ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

"ಪ್ರೀತಿಸಿದ ಹುಡುಗಿ"

May 14, 2007 - 3:20pm — krishnamurthy bmsce

ಪ್ರೀತಿಸಿದ ಹುಡುಗಿ ಕೈ ಕೊಟ್ಟು ಓಡಿದಳು
ನಂಬಿದ ನನಗೆ ಮೋಸವನು ಮಾಡಿದಳು
||
ನಂಬದಿರಿ ನೀವ್ಯಾರು ಮೋಸದ ಹುಡುಗಿಯರನು||

ನಂಬಿದ್ದೆ ನಾನೊಂದು ಹೆಣ್ಣ
ಅಣ್ಣ ನಂಬಿದ್ದೆ ನಾನೊಂದು ಹೆಣ್ಣ ನಂಬ್ಯಾಡಿ ನೀವ್ಯಾರು ಹೆಣ್ಣ ಅಣ್ಣ

ಸುರಿದಾರು ನಿಮಗೆ ಬಿಸಿಯಾದ ಸುಣ್ಣ ||ಪ
ಬಣ್ಣದ ಮಾತಾಡಿ ಕಣ್ಣೊಡೆದಳಣ್ಣ
ಕಣ್ಣಲ್ಲಿ ನಾ ಅವಳ ತುಂಬಿ ಕೊಂಡೆನಣ್ಣ
ಕನಸು ಮನಸಲ್ಲಿ ಅವಳಿದ್ದಳಣ್ಣ ||ನಂಬಿದ್ದೆ||
ಏಳ್ದಂಗೆ ಕೇಳ್ತಿದ್ದೆ ಅವಳಮಾತ ಅಣ್ಣ
ನೀನಿಲ್ದೆ ನಾನಿಲ್ಲ ಅಂತಿದ್ದಳಣ್ಣ
ನನ್ನ ಮರೆತು ಬಿಡು ಅಂತೇಳಿ ಹೊಂಟೊದಳಣ್ಣ ||ನಂಬಿದೆ||
ನಗುನಗುತ ಮಾತಾಡುತಿದ್ಲು ಎಲ್ಲರತ್ರ ಅವಳು
ನಗುವಿನ ನೆನಪೊಂದ ಬಿಟ್ಟೊದಳವಳು

ನಂಬಿಸಿ ನನಗವಳು ಮೋಸವ ಮಾಡಿದಳು||ನಂಬಿದ್ದೆ||
ತುಪ್ಪದಂತ ಮಾತಾಡಿ ತೆಪ್ಪಗಾದಳಣ್ಣ

ಕಪ್ಪಗಿದ್ರು ಕೊಟ್ಟಿದ್ದೆ ನನ್ಮಸನ್ನ

ಕೊನೆಗವಳು ಕೊಟ್ಟೊದ್ಲು ಬರಿ ಕನಸನ್ನ ||ನಂಬಿದ್ದೆ||
ಅವಳ ಮಾತ ನಾ ಕೇಳಿ ಮನೆಮಂದಿ ಬಿಟ್ಟೆ
ಅವಳ ಪ್ರೀತಿ ಮಾತಿಗೆ ಹುಚ್ಚನಾಗಿ ಬಿಟ್ಟೆ
ಅವಳ್ ಕೈ ಕೊಟ್ಟು ಹೊದಾಗಿಂದ ಕುಡಿಯೊದ್ ಕಲ್ತು ಬಿಟ್ಟೆ ||ನಂಬಿದ್ದೆ||
ನಿನ್ನ ಬಿಟ್ಟು ಬದುಕಲ್ಲ ಅಂತಿದ್ದಳಣ್ಣ
ವಿಷ ಕುಡ್ದು ಹೊದ್ದಾಡತಿದ್ರು ಅವಳು
ನನ್ನ ತಿರುಗಿ ನೊಡಲಿಲ್ಲವಣ್ಣ ||ನಂಬಿದ್ದೆ||

-ವಿ ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ  

  • ಕಾವ್ಯ ಮತ್ತು ಕವನ
~.~
  • Login or register to post comments
  • 1140 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 14, 2007 - 3:36pm — ವೈಭವ

ಉ: "ಪ್ರೀತಿಸಿದ ಹುಡುಗಿ"

ವೈಭವ's picture

ನಿಮ್ಮ ಅಚ್ಚ ಕನ್ನಡ ಒರೆಗಳನ್ನು ನಾ ಮೆಚ್ಚಿದೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 3:48pm — krishnamurthy bmsce

ಉ: "ಪ್ರೀತಿಸಿದ ಹುಡುಗಿ"

krishnamurthy bmsce's picture

ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ

ವೈಭವ ರವರೆ ಪ್ರತಿಕ್ರಿಯೆಗೆ ನಮ್ಮ ವಂದನೆಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 4:17pm — mahesha

ಉ: "ಪ್ರೀತಿಸಿದ ಹುಡುಗಿ"

mahesha's picture

ಹಂಬಲಸಿದ ಹೆಣ್ಣು ಹಾರಿ ಹೋದಳೆಂದು
ಹುಂಬನೆಂದು ನೊಂದು ನೆನೆದು ಅಳವುದೆಂತು?
ಅವಳೊಬ್ಭಳು ಹೋದರೇನಂತೆ ಲೋ ಅಣ್ಣ
ನಮ್ಮ ದೇಸದಾಗೆ ಕೋಟಿಹೆಣ್ಣುಗಳಿವೆಯಲ್ಲವಣ್ಣ!! Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 5:47pm — krishnamurthy bmsce

ಉ: "ಪ್ರೀತಿಸಿದ ಹುಡುಗಿ"

krishnamurthy bmsce's picture

ಅದು ಸರಿ ಮಹೇಶ್ ಅವರೆ ನನ್ನ ಹಾಗೆ ಯಾರಾದರೂ ಮೊಸಹೊಗಿದ್ದರೆ ಅವರ ಅನುಬವ ಅಬಿಪ್ರಾಯ ತಿಳಿಯುವ ಆಸೆಯಿಂದ ನನ್ನ ಅನುಬವ ಇಲ್ಲಿ ಕವನವಾಗಿಸಿದ್ದೇನೆ ನಿಮ್ಮ ಮಾತಿನಂತೆ ನಮ್ಮಲ್ಲಿ ಹೆಣ್ಣಿಗೆ ಕೊರತೆಇಲ್ಲದಿರಬಹುದು ಆದರೆ ಪ್ರೀತಿಸಿದವಳು ಕೈ ಬಿಟ್ಟಾಗ ಆಗುವ ವ್ಯತೆ, ಹಿಂಸೆ ಯಾವುದರಿಂದಲೂ, ಯಾರಿಂದಲೂ ತೀರಿಸಲಾಗದು ಮಿತ್ರರೇ ಈ ಪ್ರೀತಿ ಎಂಬುದೇ ಹೀಗೆ ಅದಕ್ಕಾಗೆ ನಾನು ಇಲ್ಲಿ ಬರೆದದ್ದು
ನಿಮ್ಮ ಪ್ರೋತ್ಸಾಹಕ್ಕೆ ನಾವು ಆಭಾರಿಯಿದ್ದೇನೆ.
-ವಿ ಕೃಷ್ಣ ಬಿ ಎಂ ಎಸ್ ಸಿ ಇ ಬೆಂಗಳೂರು-೧೯

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 6:59pm — mahesha

ಉ: "ಪ್ರೀತಿಸಿದ ಹುಡುಗಿ"

mahesha's picture

ಅವದವದು..!!!

ನನಗೆ ಊ ಹುಡುಗಿ ಕೈಹಿಡಿದ, ಕೈಕೊಟ್ಟ ಅನುಬವವಿಲ್ಲ. Sad

ನೆನ್ನೆ ಮೈಸೂರ ಮಲ್ಲಿಗೆ ಕೊಂಡೆನು. ಅದರಲ್ಲಿ "ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ" ಹಾಡು ಸಕ್ಕತ್....
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 4:07am — anivaasi

ಉ: "ಪ್ರೀತಿಸಿದ ಹುಡುಗಿ"

anivaasi's picture

Quote:
ನಮ್ಮಲ್ಲಿ ಹೆಣ್ಣಿಗೆ ಕೊರತೆ ಇಲ್ಲದಿರಬಹುದು

ಹಂಗಂತೀರ? ಕೊರತೆ ಇದೆ ಅಂತ ಹೀಗೆ ಎಲ್ಲಾರೂ ಹೇಳ್ತಾರಲ್ಲ!?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 4:55pm — yuvapremi

ಉ: "ಪ್ರೀತಿಸಿದ ಹುಡುಗಿ"

yuvapremi's picture

ಬಹಳ ಚನ್ನಾಗಿದೆ ಕವನ...!!

ನಿಮ್ಮ ನೋವಿನ ಕಥೆ ಕೇಳಿ ನನ್ನ ಕಣ್ತುಂಬಿ ಬಂತು..!
ನಿಮ್ಮ ನೋವಿನ ಆ ಅನುಭವ ನೆನೆದು ಮೈಜುಮ್ಮೆಂದಿತು..!

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 18, 2007 - 5:46pm — girish.rajanal

ಉ: "ಪ್ರೀತಿಸಿದ ಹುಡುಗಿ"

girish.rajanal's picture

ನಿಮ್ಮ ಕವನ ಚೆನ್ನಾಗಿದೆ ಆದರೆ ....
ಅಲ್ಲಿ ’ಹ’ ಮತ್ತು ’ಅ’ ಕಾರಕ್ಕೆ ಒತ್ತು ಕೊಟ್ಟಂಗಿಲ್ಲ.
ಒಂದು ಸಾಲಿನಲ್ಲಿ ನೀವು ’ಹೊದ್ದಾಡಿತ್ತಿದ್ರು’ ಅಂತ ಬರೆದಿದ್ದೀರಲ್ಲ, ಅದು ಒದ್ದಾಡುತ್ತಿದ್ರು ಅಂತ ಆಗಬೇಕಾಗಿತ್ತು.

ಬಾಳ ವಿಚಿತ್ರ ಮನಶ್ಯಾರು ಮಾರಾಯ ನೀವು!!!
ನಮ್ಮಪ್ಪಾ ಎಲ್ಲಿ ’ಹ’ ಅನ್ನಬೇಕು ಅಲ್ಲಿ ಅನ್ನಂಗಿಲ್ಲ...ಎಲ್ಲಿ ಅನ್ನಬಾರದು ಅಲ್ಲಿ ಮುದ್ದಾಂ ಅಂತೀರಪಾ.
ಕನ್ನಡಾನ ಸರಿಯಾಗಿ ಮಾತಾಡ್ರಿ ಮಾರಾಯ.

ಇತಿ ನಿಮ್ಮವ,
ಗಿರೀಶ ರಾಜನಾಳ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 18, 2007 - 6:18pm — mahesha

ಉ: "ಪ್ರೀತಿಸಿದ ಹುಡುಗಿ"

mahesha's picture

ರಾಜೇಶರೇ!!

ನಮ್ಮ ಕಡೆ ಮಂದಿ ಹ ಹೇಳಲ್ರೀ, ಇದಕ್ಕೆ ನೀವು ತುಸು ’ದ್ರಾವಿಡ ನುಡಿಗಳು’ ಈ ಕುರಿತು ಓದಿಕೊಳ್ರಿ. ಹ ಇದು ಕನ್ನಡದ್ದೇ ಆದ sound/phone ಹೌದೋ ಅಲ್ವೋ ಅಂತ ಇನ್ನು ಗೊಂದಲವಿದೆ. ಇದನ್ನು ತೆಂಕಣದೊರು ಹೇಳಲ್ಲ. ಮತ್ತು ಅದು ಸರಿ ಕೂಡ.

ತಮಿಳಲ್ಲೂ ಹ ಇಲ್ಲ. ಅವರೂ ನಮ್ಮಂತೆ ಹ/ಅ ನಡುವೆ ಬೇರೆತನ ಮಾಡಲ್ಲ.

ಅಂದ ಹಾಗೆ ಈ ನೋಡ್ರಿ..

ಕೊಟ್ಟಂಗಿಲ್ಲ ಅಲ್ಲ ಕೊಟ್ಟ ಹಂಗಿಲ್ಲ.
ಬಾಳ ಅಲ್ಲ ಬಹಳ ( ಬಾಳ ಅಂದ್ರೆ ಬಾಳಿನ ಅಂತ ಅಲ್ವ!! )
ಮನಶ್ಯಾರು ಅಲ್ಲ ಮನುಷ್ಯರು
ಅನ್ನಂಗಿಲ್ಲ ಅಲ್ಲ ಅನ್ನುವ ಹಂಗಿಲ್ಲ
ಕನ್ನಡಾನ ಅಲ್ಲ ಕನ್ನಡವನ್ನು ( ನಾವು ಕನ್ನಡವ ಅಂತೀವಿ )

ನೋಡ್ರೀ ನೀವು ಏಟು ತಪ್ತುಮಾಡೀರಿ Smiling ..

ಹ/ಅ ನಡುವಿನ ನಮಗೆ ವ್ಯತ್ಯಾಸ ಇಲ್ಲ. ಇದು ಗಂಗನಾಡಿನಲ್ಲಿ ಸಾಮಾನ್ಯ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 18, 2007 - 6:47pm — muralihr

ಉ: "ಪ್ರೀತಿಸಿದ ಹುಡುಗಿ"

muralihr's picture

ಹೋ ! ಅಷ್ಟೊ೦ದು ದು:ಖ ಆಗಿಲ್ಲಾ ಅ೦ದ್ಕೋತ್ತೀನಿ. ಏಕ೦ದರೆ ದು:ಖ ಆಗಿದ್ದರೆ ನೀವು ಹಾಡು

ಬರೀ.....ತ್ತಿದ್ದೀರಾ.
ನಿಜವಾಗಲೂ ದು:ಖ ಆಗಿದ್ದರೆ ಬಾಳು ಬದುಕು ಬೇಕಿತ್ತಾ ? ಜೀವನ ಕಹಿ ಅನ್ನಿಸ್ತಿತ್ತು.
ಹೆ೦ಡಕ್ಕೆ ಶರಣಾಗ್ತಾ ಇದ್ದರೀ ಅಲ್ವಾ ?
ಈಗ ಪದ್ಯಕ್ಕೆ ಶರಣಾಗಿದ್ದೀರಾ ..ಒಳ್ಳೆದು.. ಇನ್ನೂ ಒ೦ದು ಹೆಣ್ಣನ್ನು ಪ್ರೀತಿಸಿ ಆ ಹುಡುಗಿ ಕೈ

ಕೊಡುವ ವರೆಗೂ ಹೊಸ ಕವನಗಳನ್ನು ಬರೆಯಿರಿ.
ಕೈ ಕೊಟ್ಟ ಮೇಲೆ ಅವಳ ಕೈಯಲ್ಲೇ Release ಮಾಡ್ಸೀ...-

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
  • ಏನಿರಬಹುದು ಕಾರಣ....?
  • ಒಂಥರಾ ಪ್ರೀತಿ...
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
Syndicate content

ಲೇಖಕರು

krishnamurthy bmsce's picture

ಪರಿಚಯ

ನಾನು ಅಜ್ಜಹಳ್ಳಿ ಕುದೂರು ಹೋಬಳಿ,ಮಾಗಡಿ ತಾಲೋಕು,ಬೆಂಗಳೂರು ಗ್ರಾಮಾಂತರಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು ನನ್ನ ವಿದ್ಯಾಬ್ಯಾಸ (ಬಿ ಎ )ಕನ್ನಡ ಸದ್ಯಕ್ಕೆ ಬೆಂಗಳೂರಿನಲ್ಲಿ ಒಂದು ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ
ಸಹಾಯಕನಾಗಿ ಕಳೆದ ಐದು ವರ್ಷಗಳಿಂದ ಸೇವೆ ಸಲಿಸುತ್ತಿದ್ದೇನೆ ನನ್ನ ಹವ್ಯಾಸ ಚುಟುಕಗಳ ಬರವಣಿಗೆ,ಹನಿಗವನಗಳ ರಚನೆ,ಸಣ್ಣಕಥೆಗಳ ರಚನೆ,ನುಡಿಮುತ್ತುಗಳ ರಚನೆ,ಮತ್ತು ಸಂಗ್ರಹ ಇತ್ಯಾದಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 94 ಅತಿಥಿಗಳು ಆನ್ಲೈನ್ ಇರುವರು.


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator