ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಜೀವ ಸಮುದ್ರ

April 9, 2007 - 10:44pm — ritershivaram

ಮಹೇಶ ಮುಂಬೈಗೆ ಬಂದವನು ಜುಹೂ ಬೀಚಿಗೆ ಹೋಗಿ ಅಲ್ಲೆ ಕುಳಿತನೆಂದರೆ ಬಹಳ ಹೊತ್ತಿನವರೆಗೆ ಮೇಲೇಳುವುದೇ ಇಲ್ಲ. ದಡಕ್ಕೆ ಅಪ್ಪಳಿಸುವ ನೀಲ ಸಮುದ್ರದ ಅಲೆಗಳನ್ನು ನಿಟ್ಟಿಸುತ್ತಿರುತ್ತಾನೆ. ಹಾಗೇ ದೂರ ದಿಗಂತದತ್ತ ಕಣ್ಣಂಚಿನವರೆಗೂ ಎಟುಕದಂತೆ ಗೋಚರಿಸುವ ಕ್ಷಿತಿಜದಾಚೆಗೆ ಜೀವಿತದ ಏನೆಲ್ಲ ನಿಗೂಢ ರಹಸ್ಯಗಳನ್ನು ಬೇಧಿಸುವ ತವಕವೋ,  ಅದೇನು ಜನ ಜೀವನದ ಚಿಂತನಯೋ ಏನೋಂದು ಹೇಳಲಾಗುವುದೇ ಇಲ್ಲ.
ಆದರೇನು ! ಆ ಸಮುದ್ರದ ಗಂಭೀರ ಅಲೆಗಳು, ಒಮ್ಮೆ ಜೀವನದ ಕಷ್ಟಕೋಟಲೆಗಳನ್ನು ಏಳುಬೀಳುಗಳಲ್ಲಿ ಪ್ರತಿನಿಧಿಸುವಂತೆ ಕಂಡರೂ, ಮತ್ತೊಮ್ಮೆ ತನ್ನೋಳಗೆ ಸೆಳೆದುಕೊಳ್ಳುವ ಒಲವಿನ ಮಹಾಪೂರದಂತೆ ಜೀವಸೆಲೆಯುಕ್ಕಿಸುವಾಗ ಮನದಾಳದಿಂದ ಹೊಮ್ಮಿದ ನಗೆ ತುಟಿಯಲ್ಲಿ ಮುಗುಳಾಗಿ ತೊನೆಯುತ್ತದೆಯಲ್ಲ... ಆಗ ಅವನು ಅವನಾಗಿ ಇಹ ಲೋಕದಲ್ಲಿ ಇರುವುದೇ ಇಲ್ಲವಲ್ಲ.... ಅದಕ್ಕೆ ಮುಂಬೈಗೆ ಬಂದನೆಂದರೆ, ಅದೆಂಥದೋ ಚುಂಬಕ ಶಕ್ತಿಗೆ ಒಳಗಾದವನಂತೆ ಈ ಕಡಲ ಕಿನಾರೆಗೆ ಬಂದೇ ತೀರುತ್ತಾನೆ. ಈ ಸಮುದ್ರದ ದೃಶ್ಯವನ್ನು ಅನೇಕ ಬಾರಿ ತನ್ನ ಕಲೆಯ ಕೈ ಚಳಕದಲ್ಲಿ ಸೆರೆ ಹಿಡಿದಿದ್ದಾನೆ. ಅಲ್ಲಿಗೂ ಎಷ್ಟೇ ಸವಿದರೂ ಸವಿಯದ ದೃಶ್ಯಾವಳಿಯಲ್ಲೂ ಮೀಯುತ್ತಾ ಕುಳಿತೇ ಹೊತ್ತು ಕಳೆಯುತ್ತಾನೆ... ಭೇಲ್ ಪುರಿ, ಐಸ್ ಕ್ರೀಮ್  ಗಳನ್ನು ತಿನ್ನುತ್ತಾ ನಲಿದು ನಡೆಯುತ್ತಲಿರುವ ಸುಂದರ ಜೋಡಿಗಳತ್ತ ದೃಷ್ಟಿ ಹರಿಸುತ್ತಾ, ಅಲ್ಲೆ ಚೆಂಡು ಬೆಲೂನುಗಳೋಂದಿಗೆ ಕುಣಿವ  ಪುಟ್ಟ ಮಕ್ಕಳ ಆಟದಲ್ಲೀ ಕಣ್ಣನ್ನು ಕೀಲಿಸುತ್ತಾನೆ. ಮತ್ತೆ ಮತ್ತೆ ಬೇಡವೆಂದರೂ ವಿಶಾಲ ಸಮುದ್ರದ ರುದ್ರ ಗಂಭೀರ ಮೌನದಲ್ಲಿ ಲೀನನಾಗಿ  ಬಿಡುತ್ತಾನೆ. ಸೂರ್ಯಾಸ್ತಮಾನದವರೆಗೂ ಅವನಿಗೆ ಅಲ್ಲಿಂದ ಕದಲಲು ಮನಸ್ಸಾಗುವುದೆಂತು ! ಹಾಗೆ ನಸುಗತ್ತಲೆ ಕವಿಯುವವರೆಗೂ ಮುಂಬೈ ಮಹಾನಗರಕ್ಕೆ ಬೆನ್ನು ಹಾಕಿ ಕುಳಿತವನಿಗೆ ತನ್ನ ಹಿಂದೊಂದು ಜನನಿಬಿಡ  ಮಹಾ ಜೀವಸಮುದ್ರವೇ ಆಗಿರುವ ಮುಂಬೈನ ನಿಷ್ಥೂರ ಬದುಕಿನ ಚಿತ್ರಣವೆಲ್ಲವೂ ತನ್ನ ಕುಂಚ ಹಾಗೂ ಕ್ಯಾಮೆರಾಗಳಿಗೆಟುಕಿಯೇ ಇಲ್ಲವೆಂಬ ಕಟುಸತ್ಯವೂ ಹೊಳೆಯದೇ ಇರುವುದಿಲ್ಲ.....
-ರೈಟರ್ ಶಿವರಾಂ.

(“ಕರ್ಮವೀರ” ವಾರ ಪತ್ರಿಕೆಯಲ್ಲಿ ಪ್ರಕಟಿತ)

ಇದರ ಅನುಕ್ರಮ ಸಂಚಿಕೆಗಳಿಗೆ ಇಲ್ಲಿ ಕ್ಲಿಕ್ ಮಾಡಿ ಜೀವ ಸಮುದ್ರ

  • ಕಾದಂಬರಿ
~.~
  • Login or register to post comments
  • 475 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಮುದ್ರದ ದಂಡೆ ; ತೆಂಗಿನಮರಗಳು !
  • ನಾವು ನಗುವ ಹಾಗೆ.
  • ಮುಂಬೈಬಳಿಯ ಅರಬ್ಬೀ ಕಡಲಿನ ಮೇಲೆ ಒಂದು ಸುತ್ತು !
  • ಹೊಗೆನಕಲ್ ಜಲಪಾತ
  • ಸಮುದ್ರ ಮಥನ
Syndicate content

ಲೇಖಕರು

ritershivaram's picture

ಪೂರ್ಣ ಹೆಸರು
ritershivaram

ಪರಿಚಯ

ನಿವೃತ್ತ ನೌಕರ(Bsnl). ಚಿಂತಕ,ಸಾಹಿತಿ ಮತ್ತು ಕಂಪ್ಯೂಟರ್ ಶಿಕ್ಷಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator