ಬೆಸುಗೆಯ ಒಸಗೆ
ಹಸಿ 'ಮೈ'ಗಳ
ಹಸೆಮಣೆಗೇರಿಸಿ
ಬೆಸುಗೆಯ ಒಸಗೆಯ
ಮುಗಿಸಿದರು, ಹರಸಿದರು
'ಹಸಿರಾಗಿರಿ' ಎಂದು
ಮೊಸರಾಗಿ ಕಂಡ ಬೆಸುಗೆ
ಕೆಸರಾಯ್ತು ಕಾಣಾ ಭರತೇಶ!
-----
ಬೆಸುಗೆ = ಮದುವೆ ( ಗಂಡು ಹೆಣ್ಣನ್ನು ಬೆಸೆಯುವುದು ಮದುವೆ ತಾನೆ..ಆದ್ದರಿಂದ ಬೆಸುಗೆಯನ್ನು ಮದುವೆ ಎಂದು ಹೇಳಬಹುದು
)
ಒಸಗೆ = ಸಮಾರಂಭ

- Login or register to post comments
- 475 hits
- Email this page





RSS:
ಪ್ರತಿಕ್ರಿಯೆಗಳು
ಉ: ಬೆಸುಗೆಯ ಒಸಗೆ
ಕೆಸರೇಕಾಯ್ತು?
ಅಣ್ಣೆಗನ್ನಡ ವಚನ ಸೂಪರ್!!
- ಮಾಯ್ಸ
ಉ: ಬೆಸುಗೆಯ ಒಸಗೆ
"ಕೆಸರೇಕಾಯ್ತು? " --- ಬೆಸುಗೆಯಾದವರಿಗೆ ಗೊತ್ತು
ಉ: ಬೆಸುಗೆಯ ಒಸಗೆ
ಹಿಂಗಂದರೆ ಹೆಂಗೆ?
ನಾವಿನ್ನು ಬೆಸ್ಕೊಂಡಿಲ್ಲ. ಅದಕ್ಕೆ ಕೇಳಿದ್ದು ಸಾಮಿ!!
ಏನು ಗುಟ್ಟಾ?

- ಮಾಯ್ಸ
ಉ: ಬೆಸುಗೆಯ ಒಸಗೆ
ಕೈ ಕೆಸರಾದರೆ ಬಾಯ್ ಮೊಸರು, ಅದಕ್ಕೇ ಇರಬೇಕು.
ಮದುವೆಯ ಬಳಿಕ ಬೆಸುಗೆಯ ಒಸಗೆಯಲ್ಲವೇ?
ಉ: ಬೆಸುಗೆಯ ಒಸಗೆ
ಏನ್ರಪ್ಪ ನೀವು ಯಾವುದೋ ಗುಟ್ಟುನುಡಿಯಲ್ಲಿ ಮಾತಾಡ್ತೀರಿ.
ನಂಗೊಂದೂ ಅರ್ತ್ವಾಗೊಲ್ದು

- ಮಾಯ್ಸ
ಉ: ಬೆಸುಗೆಯ ಒಸಗೆ
ನೀವು ಗು೦ಡಿಯಲ್ಲಿ ಬಿದ್ದು ಈ ರೀತಿಯ ಕವನ ಸುಳ್ಳು ಎ೦ದು ತೋರಿಸಿ ..ಕೆ.ಎಸ್. ನ ರವರ೦ತೆ ಮಲ್ಲಿಗೆ , ಇತ್ಯಾದಿ ಕವನಗಳನ್ನು ಬರೆಯಿರಿ
ಉ: ಬೆಸುಗೆಯ ಒಸಗೆ
ಮುರಳಿ,
ಯಾವ ಗುಂಡಿಯಲ್ಲಿ ಈಗ ಬೇಳಲಿ, ಈ ಅನುಭವಕ್ಕೆ?
ತುಸು ಬಿಡಿಸಿ "ಕೆಸರ" ಬಗ್ಗೆ ಹೇಳಿ ಸಾರ್
- ಮಾಯ್ಸ