ಜ್ಞಾನದ ತುಡಿತವನ್ನು ತುಂಬಿಸುವ ನುಡಿ
ಇತ್ತೀಚೆಗೆ ವಿ.ಕದಲ್ಲಿ ತಲೆಬುಡವಿಲ್ಲದ ಒಂದು ವರದಿ ಪ್ರಕಟವಾಗಿ ಅದರ ಬಗ್ಗೆ ಸಂಪದದಲ್ಲಿ ಸ್ವಾರಸ್ಯಕರವಾದ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಆಂಡಯ್ಯನ ಕಬ್ಬಿಗರ ಕಾವಂ ಒಂದನ್ನು ಮುಂದಿಟ್ಟುಕೊಂಡು ವಾದಮಾಡುವುದು ತರವಲ್ಲ ಎಂದು ಒಬ್ಬ ಓದುಗರು ನುಡಿದಿದ್ದರು. ಕಬ್ಬಿಗರ ಕಾವದ ಜೊತೆಗೆ ಮತ್ತೆರೆಡು ಬಲವಾದ ಕಾರಣಗಳನ್ನು ನೀಡಿ ಕನ್ನಡವು ಹೊಳೆಯುವ ಜಾಣನುಡಿಯೂ ಹೌದು ಎಂಬುದನ್ನು ನಿರೂಪಿಸುತ್ತದೆ ಈ ಲೇಖನ. ಅಂದ ಹಾಗೆ, ನಮ್ಮ ಗುರಿಯಿರುವುದು "ಸಂಸ್ಕೃತವಿಲ್ಲದ ಕನ್ನಡ ಜಾಳು" ಎಂದವರ ವಿರುದ್ಧ ವ್ಯಕ್ತಿಗತವಾದ ದ್ವೇಷವಲ್ಲ ಬದಲಾಗಿ ಕನ್ನಡಿಗರಲ್ಲಿ ಆ ರೀತಿ ಕೀಳರಿಮೆಯನ್ನು ಹುಟ್ಟುಹಾಕುವ ಮನಸ್ಥಿತಿಯ ವಿರುದ್ಧ. ವಿ.ಕದ ವರದಿಯಲ್ಲಿ ಹೆಸರಿಸಲಾದ ವ್ಯಕ್ತಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ವವಾದ ಸಾಧನೆಯನ್ನೇ ಮಾಡಿರಬಹುದು. ಆದ್ದರಿಂದ ಈ ಲೇಖನವನ್ನು ವ್ಯಕ್ತಿಗತವಾಗಿ ತೆಗೆದುಕೊಳ್ಳದಿರುವ ಪ್ರೌಢಿಮೆಯನ್ನು ಓದಗರು ತಂದುಕೊಳ್ಳಲಿ.
ನಾನಿಲ್ಲಿ ಎರಡು ವಿಚಾರಗಳನ್ನು ಓದುಗರ ಮುಂದಿಟ್ಟು ಕನ್ನಡದ ಕಾನ್ಸೆಪ್ಚುಯಲೇಸೇಷನ್ ಏಕೆ ಬೇಕು ಮತ್ತು ಕನ್ನಡವು ಏಕೆ ಎಷ್ಟು ಸಮರ್ಥವಾದ ಭಾಷೆ ಎಂಬುದನ್ನು ವಸ್ತುನಿಷ್ಟವಾಗಿ ನಿರೂಪಿಸಬಯಸುತ್ತೇನೆ.
೧. ಸಂಸ್ಕೃತದ ಕುರುಡಭಿಮಾನದಿಂದ ಆಗುವ ನಷ್ಟ
೨. ಕನ್ನಡವು ಪೊಳ್ಳಲ್ಲದ, ಟೊಳ್ಳಲ್ಲದ, ಜೊಳ್ಳಲ್ಲದ, ಜಾಳಾಗಿರದ, ಪಾಳು ಬಿದ್ದಿರದ ತನ್ನದೇ ಗಟ್ಟಿಯಾದ ತಳಹದಿಯಿರುವ ನುಡಿ ಎಂದು ನಿರೂಪಿಸುವುದಕ್ಕೆ.
೧. ಮೊದಲ ವಿಚಾರ ವೇದಗಳನ್ನು ಕುರಿತು
ವೇದ ಎಂದರೆ ಜ್ಞಾನ ಅಂತ ಕೆಲವು ಟೀಕೆಗಳು ಹೇಳುತ್ತದೆ. ಜ್ಞಾನ ಯಾರಿಗೆ ತಾನೇ ಬೇಡ. ಇಂದು ವೇದಗಳು ತರ್ಜುಮೆಗೊಳ್ಳದ ಯಾವ ಭಾಷೆಯೂ ಇರಲಾರದು. ಇದರ ಬಗ್ಗೆ ಡಿ.ವಿ.ಜಿಯವರ ಒಂದು ಕಗ್ಗವನ್ನು ನೋಡಬಹುದು. "ಕಾಶಿಯಾ ಶಾಸ್ತ್ರಗಳನು ಓದುವರು....ಆಕ್ಸಫರ್ಡಿನಲಿ....". ಐರೋಪ್ಯರು ವೇದಗಳಲ್ಲಿರುವ ಜ್ಞಾನವನ್ನು ತಮ್ಮ ನುಡಿಗೆ ತಂದುಕೊಂಡು, ತಮಗೆ ಏನು ಬೇಕಿತ್ತೋ ತಮ್ಮ ಭಾಷೆಯ ಮೂಲಕ ಅದನ್ನು ತಿಳಿದುಕೊಂಡು ಪ್ರಸ್ತುತವಾಗಿದ್ದನ್ನು ಕಾರ್ಯರೂಪಕ್ಕೆ ತಂದುಕೊಂಡು ಮುಂದೆಬಂದರು. ಆದರೆ ಭಾರತದಲ್ಲೇನಾಯಿತು. ವೇದಗಳು ದೇವರ ಪೂಜಾಮಂತ್ರಗಳಿಗೆ ಸೀಮಿತವಾಯಿತು (ಸೀಮಿತವಾಗಿದೆ ಎಂಬುದನ್ನು ಬಳಸುವುದಿಲ್ಲ, ಇದರ ಕುರಿತು ಅನೇಕ ಕಮ್ಮಟಗಳು ಇಂದು ನಡೆಯುತ್ತಿವೆ). ವೇದಗಳನ್ನು ಒಂದೇ ಭಾಷೆಯಲ್ಲಿ ಹಿಡಿಯಲಾಯಿತು. ವೇದಗಳನ್ನು ಕಳ್ಳವಾಗಿ ಓದಿಕೊಂಡವನು ಕೋಣನಾಗಿ ಮಾರಮ್ಮನಿಗೆ ಬಲಿಯಾಗುತ್ತಾನೆ ಎಂಬ ಸುಳ್ಳು ಸುಳ್ಳು ಪುರಾಣ ಸೃಷ್ಟಿ ಮಾಡಲಾಯಿತು. ವೇದಗಳಲ್ಲಿರುವ ಜ್ಞಾನವನ್ನು ಆಯಾ ದೇಸೀ ನುಡಿಯಲ್ಲಿ ಹೇಳಿ, "ನೋಡಯ್ಯಾ, ವೇದದಲ್ಲಿ ಹೀಗಿದೆ, ನಿನಗೆ ಏನು ಬೇಕೋ ಅದನ್ನು ಕಾರ್ಯರೂಪಕ್ಕೆ ತಂದುಕೊ" ಎಂಬ ಉಪದೇಶ ನೀಡಿದ್ದರೆ ನಾವುಗಳು ಎಷ್ಟೋ ಮುಂದಿರುತ್ತಿದ್ದವು. ಆದರೆ, ಜ್ಞಾನದ ಹರಿವಿಗಿಂತ ಹೆಚ್ಚಾಗಿ ಒಂದು ಭಾಷೆಯ ವೈಭವೀಕರಣ ನಮ್ಮ ದೇಶದಲ್ಲಿ ನಡೆಯಿತು. ವೇದಗಳಲ್ಲಿರುವ ಜ್ಞಾನವನ್ನು ಕನ್ನಡದಲ್ಲಿ ಹೇಳಿದರೆ ಕನ್ನಡಿಗರಿಗೆ ಒಗ್ಗುವುದಿಲ್ಲವೇ. ಹಾಗೆಯೇ ಆಯುರ್ವೇದ. ಆಯುರ್ವೇದದಿಂದಲೇ ಸಕಲ ವೈದ್ಯ ಶಾಸ್ತ್ರವು ಬರಲಿಲ್ಲ. ನಮ್ಮ ನಮ್ಮ ದೇಸೀ ಸೊಗಡಿನಲ್ಲಿ ಇದ್ದಂತಹ "ಅಳಲೇಕಾಯಿ" ಪಂಡಿತರಿಗೂ ವೈದ್ಯಶಾಸ್ತ್ರದ ಅರಿವಿತ್ತು. ಈಗಲೂ ಅನೇಕ ಕಡೆ ಇಂತಹವರನ್ನು ಕಾಣಬಹದು. ಐರೋಪ್ಯರು ಹೇಗೆ ಆರ್ಯುವೇದವನ್ನು ಓದಿಕೊಂಡರೋ ಹಾಗೆಯೇ ಹಳ್ಳಿಗಳಲ್ಲಿರುವ "ಅಳಲೇಕಾಯಿ" ಪಂಡಿತರುಗಳನ್ನೂ ಸ್ಟಡಿ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ "ಈಟಿವಿ ನ್ಯೂಸಿನಲ್ಲಿ - ಒಂದು ವಿಶೇಷ ವರದಿ" ಬಂದಿತ್ತು. ಕರ್ನಾಟಕದ ಯಾವುದೋ ಊರಿನಲ್ಲಿ ಒಬ್ಬಳು ಮುಸ್ಲಿಂ ಮಹಿಳೆ ಹಾವು ಕಡಿತಕ್ಕೆ ನಂಜಿಳಿಯುವ ಔಷಧಿ ನೀಡುತ್ತಾಳಂತೆ. ಜನಪದವೇ ಇಲ್ಲದೆ ಸಂಸ್ಕರಣೆ ಎಂದಿಗೂ ಸಾಧ್ಯವಿರಲಿಲ್ಲ. ವೇದಗಳನ್ನು ದೇವರ ಪೂಜೆಯ ಮಂತ್ರವಾಗಿಸಿಕೊಂಡೇ ಮುಂದುವರಿದರೆ ಮತ್ತು ಜ್ಞಾನದ ಮಾರ್ಗವನ್ನು ಹಿಡಿಯಲು ಯಾವುದೋ ಒಂದೇ ಒಂದು ನಿರ್ದಿಷ್ಟ ಭಾಷೆಗೆ ಮನ್ನಣೆ ನೀಡುತ್ತಾ ಸಾಗಿದರೆ ನಾವುಗಳು ಇಂದು ಬೇರೆದೇಶದವರ ಹಾಗೆ ಇನ್ನೊವೇಟೀವ್ ಆಗುವುದಿಲ್ಲ. ಬದಲಾಗಿ ಇದ್ದಲ್ಲಿಯೇ ಇರುತ್ತೇವೆ. ಸಂಪತ್ತನ್ನು ಸೃಷ್ಟಿಸುವುದಿಲ್ಲ. ಬದಲಾಗಿ ಬೇರೆಯವರು ಸೃಷ್ಟಿಸಿದ್ದನ್ನೇ ಬಳಸಿ ಬಳಸಿ, ಹೇಳಿಕೊಟ್ಟಿದ್ದನ್ನೇ ಮಾಡಿ ಮಾಡಿ ಮಾಡುತ್ತಲೇ ಇರುತ್ತೇವೆ. "ಭಾರತೀಯ ಸಂಸ್ಕೃತಿ ಎಂದರೆ ವೈದಿಕ ಸಂಸ್ಕೃತಿ ಎನ್ನುವುದು ತಪ್ಪು" ಎಂದು ಈಗಾಗಲೇ ಅನೇಕರು ನಿರೂಪಿಸಿದ್ದಾರೆ.
೨. ಕನ್ನಡದ ಗಟ್ಟಿತನವನ್ನು ಸಾಬೀತು ಪಡಿಸುವ ಒಂದು ಸಂಗೀತ ಉಪಕರಣ - ಪಿಟೀಲು
ಸಂಗೀತ - ಸಂಗೀತ ಎನ್ನುವುದು ನಮ್ಮ ದೇಶದಲ್ಲಿ ಸಂಸ್ಕೃತದಲ್ಲಿ ಸೃಷ್ಟಿಯಾದ ಒಂದು ಜ್ಞಾನ. ಇಂದು ನಾವುಗಳು ಗಮನಿಸಬಹುದಾದ ಹಾಗೆ ಸಂಗೀತ, ರಾಗ, ಸ್ವರ, ಆಳಾ(ಲಾ)ಪ ಇವುಗಳು ಕನ್ನಡ, ತಮಿಳು ಸೇರಿ ಬೇರೆ ಭಾಷೆಯಲ್ಲಿವೂ ಅದೇ ಪದಗಳಾಗಿ ಬಳಕೆಯಲ್ಲಿವೆ. ಬಹುಶಃ ಇದೇ ಕಾರಣಕ್ಕೆ ಬೆನಕ ಅವರು ಒಮ್ಮೆ ಭಾಷಾ ಅನ್ಯೋನ್ಯತೆ ಎಂದು ಬರೆದದ್ದು. ಆ ಕಾರಣಕ್ಕೆ ಸಂಸ್ಕೃತವನ್ನು ಗೌರವಿಸೋಣ.
ಸರಿ ಈಗ ಸಂಸ್ಕೃತದ ಮೇಲೆ ಕುರುಡು ವ್ಯಾಮೋಹವಿರುವವರಿಗೆ ಒಂದು ಬಹುಮುಖ್ಯವಾದ ಪ್ರಶ್ನೆ. ಪಿಟೀಲಿಗೆ ಸಂಸ್ಕೃತ ಪದವೇನು ? ತುಂಬಾ ತುಂಬಾ ಹಿಂದೆ, ಎಲ್ಲ ತಂತಿವಾದ್ಯಗಳಿಗೂ ವೀಣೆ ಎಂದು ಹೇಳುವ ಪರಿಪಾಠ ಇತ್ತಂತೆ. ಕಳೆದ ನಾಲ್ಕೈದು ಶತಮಾನಗಳಿಂದ ಇಲ್ಲ. ವಯೋಲೀನ್ ಭಾರತಕ್ಕೆ ಬಂದದ್ದು ೧೫-೧೭ ಶತಮಾನವಿರಬಹುದು. ಆದರೆ ನೋಡಿ, ಪಿಟೀಲನ್ನು ದಾಕ್ಷಿಣಾತ್ಯರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಎಷ್ಟು ಚೆನ್ನಾಗಿ ತಮ್ಮದಾಗಿಸಿಕೊಂಡಿದ್ದಾರೆ. ಇಂದು ವೀಣೆ ಇಲ್ಲದಿದ್ದರೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಛೇರಿ ನಡೆದೀತು ಆದರೆ ಪಿಟೀಲಿಲ್ಲದೆ ಸಂಗೀತ ಕಛೇರಿ ನಡೆಯುವುದು ಕಷ್ಟ. ಪಿಟೀಲಿಗೆ ಸಂಬಂಧಪಟ್ಟ ಹಾಗೆ ಇರುವ ಪದಗಳು ಪಿಟೀಲು, ಕುದುರೆ, ಬಿರಡೆ, ತಲೆ, ಬಿಲ್ಲು, ಅಂಗುಳಿ, ಹಲಗೆ, ಕಮಾನು. ಇವುಗಳು ಯಾವುದೂ ಸಂಸ್ಕೃತ ಪದಗಳಲ್ಲ. ಅಂದರೆ ಭಾರತದ್ದಲ್ಲದ ಒಂದು ಜ್ಞಾನವನ್ನು(ವಯೋಲೀನ್) ಸಂಪಾದಿಸಲು ನಮ್ಮ ಹಿರೀಕರು ಬಳಸಿಕೊಂಡಿರುವುದು ನಮ್ಮ ದೇಸೀ ಭಾಷೆಯನ್ನು, ದೇವಭಾಷೆಯನ್ನಲ್ಲ. ಪಿಟೀಲೆಂಬ ಒಂದು ಭವ್ಯ ಭಂಗಲೆಯನ್ನು ಕಟ್ಟಲು ನಾವು ಸಂಸ್ಕೃತವನ್ನು ಬಳಸಿಲ್ಲ ಎಂಬುದು ಓದುಗರ ಮನಸ್ಸಿನಗೆ ನಾಟಲಿ. ಹೊರಗಿನ ಒಂದು ಜ್ಞಾನದ ಕಾನ್ಸೆಪ್ಟಯಲೈಸೇಷನ್ ಅನ್ನು ನಾವು ನಮಗೆ ಹತ್ತಿರವಾದ ಕನ್ನಡ ಭಾಷೆಯಲ್ಲಿ ಮಾಡಿಕೊಂಡಿದ್ದೇವೆ. ಹಾಗೆಯೇ ಇಸ್ತ್ರೀ. ಇದು ಸಂಸ್ಕೃತವಲ್ಲ. ಭಾರತದ ಜ್ಞಾನವಲ್ಲ.
ಹೀಗೆ "ಸಂಸ್ಕೃತ ಮತ್ತು ಕನ್ನಡ" ಇವುಗಳ ಅಪ್ಲಿಕಬಿಲಿಟಿಯನ್ನು ಅರ್ಥಮಾಡಿಕೊಳ್ಳದೆ ಸಂಸ್ಕೃತದಲ್ಲಿ ಎಲ್ಲವೂ ಇದೆ, ಇರುವುದೆಲ್ಲವೂ ಒಳ್ಳೆಯದೇ, "ಸಂಸ್ಕೃತವಿಲ್ಲದ ಕನ್ನಡ ಜಾಳು" ಎಂದು ಬೆಪ್ಪುಬೆಪ್ಪುಬೆಪ್ಪಾಗಿ ಬಡಬಡಾಯಿಸುತ್ತಾ ಸಂಸ್ಕೃತದ ಮೇಲಿನ ಕುರುಡಭಿಮಾನದಿಂದ "ಯಾರು ಏನು ಹೇಳಿದರೂ ನನಗೆ ಸಂಸ್ಕೃತವೇ ಸರ್ವಭಾಷಾಜನನಿ, ದೇವಭಾಷೆ" ಎಂದರೆ ಅದು ಅಜ್ಞಾನದ ಮತ್ತು ಅಹಂಕಾರದ ಪ್ರತಿರೂಪ ಅಷ್ಟೇ.
ಇಂದು ಕಂಪ್ಯೂಟರ್ ಆಗಲೀ, ಇಂಟರ್ನೆಟ್ ಆಗಲೀ ಭಾರತದಲ್ಲಿ (ಅಥವಾ ಸ್ಪಷ್ಟವಾಗಿ ಹೇಳುವುದಾದರೆ ಸಂಸ್ಕೃತದಲ್ಲಿ) ಸೃಷ್ಟಿಯಾದ ಜ್ಞಾನವಲ್ಲ. ಈ ಜ್ಞಾನವನ್ನು ಬಳಸಿಕೊಂಡು ನಾವು ಮುಂದೆ ಬರಬೇಕಾದರೆ, ಆ ಜ್ಞಾನದ ಕಾನ್ಸೆಪ್ಟುಯಲೈಸೇಷನನ್ನು ನಮ್ಮ ಭಾಷೆಯಲ್ಲಿ ಮಾಡಿಕೊಳ್ಳಬೇಕು. ಇದು ದೂರಗಾಮಿ ಪರಿಣಾಮ ಬೀರುತ್ತದೆ. ಕನ್ನಡದಲ್ಲಿ ಕಾನ್ಸೆಪ್ಟಲೈಸೇಷನ್ ಮಾಡುತ್ತಾ ಮುಂದುವರಿದರೆ ಎಷ್ಟೋ ಪ್ರಯೋಜನಗಳುಂಟು.
೧. ಕನ್ನಡನಾಡಿನಲ್ಲಿರುವ ಉಪಭಾಷೆಗಳಿಗೂ ಕನ್ನಡಕ್ಕೂ ತುಂಬಾ ನಂಟಿದೆ, ಕನ್ನಡದಲ್ಲಿ ಕಾನ್ಸೆಪ್ಚುಯಲೈಸೇಷನ್ ಮಾಡುತ್ತಾ ಸಾಗಿದರೆ ಭಾಷಿಕವಾಗಿ ನಾವು ಮತ್ತಷ್ಟು ಬಲಗೊಳ್ಳಬಹುದು. ಸಂಸ್ಕೃತದಲ್ಲಿ ಮಾಡಿದರೆ ಇಡೀ ಭಾರತ ಒಂದಾಗುತ್ತದೆ ಎನ್ನಬಹುದು. ಸಂಸ್ಕೃತದಲ್ಲಿಯೇ ಇದ್ದರೂ ದಕ್ಷಿಣ ಮತ್ತು ಉತ್ತರದ ನಡುವೆ ಎಷ್ಟೋ ವ್ಯತ್ಯಾಸಗಳಿರುವದನ್ನು ಕಾಣಬಹುದು. ಹಾಗೆಯೇ ಬೇರೆ ಬೇರೆ ಹೆಸರಿದ್ದರೂ ಒಂದೇ ಸಂಸ್ಕೃತಿಯ ವಿವಿಧ ರೂಪಗಳನ್ನು ಕಾಣಬಹುದು. ಒಂದೇ ಹಬ್ಬಕ್ಕೆ ದೇಶದ ವಿವಿಧ ಕಡೆ ಬೇರೆ ಬೇರೆ ಹೆಸರಿದೆ. ನಾವು ಈ ಮನಸ್ಥಿತಿ ಬೆಳೆಸಿಕೊಂಡರೆ ನೂರು ವರ್ಷಗಳು ನಂತರ, Actually "ಇಂಗ್ಲೀಷಿಲ್ಲಿ ಮಾಡಿದರೆ, ಇಡೀ ವಿಶ್ವ ಒಂದಾಗಬಹುದು ಎಂದು ವಾದ ಮಾಡಬಹುದು. ಅದು ವಾದಕ್ಕಾಗಿ ವಾದವಾಗುತ್ತದೆಯೇ ಹೊರತು ವಸ್ತುನಿಷ್ಟವಾಗುವುದಿಲ್ಲ".
೨. ಕನ್ನಡನಾಡಿನಲ್ಲಿರುವ ಲಿಂಗಾಯತರು ಬಳಸುವ ಮತ್ತು ಗೌಡರು ಬಳಸುವ ಪಾರಿಭಾಷಿಕ ಶಬ್ದಗಳು ಒಂದಾಗುವವು. ಈ ಅಂಶ ಕೆಲವರಿಗೆ ನಗು ತರಿಸಿದರೆ ಅದು ಕನ್ನಡದ ತಪ್ಪಲ್ಲ. ಒಟ್ಟಿನಲ್ಲಿ ನಾನು ಹೇಳುವುದು "ಜ್ಞಾನವಲ್ಲದ ಪಾರಿಭಾಷಿಕ ಪದವನ್ನು ಸ್ವೀಕರಿಸುವುದು" ಬಲವಂತದ ಹೇರಿಕೆಯೇ.
ನಮ್ಮ ದೇಶದಲ್ಲಿ ಹಿಂದೆ ಕೆಲವು ಜ್ಞಾನಕ್ಕೆ ಸಂಬಂಧಪಟ್ಟ ಗ್ರಂಥಗಳು ಸಂಸ್ಕೃತದಲ್ಲಿ ಮನೋಜ್ಞವಾಗಿ ಕಡೆಯಲ್ಪಟ್ಟಿದೆ. ಆ ಕಾರಣಕ್ಕೆ ನಾವು ಸಂಸ್ಕೃತವನ್ನು ಗೌರವಿಸೋಣ, ಸಾಧ್ಯವಾದರೆ ಓದಿಕೊಳ್ಳೋಣ. ಹಾಗೆಯೇ ಇಂದು ಪಶ್ಚಿಮದ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕಾದರೆ ನಾವು ನಮಗೆ ಯಾವುದು ಸರಳವೋ ಅದರಲ್ಲಿ ಪಡೆಯೋಣ. ಸಂಸ್ಕೃತವನ್ನು ಕಲಿತೇ ಆಯುರ್ವೇದ, ನ್ಯಾಯ ಶಾಸ್ತ್ರ, ತತ್ವಶಾಸ್ತ್ರ ಮುಂತಾದ ಜ್ಞಾನ ಸಂಪಾದಿಸಿಕೋ ಎಂದರೆ "ಹೋಗಲೋ, ಎಂಬಿಬಿಎಸ್ ಇಂಗ್ಲೀಷಿನಲ್ಲಿದೆ, ಅದು ನನಗೆ ಸುಲಭ, ನಾನು ಅದನ್ನೇ ಕಲಿಯುತ್ತೇನೆ ಎಂಬ ಉತ್ತರ ಬರುತ್ತದೆ". ಹಾಗೆಯೇ, ತಂತ್ರಜ್ಞಾನ ಇಂಗ್ಲೀಷ್ ಭಾಷೆಯಿಂದ ಬಂದು, ಸಂಸ್ಕೃತಕ್ಕೆ ಹೋಗಿ ಅಲ್ಲಿಂದ ಕನ್ನಡಕ್ಕೆ ಬರಮಾಡಿಕೊಳ್ಳುವಷ್ಟರಲ್ಲಿ ಕನಿಷ್ಟ ೨೦೦-೨೫೦ ವರ್ಷಗಳು ಬೇಕಾಗಬಹುದು. ಅಷ್ಟರಲ್ಲಿ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ, ತಾಂತ್ರಿಕವಾಗಿ, ಬಾಷಿಕವಾಗಿ ತುಂಬಾ ಹಿಂದುಳಿದು ಬಿಡುತ್ತೇವೆ. ಆಗ ಹೊಸತರದ "ದುರ್ಬಲರ ಮೇಲೆ ಸಬಲರ ಸವಾರಿ" ಪ್ರಾರಂಭವಾಗುತ್ತದೆ. ಇಂತಹ ವಿಷಯಗಳನ್ನು ನಿಮ್ಮ ಮುಂದಿಟ್ಟ ಮಾತ್ರಕ್ಕೆ ನಾನೊಬ್ಬ "ಸಂಸ್ಕೃತ ವಿರೋಧಿ" ಅಂತಲೋ "ವೈದಿಕ ವಿಡಂಬಕ" ಎಂತಲೋ ಯಾರಾದರೂ ಬಗೆಯುವುದಾದರೆ ಅದು ಅವರವರ ಪೂರ್ವಾಗ್ರಹ ಪೀಡಿತ ಮನಸ್ಸಿನ ಪ್ರತಿಬಿಂಬವಷ್ಟೇ.
ಕೊನೆಯದಾಗಿ, "ಯಾರಾದರೂ "ನೋಡಯ್ಯಾ ಇದು, ವಿದ್ಯೆ->ವಿನಯ->ಪಾತ್ರತೆ(Professionalism, Character ಅಂತ ಅರ್ಥೈಸಬಹುದು)->ಹಣ->ಧರ್ಮ->ಸುಖ(ಇದು ಒಂದು ಸಂಸ್ಕೃತದ ಸುಭಾಷಿತ) ಸಿಗುವಂತೆ ಮಾಡುವ ಒಂದು ಜ್ಞಾನ", ಎಂದು ಹೇಳಿದರು ಎಂತಿಟ್ಟುಕೊಳ್ಳಿ. ಆ ಜ್ಞಾನದ ಸತ್ಯಾಸತ್ಯತೆಯನ್ನು ಅಳೆದು ತೂಗಿ, ನಮಗೆ ಸರಿಯೆನಿಸಿದರೆ ಅದನ್ನು ರೂಢಿಸಿಕೊಳ್ಳಲು ನಾವೆಲ್ಲರೂ ಯಾವಾಗಲೂ ತಯಾರು. ಏಕೆಂದರೆ ಕನ್ನಡಿಗರು ಎಂದೂ ಕೂಡ ಕುರುಡಾಗಿ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡವರಲ್ಲ. ಆದರೆ ಜ್ಞಾನವೇ ಇಲ್ಲದೆ, ಸಂಸ್ಕೃತವೇ ಎಲ್ಲ, ನಿನ್ನ ನುಡಿ ಜಾಳು ಜಾಳು ಎಂದರೆ ಅದಕ್ಕೆ ಅರ್ಥವೇ ಇಲ್ಲ. ಯಾದೃಚ್ಛಿಕ, ಇತ್ಯಾತ್ಮಕ, ನೇತ್ಯಾತ್ಮಕ, ಸಿದ್ಧಸ್ಮೃತಿಕೋಶ, ಸ್ಮರಣ ಕೋಷ್ಟಕ, ವಕ್ರಾವರಣ ಇಂತಹ ಪದಬಳಕೆಯಲ್ಲಿ ಯಾವ ಬದನೆಕಾಯಿ ಜ್ಞಾನವೂ ಇಲ್ಲ. ಜನರಿಗೆ ಅರ್ಥವಾಗದ, ಕೇವಲ ಕೆಲವರ ಸಂಸ್ಕೃತದ ಮೇಲಿನ ಕುರುಡಭಿಮಾನದಿಂದ ಇವುಗಳನ್ನು ಬಳಸುವದು ದೂರದೃಷ್ಟಿಯ ಕೊರೆತೆಯೂ ಹೌದು.
ಪೂರಕ ಓದು -
೧. ಪಿಟೀಲಿನ ಬಗ್ಗೆ ಇಂಗ್ಲೀಷ್ ಲೇಖನ
೨. ಪಿಟೀಲಿನ ಬಗ್ಗೆ ಕನ್ನಡದ ಲೇಖನ

- Login or register to post comments
- 1096 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





ಪ್ರತಿಕ್ರಿಯೆಗಳು
ಮತ್ತದೇ ಅಂತ ಮತ್ತೆ
ಸುನಿಲ,
ಅದೇನೋ ಗ್ರಾಚಾರ ಇವೊತ್ತು, ನಾನು ಶಂಕರ ಬಟ್ಟರ "ಕನ್ನಡ ಬರಹವನ್ನು ಸರಿಪಡಿಸೋಣ!" ಓದಕ್ಕೆ ಸುರು ಮಾಡ್ದೆ. ಪಾಪ! ಅವರ "ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ" ಓದಿ ಅವರ ಗೆಳೆಯವನ್ನು "ಸಂಸ್ಕೃತ ದ್ವೇಷಿ" ಎಂಬ ಹಣೆಪಟ್ಟಿ ಕೊಟ್ರು ಅಂತ ಮುನ್ನುಡಿಯ ಮೊದಲ ಗೆರೆಯಲ್ಲೇ ಹೇಳಿಕೊಂಡಿದ್ದಾರೆ.
ಅದರ ಜೊತೆ ಮುನ್ನಡಿಯ ಸುರವಲ್ಲೇ
"ನಾನು ಜೇನುಗೂಡಿಗೆ ಕೈ ಇಟ್ಟಿದ್ದೇನೆ;ಜೇನು ಎದ್ದಿದೆ; ಅದು ನನ್ನನ್ನು ಕಡಿದರೆ ಚಿಂತೆ ಇಲ್ಲ. ನಮ್ಮ ಜನಕ್ಕೆ ಜೇನುತುಪ್ಪ ದೊರಕಿದರೆ ಸರಿ" - ಎ.ಆರ್.ಕ್ರಿಶ್ಣ ಶಾಸ್ತ್‌ರಿ. ಅಂತ ಬರೆದಿದ್ದಾರೆ.
ಅದರಲ್ಲಿ "ಕೃತಿಯನ್ನು" "ಕ್ರುತಿ" ಎಂದು ಬರೆದರೆ "ಸಂಸ್ರುತಿ ಹಾಳು" ಎಂದು ಬಡೆದುಕೊಂಡ ಹಳೆಯ ವಿಧ್ವಂಸರ ಬಗ್ಗೆಯೋ ಪೇಳಿಕೊಂಡಿದ್ದಾರೆ.
ಸಂಸ್ಕೃತದ ಮೇಲೆ ಕುರುಡು ಅಬಿಮಾನಿಗಳು ಜಾಸ್ತಿ. ಹಲವರಿಗೆ ಅದನ್ನು ಸರಿಯಾಗಿ ಕಲಿತೇ ಇರುವುದಿಲ್ಲ, ಆದರೂ ಅದರ ಮೇಲೆ ಎಲ್ಲಿಲ್ಲಿದ ಬಕುತಿ. ಹಲವರಿಗೆ classical ಸಂಸ್ಕ್‌ರುತದಲ್ಲಿ ಬರಿ "ಬಾಯಿ" ಎಂದು ಅರ್ತ ಇರುವ ಪದವಿಲ್ಲ ಅಂತ ದಿಟ ಹೇಳಿದರೆ ನಂಬದೇ ಇಲ್ಲ. ಅಂದರೆ ಚರ್ತುಮುಖ ಬ್ರಹ್ಮನಿಗೆ ನಾಲ್ಕು ತಲೆಗಳ ಅಲ್ಲ, ಬರಿ ನಾಲ್ಕು ಬಾಯಿಗಳಿವೆ ಎಂದು ಅರ್ತ ಮಾಡಬಹುದು.
ಹಾಗೆ "ಸಃ ಆಗಚ್ಛತಿ" ಎಂದರೆ "ಅವನು ಬರುತ್ತಾನೆ" ಎಂದು ಹಲವು ಸರತಿ ಅಲ್ಲ, ಎಂದರೆ ಕಣ್ಣು ಬಾಯಿ ಬಿಡುತ್ತಾರೆ.
ಇನ್ನು "ಫಲಂ ಮಿತ್ರಂ ಖಾದತಿ" ಎಂದರೆ "ಹಣ್ಣು ಗೆಳೆಯನ/ಳನ್ನು ತಿನ್ನವುದು"/"ಗೆಳೆಯನು/ಳು ಹಣ್ಣನ್ನು ತಿನ್ನುವನು" ಎಂಬ ಎರಡು ಅರ್ತವೂ ಬರುವುದು. ಅಲ್ಲಿ exactಆಗಿ ಇದೇ ಅರ್ತ ಬರಲ್ಲ. ಅಂದರೆ ನೀನು "ದೋಷೈಕದೃಷ್ಟಿಃ ಖಲು ರಾವಣಃ ತ್ವಂ" ಎಂಬಂತೆ "ಸಂಸ್ಕ್‌ರುತ ಬೈದ್ರೆ ಪಾಪ ಬರುತ್ತೆ, ನಿಂಗೆ ಬರಿ ತಪ್ಪು ಹುಡಕಿ, ಸುಳ್ಳು ಹೇಳುವುದೇ ಚಟ" ಅಂತ ಹಾರಾಡ್ತಾರೆ.
).
( ಆಗ ನನಗೆ "ತಮಿಳು ತಲೆಗಳ ನಡುವೆ"ಯಲ್ಲಿ ಬಿ.ಜಿ.ಎಲ್ ಸಾಮಿಗಳು ತಮಿಳರು ಹೇಗೆ ಸಟೆದು ಮೊಗ ತಿರುಗಿಸಿ ಹೋಗುವರು ಎಂದ ಬರೆದಿರುವರೋ, ಆ ಬಣ್ಣನೆ ನೆನೆಪಾಗುತ್ತೆ
ಮೊನ್ನೆ ಒಬ್ಬರು "ಸಂಸ್ಕ್‌ರುತ national language" ಆಗಬೇಕು ಅಂತ ಹೇಳಕ್ಕೆ ಸುರು ಹಚ್ಚಿದ್ರು. ಅದಕ್ಕೆ ನಾನು "ಸಾರ್, ಅದು ಸಮ್ಸ್‌ಕ್ರುತ ಅಲ್ಲ", "ಸನ್‌ಸ್ಕ್ರುತ"(ಮ್ ಅಂತೂ ಅಲ್ಲ. ನ್ ಕ್ಕೆ ಹತ್ತಿರವಾದ ಸದ್ದು ) ಅಂದೆ. ಅದಕ್ಕೆ ಅವರು "ನೀನು conventಅಲ್ಲಿ ಓದಿದ್ದು ಇರಬೇಕು, ಅವರು sanskrit ಅಂತ ಬರೆತಾರೆ, ಅದಕ್ಕೆ ನೀನೇ ತಪ್ಪು ತಪ್ಪು ಹೇಳ್ತಿ" ಅಂದ್ರು. ನನಗೆ ನಗು ತಡೆಯಕ್ಕೆ ಕಸ್ಟ ಆದ್ರು. ದೊಡ್ಡೋರು ಅಂತ ಸುಮ್ನಾದೆ.
ನಾವ್ ಎಸ್ಟೇ ಹೇಳಿದ್ರು ಅವರು ಒಪ್ಪಲ್ಲ, ಯಾಕೆ ಅಂದ್ರೆ ಅವರಿಗೆ ಸಂಸ್ಕ್ರುತ ಮೇಲೆ ಬಕುತಿ ಹೆಚ್ಚು ಹೊರತು, ಅದರ ಅರಿವು ಬಕುತಿ ಅಸ್ಟು ಇಲ್ಲ. ಅವರು ಅದನ್ನು ಒಂದು "research object"ತೆರ ನೋಡದೇ ಇಲ್ಲ, ಬದಲು "ಮುಟ್ಟದೇ ದೂರದಿಂದಲೇ ಸಲಾಮ್ ಹೊಡಿಸಿಕೊಳ್ಳ ದೇವರ ವಿಗ್ರಹ" ಮಾಡಿಕೊಂಡು, ಅದರ ಸುತ್ತ ಹಕ್ಕಿಪುಕ್ಕದಂತೆ ಹಲ್ಗತೆ(ದಂತ ಕತೆ)ಗಳನ್ನು, ಮೈಮೆಗಳನ್ನು(ಮಹಿಮೆ) ಕಟ್ಟಿಕೊಂಡಿದ್ದಾರೆ.
ನೀನು ಮೇಲೆ ಹೇಳಿದ ಮಾತುಗಳು ಹಲವರ ಬರಿ ಅರಿವು/ಜಾಣ್ಮೆಯನ್ನು ಮುಟ್ಟದೇ, ಅವರ ನಂಬಿಕೆಯನ್ನು ಆಸ್ಥೆಯನ್ನು ಮೀಟುತ್ತದೆ.
======
ದಿಟವೂ ಯಾವಾಗಲೂ ನಲಿವು ತರಲ್ಲ!! ಆದರೆ ದಿಟ ತಿಳಿಯದಿರುವುದು ಅರಿಯಮಿಕೆ!
ಉ: ಕನ್ನಡ - ಕೆಲವು ಮಾಹಿತಿ
ರಾವ್ ಬಹಾದೂರ್ ರಾ. ನರಸಿಂಹಾಚಾರ್ಯ ರವರ 'ಕರ್ಣಾಟಕ ಕವಿ ಚರಿತೆ' ಯಿಂದ ಓದಿದ್ದು ಇಷ್ಟು
1) " ಕೆಳಗಣ ಈಜಿಪ್ಟಿನಲ್ಲಿ ಅಕ್ಸರಂಕಿಸ್ ಎಂಬ ಸ್ಥಳದಲ್ಲಿ ದೊರೆತ ಕ್ರಿ.ಶ. ಎರಡನೆ ಶತಮಾನದಲ್ಲಿ ರಚಿತವಾದ ಒಂದು ಗ್ರೀಕ್ ನಾಟಕದಲ್ಲಿ ಕೆಲವು ಕನ್ನಡ ಶಬ್ದಗಳು ದೊರೆಯುತ್ತವೆ". ಡಾಕ್ಟರ್ ಹುಲ್ಶ್ ಎಂಬ ಪಂಡಿತನು ಆ ನಾಟಕದ ಕೆಲವು ವಾಕ್ಯಗಳನ್ನು ಈ ರೀತಿಯಾಗಿ ಓದುತ್ತಾನೆ - "ಬೇರೆ ಕೊಂಚ ಮಧುಪಾತ್ರಕ್ಕೆ ಹಾಕಿ; ಪಾನಂ ಬೇರೆತ್ತಿ ಕಟ್ಟಿ ಮಧುವಂ ಬೆರೆತ್ತುವೆನ್" - Mysore Archaelogical Report , 1904.
2) " ದ್ರಾವಿಡ ಭಾಷೆಗಳಿಗೆ ಸಂಸ್ಕೃತ ಶಬ್ದಗಳೂ ಪ್ರಾಕೃತ ಶಬ್ದಗಳೂ ಬಂದು ಸೇರಿರುವಂತೆ ಸಂಸ್ಕೃತ ಭಾಷೆಗೂ ಕೆಲಕೆಲವು ದ್ರಾವಿಡ ಶಬ್ದಗಳು ಹೋಗಿ ಸೇರಿ ಸಂಸ್ಕೃತ ಪದಗಳೆಂದೇ ಭಾವಿಸಲ್ಪಟ್ಟಿವೆಯೆಂದೂ ಅಂಥ ಶಬ್ದಗಳಿಗೆ ಸಂಸ್ಕೃತದಲ್ಲಿ ವ್ಯುತ್ಪತ್ತಿಯನ್ನು ಹೇಳಲಿಕ್ಕಾಗದಿರುವುದೇ ಮೊದಲಾದ ಕಾರಣಗಳಿಂದ ಅವು ಸಂಸ್ಕೃತಶಬ್ದಳಲ್ಲವೆಂದೂ ಕೆಲವರೂ ಪ್ರಾಶ್ಚಾತ್ಯಪಂಡಿತರು ಅಭಿಪ್ರಾಯಪಡುತ್ತಾರೆ."
ಕನ್ನಡ - ಹಲವು ಅರಿಮೆ
ಗ್ರೀಕ್ ಕೂಟುವಲ್ಲಿ ಕನ್ನಡದ ಒರೆ ಈ ಕೆಳಗೆ ನೋಡಿರಿ
http://books.google.com/books?q=canarese+greek&as_brr=0
http://books.google.com/books?vid=ISBN8120605594&id=yhXRDSgBuL0C&pg=RA3-PA36&lpg=RA3-PA36&ots=u1wSgiRWmV&dq=kannada+greek&sig=mI8cD9fOcxqPjILFqTo3zQ7gIUs
ಈ ಕೊಂಡಿ ಚೆನ್ನಾಗಿದೆ http://books.google.com/books?vid=ISBN8120601246&id=nWXONsTkrykC&pg=PA36&lpg=PA36&dq=canarese+greek&sig=bWb__CNH1IT5MAO56Rvtjo4Lcjc
ಅಲ್ಲಿ ಬರುವ ಸಾಲುಗಳು
"ಕೊಂಚ ಮಧು ಪಾತ್ರಕ್ಕೆ ಹಾಕಿ"
"ಪಾನಂ ಬೇರಿತ್ತಿ ಕಟ್ಟಿ ಮಧುವಂ ಬೇರೆತ್ತುವೆನು"
ಈ ಸಾಲುಗಳನ್ನು ತುಳು ಎಂಬ ವಾದವನ್ನು ಹೇಳಿದರೂ "ಎತ್ತುವೆನು, ಬೇರೆ, ಎತ್ತಿ, ಹಾಕಿ, ಪಾತ್ರಕ್ಕೆ" ಇವು ಅದು ೧೦೦% ಕನ್ನಡವೆಂದು ತೋರುವುದು. ಅದೂ ಅಲ್ಲದೆ ಇವು ಕನ್ನಡ ವ್ಯಾಪರಿಗಳ ಮಾತು ಅದಕ್ಕೆ ಸಕ್ಕದದ ಒರೆಗಳು ಬರೆತಿವೆ. ಯಾವಾಗಲು ವ್ಯಾಪರಿಗಳ ಮಾತಲ್ಲಿ ಎರಡು ಮೂರು ನುಡಿಗಳು ಕಲೆತಿರುತ್ತವೆ.
ಅದಲ್ಲದೇ ಕನ್ನಡವೂ ಹಲವು ನುಡಿಗಳ ತಾಯಿ. ಕನ್ನಡದಿಂದ ಕಿರುನುಡಿಗಳು(dialects)
೧)ಬಡಗ( ನೀಲಗಿರಿಯಲ್ಲಿ ಹೆಚ್ಚು ಎತ್ತರದ ಬೆಟ್ಟಕ್ಕೆ "ದೊಡ್ಡಬೆಟ್ಟ" ಎಂದೇ ಹೆಸರು )
೨)ತೊದ
೩)ಕೊಡವ
೪)ಕೋಟ
೫)ಸೋಲಿಗ
ಇವೆಲ್ಲ ಇಂದು ಸರಕಾರದ ನೆರವಿನ ಕೊರತೆ ಇಂದ ಅಳಿಸಿ ಹೋಗುತ್ತಿವೆ. ಅದರಲ್ಲೂ ಬಡಗ, ತೊಡ, ಮುಂತಾದ ನೀಲಗಿರಿ ಬೆಟ್ಟದ ಮಾತುಗಳಗೆ, ತಮಿಳು ಸರಕಾರ ಯಾವ ನೆರವೂ ನೀಡುತ್ತಿಲ್ಲ. ಬದಲಿಗೆ ಆ ಜನರ ತಮಿಳೈಸುವಿಕೆ ಸರಕಾರದಿಂದ ನಡೆಯುತ್ತಿದೆ. ಹಿಂದೆ ಕರ್ನಾಟಕ ಸರಕಾರ ಬಡಗಕ್ಕೆ ವರುಸ ವರುಸ, ನಾಲ್ಕು ಲಕುಸ ಕೊಡುತ್ತಿತ್ತು, ಆದರೆ ೧೯೯೨ರ ಗಲಾಟೆಯ ಬಳಿಕ ಅದನ್ನು ನಿಲ್ಲಿದೆ. ಇಂದು ನೀಲಗಿರಿಯ ಟೀ-ತೋಟಕ್ಕೆ ಸಿರಿಲಂಕೆಯ ತಮಿಳರನ್ನು ಹೇರಳವಾಗಿ ಕೆಲಸಕ್ಕೆ ಹಾಕಲಾಗುತ್ತಿದೆ.
ಇನ್ನು ಕನ್ನಡದ ನೆರಳು ದಟ್ಟವಾಗಿ ಕಾಣುವ ನುಡಿಗಳು
೧)ತುಳು
೨)ಕೊಂಕಣಿ
೩)ತೆಂಕಣ ಉರ್ದು( ಇದರಲ್ಲಿ ಕನ್ನಡದ ಗ್ರಾಮರ್ ಎನ್ಟಿಟಿ ಇದೆ )
೪)ಸಂಕೇತಿ
೫)ಅಯ್ಯಂಗಾರ್‍ರ ತಮಿಳು( ಮಂಡ್ಯಂ ಮುಂತಾದ ಪಂಗಡಗಳು )
೬)ಮುಲುಕುನಾಡು, ರೆಡ್ಡಿ ಮುಂತಾದ ಕನ್ನಡ ನೆಲದಲ್ಲಿ ನೆಲೆಸಿದ ತೆಲುಗು ಪಂಗಡಗಳು.
ಹಳೆಯ ತಮಿಳು ಶಾಸನದಲ್ಲೂ ಕನ್ನಡದ ಒರೆಗಳನ್ನು ಮಹದೇವ ಅವರು ತೋರಿಸಿದ್ದಾರೆ.
ಕನ್ನಡದಿಂದ ಸಂಸ್ಕೃತಕ್ಕೆ ಹೋದ ೪೦೦(?) ಒರೆಗಳನ್ನು ಕಿಟ್ಟಲ್ ಪಟ್ಟಿಮಾಡಿದ್ದಾರಂತೆ ಅದರಲ್ಲಿ ನೀರು ಒಂದು. ಚಿದಾನಂದ ಮೂರ್ತಿಯವರು "ಮಟಜ/ಮಿಡತೆ" ಎನ್ನುವ ಕನ್ನಡದ ಒರೆ ರುಗ್ವೇದದಲ್ಲಿಯೇ ಇದೆ ಎಂದು ಬರೆದಿದ್ದಾರೆ.
======

Re: ಕನ್ನಡ - ಹಲವು ಅರಿಮೆ
೫)ಅಯ್ಯಂಗಾರ್‍ರ ತಮಿಳು( ಮಂಡ್ಯಂ ಮುಂತಾದ ಪಂಗಡಗಳು )
ಈ ಎರಡೂ ಭಾಷೆಗಳೂ, ಕನ್ನಡದವರಿಗೆ ತಮಿಳಂತೆಯೂ, ತಮಿಳಿನವರಿಗೆ ಕನ್ನಡದಂತೆಯೂ ತೋರುತ್ತವೆ
ಅಯ್ಯಂಗಾರರ ತಮಿಳಿನಲ್ಲಿ, ತಮಿಳಿನ ಭಾಗ ಸ್ವಲ್ಪ ಸಂಕೇತಿಗಿಂತಲೂ ಹೆಚ್ಚಿಗಿದೆ.
-ಹಂಸಾನಂದಿ
Re: ಕನ್ನಡ - ಹಲವು ಅರಿಮೆ
ಅದಕ್ಕೆ ಅವು ಕನ್ನಡದಿಂದ ಬಂದಿಲ್ಲ. ಅವುಗಳ ಮೇಲೆ ಕನ್ನಡದ ನೆರಳು ಬಲವಾಗಿದೆ, ಎಂದು ಹೇಳಿದ್ದು.
ಅಯ್ಯಂಗಾರರ ತಮಿಳು ಕನ್ನಡದೋರಿಗೆ ತಮಿಳಂತೆ ಕಂಡರೆ ಯಾವ ಸೋಜಿಗವಿಲ್ಲ, ಯಾಕೆಂದರೆ ಅದು ತಮಿಳೇ, ಆದರೆ ಅದು ತಮಿಳರಿಗೆ ಕನ್ನಡದಂತೆ ಕಾಣುವುದು ಅದರ ಮೇಲೆ ಕನ್ನಡದ ದಟ್ಟ ನೆರಳನ್ನು ತೋರುತ್ತದೆ. ಈ ಅಯ್ಯಂಗಾರರೇ ತಿರುಪತಿ, ಶ್ರೀರಂಗಮಲ್ಲಿ ಹೆಚ್ಚಂತೆ.
ಇನ್ನು ಮರಾಟಿಯಲ್ಲಿ ಜ್ನಾನೇಸ್ವರರ ಪದಗಳಲ್ಲೂ ಕನ್ನಡ ಒರೆಗಳಿವೆಯಂತೆ.
ಮರೆತಿದ್ದೆ, ಮದ್ಯಪ್ರದೇಸ, ಚತ್ತೀಸಗಡದಲ್ಲಿ ’ಹೊಲಿಯ’ ಎನ್ನುವ ಕನ್ನಡದ ಕಿರುನುಡಿ ಇದೆ. ಮತ್ತು ’ಉರುಲಿ’(ಉರು+ಉಲಿ? )
ಇಲ್ಲಿ ನೋಡಿರಿ
http://www.deccanherald.com/deccanherald/apr272004/spt10.asp
http://www.deccanherald.com/deccanherald/nov162004/n4.asp
http://www.uiowa.edu/~linguist/faculty/beckman/lotw01/languages/dravidian.html
http://www.ethnologue.com/show_lang_family.asp?code=hoy
http://www.rosettaproject.org/archive/hoy
http://books.google.com/books?vid=ISBN311012677X&id=a74HA_RX3rIC&pg=PR9&lpg=PR9&ots=JrI60xV4Sz&dq=URALI++kannada&sig=utb7Y58iPfe9jINJWCi_Ktyy3aU

http://books.google.com/books?vid=ISBN8175330074&id=0imWdGRe0UMC&pg=PA107&lpg=PA107&ots=iww5NUmEfv&dq=URALI++kannada&sig=D59gfNhBUMMEvuPYXlen3STJzbw
======
Re: ಕನ್ನಡ - ಹಲವು ಅರಿಮೆ
ಯಾವುದು ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ. ಅಯ್ಯಂಗಾರರ ನುಡಿಯಲ್ಲಿ ಕನ್ನಡ-ತಮಿಳು ಅಲ್ಲದ ಕೆಲವು ಶಬ್ದಗಳು ಕೂಡ ಇದೆ. ಕೆಲವಂತೂ ಹುಟ್ಟು ಹಾಕಿದ ಶಬ್ದಗಳೇ ಅಂತೆ (ಅಚ್ಚ ಹೆಮ್ಮಿಗೆ/ಹೆಬ್ಬಾರ್ "ಪಾಟಿ"ಯನ್ನು ಕೇಳಿದರೆ ಹೇಳಿಯಾರು
)
classic ಉದಾಹರಣೆಗಳು:
ಹಾಂ/ಹಾಮ್ - ಮನೆ ( ಇದು ಇಂಗ್ಲಿಷ್ home ನಿಂದ ಬಂದದ್ದೇ?? )
ವಾರ್ಚ್ಚೊಲ್ಕೊ - ಮಾತಾಡಿಕೋ (ಇದು ಪ್ರಾಯಶಃ ಸಂಸ್ಕೃತ+ತಮಿಳಿನ ಕಾಂಬಿನೇಶನ್)
ಅದಲ್ಲದೇ ಒಂದು ಪಂಗಡದವರ ಭಾಷೆ ಇನ್ನೊಂದು ಪಂಗಡಕ್ಕಿಂತ ಭಿನ್ನ. ಅಯ್ಯಂಗಾರರು ನೆಲೆಸಿದ ಜಾಗದಿಂದ ಪ್ರಭಾವಿತರಾದರು ಅನ್ನಿಸುತ್ತೆ. ಊರಿನ ಹೆಸರೇ ಇಂದಿಗೂ ಪಂಗಡ/ದೇಸಿ ಗುರುತಿಸುವಲ್ಲಿ ಬಳಕೆಯಾಗುತ್ತದೆ. ಅಲ್ಲದೇ ಅನೇಕ ಕನ್ನಡ ಅಯ್ಯಂಗಾರರಿಗೆ ತಮಿಳು ಓದಲು ಬರೆಯಲು ಬರುವುದಿಲ್ಲ. ತಮಿಳು ಓದಲೇಬೇಕಾದರೆ (ಅಪರೂಪವಾಗಿ ಪೂಜೆಯ ಸಮಯದಲ್ಲಿ) ಕನ್ನಡ ಲಿಪಿಯನ್ನೇ ಬಳಸುವುದು. ಮಾತನಾಡುವ ತಮಿಳಂತೋ ಬಿಡಿ. ಮದುರೈ ಗೆಳೆಯ ಒಬ್ಬ ನಿನ್ನ ಭಾಷೆಯನ್ನು ತಮಿಳು ಎಂದು ಕರೆದು ತಮಿಳನ್ನು ಕೊಲ್ಲಬೇಡ ಎಂದಿದ್ದ.
. ಆದರೆ ಕನ್ನಡ ಬಾರದ ಕರ್ನಾಟಕದ ಅಯ್ಯಂಗಾರಿ ಪಿಳ್ಳೆಯನ್ನು ನಾನಿನ್ನೂ ನೋಡಿಲ್ಲ. 
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಕನ್ನಡ - ಹಲವು ಅರಿಮೆ
ಇಲ್ಲರೀ, ಹಾಂ (ಅಂದ ಹಾಗೆ ಇದರಲ್ಲಿ ಬರುವ ಅನುಸ್ವಾರ, ಕನ್ನಡದ್ದಲ್ಲ).
ಅಗಮ್ -> ಅಹಮ್ -> ಹಾಮ್ (ಒಳಗೆ -> ಮನೆ). ಅಗಮ್ ಎಂಬ ಪದ ತಮಿಳಿನಲ್ಲೂ ಇದೆ. ಅಹನಾನೂರು/ಅಗನಾನೂರು ಎನ್ನುವ ಕಾವ್ಯವನ್ನು ಕೇಳಿರಬಹುದಲ್ಲ?
ತಮಿಳಿನಲ್ಲಿ ಹೆಚ್ಚಿಗೆ ಮನೆ ಅನ್ನುವ ಅರ್ಥದಲ್ಲಿ ಸಾಮಾನ್ಯವಾಗಿ ವೀಡು, ವೀಟ್ಟು ಎಂಬ ಪದಗಳನ್ನು ಉಪಯೋಗಿಸಿಸರೂ ಕೆಲವರಲ್ಲಿ ಆಮ್, ಆತ್ತುಕ್ಕು ಮೊದಲಾಗಿ ಉಪಯೋಗ ಇನ್ನೂ ಇದೆ. ಮೂಲ ತಮಿಳಿನಲ್ಲಿ ಇಲ್ಲದ ಹಕಾರ, ಸಂಕೇತಿ, ಮತ್ತು ಮಂಡ್ಯಂ ಅಯ್ಯಂಗಾರರ ನುಡಿಯಲ್ಲಿ ಭಾರೀ ಅವಕಾಶ ಗಳಿಸಿದೆ
ಹೌದು. ವಾರ್ತೆ + ಚೊಲ್ಲು -> ವಾರ್ಚೊಲ್ಲು
-ಹಂಸಾನಂದಿ
ಇಜಿಪ್ಟಲ್ಲಿ ಕನ್ನಡ
@ವಯ್ಬವ( ಸಂಕರ ಬಟ್ಟರ "ಕನ್ನಡ ಬರಹವನ್ನು ಸರಿಪಡಿಸೋಣ!"ದ ಅಂತೆ
)
ಕನ್ನಡದ ಮಾತುಗಳು ಇಜಿಪ್ಟಲ್ಲೂ ದೊರೆತಿವೆ.
http://books.google.com ಅಲ್ಲಿ "canarese egypt" ಅಂತ ಹುಡುಕಿದರೆ, ಬೇಕಾದನಿತ್ತು referenceಗಳು ಸಿಗುವುವು.
ಅದೂ ಅಲ್ಲದೇ ಹರಪ್ಪ ನಡಾವಳಿಯಲ್ಲಿ ಕನ್ನಡರಿಗೆ ಒಂದು "ಅಂಬು"ಇನ ಗುರುತಿತ್ತೆಂದು, ಅದರಲ್ಲಿ ಹಲವು ಕನ್ನಡ-ತಮಿಳು ಒರೆಗಳನ್ನು ತೋರಿಸಿ ಹೇಳಿದ್ದಾರೆ.
ಹಿಂದೆ ಸಂಗನಗೌಡರೂ ಈ ವಿಸಯವಾಗಿ ಹಲವು ಹೊತ್ತಗೆಗಳನ್ನು ಹುಡುಕಿದ್ದುಂಟು.

======
Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ
ಇದು ಒಪ್ಪುವಂತಹ ಮಾತು. ನಾನು ನಾಮಾನ್ಯ ಜನರ ರೂಢಿಯಲ್ಲಿ ಉಪಯೋಗಿಸುವ ಸಂಸ್ಕೃತ ಪದಗಳನ್ನು ಅವು ಸಂಸ್ಕೃತವೆಂಬ ಕಾರಣದಿಂದ ವಿರೋಧಿಸುವುದನ್ನು ವಿರೋಧಿಸುತ್ತೇನಷ್ಟೆ. (ಉದಾ: ದಿನ, ನಿತ್ಯ, ಜನ, ನಿಜ, ವಿರೋಧ, ರೂಢಿ, ಸಾಮಾನ್ಯ, ಇವೆಲ್ಲ ಸಂಸ್ಕೃತದಿಂದ ಬಂದಿರಬಹುದು. ಆದರೆ, ಕನ್ನಡದವೇ ಆಗಿಹೋಗಿವೆ. ಈ ಪದಗಳನ್ನೂ, ಯಾದೃಚ್ಛಿಕ, ಇತ್ಯಾತ್ಮಕ, ನೇತ್ಯಾತ್ಮಕ ಮೊದಲಾದ ಪದಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವಂತಿಲ್ಲ.)
ಹಂಸಾನಂದಿ
Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ)
ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ. ಕುದುರೆ, ಬಿರಡೆ ಈ ಮೊದಲಾದ ಪದಗಳು, ಎಲ್ಲಾ ತಂತೀ ವಾದ್ಯಗಳಿಗೂ ಉಪಯೋಗಿಸುವ ಪದಗಳು.ಪಿಟೀಲಿಗೆಂದೇ ಸೃಷ್ಟಿಸಿರುವ ಪದಗಳಲ್ಲ. ಕಮಾನು ಎನ್ನುವುದು ಮಾತ್ರ ಪಿಟೀಲಿಗೋಸ್ಕರವೇ ಬಂದಿರುವ ಪದದಂತೆ ಕಾಣುತ್ತದೆ. ಸಾರಂಗಿಗೆ ಕಮಾನು ಉಪಯೋಗಿಸುವುದಾದರೂ, ಹಿಂದೆ ದಕ್ಷಿಣ ಭಾರತದಲ್ಲಿ ಸಾರಂಗಿ ಎಷ್ಟು ಪ್ರಸಿದ್ಧವಾಗಿತ್ತೋ ನನಗೆ ತಿಳಿಯದು.
ಇಷ್ಟೇ ಅಲ್ಲದೆ, ಹಿಂದಿನಿಂದಲೂ, ನಮ್ಮ ಸಂಗೀತದ ಪಾರಿಭಾಷಿಕ ಪದಗಳಲ್ಲಿ ಕನ್ನಡ, ತೆಲುಗು ಇತ್ಯಾದಿ ಭಾಷೆಗಳು ಉಪಯೋಗವಾಗುತ್ತಲೇ ಇವೆ. ಗ್ರಂಥಗಳು ಸಂಸ್ಕೃತದಲ್ಲೇ ಇದ್ದರೂ, ಈ ಶಬ್ದಗಳನ್ನು ಹಾಗೇ ಉಪಯೋಗಿಸುವುದನ್ನು ನೋಡಬಹುದು.
ಉದಾಹರಣೆಗೆ ಹೇಳಬೇಕಾದರೆ, ಯಾವುದೇ ಸಂಗೀತರಚನೆಗೂ ಎರಡು ಮುಖ್ಯ ಲಕ್ಷಣ ಇರುತ್ತದೆ - ಮಾತು ಮತ್ತು ಧಾತು. ಮಾತು ಸಾಹಿತ್ಯವನ್ನು ಸೂಚಿಸಿದರೆ, ಧಾತು, ಅದನ್ನು ಹಾಡಬೇಕಾದ ಮಟ್ಟನ್ನು ಸೂಚಿಸುತ್ತದೆ. ಇಲ್ಲಿ ಮಾತು ಎಂಬ ಮಾತು ಯಾವ ಭಾಷೆಯಿಂದ ಬಂದಿದೆ ಎನ್ನುವುದನ್ನು ಹೇಳಬೇಕಾಗಿಯೇ ಇಲ್ಲವಲ್ಲ
-ಹಂಸಾನಂದಿ
Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ)
ಕಮಾನು = ಅರೇಬಿಕ್ ಶಬ್ದ ಎನಿಸುತ್ತದೆ. ಅಲ್ಲೂ ವಯೋಲಿನ್ನಿಗೆ ಕಮಾನ್ ಎನ್ನುತ್ತಾರಂತೆ.
http://www.maqamworld.com/instruments.html
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಕಮಾನಿನ ಬಗ್ಗೆ
ಶ್ರೀನಿಧಿಯವರೇ, ಕಮಾನ್ ಶಬ್ದದ ಅರ್ಥವನ್ನು ತಿಳಿಸಿದ್ದು ಸವಿಯೊದಗಾಯಿತು. ವಯೋಲೀನಿಗೆ ನಾವು ಪಿಟೀಲು ಎನ್ನುತ್ತೇವೆ. ತಲೆ, ಬಿರುಡೆ, ಬಿಲ್ಲು, ಹಲಗೆ, ಮುಂತಾದವು ಪಿಟೀಲು ಮತ್ತು ಹಂಸಾನಂದಿಯವರು ಹೇಳಿದ ಹಾಗೆ ಕೆಲವು ವೀಣೆಗೂ ಅನ್ವಯಿಸುವ ಸಂಗೀತೋಪಕರಣಗಳಿಗೆ ಸಂಬಂಧಪಟ್ಟ ಕನ್ನಡ ಪದಗಳು. ಆದರೆ ಬಹುಮುಖ್ಯವಾಗಿ ವಯೋಲೀನ್ = ಪಿಟೀಲು (ಕಾನ್ಸೆಪ್ಚುಯಲೈಸೇಷನ್ ಮಾರಾಯ್ರೆ) ಇದು ೧೦೦% ಸಂಸ್ಕೃತಕ್ಕೆ ಹೊರತಾದದ್ದು.
Re: ಕಮಾನಿನ ಬಗ್ಗೆ
ಪಿಟೀಲು ಅನ್ನುವುದು ಇಂಗ್ಲಿಷ್‍ನ fiddle ಅನ್ನುವ ಪದದ ತದ್ಭವ
ಇನ್ನು ಕಮಾನು. ಕಟ್ಟಡಗಳಲ್ಲಿರುವ arch ಗಳಿಗೆ ಕಮಾನು ಎಂದು ಕರೆಯುತ್ತೇವೆ. ಕರಟದ ಪಿಟೀಲು (ನಿಮಗೆಲ್ಲ ತಿಳಿದಿದೆ ಎಂದುಕೊಂಡಿದ್ದೇನೆ) ಎಂಬ ಒಂದು ತಂತಿ ವಾದ್ಯವಿದೆ. ಜಾತ್ರೆ ಪರಿಸೆಗಳಲ್ಲಿ, ಈ ವಾದ್ಯದಲ್ಲಿ ಇಂಪಾಗಿ ಚಿತ್ರಗೀತೆಗಳನ್ನು ನುಡಿಸಿ , ಮಾರುವವರನ್ನೂ ನೀವೂ ನೋಡಿರಬಹುದು. ಆ ವಾದ್ಯಕ್ಕೆಇರುವ bow ನಿಜವಾಗಿ, ಕಮಾನಿನ ತರಹ, ಅಥವ ಬಿಲ್ಲಿನ ತರಹ ಮಾಡಿರುತ್ತಾರೆ. ಹಾಗಾಗಿ, ಅದು ಅನ್ವರ್ಥ ನಾಮವೇ. ಆದರೆ ಶಾಸ್ತ್ರೀಯ ಸಂಗೀತಕ್ಜಿರುವ ಪಿಟೀಲಿನ ಬೋ ಮಾತ್ರ, ಕಡ್ಡಿ ಹಾಗಿರುತ್ತೆ
-ಹಂಸಾನಂದಿ
ಟಿ: ಕಮಾನಿನ ಬಗ್ಗೆ
ನನ್ನಿ ಹಂಸಾನಂದಿಯವರೇ. ನೋಡಿ ಕನ್ನಡಾಗಿಸುವಿಕೆಗೆ ಇದೊಂದು ಅತ್ಯುತ್ತಮ ಉದಾಹರಣೆ ಎನ್ನಬಹುದು. ದ್ರಾವಿಡ ಪದಕೋಶದಲ್ಲಿ ಪಿಟೀಲಿನ ಬಗ್ಗೆ ಎಂಥ ಸೊಗಸಾದ ವಿವರಣೆ ಸಿಗುತ್ತದೆ ನೋಡಿ.
ಪಿಟಿ
ಇಯಲು ಅಥವಾ ಈಲು
ಒಟ್ಟಿನಲ್ಲಿ ಈಗಿರುವ "ಪಿಟೀಲು" ಎನ್ನುವುದು Violin ಎಂಬ ಜ್ಞಾನವನ್ನು ಅಳೆದು ತೂಗಿ ಸಂಸ್ಕೃತಕ್ಕೆ ಹೊರತಾಗಿಯೂ ತನ್ನದಾಗಿಸಿಕೊಂಡ ಕನ್ನಡದ ಒಂದು ಹೆಗ್ಗಳಿಕೆ, ಕಾನ್ಸೆಪ್ಟು. ಇಂತಹ ನೂರಾರು ಉದಾಹರಣೆಗಳು ಸಂಸ್ಕೃತದ ಹೊರತಾಗಿಯೂ ಇರುವ ಕನ್ನಡದ ಗಟ್ಟಿಯಾದ ತಳಹದಿಯನ್ನು ಮತ್ತು ಹೊಸ ಪದಗಳನ್ನು ಹುಟ್ಟುಹಾಕುವ, ಜ್ಞಾನವನ್ನು ಸ್ವೀಕರಿಸುವ ಸಾಮರ್ಥ್ಯವನ್ನು ನಿರೂಪಿಸುತ್ತದೆ. ಜ್ಞಾನದ ಹರಿವು ಮತ್ತು ನುಡಿಯ ಬಳಕೆಯ ಬಗ್ಗೆ ಸರಿಯಾಗಿ ತಿಳಿಯದೆ "ಸಂಸ್ಕೃತವಿಲ್ಲದ ಕನ್ನಡ ಜಾಳು" ಎಂದು ಬಗೆಯುವ ಮನಸ್ಥಿತಿಯ ಪೊಳ್ಳುತನವನ್ನು ಜಾಡಿಸೋಣ. ಇದನ್ನು ಒಪ್ಪಿಕೊಳ್ಳುವ ಸೌಜನ್ಯ ಕೆಲವರಿಗೆ ಇಲ್ಲದಿದ್ದರೆ ನಾವೇನೂ ಮಾಡಲಾಗುವುದಿಲ್ಲ. ಇದರ ಬಗ್ಗೆ ಸಂಸ್ಕೃತದ ಮಾತನ್ನು ಸ್ವಲ್ಪ ಹೊರಳಿಸಿ ಸೌಜನ್ಯದಿಂದ ವ್ಯಕ್ತಿಗತವಲ್ಲದೆ ಹೀಗೆ ಹೇಳಬಹುದು, "ಹುಚ್ಚುತನಕ್ಕೆ ಔಷಧಿ" ಇಲ್ಲ.
ಅಂದ ಹಾಗೆ ತತ್ಸಮ, ತದ್ಭವ ಮತ್ತು ಸಮಸಂಸ್ಕೃತ ಇವುಗಳ ಬಗ್ಗೆ ಹೇಳಲು ತುಂಬಾ ಇದೆ. ಬಿಡುವಿದ್ದಾಗ ಬರೆಯುತ್ತೇನೆ.
ಸಮಸಂಸ್ಕ್‌ರುತ
"ಸಮಸಂಸ್ಕ್‌ರುತ ಕಾವ್ಯ" ಅಂತ ಹಿಂದೆ ಇದ್ದಿತಂತೆ. ಆದರೆ ಅದೇನು ಎಂದು ತಿಳಿಯದು ಎಂದು ನಾನು ಓದುತ್ತಿರುವ ಕವಿರಾಜಮಾರ್ಗದ ಬಿಡಿಸುಗಾರ ಹೇಳಿದ್ದಾರೆ.
ತತ್ಸಮಗಳು ಕನ್ನಡದ ಒರೆಗಳು ಕೂಡ
ತತ್ಸಮ - ತದ್ಬವ
ವೇೞ್ಕು- ಬೇಕು
ಗೆಲ್ದು - ಗೆದ್ದು
ಬೀಳ್ತು - ಬಿತ್ತು
ಇದರ ಬಗ್ಗೆ ಶಬ್ದಮಣಿದರ್ಪದಲ್ಲೂ ಇದೆ. ಆದರೆ ಅಲ್ಲೂ ಒಂದು ಸಾಲು ಹೇಳಿ ಸುಮ್ಮನಾಗಿದ್ದಾನೆ.
ಸುನಿಲ...
ಕವಿರಾಜಮಾರ್ಗದಲ್ಲಿ 'ಘಾಸ' ಮುಂತಾದ ಮರಾಟಿ/ಪ್ರಾಕ್ರುತ ಒರೆಗಳು ಇವೆ. ಅದನ್ನು ಬರೆದವನೇ ಮಾನ್ಯಖೇಟದಿಂದ ತೆಂಕಣಕ್ಕಿದ್ದ ಕೊಪಣ, ಒಕ್ಕುಂದ, ಕಿಸುವೊಳಲು( ಈಗಿನ ಕೊಪ್ಪಳ, ಬೆಳಗಾವಿ, ಪಟ್ಟದಕಲ್ಲು) ನೆಲವನ್ನು ತಿರುಳ್ಗನ್ನಡನಾಡು( ಅಂದರೆ ಅಚ್ಚಗನ್ನಡ ನೆಲ ) ಎಂದು ಹೇಳಿದ್ದಾನೆ. ನನಗೆ ಅವನು ಇನ್ನೂ ತೆಂಕಣದ 'ಎಮ್ಮೆನಾಡು'( ಮೈಸೂರು, ಕಾವೇರಿಯಿಂದ ತೆಂಕಣ) ಈ ನೆಲವನ್ನು ನೋಡಿರಲಿಲ್ಲ; ಅಲ್ಲಿಯ ಕನ್ನಡವನ್ನು ಕೇಳಿರಲಿಲ್ಲ; ಕೇಳಿದದ್ದರು ಅದನ್ನು ಹೆಚ್ಚು ಗವನ ಮಾಡಿಲ್ಲ; ಎಂದು ಅನ್ನಿಸ ಹತ್ತಿತು. ಎಮ್ಮೆನಾಡಿನ ಒಂದು ಊರು ಅದರಲ್ಲಿ ಇಲ್ಲವೆಂದು ತೋರಿತು. ಯಾರಿಗಾದರು ಕ.ರಾ.ಮಾ ಅಲ್ಲಿ ಎಮ್ಮೆನಾಡಿನ(ಮೈಸೂರಿನ) ಊರುಗಳ ಹೆಸರು ಸಿಕ್ಕರೆ ಹೇಳಿರಿ.
ಅಂದರೆ ಕವಿರಾಜಮಾರ್ಗದ ಹೊತ್ತಿನಲ್ಲಿ ಮಾನ್ಯಕೇಟದಲ್ಲೀ ಹೇರಳವಾದ ಪ್ರಾಕೃತ ಮತ್ತು ಸಕ್ಕದದ ನೆರಳಿದ್ದು, ದಿಟವಾದ, ಮತ್ತು ಅಣ್ಣೆಯಾದ ಕನ್ನಡ ಮಾನ್ಯಕೇಟದ ತೆಂಕಣಕ್ಕಿತ್ತು ಎಂದು ಹೇಳಬಹುದು.

======
ಕನ್ನಡ conceptualization ಒಂದು ಮಾದರಿ
ಸಕ್ಕದದ 'ಕುಂಭ' ಕ್ಕೆ ಕನ್ನಡದ 'ಗಾರ' ಸೇರಿ ಕುಂಬಾರ ಆಗಿದೆ. ಅದು ಕುಂಭಾರ ಅಲ್ಲ. ಕುಂಬಾರನೇ, ಏಕೆಂದರೆ ಕನ್ನಡದಲ್ಲಿ (atleast ಆಡುಮಾತಿನಲ್ಲಿ) 'ಭ' ಇಲ್ಲ.
ನಾವು ಕುಂಬಾರನ ಹತ್ತಿರ ಹೋಗಿ 'ಕುಂಭ' ಮಾಡಿ ಕೊಡು ಅನ್ನಲ್ಲಾ, ಕೊಡಾನೇ ಅಂತೀವಿ. ಕುಂಭ ಸಕ್ಕದ, ಆದರೆ ಕುಂಬಾರ ಕನ್ನಡಾನೇ. ಅದನ್ನು 'ಕೊಡಗಾರ'ನೂ ಅನ್ನಬಹುದು.
('ಗಾರ'ಕ್ಕೆ ಹಲವು ಮಾದರಿ, ಬಡಿಗೆಗಾರ, ಮುತ್ತುಗಾರ, ಬಳೆಗಾರ)
ಸಕ್ಕದ ಮತ್ತು ಇತರ IE ನುಡಿಗಳು ಕನ್ನಡದಿಂದ (ಇಲ್ಲವೇ ಪ್ರೊಟೋ DR ನುಡಿಯಿಂದ ಅನ್ನಬಹುದು) gramatical structure ತುಗೊಂಡಿವೆ. ಮಹೇಶರು ಹೇಳುವಂತೆ ಸಕ್ಕದದಲ್ಲಿ ವಾಕ್ಯಗಳನ್ನು ಹಲವು ರೀತಿ interpret ಮಾಡಬಹುದು. ಕನ್ನಡದ grammer ಆ ಲೆಕ್ಕದಲ್ಲಿ ಹೆಚ್ಚು stable ಆಗಿದೆ.
ಕನ್ನಡ grammer ಸ್ಟೆಬಿಲಿಟಿ ಬಗ್ಗೆ,
ನಾನು ಮನೆಗೆ ಹೋಗುತ್ತೇನೆ,
ನಾನು ಹೋಗುತ್ತೇನೆ, ಮನೆಗೆ.
ಹೋಗುತ್ತೇನೆ ನಾನು, ಮನೆಗೆ
ಮೇಲಿನ ಮೂರು ವಾಕ್ಯಗಳಲ್ಲಿ, ಬರೀ ಪದಗಳನ್ನು ಹಿಂದು ಮುಂದು ಮಾಡುವದರಿಂದ, ಎಲ್ಲಿಗೆ ಹೋಗುತ್ತೇನೆ, ಏನು ಮಾಡುತ್ತೇನೆ ಮತ್ತು ಯಾರು ಹೋಗುತ್ತಾರೆ ಎಂಬುದನ್ನು ಹೇಳಬಹುದು.
ಇಂಗ್ಲಿಸ್‍ನಲ್ಲಿ ಇದು ಆಗದು.
ಕನ್ನಡಕ್ಕೆ ಕನ್ನಡತನ
ಸಂಗನ,
ಕನ್ನಡದ ಗಟ್ಟಿತನದ ಬಗ್ಗೆ ಸಂಕರ ಬಟ್ಟರ ಹೊತ್ತಗೆಯಲ್ಲಿ ಸಕ್ಕತಾಗಿ ಬರೆದಿದ್ದಾರೆ.
ಅವರು ಹೇಳುವಂತೆ
ರಾಮ ರಾವಣನನ್ನು ಕೊಂದನು - active voice
ರಾವಣನನ್ನ ರಾಮ ಕೊಂದನು - passive voice.
ಅಂದರೆ ಕನ್ನಡದಲ್ಲಿ ಕರ್ತರಿ/ಕರ್ಮಣಿ voicesಗೆ ಬೇರೆ ಬೇರೆ ಬಗೆಯಲ್ಲಿ ಸಾಲು ಮಾಡುವ 'ಬೇಕು' ಇಲ್ಲ. ಬರಿ ಒರೆಗಳನ್ನು ಆಚೆ-ಈಚೆ ಮಾಡಿ ಅದನ್ನು ಆಗಿಸಬಹುದು.
ಅವರ "ಕನ್ನಡ ಸರ್ವನಾಮಗಳು" ಈ ಹೊತ್ತಗೆ ಬಹಳ ಆಳವಾಗಿ ಸಂಸ್ಕ್ರುತ ಗೊಂದಲ-ಗಲಿಬಿಲಿಗಳನ್ನು ಎತ್ತಿ ತೋರಿಸಿ, ಅಂತಹ ಕಡೆ ಕನ್ನಡವು ಹೇಗೆ ಮೇಲುಗೈ ಆಗುವುದೆಂದು ನೀಟಾಗಿ ಹೇಳಿದ್ದಾರೆ.
.
.
.
.
ನೀನು ಹಿಂದೆ ಹೇಳಿದ ಹೊಳ್ಳಿ(ಹೊರಳಿ) ಬಗ್ಗೆ ನಾನು ಬಹಳ ಉಂಕಿಸಿದೆನು. ನಿನ್ನ ಗಮನಿಕೆ ಸರಿ...
ತೆಗೆದುಕೊ => ತಗೊ
ಮಲಗಿಕೋ => ಮಕ್ಕೊ
ಒಗ್ಗಿಕೊ => ಒಕ್ಕೊ
ಹೆಕ್ಕಿಕೊ=>ಹೆಕ್ಕೊ
ಈ ಬಗೆಯ ಮಾರ್ಪಾಟು ತೆಂಕಣ-ಬಡಗಣ ಅನ್ನದೇ ಎಲ್ಲ ಕನ್ನಡದ ನೆಲದಲ್ಲೂ ಆಗ್ತಾ ಐತೆ.
ಹೀಗೆ ಮುಂತಾದವು ಹೊಸಕನ್ನಡದಲ್ಲಿ ಕನ್ನಡದ ಬೆಳವಣಿಗೆಯೇ ಸರಿ. ಇವನ್ನು ನಾವು ಬರವಣಿಗೆಯಲ್ಲಿ ಹೊಸ ಒರೆಗಳೆಂದು ಬಗೆದು ಅವನ್ನು ಬರೆಯಲು ತೊಡಗಬೇಕು.
"ಹೊತ್ತಗೆಯನ್ನು ತಗೊಂಡು ರಾಮ ಹೋದ" ಇದು ೧೦೦% ಸರಿ. ಇಲ್ಲಿ 'ತೆಗೆದುಕೊಂಡು' ಎಂದು ಹೇಳಲೇ ಬೇಕು ಎನ್ನಬಾರದು.
"ಮಗು ಮಕ್ಕೊ, ಕತೆ ಹೇಳ್ತೇನೆ" ಇದು ೧೦೦% ಸರಿ. ಅದು ಬರಹದಲ್ಲೂ ಸರಿ!
ಕನ್ನಡಕ್ಕೇ ಸಂಸ್ಕ್ರುತದ ನಿಂತಲ್ಲೇ ನಿಲ್ಲುವ ಬೇನೆ ಹತ್ತಬಾರದು. ಅದು ಎಂದು ಹೀಗೆ ಮರ್ಪಾಟು ಹೊಂದ್ತಾ ಬೆಳೆತಿರಬೇಕು. ಬೆಳೆಬೇಕು ಅಂತ ಇಂಗ್ಲೀಸು-ಸಂಸ್ಕ್ರುತ ಮುಂತಾದವನ್ನು ಸಿಕ್ಕಾಪಟ್ಟೆ ಕನ್ನಡದಲ್ಲಿ ಕಲಸಿದರೆ, ಕನ್ನಡ ಬೆಳಯೋ ಬದಲು ಕೊಳೆಯತ್ತೆ.
ಸಂಕರ ಬಟ್ಟರು ಹೇಳುವಂತೆ ಇಂದು ಕನ್ನಡ ನ್ಯೂಸ್ ಪೇಪರ್‍ಗಳು, science ಪೇಪರ್‍ಗಳು, ಮುಂದಾದ "ಮಾಧ್ಯಮಗಳು" ೫೦% ಹೆಚ್ಚು ಸಂಸ್ಕ್ರುತ ಕಲಸ್ತಾ ಇವೆ. ಇದರಿಂದಲೇ ಕನ್ನಡ ಎಕ್ಕುಟ್ಟು ಹೋಗ್ತಾ ಇರೋದು.
ಒಟ್ಟಿನಲ್ಲಿ ಆಡುಗನ್ನಡ ಮತ್ತು ಬರೆಗನ್ನಡ ಹತ್ತಿರವಿದ್ದು, ಇಂದು ಇರುವ ಪಟ್ಟಣದ ಕಲಸು ಕನ್ನಡಕ್ಕೂ ಮತ್ತು ನಮ್ಮ ಹಳ್ಳಿಯ ಅಣ್ಣೆಗನ್ನಡಕ್ಕೂ ದೂರ ತಗ್ಗಬೇಕು.
ಒಂದು ಬಗೆಯಲ್ಲಿ ನಮ್ಮ ಹಳ್ಳಿಯ ಕನ್ನಡವೇ ಅಣ್ಣೆಯಾಗಿದ್ದು, ಅದುವೇ ಮೇಲ್ಮಟ್ಟದ್ದು. ಅದನ್ನು ಯಾವ ದೊಡ್ಡದಲೆಯೂ ಇನ್ನೂ ಕೆಡಿಸಿಲ್ಲ.!!!
======

Re: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!!
ಸುನಿಲರ ಪ್ರತಿಕ್ರಿಯೆ ಗಮನಿಸಿದೆ.ಬಹು ಸುಂದರವಾಗಿ ವಾದಿಸಿದ್ದಾರೆ.ಆದರೆ ಅವರು ಚರ್ಚೆಯ ಭರದಲ್ಲಿ ಕೆಲವು ಸಂಗತಿಗಳನ್ನು ಮರೆತಿದ್ದಾರೆ.ಸಂಸ್ಕೃತವನ್ನು ನಾವು ಅಷ್ಟು ಸುಲಭವಾಗಿ ನಿರಾಕರಿಸಲು ಸಾದ್ಯವಿಲ್ಲ.ನಮ್ಮ ಮನೆಯ ತಳಹದಿ ನಮಗೆ ಕಾಣದಿರಬಹುದು.ಅಂದ ಮಾತ್ರಕ್ಕೆ ನಮಗೆ ತಳಹದಿಯೇ ಬೇಕಿಲ್ಲ!ಅದು ಇಲ್ಲದಿದ್ದರೂ ನಡೆಯುತ್ತದೆ!ಮೇಲಿನ ನಾಲ್ಕು ಗೋಡೆಗಳೇ ಸಾಕು!!ಕಾಣದ ತಳಹದಿಯಿಂದೇನು?!ಎನ್ನುವುದು ಮೂರ್ಖತನವಾಗುತ್ತದೆ.ಕನ್ನಡದ ನಾಲ್ಕು ಗೋಡೆಗಳಿಗೆ ಸಂಸ್ಕೃತವೇ ಬುನಾದಿ.ಸಂಸ್ಕೃತವಿಲ್ಲದಿದ್ದರೆ ಕನ್ನಡದ ಅಸ್ತಿತ್ವಕ್ಕೇ ಧಕ್ಕೆ.ಏಕೆಂದರೆ ಕನ್ನಡದ ವ್ಯಾಕರಣದ ಮೂಲವಿರುವುದೇ ಸಂಸ್ಕೃತದಲ್ಲಿ!!
ಕನ್ನಡ ಶಬ್ಧಮಣಿದರ್ಪಣ ಬಹುತೇಕ ಪಾಣಿನಿಯ ಸಂಸ್ಕೃತ ವ್ಯಾಕರಣದ ಅನುಸರಣೆ.ಅಲ್ಲಿನ ಸಂಧಿ,ನಾಮ,ಸಮಾಸ,ತದ್ಧಿತ,ಆಖ್ಯಾತ,ಧಾತು,ಅಪಭ್ರಂಶ,ಅವ್ಯಯಗಳೆಂಬ ಎಂಟು ಅಧ್ಯಾಯಗಳು ಸಂಸ್ಕೃತದ ತದ್ಧ್ರೂಪ.ಅಂದ ಮಾತ್ರಕ್ಕೆ ನಾನು ಕನ್ನಡದ ಸ್ವಂತಿಕೆ ಏನೂಇಲ್ಲ ಎಂದಂತೇನಲ್ಲ.ಕಾಲಾಂತರದಲ್ಲಿ ಅನೇಕ ಕನ್ನಡದ್ದೇ ಆದ ಹೊಸ ಸಂಗತಿಗಳು ಸೇರ್ಪಡೆಯಾಗಿವೆ. "ಯಾರು ಏನು ಹೇಳಿದರೂ ನನಗೆ ಸಂಸ್ಕೃತವೇ ಸರ್ವಭಾಷಾಜನನಿ, ದೇವಭಾಷೆ" ಎಂದರೆ ಅದು ಅಜ್ಞಾನದ ಮತ್ತು ಅಹಂಕಾರದ ಪ್ರತಿರೂಪ ಅಷ್ಟೇ. ಎಂಬ ನಿಮ್ಮ ಮಾತು ಎಷ್ಟು ಅಸಂಗತ,ಮಿಥ್ಯ,ಎಂಬುದನ್ನು ತಿಳಿಯಲು ದಯವಿಟ್ಟು ಸ್ವಲ್ಪ "ಭಾಷಾಶಾಸ್ತ್ರ"ಅಧ್ಯಯನ ಮಾಡಿ.ನೀರು,ಪದ,ಗುಣ,ಪರ್ವ ಇವೆಲ್ಲಾ ಕನ್ನಡದ ಪದಗಳು ಎಂಬುದೂ ತಪ್ಪೆ.ಇವುಗಳೆಲ್ಲದರ ಮೂಲ ಸಂಸ್ಕೃತವೇ.ಕಡೆಯದಾಗಿ ಒಂದು ಮಾತು "ನಾವೆಂದಿಗೂ ನಮ್ಮ ಮೂಲ ಮರೆತು ಬಾಳಲು ಸಾದ್ಯವಿಲ್ಲ".ನಮಸ್ಕಾರ
ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು
ಮತ್ತದೇ ಕುರುಡು ನಂಬಿಕೆ, illogical ಮಾತು.
ಇವರು ಈ ಎಳೆಯಲ್ಲಿ ನಡೆದ ಎಲ್ಲ ಮಾತುಗಳನ್ನು ಓದಿರುವುದರ ಬಗ್ಗೆ ಐಬು ಕಾಣುತ್ತಿದೆ.
ಕವಿರಾಜಮಾರ್ಗದಲ್ಲಿ, ಶಬ್ದಮಣಿದರ್ಪಣದಲ್ಲೂ ಯಾವ ಸಂಸ್ಕ್ರುತದ ಒರೆಗಳನ್ನು ಬಳಸಬಾರದು ಎಂದೂ ಇದೆ. ಕೆಲವು ಸಂಸ್ಕ್ರುತದ ಒರೆಗಳನ್ನು ಬಳಸುವುದು ಇನಿದನಿಯ ನಡುವೆ ಕಿಟಾರನೆ ಕಿರುಚಿದಂತೆ ಎಂದೂ ಇದೆ.
"ಸಂಸ್ಕ್ರುತದಿಂದ ಎಲ್ಲ ನುಡಿಗಳು ಹುಟ್ಟಿರುವುವು ಈ ಮಾತು ತಪ್ಪು. ಭಾಷಾಶಾಸ್ತ್ರ ಓದು" ಎಂದು ಹೇಳಿವವರು, "ಭಾಷಾಶಾಸ್ತ್ರ" ಓದಿದ್ದಾರೆಯೇ? ಇದು disprove ಆಗಿ ಯಾವ ರಾಯನ ಕಾಲ ಆಯ್ತು. !!
Cadwell ಅವರು ಇದರ ಬಗ್ಗೆ ಇತ್ತ ವಾದವನ್ನು ಸರಕಾರಗಳೇ ಒಪ್ಪಿ, ಕುಪ್ಪಂ, AP ಅಲ್ಲಿ "Dravidian university", ದ್ರಾವಿಡ ನುಡಿಕುಳದ ನುಡಿಗಳ ಕುಱಿತೋದಿಗೆ ತೆರೆದಿದೆ.
ಇನ್ನೂ ಪಾಣಿನಿಯ ವ್ಯಾಕರಣ. ಕನ್ನಡದ ಗ್ರಾಮರ್ ಬರೆದವರು ಪಾಣಿನಿಯು ಬಳಸಿದ terminology ಬಳಸಿಹರೇ, ಹೊರತು, ಕನ್ನಡ ಪಾಣಿನಿಯ ವ್ಯಾಕರಣವನ್ನು ಬಳಸಿಲ್ಲ.
ಅಂದರೆ ಕನ್ನಡಗ್ರಾಮರ್ರಲ್ಲಿ "pronoun" ಎನ್ನುವ terminology ಬಳಸಿದರೆ, ಕನ್ನಡದ ಗ್ರಾಮರ್‍ರಿನ ತಳಹದಿ English ಆಗಲ್ಲ. ಅದು ಬರಿ terminology ಆಗುತ್ತೆ.
ಡಿ.ಎನ್.ಶಂಕರಭಟ್ಟರ
೧ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ"
೨. "ಕನ್ನಡ ಬರಹವನ್ನು ಸರಿಪಡಿಸೋಣ"( ಇದೊಂದು ಸಾಕು!!! )
೩. "ಕನ್ನಡ ಸರ್ವನಾಮಗಳು"
೪. "ಕನ್ನಡ ಪದಗಳ ಒಳರಚನೆ" ಮುಂತಾದ ಹೊತ್ತಗೆಗಳನ್ನು ಓದಿ, ತಿಳಿಯಬೇಕು.
.
.
.
"A tendency toward structural and systemic balance and stability is characteristic of the Dravidian group. Nevertheless, there is no doubt about the influence of the other languages of India. Dravidian languages show extensive lexical (vocabulary) borrowing, but only a few traits of structural (either phonological or grammatical) borrowing, from the Indo-Aryan tongues. On the other hand, Indo-Aryan shows rather large-scale structural borrowing from Dravidian, but relatively few loanwords. There is indeed a possibility of Dravidian and Indo-Aryan drawing even closer together in the future; but it is highly doubtful that a new family of languages will develop in such a way that the bases of the contributing groups (i.e., Dravidian and Indo-Aryan) will be completely eliminated through the phenomena of borrowing."
- Britannica
ಈ ಬಗೆಯ ಒಂದು ವಾದವೂ ಇಲ್ಲ, ಕನ್ನಡ ಸಂಸ್ಕೃತದಿಂದ ಹುಟ್ಟಿದುದು, ಅದು ಸಂಸ್ಕ್ರುತದ ವ್ಯಾಕರಣದ ಹಿಂದೆ ಹೋಗುವುದು ಎನ್ನವುದಕ್ಕೆ. ಅದು ಬರಿ ಶುದ್ಧ ಸುಳ್ಳು.!
.
ಕನ್ನಡ ವ್ಯಾಕರಣ ಹೊತ್ತಗೆಗಳು ಸಂಸ್ಕೃತದ ವ್ಯಾಕರಣ ಹೊತ್ತಗೆಗಳ ಅನುಕರಣೆ ಮಾಡಿದೆಯೆಂದು, ಕನ್ನಡ ಸಂಸ್ಕ್ರುತದಿಂದ ಹುಟ್ಟಿದೆ ಎನ್ನುವುದು ದಡ್ಡತನ. !!
ಕೊಂಚ ದ್ರಾವಿಡನುಡಿಗಳು ಮತ್ತು Indo-Aryan ನುಡಿಕುಳಗಳ ಬಗ್ಗೆ ಓದಿ ಮಾತಾಡುವುದು ಒಳಿತು. ಸುಮ್ಮನೆ ಏನೇನು ಕುರುಡು ನಂಬಿಕೆಗಳನ್ನೇ ಪುರಾವೆ ಇಲ್ಲದೇ, ಹೇಳಿ. ಹೇಳಿ, ಮತ್ತೆ ಅದನ್ನೇ ಹೇಳುವುದು "ಭಾಷಾ ದುರಭಿಮಾನದ ಪರಮಾವಧಿ"!!!
ಸಂಸ್ಕ್ರುತದಿಂದ ಕನ್ನಡ ಹುಟ್ಟಿದೆ, ಕನ್ನಡವು ಸಂಸ್ಕ್ರುತದ ವ್ಯಾಕರಣ ಪಾಲಿಸುವುದು ಎನ್ನವುದಕ್ಕೆ ಪುರಾವೆಯೇ ಇಲ್ಲ. ಇದು ಬರಿ ಒಂದು ಕುರುಡು ನಂಬಿಕೆ. ( ಕನ್ನಡದ ವ್ಯಾಕರಣವನ್ನು ಸಂಸ್ಕ್ರುತದ teminologyಅಲ್ಲಿ ಹೇಳಿರುವುದು ದಿಟ, ಅದನ್ನೇ ಕಿಟ್ಟಲ್ ಇಂಗ್ಲೀಷ್ teminologyಅಲ್ಲಿ ಹೇಳಿದ್ದಾರೆ )
ಈ ಸಂಗತಿಯ ಮೇಲಿನ ಮಾತುಕತೆಯನ್ನು ಬೆಳೆಸುವವರು, ಅವರ ನಂಬಿಕೆಗಿಂತ, ತುಸು logicalಆಗಿ ನುಡಿಬೇಕು.

======
ಹೌದು: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು
ಅಗದಿ ಒಪ್ಪತಕ್ಕ ಮಾತು. ಕನ್ನಡ ಗ್ರಾಮರ್‍ನ್ನು ಮೊಟ್ಟ ಮೊದಲ ಸಲ ಬರೆಯಲೆಳಸಿದಾಗ, ಆಗಲೇ ಸಾಕಟ್ಟು popular ಆಗಿದ್ದಿರಬಹುದಾದ, ಸಕ್ಕದದ ಗ್ರಾಮರ್‍ನ ನೆರಳು ಕನ್ನಡದ ಗ್ರಾಮರ್‍ನ ಮೇಲೆ ಬಿದ್ದಿರಬಹುದು.
ನಾವೀಗ ಲೇಟೆಸ್ಟ್ ಟೆಕ್ನಾಲಾಜಿಯ ಯಾವುದಾದರ ಕುರಿತು ಬರೆಯ ಹೊರಟಾಗ ಇಂಗ್‍ಲೀಸ್‍ನ ಟರ್ಮಿನಾಲಾಜಿಯನ್ನು ಹಾಗೇಯೇ ಬಳಸಿಕೊಳ್ಳಬೇಕಾಗುತ್ತೆ. ಇಲ್ಲಾಂದ್ರೆ ಯಾರಿಗೂ ತಿಳೀದೇ ಹೋದೀತು.
ಟಿ: ಸಂಸ್ಕೃತವೇ ಮೂಲ, ಅದುವೇ ಮುಖ್ಯ!!! ಸರಿ ಇದನ್ನು ನೋಡಿ ;)
ಶರತ್‌ಚಂದ್ರ ಅವರೆ, ನಿಮ್ಮ ಪ್ರತಿಕ್ರಿಯೆಗೆ ನನ್ನಿ. ಕನ್ನಡದ ತಳಹದಿ ಮತ್ತು ಗಟ್ಟಿತನದ ಬಗ್ಗೆ ನಮ್ಮನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಕನ್ನಡದ ಬಗ್ಗೆ ಹೆಮ್ಮೆ ನಿಮಗೂ ಇದೆ ಎಂದು ಭಾವಿಸುತ್ತೇನೆ. "ನಾವುಗಳು ಹೀಗೆ ಚರ್ಚೆಗೈದ ಮಾತ್ರಕ್ಕೆ ನಮ್ಮ ನಮ್ಮ ಗೆಳೆತನ ಹಾಳಾಗುತ್ತದೆ" ಎಂಬ ಅಪ್ರಬುದ್ಧತೆಯನ್ನು ನಾವು ನೀವು ಬೆಳೆಸಿಕೊಳ್ಳುವುದು ಬೇಡ. ಚರ್ಚೆಯನ್ನು ಮುಂದುವರಿಸುವ ಮುನ್ನ ನೆನ್ನೆಯ ಪ್ರಜಾವಾಣಿಯಲ್ಲಿನ ಲಿಮ್ಕಾ ದಾಖಲೆಯತ್ತ ದ್ರಾಕ್ಷಿ ಇಳುವರಿ ಎಂಬ ಸುದ್ದಿಯನ್ನು ಓದಿ. ಆ ಸುದ್ಧಿಯ ಸಾರವನ್ನು ಗ್ರಹಿಸಿ. ಇಂತಹ ಪ್ರಯೋಗಗಳೂ ಕೂಡ ಕನ್ನಡದ, ಕನ್ನಡಿಗರ ಏಳಿಗೆಗೆ ಕಾರಣವಾಗುತ್ತದೆ. ಇದರ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕು. ಹೀಗೆ, ಕನ್ನಡದ ಬಗ್ಗೆ ಯಾವ ಕಾರಣಕ್ಕೆ ಹೆಮ್ಮೆ ಪಡಬೇಕು ಎಂಬುದರ ಕುರಿತು ಯೋಚಿಸಿ, ಆಲೋಚಿಸಿ, ಚಿಂತನೆಗೈದು ಸ್ಪಷ್ಟವಾದ ಪರಿಕಲ್ಪನೆಯನ್ನೂ ಮೂಡಿಸಿಕೊಳ್ಳಬೇಕು. ಅಂದ ಹಾಗೆ, ನೀವು ದ.ರಾ.ಬೇಂದ್ರೆಯವರ ಕವನಗಳನ್ನು ಓದಿರುವಿರಾದರೆ, ಅವರು ಬಳಸಿರುವ ಭಾಷೆಯ ಸೊಗಡು ಹೇಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲವಷ್ಟೇ. ಹಾಗೆಯೇ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅವರು ಮಾಡಿರುವ ಭಾಷಣವನ್ನು ಓದಿರುವಿರೆಂದು ಭಾವಿಸುತ್ತೇನೆ.
ಅಂದ ಹಾಗೆ ನಾನು ಪದ, ಗುಣ, ಪರ್ವ, ನೀರು ಇವುಗಳು ಕನ್ನಡವೆಂದು ಸುಮ್ಮನೆ ಬರೆದಿಲ್ಲ. "ಪದ" ಪದದ ಬಗ್ಗೆ ಸಂಪೂರ್ಣವಾಗಿ ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ ಎಂಬ ಒಂದು ಚಿಂತನಾ ಬರಹದಲ್ಲಿ ತಿಳಿಸಿದ್ದೇನೆ. ಬಿಡುವಿದ್ದಾಗ, ಉತ್ಸಾಹದಿಂದ ಓದಿ ನೋಡಿ. ಸಾಧ್ಯವಾಗುವುದಾದರೆ ಆ ಚಿಂತನಾ ಲೇಖನ ತಪ್ಪು ಎಂದು ನಿರೂಪಿಸಿ. ನಾನು ಈಗಾಗಲೇ ಲೇಖನದಲ್ಲಿ ಹೇಳಿರುವ ಕನ್ನಡ ನುಡಿಯ ಬಗ್ಗೆ ಕನ್ನಡಿಗರು ಕುರುಡಾಗಿ ಅಭಿಮಾನ ಬೆಳೆಸಿಕೊಂಡಿಲ್ಲ. ನೀರು ಪದದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಸಂಪದದಲ್ಲಿಯೇ ಹುಡುಕಿ ನೋಡಿ. ಇನ್ನು ಪರ್ವ, ಇದರ ಬಗ್ಗೆ ಬರೆಯುವುದು ತುಂಬಾ ಇದೆ. ತತ್ಸಮ, ತದ್ಭವ ಮತ್ತು ಸಮಸಂಸ್ಕೃತದ ಬಗ್ಗೆ ಬರೆಯುತ್ತೇನೆ ಎಂದು ಹೇಳಿದ್ದೇನಲ್ಲ, ಆ ಲೇಖನದಲ್ಲಿ ತಿಳಿಸುತ್ತೇನೆ.
ಅಂದ ಹಾಗೆ, "ಸಂಸ್ಕೃತವೇ ಮೂಲ" ಎಂಬುದಕ್ಕೆ ಮಹೇಶರು ಈಗಾಗಲೇ ಉತ್ತರವನ್ನಿತ್ತಿದ್ದಾರೆ, ಗಮನಿಸಿ.
ಪದ, ಗುಣ, ಪರ್ವ, ನೀರು
ಸುನಿಲನೀ ಪುಣ್(challenge) ಅನ್ನು ಇದುರಿಸುವ ಕಲಿತನ ಯಾರು ಇನ್ನೂ ತೋರಿಲ್ಲ
. ಸುನಿಲ ನಿಂಗೆ ಗೆಲ್ಕೆ!
ಪದ
ಗುಣ
ಪರ್ವ
ನೀರು
ಎವಾಗ ಬರೆಯೋದು ಇದನ್ನ ನೀನು?
======================================
Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ
ಸುನಾಥ
ಸುನೀಲರವರು ಹೇಳುವದು ಸರಿ. ಅಷ್ಟೇ ಅಲ್ಲ, ಕನ್ನಡದ (ಅಥವಾ ದ್ರಾವಿಡ ಮೂಲದ) ಅನೇಕ ಪದಗಳು ಸಂಸ್ಕೃತದಲ್ಲಿದ್ದು, ಅವು ಕನ್ನಡ (ದ್ರಾವಿಡ) ಪದಗಳೆಂಬ ಅರಿವೂ ಸಹ ನಮಗೆ ಇಲ್ಲದಂತಾಗಿದೆ. ಉದಾಹರಣೆಗೆ ಸಂಸ್ಕೃತದ ಚಂದ್ರ ಈ ಪದ ಮೂಲತ: ದ್ರಾವಿಡ ಭಾಷೆಯ ’ಶನ್’ (=ಹೊಳೆ) ಪದದಿಂದ ಬಂದಿದೆ. ಇದೇ ರೀತಿಯಾಗಿ ಸಂಸ್ಕೃತದ ಎಷ್ಟೋ ಪದಗಳು ಕನ್ನಡ (ಹಾಗು ಇತರ ದ್ರಾವಿಡ ಭಾಷೆಗಳಲ್ಲಿ) ಇವೆ. ಸಂಸ್ಕೃತ ಹಾಗು ದ್ರಾವಿಡ ಭಾಷೆಗಳನ್ನು ಪರಸ್ಪರ ಪೂರಕ ಭಾಷೆಗಳು ಎಂದು ತಿಳಿದುಕೊಳ್ಳಬೇಕೆ ಹೊರತು ಪ್ರತಿದ್ವಂದಿಗಳಂತಲ್ಲ.
"ಜ್ಞಾನದ ತುಡಿತವನ್ನು ತುಂಬಿಸುವ ನುಡಿ" ಇದರ ಹಿನ್ನಲೆ....
ಸುನಾಥ,
ಈ ಎಳೆಗೆ/ಎೞಿಗೆ ಹಿನ್ನಲೆ "ಸಂಸ್ಕೃತವಿಲ್ಲದ ಕನ್ನಡ ಜಾಳು" ಎನ್ನುವ ಒಸಗೆಯೋಲೆಯ ತುಣಕು..
ಒಸಗೆಯ(news) + ಓಲೆ( letter/page/sheet ) = ಒಸಗೆಯೋಲೆ
ಈ 'ಚನ್/ಸನ್' ಇಂದ ಬಂದ ದ್ರಾವಿಡ ನುಡಿಯ ಒರೆ(ಪದ)ಗಳನ್ನು ಹೇಳಿ!
======