ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !
ಇದೇ ದಿನ, ೧೦೦ ವರ್ಷಗಳ ಹಿಂದೆ, ಅಂದರೆ, ಮೇ ೨೨, ೧೯೦೭ ರಲ್ಲಿ ಬೆಲ್ಜಿಯಮ್ ದೇಶದ ಬ್ರಸಲ್ಸ್ ಪಟ್ಟಣದಲ್ಲಿ , ಹರ್ಜ್ ಜನ್ಮಿಸಿದ್ದರು. ಈಗ ಅವರು ಬದುಕಿದ್ದಿದ್ದರೆ, ತಮ್ಮ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ಈ ದಿನವನ್ನು ನೋಡುವ ಮೊದಲೇ ಸುಮಾರು ೨೪ ವರ್ಷಗಳ ಹಿಂದೆಯೇ ಕಣ್ಣುಮುಚ್ಚಿದ್ದರು.
ಬೆಲ್ಜಿಯಮ್ ದೇಶದ ಪ್ರಖ್ಯಾತ ವ್ಯಂಗ್ಯ ಚಿತ್ರ ಲೇಖಕ, ನಿರ್ಮಾಪಕ ಹರ್ಜ್, [ ಆತನ ನಿಜವಾದ ಹೆಸರು, ಜಾರ್ಜಸ್ ರೆಮಿ ಎಂದು. ಹರ್ಜ್ ಅವರ ಪೆನ್ ಹೆಸರು.] ೧೯೨೯ ರಲ್ಲಿ ಬೆಳಕಿಗೆ ತಂದ ಮರೆಯಲಾರದ ಕಾರ್ಟೂನ್ ವ್ಯಕ್ತಿ- ’ಟಿನ್ ಟಿನ್” ನನ್ನು ವಿಶ್ವದಲ್ಲೇಲ್ಲಾ ಮನೆಮಾತಾಗಿರಿಸಿದರು. ಈಗ ಅದೇ ಟಿನ್ ಟಿನ್, ತನ್ನ ೭೮ ನೆಯ ಹುಟ್ಟು ಹಬ್ಬ ವನ್ನು ನೆರೆವೇರಿಸಿಕೊಳ್ಳುತ್ತಿದ್ದಾನೆ. ೨೦೦೪ ರಲ್ಲಿ ೭೫ ನೆಯ ಜನ್ಮದಿನದ ಆಚರಣೆಯಾಗಿತ್ತು.
ಟಿನ್ ಟಿನ್, ಈಗ ಎಷ್ಟು ಬೇಡಿಕೆಯಲ್ಲಿದ್ದಾನೆ ಎಂದರೆ , ಅಬಾಲ ವೃದ್ಧರಾದಿಯಾಗಿ, ಎಲ್ಲರೂ ಅವನ ನಾಯಿ ’ಸ್ನೋಯಿ ’ಮತ್ತು ಅವನ ಕಾರ್ನಾಮಗಳನ್ನು ನೋಡಿ ಆನಂದಿಸಲು ಇಚ್ಛಿಸುತ್ತಾರೆ.
ಸ್ಟೀವೆನ್ ಸ್ಪೀಲ್ ಬರ್ಗ್ ರವರು, ಅವನ ಎಲ್ಲಾ ೨೪ ಕಾರ್ಟೂನ್ ಪುಸ್ತಕ ಸಂಗ್ರಹಗಳನ್ನು ಕೂಡಿಸಿ, ೩-ಡಿ ನಲ್ಲಿ ಚಲನ-ಚಿತ್ರವನ್ನು ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಅದು ಪ್ರಾಯಶಃ ೨೦೦೯ ಅಥವಾ ೨೦೧೦ ರಲ್ಲಿ ಕೊನೆಗೊಂಡು, ಟಿನ್ ಟಿನ್ ಫ್ಯಾನ್ ಗಳಿಗೆ ಲಭ್ಯವಾಗಬಹುದು.
ಹರ್ಜ್, ೨೪ ವರ್ಷಗಳ ಹಿಂದೆಯೇ ಗತಿಸಿದರು. ಈಗ ಅವರ ಪತ್ನಿ, ಫ್ಯಾನಿ ರಾಡ್ವೆಲ್ , ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

- Login or register to post comments
- 369 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !
week ಮ್ಯಾಗಜೀನ್‍ನಲ್ಲಿ cಒಮಿಚ್ strip ಪ್ರಕಟಣೆ ಆಗುವುದನ್ನು ನೋಡಿದ್ದರೂ ನಾನು ಅದನ್ನು ಓದಿಲ್ಲ.
ಸುಧಾದ ಡಾಬೂ, ಶೂಜಾ, ಆಜಾದ್, ಮಜನೂ, ಫ್ಯಾಂಟಮ್, ಕಪೀಶ್‍ಗೆ ನನ್ನ ಓದು ಸೀಮಿತವಾಯಿತು.
ಅಂದ ಹಾಗೆ ಫ್ಲಾಶ್ ಗಾರ್ಡನ್ ಅಂತ ಬಾಹ್ಯಾಕಾಶ ಯಾತ್ರಿಯ ಸ್ಟ್ರಿಪ್ ಸುಧಾದಲ್ಲಿ ಬರುತ್ತಿತ್ತು.
*ಅಶೋಕ್
ಉ: ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !
ಹೌದು. ಒಮ್ಮೊಮ್ಮೆ ನೋಡಿದರೆ ನಾವು ನೋಡದೇ ಇರುವುದು ಅತಿಹೆಚ್ಚು ಅನ್ನಿಸತ್ತೆ. ಈಗಂತೂ ಮಕ್ಕಳಿಗೆ ಗೊತ್ತಿರುವಷ್ಟು ನಮಗೆ ಗೊತ್ತಿಲ್ಲ. ನೀವು ಚೆನ್ನಾಗಿ ತಿಳಿದುಕೊಂಡಿರ್ತೀರ.
ಮುನ್ನಾಭಾಯಿ ಶೊ, ನ್ಯೂಟ್ರಾನ್ ಇತ್ಯಾದಿಗಳು ಒಂದು ಇತಿಹಾಸವನ್ನೆ ಸೃಷ್ಟಿಸಿವೆ. ’ಪೋಗೋ” ನೋಡ್ತಾ ಇದ್ರೆ ಸಾಕು.