ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಪೋಲಿಷ್ ಕವಿತೆ: ಹಿಂಸೆ

September 16, 2005 - 10:20am — olnswamy

ಏನೂ ಬದಲಾಗಿಲ್ಲ.
ಮೈಗೆ ನೋವಾಗುವುದು ಏನೂ ಬದಲಾಗಿಲ್ಲ.
ಉಣ್ಣಬೇಕು, ಉಸಿರಾಡಬೇಕು, ಮಲಗಬೇಕು,
ಚರ್ಮ ತೆಳು, ಅದರ ಕೆಳಗೇ ಹರಿಯುವ ರಕ್ತ,
ಬಾಯಿ ತುಂಬ ಹಲ್ಲು, ಕೈಕಾಲುಗಳಲ್ಲಿ ಉಗುರು,
ಎಲುಬು ಮುರಿಯುತ್ತವೆ, ಕೀಲು ಕಿರುಗುಟ್ಟುತ್ತವೆ.
ಹಿಂಸೆ ಕೊಡುವಾಗ ಇವೆಲ್ಲವನ್ನೂ ಗಮನಿಸಲಾಗುತ್ತದೆ.
ಏನೂ ಬದಲಾಗಿಲ್ಲ.
ರೋಮ್ ಸಾಮ್ರಾಜ್ಯ ಹುಟ್ಟುವ ಮುನ್ನ,
ಗುಪ್ತರ ಸುವರ್ಣ ಯುಗದಲ್ಲಿ ಕೂಡ,
ಕ್ರಿಸ್ತ, ಬುದ್ಧರು ಹುಟ್ಟುವ ಮುನ್ನ,
ಅವರೆಲ್ಲ ಹುಟ್ಟಿ ಇನ್ನೂರು ಶತಮಾನ ಆದಮೇಲೆ ಕೂಡ,
ಹಿಂಸೆಗೆ ಮೈ ತತ್ತರಿಸುವ ರೀತಿ ಬದಲಾಗಿಲ್ಲ.
ಹಿಂಸೆ ಆಗ ಹೇಗಿತ್ತೋ ಈಗಲೂ ಹಾಗೆಯೇ ಇದೆ.
ಜಗತ್ತು ಕಿರಿದಾಗಿದೆ, ಎಲ್ಲೋ ಆದ ಹಿಂಸೆ
ನಮ್ಮ ಪಕ್ಕದ ಮನೆಯಲ್ಲೆ ನಡೆದಂತಿರುತ್ತದೆ, ಅಷ್ಟೆ.
ಏನು ಬದಲಾಗಿಲ್ಲ.
ಜನರ ಸಂಖ್ಯೆ ಹೆಚ್ಚಾಗಿದೆ.
ಅಪರಾಧಗಳ ಹಳೆಯ ಪಟ್ಟಿಗೆ ಹೊಸತು ಇನ್ನಷ್ಟು ಸೇರಿವೆ--
ನಿಜವಾದ, ಆರೋಪಿತವಾದ, ಕ್ಷಣಿಕವಾದ, ಅಪರಾಧವೇ ಅಲ್ಲದ ಅಪರಾಧಗಳು.
ಆದರೆ ಇವಕ್ಕೆಲ್ಲ ಮೈ ಕೊಡುವ ಉತ್ತರವಿದೆಯಲ್ಲ, ಜೋರಾಗಿ ಅರಚಿಕೊಳ್ಳುವುದು
ಅದು ಮಾತ್ರ ಹಾಗೆಯೇ ಇದೆ. ಪ್ರಾಚೀನ ಕಾಲದ ರಾಗ-ತಾಳಗಳಿಗೆ ಅನುಗುಣವಾಗಿಯೆ
ಇಂದೂ ಹಿಂಸೆಗೆ ಸಿಕ್ಕ ಮುಗ್ಧ ಮೈ ಅರಚಿಕೊಳ್ಳುತ್ತದೆ.
ಏನೂ ಬದಲಾಗಿಲ್ಲ.
ಬಹುಶಃ ಸ್ಟೈಲು, ಸಭ್ಯತೆ, ಹಬ್ಬ ಹರಿದಿನ ಆಚರಣೆ, ಡ್ಯಾನ್ಸು, ಇವು ಬದಲಾಗಿವೆ.
ಆದರೆ ತಲೆಗೆ ಏಟು ಬೀಳಲಿರುವಾಗ ಕಾಪಾಡಿಕೊಳ್ಳಲು ತಲೆಗೆ ಮರೆಮಾಡಿಕೊಳ್ಳಲು
ಕೈ ಎತ್ತುವ ಭಂಗಿ ಇದೆಯಲ್ಲ, ಅದು ಮಾತ್ರ ಹಾಗೇ ಇದೆ.
ಮೈ ಒದ್ದಾಡುತ್ತದೆ, ಹೊರಳಾಡುತ್ತದೆ, ತಪ್ಪಿಸಿಕೊಳ್ಳಲು ಹೋರಾಡುತ್ತದೆ,
ಬಾಗುತ್ತದೆ, ಬೀಳುತ್ತದೆ, ಮೊಣಕಾಲು ಹೊಟ್ಟೆಯತ್ತ ಸೆಳೆದುಕೊಳ್ಳುತ್ತದೆ,
ಗಾಯಗೊಳ್ಳುತ್ತದೆ, ಊದುತ್ತದೆ, ಜೊಲ್ಲುಸುರಿಸುತ್ತದೆ, ರಕ್ತಹರಿಸುತ್ತದೆ.
ಏನೂ ಬದಲಾಗಿಲ್ಲ.
ನದಿಗಳ ಪಾತ್ರ ಬದಲಾಗಿದೆ,
ಕಾಡಿನ ಅಂಚು ಮತ್ತಷ್ಟು ಹಿಂದೆ ಸರಿದಿದೆ,
ಸಮುದ್ರವನ್ನು ಮತ್ತಷ್ಟು ಬತ್ತಿಸಿದ್ದಾಗಿದೆ,
ಮರುಭೂಮಿಯಲ್ಲಿ ಊರು ತಲೆಯೆತ್ತಿದೆ,
ಧ್ರುವಗಳ ಹಿಮಗಡ್ಡೆ ಕರಗಿದೆ.
ಈ ಬದಲಾದ ಭೂದೃಶ್ಯಗಳಲ್ಲಿ
ಬಡಪಾಯಿ ಆತ್ಮ ಕಣ್ಮರೆಯಾಗುತ್ತ,
ಮರಳಿ ಆಗೀಗ ಕಾಣಿಸಿಕೊಳ್ಳುತ್ತ,
ಸಮೀಪಿಸುತ್ತ, ದೂರ ಸರಿಯುತ್ತ,
ತನಗೆ ತಾನೆ ಅಪರಿಚಿತವಾಗುತ್ತ,
ಈ ಕ್ಷಣ ಸ್ಪಷ್ಟ, ಮರುಕ್ಷಣ ಅಸ್ಪಷ್ಟವಾಗುತ್ತ ಇದೆ.
ಆದರೆ ಮೈ ಮಾತ್ರ ಹಾಗೇ ಇದೆ, ಇದೆ, ಇದೆ,
ಬೇರೆಲ್ಲೂ ಹೋಗಲಾರದೆ ಇದ್ದಲ್ಲೆ ಹಿಂಸೆಗೆ ಒಳಗಾಗುತ್ತ ಇದೆ.
ವಿಸ್ಲಾವಾ ಝಿಂಬ್ರೋಸ್ಕ
[ಹಿಂಸೆಯ ಬಗಗೆ ತೀವ್ರವಾಗಿ ಯೋಚಿಸುವಂತೆ ಮಾಡಿದ ಕವಿತೆ ಇದು.]

  • ಕಾವ್ಯ ಮತ್ತು ಕವನ
~.~
  • Login or register to post comments
  • 576 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪೋಲಿಷ್ ಕವಿತೆ: ಮೂರು ವಿಚಿತ್ರ ಶಬ್ದಗಳು
  • ಹಳೆಯ ಹಾಳೆಯ ಮೇಲೊಂದು ಕವನ!
  • ಕುಚೇಲ(ಸುಧಾಮ)ನ ಭಾಗ್ಯ- ಮಾಸ್ತಿಯವರ ಕಥೆ
  • ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 157 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator