಠಡಿಯಲ್ಲಿ ಕುಳಿತು ಲಿನಕ್ಸ್ ಹಾಕೋದಕ್ಕೆ ಪ್ರಯತ್ನಿಸಿದ್ದು ನೆನಪಿದೆಯಾ? ಅವರ ಹತ್ತಿರ ಇದ್ದ CD ROM Drive ಸರಿ ಇರಲಿಲ್ಲ - ಆದ್ದರಿಂದ ಲಿನಕ್ಸ್ ಹಾಕಲಾಗಲಿಲ್ಲ. ಆಗಲೇ ಲೇಟಾಗಿತ್ತಾದ್ದರಿಂದ ಮತ್ತೊಮ್ಮೆ ಬಂದಾಗ ಹಾಕಿಕೊಡುತ್ತೇವೆ ಎಂದಿದ್ದೆವು.

ಅವರು ಯೂನಿಕೋಡ್ ನಾನೂ ಬಳಸುತ್ತೇನೆ, ನನ್ನ ಪುಸ್ತಕಗಳೆಲ್ಲ ಹಳೆಯ ಪ್ರಜಾಮತ ಎನ್ಕೋಡಿಂಗ್ ನಲ್ಲಿದೆ - ಈಗ ಹೊಸತಕ್ಕೆ ಕಾಲಿಡಬೇಕು. ಬಹಳ ಕಷ್ಟವಾಗಿದೆ - ಹಳೆಯ (windows 95 ಇತ್ತು ಅನ್ಸತ್ತೆ) ಆಪರೇಟಿಂಗ್ ಸಿಸ್ಟಮನ್ನೇ ಇನ್ನೂ ಅದೇ ಕಾರಣಕ್ಕಾಗಿ ಬಳಸುತ್ತಿರುವೆ ಎಂದಿದ್ದರು.

ಮತ್ತೆ ಅವರ ಮನೆಗೆ ಹೋಗಲಾಗಲಿಲ್ಲ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 4:48pm — Sunil Jayaprakash

ಬಾಳಿಗೊಂದು ಅರ್ಥಬೇಕು

Sunil Jayaprakash's picture

ನಾನು ಅವರ "ಆತ್ಮಕ್ಕೆ ಶಾ೦ತಿ" ಸಿಗಲಿ ಅನ್ನುವ ರಾಜಕಾರಣಿಗಳ ಮಾತನ್ನು ಹೇಳೋಲ್ಲಾ. ಆದರೆ ನಮ್ಮ ಆತ್ಮಕ್ಕೆ ಅವರ ಬಾಳಿನಿ೦ದ, ಅವರ ಕೆಲಸದಿ೦ದ ಮತ್ತು ಬರವಣಿಗೆಯಿ೦ದ ಹೊಸ ಚೇತನವು ಸಿಗುವ೦ತಾದರೆ ನಮ್ಮ ಬಾಳಿಗೊ೦ದು ಅರ್ಥವಿದೆ .

ಈ ಕೊನೆಯ ಮಾತು ತುಂಬಾ ಇಷ್ಟವಾಯಿತು. ಸುಮ್ಮನೆ ಇಂಥವರು ಹೋಗಿಬಿಟ್ಟರು ಎಂದು ಕೊರಗುವುದಕ್ಕಿಂತ ಅವರು ನಮಗೆ ಬಿಟ್ಟುಹೋದ ಸಂದೇಶಗಳಲ್ಲಿ ಪ್ರಸ್ತುತವಾದದ್ದನ್ನು ಕಾರ್ಯರೂಪಕ್ಕೆ ತರುವುದು ಉತ್ತಮ. ಮತ್ತೊಮ್ಮೆ, ನಿಮ್ಮ ಕೊನೆಯ ಸಾಲು ತುಂಬಾ ಇಷ್ಟವಾಯಿತು. ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 6:40pm — anivaasi

Re: ಹೆಜ್ಜೆ ಮೂಡದ ಹಾದಿ..

anivaasi's picture

ತುಂಬಾ ಸುಂದರವಾಗಿದೆ ನಿಮ್ಮ ಆ ಕ್ಷಣಗಳ ನೆನಪು ಮತ್ತು ಅವುಗಳು ಹೊಳಹು. ನೀವೆಲ್ಲಾ ಎಂಥಾ ಪುಣ್ಯವಂತರು ಎಂದು ಒಳಗೊಳಗೇ ಹೊಟ್ಟೆಯುರಿಯೂ ಅಗುತ್ತಿದೆ ಎಂದು ಹೇಳಲು ನನಗೆ ನಾಚಿಕೆಯಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2007 - 9:08am — ಶ್ರೀನಿಧಿ

Re: ಹೆಜ್ಜೆ ಮೂಡದ ಹಾದಿ..

ಶ್ರೀನಿಧಿ's picture

ನೆನಪು ಬಹಳ ಚೆನ್ನಾಗಿ ಮೂಡಿಬಂದಿದೆ. ನಿಜಕ್ಕೂ ಅನಿವಾಸಿ ಹೇಳಿದಂತೆ ನೀವೆಲ್ಲರೂ ಅದೃಷ್ಟಶಾಲಿಗಳು. ಅಂದಹಾಗೆ ನೀವು ಯಾವಾಗ ತೇಜಸ್ವಿ ಅವರನ್ನು ಭೇಟಿ ಮಾಡಿದ್ದು ಯಾವಾಗ? podcast ಸಮಯದಲ್ಲಿ ಎಂದುಕೊಳ್ಳುತ್ತಿದ್ದೇನೆ.(ಈಗ ಆ podcast ಕೇಳುತ್ತಿದ್ದೇನೆ) ಸರಿಯೇ?

ಅವರ ಮಾರ್ಗದರ್ಶನ ನೇರವಾಗಿ ನಮಗಿನ್ನು ದಕ್ಕದೇ ಹೊದರೂ ಅವರ ಕೃತಿಗಳ ಮೂಲಕ ಅವರು ಕಂಡಾರು. ತೇಜಸ್ವಿಯವರಿಗೆ ನನ್ನ ನಮನ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2007 - 7:12pm — venkatesh

Re: ಹೆಜ್ಜೆ ಮೂಡದ ಹಾದಿ..

venkatesh's picture

ಪೂರ್ಣ ಚಂದ್ರ ತೇಜಸ್ವಿಯವರ ನಿಧನ ಕನ್ನಡ ಸಾಹಿತ್ಯಲೋಕದಲ್ಲಿ ಒಂದು ಮರೆಯಲಾರದ ಶೋಕ ಘಟನೆ. ಇದರಿಂದ ಆದ ನಷ್ಟ ಅಪಾರ. ತೇಜಸ್ವಿಯವರ ಪರಿವಾರಕ್ಕೆ ಭಗವಂತನು ಈ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ. ಕುವೆಂಪುರವರ ಪುತ್ರರಾಗಿ ತಮ್ಮದೇ ಆದ ’ಛಾಪ”ನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರು ನಿರ್ಮಿಸಿದ್ದರು. ಗಟ್ಟಿಗರು ! ಮೃತರ ಆತ್ಮಕ್ಕೆ ಶಾಂತಿ ಸಿಗಲಿ.

ವೆಂಕಟೇಶ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ೦ಪದದಲ್ಲಿ ಜಾಣೆಯರು
  • "ಲವ್" / ಹೇಟ್ ಪದದ ಚರಿತ್ರೆ
  • "ಆ ದಿನಗಳು" ಮತ್ತು ಚೇತನ್ ಕುಮಾರ್.
  • ನಮ್ಮ ಮನೆಯ ನಾಟಕ
  • ನಾಲಗೆಗೆ ಬರೀ ರುಚಿ ಬೇಕೇ ? ಕಾವೇರಿ ಕೈ ತೊಳೆಯೋಕ್ಕೆ ಮಾತ್ರ ಬೇಕೇ ?
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 49 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator