ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮಾಧ್ಯಮಗಳಿಗೆ ಸುದ್ದಿಯ ಕ್ಷಾಮ.

April 22, 2007 - 7:56pm — anant pandit

ಈಗೀಗ ಮಾಧ್ಯಮಗಳಿಗೆ ಸುದ್ದಿಯ ಕ್ಷಾಮವೇ? ಹೌದು ನನಗೆ ಹಾಗೇ ಅನಿಸುತ್ತದೆ. ಕೆಲವರ ವಯಕ್ತಿಕ ವಿಚಾರಗಳನ್ನು ವಾರಗಟ್ಟಲೆ ಅವರು ಬೇಡ ಬೇಡ ವೆಂದರೂ ಮಾಧ್ಯಮಗಳು ಕಾಡಿ ಬೇಡಿ ಪ್ರಸಾರ ಮಾಡುತ್ತಿರುವದನ್ನು ನೋಡಿದರೆ ಹಾಗೇ ಅನಿಸುತ್ತದೆ. ಉದಾಹರಣೆಗೆ ಐಶ ಮದುವೆ. ಅವರು ಯಾರನ್ನೂ ಕರೆಯದೆ ಮಾಧ್ಯಮಗಳು ದೂರವಿರಲಿ ಎಂದು ಹೇಳಿದರೂ ಕಾಡಿ ಬೇಡಿ ಕೊನೆಗೆ ಅವರ ಸೆಕ್ಯೂರಿಟಿಗಳಿಂದ ನಿಂದನೆಗೊಳಗಾದರೂ ಅದರ ಪ್ರಸಾರದ ಹಿಂದೆ ಬಿದ್ದುರುವ ಜನರನ್ನು ನೋಡಿದರೆ ನನಗೆ ಹಾಗೇ ಎನಿಸುತ್ತದೆ. ಮದುವೆ ಅವರ ವಯಕ್ತಿಕ ವಿಚಾರ. ಹೋಗಲಿ ಕರೆದರೆ ಹೋಗಿ ಪ್ರಚಾರ ಕೊಡಿ. ಇಲ್ಲದಿದ್ದರೆ ಚುಟುಕು ಸುದ್ದಿ ಪ್ರಸಾರ ಮಾಡಿ ಅದು ಬಿಟ್ಟು ಈರೀತಿ ಗೊಗರೆದರೆ ಏನು ಹೇಳಬೇಕು. ಹೋಗಲಿ ಓಬೇರಾಯ್ ಅವನ ಪಾಡಿಗೆ ಗೋ ಸಮ್ಮೇಳನಕ್ಕೆ ಹೋದರೆ ಅಲ್ಲಿಯೂ ಹೋಗಿ ಐಶ್ ಮದುವೆಗೆ ಯಾಕೆ ಹೋಗಿಲ್ಲ ಎಂದು ಅವರ ನಡುವಿನ ಸಂಬಂಧ ಮುರಿದು ಬಿದ್ದುರುವದು ಗೊತ್ತಿದ್ದರೂ ಕೇಳುವದು. ರಾಜಕುಮಾರ ಪುಣ್ಯತಿಥಿ ವಾರಗಟ್ಟಲೆ ಅವರ ಮನೆಯವರು ನಿಂತಿದ್ದು ಕುಂತಿದ್ದು ಎಲ್ಲ ಅವರಿಗೆ ಮುಜುಗರ ಆಗುವಷ್ಟು ಮತ್ತು ನೋಡುವವರಿಗೂ ಕೇಳುವವರಿಗೂ ತಲೆನೋವಾಗುವಷ್ಟು ಪ್ರಸಾರ ಮಾಡುವದು ಯಾವುದರ ಲಕ್ಷಣ? ಕುಚೋದ್ಯ ಕ್ಕಾಗಿ ದೊಡ್ಡವರನ್ನು ಅಭಿಪ್ರಾಯ ಕೇಳುವದು ಅವರು ಯಾವುದೋ ಪ್ರಜ್ಞೆಯಲ್ಲಿ ಉತ್ತರಿಸುವದು ಅದನ್ನೇ ವಾರಗಟ್ಟಲೆ ಗುಲ್ಲೆಬ್ಬಿಸುವದು. ಉದಾ ನಾರಾಯಣ ಮೂರ್ತಿಗಳ ವಿಚಾರ, ಹೋಗಲಿ ಅವರು ತಮ್ಮ ತಪ್ಪರಿತು ಕ್ಷಮೆಯನ್ನಾದರೂ ಕೇಳಿದರು ಆದರೆ ಹಿಂದೆ ಕಾರ್ನಾಡರು ಆದೊಡ್ಡತನವನ್ನೂ ತೋರಲಿಲ್ಲ. ಇದೆಲ್ಲಾ ಮಾಧ್ಯಮದವರು ಅತಿಬುಧ್ಧಿವಂತರೆಂದು ಕೊಂಡು ಮಾಡುವ ಕುಚೋದ್ಯಗಳು ಅವರ ಟೊಳ್ಳುತನವನ್ನು ಪ್ರದರ್ಶಿಸುತ್ತವೆ ಅಷ್ಟೆ. ಇದರಿಂದ ಅವರು ಸಮಾಜಕ್ಕೆ ಸಾಮಾನ್ಯಜನರಿಗೆ ಕೊಡುವ ತಪ್ಪುಪಾಠ ಸಾಕಷ್ಟು ಹಾನಿಮಾಡಬಲ್ಲದು. ಅಲ್ಲದೆ ಇದು ಕಾಲೆಳೆದು ದೊಡ್ಡವರನ್ನು ಹತೋಟಿಗೆ ಒಳಪಡಿಸಲಿಚ್ಚಿಸುವ ರಾಜಕಾರಣಿಗಳಿಗೆ ರಸಗವಳ.

ಗಾಂಧಿಜಯಂತಿಯಂದು ೨ ನಿಮಿಷದ ಸುದ್ದಿ ಬಿತ್ತರಿಸುವ ಮಾಧ್ಯಮಗಳು ರಾಜ ಜಯಂತಿಯನ್ನೋ, ಐಶ ಮದುವೆಯನ್ನೋ ಇಷ್ಟೊಂದು ವಿಜ್ರಂಭಿಸುವ ದನ್ನು ನೋಡಿದರೆ ಮಕ್ಕಳು ಇವರು ಗಾಂಧಿಗಿಂತ ದೊಡ್ಡವರಿರಬೇಕು ಎಂದು ಕೊಂಡರೆ ತಪ್ಪಿಲ್ಲ ಅಲ್ಲವೆ?

ಅನಂತ ಪಂಡಿತ

  • ಚಿಂತನೆ
~.~
  • Login or register to post comments
  • 397 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 22, 2007 - 8:14pm — muralihr

ಉ: ಮಾಧ್ಯಮಗಳಿಗೆ ಸುದ್ದಿಯ ಕ್ಷಾಮ.

muralihr's picture

ಅಮೇರಿಕಾ ಸ೦ಸ್ಕೃತಿಯ ಪ್ರತಿಬಿ೦ಬವಷ್ಟೆ ಇದು. ನಿನ್ನೇ ನಾನು
ವಿರ್ ಜೀನಿಯಾ ಹತ್ಯಾ ಖಾ೦ಡದ ಕತೆಯನ್ನು ಓದ ಬೇಕಾದರೆ
ಆ ಕೊಲೆಗಡುಕ ಬಯಸ್ಸದ್ದ್ದು "Celebrity Status".
ಆತನ ಪ್ರಕಾರ "It is better to die as
a celebrity than to live as nobody".

ಆದರಿ೦ದ ಮನುಷ್ಯ ತಾನು ಯಾರು ಅ೦ತಾ ತಿಳಿಯದೆ ಏನೋ ಆಗಿ
ಹೋಗ್ತೀನಿ ಅ೦ತಾ ಈ ಪ್ರಯತ್ನ.ಡಿ.ವಿ.ಜಿ ಹೇಳಿದ೦ತೆ
ಇದು ಆತ್ಮವನ್ನೇ ಕಿತ್ತು ತಿನ್ನುವುದು.ಕುವೆ೦ಪು ಕೂಡ ಈ ಪ್ರಸಿದ್ದಿ ತರುವ ಸಿದ್ದಿಗಳನ್ನು ಭೂತವೆ೦ದು ಕರೆಯುತ್ತಿದರು.
ಮನುಷ್ಯ ವಾಸನೆಗಳಲ್ಲಿ ಮೊದಲು ಹೊಟ್ಟೆ, ನ೦ತರ
ಹೆಣ್ಣೂ , ಆಮೇಲೆ ಹೊನ್ನೂ ..ಎಲ್ಲಕ್ಕೂ ಪ್ರಬಲವಾದದ್ದು
ಮತ್ತು ಅನರ್ಥಕಾರಿಯೂ ಅಪಾಯ ಕಾರಿಯೂ ಆದ ವಾಸನೆ
ಪ್ರಸಿದ್ಧಿಯನ್ನು ಬಯಸುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 23, 2007 - 4:28pm — skakkilaya

ಉ: ಮಾಧ್ಯಮಗಳಿಗೆ ಸುದ್ದಿಯ ಕ್ಷಾಮ.

skakkilaya's picture

'ಕ್ಯಾಮರಾ ನಾಯಕರು'

ಡಾ| ಶ್ರೀನಿವಾಸ ಕಕ್ಕಿಲ್ಲಾಯ  

ಸುದ್ದಿಯನ್ನು ಹುಟ್ಟಿಸಿ (ಅಥವಾ ಮುರಿದು – ಈ Breaking News ಅಂದರೇನು, ಬಿತ್ತರಿಸಲಾಗುತ್ತಿರುವ ಸುದ್ದಿಗಳನ್ನೆಲ್ಲ  ತುಂಡರಿಸಿ ಪ್ರಸಾರ ಮಾಡಲೇಬೇಕಾದ ಸುದ್ದಿ ಅಂತಲೇ? ಜೇಡ್ ಗೂಡಿ ಎಂಬಾಕೆ ಹೊರಗಾಗಿ ಶಿಲ್ಪಾಶೆಟ್ಟಿ ಎಂಬಾಕೆ ಒಳಗಿದ್ದದ್ದೂ ‘ಮುರಿಯಬೇಕಾದ ಸುದ್ದಿ’ ಆಗಿಬಿಟ್ಟಿತ್ತು!) ವಿಚಿತ್ರವಾದ ಧ್ವನಿಗಳಲ್ಲಿ ಬಿತ್ತರಿಸುವ ಈ ದೃಕ್ಶ್ರವಣ ಮಾಧ್ಯಮಗಳ ಭರಾಟೆಯಲ್ಲಿ ಈ ಮಾಧ್ಯಮಗಳು ತೋರಿಸುತ್ತವೆಯೆಂಬುದಕ್ಕಾಗಿಯೇ (ಬಹುಷಃ ಮಾಧ್ಯಮದವರನ್ನು ಮೊದಲಾಗಿ ಕರೆಯಿಸಿಕೊಂಡೇ) ವಿಪರೀತವಾಗಿ ಕಿರುಚುವುದು, ಪ್ರತಿಕೃತಿಗಳನ್ನು ಸುಡುವುದು, ಬಣ್ಣ ಬಣ್ಣದ ಶಾಲುಗಳು, ಹಣೆಬೊಟ್ಟುಗಳು ಇತ್ಯಾದಿಗಳನ್ನು ಧರಿಸಿ ಪೋಸು ಕೊಡುತ್ತಾ ತಾವು ಮಾಡುತ್ತಿರುವುದೇ ಸರಿ ಎಂಬಂತೆ ಬೊಬ್ಬಿರಿಯುವುದು ಇವೇ ಮುಂತಾದ ವರ್ತನೆಗಳು ಗುಣಲಕ್ಷಣಗಳಾಗಿರುವ ಹೊಸದೊಂದು ‘ನಾಯಕರ’ (ಅಥವಾ ಹಾಗೆಂದುಕೊಳ್ಳುವವರ) ದಂಡೇ ಇಂದು ನಿರ್ಮಾಣವಾಗುತ್ತಿರುವಂತೆ ತೋರುತ್ತಿದೆ. ಇಂತಹಾ ‘ಕ್ಯಾಮರಾ ನಾಯಕರುಗಳನ್ನು’ ತಯಾರಿಸಿ, ಪ್ರಚೋದಿಸಿ, ಅವರುಗಳಿಂದ ಸಮಾಜವಿದ್ರೋಹೀ ಕೃತ್ಯಗಳಾಗುವಂತೆ ಪ್ರೇರೇಪಿಸುವ ಶ್ರೇಯ ಈ ಮಾಧ್ಯಮಗಳಿಗೇ ಸೇರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೂಲ್ ನಂ. ೩೨ - ಒಂದು ಸಣ್ಣ ಕಥೆ ಓದಿ.
  • ಇದೇನಾ ಪತ್ರಿಕೋದ್ಯಮ?
  • ತಂದೆ ತಾಯಿ ಮತ್ತು ಮಕ್ಕಳು
  • ಗಣ್ಯರ ಖಾಸಗಿ ಬದುಕು ಸಾರ್ವಜನಿಕರ ಆಸ್ತಿಯೇ?
  • ಟಿವಿ-೯ ಕಳ್ಳತನದ ಉಪಾಯ
Syndicate content

ಲೇಖಕರು

anant pandit's picture

ಪರಿಚಯ

ನಾನು ಕನ್ನಡಿಗ. ನಿವೃತ್ತ ಪೋಸ್ಟಲ್ ನೌಕರ. ಕನ್ನಡ ಸಾಹಿತ್ಯಾಸಕ್ತ. ಸಾಮಾಜಿಕ ಚಟುವಟಿಕೆಯಲ್ಲಿ ಆಸಕ್ತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator