ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

May 26, 2007 - 11:01pm — kishorpatwardhan

೧೯೩೪ ನೇ ಇಸವಿಯ ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾಗಿರುವ ನೋಬಲ್ ಬಹುಮಾನವನ್ನು ಮೂವರು ವಿಜ್ಞಾನಿಗಳಿಗೆ ಕೊಡಲಾಯಿತು - ಜಾರ್ಜ್ ವ್ಹಿಪಲ್, ಜಾರ್ಜ್ ಮಿನಾಟ್ ಮತ್ತು ವಿಲ್ಲಿಯಮ್ ಮರ್ಫಿ. ಈ ಮೂವರು ’ಪರ್ನೀಶಿಯಸ್ ಅನೀಮಿಯಾ’ ಎಂಬ ಒಂದು ತರಹದ ರಕ್ತಹೀನತೆಗೆ ಔಷಧ ಕಂಡುಹಿಡಿದಿದ್ದರು; ಅದಕ್ಕಾಗಿ ಈ ಗೌರವ.
ಇವರಲ್ಲಿ ಮೊತ್ತಮೊದಲು ಈ ರೋಗದ ಮೇಲೆ ಕೆಲಸ ಮಾಡಿದ್ದು ಜಾರ್ಜ್ ವ್ಹಿಪಲ್. ಆತ ತನ್ನ ಪ್ರಯೋಗಶಾಲೆಯಲ್ಲಿ ನಾಯಿಗಳ ದೇಹದಿಂದ ಕೃತಕವಾಗಿ ರಕ್ತಸ್ರಾವ ಆಗುವಹಾಗೆ ಮಾಡಿ, ಅನಂತರ ಅವುಗಳಿಗೆ ಬೇರೆ ಬೇರೆ ತರಹದ ಆಹಾರವನ್ನು ಕೊಡುತ್ತ ಹೋದ. ಆಹಾರದಲ್ಲಿನ ಯಾವುದಾದರೂ ಅಂಶ ದೇಹದಲ್ಲಿ ರಕ್ತ ಉತ್ಪತ್ತಿಯಾಗುವುದನ್ನು ಹೆಚ್ಚಿಸುತ್ತದೋ ಎಂದು ನೋಡುವುದು ಅವನಿಗೆ ಬೇಕಾಗಿತ್ತು. ವ್ಹಿಪಲ್ ಕೊನೆಗೂ ತನ್ನ ಪ್ರಯೋಗಗಳಿಂದ ಕಂಡುಕೊಂಡದ್ದು Liver (ಯಕೃತ್ತು) ಇಂತಹ ಸನ್ನಿವೇಶದಲ್ಲಿ ಬಹಳ ಉಪಯೋಗಿ ಎಂದು. ಕಚ್ಚಾ ಯಕೃತ್ತನ್ನು ಸೇವಿಸಿದ ನಾಯಿಗಳ ರಕ್ತದಲ್ಲಿ ಕೂಡಲೇ ಹೀಮೋಗ್ಲೋಬಿನ್ ಹೆಚ್ಚುವುದನ್ನು ಆತ ಗಮನಿಸಿದ. ಮುಂದೆ ಇದೇ ಪ್ರಯೋಗವನ್ನು ಆಧರಿಸಿ, ಉಳಿದ ಇಬ್ಬರು – ಮರ್ಫಿ ಮತ್ತು ಮಿನಾಟ್ – Liver ನ ಉಪಯೋಗ ಪರ್ನೀಶಿಯಸ್ ಅನೀಮಿಯಾ ಎಂಬ ರೋಗದಲ್ಲೂ ಆಗುತ್ತದೆ ಎಂದು ತೋರಿಸಿಕೊಟ್ಟರು.
Pernicious Anemia ದಲ್ಲಿ ಕೆಂಪು ರಕ್ತ ಕೋಶಗಳ (Red Blood Corpuscles) ಉತ್ಪತ್ತಿ ಕಡಿಮೆಯಾಗುತ್ತದೆ ಎಂಬುದನ್ನು ಹೊರತುಪಡಿಸಿ, ಅಲ್ಲಿಯ ತನಕ ಈ ರೋಗದ ಪ್ರಕ್ರಿಯೆಯಾಗಲಿ, ಕಾರಣಗಳಾಗಲಿ, ಔಷಧವಾಗಲಿ - ಗೊತ್ತಿರಲಿಲ್ಲ. ಆದರೆ ಈಗ ಆ ಬಗ್ಗೆ ಹಲವು ವಿಷಯಗಳು ಗೊತ್ತಾಗಿವೆ. ಈ ರೋಗದಲ್ಲಿ ಜಠರದಲ್ಲಿರುವ Parietal Cell ಎಂಬ ಜೀವಕೋಶ, ತಾನು ಸ್ರವಿಸಬೇಕಾದ Intrinsic Factor ಎಂಬ ರಾಸಾಯನಿಕವನ್ನು ಸರಿಯಾಗಿ ಸ್ರವಿಸದಂತಾಗುತ್ತದೆ. ಇದಕ್ಕೆ Auto-immunity ಎಂಬ ವಿಕೃತ ಪ್ರಕ್ರಿಯೆ ಕಾರಣ. ಈ ಇಂಟ್ರಿನ್ಸಿಕ್ ಫ್ಯಾಕ್ಟರ್ ನ ಅಗತ್ಯ ಇರುವುದು ‘ವೈಟಮಿನ್ – ಬಿ -12’ ( Vitamin – B12) ಎಂಬ ತತ್ವದ ಸರಿಯಾದ Absorption ಗೆ. (Absorption ಅಂದರೆ, ಜೀರ್ಣಾಂಗ ವ್ಯೂಹ - Gastro Intestinal Tract - ದಿಂದ ಯಾವುದೇ ತತ್ವವು ರಕ್ತವನ್ನು ಸೇರುವ process – ಪ್ರಕ್ರಿಯೆ). ಈ ವೈಟಮಿನ್ ಸಾಕಷ್ಟು ಪ್ರಮಾಣದಲ್ಲಿ ದೇಹದಲ್ಲಿದ್ದರೆ ಮಾತ್ರ ಕೆಂಪು ರಕ್ತ ಕೋಶಗಳ ಉತ್ಪತ್ತಿ ಎಲುಬುಗಳ ಒಳಭಾಗದ ಮಜ್ಜೆಯಲ್ಲಿ (Bone marrow) ಸರಿಯಾಗಿ ಆಗುತ್ತದೆ. ಇಲ್ಲದಿದ್ದರೆ ಪ್ರಾಕೃತ ಸ್ವರೂಪಕ್ಕಿಂತ ಭಿನ್ನವಾದ, ಇನ್ನೂ immature ಆಗಿರುವ ಅಸಹಜವಾಗಿ ದೊಡ್ಡ ಗಾತ್ರ ಹೊಂದಿರುವ ಕೆಂಪು ರಕ್ತಕೋಶಗಳು ತಯಾರಾಗಿ ಮೆಗಾಲೋಬ್ಲಾಸ್ಟಿಕ್ ಅನೀಮಿಯಾ (Magaloblastic anaemia) ಬರುತ್ತದೆ. (Magaloblastic anaemia ಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು - ಅವುಗಳಲ್ಲಿ Pernicious anaemia ಕೂಡ ಒಂದು). Liver, ಈ ವೈಟಮಿನ್ B-12 ನ ಒಂದು ಅತ್ಯುತ್ತಮ ಆಕರ. ಈ ವೈಟಮಿನ್, liver ನಲ್ಲಿ ಸಂಗ್ರಹವಾಗುತ್ತದೆ. ಅದಕ್ಕೇ ಕಚ್ಚಾ liver ನ್ನು ತಿಂದಾಗ ಅನೀಮಿಯಾದ ಲಕ್ಷಣಗಳು ಇಲ್ಲವಾಗುವುದು.

ಎಲ್ಲ ಸರಿ. ಆದರೆ ಈ ಆಯುರ್ವೇದದ ಅಳಲೇಕಾಯಿ ಪಂಡಿತನಿಗೂ ಪರ್ನೀಶಿಯಸ್ ಅನೀಮಿಯಾಕ್ಕೂ ಏನು ಸಂಬಂಧ - ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಸುಶ್ರುತ ಸಂಹಿತೆಯಲ್ಲಿನ ಈ ಶ್ಲೋಕ ವೊಂದನ್ನು ಓದಿ:

अतिनिःस्रुत रक्तॊ वा क्षौद्रयुक्तं पिबॆदसृक् ।
यकृद्वा भक्षयॆदाजमामं पित्तसमायुतम् ॥
(ಸುಶ್ರುತ ಸಂಹಿತೆ, ಉತ್ತರ ತಂತ್ರ,೪೫ನೇ ಅಧ್ಯಾಯ)

ಇದರ ಅರ್ಥ: “ಅತಿಯಾದ ರಕ್ತಸ್ರಾವವಾದಾಗ ಆಡಿನ ಯಕೃತ್ತನ್ನು (Liver) ಬೇಯಿಸದೆ ಅದರಲ್ಲಿನ ಪಿತ್ತದ ಜೊತೆಗೆ ತಿನ್ನಲು ಕೊಡಬೇಕು; ಅಥವಾ, ಜೇನಿನ ಜೊತೆ ರಕ್ತವನ್ನು ಬೆರೆಸಿ ಕುಡಿಯಲು ಕೊಡಬೇಕು”

(When there is extreme loss of blood, one should be given either the blood mixed with honey to drink or should be advised to consume raw goat liver with all its contents.)

ರಕ್ತವನ್ನು ಜೇನಿನ ಜೊತೆಗೆ ಸೇವಿಸುವುದು ಇವತ್ತಿನ ಮಟ್ಟಿಗೆ ಸ್ವಲ್ಪ ಅಪ್ರಾಸಂಗಿಕ ಅನ್ನಿಸಬಹುದು. ಆದರೆ Liver ಬಗೆಗಿನ ವಿವರಣೆ ಅಚ್ಚರಿಯಾಗುವಂತಿದೆ – ಅಲ್ಲವೇ ? (ಸುಶ್ರುತ ಸಂಹಿತೆಯ ’ಉತ್ತರ ತಂತ್ರ’ ವನ್ನು ನಾಗಾರ್ಜುನ ಎಂಬ ವೈದ್ಯ ಬರೆದುದಾಗಿ ಹೇಳಲಾಗುತ್ತದೆ. ಅದು ನಿಜ ಎಂದು ಒಪ್ಪಿಕೊಂಡರೂ ಅದು ಸುಮಾರು ಕ್ರಿಸ್ತ ಶಕ ಹತ್ತನೇ ಶತಮಾನದ ಆಸುಪಾಸಿನ ವಿಷಯ).
ಸುಶ್ರುತ ಕಂಡುಹಿಡಿದದ್ದಕ್ಕಿಂತ ಹೆಚ್ಚಿನ ಏನನ್ನೂ ವ್ಹಿಪಲ್ ಕಂಡುಹಿಡಿದಿರಲಿಲ್ಲ. ಇನ್ನು, ಸುಶ್ರುತನ ಕೊಡುಗೆಯನ್ನು surgery ಗೆ ಸಂಬಂಧಿಸಿದ ಪುಸ್ತಕಗಳಲ್ಲಿ ಅಲ್ಲಲ್ಲಿ ಬರೆಯುವರಾದರೂ ಆತ ಮಾಡಿದ ಇಂತಹ ಪ್ರಯೋಗಗಳ ಬಗ್ಗೆ ಯಾರೂ ಉಲ್ಲೇಖಿಸುವುದಿಲ್ಲ. ವೈದ್ಯವಿಜ್ಞಾನದ ಇತಿಹಾಸವನ್ನು ಹೇಳುವಾಗಲೂ ಈ ಬಗ್ಗೆ ಯಾರೂ ಮಾತಾಡುವುದಿಲ್ಲ.
ಅದಕ್ಕೇ ಈ ಬರಹ.

~.~
  • Login or register to post comments
  • 542 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 26, 2007 - 11:41pm — ASHOKKUMAR

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

ASHOKKUMAR's picture

ರಕ್ತಹೀನತೆ ಉಂಟಾದಾಗ ಕಬ್ಬಿಣದ ಅಂಶ ಉಳ್ಳ ಆಹಾರ ಸೇವಿಸಲು ಹೇಳುತ್ತಾರಲ್ಲ? ಅದು ಯಾವ ತೆರನ ರಕ್ತಹೀನತೆ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2007 - 11:59pm — kishorpatwardhan

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

kishorpatwardhan's picture

ಅದು ಬೇರೆ ತರಹದ್ದು.
Iron deficiency anaemia ಅಂತ ಕರೆಯುತ್ತಾರೆ ಅದನ್ನು. ಅದಕ್ಕೂ ಇದಕ್ಕೂ ಯಾವುದೇ ನೇರವಾದ ಸಂಬಂಧ ಇಲ್ಲ.
Iron, Folic Acid, Vitamin B-12 - ಇವೆಲ್ಲ ವೂ RBC ಗಳ ತಯಾರಿಕೆಗೆ ಅಗತ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2007 - 3:24pm — kishorpatwardhan

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

kishorpatwardhan's picture

ನನ್ನ ಬರಹವನ್ನು ನಾನೇ ಓದಿಕೊಂಡಾಗ ಅನ್ನಿಸಿದ್ದು:
’ಅಳಲೇಕಾಯಿ ಪಂಡಿತ’ ಎಂಬ ಕಮೆಂಟು ಸುಶ್ರುತನ ಕುರಿತಾಗಿದೆಯೋ ಅಂತ ಅನ್ನಿಸಬಹುದು.. ಆದರೆ ಹಾಗಲ್ಲ; ಅದು ನನ್ನ ಬಗ್ಗೆ ನಾನೇ ಹೇಳಿಕೊಂಡದ್ದು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2007 - 1:33am — hamsanandi

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

hamsanandi's picture

ಕಿಶೋರ್ ಪಟವರ್ಧನರೇ,

ನಿಮ್ಮ ಬರಹಗಳು ಬಹಳ ಉಪಯುಕ್ತ ಮಾಹಿತಿಗಳೋಂದಿಗೆ ಬರುತ್ತಿವೆ. ಹೀಗೇ ಬರೆಯುತ್ತಿರಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 29, 2007 - 9:59am — kishorpatwardhan

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

kishorpatwardhan's picture

ನಿಮಗಿಷ್ಟವಾದರೆ ನನಗೂ ಸಂತಸ.

ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2007 - 2:23pm — mahesha

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

mahesha's picture

ಬರಹ ಚೆನ್ನಾಗಿದೆ.

ದಯವಿಟ್ಟು "ಕಚ್ಚಾ ಯಕೃತ್ತನ್ನು " ಅಂದರೆ ಏನೆಂದು ತುಸು ಬಿಡಿಸಿ ಹೇಳಿ.

ನನ್ನಿ!

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2007 - 2:58pm — ASHOKKUMAR

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

ASHOKKUMAR's picture

ಹಸಿ(ಬೇಯಿಸದ) ಯಕೃತ್ತು ಅಥವ ಪಿತ್ತಜನಕಾಂಗ ಅಂತ ನಾನರ್ಥ ಮಾಡಿಕೊಂಡೆ. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2007 - 6:42pm — kishorpatwardhan

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

kishorpatwardhan's picture

ಹೌದು; ಅಶೋಕರು ಹೇಳಿದ್ದು ಸರಿ.
ಆಯುರ್ವೇದ ವಾಙ್ಮಯದಲ್ಲಿ Liver ಗೆ ’ ಪಿತ್ತಜನಕಾಂಗ ’ ಎಂಬ ಶಬ್ದ ಬಳಕೆಯಾಗಿಲ್ಲ. ಅದು ಕನ್ನಡಿಸಿದ ಶಬ್ದ - ಟೆಕ್ಸ್ಟ್ ಬುಕ್ ಸಲುವಾಗಿ ಕನ್ನಡಿಸಿದ್ದು. ಚರಕ, ಸುಶ್ರುತ ಇತ್ಯಾದಿ ಸಂಹಿತೆಗಳಲ್ಲಿ ಬಳಕೆಯಾಗಿರುವ ಪದ ’ ಯಕೃತ್ ’ . ಅದನ್ನು ನಾನು ಯಕೃತ್ತು ಅಂತಂದೆ.
ಕಚ್ಚಾ ಅಂದರೆ ಬೇಯಿಸದ. ಸಂಸ್ಕೃತದಲ್ಲಿ ’ಆಮಮ್ ’ ಅಂದಿದ್ದಾರಲ್ಲ- ಅದಕ್ಕೆ. ಆಮ ಅಂದರೆ ಅಪಕ್ವ - ಬೇಯದೇ ಇರುವುದು.
ಅಚ್ಚ ಕನ್ನಡದಲ್ಲಿ ’ ಹಸಿ ’ ಅನ್ನಬಹುದೇನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 29, 2007 - 9:58am — kishorpatwardhan

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

kishorpatwardhan's picture

ನಮ್ಮ ಪರಿಸರದ ಪ್ರಭಾವ ನಮ್ಮ ಮೇಲೆ ಎಷ್ಟಾಗುತ್ತದೆ ಅನ್ನುವುದಕ್ಕೆ ನಾನು ಅರಿವಿಲ್ಲದೆಯೇ ಬಳಸಿದ ’ ಕಚ್ಚಾ ’ ಎಂಬ ಶಬ್ದವೇ ಸಾಕ್ಷಿ.
ಅದು ದಿನವಿಡೀ ಹಿಂದಿ ಮಾತಾಡುವುದರ ಪರಿಣಾಮ.
ನನಗೆ ’ ಹಸಿ ’ ಎಂಬುದು ಹೊಳೆಯಲೇ ಇಲ್ಲ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 29, 2007 - 11:32am — mahesha

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

mahesha's picture

ನನ್ನಿ! Smiling
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2007 - 11:37am — rashmi.p.v.

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

rashmi.p.v.'s picture

its a nice work from your side sir and is different and nice to see allopathy medicine growing in the paths of ayurveda or else one can say it as ayurveda being rediscovered in a modern way. keep your nice work going on sir as it is different from rest.thanks.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 3, 2007 - 5:03pm — muralihr

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

muralihr's picture

ರಶ್ಮಿ ತಾವು ಕನ್ನಡದಲ್ಲಿ ಬರೆಯಬೇಕು ...ನಿಮ್ಮ೦ತಹ ಜಾಣೆಯರು ನಮ್ಮ ಸ೦ಪದವನ್ನು ಬೆಳಗಲಿ...ಗ೦ಡಸರು ಸ್ವಭಾವದಿ೦ದಲೇ ಸ್ವಲ್ಪ ಜಗಳ ವ೦ತರು. ನಿಮ್ಗೇ ಪರಿಚಯ ಇರುವ ಜಾಣೆಯರನ್ನು ಇಲ್ಲಿ ಬರೆಯಲು ಹೇಳೀ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 23, 2008 - 11:28am — sathya

ಉ: ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

sathya's picture

ತು೦ಬಾ ಮೊದಲೆ ಪ್ರತಿಕ್ರಿಯೆ ಬರೆಯಬೆಕೆ೦ದು ಅ೦ದುಕ್ಕೊ೦ಡಿದ್ದೆ. ’ಕಾಲರ್ ಅಪ್ ’ ಮಾಡ್ಕೊಳ್ತಿಯಾ ಅ೦ತ ಬರ್ದಿರ್ಲಿಲ್ಲ. ಇ೦ಥಾದ್ದು ತು೦ಬಾ ಬರಿ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೇಲನೆಂಬ ಭಾರತೀಯ ವಿಜ್ಞಾನಿ
  • ಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿನಾಶ, ಕುತ್ತು! ನಾಶ, ಕುತ್ತು!
  • ಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ
  • ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ನಾಯಿಯೂ
Syndicate content

ಲೇಖಕರು

kishorpatwardhan's picture

ಪರಿಚಯ

ನಾನು ಆಯುರ್ವೇದದ ಮೇಷ್ಟ್ರು.
ವಾರಾಣಸಿಯಲ್ಲಿ ವಾಸ.
ಊರು ಉಜಿರೆ. ಓದಿದ್ದು ಉಜಿರೆ, ಉಡುಪಿ ಮತ್ತು ವಾರಾಣಸಿಗಳಲ್ಲಿ.
ಕನ್ನಡಭಾಷೆ, ಫೋಟೋಗ್ರಾಫಿ, ಚಿತ್ರ ಬರೆಯುವುದು ಇತ್ಯಾದಿಗಳಲ್ಲಿ ಆಸಕ್ತಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator