ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಬೆಂಗ್ಳೊರ್ ಹುಡ್ಗ ನಾನು..!!

May 15, 2007 - 4:48pm — yuvapremi
 
ಸುಂದ್ರಿ ನೀನು ಕೋಮಲಾಂಗಿ..!
ನಿನ್ ಹೃದಯ ಕದ್ದ ಪೋರ ನಾನೆ.!
 
ರೆಕ್ಕೆ ಕಟ್ಟಿ ಹಾರ್ಕೊಂಡ್ ಬಾರೆ..!
ಮೋಡ ಹಿಡಿದು ಜಾರ್ಕೊಂಡ್ ಬಾರೆ..!
ಒಂದಾಗೋಣ ಊರಾಚೇಲಿ...!!
ಕಣ್ಣಾಮುಚ್ಚಾಲೆ ಆಟಾವಾಡ್ತ..!
 
ಸುಂದ್ರಿ ನೀನು ಕೋಮಲಾಂಗಿ..!
ಪ್ರೇಮಲೋಕದ್ ಕಿನ್ನರ ನಾನು..!
 
ನನ್ನೆಗಲ ಏರೆ ಚಲ್ವಿ ನೀನು...!
ಊರ್ನೆನಿಂಗೆ ಹೊನ್ನಾರ ಹಾಕ್ತೀನಿ
ನೀನೆ ತೇರು ನನ್ಬಾಳ್ನಾಗೆ ಕೇಳೆ..!
ನೀ ನಗ್ತಿದ್ರದೆ ನನ್ಜೀವನ್ದಾಗೆ ಕಳೆ..!
 
ಬೆಡಗಿ ನೀನು ಈ ಬೊಮಂಡ್ಳದಾಗೆ..!!
ಬೆಣ್ಣೆಗಿನ್ತ ಚಂದಾಗೈತೆ ನಿನ್ನ ನಗೆ..!
 
ಊರುಸಾಬ್ರಿ ನಿಂಗ್ಯಾಕೆ ನನ್ರಾಣಿ..!!
ಒಟ್ಟಿಗೆಕೊತು ಆಡೋಣ ಹಳ್ಳ್ಮಾಣೆ
ಹಾಲ್ನಾಗೆ ಉರುಳಿ ಹಾಡಾಡೋಣ..!
ಒಬ್ರಲೊಬ್ರಾಗಿ ಬಾಳ್ವೆಮಾಡೋಣ....!!
 
ಕಳಸ ನೀನು ನನ್ಕನಸಿನ್ ಪಲ್ಲಿಕೀಗೆ..!
ನಿನ್ನುಡಿಯೆ ಆಗೈತೆ ಹಾಡು ಹಕ್ಕೀಗೆ..!
 
ನಿನ್ಮ್ಯಾಲ್ ಕೊಳಗ್ದಸ್ಟು ಪ್ರೀತಿಐತೆ...!
ನಮ್ಮೊರ್ ಗುಡ್ಡೇನು ಚಿಕ್ದಾಗೋಯ್ತೆ...!
ನಿನ್ಕೆನ್ನೆ ಕಂಡು ನಾಚಾವೆ ಕೆಂದಾವ್ರೆ..!!
ನುಲಿಯೊ ಮೈಕಂಡು ಮುದುಡಾವೆ ಮಲ್ಗೆ..!
 
ಸುಂದ್ರಿ ನೀನೆ ನನ್ ಕೋಮಲಾಂಗಿ...!!
ನಿನ್ ಹೃದಯ ಕದ್ ಬೆಂಗ್ಳೊರ್ ಹುಡ್ಗ ನಾನೆ...!!!
 
-ಯುವಪ್ರೇಮಿ
  • ಕಾವ್ಯ ಮತ್ತು ಕವನ
~.~
  • Login or register to post comments
  • 733 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 15, 2007 - 6:23pm — Sunil Jayaprakash

ಉ: ಬೆಂಗ್ಳೊರ್ ಹುಡ್ಗ ನಾನು..!!

Sunil Jayaprakash's picture

ಬೆಂಗಳೂರಿನ ಯುವಪ್ರೇಮಿ ನೀವೇನೋ ಪ್ರೇಮ ನಿವೇದನೆ ಮಾಡುತ್ತಿದ್ದೀರಾ ಆದರೆ ನಮ್ಮ ವಿಜಯಮ್ಮನವರು ನಮ್ಮಗಳ ಆಸೆಗೆ ತಣ್ಣೀರೆರಚುತ್ತಿದ್ದಾರೆಯೇ Eye-wink

ಊರುಸಾಬ್ರಿ ನಿಂಗ್ಯಾಕೆ ನನ್ರಾಣಿ..!! ಒಟ್ಟಿಗೆಕೊತು ಆಡೋಣ ಹಳ್ಳ್ಮಾಣೆ

ಅಂದ ಹಾಗೆ, ಹಳ್ಳ್ಮಾಣೆ ಎಂದರೇನು ? ನಾವುಗಳು ಅದೇನೋ ಅಟ್ಗುಣಿಮನೆ ಅಂತ ಆಡ್ತಾ ಇದ್ವಿ. ಅದೇನಾ ಇದು ?

ಮರೆತಿದ್ದೆ, ನಿಮ್ ಪದ ಬೋ ಸಂದಾಗೈತೆ? ಸುಂದ್ರಿ ಬಂದೇ ಬತ್ತಾಳೆ ಬುಡಿ ಸಾಮ್ಯಾರಾ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 7:32pm — mahesha

ಉ: ಬೆಂಗ್ಳೊರ್ ಹುಡ್ಗ ನಾನು..!!

mahesha's picture

ಹಳ್ಳಮಣೆ/ ಹಳ್ಳಮಾಣೆ = ಹಳುಗುಳಿ ಮಣೆ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 16, 2007 - 9:25am — yuvapremi

ಉ: ಬೆಂಗ್ಳೊರ್ ಹುಡ್ಗ ನಾನು..!!

yuvapremi's picture

ವಂದನೆಗಳು ಸೋರ್ಯ ಪ್ರಕಾಶ್ ರವರೆ,

ನಿಮ್ಮ ಅಭಿಪ್ರಾಯಕ್ಕೆ ಇಹುದು ನನ್ನ ನಗೆಯ ಅಭಿನಂಧನೆ..!!

ಹಳ್ಳ್ಮಾಣಿ = ಅಣುಗುಣಿ (ನಮ್ಮ ಹಳ್ಳಿಗಳಲ್ಲಿ ಬಿಡುವಿನ ಸಮಯದಲ್ಲಿ , ಹೂಣಸೆ ಬೀಜದಲ್ಲಿ ಆಡುವ ಒಂದು ಆಟ...)

ನಮ್ಮ ಸುಂದ್ರಿ ಬರ್ತಾಳೊ ಇಲ್ವೊ ಗೊತ್ತಿಲ್ಲ.!! Sad ನಿಮ್ಮ ಸುಂದರವಾದ ಪ್ರತಿಕ್ರಿಯೆ ನನ್ನ ಮನ ಸೇರಾಯ್ತು...!!

ವಂದನೆಗಳು... Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 7:35pm — mahesha

ಉ: ಬೆಂಗ್ಳೊರ್ ಹುಡ್ಗ ನಾನು..!!

mahesha's picture

ನಮ್ಮ ನುಡಿಯಲ್ಲಿದೇ...

ಸಕ್ಕತ್ , ಬೊಂಬಾಟ್, ಸೂಪರ್‍

ಗವಸಿಸಿ

ನನ್ನೆಗಲ

ನನ್ನ ಹೆಗಲ!!

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 7:35pm — mahesha

ಉ: ಬೆಂಗ್ಳೊರ್ ಹುಡ್ಗ ನಾನು..!!

mahesha's picture

ಗವಸಿಸಿ = ಗವನಿಸಿ ಅಂದುಕೊಳ್ಳಿರಿ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 7:44pm — mahesha

ಉ: ಬೆಂಗ್ಳೊರ್ ಹುಡ್ಗ ನಾನು..!!

mahesha's picture

ಅಣ್ಣ ಜುವಪಿರೇಮಿ,

ನಮ್ ಬೆಸಗರಳ್ಳೀ ಬೈರೇಗೌಡ್ರುಗೆ(ಪ್ರೇಂ) ಇಂತಾ ಪದ್ಯ ಕೊಡಣ್ಣ. ಅವರು ಸಂತೋಸವಾಗೇ ಅವರ ಸಿನಿಮಕ್ಕಾಕೊತಾರೆ. Smiling

ಹೊನ್ನಾರ = ಹೊನ್ನ ಹಾರ
ಬೊಮಂಡ್ಳ = ಭೂಮಂಡಲ?

ನಿನ್ಕೆನ್ನೆ ಕಂಡು ನಾಚಾವೆ ಕೆಂದಾವ್ರೆ..!!
ನುಲಿಯೊ ಮೈಕಂಡು ಮುದುಡಾವೆ ಮಲ್ಗೆ..!

ಅಲಲಾ!! ಯಪ್ಪೋ ಏನ್ ವೋಲಿಕೆ!! ಪಸಂದಾಗೈತೆ!

ಇಂಗೇ ಬರೀತಾ ಇರಪ್ಪೋ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 16, 2007 - 9:33am — yuvapremi

ಉ: ಬೆಂಗ್ಳೊರ್ ಹುಡ್ಗ ನಾನು..!!

yuvapremi's picture

ಕಂಡಿತವಾಗಿ, ನಮ್ಮ ಪದಗಳು ಕನ್ನಡದ ಸ್ವತ್ತು..!! ಕನ್ನಡಕ್ಕಾಗಿ ಸದಾ ಮೀಸಲು..! Smiling

ನಿಮ್ಮ ಪದಜ್ನಾನ ಸಮಂದಸವಾಗಿದೆ..! Smiling

ಸೋರ್ಯ ಪ್ರಕಾಶ್ ರವರ ಸಂದೇಹಗಳಿಗೆ ಬಹಳ ಸುಂದರವಾಗಿ ಉತ್ತರಿಸಿದ್ದಿರಿ..!! ವಂದನೆಗಳು.. Smiling

ನಿಮ್ಮ ಸಲಹೆ , ಅಭಿಪ್ರಾಯಗಳು ಹೀಗೆ ಇರಲಿ..!!

ಎಂದೆಂದು ನಿಮ್ಮವ, Smiling
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 16, 2007 - 10:27am — mahesha

ಉ: ಬೆಂಗ್ಳೊರ್ ಹುಡ್ಗ ನಾನು..!!

mahesha's picture

ಅಣ್ಣಾ ನಲ್ವಗಲು,

ನಿಮ್ ಗಂಡಬೇರುಂಡ ಚಿತ್ರ ಬಲು ಚಂದಾಗೈತೆ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 16, 2007 - 11:39am — yuvapremi

ಉ: ಬೆಂಗ್ಳೊರ್ ಹುಡ್ಗ ನಾನು..!!

yuvapremi's picture

ಚಿತ್ರದ ಬಗೆಗಿನ ಅಭಿಪ್ರಾಯಕ್ಕೆ ವಂದನೆಗಳು ಮಹೇಶ ರವರೆ.. Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 16, 2007 - 10:39am — ವೈಭವ

ಉ: ಬೆಂಗ್ಳೊರ್ ಹುಡ್ಗ ನಾನು..!!

ವೈಭವ's picture

ಚೆಂದಾಗೈತೆ ಕಣಪ್ಪೊ ಯುವಪ್ರೇಮಿ...ಇಂಗೆ ಬರೀತಿರಪ್ಪೊ

ನಿನ್ಮ್ಯಾಲ್ ಕೊಳಗ್ದಸ್ಟು ಪ್ರೀತಿಐತೆ...!
ನಮ್ಮೊರ್ ಗುಡ್ಡೇನು ಚಿಕ್ದಾಗೋಯ್ತೆ...!

ಇಲ್ಲಿ ..."ನಮ್ಮೊರ್ ಗುಡ್ಡೇನು ಚಿಕ್ದಾಗೋಯ್ತೆ...!" ಅಂದ್ರೆ ಪ್ರೀತಿಯ ಗಾತ್ರಕ್ಕೆ ಗುಡ್ಡೆ ಹೋಲಿಕೆಯೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 16, 2007 - 11:24am — mahesha

ಉ: ಬೆಂಗ್ಳೊರ್ ಹುಡ್ಗ ನಾನು..!!

mahesha's picture

ವೈಬವ...

ಇದೇ ಇವರ ಕರಾಮತ್ತು..

"ಕೊಳಗದಸ್ಟು ಪರಿತೀ ಮುಂದೆ ಗುಡ್ಡವೂ ಚಿಕ್ಕದೂ". ಸೂಪರ್‍, ಬೊಂಬಾಟ್.
ಇಲ್ಲಿ ನೋಡ್ರಲಾ!
ದಿಟದಾಗೆ ಕೊಳಗ ಯಾವಾಗಲೂ ಗುಡ್ಡದ ಮುಂದೆ ಪುಟಾಣಿಯೇ. ಆದರೆ "ಕೊಳಗಸ್ಟು ಪಿರೀತಿ, ಗುಡ್ಡಕ್ಕಿಂತ ದೊಡ್ದು"!!ಅಬ್ಬ!!

ಯುವಪ್ರೇಮಿ! ಸೂಪರೋ ಸೂಪರು

ಇದನ್ನ "ಕರಾಮಾ"ದಲ್ಲಿ ನೋಡಿದರೆ, ಯಾವ "ಕಬ್ಬಸೊಬಗು"( ಕಾವ್ಯಾಲಂಕಾರ, ಕಾವ್ಯಗುಣ ) ತಿಳೀಬವುದು.

ನಮ್ಮ ಕರಾಮ ಪಂಟ ಸುನಿಲ, ಇಲ್ಲೇನಾರ ಹೇಳಯ್ಯ!!! Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 16, 2007 - 11:35am — yuvapremi

ಉ: ಬೆಂಗ್ಳೊರ್ ಹುಡ್ಗ ನಾನು..!!

yuvapremi's picture

ವಂದನೆಗಳು ವೈಭವ ರವರೆ, Smiling

"ನಿಮ್ಮ ಪ್ರೀತಿ ಇದ್ದರೆ ಹೀಗೆ, ಪದಗಳ್ ಉದುರುವುದು ಮಂಜಿನ ಹಾಗೆ..!!" Smiling

ಹೌದು , ಪ್ರೀತಿಯ ಗಾತ್ರವನ್ನ ಗುಡ್ಡಕ್ಕೆ ಹೋಲಿಸಿದ್ದೇನೆ..!!

ಇಂತಿ ನಿಮ್ಮವ Smiling
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 17, 2007 - 3:16am — gangadharg

ಉ: ಬೆಂಗ್ಳೊರ್ ಹುಡ್ಗ ನಾನು..!!

gangadharg's picture

ಯುವಪ್ರೇಮಿಗಳಿಗೆ ಪುರಾತನ ಶಿಲಾಬಾಲೆ..!! ಸರಿಯಾಯ್ತು.. ಸಾರ್ರ್... ಬೆಂಗ್ಳೂರ್ ಹುಡ್ಗಂಗೆ ಈ ಹುಡ್ಗಿ ಸಿಕ್ಕೋದ್ ಕಷ್ಟಾನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 17, 2007 - 6:01am — yuvapremi

ಉ: ಬೆಂಗ್ಳೊರ್ ಹುಡ್ಗ ನಾನು..!!

yuvapremi's picture

ನನ್ನ ಚಲ್ವಿ ಈ ಶಿಲಾಬಾಲಿಕೆಗಿಂತ ಚಂದಾಕವ್ಳೆ ಸಾರ್ ...! Smiling

ವಂದನೆಗಳು
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 17, 2007 - 10:31am — mahesha

ಉ:

mahesha's picture

ನಮ್ ಚಲ್ವೀರು ಸಿಲಾಬಾಲಿಕೆ ಹಂಗೆ ಇರಕ್ಕೆ ಆಗುಲ್ಲ ಬಿಡಣ್ಣ.

ಆಯಮ್ಮನ್ ನೋಡು ಹೆಂಗ ಕರ್ಕರ್ಗೆ ಅವ್ಳೆ. ಒಂದು ಬಟ್ಟೇನು ಹಾಕ್ಕೊಳ್ಳದೇ ಬರೀ ಒಡವೆ ಹೇರ್‍ಕೊಂಡವ್ಳೆ (ರವಿಚಂದ್ರನಣ್ಣನಂದು ಮಲ್ಲ ಸಿನಿಮಾ ತೆರ) Smiling

ಹಿಂಗೆ ಇವೊತ್ತು ಇರಕ್ಕೆ ಆಯ್ತದಾ? ಆಟೋ ಒಡವೆ ಎಲ್ಲಿಂದ ಮಾಡ್ಸಾದು?

ಹೆಂಗೂ ನೀವೇ ಕವಿಗೊಳು. ನಮ್ಮ ಚಿಲ್ವಿ ಉಡುಗೆ, ತೊಡುಗೆ, ವೈಯಾರಗೊಳ್ ಬಗ್ಗೆಯೂ ಆದಾಗ ಒಂದು ಪದ ಎಸಿರಿ Smiling

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 17, 2007 - 10:32am — mahesha

ಉ: ಬೆಂಗ್ಳೊರ್ ಹುಡ್ಗ ನಾನು..!!

mahesha's picture

ಏನೋ ತೊಂದರೆ ಇದೆ. ಎಲ್ಲ bold ಆಯ್ತು.


- ಮಾಯ್ಸ Smiling
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 17, 2007 - 11:51am — hamsanandi

ಉ: ಬೆಂಗ್ಳೊರ್ ಹುಡ್ಗ ನಾನು..!!

hamsanandi's picture

ಆ ದರ್ಪಣಸುಂದರಿಯ ಅಂದವನ್ನು ಬೇಲೂರ ಚೆನ್ನಕೇಶವನಿಗೆ ಉಸಿರಲು ಗಿಳಿ ಬೇಕಾಯ್ತು. ನಮ್ಮ ಬೆಂಗಳೂರು ಹುಡುಗ ತಾನೇ ಹಾಡುತ್ತಿರುವುದರಿಂದ, ಯಾರೂ ಬೇಕಿಲ್ಲ!

ಒಳ್ಳೆಯದಾಗಲಿ ಎಂಬ ಹಾರೈಕೆಗಳು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 19, 2007 - 11:45am — yuvapremi

ಉ: ಬೆಂಗ್ಳೊರ್ ಹುಡ್ಗ ನಾನು..!!

yuvapremi's picture

ವಂದನೆಗಳು ಹಂಸಾನಂದಿಯವರಿಗೆ,

ನಿಮ್ಮ ಹುಮ್ಮಸ್ಸಿನ ಮಾತಿಗೆ ಮೊಗದಿ ಮನಸೋತ ನಗಿಯಿದೆ..!! Smiling

ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು. Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 19, 2007 - 11:41am — yuvapremi

ಉ:

yuvapremi's picture

ಕಂಡಿತವಾಗಿ,

ನಮ್ಮ ಚಲ್ವಿಗೆ ಮೈತುಂಬ ಒಡವೆ ಮಾಡಿಸೋಣ ಬಿಡಿ..!!
ಅಂದಹಾಗೆ ಯಾವ ಚಿಕ್ಕಪೇಟೆ ಅಂಗಡಿ ಲೊಟಿಮಾಡೋದು ಅಂತ ಹೇಳಿ..!! Smiling

ಅನಂತ ವಂದನೆಗಳು.. Smiling
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 19, 2007 - 12:05pm — mahesha

ಉ:

mahesha's picture

ನಮ್ಮ ಚೆಲ್ವಿಯರು ಒಡವೆ ಇಲ್ದೆಯೂ ಚನ್ನಾಗೇ ಕಾಣ್ತಾರೆ ಬುದ್ದಿ.... ಅವರು ಹುಟ್ಟುಚೆಲ್ವಿಯರು!!

ಅದಕ್ಕೆ ಅವರಿಗೆ ಒಡವೆ-ಗಿಡವೆ ಎಲ್ಲ ಬ್ಯಾಡ. ಮೊಡವೆ ಬಂದು ಹೋಗಿದ್ರೆ ಸಾಕು Smiling

ನನ್ನಿ
- ಮಾಯ್ಸ .Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 19, 2007 - 12:08pm — yuvapremi

ಉ:

yuvapremi's picture

ಹೊ..!! ಬಹಳ ಕರ್ಚನ್ನ ಉಳಿಸಿದ್ರಿ ನೀವು ನೋಡಿ..!! Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏಕೆ ಹೀಗೆ ಮಾಡಿದೆ ನೀನು?
  • ಕೈ ಕೊಟ್ಟ ಸಖಿ
  • ಮೊದಲ ಅನುಭವ
  • ಬಾ ತಬ್ಬಿಕೋ :-)
  • ಕನಸ್ಸು
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 106 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator