ಸ್ವದೇಶ ಪ್ರೇಮ
ಇತ್ತೀಚಿಗೆ ರಾಘವೇಂದ್ರ ಜೋಶಿಯವರ "ಆಜಾದಿ" ಓದಿದೆ. (ರಾಜೀವ್ ದೀಕ್ಷಿತರ ಸ್ವದೇಶೀ ಆಂದೋಲನದ ವಿಚಾರ ಧಾರೆಗಳು) ಅಂದಿನಿಂದ ನಾನು ಆದಷ್ಟೂ ಸ್ವದೇಶಿ ವಸ್ತುಗಳನ್ನೇ ಉಪಯೋಗಿಸುವ ಸಂಕಲ್ಪವನ್ನು ಮಾಡಿದ್ದೇನೆ, ಪುಸ್ತಕ ಓದಿದಷ್ಟೂ ಮನಸ್ಸು ಭಾರವಾಗುತ್ತದೆ. ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ, ಮತ್ತೊಂದು ಸ್ವತಂತ್ರ ಅಂಧೋಲನ ನಡೆಯುತ್ತದೇನೋ ಅನ್ನಿಸುತ್ತದೆ.

- Login or register to post comments
- 629 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಸ್ವದೇಶ ಪ್ರೇಮ
ನಮ್ಮ ದೇಶದ ಸರಕುಗಳನ್ನ ಬೇರೆ ದೇಶದವರು ಕೊಳ್ಳದೇ ಹೋದರೆ ನಮ್ಮ ಪಾಡು ಏನು?
ಹತ್ತಿ, ಬಟ್ಟೆ, ಅದಿರು( ಕಬ್ಬಿಣ, ಮ್ಯಾಂಗನೀಸು.. ), ತಿನಿಸು, ಅವುಡುಗಳು, ಕಾಳುಗಳು, ಹಣ್ಣುಗಳು, ಹೂಗಳು ಇನ್ನೂ ಬಹಳ ಸರಕುಗಳನ್ನು ಹೊರನಾಡುಗಳಿಗೆ ಹೊರಸಾಗಿಸುವೆವು! ಅದರಿಂದ ನಮಗೆ ಹೆಚ್ಚು ಲಾಬವಿದೆ.
ಕೊಂಡು-ತೆಗೆದುಕೊಳ್ಳವುದು ಇರಲೇ ಬೇಕು.
======================================
ಉ: ಸ್ವದೇಶ ಪ್ರೇಮ
ಅದಿರು,ಕಾಳುಗಳು,ಸಾಂಬಾರ ವಸ್ತುಗಳನ್ನು ಖರೀದಿಸುವುದು ವಿದೇಶಗಳವರಿಗೆ ಅನಿವಾರ್ಯ. ನಾವು ಸ್ವದೇಶಿ ವಸ್ತುಗಳನ್ನು ಬಳಸಿದರೆ, ಅಂತಹ ಅನಿವಾರ್ಯ ರಪ್ತಿಗೆ ಯಾವ ತಡೆಯೂ ಬೀಳದು.
ಉ: ಸ್ವದೇಶ ಪ್ರೇಮ
ಕಂಪ್ಯೂಟರ್, ಮೊಬೈಲ್ ಪೋನು ಅಂತ ಎಲೆಕ್ಟ್ರಾನಿಕ್ ಸರುಕು( ಇದು ಬಹಳ ದೊಡ್ಡ ಸರಕುಗಳ ಗುಂಪು), ಹಾರುಬಂಡಿ, ನೆಲದೆಣ್ಣೆ, ಬವರದ ಕಯ್ದಗಳು ಇವನ್ನೆಲ್ಲ ನಾವು ಹೊರಗಡೆಯಿಂದ ಕೊಳ್ಳಲೇ ಬೇಕು. ಇವುಗಳ ಮಾರುಕಟ್ಟೆ ದೊಡ್ಡದು.
'ಸ್ವದೇಶಿ' ಇವೆಲ್ಲ ಇಂದಿಗೆ ಹೊಂದುವುದಿಲ್ಲ. ನಮ್ಮಲ್ಲೇ ಹೇರಳ ಮಂದಿ ಹೊರದೇಶದ ಕಂಪೆನಿಗಳಿಗೆ ದುಡುಯುತ್ತಿರುವವರು. ನಮ್ಮಲ್ಲಿ ಅವರೇ ದೇಶಕ್ಕೆ ಹೆಚ್ಚು ಗಳಿಕೆ-ತೆರಿಕೆ ತೆರುತ್ತಿರುವುದು.
ಇಂದು ಏನಿದ್ದರೂ ನಾವು ಕೆಲಸದಲ್ಲಿ ಪಳಗಿದವರೂ, ಯಾವುದನ್ನು ಜಗತ್ತಲ್ಲೇ ಎಲ್ಲರಿಗಿಂತ ಚೆನ್ನಾಗಿ ಮಾಡಬಲ್ಲೆವೋ, ಅದನ್ನು ಇನ್ನು ಚೆನ್ನಾಗಿ ಮಾಡಿ ಮಾರಬೇಕು.
ಹಾಗೆ ನಾವು ಯಾವುದನ್ನು ಮಾಡುವುದಿಲ್ಲವೋ, ಮಾಡಲಾರೆವೋ, ಅವನ್ನು ಕೊಳ್ಳಲೇ ಬೇಕು.
"ಎಲ್ಲ ನಾವೇ ಮಾಡಿಕೊಂಡು, ಒದಗಿಸಿಕೊಂಡು ಇರುತ್ತೇವೆ" ಎನ್ನುವುದು ಹೇಳಲು ಮತ್ತು ಕೇಳಲು ಚೆನ್ನು. ಆದರೆ ದಿಟವಾಗಿ ಹಾಗೆ ನಡೆಸಲು ನಮ್ಮ ದೇಶಕ್ಕೆ ಅನಿತ್ತು ಆರ್ಪೂ ಇಲ್ಲ, ಸಂಪತ್ತು, ಸವಲತ್ತು ಇಲ್ಲ.
ನಮ್ಮ ದೇಶಕ್ಕೆ ತಕ್ಕಮಟ್ಟಿನ ಆರ್ಪು, ಸಿರಿ, ಸವಲತ್ತು ಬರುವ ವರೆಗಾದರೂ, ಹೊರಗಡೆಯಿಂದ ಕೊಳ್ಳುವುದೊಂದೇ ದಾರಿ. ಈ ಕೊಳ್ಳುವ ಹೊತ್ತು, ಹತ್ತಿರದಲ್ಲಿ ಮುಗಿಯುವ ಯಾವ ನಿಕ್ಕುವೂ ಕಾಣುತ್ತಿಲ್ಲ.!!
======================================
ಉ: ಸ್ವದೇಶ ಪ್ರೇಮ
ಸಾಧ್ಯವಿರುವಲ್ಲಿ ಸ್ವದೇಶಿ ವಸ್ತು ಖರೀದಿಸುವುದಕ್ಕೆ ಏನಡ್ಡಿ? ಉದಾಹರಣೆಗೆ ಪ್ಯಾಂಟು-ಶರಟು ವಿದೇಶಿ ಬ್ರಾಂಡ್ ಖರೀದಿಸುವ ಬದಲು ನಮ್ಮಲ್ಲೇ ತಯಾರಾದ್ದು ಕೊಳ್ಳುವುದು.
ಉ: ಸ್ವದೇಶ ಪ್ರೇಮ
ನಾವು ಬೆಂಗಳೂರಲ್ಲಿ ಕೊಳ್ಳುವ ಹೆಚ್ಚು ಬ್ರಾಂಡಗಳು(ಹೊರದೇಶದವೂ) ಬೆಂಗಳೂರಲ್ಲಿ ಪಣ್ಣೋದು. ಮಾರತಹಳ್ಳಿಗೆ ಹೋದರೆ, ತಿಳಿಯುವುದು.!
Proline ಕೈಗಾರಿಕೆ ಮೈಸೂರಲ್ಲಿದೆ.
Jockey ಬೇಗೂರಲ್ಲಿದೆ.
Peter England, Indigo Nation ಇವೆಲ್ಲವೂ ಇಲ್ಲೇ ಬೆಂಗಳೂರಲ್ಲೇ ಮಾಡೋದು.
ಕಾಲ್ತೊಡುಗೆ, ಅಂಗಿ ಇವನ್ನೆಲ್ಲ ನಮ್ಮಲ್ಲಿ ನಮ್ಮದೇಶದ್ದೇ ಹಾಕೋದು. ಏಕೆಂದರೆ ನಮ್ಮ ಅನಿತ್ತು ಅಗ್ಗವಾಗಿ ಬಟ್ಟೆ-ಬರೆ ಮಾಡೋರು ಈ ಜಗತ್ತಲ್ಲಿ ಕಡಮೆ( ಬಂಗಾಳದೇಶವನ್ನು ಬಿಟ್ಟು).
ನಮ್ಮ ಕರ್ನಾಟಕದ ಮಲ್ಯರ Kingfisher ಮುಂದೇ ಯಾವ ಬೀರುಂಟು?
ಇಂತವನ್ನು ಬಿಡಿ....,
ನಾನು ಹೇಳಿದ್ದು ಎಲ್ಲ ಸರಕುಗಳೂ "ಸ್ವದೇಶಿ" ಅಂದರೆ ಹೇಗೆ?
==============================================
ಉ: ಸ್ವದೇಶ ಪ್ರೇಮ
ನೀವು ಹೇಳಿದ ಸರಕುಗಳು ಭಾರತದ್ದಲ್ಲ. ನಾವೇ ಅವುಗಳನ್ನ ಉತ್ಪಾದಿಸಿದರೂ copyrights, brand royalty ನಮ್ಮಲ್ಲಿರುವುದು ನಾ ಕಾಣೆ. ಇವುಗಳ ಉತ್ಪಾದನೆಯನ್ನ ಸಾಪ್ಟ್‍ವೇರಿನಂತೆಯೇ ನಮ್ಮಲ್ಲಿಗೆ outsource ಮಾಡಲಾಗಿದೆ ಅಷ್ಟೆ. ಇನ್ನು ಮಲ್ಯರ ಬೀರು ಭಾರತದ್ದು. ಆದರೆ ಬೀರ್ ಎಂಬ ಪಾನೀಯವೇ ಭಾರತದ್ದಲ್ಲ.
ಕೊಂಡು-ತೆಗೆದುಕೊಳ್ಳುವ ವಿಷಯ: ನಾವು ಹೆಚ್ಚಾಗಿ ಕೊಳ್ಳುತ್ತಿರುವುದು finished goods and services, ಅದರಲ್ಲು brands. ನಾವು ಹೆಚ್ಚಾಗಿ ಕಳುಹಿಸುತ್ತಿರುವುದು brand less ಕಚ್ಚಾ ವಸ್ತುಗಳನ್ನ. ಇದು by default ನಮ್ಮ ವಿರುದ್ಧವಾಗಿಯೇ ಆಗತ್ತೆ.
ಇನ್ನು ಇಂದಿಗೆ ಹೊಂದುತ್ತದೆಯೋ ಅಲ್ಲವೋ ಇದರ ವಿಷಯ:
ನಾವು ಬೇರೆ ದೇಶದ ಉದ್ದಿಮೆಗಳಿಗೆ ದುಡಿದು ದೇಶಕ್ಕೆ ದುಡ್ಡು ತರುತ್ತಿದ್ದೇವೆ ಅನ್ನೋದು ಪೂರ್ತಿ ನಿಜವಲ್ಲ. ನಮ್ಮ ಫಾರಿನ್ ದುಡ್ಡಿನಲ್ಲಿ ಹೆಚ್ಚಿನಂಶ ಫಾರಿನ್ ಉತ್ಪನ್ನಗಳಿಗೆ (ನೀವೇ ಹೇಳಿದಂತೆ ಕಂಪ್ಯೂಟರ್, ಮೊಬೈಲ್, ವಿಮಾನ ಇತ್ಯಾದಿ)ಗಳಿಗೆ ಹೋಗುತ್ತದೆ. ಉಳಿದರೆ ನಿಮ್ಮ ಊರಾದ ಬೆಂಗಳೂರಿಗೆ ಬಂದು ನಿಂತಿದೆ. ನಿಮ್ಮೂರಿಗೆ ನೀರು ಕರೆಂಟು ಕೊಡಲು ಅದೂ ಹೋಗತ್ತೆ. ನಮ್ಮೂರಿನ ತನಕ ನಿಮ್ಮ ದುಡ್ಡು ಇಳಿದಿಲ್ಲ. ಇಳಿದಿದ್ದರೆ ಅದು IMF, Worldbankಗಳ ಸಾಲ ಮಾತ್ರ.
ನಮ್ಮ ಬಳಕೆಯ ವಿಧಾನವನ್ನು ಬದಲಾಯಿಸಿಕೊಂಡರೆ ಮಾತ್ರ ಸ್ವದೇಶಿ ಸಾಧ್ಯ. ನಾವು ಬದಲಾಗದೇ ಇರುವುದಕ್ಕೆ ಸ್ವದೇಶಿ ಎಂಬ ಕಾನ್ಸೆಪ್ಟ್ ಇವತ್ತಿಗೆ ಹೊಂದಲ್ಲ ಎಂದು ಹೇಳುವುದು ಸರಿಯಲ್ಲ.
ಕೊನೆ ವಿಚಾರ: "ಇಂದು ಏನಿದ್ದರೂ ನಾವು ಕೆಲಸದಲ್ಲಿ ಪಳಗಿದವರೂ, ಯಾವುದನ್ನು ಜಗತ್ತಲ್ಲೇ ಎಲ್ಲರಿಗಿಂತ ಚೆನ್ನಾಗಿ ಮಾಡಬಲ್ಲೆವೋ, ಅದನ್ನು ಇನ್ನು ಚೆನ್ನಾಗಿ ಮಾಡಿ ಮಾರಬೇಕು." ಅಂತ ಹೇಳಿದ್ದೀರಿ. ಸಾಪ್ಟ್-ವೇರ್ ಮತ್ತು ಬಿ.ಪಿ.ಓ ಉದ್ದಿಮೆಗಳ ಬಗ್ಗೆ ಅಲ್ಲ ಇದು ಎಂದು ಭಾವಿಸಿದ್ದೇನೆ. ಏಕೆಂದೆರೆ ನಾವದರಲ್ಲಿ ಪಳಗಿಯೂ ಇಲ್ಲ, ಚೆನ್ನಾಗಿ ಮಾಡ್ತಾನು ಇಲ್ಲ. ತುಟ್ಟಿಯಾಗಿ ಮಾಡ್ತಾ ಇದೀವಿ ಅಷ್ಟೆ ಅನ್ನೋದು ನಿಮಗೂ ತಿಳಿದಿರಬಹುದು.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ಸ್ವದೇಶ ಪ್ರೇಮ
ಪ್ರತಿಕ್ರಿಯಿಸುವ ಧಾವಂತದಲ್ಲಿ ಮುಖ್ಯವಾದದ್ದನ್ನೇ ಮರೆತಿದ್ದೆ.
ವೀಣಾರವರೆ,
ನಿಮ್ಮ ಸಂಕಲ್ಪವನ್ನು ನಿಷ್ಠೆಯಿಂದ ನಿಭಾಯಿಸಿ. ನಾವು ಎಷ್ಟು ಬೇಗ ಎಚ್ಚೆತ್ತುಕೊಳ್ಳುತ್ತೇವೋ ಅಷ್ಟೇ ಒಳ್ಳೆಯದು.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ಸ್ವದೇಶ ಪ್ರೇಮ
"ಅಗ್ಗವಾಗಿ ಮಾಡ್ತಾ ಇದ್ದೀವಿ" ಆಟೇ ಅಂತ ಇರಬೇಕು ಅಲ್ವಾ?
ಇರಲಿ ವಸಿ adjust ಮಾಡ್ಕೊಳ್ಳೂಮ!
ಏನಾರ ಇರಲಿ ನನ್ನ ಮಾತು ಈಟೇ
ಆರ್ಪು = power, might
ಅನಿತ್ತು = that much
======================================
ಉ: ಸ್ವದೇಶ ಪ್ರೇಮ
ಅಯ್ಯೋ ಎಂಥಾ ಪೆದ್ದುತನ, ನೀವು ಹೇಳಿದ್ದು ಸರಿ, ಅದು ಅಗ್ಗ ಅಂತಾಗಬೇಕು, ತುಟ್ಟಿ ಅಲ್ಲ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ಸ್ವದೇಶ ಪ್ರೇಮ
ಅಂತಪ್ಪ ಜಾಣತನದ ಮರುಮಾತು ಬರೆದ ನಿಮ್ಮದು ಪೆದ್ದುತನವೇನಲ್ಲ ಬಿಡಿ!!
ನಿಮ್ಮ ಗವನ ಕೊಂಚ ತಪ್ಪಿದೆ ಅಸ್ಟೇ!! ಪರವಾಯಿಲ್ಲ!!
======================================
ಉ: ಸ್ವದೇಶ ಪ್ರೇಮ
veena.
ನನ್ನದೊಂದು ಸಂದೇಹವನ್ನು ದಯವಿಟ್ಟು ಪರಿಹರಿಸಿ. ನಾನು ಸಂಪದದಿಂದ ಲಾಗ್ ಔಟ್ ಆಗಿ, ಮತ್ತೆ ಲಾಗ್ ಇನ್ ಆಗಲು ಪ್ರಯತ್ನಿಸಿದಾಗ, ಬಳಸುವ ಪಾಸ್ ವರ್ಡ್ ಅನ್ನು ಸಂಪದ ಒಪ್ಪದೆ, ನೀವು ಪಾಸ್ ವರ್ಡ್ ಮರೆತಿದ್ದೀರಿ ಎನ್ನುತ್ತದೆ. ನಾನು ಹೊಸ ಪಾಸ್ವರ್ಡ್ ಕೊಟ್ಟು ಮತ್ತೆ ಲಾಗಿನ್ ಆಗಬೇಕಾಗುತ್ತದೆ. ಇದಕ್ಕೆ ಪರಿಹಾರವಿಲ್ಲವೆ, ದಯವಿಟ್ಟು ತಿಳಿಸಿ.
ಉ: ಸ್ವದೇಶ ಪ್ರೇಮ
veena.
ನಾನು ಶ್ಯಾಮ್ ಅವರ ಮಾತುಗಳನ್ನು ಅನುಮೋದಿಸುತ್ತೇನೆ. ಇಲ್ಲಿ ಸಿಗಲಾರದ ವಸ್ತುಗಳನ್ನು ಆಮದು ಮಾಡಿಕೊಂಡರೆ ಸರಿ, ಆದರೆ ಸೋಪು ,ಬ್ಲೇಡ್, ಶ್ಯಾಂಪೂ, ಕೂಲ್ ಡ್ರಿಂಕ್ಸ್, ಇಂತಹವುಗಳನ್ನು ವಿದೇಶೀ ವಸ್ತುಗಳನ್ನು ಉಪಯೋಗಿಸಿದರೆ, ಭಾರತದಲ್ಲಿ ತಯಾರಾಗುವ ವಸ್ತುಗಳನ್ನು ಕೊಳ್ಳುವವರು ಯಾರು ?
ಆ ಕಂಪನಿಗಳು ಬಾಗಿಲು ಹಾಕಿಕೊಂಡು ಹೋಗ ಬೇಕಾಗುತ್ತದೆ. ನಷ್ಟ ನಮ್ಮ ಜನರಿಗೇ ಹೊರತು ವಿದೇಶಿಯರಿಗಲ್ಲ. ಇಲ್ಲಿ ಕೆಲವು ಸ್ವದೇಶಿ ಹಾಗೂ ವಿದೇಶಿ ವಸ್ತುಗಳ ಹೆಸರನ್ನು ಕೊಡುತ್ತೇನೆ, ಸಾಧ್ಯವಾದರೆ ಸ್ವದೇಶಿ ವಸ್ತುಗಳನ್ನು ಉಪಯೋಗಿಸಲು ಪ್ರಯತ್ನಿಸಿ.
ಸ್ವದೇಶಿ
ಮೈಸೂರ್ ಸ್ಯಾಂಡಲ್
ಮೆಡಿಮಿಕ್ಸ್
ಗೋದ್ರೆಜ್
ಡಾಬರ್
ಟಾಟಾ
ರಸ್ನಾ, ಲಿಬರ್ಟಿ, ಲಿಡ್ಕರ್, ಬಾಂಬೇ ಡೈಯಿಂಗ್, ಪ್ರಿಯದರ್ಷಿನಿ, ಕೋ-ಆಪ್ ಟೆಕ್ಸ್
ಟೈಟನ್,
ವಿದೇಶಿ
ಲಕ್ಸ್, ಲಿರಿಲ್, ಲೈಫ್ ಬಾಯ್, ಕೋಲ್ಗೆಟ್, ಪೆಪ್ಸೊಡೆಂಟ್
ಪಾರ್ಕರ್, ಜಿಲ್ಲೆಟ್, ಸೆವೆನ್ ಓ ಕ್ಲಾಕ್
ಬ್ರೂಕ್ಬಾಂಡ್, ಬೋರ್ನ್ವಿಟಾ, ಹಾರ್ಲಿಕ್ಸ್, ಬಾಟಾ, ಅಡಿಡಾಸ್, ನೈಕಿ,
ರೇಮಂಡ್ಸ್, ಹೀಗೇ ಬಹಳಷ್ಟಿವೆ. ಸಾಧ್ಯವಾದಷ್ಟು ಮಟ್ಟಿಗೆ ಸ್ವದೇಶಿಯಾಗಲು ಪ್ರಯತ್ನಿಸಿ, ನಮ್ಮ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯಲು ಪ್ರಯತ್ನಿಸಿ.
ಉ: ಸ್ವದೇಶ ಪ್ರೇಮ
ಆದರೆ ಕೊಳ್ಳುವವರು ಅದನ್ನೆಲ್ಲಾ ನೋಡ್ಕೊಂಡ್ ಕೂರೋಕಾಗಲ್ಲಾ, ನಮ್ ಹಳ್ಳಿಗಳ ಕಡೆಯೆಲ್ಲಾ ಟೂತ್‍ಪೇಸ್ಟ್ ಅಂದ್ರೆ ಕೋಲ್ಗೇಟ್, ಪೆಪ್ಸೊಡೆಂಟ್. ಅವರು ಆ ತರಾ ಜಾಹಿರಾತ್ ಮಾಡ್ತಾರೆ ಮತ್ತು ಹಾಗೇ ಸಪ್ಲೈ ಕೂಡಾ.
ಮೈಸೂರ್ ಸ್ಯಾಂಡಲ್‍ನಂತೆ ಕ್ವಾಲಿಟಿ ಕಾಯ್ದುಕೊಂಡು ಹೋದರೆ ಜನ ಕೊಂಡೇ ಕೊಳ್ಳುತ್ತಾರೆ. ಸ್ವದೇಶಿ ಅಂತ ಹೇಳಿ ಕಳಪೆ ಕೊಳ್ಳೋಕೆ ಯಾರು ಇಷ್ಟ ಪಡಲ್ಲ.
ಉ: ಸ್ವದೇಶ ಪ್ರೇಮ
ಸ್ವದೇಶಿ = ನಮ್ಮ ದೇಸದ್ದು...
ಸ್ವರಾಜ್ಯಿ = ನಮ್ಮ ರಾಜ್ಯದ್ದು
"ಹಾಗೆ ನಾವು ಕನ್ನಡದವರು "ಸ್ವರಾಜ್ಯಿ" ಚಳುವಳಿ ಮಾಡೋಣ. ಬೇರೆ ರಾಜ್ಯದ ( ತಮಿಳು ನಾಡು, ಆಂದ್ರ, ಮಹಾರಾಷ್ಟ್ರ, ಇವು ನಮಗೆ ಬಹಳ ತೊಂದರೆ ಕೊಟ್ಟಿವೆ
) ಯಾವ ಸರಕನ್ನು ಇಲ್ಲಿ ಮಾರಲು, ಕೊಳ್ಳಲು ಬಿಡವುದೇ ಬೇಡ.
ಎಲ್ಲ ಬರಿ made in karnatakaಗಳನ್ನು ಕೊಳ್ಳೋಣ" ಅಂತ ಮಾತು ಎತ್ತಬವುದು.
ಇದೆಲ್ಲ ಬೇಕಾ?
"ಚನ್ನಾಗಿರುವದನ್ನು, ಹಿಡಿಸುವುದನ್ನು ಕೊಳ್ಳೂಮ, ಹಾಗೆ ಚೆನ್ನಾಗಿರುವದನ್ನು, ಹೆಚ್ಚಿನವರಿಗೆ ಹಿಡಿಸುವದನ್ನು ಪೋಟಿಯ ಬೆಲೆಗೆ ಮಾಡಿ, ಹುಲುಸು ಮಾಡೂಮ"
================================================================
ಉ: ಸ್ವದೇಶ ಪ್ರೇಮ
ಮತ್ತೆ ಯಾಕೆ ನಮ್ಮ ಸರಕಾರದವರು ಉದಾರೀಕರಣ ಮಾಡಬೇಕಾಗಿತ್ತು....ಅವಾಗ ನಮಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವೆ ಇರ್ತ ಇರಲಿಲ್ಲ...
ಒಟ್ಟಿನಲ್ಲಿ ಚೆನ್ನಾಗಿದ್ರೆ ಯಾವುದೇ ಆದ್ರೂ ಮಂದಿ ಎತ್ತಿಹಾಕತಾರೆ.
ನೀವು ಬ್ಲಾಗ ಮಾಡುವಾಗ ಯಾವ ಯಾವ ದೇಸದ ಉತ್ಪನ್ನಗಳನ್ನ( ಪ್ರಾಸೆಸರ್, ಮೆಮೊರಿ, ಸಾಪ್ಟ್ ವೇರ್...ಇತರೆ) ಬಳಸಿತ ಇದಾರೊ ಯಾರಿಗೆ ಗೊತ್ತು.