ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸಂತ ಮೇರಿ ಚರ್ಚ್

May 29, 2007 - 6:51pm — cmariejoseph

ಕ್ರೈಸ್ತಮತದ ಮೇರುವ್ಯಕ್ತಿ ಯೇಸುಕ್ರಿಸ್ತನಿಗೇ ತಾಯಿಯಾದ ಮೇರಿಮಾತೆಯ ಜನನೋತ್ಸವವನ್ನು ಸೆಪ್ಟೆಂಬರ್ ೮ರಂದು ಜಗದಾದ್ಯಂತ ಕಥೋಲಿಕ ಕ್ರೈಸ್ತರು ಅತ್ಯುತ್ಸಾಹದಿಂದ ಆಚರಿಸುತ್ತಾರೆ. ಶಿವಾಜಿನಗರ ಬಸ್ನಿಲ್ದಾಣದ ಬದಿಯಲ್ಲೇ ಇರುವ ಬೆಂಗಳೂರಿನ ಪ್ರಾಚೀನ ಸಂತ ಮೇರಿ ದೇವಾಲಯ ಸೆಪ್ಟೆಂಬರ್ ಮೊದಲ ವಾರದಲ್ಲಿ ಜನಜಾತ್ರೆಯಿಂದ ಗಿಜಿಗುಡುತ್ತದೆ. ಹಬ್ಬಕ್ಕೆ ಮುಂಚಿನ ಎಂಟು ದಿನಗಳಲ್ಲೂ ಭಕ್ತರ ಯಾತ್ರೆ ಇರುತ್ತದೆ. ಇಡೀ ದಿನ ಎಲ್ಲೆಲ್ಲಿಂದಲೋ ಬಂದ ಭಕ್ತರ ಮಹಾಪೂರ ಸಂಜೆಯಾಗುತ್ತಿದ್ದಂತೆಯೇ ಉತ್ತುಂಗಕ್ಕೇರುತ್ತದೆ. ಮೇರಿ ಮಾತೆಗೆ ಹರಕೆಯೊಪ್ಪಿಸಲು ಏನೆಲ್ಲ ವೇಷಗಳು. ಇತ್ತೀಚೆಗಂತೂ ಕಾವಿಯ ಭರಾಟೆ ಜೋರಾಗಿದೆ. ಕಾವಿಯ ಶರ್ಟು ಪೈಜಾಮ, ಕಾವಿಯ ಸೀರೆ, ಕಾವಿಯ ಸೆಲ್ವಾರ್ಕಮಿಜ್ಗಳನ್ನು ತೊಟ್ಟವರ ಸಂಖ್ಯೆ ಬಹಳವಾಗಿದೆ. ಇಷ್ಟಾರ್ಥ ಕೈಗೂಡಲೆಂದೋ, ಕೆಲಸ ಸಿಗಲೆಂದೋ, ಮಕ್ಕಳಾಗಲೆಂದೋ, ಒಟ್ಟಿನಲ್ಲಿ ಯಾವುದೋ ನೆಪದಿಂದ ಜನ ಇಲ್ಲಿ ಧಾವಿಸಿ ಬರುತ್ತಾರೆ. ಮೋಂಬತ್ತಿ ಹಿಡಿದು ಸರತಿ ಸಾಲಿನಲ್ಲಿ ನಿಂತು ಮೇರಿ ಮಾತೆಯ ದರ್ಶನ ಪಡೆಯುತ್ತಾರೆ. ಕೆಲವರು ಉರುಳು ಸೇವೆಯನ್ನೂ ಮಾಡುತ್ತಾರೆ. ಕೆಲವರಂತೂ ಸಮೂಹಸನ್ನಿಗೊಳಗಾದವರಂತೆ ಬಿಕ್ಷುಕರ ಸಾಲಿನಲ್ಲಿ ನಿಂತು ಬಿಕ್ಷೆಯನ್ನೂ ಬೇಡುತ್ತಾರೆ.

ಕ್ರಿಸ್ತಶಕ ೧೬೪೮ರಲ್ಲಿ ಅಂದಿನ ಮೈಸೂರು ದೇಶದ ರಾಜಧಾನಿಯಾದ ಶ್ರೀರಂಗಪಟ್ಟಣಕ್ಕೆ ಕ್ರೈಸ್ತಧರ್ಮ ಕಾಲಿರಿಸಿದಾಗ ಬೆಂಗಳೂರು ಹೇಳಿಕೊಳ್ಳುವಂಥ ದೊಡ್ಡ ಪಟ್ಟಣವೇನೂ ಆಗಿರಲಿಲ್ಲ. ಬೆಂಗಳೂರಿನ ಮೊತ್ತಮೊದಲ ಚರ್ಚ್ ಅನ್ನು ಕಲಾಸಿಪಾಳ್ಯದಲ್ಲಿ ಹೈದರಾಲಿಯ ಕಾಲದಲ್ಲೇ ಅಂದರೆ ಸುಮಾರು ೧೭೨೪-೨೫ರಲ್ಲಿ ಕಟ್ಟಲಾಗಿತ್ತಾದರೂ ಟಿಪ್ಪುವಿನ ಆಳ್ವಿಕೆಯ ಅವಧಿಯಲ್ಲಿ ವಿದೇಶೀ ಪಾದ್ರಿಗಳು ಇಲ್ಲಿರಲು ಹಿಂಜರಿದರು. ಹಾಗಾಗಿ ೧೮ನೇ ಶತಮಾನದ ಮೈಸೂರು ಸೀಮೆಯ ಕ್ರೈಸ್ತ ಸಮುದಾಯದ ಇತಿಹಾಸ ೧೭೯೯ರವರೆಗೆ ಕತ್ತಲಿನಲ್ಲಿದೆ.

ಟಿಪ್ಪುವಿನ ಮರಣಾನಂತರ ಫ್ರೆಂಚ್ ಪಾದ್ರಿ ಅಬ್ಬೆದ್ಯುಬುವಾರವರ ಆಗಮನದೊಂದಿಗೆ ಕ್ರೈಸ್ತಧರ್ಮದ ಪುನರುಜ್ಜೀವನ ಕಾರ್ಯ ನಡೆಯಿತು. ಮೈಸೂರು ಸೀಮೆಯಲ್ಲಿ ಪ್ರಥಮಬಾರಿಗೆ ಸಿಡುಬು ನಿರೋಧಕ ಲಸಿಕೆಯನ್ನು ಪರಿಚಯಿಸಿದ ಅಬ್ಬೆದ್ಯುಬ್ವಾರವರು ಸೋಮನಹಳ್ಳಿ, ಕಾಮನಹಳ್ಳಿ, ಬೇಗೂರು, ಗಂಜಾಂ, ಪಾಲಳ್ಳಿ, ದೋರನಹಳ್ಳಿ, ಗಾರೇನಹಳ್ಳಿ, ಶೆಟ್ಟಿಹಳ್ಳಿ ಮುಂತಾದೆಡೆಗಳಲ್ಲಿದ್ದ ಕ್ರೈಸ್ತ ಗುಡಿಗಳನ್ನು ಸಂದರ್ಶಿಸುತ್ತಿದ್ದರು. ಈ ಸಂದರ್ಭದಲ್ಲಿಯೇ ಅವರು ಬರೆದ ಸಂಶೋಧನಾತ್ಮಕ ಪುಸ್ತಕ Hindu Manners, Customs and Ceremonies ಬೆಳಕು ಕಂಡಿತು. ಅವರ ಪೂಜಾರ್ಪಣೆಯ ವೇಳೆ ಧರಿಸುತ್ತಿದ್ದ ಧಾರ್ಮಿಕ ಉಡುಗೆತೊಡುಗೆಗಳನ್ನು ಪಾಲಳ್ಳಿ ಚರ್ಚಿನಲ್ಲಿ ಇಂದಿಗೂ ಸಂರಕ್ಷಿಸಿಡಲಾಗಿದೆ. ಅವರ ಪ್ರಯತ್ನದಿಂದ ಸುಮಾರು ಕ್ರಿಸ್ತಶಕ ೧೮೦೩ ರಲ್ಲಿ ಇಂದು ಶಿವಾಜಿನಗರ ಎನಿಸಿಕೊಂಡಿರುವ ಬಿಳೇಕಹಳ್ಳಿ (ಬಿಳಿ ಅಕ್ಕಿ ಹಳ್ಳಿ) ಎಂಬ ಪುಟ್ಟ ಊರಿನಲ್ಲಿ ತೆಂಗಿನ ಗರಿಯ ಸೂರು ಹೊದ್ದ ಪುಟ್ಟ ಚರ್ಚೊಂದು ತಲೆಯೆತ್ತಿತು.

೧೮೧೩ರಲ್ಲಿ ಬ್ರಿಟಿಷರು ತಮ್ಮ ನೌಕರರ ಬಳಕೆಗಾಗಿ ಈ ಬಿಳೇಕಹಳ್ಳಿಯ ಚರ್ಚ್ಅನ್ನು ಮೇಲ್ದರ್ಜೆಗೇರಿಸಿದರು. (ಮೇರಿಪ್ರತಿಮೆ ಇದ್ದ ಹಳೆಯ ದೇವಸ್ಥಾನದ ಮುಂಭಾಗದಲ್ಲಿ ಇಂದಿಗೂ '೧೮೧೩' ಎಂದು ಕೆತ್ತಿರುವುದನ್ನು ಕಾಣಬಹುದು). ಅಂದಿನಿಂದ ಆ ಚರ್ಚು Church of our Lady of Purification, Blackpalli ಎಂದು ಕರೆಸಿಕೊಂಡಿತು. ಆ ಸ್ಥಳದಲ್ಲಿ ಬಹುಸಂಖ್ಯೆಯಲ್ಲಿದ್ದ ತಿಗುಳ ಜನಾಂಗಕ್ಕೆ ಸೇರಿದ ಕ್ರೈಸ್ತರು ಬಿಳೇಕಹಳ್ಳಿಯನ್ನು ಬಿಳೇಕಪಳ್ಳಿ ಎನ್ನುತ್ತಿದ್ದರಿಂದಲೂ ಫ್ರೆಂಚ್ ಪಾದ್ರಿಗಳು ಪಾಂಡಿಚೇರಿಯಲ್ಲಿ ತರಬೇತಿ ಪಡೆದು ಬಂದವರಾಗಿದ್ದರಿಂದಲೂ ಅವರು ಬರೆದ ದಾಖಲೆಗಳಲ್ಲಿ ಬ್ಲ್ಯಾಕ್ಪಳ್ಳಿ ಎಂದ ನಮೂದಾಗಿರುವುದು ಸಹಜ. ೧೮೩೨ರಲ್ಲಿ ಜನಾಂಗ ಸಂಘರ್ಷ ನಡೆದು ಚರ್ಚ್ ಕಟ್ಟಡ ನೆಲಸಮವಾಯಿತೆಂದು ದಾಖಲಾಗಿದೆಯಲ್ಲದೆ ೧೮೫೬ರಿಂದ ೧೮೮೨ರವರೆಗೆ ಈ ಚರ್ಚ್ ಅನ್ನು Church of our Lady of Presentation ಎಂದು ಕರೆಯಲಾಗಿದೆ. ಕ್ರೈಸ್ತ ದೀಕ್ಷೆ ಪಡೆದವರ ಕುರಿತು ದಾಖಲಿಸುವ ದಸ್ತಾವೇಜು ೧೮೪೪ರಿಂದೀಚೆಗಿನ ಎಲ್ಲ ಅಂದರೆ ವ್ಯಕ್ತಿಯ ಮೂಲಹೆಸರು, ದೀಕ್ಷೆಯ ನಂತರದ ಹೆಸರು, ಮಾತೃಭಾಷೆ, ಕುಲ, ಅಂತಸ್ತು, ಕಸುಬು, ಮೂಲನೆಲೆ ಹಾಗೂ ಪ್ರಸಕ್ತ ನಿವಾಸಗಳ ವಿವರಗಳನ್ನು ಒಳಗೊಂಡಿದ್ದು ಇಲ್ಲಿನ ಮೂಲನಿವಾಸಿಗಳ ಹಾಗೂ ಅಂದು ಬ್ರಿಟಿಷರೊಂದಿಗೆ ಮದ್ರಾಸಿನಿಂದ ವಲಸೆ ಬಂದು ಅವರ ಅಡಿಗೆಯವರಾಗಿ, ಮಾಲಿಯಾಗಿ, ಸಿಪಾಯಿಯಾಗಿ ಚೇರಿಗಳಲ್ಲೋ ಬ್ಯಾರಕುಗಳಲ್ಲೋ ವಾಸವಿದ್ದವರ ವಿವರವನ್ನು ನೀಡುತ್ತದೆ.

ಫಾದರ್ ಕ್ಲೈನರ್ ಎಂಬುವರು ೧೮೭೫-೮೨ರ ಅವಧಿಯಲ್ಲಿ ಈಗಿರುವ ಭವ್ಯ ಚರ್ಚ್ ಅನ್ನು ಕಟ್ಟಿದರು. ಇದು ಬೆಂಗಳೂರಿನ ಮೊತ್ತಮೊದಲ ಗೋಥಿಕ್ ಶೈಲಿಯ ಚರ್ಚ್ ಆಗಿದ್ದು ಒಳಗಿನ ಕಂಬಗಳಲ್ಲಿ ದ್ರಾಕ್ಷಾಬಳ್ಳಿಯ ಉಬ್ಬು ಚಿತ್ತಾರವಿದೆ. ಪೂಜಾಪೀಠದ ಹಿಂದಿನ ಗೋಡೆಯಲ್ಲಿ ತಂದೆತಾಯಿಯರೊಂದಿಗೆ ಕ್ರಿಸ್ತನಿರುವ ವರ್ಣಸಂಯೋಜನೆಯ ಗಾಜಿನ ಫಲಕವಿದೆ. ಚರ್ಚ್ ಶಿಲುಬೆಯಾಕಾರದ ನೆಲಗಟ್ಟಿನಲ್ಲಿದ್ದು ಪೀಠದ ಎದುರಿನ ಅಂಕಣ ನಿಮ್ನ ವರ್ಗದವರಿಗೂ, ಅಡ್ಡರೆಕ್ಕೆಗಳು ಮೇಲ್ವರ್ಗದವರಿಗೂ ವಿದೇಶೀಯರಿಗೂ ಸ್ಥಾನ ಕಲ್ಪಿಸುತ್ತಿದ್ದವು. ೧೮೮೨ನೇ ಡಿಸೆಂಬರ್ ತಿಂಗಳ ೮ ನೇ ತಾರೀಕು ಪ್ರತಿಷ್ಠಾಪನೆ ಮಾಡಲಾದ ಈ ಚರ್ಚ್ಗೆ Church dedicated to the nativity of our Lady ಎಂದು ಹೆಸರಾಯಿತು.

ಅಂದು ಇಟಲಿ ದೇಶದಿಂದ ತರಿಸಿ ಸ್ಥಾಪಿಸಿದ ಮೇರಿಮಾತೆಯ ಸುಂದರ ಪ್ರತಿಮೆಯೇ ಇಂದು ಕ್ರೈಸ್ತರನ್ನು ದೇಶದೆಲ್ಲೆಡೆಯಿಂದ ಕೈಬೀಸಿ ಕರೆಯುತ್ತಿರುವ, ಅವರ ಇಷ್ಟಾರ್ಥಗಳನ್ನು ಈಡೇರಿಸುವ ಅತ್ಯಾಕರ್ಷಕವಾದ ಪವಾಡಪ್ರತಿಮೆ. ಮೂಲ ಪ್ರತಿಮೆಯಲ್ಲಿ ಮೇರಿಯ ಸೌಂದರ್ಯ ಇಟಾಲಿಯನ್ ದಿರುಸಿನಲ್ಲಿ ಕಂಗೊಳಿಸುತ್ತಿದ್ದರೆ ಇಂದು ಆಕೆ ಭಾರತನಾರಿಯ ಸಲ್ಲಕ್ಷಣ ಉಡುಪಾದ ಸೀರೆಯನ್ನುಟ್ಟು ನಯನ ಮನೋಹರವಾಗಿ ನಿಂತಿದ್ದಾಳೆ. ಆಕೆ ಎಡ ತೋಳಲ್ಲಿ ಹಸನ್ಮುಖಿ ಬಾಲಕ ಯೇಸು ವಿರಾಜಮಾನನಾಗಿದ್ದಾನೆ. ಭಕ್ತಾದಿಗಳು ಅರ್ಪಿಸಿದ ಬಂಗಾರದಿಂದ ತಯಾರು ಮಾಡಲಾದ ಕಿರೀಟಗಳು ಇವರಿಬ್ಬರ ತಲೆಗಳನ್ನು ಅಲಂಕರಿಸಿವೆ. ಮೇರಿ ಮಾತೆಯ ಬಲಗೈಯಲ್ಲಿ ಐವತ್ಮೂರು ಮಣಿಗಳ ಜಪಮಾಲೆ ತೂಗುತ್ತಿದೆ. ಭಕ್ತರು ಎಷ್ಟೇ ಪಾಪಿಷ್ಟರಾದರೂ ದೇವರ ಶಿಕ್ಷೆಗೆ ಗುರಿಯಾಗದಂತೆ ಈ ಮಮತಾಮಯಿ ತಾಯಿ ಉದ್ಧರಿಸುತ್ತಾಳೆಂದು ಭಾವಿಸಲಾಗುತ್ತದೆ. ಅಲ್ಲದೆ ಮೇರಿ ಮಾತೆ ಶುಭಪ್ರಸನ್ನಳಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ದಯಪಾಲಿಸುತ್ತಾಳೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಆಕೆಯನ್ನು ಆರೋಗ್ಯಮಾತೆ ಎಂದು ಗೌರವಿಸುತ್ತಾರೆ. ತಮ್ಮ ಪ್ರೀತಿ ಗೌರವ ಮತ್ತು ಭರವಸೆಗಳ ಪ್ರತೀಕವಾಗಿ ಮೇಣದ ಬತ್ತಿಗಳನ್ನು ಉರಿಸುತ್ತಾ ಪ್ರಾರ್ಥನೆ ಮಾಡುತ್ತಾ ಹೂಗಳನ್ನು ಅರ್ಪಿಸುತ್ತಾರೆ.

ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾದ ಈ ಸಂತ ಮೇರಿ ಚರ್ಚ್ ೧೯೭೩ರಲ್ಲಿ Church of our Lady of health ಎಂಬ ಹೆಸರು ಪಡೆದಿದೆಯಲ್ಲದೆ ತನ್ನ ಪ್ರಸಿದ್ಧಿಯ ಕಾರಣ ಕ್ರೈಸ್ತ ಜಗದ್ಗುರುಪೀಠದಿಂದ Basilica (ಮಹಾದೇವಾಲಯ) ಎಂಬ ಬಿರುದಿಗೆ ಪಾತ್ರವಾಗಿದೆ.

  • ಸ್ಥಳ ಮಹಿಮೆ, ಪುರಾಣ
~.~
  • Login or register to post comments
  • 386 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 29, 2007 - 8:08pm — mahesha

ಉ: ಸಂತ ಮೇರಿ ಚರ್ಚ್

mahesha's picture

ಒನ್ ಡೌಟ್...

ಮೇರಿ ಹೆಂಗಸಲ್ವಾ!! ಹಾಗಾದರೆ "ಸಂತ ಮೇರಿ" ಅಂತ ಹೇಗೆ ಆಗುವುದು, 'ಸಂತ' ಅಂದರೆ ಗಂಡಸಲ್ವಾ?!!

'ಸಂತ' ಅಂತ ಸಿನಿಮ ಕೂಡ ಬಂತೈತೆ Smiling

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 29, 2007 - 8:19pm — ASHOKKUMAR

ಉ: ಸಂತ ಮೇರಿ ಚರ್ಚ್

ASHOKKUMAR's picture

saintಗೆ ಕನ್ನಡ ಪದ ಸಂತ.
ಗಂಡು/ಹೆಣ್ಣು ಯಾರಿಗೂ ಇದನ್ನು ಬಳಸಲು ಬರೋದಿಲ್ಲವೇ? (gender neutral)
ರಾಷ್ಟ್ರಪತಿ ಸ್ಥಾನಕ್ಕೆ ಮಹಿಳೆ ಬಂದರೆ ರಾಷ್ಟ್ರಪತ್ನಿ ಎನ್ನಲಾಗದು.ಅಧ್ಯಕ್ಷೆ ಎನ್ನುವ ಅಯ್ಕೆ ಇದೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 30, 2007 - 10:01am — ಸಂಗನಗೌಡ

ಉ: ಸಂತ ಮೇರಿ ಚರ್ಚ್

ಸಂಗನಗೌಡ's picture

ಹೆಂಗಸು presidentಆದರೆ, 'ರಾಷ್ಟ್ರಪತ್ನಿ' ಅನಬಹುದೇ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 30, 2007 - 11:15am — mahesha

ಉ: ಸಂತ ಮೇರಿ ಚರ್ಚ್

mahesha's picture

ಹೆಂಗಸು president ಆದ್ರೆ ಅವಳರನ್ನು president ಎಂದೇ ಅನ್ನಬೋದು!! ಬೇರೆ ಹೆಸರೇ ಬೇಡ Smiling
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 29, 2007 - 8:51pm — ವೈಭವ

ಉ: ಸಂತ ಮೇರಿ ಚರ್ಚ್

ವೈಭವ's picture

ಹೌದು.

ಆದರೆ ಅಮೆರಿಕೆಯಲ್ಲಿ ಸಂತ - ಸ್ತ್ರೀಲಿಂಗ, ಸ್ಯಾನ್ -ಪುಲ್ಲಿಂಗ

ಉದಾ: ಸಂತ ಕ್ಲಾರ, ಇಲ್ಲಿ 'ಕ್ಲಾರ' ಹೆಂಗಸು
ಸ್ಯಾನ್ ಒಸೆ, ಇಲ್ಲಿ 'ಒಸೆ' ಗಂಡಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 30, 2007 - 10:16am — muralihr

ಉ: ಸಂತ ಮೇರಿ ಚರ್ಚ್

muralihr's picture

ಸ೦ತಿ ಅನ್ನಿ ಅಥ್ವಾ ಸ೦ತೇ ಅನ್ನಿ..ಅದೂ ಬೇಡಾ ಅ೦ದರೆ ಹೊಸ ಪದವನ್ನು ಕ೦ಡು ಹಿಡಿಯಿರಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 30, 2007 - 10:58am — anivaasi

ಉ: ಸಂತ ಮೇರಿ ಚರ್ಚ್

anivaasi's picture

ಸೈಂಟ್ ಜೋಸೆಫ್, ಸೈಂಟ್ ಲೂಯಿ, ಸೈಂಟ್ ಮ್ಯಾಥ್ಯೂ ಎಲ್ಲ ಗಂಡಸರಲ್ಲ!
ಸೈಂಟ್ ಕ್ಲೈರ್, ಸೈಂಟ್ ಅಗ್ನೆಸ್ ಹೆಂಗಸರಲ್ಲ! ಸೈಂಟ್ ಪದಕ್ಕೆ ಲಿಂಗವಿಲ್ಲ ಅಂದುಕೊಂಡಿದ್ದೆ.
ಸಾನ್ ಎನ್ನುವುದು ಸೈಂಟ್ ಪದದ ಮೆಕ್ಸಿಕನ್ ರೂಪ ಅಂದುಕೊಂಡಿದ್ದೆ. ಅದಕ್ಕೆ ಅಮೇರಿಕದ ದಕ್ಶಿಣಕ್ಕೆ ಮೆಕ್ಸಿಕನ್ ಗಡಿಯ ಹತ್ತಿರದ ಊರುಗಳಿಗೆ ಸಾನ್ ಬಳಕೆ ಇದೆಯಲ್ಲವೇ?
ಅಂದ ಹಾಗೆ, ಮೆಕ್ಸಿಕನ್ನರು ಒಳಗೆ ತೂರುತ್ತಿದ್ದಾರೆ ಎಂಬ ಬೊಬ್ಬೆ ಕೇಳುವಾಗ ಆ ಊರುಗಳು ಮೆಕ್ಸಿಕನ್ ಜನರದೇ ಅಲ್ಲವ ಅನಿಸಿತ್ತು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿತ್ರಕಲ್ಲು ದುರ್ಗದ ಮಾತೆ Chitrakalludurga Lady
  • ಕನ್ನಡನಾಡಿಗೆ ಕ್ರಿಸ್ತನಾಗಮನ
  • ಹಾರೋಬೆಲೆ
  • ಡೋರನಹಳ್ಳಿ ಜಾತ್ರೆ
  • ಪೂರ್ವದೇಶದ ಕಪ್ಪುಕ್ರಿಸ್ತ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator