ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಹೀಗೊಂದು ಬಿಟ್ಟಿ ಕೂಳಿನ ಪ್ರಸಂಗ

May 31, 2007 - 12:49pm — kavitha

ಎರಡು ವರುಷಗಳಿಂದ, ನಾವು ಬಾಡಿಗೆಗಿರುವ ಮನೆಯ ಮಾಲಿಕನ 6 ವರುಷದ ಮಗಳು ಸತತವಾಗಿ ಮನೆಯ ಪಕ್ಕದಲ್ಲೇ ಇರುವ ಮದುವೆ ಛತ್ರಕ್ಕೆ ಸರಿಯಾಗಿ ಊಟದ ವೇಳೆಗೆ ಭೇಟಿ ನೀಡುತ್ತಿದ್ದುದು, ಅವಳು ಸುಂದರವಾಗಿ ಅಲಂಕರಿಸಿಕೊಂಡು ನಮಗೆ ತಿಳಿಯದಂತೆ ಕಳ್ಳ ಬೆಕ್ಕಿನ ಹಾಗೆ ಮೆಲ್ಲಗೆ ಹೆಜ್ಜೆ ಹಾಕುತಿದ್ದುದು ನಿಜಕ್ಕೂ ಸಖತ್ ಮಜ ನೀಡುತ್ತಿತ್ತು. ಕಾಲೇಜಿನ ಪ್ರಾಧ್ಯಪಕರ, ಅನುಕೂಲಸ್ಥ ಮನೆತನದ ಮಗಳೊಬ್ಬಳು ಈ ರೀತಿ ಜಾತಕ ಪಕ್ಷಿಯ ಹಾಗೆ ಬಿಟ್ಟಿ ಕೂಳಿಗೆ ಹಾತೊರೆಯುವುದು ನಿಜಕ್ಕೂ ನಾಚೀಕೆಗೇಡು. ಇದನ್ನೆಲ್ಲ ಗಮನಿಸುತ್ತಿದ್ದ ನಮ್ಮ ಮನೆಯವರು, ಹೇಗಾದರು ಮಾಡಿ ನಮಗೆ ವಿಷಯ ತಿಳಿದಿದೆಯೆಂದು ಗೊತ್ತುಪಡಿಸಲೋಸುಗ, ರಾತ್ರಿ ಎಂಟು ಗಂಟೆಗೆ ಮನೆಯ ಮುಂದಿನ ಅಂಗಳದ ದೀಪ ಹಾಕಿ, ಅಲ್ಲೇ ಎಲ್ಲರು ಹರಟೆ ಹೊಡೆಯುತ್ತ ಕುಳಿತುಕೊಳ್ಳುವ ಪ್ಲಾನ್ ಮಾಡಿದರು, ಹಾಗೇಯೆ, ನಾವೆಲ್ಲಾ ಆ ಹುಡುಗಿಯ ದಾರಿ ಕಾಯುತ್ತ ಕುಳಿತೆವು. 7.30ಕ್ಕೆ ದಿಬ್ಬಣ ಬಂತು, ಗಂಡಿನ ಮೆರವಣಿಗೆ ಛತ್ರದ ಒಳಗೆ ನೆಂಟರಿಷ್ಟರೊಂದಿಗೆ ದಾಂಗುಡಿ ಇಟ್ಟಾಯಿತು. ಹೆಣ್ಣಿನ ಕಡೆಯವರು ಧಾವಂತದಲ್ಲಿ ವರನ ಕಡೆಯವರಿಗೆ ಕುಡಿಯಲು ಜ್ಯೂಸ್ ಕೊಟ್ಟಾಯಿತು. ಇದನ್ನೆಲ್ಲಾ ಮಹಡಿ ಮನೆಯಿಂದ ಆ ಹುಡುಗಿ ಗಮನಿಸರಬೇಕು. ಇನ್ನೇನೂ ಊಟ ಪ್ರಾರಂಭವಾಗುತ್ತದೆ ಅನ್ನೋ ಸೂಚನೆ ದೊರೆತೊಡನೆ, ಹೊರಡಲುನುವಾದ ಹುಡುಗಿಗೆ ಪಾಪ, ಕೆಳಗೆ ನಾವು ಪೋಲಿಸರಂತೆ ಹೊಂಚು ಹಾಕಿ ಕುಳಿತಿರುವುದರ ಬಗ್ಗೆ ಲವ-ಲೇಷವೂ ತಿಳಿದಿರಲಿಕ್ಕಿಲ್ಲ. ಗಂಡಿನ ಕಡೆಯವರ ಹಾಗೆ ಠಾಕು ಠೀಕಾಗಿ ಮೆಟ್ಟಿಲುಗಳ ಮೇಲೆ ಮೆಲ್ಲಗೆ ಹೆಜ್ಜೆ ಹಾಕಿ, ಕೆಳಗೆ ಇಣುಕಿದಳು. ನಮ್ಮ ಮನೆಯ ಅಂಗಳದ ದೀಪ ಉರಿಯುತ್ತಿರುವುದನ್ನು ಕಂಡು, ಅಲ್ಲೇ ಕೆಲ ಕ್ಷಣ ನಿಂತಳು. ನಾವು ಆ ರಾತ್ರಿ 10 ಗಂಟೆಯವರೆಗೆ ಹೊರಗೆ ಕುಳಿತ್ತಿದ್ದೆವು. ಆಕೆ ಮಾತ್ರ ಕೆಳಗೆ ಇಳಿಯಲೇ ಇಲ್ಲ. ನಮ್ಮ ಮನೆಯವರು, ಏನೋ ಸಾಧೀಸಿದ ಹಾಗೆ, ಬೀಗುತ್ತಿದ್ದರು. ಇನ್ನೆನೂ ಆ ಹುಡುಗಿಗೆ ಮನೆಯ ಊಟವೇ ಗತಿ ಎಂದು ಕುಹಕವಾಡಿಕೊಂಡು ನಾವಿಲ್ಲರೂ ಮನೆಯ ಒಳಗೆ ಹೊರೆಟಿವು. 5 ನಿಮಿಷಗಳ ನಂತರ, ಗೇಟಿನ ಸದ್ದಿಗೆ, ಹೊರಗೋಡಿ ನೋಡಿದರೆ ಆ ಹುಡುಗಿ ಓಡಿ ಹೋಗುತ್ತಿದ್ದು ಕಂಡು ಬಂತು. ಕೊನೆಗೂ ಬಿಟ್ಟಿ ಕೂಳಿನ ಖಯಾಲಿ, ಬಾಯಿ ಚಪಲವೇ ಗೆದ್ದಿತು.

ಮನೆಯ ಆಸುಪಾಸಿನಲ್ಲಿ, ಯಾವುದೇ ಸಮಾರಂಭಗಳಲ್ಲಿ, ಊಟದ ವ್ಯವಸ್ಥೆಯಿದ್ದರು, ಈ ಹುಡುಗಿಯ ಹಾಜರಿ ತಪ್ಪುತ್ತಿರಲಿಲ್ಲ.

ಇತ್ತೀಚೆಗೆ, ಒಂದು ಸಮಾರಂಭ ನಡೆಯಿತು, ಒಂದು ಪಂಗಡದವರು ಅವರ ಜಾತೀಯವರಿಗೆ ಕಮಿಟಿ ಒತಿಯಿಂದ ಕೂಟವೊಂದನ್ನು ಆಯೋಜಿಸಿದ್ದರು, ಅಲ್ಲಿ ಊಟದ ವ್ಯವಸ್ಥೆಯಿತ್ತು. ಎಂದಿನಂತೆ ಆ ಹುಡುಗಿ ಹೊರಟು ನಿಂತಳು. ಈಗೆಲ್ಲಾ ನಾವು ನೋಡುತ್ತೇವೆಂಬ ಬಯವಿಲ್ಲ. ರಾಜರೋಷವಾಗಿ ನಮ್ಮ ಮುಂದೇಯೆ ಹೊರಟಿದ್ದಾಯಿತು. ಆದರೆ, ಪಾಪ ತಟ್ಟೆಯಿಲ್ಲ ಎಂದು, ವಾಪಸು ಬಂದು ತಟ್ಟೆ ತೆಗೆದು ಕೊಂಡು ಹೋದಳು, ಅಷ್ಟೊತ್ತಿಗೆ ಊಟ ಖಾಲಿ. ಹಲ್ಲಿ ಲೊಚುಗುಟ್ಟುವ ಹಾಗೇ ಲೊಚುಗುಟ್ಟುತ್ತ ಹ್ಯಾಪ್ ಮೊರೆ ಹಾಕಿಕೊಂಡು ಹಿಂದಿರುಗಿದಳು. ಇದನ್ನೆಲ್ಲಾ ನೋಡುತ್ತಿದ್ದ ನಾವು ಹೀಗೂ, ಉಳ್ಳವರು ತಮ್ಮ ಮಕ್ಕಳನ್ನು ಬಿಟ್ಟಿ ಊಟಕ್ಕೆ ಕಳುಹಿಸಿ ಉಳಿಸುವುದುಂಟ ಅಂದುಕೊಂಡೆವು.

--- ಕವಿತ ಪ್ರಶಾಂತ ----

  • ಅನುಭವ ಕಥನ
~.~
  • Login or register to post comments
  • 447 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2007 - 6:45pm — Aravinda

ಉ: ಹೀಗೊಂದು ಬಿಟ್ಟಿ ಕೂಳಿನ ಪ್ರಸಂಗ

Aravinda's picture

ಅಬ್ಬಾ ಹೀಗೂ ಆಗುತ್ತದಾ... ಆದರೆ ಒಮ್ಮೆ ನನಗೆ ಆ ಹುಡುಗಿಯ ಭವಿಷ್ಯದ ಯೋಚನೆ ಆಯ್ತು.

ಧನ್ಯವಾದಗಳೊಂದಿಗೆ
ಅರವಿಂದ
http://www.belaku.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2007 - 3:50pm — shivannakc

ಉ: ಹೀಗೊಂದು ಬಿಟ್ಟಿ ಕೂಳಿನ ಪ್ರಸಂಗ

shivannakc's picture

ಕವಿತಾರವರೇ!

ನಿಮ್ಮ "ಬಿಟ್ಟಿ ಕೂಳಿನ ಪ್ರಸಂಗ"ಕ್ಕೆ ಮರುಕವಾಯಿತು...!

ಇರಲಿ... ನೀವೇ ಹೇಳಿದಾಗೆ... ಆಕೆಗಿನ್ನೂ ಬರಿ ಆರೇ ವರ್ಷ ಅಂದ್ರೆ Just 6 years.

ಆಕೆ ಹಾಗೆ ನಡೆದುಕೊಳ್ಳಲು ಕೆಲವು ಕಾರಣಗಳಿರಬಹುದು...!

Sweats ಬಗ್ಗೆನೋ, ರುಚಿಕರ ತಿಂಡಿ-ತಿನಿಸುಗಳ ಬಗ್ಗೆನೋ... ...!

ಆದೇನೇ ಇರಲಿ... ಆ ಮಗುನಾ... ಅಷ್ಟೊಂದು ವಿಶೇಷವಾಗಿ ನೀವು ಮತ್ತು ಮನೆಯವರೂ ಗಮನಿಸಿರುವುದು ಕುತೂಹಲಕಾರಿ.

ಅಷ್ಟಕ್ಕೂ ಮದುವೆ-ಇತ್ಯಾದಿ ಸಮಾರಂಭಗಳಲ್ಲಿ ಯಾರೂ ಒಂದು ಮಗುವಿನ ಊಟದ ಬಗ್ಗೆ ಗಮನವಿಡೋದಿಲ್ಲ ಬಿಡಿ..!

ನೀವ್ ಬಳ್ಸಿರೋ ಕೆಲವು ಪದಗಳು ಅದರಲ್ಲೂ.... ಬಿಟ್ಟಿ ಕೂಳಿನ ಖಯಾಲಿ, ಬಾಯಿ ಚಪಲ ಇತ್ಯಾದಿಗಳನ್ನು ಗಮನಿಸಿದರೆ... ತಾವು ತಮ್ಮ ಮನೆ ಮಾಲೀಕರ ಹಾಗೂ ಅವರ ಪುಟ್ಟ ಮಗಳ ಬಗ್ಗೆ ಒಳ್ಳೆ ಅಭಿಪ್ರಾಯವಿಲ್ಲವೆಂದು ತೋರುತ್ತದೆ.

ತಮ್ಮ ಬರವಣಿಗೆಯನ್ನು ಹೆಚ್ಚಾಗಿ ಒಳ್ಳೆಯದರ ಕಡೆ ತಿರುಗಿಸಿ... ಬರಹದಲ್ಲಿ ಉತ್ತಮ ಪ್ರಭುತ್ವ ಬರಬಹುದು...!

ಬಿಂಕ: "ಇರೋದ್ ಇದ್ದಂಗ್ ಹೇಳಿದ್ರ .. ಎದ್ ಬಂದು ಎದೆಗೆ ಒದ್ದಂಗಂತೆ"

"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!
  • ಪದಬೆಳಗು: ಕಳ್ಳಕುಬಸ
  • ಹೆಣ್ತನಕ್ಕೆ ನಮನ
  • ಸ್ಮರಣೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ: ತೇಜಸ್ವಿಯವರ ಮನೆಯ ಪಕ್ಕದಲ್ಲೊಂದು ಕೆರೆ
  • ತಾಯ್ತನದ ಹಿರಿಮೆ !
Syndicate content

ಲೇಖಕರು

kavitha's picture

ಪರಿಚಯ

ಹವ್ಯಾಸಿ ಬರಹಗಾರ್ತಿ, ಪತ್ರಿಕಾ ಕಛೇರಿಯಲ್ಲಿ ಉದ್ಯೋಗಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator