ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ವಿಡಿಯೋ ಆಟ ಆಡುವ ಮಾರುತಿ! ಇ-ಲೋಕ-18 (13/4/2007)

April 13, 2007 - 4:34pm — ASHOKKUMAR

 ಮಾರುತಿ

ಅಟ್ಲಾಂಟಾದ ಮೃಗಾಲಯದಲ್ಲಿ ಸುಮಾತ್ರಾದ ವಾನರಗಳಿಗೆ ವಿಡಿಯೋ ಗೇಂ ಆಡುವ ಸೌಭಾಗ್ಯ ಪ್ರಾಪ್ತವಾದರೆ,ಮೃಗಾಲಯಕ್ಕೆ ಬರುವ ಪ್ರವಾಸಿಗಳಿಗೆ ವಾನರನ ಮಂಗನಾಟದ ದರ್ಶನಭಾಗ್ಯ ಲಭಿಸುತ್ತದೆ! ಸುಮಾತ್ರಾದ ವಾನರ ಜಾತಿ ಒರಂಗುಟಾನ್‌ನ ಕೌಶಲ,ಕಲಿಕೆ ಮತ್ತಿತರ ವಿಷಯಗಳ ಬಗೆಗೆ ಅಭ್ಯಾಸ ಮಾಡುವ ಸಂಶೋಧಕರು ಮಾಡಿರುವ ವ್ಯವಸ್ಥೆಯಿದು.ವಾನರಗಳು ವಾಸವಾಗಿರುವ ಮರದ ಮೇಲೆಯೇ ವಿಡಿಯೋ ತೆರೆಯಿಟ್ಟಿದ್ದಾರೆ. ಇದು ಸ್ಪರ್ಶ ಸಂವೇದಿ ತೆರೆಯಾದ್ದರಿಂದ, ವಾನರಗಳ ಸ್ಪರ್ಶಕ್ಕೆ ದೃಶ್ಯಗಳಲ್ಲಿ ಬದಲಾವಣೆಯಾಗಬಹುದು. ಚಿತ್ರಗಳನ್ನು ತೋರಿಸಿ, ವಾನರವು ಒಂದೇ ರೀತಿ ಇರುವ ಎರಡು ಚಿತ್ರಗಳನ್ನು ಗುರುತಿಸಲು ಸಫಲವಾಗುತ್ತದೋ ಎಂಬುದನ್ನು ಪರೀಕ್ಷಿಸುವಂತಹ ಆಟಗಳನ್ನು ಅದರಿಂದ ಆಡಿಸಿ, ವಾನರಗಳು ತಮ್ಮ ಅನುಭವದಿಂದ ಕಲಿಯುತ್ತವೋ ಎಂಬುವುದನ್ನು ಅಭ್ಯಸಿಸುವುದು ಸಂಶೋಧಕರ ಪ್ರಯತ್ನ. ಜತೆಗೆ ವಾನರಗಳ ಕ್ಲೋಸ್ ಅಪ್ ಚಿತ್ರಗಳು ಪ್ರವಾಸಿಗಳ ಮನತಣಿಸುವಂತೆ ಇಲ್ಲಿ ಕ್ಯಾಮರಾ ಮೂಲಕ ಅವುಗಳ ಚಟುವಟಿಕೆಗಳನ್ನು ಸೆರೆ ಹಿಡಿದು, ತೋರಿಸುವ ವ್ಯವಸ್ಥೆಯೂ ಇಲ್ಲಿದೆ.

ಸೂಡಾನ್‌ನ ನರಮೇಧ ಬಹಿರಂಗ ಪಡಿಸಿದ ಗೂಗಲ್ ಅರ್ಥ್ sudan

ಗೂಗಲ್ ಅರ್ಥ್ ತಂತ್ರಾಂಶವು ಇಪ್ಪತ್ತು ಕೋಟಿ ಕಂಪ್ಯೂಟರುಗಳಲ್ಲಿ ಅನುಸ್ಥಾಪಿತವಾಗಿದೆ. ಗೂಗಲ್‌ನ ಈ ಜನಪ್ರಿಯ ಸೇವೆಯ ಮೂಲಕ ಉಪಗ್ರಹಗಳ ಮೂಲಕ ತೆಗೆದ ಮೂರು ಆಯಾಮದ ಭೂಮಿಯ ಚಿತ್ರಗಳನ್ನು ಬಳಸಿಕೊಂಡು ಸೂಡಾನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದೀಚೆಗೆ ನಡೆಯುತ್ತಿರುವ ನರಮೇಧ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನು ಗೂಗಲ್ ಬಯಲು ಪಡಿಸಿ, ಜನಮತವನ್ನು ರೂಪಿಸಿದೆ. ಸುಮಾರು ಎರಡು ಲಕ್ಷ ಜನರ ಮಾರಣ ನಡೆದಿರುವ ಸೂಡಾನ್‌ನ ಸಹಸ್ರಾರು ಹಳ್ಳಿಗಳು ನಾಶವಾದದ್ದನ್ನು ಗೂಗಲ್ ಅರ್ಥ್‌ನ ಮ್ಯಾಪ್‌ಗಳು ತೋರಿಸುತ್ತವೆ. ಲಕ್ಷಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ. ಮಿಲಿಯಗಟ್ಟಲೆ ಜನರು ಗುಳೇ ಹೋಗಿದ್ದಾರೆ. ಸೈನ್ಯ ಮತ್ತು ಸರಕಾರದ ವಿರೋಧಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ.ಸೂಡಾನಿನ ಈ ಪ್ರದೇಶವನ್ನು ಡಾರ್ಫರ್‍ ಪ್ರದೇಶ ಎಂದು ಗೂಗಲ್ ಗುರುತಿಸಿದೆ. ಈ ಕೆಲಸದಲ್ಲಿ ಗೂಗಲ್‌ಗೆ ಸಹಯೋಗ ನೀಡಿರುವ ಅಮೆರಿಕಾದ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ. ಪುಟವನ್ನು ಬ್ರೈಲ್ ಲಿಪಿಗೆ ಪರಿವರ್ತಿಸಿ ಕೊಡುವ ಸೇವೆ ರೊಬೋಬ್ರೈಲ್ ಎನ್ನುವ ಡ್ಯಾನಿಶ್ ಕಂಪೆನಿಯು ಅಂಧರಿಗೆ ವಿನೂತನ ಸೇವೆ ನೀಡುತ್ತಿದೆ. ಯಾವುದೇ ಪದಸಂಸ್ಕಾರಕ ತಂತ್ರಾಂಶದ ಕಡತವನ್ನು ಅಥವ ಅಂತರ್ಜಾಲ ಪುಟವನ್ನು ಕಂಪೆನಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸಿದರೆ, ಅದರ ಎಂಪಿತ್ರೀ ಕಡತ ಅಥವ ಇಲೆಕ್ಟ್ರಾನಿಕ್ ಬ್ರೈಲ್ ಲಿಪಿಯ ಕಡತವಾಗಿ ಬದಲಾಯಿಸಿ ಮರಳಿಸುವ ಸೇವೆಯನ್ನು ಕಂಪೆನಿಯು ಉಚಿತವಾಗಿ ನೀಡುತ್ತದೆ. ಎಂಪಿತ್ರಿ ಕಡತವನ್ನು ನುಡಿಸಿ,ಆಲಿಸಬಹುದು. ಬ್ರೈಲ್ ಲಿಪಿ ಕಡತವನ್ನು ಬಳಸಲು ಸಾಧನವೊಂದರ ಅವಶ್ಯಕತೆಯಿದೆ.ಸಾಧನವು ಹಲವು ಪಿನ್‌ಗಳನ್ನ ಹೊಂದಿದ್ದು, ಬ್ರೈಲ್ ಲಿಪಿಯಲ್ಲಿ ಅಕ್ಷರವನ್ನು ಮೂಡಿಸಿ, ಸ್ಪರ್ಶದ ಮೂಲಕ, ಅಕ್ಷರವನ್ನು ಅರಿಯಲು ಅವಕಾಶವಾಗುತ್ತದೆ.ಮುಂದೆ ಪಿಡಿಎಫ್ ಕಡತಗಳಿಗೂ ಈ ಸೇವೆ ಒದಗಿಸಲು ಕಂಪೆನಿ ತಯಾರಿ ನಡೆಸುತ್ತಿದೆಯಂತೆ.

ಶೌಚಾಲಯದ ಮೂಲಕ ಅಂತರ್ಜಾಲ?

 ಗೂಗಲ್ ಕಳೆದ ಮಾಸಾಂತ್ಯದ ದಿನ ಪತ್ರಿಕಾ ಗೋಷ್ಠಿ ನಡೆಸಿತು. ಗೂಗಲ್ ಕಂಪೆನಿಯ ಪತ್ರಿಕಾ ಗೋಷ್ಠಿ ಎಂದರೆ,ಏನಾದರೂ ಹೊಸ ಸೇವೆ ಆರಂಭಿಸುವ ಬಗೆಗೆ ಮಾಹಿತಿ ಎನ್ನುವುದು ಖಾತರಿ.ಅಂದೂ ಕೂಡಾ ಹಾಗೇ ಆಯಿತು. ಶೌಚಾಲಯದ ಪೈಪು ವ್ಯವಸ್ಥೆಯ ಮೂಲಕ ಅಂತರ್ಜಾಲ ಒದಗಿಸುವ ಸೇವೆ ಆರಂಭಿಸಲಿರುವುದಾಗಿ ಕಂಪೆನಿಯ ಹಿರಿಯ ಅಧಿಕಾರಿ ವಿವರಣೆ ನೀಡಿದರು. ಅದರ ಜತೆ, ಈ ಸೇವೆ ಪಡೆಯಲು ಯಾವ ಅಂತರ್ಜಾಲ ತಾಣವನ್ನು ಬಳಸಬೇಕು, ಅನುಸರಿಸಬೇಕಾದ ಕ್ರಮ ಯಾವುದು ಎನ್ನುವುದರ ಬಗೆಗೆ ವಿವರಣೆಯೂ ಇತ್ತು. ನಂತರವಷ್ಟೇ ಇದು ಎಪ್ರಿಲ್‌ಫೂಲ್ ಹುಸಿಸುದ್ದಿ ಎನ್ನುವುದು ಪತ್ರಕರ್ತರಿಗೆ ತಿಳಿಯಿತು.

ಗೂಗಲ್‌ನಿಂದ ಪಾವತಿಸೇವೆ

ಇಂಗ್ಲೆಂಡಿನ ಬಳಕೆದಾರರಿಗೆ ಇದುವರೆಗೆ ಲಭ್ಯವಾಗಿಲ್ಲದೆ ಸೇವೆಯನ್ನು ಗೂಗಲ್ ಈಗ ನೀಡಲಾರಂಭಿಸಿದೆ. ಗೂಗಲ್ ಚೆಕೌಟ್ ಎಂಬ ಈ ವ್ಯವಸ್ಥೆ ಇ-ವಾಣಿಜ್ಯದ ಮೂಲಕ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ಉಪಯುಕ್ತ.ಖರಿದಿಸಿದ ಮೇಲೆ ಹಣ ಪಾವತಿಸಲು ಬಳಕೆದಾರರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ ತಾನೇ? ಈ ಪಾವತಿ ವ್ಯವಸ್ಥೆಯಲ್ಲಿ ಬಳಕೆದಾರರು ಮತ್ತು ಸರಕು ಮಾರಿದ ಕಂಪೆನಿಗಳ ಬ್ಯಾಂಕುಗಳ ನಡುವೆ ಗೂಗಲ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಈಗಾಗಲೇ ಇಂತಹ ಸೇವೆ ನೀಡುವ ಪೇಪಾಲ್(ಇಬೇ ಕಂಪೆನಿಯ ಸೇವೆ)ಗೆ ಹೋಲಿಸಿದರೆ, ಗೂಗಲ್ ತನ್ನ ಜಾಹೀರಾತುದಾರರಿಗೆ ಕಡಿಮೆ ಶುಲ್ಕ ವಿಧಿಸಲಿದೆ.ಇದುವರೆಗೆ ಗೂಗಲ್ ಪಾವತಿ ಸೇವೆ ಅಮೆರಿಕಾದ ಬಳಕೆದಾರರಿಗೆ ಮಾತ್ರಾ ಲಭ್ಯವಿದೆ.ಪಾವತಿ ವ್ಯವಸ್ಥೆಯಲ್ಲಿ ನಡೆಯುವ ಅಕ್ರಮಗಳ ಮೂಲಕ ಬಳಕೆದಾರರಿಗೆ ಸಂಭವಿಸುವ ನಷ್ಟವನ್ನು ಇಳಿಸುವ ಖಾತರಿಯನ್ನು ಗೂಗಲ್ ನೀಡುತ್ತಿದೆ. *ಅಶೋಕ್‌ಕುಮಾರ್‍ ಎ

  • ಪ್ರಚಲಿತ
~.~
  • Login or register to post comments
  • 589 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇ-ಮೇಲ್ ಖಾತೆ:ನಾಪತ್ತೆ
  • ಗೂಗಲ್‍ಗೆ ಪೆಂಟಾಗನ್ ನಿಷೇಧ
  • ವೈವಾಹಿಕ ಸೇವೆ: ಅಂತರ್ಜಾಲದಿಂದ ಮೊಬೈಲಿನತ್ತ
  • ಅಂತರ್ಜಾಲ ಆಧಾರಿತ ತಂತ್ರಾಂಶ ಸೇವೆಯನ್ನು ತಿರಸ್ಕರಿಸಬೇಕೇ?
  • ಇ-ಲೋಕ-13(8/3/2007) ---ಪರಿಸರ ಸ್ನೇಹಿ ಗಗನಚುಂಬಿ ಕಟ್ಟಡ----
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
  • ಮರಳಿ ಬರಲಿ ಬಾಲ್ಯ

ಇತ್ತೀಚಿನ ಪ್ರತಿಕ್ರಿಯೆಗಳು

  • amrith
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 9:58am
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 7, 2008 - 9:45am
  • mahesha
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:45am
  • srinivasps
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:16am
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 8:48am
  • mahesha
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:45am
  • savithasr
    ಉ: ಗಾಂಧೀಸ್ಮರಣೆ
    October 7, 2008 - 8:28am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:01am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
    October 7, 2008 - 7:58am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 7:57am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 82 ಅತಿಥಿಗಳು ಆನ್ಲೈನ್ ಇರುವರು.


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator