ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಪಾಪ ಮತ್ತು ಪಾಪಪ್ರಜ್ಞೆ

May 1, 2007 - 9:41am — Sunil Jayaprakash

ಮನುಷ್ಯನ ಜಿಜ್ಞಾಸೆಗಳು ಹಲವು. ಈಗ್ಗೆ ಒಂದು ವರ್ಷದ ಹಿಂದೆ ಶ್ರೀಕಾಂತ ಮಿಶ್ರಿಕೋಟಿಗಳು
ಹಿಟ್ಟಿನ ಹುಂಜ-ಗಿರೀಶ್ ಕಾರ್ನಾಡರ ನಾಟಕದ ಕಥೆ ಎಂಬುದನ್ನು ಬರೆದಿದ್ದರು. ಇದರಲ್ಲಿ ಅವರು ಪ್ರಸ್ತಾಪಿಸಿದ್ದ ಒಂದು ಪ್ರಮುಖ ಅಂಶವೆಂದರೆ, "ಜೈನ ಧರ್ಮದ ಪ್ರಕಾರ ಪಾಪ ಮಾಡುವದಕ್ಕಿಂತ ಅದರ ಪ್ರಜ್ಞೆ , ವಿಚಾರ , ಸಂಕಲ್ಪ ಹೆಚ್ಚು ಘೋರ". ಈ ವಾಕ್ಯ ಎಲ್ಲರಿಗೂ ಅರ್ಥವಾಗುವಂಥದ್ದೇ. ಆದರೆ ಇದಾದ ವರ್ಷದಲ್ಲಿ ಕೆಲವು ಓದು, ಆಲೋಚನೆಗಳು, ಗೆಳೆಯರೊಡನೆ ಚರ್ಚೆಗೈದ ಎಷ್ಟೋ ವಿಚಾರಗಳಲ್ಲಿ ಮಗ್ನನಾಗಿದ್ದ ನನಗೆ "ಈ ಪಾಪ ಮತ್ತು ಪಾಪಪ್ರಜ್ಞೆಗಳ"ನ್ನು ಅನೇಕ ಮಜಲುಗಳು ಗೋಚರಿಸತೊಡಗಿದವು.

ಈ ಪಾಪ ಮತ್ತು ಪಾಪಪ್ರಜ್ಞೆಯ ಜೊತೆಗೆ ತಳುಕುಹಾಕಿಕೊಂಡಿರುವ ಮೂರು ಮುಖ್ಯ ಕೃತಿಗಳನ್ನು (ಒಂದು ಹಳಗನ್ನಡ ಕಾವ್ಯ, ಮತ್ತೆರಡು ಭೈರಪ್ಪನವರ ಕಾದಂಬರಿ) ಓದಿದ ಮೇಲೆ ಇದರ ಆಳ ಮತ್ತಷ್ಟು ಅರಿವಿಗೆ ಬಂತು.

೧. ಕವಿರಾಜಮಾರ್ಗದಲ್ಲಿ ಬಂದಿರುವ ಅಂತರಂಗರಿಪುವರ್ಗ - ನಾನು ಅಂದೇ ಹೇಳಿದ್ದೆ, ಕವಿರಾಜಮಾರ್ಗವನ್ನು ಓದುವಾಗ ಅದರಲ್ಲಿ ವ್ಯಾಕರಣಕ್ಕೆ ನಂಟಾದ ವಿಚಾರಗಳಷ್ಟೇ ಅಲ್ಲದೆ, ಪ್ರಸ್ತುತ ಸಮಾಜಕ್ಕೆ ಬೇಕಾದ ಅನೇಕ ಉತ್ತರಗಳು ಸಿಗುತ್ತವೆ ಎಂಬುದಾಗಿ. ಪ್ರಸಿದ್ಧವಾದ ಅರಿಷಡ್ವರ್ಗಗಳಿಗೆ(ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ) ಬದಲಾಗಿ ಕನ್ನಡದ ಕವಿರಾಜಮಾರ್ಗದಲ್ಲಿ "ಮನದೊಳಗಣ ಏಳು ವೈರಿ"ಗಳ (ಮದ, ಮಾನ, ಮಾಯ, ಭಯ, ಲೋಭ, ವಿಷಾದ, ಹರ್ಷಾಭ್ಯುದಿ) ಬಗೆಗಿನ ಪ್ರಸ್ತಾಪ ನಿಜಕ್ಕೂ ನನ್ನನ್ನು ಕುತೂಹಲದಲ್ಲಿಟ್ಟಿತ್ತು. ಅಂದ ಹಾಗೆ ಕವಿರಾಜಮಾರ್ಗದ ಬರೆದ ಶ್ರೀವಿಜಯನೂ ಕೂಡ ಜೈನ. ಪಾಪಪ್ರಜ್ಞೆಯಲ್ಲಿ ನಾವು ಬೇಯುವಾಗ ನಮ್ಮನ್ನು ಕಾಡುವದೂ ಕೂಡ ಈ ವಿಷಾದವೇ ಅಲ್ಲವೇ. ಅಂದರೆ ಕನ್ನಡದ ಮೇಲ್ಪಂಕ್ತಿಕಾರರಲ್ಲಿ ಒಬ್ಬನಾದ ಶ್ರೀವಿಜಯನೇ ಹೇಳಿಬಿಟ್ಟಿದ್ದಾನೆ "ವಿಷಾದವು (ಪಾಪಪ್ರಜ್ಞೆ ಒಳಗೊಂಡಿದೆ) ಒಂದು ಶತ್ರು" ಎಂಬುದಾಗಿ.
೨. ಭೈರಪ್ಪನವರ ವಂಶವೃಕ್ಷ ಕಾದಂಬರಿ - ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ತೂಕ(=ವಿಶ್ಲೇಷಣೆ) ನಡೆದೇ ಇದೆ. ಈ ಕಾದಂಬರಿಯಲ್ಲಿ ಬರುವ ಕಾತ್ಯಾಯಿನಿ ಸಾಯುವುದು ಏಕೆ ? ಅದರಲ್ಲಿ ಬರುವ ಕಾತ್ಯಾಯಿನಿಗೆ ಯಾರೂ ಬಯ್ಯುವುದಿಲ್ಲ, ಆದರೆ ತಾನೇ ತನ್ನ ಮಗನಿಗೆ, ಮಾವನಿಗೆ ಮೋಸ ಮಾಡಿದೆ ಎಂದು ನರಳಿ ನರಳಿ ಸಾಯುತ್ತಾಳೆ. ಸಾಯುವಾಗ ತನ್ನ ಮಾವ ತನ್ನನ್ನು ನೋಡಲು ಬಂದದ್ದರಿಂದ ಸ್ವಲ್ಪ ಸಮಾಧಾನವಾಗುವಂತೆ ಭಾಸವಾಗುತ್ತದೆ. ಕಾತ್ಯಾಯಿನಿ ಸತ್ತದ್ದು ಪಾಪದಿಂದಲೋ ಅಥವಾ ಪಾಪಪ್ರಜ್ಞೆಯಿಂದಲೋ ?
೩. ಭೈರಪ್ಪನವರ ದಾಟು ಕಾದಂಬರಿಯಲ್ಲಂತೂ ಈ ಪಾಪಪ್ರಜ್ಞೆಯಲ್ಲಿ ಮಿಂದು ತೊಯ್ದಾಡುವ ತುಂಬಾ ಪಾತ್ರಗಳು (ಅವುಗಳನ್ನು ಪಾತ್ರ ಎನ್ನುವುದಕ್ಕಿಂತ ಸಮುದಾಯಗಳು ಎನ್ನಬಹುದು) ಸಿಗುತ್ತವೆ. ಅದರಲ್ಲಿ ಎಷ್ಟೋ ಪಾತ್ರಗಳು ತಮ್ಮನ್ನು ತಾವೇ ಕೀಳು, ತಾವು ಪಾಪ ಮಾಡಿದವರು ಎಂದು ಬಳಲುತ್ತಿರುತ್ತಾರೆ.

ಧಾರ್ಮಿಕ ನೆಲೆಯಲ್ಲಿ ಪಾಪಪ್ರಜ್ಞೆ
೧. ಜೈನ ಧರ್ಮದಲ್ಲೇನೋ ಪಾಪಪ್ರಜ್ಞೆಯನ್ನೇ ಶತ್ರುವಾಗಿಸಿಕೊಳ್ಳಿ ಎಂದಾಯಿತು. ಆ ಹಿಟ್ಟಿನ ಹುಂಜ ಕಥೆಯಲ್ಲಿಯೂ ಕೂಡ ಪಾಪಪ್ರಜ್ಞೆಯಿಂದ ಕೂಡಿದ್ದ ರಾಜ ಕೀಳು ಜನ್ಮವೆತ್ತುತ್ತಾ ಹೋಗುತ್ತಾನೆ. ಆದರೆ ಪಾಪ ಮಾಡಿದೆ ಅಮೃತಮತಿ ಒಳ್ಳೆಯ ಜನ್ಮವೆತ್ತುತ್ತಾ ಸಾಗುತ್ತಾಳೆ.
೨. ವೈದಿಕ ಧರ್ಮದ ಪ್ರಕಾರವೂ, ಪಾಪಪುಣ್ಯಗಳ ಆಧಾರದಲ್ಲಿ ನಮ್ಮ ಮುಂದಿನ ಜನ್ಮ ನಿಶ್ಚಯವಾಗುತ್ತದೆ. ಅದೇ ಧರ್ಮದಲ್ಲಿ ನಾವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಕರ್ಮಗಳೂ ಇವೆ. ಪುಣ್ಯಾಃ ವಾಚನ ಅದರಲ್ಲಿ ಅತ್ಯಂತ ಸಣ್ಣದಾದ ಒಂದು ಪಠಣ. ಅಂದರೆ ಇದು ಪಾಪ ಎಂಬ ಕಲ್ಪನೆಯನ್ನು ಮಾಡಿರುವವರೂ ನಾವೇ, ಪಾಪದ ಪ್ರಾಯಶ್ಚಿತ್ತ ಎಂಬ ಕಲ್ಪನೆಯನ್ನು ಮಾಡಿರುವವರೂ ನಾವೇ.
೩. ಹಾಗೆಯೇ ವಚನಕಾರರು "ಸ್ವರ್ಗ ನರಕಗಳು ಬೇರಿಲ್ಲ ಕಾಣಿರೋ" ಎಂದು ಹೇಳಿದರು.

ಇದೇಕೆ ಹೀಗೆ. ಪಾಪಪ್ರಜ್ಞೆ ಏಕೆ ಇಷ್ಟು ಕಾಡುತ್ತದೆ ನಮ್ಮನ್ನು ? ಬೇರೆ ಬೇರೆ ಧರ್ಮದಲ್ಲಿ ಈ ಪಾಪ ಮತ್ತು ಪಾಪಪ್ರಜ್ಞೆಯ ಕಲ್ಪನೆ ಹೇಗಿದೆ ? ದುರ್ಬಲರ ಪಾಪ ಪ್ರಜ್ಞೆಯನ್ನೇ ಬಂಡವಾಳ ಮಾಡಿಕೊಳ್ಳುವ ಬುದ್ಧಿವಂತರು ಸಾಮಾಜಿಕವಾಗಿ ಸವಾರಿ ಮಾಡುವ ಸಂದರ್ಭಗಳೇ ಹೆಚ್ಚು. ಇವೆಲ್ಲ ಅಂಶಗಳನ್ನು ಒಟ್ಟಾಗಿ ಸೇರಿಸಿ ಕನ್ನಡಿಗರಾಗಿ ನಾವು ಪಾಪಪ್ರಜ್ಞೆಯನ್ನು ಹೇಗೆ ಕಿತ್ತೊಗೆಯೋಣ ? ಕವಿರಾಜಮಾರ್ಗದ ಶ್ರೀವಿಜಯನ ಮಾತನ್ನು ನಾವುಗಳು ಈಗ ಪ್ರಸ್ತುತ ಸಮಾಜಕ್ಕೆ ಸರಿದೂಗಿಸಿಕೊಂಡು ಯಾವುದೇ ಕಾರಣಕ್ಕೂ ಯಾವುದೇ ವಿಷಯದಲ್ಲಿಯೂ ಕೀಳರಿಮೆಯಿಂದ ಬಳಲದೇ ಹೆಮ್ಮೆಯಿಂದ, ಗರ್ವದಿಂದ ಬಾಳಲು ಕೈಜೋಡಿಸೋಣವೇ ?

  • ಚಿಂತನೆ
~.~
  • Login or register to post comments
  • 605 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 2, 2007 - 6:28pm — mahesha

ಉ: ಪಾಪ ಮತ್ತು ಪಾಪಪ್ರಜ್ಞೆ

mahesha's picture

ಪಾಪಾ!!
ಸುನಿಲ ಸ್ಯಾನೆ ತಲೆಕೆಡಿಸಿಕೊಂಡಿದ್ದಾನೆ. Smiling

ನೋಡಪ್ಪ, ನಾನು ನೆಟ್ಟಗೆ ಹಿಂಗೆ ಪೋಳಿ ಮುಗಿಸ್ತೀನಿ.!!!

೧) ಕೆಲವು ನಂಬಿಕೆಗಳನ್ನು ಇಟ್ಟುಕೊಂಡು, ಆ ನಂಬಿಕೆಗಳಿಗೆ ಓಸುಗರ ಇಲ್ಲದೆ, ಅದನ್ನು ಬರಿ ನಂಬಬೇಕು, ಅದರ ಒಳಹೊರಗಳ ಬಗ್ಗೆ ಒಂದು ಐಬೂ ಎತ್ತದೇ ಅದನ್ನು ಹಾಗೆ ಒಪ್ಪಬೇಕು. Axiom ತೆರ. ಈ ಪರಿಯ axiomಗಳೇ ಈ ಆದಿಯಾತ್ಮಕ್ಕೆ ಬೇರು.
ಮಾದರಿ: ಪಾಪ, ಪುಣಿಯ, ದರುಮ, ನಾಕ, ನರಕ, ಆತುಮ, ಕಡವಳ.
ಇವೆಲ್ಲವೂ ಇದೆಯೇ, ಇಲ್ಲವೇ ಎಂಬ ಉಂಕಿಗೆ ಎಡೆಯಿಲ್ಲ. ಒಪ್ಪಬೇಕು ಅಂದರೆ ಒಪ್ಪಬೇಕು.

೨)ಇಂತಹ ಉಂಕುಯಿಲ್ಲದ ನಂಬಿಕೆಗಳ ಒಂದು ಗುಂಪೊಂದು ಮಾಡಿ, ಅದರ ಮೇಲೇ logicಗಳನ್ನು ಎಳೆದು, ಹಣೆದು, ಅದರಿಂದ ಒಂದಸ್ಟು ತೀರ್ಪುಗಳನ್ನು ಮಾಡಿಕೊಂಡು, ಇದು ಹೀಗೇಏಏಏ ಎಂದು ಇರುವುದು.

೩)ಮುದಲು ಬೇರೆ ಬೇರೆಯವರು, ಅಂತಪ್ಪ Axiomಗಳನ್ನು ಬೇರೇ ಬೇರೇ ಇಟ್ಟುಕೊಂಡು ಹೋದರೆ, ಕೊನೆಗೆ ಬೇರೆ ತೀರ್ಪುಗಳು, ಮುಗಿತಗಳು, ಬರುವುವು.

ಒಟ್ಟಿನಲ್ಲಿ..... ಈ Axiomಗಳು ಬರೀ ಊಹಾಪೋಹಾ, ಗೆಸ್ಸುಗಳು...

ಪಾಪ, ಪುಣಿಯ ಇವು relative... ಬೇರೆ ಬೇರೆ ನಂಬಿಕೆ ಮಂದಿಗೆ ಬೇರೆ ಬೇರೆ ಬಗೆಯಲ್ಲಿ ಇರುತ್ತವೆ.!

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 2, 2007 - 6:30pm — mahesha

ಉ: ಪಾಪ ಮತ್ತು ಪಾಪಪ್ರಜ್ಞೆ

mahesha's picture

ಬರೆದುದನ್ನು ತಿದ್ದುವ ಸವಲತ್ತು ಇದ್ರೆ ಚೆನ್ನಿತ್ತು.....!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 9:21pm — ವೈಭವ

ಉ: ಪಾಪ ಮತ್ತು ಪಾಪಪ್ರಜ್ಞೆ

ವೈಭವ's picture

ಪಾಪ ಮತ್ತು ಪಾಪ ಪ್ರಙ್ಞೆಗಳಲ್ಲಿ ಹುರುಳಿಲ್ಲ....ಒಂದು ಸೈಕಲಾಜಿಕಲ್ ಡಿಸಾರ್ಡರ್ ಅನ್ನಬಹುದು.
ಪಾಪ(ಪಾಪ ಪ್ರಙ್ಞೆ) ಮೇಲೆ ನಮ್ಮ ಮುಂದಿನ ಜನುಮ ನಿಂತಿದೆ ಅನ್ನುವುದು ಅರ್ಥಹೀನ. ಈಗಿರುವ ಜನುಮ ಬಿಟ್ಬುಟ್ ಮುಂದಿನ ಜನುಮದ ಬಗ್ಗೆ ಯಾಕೆ ಯೋಚನೆ.

ನಾವು ನಮ್ಮ ಮನಸ್ಸಿನಲ್ಲಿ ಏನು ಬೇಕಾದರೂ ಯೋಚಿಸಬಹುದು....ಇಷ್ಟಾದರೂ ನಮಗೆ ಸ್ವಾತಂತ್ರ ಬೇಡ್ವಾ ನಮಗೆ ? ಆದರೆ ಅದನ್ನು ಕೆಲಸಗತ ಮಾಡಿದಾಗ ಅದರಿಂದ ಯಾರಿಗೂ ತೊಂದರೆಯಾಗಬಾರದು. ತೊಂದರೆಯಾದರೆ ಆಗ ಅದು ತಪ್ಪಾಗುತ್ತದೆ. ಒಟ್ಟಿನಲ್ಲಿ
"ನಾನು ಚೆನ್ನಾಗಿ ಬಾಳ್ತೀನಿ, ಬೇರೆಯವರನ್ನು ಚೆನ್ನಾಗಿ ಬಾಳಕ್ಕೆ ಬಿಡ್ತೀನಿ" ಅನ್ನೋದನ್ನ ಪಾಲಿಸಿದ್ರೆ ಸಾಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2007 - 11:13am — mahesha

ಉ: ಪಾಪ ಮತ್ತು ಪಾಪಪ್ರಜ್ಞೆ

mahesha's picture

ನಾನು ಚೆನ್ನಾಗಿರ್ತೀನಿ, ನೀವು ಚೆನ್ನಾಗಿರಿ, ಎಲ್ರು ಚೆನ್ನಿರೋಣ.... ಇದು ಬರಿ ಮಾತಾಗುತ್ದೆ.

ಆದ್ರೆ ದಿಟದಲ್ಲಿ ಹಿಂಗೆ ಇರಕ್ಕೆ ಆಗಲ್ಲ.

ಇರುವ ಗಡಿಗಳಲ್ಲಿ, ನಾವೆಲ್ಲರೂ ಚೆನ್ನಾಗಿರಲಾರದು. ನಮ್ಮ ಬಳಿ ಎಲ್ಲರೂ ಸಿರಿಯಿಂದಿರವನಿತ್ತು ಸಂಪತ್ತಿಲ್ಲ.

ಒಬ್ಬ ಉಳ್ಳವನು, ಒಬ್ಬ ಉಳ್ಳದವನು ಎಂದುಇರಲೇ ಬೇಕು. !!

ಅಂದರೆ ಎಲ್ಲೆಡೆ win-win ಪಾಡಿಂದ ಮುಗಿಯಲ್ಲ, ಮುಗಿಸಲಾರಲ್ಲ.
ಹಲವೆಡೆ win-lose ಪಾಡೇ ನಿಕ್ಕುವ!!

ಆದುದರಿಂದ ನಾವು ಹೆಚ್ಚು winಗಳನ್ನು ಪಡೆದರೆ, ನಲಿಯುವೆವು, ಹೆಚ್ಚು loseಗಳನ್ನು ಪಡೆದರೆ ನೊಂದುಕೊಳ್ಳವೆವು!
======================================
ಪಾಡು - situation, state
ಗಡಿ - limit
ನಿಕ್ಕುವ - certain, sure

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2007 - 12:23pm — muralihr

ಉ: ಪಾಪ ಮತ್ತು ಪಾಪಪ್ರಜ್ಞೆ

muralihr's picture

"ನಾನು ಪಾಪಿ" ಎ೦ಬ ಚಿ೦ತನೆಯೇ ಮಹಾ ಪಾಪ,
"ನಾನು ಯಾರು" ಎ೦ಬ ವಿಚಾರವೇ ಮಹಾ ಪುಣ್ಯ -- ರಮಣ ಮಹರ್ಷಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2007 - 12:42pm — mahesha

ಉ: ಪಾಪ ಮತ್ತು ಪಾಪಪ್ರಜ್ಞೆ

mahesha's picture

ಮುರಳಿ...

ಆದರೆ ನಮ್ಮ ನಡುವೆ ಕೆಲವು ಮಂದಿ ಇದ್ದಾರೆ....

ಅವರು ಅಂದುಕೊಂಡು ಇರೋದು
"ನಾನು ದೊಡ್ಡ ಪುಣ್ಯವಂತ, ದೊಡ್ಡ ಜನ, ಮಿಕ್ಕವರೆಲ್ಲ ಕೀಳು ಜಂತುಗಳು, ನನ್ನ ಬಳಿಗೆ ಬನ್ನಿ, ನಿಮ್ಮ ಜನುಮ ಉದ್ದಾರ ಮಾಡಿಕೊಳ್ಳಿ" ಎಂದು Smiling

ಹೆಂಗೆ "ನಾನು ಪಾಪಿ" ಎಂದುಕೊಳ್ಳೋದು ಮಾಪಾಪವೋ, ಹಂಗೆ "ಬೇರೆಯವರು ಪಾಪಿಗಳು" ಎಂದು ಅಂದುಕೊಳ್ಳೋದು ಇನ್ನು ದೊಡ್ಡ ಪಾಪ. Smiling

"ನಾನು ಇನ್ನೊಬ್ಬರನ್ನು ಉದ್ದಾರ ಮಾಡ್ತೀನಿ, ಅವರನ್ನು ಪುಣ್ಯದ ಹಾದಿಗೆ ತರ್ತೀನಿ" ಅಂತ ಅಂದುಕೊಂಡ ಮಂದಿ, ಸಿಕ್ಕಾಪಟ್ಟೆ ಪಾಪ ಮಾಡಿರೋರು.!!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 5:17am — anivaasi

ಉ: ಪಾಪ ಮತ್ತು ಪಾಪಪ್ರಜ್ಞೆ

anivaasi's picture

Quote:
ಒಬ್ಬ ಉಳ್ಳವನು, ಒಬ್ಬ ಉಳ್ಳದವನು ಎಂದುಇರಲೇ ಬೇಕು. !!

ಒಬ್ಬನೇ ಉಳ್ಳವನಿದ್ದರೆ ಅವನು ಎಷ್ಟು ಉಳ್ಳವನು, ಒಬ್ಬನೇ ಉಳ್ಳದವನಾದರೆ ಅವನು ಎಷ್ಟು ಉಳ್ಳದವನು ಎಂಬುದು ಮುಖ್ಯವಾಗುತ್ತದೆ. Smiling
ಇರಲಿ, ಸಾರ್ವತ್ರಿಕ ಹೇಳಿಕೆ ಎಂದು ತೆಗೆದುಕೊಂಡರೆ:
ಇರಲೇ ಬೇಕು -> ಇದೆ -> ಸರಿಯಾಯಿತು! ಎಲ್ಲರೂ ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋಗಿ ಹೊದ್ದು ಮಲಗೋಣ ಅಂದ ಹಾಗಾಯಿತು. ಈಗಿರುವುದಕ್ಕಿಂತ ಲೋಕ/ಬದುಕು ಚೆನ್ನಾಗಬೇಕು ಎಂಬ ಕನಸನ್ನು ಗಂಟುಮೂಟೆ ಕಟ್ಟಿ ಅಟ್ಟದ ಮೇಲೆಸಯೋಣ. ನಮ್ಮ ಮರಿ ಮಕ್ಕಳಿಗೆ ಅದರ ಪಳೆಯುಳಿಕೆ ಸಿಕ್ಕೀತು! ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2007 - 9:57pm — medhadongre

ಉ: ಪಾಪ ಮತ್ತು ಪಾಪಪ್ರಜ್ಞೆ

medhadongre's picture

ಪಾಪಪ್ರಜ್ಞೆ ಎಂಬ ವಿಷಯದ ಬಗ್ಗೆ ಚರ್ಚೆಯಲ್ಲಿ ಭೈರಪ್ಪನವರ ವಂಶವೃಕ್ಷ ಕಾದಂಬರಿಯಲ್ಲಿನ ಕಾತ್ಯಾಯನಿ ಪಾಪಪ್ರಜ್ಞೆಯಿಂದ ನರಳಿ ಸಾಯುತ್ತಾಳೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಈ ವಿಷಯದಲ್ಲಿ ನನ್ನ ಅಭಿಪ್ರಾಯ ಏನೆಂದರೆ ಆ ಪಾತ್ರದ ಚಿತ್ರಣವೇ ಸ್ವಲ್ಪconfusing ಆಗಿದೆ . ಮಾತೃತ್ವ ಎನ್ನುವುದು ಯುಗಗಳು ಕಳೆದರೂ ಒಂದೇ ತರಹ ಇರುತ್ತದೆ. ಮಗುವನ್ನು ಒಬ್ಬ ಪುರುಷನಿಗೋಸ್ಕರ ಬಿಟ್ಟು ಹೋಗುವ ಮಾತೆಯರು ಇಲ್ಲವೆಂದಲ್ಲ. ಆದರೆ ಕಾತ್ಯಯನಿಯಂತಹ ಸೌಮ್ಯ ಸ್ವಭಾವದ ಮಹಿಳೆ ಒಂದು ವೇಳೆ ಮಗುವನ್ನು ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಂಡರೂ, ಮುದುಕಿಯಾಗುವವರೆಗೆ ಸರಿಯಾಗಿದ್ದು ಆಮೇಲೆ ಪಶ್ಚಾತ್ತಾಪ ಪಡುವುದು ಸ್ವಾಭಾವಿಕವೆನಿಸುವುದಿಲ್ಲ. ಯಾವುದೇ ಮಹಿಳೆಗೆ ಮಗುವನ್ನು ಬಿಟ್ಟ ನಂತರ ಮಗುವಿನ ನೆನಪು ನಿಮಿಷ ನಿಮಿಷಕ್ಕೂ ಕಾಡುವುದು ಖಚಿತ. ಅಷ್ಟು ಹತ್ತಿರದಲ್ಲಿದ್ದೂ ವರ್ಷಗಟ್ಟಲೆ ಮಗನನ್ನು ನೋಡಲು ಹೋಗದಿರುವುದು ತುಂಬ ವಿಚಿತ್ರವೆನಿಸುತ್ತದೆ. ಮಾವನವರನ್ನು ಎದುರಿಸಲು ಭಯವಾದರೂ, ಮಗುವನ್ನು ನೋಡುವ ಆಸೆಯು ಅವಳನ್ನು ಕಡೇಪಕ್ಷ ಕದ್ದುಮುಚ್ಚಿಯಾದರೂ ಮಗುವನ್ನು ನೋಡಲು ಪ್ರೇರೇಪಿಸಬೇಕಾಗಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 11:22am — Sunil Jayaprakash

ಉ: ಪಾಪ ಮತ್ತು ಪಾಪಪ್ರಜ್ಞೆ

Sunil Jayaprakash's picture

ಪಾಪ ಮತ್ತು ಪಾಪಪ್ರಜ್ಞೆಯ ಕೊಂಡಿಯಲ್ಲಿ ಚರ್ಚಿಸುತ್ತಿರುವವರೆಲ್ಲರಿಗೂ ನನ್ನ ನನ್ನಿಗಳು. ವಂಶವೃಕ್ಷದ ಕಾತ್ಯಾಯಿನಿ ಪಾತ್ರದ ಚಿತ್ರಣದ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಇಲ್ಲಿ ಓದಬಹುದು. ವಂಶವೃಕ್ಷದ ಆ ಎಳೆಯಲ್ಲಿ ಕಾದಂಬರಿಯ ಪಾತ್ರಗಳ ಬಗೆಗಿನ ತೂಕವನ್ನು ಬೇಕಿದ್ದಲ್ಲಿ ಮುಂದುವರಿಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 19, 2007 - 12:09am — medhadongre

ಉ: ಪಾಪ ಮತ್ತು ಪಾಪಪ್ರಜ್ಞೆ

medhadongre's picture

ತುಂಬ ದಿನಗಳ ನಂತರ ಪ್ರತಿಕ್ರಿಯಿಸುತ್ತಿದ್ದೇನೆ.ಕ್ಷಮಿಸಿ.
ನಾವು ಪಾತ್ರಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಮೂಗಿನ ನೇರಕ್ಕೆ.ವಾರಾಣಸಿಯಲ್ಲಿ nuclear family ಜೀವನ ನಡೆಸುವ ನನಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಮಗನ ಜವಾಬ್ದಾರಿ.ಕೆಲಸಕ್ಕೆ ಹೋದರೂ crecheನಲ್ಲಿ ಅವನೇನು ಮಾಡುತ್ತಿರಬಹುದೆಂಬ ಯೋಚನೆ.ಆದರೆ ಕಾತ್ಯಾಯನಿಗೆ ಮಗುವನ್ನು ನೋಡಿಕೊಳ್ಳಲು ಅವಳ ಮಾವನವರೂ ಕೆಲಸದವಳೂ ಇದ್ದದ್ದರಿಂದ ಅಂತಹ ಕಷ್ಟ ಆಗಿರಲಿಲ್ಲವೆಂದು ಕಾಣುತ್ತದೆ.ಗೇಟ್ ಹೊರಗೆ ಹೋದರೆ ಟ್ರಾಫಿಕ್,ಕಿಡ್ ನ್ಯಾಪ್ ಇತ್ಯಾದಿ ಭಯ ಇಲ್ಲದ ಕಾಲ ಅದು.ಹಾಗಾಗಿ ಮಗನನ್ನು ಯಾರು ನೋಡಿಕೊಳ್ಳುವರೆಂದೋ ,ಅವನ ಸುರಕ್ಷತೆಯ ಬಗ್ಗೆ ಭಯವೂ ಇದ್ದಿಲ್ಲದಿರಬಹುದು.ನಾನು ವಂಶವೃಕ್ಷ ಓದಿದ್ದು ಒಂದು ವರ್ಷದ ಹಿಂದೆ.ಪಾತ್ರಗಳು,ಹೆಸರುಗಳು,ವಾಕ್ಯಗಳು ಸರಿಯಾಗಿ ನೆನಪಿಲ್ಲ.
ಗಂಡನ ಮರಣದ ನಂತರ ಕಾಲೇಜ್ ಸೇರುವುದು,ನಂತರ ಎರಡನೇ ಮದುವೆಯ ನಿರ್ಧಾರ ಇತ್ಯಾದಿ ಸಹಜವೇ.ಹಾಗೂ ಅದು ಸರಿಯಾದ ನಿರ್ಧಾರವೇ.
ಆದರೆ ಅವಳಿಗೆ ಕಾಡಬೆಕಾಗಿರುವುದು ಪಾಪಪ್ರಜ್ಞೆಗಿಂತ ಹೆಚ್ಚಾಗಿ ಮಗುವಿನ ನೆನಪು.she should have missed her son more than feeling guilty.ಮಗುವನ್ನು ಎತ್ತಿಕೊಳ್ಳಬೇಕು,ಅವನಿಗೆ ಕೈಯಾರೆ ಊಟ ಮಾಡಿಸಬೇಕು...ಇತ್ಯಾದಿ ಇತ್ಯಾದಿ.ಪಾಪಪ್ರಜ್~ಎಗೂ ಮೀರಿದ ಭಾವನೆಯು ಮಗನಿಗಾಗಿ ಹಂಬಲಿಸುವುದಾಗಿರಬೇಕು.ಖಂಡಿತವಾಗಿ ಪಾಪಪ್ರಜ್~ನೆ [sorry,not getting it right] ಅವಳಲ್ಲಿ ಇದ್ದಿರಬಹುದು.ಅವಳ ಆರೋಗ್ಯ ಅದರಿಂದಾಗಿಯೇ ಹದಗೆಟ್ಟಿರಬಹುದು.ಆದರೆ ಒಬ್ಬ ತಾಯಿಯು ಮಗುವನ್ನು ಎಷ್ಟು miss ಮಾಡಿಕೊಳ್ಳುತ್ತಾಳೆನ್ನುವುದು ಪ್ರಾಯಷಃ ಸ್ಪಷ್ಟವಾಗಿ ಚಿತ್ರಿತವಾಗಿಲ್ಲ.ಅದು definitely a major part of her thoughts for the rest of her life.i can not remember her saying this to her husband or anybody.i am extremely sorry for having written in english in sampada..i just wanted to convey what i felt about kaatyaayani.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಂಶವೃಕ್ಷ
  • ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
  • ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ
  • ಮರೆತುಹೋಗುವ ಮುಂಚೆ ಒಂದು ಸಣ್ಣ ಚರ್ಚೆ
  • ನುಡಿಮುತ್ತುಗಳು - ಪ್ರಸ್ತುತ ಅಪ್ರಸ್ತುತಗಳ ನಡುವೆ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 2:22pm
  • createam
    ಉ: ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
    October 7, 2008 - 2:21pm
  • mahesha
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:16pm
  • savithasr
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:15pm
  • anivaasi
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:08pm
  • mahesha
    ಉ: ಕಡೇಹುಟ್ಟು
    October 7, 2008 - 1:51pm
  • mahesha
    ಉ: ಕಡೇಹುಟ್ಟು
    October 7, 2008 - 1:48pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:45pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:39pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:35pm
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 318 ಅತಿಥಿಗಳು ಆನ್ಲೈನ್ ಇರುವರು.


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator