Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಪತಂಜಲಿಯ ಯೋಗ ಭಾಗ ೮

September 16, 2005 - 7:32pm — R M Rao

ಪತಂಜಲಿಯ ಯೋಗ ಭಾಗ ೮
ಎಂಟನೆಯ ಲೇಖನ
ಪತಂಜಲಿಯ ಯೋಗದ ತೃತೀಯ ವಿಭೂತಿ ಪಾದ.
ಮನಸ್ಸನ್ನು ಪರಿಶುಧ್ಧಿಗೊಳಿಸಿದಂತೆ ಅನೇಕ ಸಿಧ್ಧಿಗಳು ಬರಬಹುದು. ಸಿಧ್ಧಿಗಳು ಎಂದರೆ ಪವಾಡ ಮಾಡಬಲ್ಲ ಶಕ್ತಿ. ಆದರೆ ಅವುಗಳ ಬಗ್ಗೆ ಜಾಗ್ರತವಾಗಿದ್ದು ಯೋಗದ ಹಾದಿಯಲ್ಲಿ ಮುಂದುವರೆಯುವ ಬಗ್ಗೆ ವಿಭೂತಿಪಾದದಲ್ಲಿ ವಿವರಣೆ ಇದೆ. ಏಕೆಂದರೆ ಅವು ಯೋಗದ ಗುರಿಯನ್ನು ತಲುಪಲು ಇರುವ ಅಡ್ಡಿಗಳು.

ಮನಸ್ಸನ್ನು ಒಂದು ಜಾಗದಲ್ಲಿ ನೆಲೆಗೊಳಿದಾಗ ಅದು ಧಾರಣೆ.ಯೋ.ಸೂ.ಪಾದ ೩. ಸೂತ್ರ.೧
ಮನಸ್ಸಿನಲ್ಲಿ ಒಂದೇ ಪ್ರತ್ಯಯವು (ಪ್ರತ್ಯಯವೆಂದರೆ ವೃತ್ತಿಗಳಿಂದ ಬರುವ ಜ್ಞಾನ) ಇದ್ದರೆ ಅದು ಧ್ಯಾನ ಯೋ.ಸೂ.ಪಾದ ೩. ಸೂತ್ರ.೨
ಧ್ಯಾನಕ್ಕೆ ಎರಡು ಉತ್ತಮ ಪ್ರತಿಮೆಗಳೆಂದರೆ ಎಣ್ಣೆ ಏಕಪ್ರಕಾರವಾಗಿ ಬೀಳುತ್ತಿರುವುದು; ಗಾಳಿ ಇಲ್ಲದ ಕಡೆ ದೀಪ ನಿಶ್ಚಲವಾಗಿ ಉರಿಯುತ್ತಿರುವುದು.
ಈ ಎರಡು ಉದಾಹರಣೆಗಳಲ್ಲೂ ಬದಲಾವಣೆಯೇ ಇಲ್ಲವೆಂದು ಮೇಲ್ನೋಟಕ್ಕೆ ತೋರಿದರೂ ಬದಲಾವಣೆ ನಿರಂತರವಾಗಿ ಆಗುತ್ತಿರುತ್ತದೆ. ಅಂತೆಯೇ ಧ್ಯಾನದಲ್ಲಿಯೊ ಏಕಪ್ರಕಾರವಾದ ವೃತ್ತಿಗಳು ಒಂದರಹಿಂದೆ ಒಂದು ತಡೆಬಿಡದೆ ಏಳುತ್ತಿದ್ದರೂ ಆ ವೃತ್ತಿಗಳಿಂದ ಬರುವ ಜ್ಞಾನ ಒಂದೇ ಇರುತ್ತದೆ.
ಧ್ಯಾನದಲ್ಲಿಯೇ ಜ್ಞಾನ ಒಂದೇ ಉಳಿದು ಸ್ವರೂಪಶೂನ್ಯವಾದ ಹಾಗೆ ಆದಾಗ ಅದು ಸಮಾಧಿ.ಯೋ.ಸೂ.ಪಾದ ೩. ಸೂತ್ರ.೩
ಧಾರಣ, ಧ್ಯಾನ, ಸಮಾಧಿ ಇವು ಮೊರೂ ಒಂದು ವಿಷಯದ ಮೇಲೆ ಆದಾಗ ಅದು ಸಂಯಮ.ಯೋ.ಸೂ.ಪಾದ ೩. ಸೂತ್ರ.೪
ಇದರಿಂದ ಪ್ರಜ್ಞಾಲೋಕ ಉದಯವಾಗುತ್ತದೆ.ಯೋ.ಸೂ.ಪಾದ ೩. ಸೂತ್ರ.೫
ಇದನ್ನು ಹಂತಹಂತವಾಗಿ ಉಪಯೋಗಿಸಬೇಕು.ಯೋ.ಸೂ.ಪಾದ ೩. ಸೂತ್ರ.೬
ಚಿತ್ತ ಚಾಂಚಲ್ಯ ಕಡಿಮೆಯಾಗಿ ಏಕಾಗ್ರತೆಯ ಉದಯವಾಗುವಾಗ ಆಗುವ ಮನಸ್ಸಿನ ಮೇಲಣ ಬದಲಾವಣೆಗಳಿಗೆ ಸಮಾಧಿಪರಿಣಾಮ ಎಂದು ಹೆಸರು.
ಏಕಾಗ್ರತೆ ಹೆಚ್ಚಿ ಒಂದೇ ಪ್ರತ್ಯಯವು ಮನಸ್ಸಿನ ಮೇಲೆ ಮಾಡುವ ಪರಿಣಾಮವೇ ಏಕಾಗ್ರತಾ ಪರಿಣಾಮ.
ಮನದಲ್ಲಿ ಯಾವ ವಿಧವಾದ ಪ್ರತ್ಯಯವೇ ಆಗಲಿ, ಜ್ಞಾನವೇ ಆಗಲಿ(ತನ್ನತನವೂ), ಇಲ್ಲದಂತಹ ಕ್ಷಣ ಮನಸ್ಸಿನ ಮೇಲೆ ನಿರೋಧ ಪರಿಣಾಮವನ್ನುಂಟು ಮಾಡುತ್ತದೆ.
ಸಂಯಮದಿಂದ ಜ್ಞಾನ ಮತ್ತು ಅನೇಕ ಸಿದ್ಧಿಗಳನ್ನು ಪಡೆಯಬಹುದು. ಪ್ರಕೃತಿಯ ಮೇಲೆ ಹಿಡಿತ ಬರುತ್ತದೆ. ಆದರೆ ಇವು ಯೋಗದ ಪ್ರಗತಿಗೆ ಅಡಚಣೆಗಳು.
ಇವುಗಳಲ್ಲೂ ವಿರಕ್ತಿ/ವೈರಾಗ್ಯ ಬೆಳಸಿಕೊಂಡಾಗ ಮನಸ್ಸಿನಲ್ಲಿರುವ ರಜಸ್ಸು ಮತ್ತು ತಮಸ್ಸು ನಾಶವಾಗಿ ಸತ್ವವೊಂದೇ ಉಳಿಯತ್ತದೆ.ಇದೇ ಕೈವಲ್ಯ.
ಪತಂಜಲಿಯ ತೃತೀಯ ವಿಭೂತಿಪಾದದ ಮುಖ್ಯಸೂತ್ರಗಳನ್ನು ಯೋಗದಲ್ಲಿ ಪ್ರಾರಂಭಿಕ ಆಸಕ್ತಿ ಇರುವವರಿಗೆಂದು ಬರೆದ ಲೇಖನ.
ನಾಲ್ಕನೆಯ ಪಾದದಲ್ಲಿ ಕೈವಲ್ಯದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳಿವೆ.

ಮುಂದುವರೆಯುವುದು...
೧೬/೯/೦೫

  • ಅಧ್ಯಾತ್ಮ
Ornamental seperator
  • Login or register to post comments
  • 687 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತಂಜಲಿಯ ಯೋಗ ಭಾಗ ೭
  • ಪತಂಜಲಿಯ ಯೋಗ : ಭಾಗ ೨
  • ಪತಂಜಲಿಯ ಯೋಗ ಅಂತಿಮ ಭಾಗ
  • ಪತಂಜಲಿಯ ಯೋಗ ಭಾಗ ೪
  • ಪತಂಜಲಿಯ ಯೋಗ
Syndicate content

ಲೇಖಕರು

R M Rao's picture

ಪರಿಚಯ

ನನ್ನ ಬಗ್ಗೆ ನಾನೇ ಹುಡುಕಾಟ ಪ್ರಾರಂಭ ಮಾಡಿ
ಈಗ ಯೋಗದ ಹಾದಿಯಲ್ಲಿ ಹುಡುಕಾಟ ಮುಂದುವರಿಸಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ
  • ಅಮ್ಮಜಿಖಷೆಸ್ಸ ಖನಮ ಒಜಿ

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 10 ಅತಿಥಿಗಳು ಆನ್ಲೈನ್ ಇರುವರು.

ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator