ಡೀ.. ಡೀ...ಡಿಚ್ಚಿ...
ಡೀ.. ಡೀ...ಡಿಚ್ಚಿ...
ಡೀ.. ಡೀ...ಡಿಚ್ಚಿ...
ಎಂದು ಡಿಚ್ಚಿ ಹೊಡಿಯುತಿದ್ದ...
'ನೋ ಪಾರ್ಕಿಂಗ್' ಎಂಬ ಫಲಕದ ಕೆಳಗೇ ಪಾರ್ಕ್ ಮಾಡಿದ್ದ
ಕಾರಿನ ಕಿಟಕಿ ಗಾಜಿಗೆ.
ಆಡಲು, ಹಾಡಲು, ಆಡಾಡಿ....ಉಂಡು ಮಲಗಲು
ದಿಕ್ಕು ದಿಸೆ ಇಲ್ಲದ, ನನ್ನವರು ಎಂಬುವರಿಲ್ಲದ ಚಿಣ್ಣಗೆ
ಡಿಚ್ಚಿ ಹೊಡೆಯಲು ಯಾರು ಸಿಕ್ಕಾರು?
ಅನಾಥರಿಗೆ ಅನಾಥರೇ ದಿಕ್ಕು
ಆದರೆ
ಇವಗೆ ಇವನ ಪ್ರತಿರೂಪವೇ ದಿಕ್ಕು.
-ಸಂಕೇತ್ ಗುರುದತ್ತ

- Login or register to post comments
- 579 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: