ನಿನ್ನಯ ನೆನಪು..!!

ನಿನ ನೆನಪೆ ಮೊಡಿ ಬಂದು..!
ಮನಸನೆ ಮೋಡಿ ಮಾಡಿತೋ..
ಮನವ ಕಾಡುವ ಮೌನಾ ನೀನು
ಆ ಮೌನರಾಗ ನನ್ನ ಸೆಳೆಯಿತೋ..!
ಎತ್ತ ನೋಡು ನಿನ್ನದೆ ರೂಪ
ಬಿದಡೆ ಕಾಡುವಂತಾ ಶಾಪ..!
ನಿನ್ನ ನೆನಪಿನಲ್ಲೆ ಕಳೆದು ಹೋದೆನೆ..!
ಓ ನಿನ್ನ ನೆನಪೇ..!!
ಕಳೆದುಹೋದ ಪ್ರೀತಿ ನೀನು..!
ಇಂದು ಜಗವ ಹುಡುಕುತಲಿಹೆನು
ನನ್ನ ಕಣ್ಣಮುಂದೆ ಒಮ್ಮೆ ಬಾರೆಯಾ..!
ಮರಳಿ ನನ್ನ ಸೇರಲು ಬಾರೆ..!
ಬೆಂದ ಹೃದಯದಿ ಸ್ಪೊರ್ತಿ ತಾರೆ..!
ನನ್ನ ಪ್ರೀತಿ ದೀಪ ಬೆಳಗು ಬಾ ಪ್ರಿಯೆ..!
ಓ ನನ್ನ ಪ್ರಿಯೆ..!!
ಪ್ರಾಣ ಪಕ್ಷಿ ಹಾರುವುದೀಗಾ..!
ನೀನು ನನ್ನ ಸೇರದಾಗ..!
ಈ ಪ್ರಾಣ ಹಾರೋ ಮುನ್ನ ಕಾಣೆಲೆ..!
ಕಾಂತಿ ಕಳೆದ ಸೊರ್ಯನಂತೆ..!
ನಗುವ ಮರೆತ ಹೊವಿನಂತೆ..!
ನಿನ್ನ ಪ್ರೀತಿ ಸಿಗದ ಈ ಬಾಳು ಸಾದ್ಯವೆ..!
ಓ ನನ್ನ ಪ್ರಿಯೇ...!
ನಿನ್ನ ನೆನಪು ಮೊಡಿ ಬಂದು
ಮನಸಿನ ನಾಡಿ ಮಿಡಿಯಿತೋ..!
ಮನಸ ಕಾಡುವ ಮೌನ ನೀನು
ಆ ಮೌನರಾಗ ನನ್ನ ಸೆಳೆಯಿತು..
-ಯುವಪ್ರೇಮಿ

- Login or register to post comments
- 697 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನಿನ್ನಯ ನೆನಪು..!!
ಯಾಕಣ್ಣ ಇಸ್ಟು ಸೀರಿಯಸ್ಸಾಗಿದೆ ಪದ್ಯ!!
ಚನ್ನಾಗಿದೆ.. ಆದರೆ ನಿಮ್ಮ ಹಿಂದಿನ ಪದ್ಯದಸ್ಟು ಲವಲವಿಕೆ ಇಲ್ಲ!!
- ಮಾಯ್ಸ
ಉ: ನಿನ್ನಯ ನೆನಪು..!!
ನಮಸ್ತೆ ಮಹೇಶ್ ರವರೆ,
ಇದು ಓಂದು ವಿರಹದ ಗಾನ.
ಸದಾಕಾಲ ಜೀವನದಲ್ಲಿ ಸಂತಸವಿರುವುದಕ್ಕೆ ಸಾದ್ಯವಿಲ್ಲ..
ಆದುದಕೆ ಮುಂಬರುವ ನೋವಿನ ದಿನಗಳಕಡೆ ಗಮನವಿದ್ದೆರೆ ಬಹಳ ಓಳ್ಳೆಯದು..!!
ಈ ಕವನವೊಂದು ವಿರಹದ ವಿಹಂಗಮನ.. ವಿರಹಿಗಳಿಗೆ ಮಾತ್ರವಲ್ಲ, ಪ್ರೇಮಿಗಳಿಗು ಕೊಡ..
ವಂದನೆಗಳು
-ಯುವಪ್ರೇಮಿ
ಉ: ನಿನ್ನಯ ನೆನಪು..!!
ಈ ವಿರಹದ ಸುಡಬೇಗೆ ಬಲು ಬೇಗ ಸರಿಯಲಿ....
ವಿರಹ ತಪವು ಮುತ್ತಿನ ತಂಬನಿಗಳಿಂದ ತಣಿಯಲಿ
ನಲ್ಲೆಯ ಮೆದು ಅಪ್ಪುಗೆ ಹೂಹಾರ ಕೊರಳೇರಲಿ
ಮುದುಡಿದ ಮನವು ನನೆಯೊಡೆದು ಅರಳಲಿ
ಬಿಸಿಜ್ಯೇಷ್ಠ ಕಳೆದು ಆಷಾಡದ ಮೊದಲ ದಿನ
ಬಿರಬಿರನೆ ತಂಪೆರೆವ ಮೋಡಗಳೊಡ ಬರಲಿ
ತುಂಬುಕಾರ್ಮುಗಿಲ ಮೋಡದ ಚಪ್ಪರದಡಿ
ಮಿಲನ ಬುವಿಗೆ ಹನಿದ ಮೊದಲ ಮಳೆಯಂತಿರಲಿ
- ಮಾಯ್ಸ