ತರಲೆ ಪ್ರಶ್ನೆಗಳು
ತುಂಬ ಹಿಂದೆ, ಅಂದರೆ ನಾನು ತೈವಾನಿನಲ್ಲಿದ್ದಾಗ, ನಾನು ಜಾಲಿಗನಾದ ಆರಂಭದ ದಿನಗಳಲ್ಲಿ, soc.culture.indian.karnatakaದಲ್ಲಿ ತರಲೆ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದೆ. ಅವು ತುಂಬ ಜನಪ್ರಿಯವೂ ಆಗಿದ್ದವು. ಅದನ್ನೇ ಮತ್ತೆ ನನ್ನ ವಿಶ್ವಕನ್ನಡದಲ್ಲೂ ಮುಂದುವರಿಸಿದೆ. ಅವುಗಳನ್ನು ಓದಿದವರಿಗೆ ತರಲೆ ಪ್ರಶ್ನೆಗಳ ಪರಿಚಯವಿರಬಹುದು. ಒಂದು ಉದಾಹರಣೆ-
ಪ್ರ: ಕೋಳಿ ಯಾಕೆ ಮೊಟ್ಟೆ ಇಡುತ್ತದೆ?
ಉ: ಯಾಕೆಂದರೆ ಹಾಕಿದರೆ ಒಡೆಯುತ್ತದೆ, ಅದಕ್ಕೆ
ಈಗ ಕೆಲವು ಪ್ರಶ್ನೆಗಳು:
1. ಕೋಳಿ ಮೊದಲೋ, ಮೊಟ್ಟೆ ಮೊದಲೋ?
2. ಝಿಬ್ರಾ ಎನ್ನುವುದು ಬಿಳೀ ಪಟ್ಟಿಗಳುಳ್ಳ ಕಪ್ಪು ಪ್ರಾಣಿಯೋ, ಕಪ್ಪು ಪಟ್ಟಿಗಳುಳ್ಳ ಬಿಳಿ ಪ್ರಾಣಿಯೋ?
3. ಸಾವಿರಾರು ಕಿ.ಮೀ. ದೂರದಿಂದ ಹಕ್ಕಿಗಳು ರಂಗನತಿಟ್ಟಿಗೆ ಹಾರಿಕೊಂಡು ಬರುವುದು ಯಾಕೆ?
4. ಮೊಟ್ಟೆಯೊಂದನ್ನು ಕಾಂಕ್ರೀಟ್ ನೆಲಕ್ಕೆ ಅದನ್ನು ಒಟೆಯದಂತೆ ಬೀಳಿಸುವುದು ಹೇಗೆ?
5. ಕೆಂಪು ಸಮುದ್ರಕ್ಕೆ ಹಸಿರು ಕಲ್ಲು ಹಾಕಿದರೆ ಏನಾಗುತ್ತದೆ?
ನಿಮ್ಮ ಉತ್ತರಗಳನ್ನು ದಾಖಲಿಸಿ. ಈ ಪ್ರರ್ಶನಗೆಳಿಗೆ ಇವೇ ಸರಿ ಉತ್ತರ ಎಂಬ ಕಾನೂನೇನಿಲ್ಲ.
ಸಿಗೋಣ,
ಪವನಜ

- Login or register to post comments
- 879 hits
- Email this page





RSS:
ಪ್ರತಿಕ್ರಿಯೆಗಳು
ತರಲೆ ಉತ್ತರಗಳು
೧. ಈ ಪ್ರಶ್ನೆಗಳನ್ನು ಹುಟ್ಟಿಸಿಕೊಂಡ ಮನುಷ್ಯ ಮೊದಲು
೨. ಕಪ್ಪು ಬಿಳಿ ಪಟ್ಟೆಗಳನ್ನುಳ್ಳ ಬ್ರಾ ಧರಿಸಿದ ಝೀ ಎಂಬ ಹೆಣ್ಣು
೩. ಅವು ಅಲ್ಲೇ ಪಕ್ಕದ ಮಂಗನ ಬೆಟ್ಟು ಊರಿನವು, ಬೇಸಗೆ ರಜಕ್ಕೆ ವರ್ಲ್ಡ್ ಟೂರ್ ಹೋಗಿದ್ದವು ವಾಪಸ್ಸು ಬರುತ್ತವೆ ಅಷ್ಟೆ.
೪. ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ನೂರೈವತ್ತು ಕೆಜಿ ಸ್ಪಂಜಿನ ನಡುವೆ ಕ್ಷೇಮವಾಗಿ ಪ್ಯಾಕು ಮಾಡಿ, ಕಾಂಕ್ರೀಟ್ ನೆಲದ ಮೇಲೆ ಏಳು ದಪ್ಪ ಹಾಸಿಗೆಗಳನ್ನು ಹಾಸಿ, ಕ್ರೇನಿನ ಸಹಾಯದಿಂದ ಗಂಟೆಗೆ ಒಂದು ಇಂಚಿನಂತೆ ಮೆಲ್ಲಗೆ ಇಳಿಸುವುದು. ಇದಕ್ಕೆ ತಗಲುವ ಖರ್ಚು ೩ ಲಕ್ಷದ ನಾಲ್ಕು ಸಾವಿರದ ಮುನ್ನೂರ ಇಪ್ಪತ್ತೆರಡು ರುಪಾಯಿ. ಕಂಟ್ರಾಕ್ಟ್ ವಹಿಸಿಕೊಳ್ಳಲು ನನ್ನನ್ನು ಸಂಪರ್ಕಿಸಿ.
೫. ಹಂಪಿಯ ಕಲ್ಲಿನ ಕೋಳಿ ಕೂಗಿ ಪ್ರಳಯವಾಗುತ್ತದೆ. ಪರಸ್ಪರ ವಿರುದ್ಧ ಸಂಗತಿಗಳನ್ನು ಒಂದುಮಾಡುವುದುಂಟೇ ಪವನಜರೇ?
ಇನ್ನೊಂದು ತರಲೆ ಪ್ರಶ್ನೆ
ಸಾರಿಗೆ ಉಪ್ಪು ಕಡಮೆಯಾದರೆ ಉಪ್ಪಿಗೆ ಏನು ಹಾಕಬೇಕು?
ಕೈ
ಸಾರಿಗೆ ಉಪ್ಪು ಕಡಿಮೆಯಾದರೆ ಉಪ್ಪಿಗೆ ಕೈ ಹಾಕಬೇಕು. ಚಮಚವೂ ಆಗಬಹುದು.
ಸಿಗೋಣ,
ಪವನಜ
-----------
Think globally, Act locally
ಕಾಯಿ
ಉಪ್ಪಿಗೆ ಕಾಯಿ ಹಾಕಬೇಕು
೦೦೦
ತವಿಶ್ರೀನಿವಾಸ
ಉಪ್ಪಿ
'ಉಪ್ಪಿ'ಗೆ ಉಪ್ಪು ಕಡಿಮೆಯಾದ್ರೂ ನಡ್ದೀತು... ಆದ್ರೆ ಖಾರ ಕಡಿಮೆ ಆಗಬಾರದು. ಮುಂದಿನ ಸಿನಿಮಾದಲ್ಲಿ ಸಿಡುಗುಟ್ಟೋ ಪಾತ್ರ ಮಾಡೋವಾಗ ಕಷ್ಟ ಆಗುತ್ತೆ!
--
"ಹೊಸ ಚಿಗುರು, ಹಳೆ ಬೇರು"
ನನ್ನ ತರಲೆ
೧) ಮೊದಲು ಮೊಟ್ಟೆ - ಅದು ಕುದುರೆಯದೋ ಕತ್ತೆಯದೋ ಆಗಿದ್ದಿತು. ಆ ಪ್ರಾಣಿಗಳು ಮರಿ ಹಾಕಲು ಪ್ರಾರಂಭಿಸಿದ ಮೇಲೆ ಮೊಟ್ಟಿಯನ್ನು ಕೋಳಿಗೆ ಕೊಟ್ಟಿದ್ದು.
೨) ಝೀಬ್ರಾ ಕಪ್ಪು ಬಣ್ಣದ ಬಿಳಿ ಪಟ್ಟೆಯ ಪ್ರಾಣಿ. ಮೊದಲು ಅದು ಪೂರ್ಣವಾಗಿ ಕಪ್ಪಿದ್ದಿತು. ರಸ್ತೆಯ ಝೀಬ್ರಾ ಕ್ರಾಸಿಂಗ್ ಮೇಲೆ ಹೊರಳಾಡಿ ಬಿಳಿ ಪಟ್ಟೆಯಿಂದ ಬಣ್ಣವನ್ನು ಪಡೆಯಿತು.
೩) ರಂಗನತಿಟ್ಟಿನಲ್ಲಿ ಅಪರ ಕರ್ಮದ ತಿಂಡಿಗಳು ಸಿಗುತ್ತವಂತೆ. ಅದರ ರುಚಿಗಾಗಿ ಹಕ್ಕಿಗಳು ಬರುತ್ತವೆ, ಅಂತೆ.
೪) ಮೊಟ್ಟೆಯನ್ನು ಮೇಲಕ್ಕೆಸೆದು ಸ್ವಲ್ಪ ಕಾವು ಕೊಟ್ಟರೆ, ಮೊಟ್ಟೆ ಕೆಳಗೆ ಬೀಳೋದಿಲ್ಲ, ಅದು ಮರಿಯಾಗಿ ಕೆಳಗೆ ಬರುವುದು.
೫) ಕೆಂಪು ಸಮುದ್ರಕ್ಕೆ ಹಸುರು ಕಲ್ಲು ಹಾಕಿದರೆ ಪಾಚಿ ಕಟ್ಟುವುದಿಲ್ಲ.
===
ತವಿಶ್ರೀನಿವಾಸ
ಮತ್ತಷ್ಟು ತರಲೆ
'ಕೋಮೊಟ್ಟೆ' ಎನ್ನೋ ಪ್ರಾಣಿ ಮೊದಲು ಹುಟ್ಟಿತಂತೆ. ಅದರ ಡೆಸೆಂಡೆಂಟ್ಸ್ ಇವೆರಡು.
ಅಯ್ಯೋ, ಎಲ್ಲೋ ಬ್ಲಾಕ್ ಎಂಡ್ ವ್ಹೈಟ್ ಟಿ ವಿಲ್ಲಿ ನೋಡಿದ್ದೀರ ಅನ್ಸುತ್ತೆ! ಈಗ ಕಲರುಗಳು ಬದಲಾಗಿವೆ ಗ್ಲೋಬಲ್ ಪೊಲ್ಯೂಶನ್ನು ಜಾಸ್ತಿಯಾಗಿರೋದ್ರಿಂದ
ಅವಕ್ಕೆ ಯಾರೋ misguide ಮಾಡ್ತಿದ್ದಾರೆ... 'ನಿಮಗೆ ಯಾವ ನರಪಿಳ್ಳೆಯೂ ತೊಂದರೆ ಕೊಡದ ಜಾಗ ಅಲ್ಲಿದೆ, ನೋಡಿ' ಅಂತ. ಪಾಪದ್ದು, ಇಲ್ಲಿ ಬಂದ ಮೇಲೇನೆ ನಿಜ ಸ್ಥಿತಿ ಅರಿವಾಗೋದು ಅವಕ್ಕೆ.
ಕೈಯಲ್ಲಿ ಹಿಡಿದು ಉರುಳಿಸಿ! ಛೆ! ಅಷ್ಟೂ ಗೊತ್ತಾಗಲ್ವೆ?
ಏನೂ ಅಗೋದಿಲ್ಲ. ನಮಗ್ಯಾರೋ 'ಈಡಿಯಟ್' ಅಂದದ್ದು ಕೇಳಿಸುತ್ತದೆ!
--
"ಹೊಸ ಚಿಗುರು, ಹಳೆ ಬೇರು"
ನನ್ನ ಉತ್ತರಗಳು
೧. ಮೊಟ್ಟೆ ಮೊದಲು. ಯಾಕೆಂದರೆ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ. ಲಂಚ್ ಯಾ ಡಿನ್ನರ್‌ಗೆ ಚಿಕನ್ (ಬೇಕಿದ್ದರೆ ಇಸ್ಮಾಯಿಲ್ ಅವರನ್ನು ಕೇಳಿ)
೨. ಝೀಬ್ರಾ ನಿಜಕ್ಕೂ ಪಾರದರ್ಶಕ ಪ್ರಾಣಿ. ಅದಕ್ಕೆ ಕಪ್ಪು ಬಿಳಿ ಪಟ್ಟಿಗಳಿವೆ.
೩. ಯಾಕೆಂದರೆ ಅಷ್ಟು ದೂರದಿಂದ ನಡೆದುಕೊಂಡು ಬರಲು ಅವುಗಳಿಂದ ಸಾಧ್ಯವಿಲ್ಲ.
೪. ಮೊಟ್ಟೆ ಬೀಳಿಸುವುದರಿಂದ ಕಾಂಕ್ರೀಟ್ ನೆಲವನ್ನು ಒಡೆಯಲು ಸಾಧ್ಯವಿಲ್ಲ.
೫. ಒದ್ದೆ.
ಸಿಗೋಣ,
ಪವನಜ
-----------
Think globally, Act locally
ಪ್ರಬುದ್ಧ ಉತ್ತರಗಳು
ಈ ಪ್ರಶ್ನೆಗಳು ತರಲೆ ಆಗಿದ್ದರೂ ಉತ್ತರಗಳು ಮಾತ್ರ ಪ್ರಬುದ್ಧವಾಗಿವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ