ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನದೀ ತೀರದಲ್ಲಿ- ಬರೆದವರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.

May 13, 2007 - 8:45pm — venkatesh

ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ಕವಿತಾ ಸಂಗ್ರಹದಿಂದ ನನಗೆ ಪ್ರಿಯವಾದ ಕೆಲವು ಕವಿತೆಗಳನ್ನು ಓದುಗರಿಗಾಗಿ ಆಯ್ಕೆ ಮಾಡಿ ಕೊಟ್ಟಿದ್ದೇನೆ.

*
ನದೀ ತೀರದಲ್ಲಿ

[ಕವಿತೆಗಳು] ಪುಟಗಳು : ೧೦೮.

ಅಂಕಿತ ಪುಸ್ತಕ,

೫೩, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಂಧಿ ಬಜಾರ್ ಮುಖ್ಯ ರಸ್ತೆ,
ಬಸವನಗುಡಿ, ಬೆಂಗಳೂರು-೬೦ ೦೦೪.
ಮೊದಲ ಮುದ್ರಣ : ೨೦೦೪

-ಎಚ್. ಎಸ್. ವೆಂಕಟೇಶಮೂರ್ತಿ.

೧. ಪ್ರಾರ್ಥನೆ :

ನನ್ನ ಪ್ರಾರ್ಥನೆ ಇಷ್ಟೆ ಆ ತಥಾಗತನಲ್ಲಿ;
ಹಿಂದೊಮ್ಮೆ ಹಿಮಗಿರಿಯ ತಪ್ಪಲಲ್ಲುದ್ಭವಿಸಿ
ಎತ್ತರೆತ್ತರ ಬೆಳೆದು ನೆರಳು ಮಗುಚಿದನಾದಿ
ಬೋಧಿವೃ‍ಕ್ಷವೇ ಈಗ ನನ್ನ ಮನದೋವರಿಯ
ಕಿಷ್ಕಿಂಧೆಯಲಿ ಮತ್ತೆ ಮೊಳಕೆ ಒಡೆಯಲಿ. ತನ್ನ
ಕಿರುದೇಟ ಚೆಲ್ಲಿ ಎಲೆಗಳ ಸುರುಳಿ ಬಿಚ್ಚಲಿ.
ಕಿರಣ ಸೊರೆ ಚೀಪಿ ಇಷ್ಟಿಷ್ಟೆ ಮೇಲೇಳಲಿ.
ಕೆಮ್ಮಣ್ಣನೊತ್ತಿ ಎಳೆಹಸಿರ ಜೀಕುಳಿಯಾಡಿ
ಎತ್ತಿ ಹಿಡಿಯಲಿ ಎಲೆಯ ಬೊಗಸೆ ಕೆಂಗಿರಣಕ್ಕೆ !
ಬಿಸಿಲಲ್ಲಿ ಬಸವಳಿದು ಬಂದವರಿಗಾಸರೆಯ
ನೆರಳು ಹಿಡಿಯಲಿ. ಹಕ್ಕಿ ಅಳಿಲು ಕ್ರಿಮಿ ಕೀಟಕ್ಕೆ
ತವರಾಗಿ ನಿಲ್ಲಲಿ. ತೆಂಕಣದ ತಂಗಾಳಿ
ಇರುಳು ತಂಗಲಿ. ನಕ್ಷತ್ರ ಬಾಲಕರು
ಹಸಿರೆಲೆಯ ತೊಟ್ಟಿಲಲ್ಲಾಡಿಕೊಳ್ಳುತ್ತಿರಲಿ.

೨. ಉಡುಪಿ ಕೃಷ್ಣನ ಸ್ವಗತ

"ಐನೂರು ವರ್ಷಗಳ ಹಿಂದೆ ಇದ್ದಕ್ಕಿದ್ದ-
ಹಾಗೆ, ಸೆರೆಮನೆ ಗೋಡೆ ಸಿಡಿದು ಬೆಳಕಿನ ಕಿಂಡಿ !
ಕಿಂಡಿಯಲಿ ಕಂಡದ್ದು ಬೆರಗುಗಣ್ಣಿನ ಮೋರೆ !
ಝಲ್ಲೆಂದು ಎದೆ, ಕೈಯ ಕಡಗೋಲು ನಡುಗಿತ್ತು.

ಎಂಥ ಕಣ್ಣುಗಳಯ್ಯ ! ಕರುಣೆ, ಅನುಕಂಪೆ, ತ-
ನ್ಮಯ ಭಾವ ! ಕೊಳದಲ್ಲಿ ಮಾರುಗೈ ಮಾರಾಯ
ಕಿರಣ ಕೈಚಾಚಿ ಕೆಂದಾವರೆಯ ಕಣ್ಣೀರ
ಒರಸುವುದ ನೋಡಿ ಮರುಳಾದೆ, ಮಾರಾಯರೆ !

ರೆಪ್ಪೆ ಬಡಿಯದೆ ಹಗಲೂ ಇರುಳು ಕಾದಿದ್ದು
ಆವತ್ತು ಸಾರ್ಥಕಾ ಎನ್ನಿಸಿ ಹನಿಗಣ್ಣಾದೆ !
ಅಂದಿನಿಂದಿಂದುವರೆಗೂ ಸಣ್ಣ ಕಿಂಡಿಯಲಿ
ಎಷ್ಟೊಂದು ಮುಖ ಕಂಡವೋ ಲೆಖ್ಹವಿಟ್ಟಿಲ್ಲ !

ನಾನಂತು ಶಬರಿಗಣ್ಣಲ್ಲಿ ಕಾದಿದ್ದೇನೆ ಈ ತನಕ !
ಮತ್ತೆ ಕಂಡೀತೆ ಕಂಡೀತೇನು ಅಂಥ ಮುಖ ? !"

೩. ’ ನದೀ ತೀರದಲ್ಲಿ” ಪುಸ್ತಕದ ಹೊರಮೈ ನಲ್ಲಿ ಒಂದು ಕವಿತೆ ಇದೆ. ಅದು, ನಮ್ಮ ಪ್ರೀತಿಯ ಹಿರಿಯ ಕವಿ, ಚನ್ನವೀರ ಕಣವಿಯವರು, " ನದೀ ತೀರದಲ್ಲಿ" ಕವಿತಾ ಸಂಕಲನಕ್ಕಾಗಿಯೇ ರಚಿಸಿದ ಕೃತಿ. ಅದಕ್ಕೆ ಶೀರ್ಶಿಕೆ ಅವರು ಕೊಟ್ಟಿಲ್ಲ.

ವಿಹಾರಕ್ಕೆ ಬರಲಿಲ್ಲ ಈ ನದೀತೀರಕ್ಕೆ
ಬದುಕಿನೇರಿಳಿತಗಳ ದಾಟಿ ನೆಲ ಜಲದ ಮೈ-
ಗುಣವ ತುಂಬಿಕೊಂಡಿಹ ಮಡಿಲು, ಪ್ರೀತಿಯಲಿ ಕೈ-
ಚಾಚಿ ಕರೆಯಿತು ಪಾರದರ್ಶಕ ಪ್ರವಾಹಕ್ಕೆ.
ಇಕ್ಕೆಲದ ಹಸಿರು ಮರಗಳ ತುಂಬ ಹಕ್ಕಿಗಳೆ ;
ರೆಕ್ಕೆ ಬಿಚ್ಚಿವೆ ಮತ್ತೆ ದೂರದನ್ವೇಷಣೆಗೆ.

ಹರಿವ ನೀರಿನ ಮರ್ಮ ಕಾವ್ಯಕರ್ಮದ ತೆರೆಗೆ ,
ಹರಯ ತಿರುಗಿದ ಕವಿಯ ಕಣ್ತುಂಬ ಕವನಗಳೆ
ಬೆದೆಬಿದ್ದ ಪ್ರತಿಭೆ ಬೆಂಬೆತ್ತಿ ಕೆತ್ತುವ ಹದನು
ವ್ಯಂಗ್ಯಮೀರಿದ ನಿಸ್ಸಂಗನೆಲೆಗರ್ಥ ಸಾಂದ್ರ
[ಬತ್ತಿದರೆ ಪಾತ್ರಕ್ಕೆ ಕಪ್ಪೇಚಿಪ್ಪು ಚಂದ್ರ]
ಉಭಯ ನೀಳ್ದೋಳಿನಲಿ ಕನಸಿನ ಹೊಸ ಕಮಾನು
ಛಂದೋಬದ್ಧ ನುಡಿಗು ಒಗುಮಿಗುವ ಸ್ವಚ್ಛಂದ
ಮೈ-ಮನಸು-ಬುದ್ಧಿ ಪಳಗಿಸುವ ಕುಶಲ ಬಂಧ

-ಚನ್ನವೀರ ಕಣವಿ
*
ಮೇಲಿನ ಕವಿತೆಗಳನ್ನು ಡಾ. ಎಚ್. ಎಸ್. ವಿ. ರವರ ಅನುಮತಿಯನ್ನು ಪಡೆದು ಪ್ರಕಟಿಸಿರುತ್ತೇನೆ.

  • ಕಾವ್ಯ ಮತ್ತು ಕವನ
~.~
  • Login or register to post comments
  • 281 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 13, 2007 - 8:56pm — venkatesh

ಉ: ನದೀ ತೀರದಲ್ಲಿ- ಬರೆದವರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.

venkatesh's picture

’ ಗಂಧಿ ಬಜಾರ್ ’ಎಂದು ತಪ್ಪಾಗಿ ಟೈಪಾಗಿದೆ. ಅದನ್ನು, ದಯಮಾಡಿ,

"ಗಾಂಧಿ ಬಜಾರ್ "ಎಂದು ಓದಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2007 - 9:13pm — mahesha

ಉ: ನದೀ ತೀರದಲ್ಲಿ- ಬರೆದವರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.

mahesha's picture

ಸಾರ್‍...

ನಾವೇ ಹಾಕಿದ ಬ್ಲಾಗನ್ನು ನಾವು ಬದಲಿಸುವ ಸವಲತ್ತಿದೆ.

ನೀವು ನಿಮ್ಮ ಬ್ಲಾಗನ್ನು ಎಸ್ಟು ಸರತಿ ಬೇಕಾದರೂ ತಿದ್ದಿಕೊಳ್ಳಬಹುದು.

ಅಲ್ವಾ HPN?

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ-ಭಾಗ -೧
  • ಪ್ರೀತಿಯ ನಗು
  • ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
  • *ಮರದೊಂದಿಗೆ. (ಪು. ೮೯.)
  • ಡಾ. ಎಚ್ ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮಾಲೆ - "ಕರ್ಟನ್ ಕಾಲ್" - ಪುಸ್ತಕ ಬಿಡುಗಡೆ - ಸುರಾನಾ ಕಾಲೇಜು - ಜೂನ್ ೨೩ ೨೦೦೭, ೧೦.೦೦ಕ್ಕೆ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator