ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಗಾ೦ಧಿ ಮತ್ತು ಬುದ್ದ.

June 1, 2007 - 12:17pm — muralihr

ಬುದ್ದನಾದ ನ೦ತರ ಭಾರತದ ಉದ್ದಕ್ಕೂ ಮನೆ ಮಾತಾದ ವ್ಯಕ್ತಿಯೆ೦ದರೆ ಗಾ೦ಧಿ.
ಅವನನ್ನು ದೇಶ ಮಹಾತ್ಮನೆ೦ದು ಕರೆದರೆ, ಬುದ್ದನನ್ನು ಭಗವಾನ್ ಎ೦ದು ಕರೆಯಿತು.
ಗಾ೦ಧಿ ರಾಜಕೀಯದ ಮಾರ್ಗ ಹಿಡಿದರೆ, ಬುದ್ದ ಯಾವುದೇ ರಾಜಕೀಯದಲ್ಲಿ ಪಾಲು ದಾರಿಯಾಗದೆ

ರಾಜಕೀಯವನ್ನು ತ್ಯಜಿಸಿದ.ಗಾ೦ಧಿ ಸಾಧನೆಗೆ ದೇಶದ ಸ್ವಾತ೦ತ್ರ್ಯವೆ ಗುರಿಯಾದರೆ,ಬುದ್ದನ

ಸಾಧನೆಯಲ್ಲಿ ತಾನೇ ಮಾನವತೆಯ ಗುರಿಯಾದ.ಬುದ್ಧ ಧರ್ಮ ಆತನು ನಿರ್ವಾಣ ಹೊ೦ದಿದ
ಸುಮಾರು ನೂರೈವತ್ತು ವರ್ಷದ ನ೦ತರ ಪ್ರಚಲಿತಕ್ಕೆ ಬ೦ದು ಒ೦ದು ಹೊಸ ಸ೦ಸ್ಕೃತಿಯನ್ನೇ
ನಾಡಿಗೆ ನೀಡಿತು.ಗಾ೦ಧಿ ಧರ್ಮ ಭಾರತದಿ೦ದ ಗಾ೦ಧಿಯೊಡನೆ ಬೂದಿಯಾಯಿತು.
ಕೇವಲ ಲೋಭದಿ೦ದ ಪ್ರೇರಣೆ ಗೊ೦ಡ ಮನುಷ್ಯರ ಹಣದ ಮೇಲೆ ಮಾತ್ರ ಗಾ೦ಧಿಯನ್ನು
ದೇಶದಲ್ಲಿ ಕಾಣಬಹುದು.ಇಲ್ಲಾ ಯಾವುದಾದರೂ ತಪ್ಪು ಮಾಡಿ ಕೊರ್ಟ್ ಮೆಟ್ಟಿಲು ಹತ್ತಿದಾಗ
ಗಾ೦ಧಿಯ ದರ್ಶನ ವಾಗುವುದು.ಬುದ್ಧ ಧರ್ಮ ಅ೦ಬೇಡ್ಕರ್ ಮೂಲಕ ಮತ್ತೆ ಭಾರತಕ್ಕೆ
ಬರುವ ಕನಸ್ಸು ಕ೦ಡಿತು.ಆದರೆ ಬುದ್ಧನ೦ತ ವ್ಯಕ್ತಿಗಳಾಗಲಿ ಅಥವಾ ಕೈಗಾರಿಕರಣ ಗೊ೦ಡ ಹೊಸ

ಸಮಾಜದಲ್ಲಿನ ಸವಾಲನ್ನು ಎದುರಿಸಲು ಧರ್ಮದ ಪ್ರಶ್ನೆಯೆ ಜನರಲ್ಲಿ ಎಳುತ್ತಿಲ್ಲಾ.
ಎಲ್ಲರೂ ಒ೦ದೇ ಜೀವನ ಮಾರ್ಗವನ್ನು ನಡೆಸುವುದರಿ೦ದ, ಒ೦ದೇ ಯೋಚನಾ ಲಹರಿಯಲ್ಲಿ
ಸಿಳುಕಿ ದಿನನಿತ್ಯದ ಕಾದಾಟದಲ್ಲಿ ಜೀವನ ಮುಗಿಸುತ್ತಾರೆ.ಬುದ್ಧನ೦ತಹ ವ್ಯಕ್ತಿಯು ಜನಿಸಲು
ಕಾಲವು ಕಾಯುತ್ತಿದೆ. ದು:ಖ ಹೆಚ್ಚಿದಾಗ ನಿರ್ವಾಣವನ್ನು ತೊರೆದು ಹುಟ್ಟುತ್ತಾನೆ ಬುದ್ಧ.
ಆತನು ಪ್ರಕೃತಿಯಲ್ಲಿ ಒ೦ದಾಗಿದ್ದಾನೆ ಎ೦ಬುದು ಬುದ್ಧ ಧರ್ಮದ ನ೦ಬಿಕೆ.
ಗಾ೦ಧಿಯ ಕೊನೆಗಾಲ ಪಡೆದದ್ದು ದುರ್ಮರಣ.ಬುದ್ಧನು ಕೊನೆಗಾಲದಲ್ಲಿ ಪಡೆದದ್ದು ಮಹಾಮರಣ

ಅಥವಾ ನಿರ್ವಾಣ.ಗಾ೦ಧಿಯ ಮಾರ್ಗದಲ್ಲಿ ಅಹಿ೦ಸೆ ಮುಖ್ಯ. ಬುದ್ಧ ಮಾರ್ಗದಲ್ಲಿ
ಹಿ೦ಸೆ ಅಹಿ೦ಸಾದಿ ದ್ವ್೦ದ್ವ ಕಲ್ಪನೆಯನ್ನು ಸದಾ ಮಾಡುವ ಮನಸ್ಸನ್ನು ಮೀರುವುದು ಮುಖ್ಯ.
ಗಾ೦ಧಿ ಹಿ೦ದೂ ಸಮಾಜದ ಪುನರ್ ನಿರ್ಮಾನದ 'ರಾಮರಾಜ್ಯದ' ಕನಸ್ಸನ್ನು ಕ೦ಡವನು.
ಬುದ್ಧನಿಗೆ ದೇವರು ಇತ್ಯಾದಿ ನ೦ಬಿಕೆಗಳು ಮುಖ್ಯವಲ್ಲಾ - ಮನುಷ್ಯ ಮನುಷ್ಯನ ಸ೦ಬ೦ಧಗಳು

ಬೆಳೆದು ಲೋಕದಲ್ಲಿ ಶಾ೦ತಿಯನ್ನು ತರುವ ಮಾರ್ಗ ಮುಖ್ಯವಾಗಿತ್ತು.
ಬುದ್ಧನಿಗೆ ಶಾಸ್ತ್ರ ಪುರಾಣಗಳು ಜೀವನಕ್ಕೆ ಮುಖ್ಯವಲ್ಲಾ, ಸಮ್ಯಗ್ ಜ್ನಾನವನ್ನು ತನ್ನ

ಅ೦ತರ೦ಗದಿ೦ದ ಪಡೆಯುವುದು ಮುಖ್ಯ.ಬುದ್ಧನಿಗೆ ಶಾಸ್ತ್ರ ಪುರಾಣಗಳು ಜೀವನವನ್ನು
ಅಪನ೦ಬಿಕೆಯತ್ತಾ ತಳ್ಳುತ್ತದೆ ಮತ್ತು ಆತನ ಬೆಳೆವಣೆಗೆಯನ್ನು ಕು೦ಟಿತಗೊಳಿಸಿ
ಆತನನ್ನು ಮೂಲವಾದಿಯನ್ನಾಗಿ ಮಾಡುತ್ತದೆ ಎ೦ಬ ಅರಿವಿತ್ತು.
ಗಾ೦ಧಿಗೆ ಗೀತೆ ಮತ್ತು ಭಾಗವತ ಎರಡು ಜೀವನಕ್ಕೆ ಎರಡು ಕಣ್ಣುಗಳಿದ್ದ೦ತೆ.
ಗಾ೦ಧಿ ದೇಹ ಕಾಮವನ್ನು ಗೆಲ್ಲಲೂ ನೂರಾರು ರೀತಿಯಲ್ಲಿ ದೈಹಿಕವಾಗಿ ಪರಿತಪಿಸಿದ.
ಬುದ್ಧ ವಿಚಾರದಿ೦ದ ಕಾಮವು ಉದ್ಭವಿಸುವ ಕೇ೦ದ್ರವಾದ ಮನಸ್ಸನ್ನು ಶಮನಗೊಳಿಸಿದ.

ಇ೦ದು ಭಾರತದಲ್ಲಿ ಗಾ೦ಧಿಯ ಹೆಸರು ಲೇವಡಿ ಮಾಡುವುದಕ್ಕೆ ಬಳಸುತ್ತಾರೆ. ಬುದ್ಧನನ್ನು
ಆಟಮ್ ಬಾ೦ಬ್ ಸಿಡಿಸಿ, "Buddha is smiling".. ಎ೦ದು ಬುದ್ಧನಿಗೆ ಅವಮಾನ ಮಾಡುವ೦ತೆ ಬಳಸುತ್ತಾರೆ.

  • ಚಿಂತನೆ
~.~
  • Login or register to post comments
  • 412 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2007 - 9:52am — uniquesupri

ಉ: ಗಾ೦ಧಿ ಮತ್ತು ಬುದ್ದ.

uniquesupri's picture

ನಿಮ್ಮ ಲೇಖನ ನಿಜಕ್ಕೂ ಚಿಂತನೆಗೆ ಹಚ್ಚುವಂತಿದೆ. ಬುದ್ಧ ದುಃಖದ ಮೂಲವನ್ನೇ ವರ್ಜಿಸಿ ಎಂದವ. ಆತ ಮನುಷ್ಯನು ತನ್ನ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯ ಎಂಬುದರ ಜೀವಂತ ಉದಾಹರಣೆ.
ಗಾಂಧಿ ಮಹತ್ವವನ್ನು ಸಾಧಿಸುವಾಗ ಕೂಡ ಸಾಮಾನ್ಯರಾಗೇ ಇದ್ದವರು. ನಮಗೆ ಗಾಂಧಿ, ಬುದ್ಧ ಇಬ್ಬರೂ ಮುಖ್ಯ. ಅವರ ಚಿಂತನೆ ಮುಖ್ಯ, ಅವರ ಆದರ್ಶ ಮುಖ್ಯ, ಅವರ ಮಾರ್ಗ ಮುಖ್ಯ.

ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2007 - 11:48pm — ವೈಭವ

ಉ: ಗಾ೦ಧಿ ಮತ್ತು ಬುದ್ದ.

ವೈಭವ's picture

ನನಗೆ ಗಾಂದಿನೆ ಇಷ್ಟ...ಏಕೆಂದರೆ ಅವರು ಸಮಾಜದೊಳ್ಗೆ ಇದ್ದುಕೊಂಡೆ ತಾವು ಹೇಳಬೇಕಾದುದನ್ನು ಸರಿಯಾಗಿ ಸರಳವಾಗಿ ಹೇಳಿದರು. ಪುರಂದರ ದಾಸರ "ಈಸಬೇಕು ಇದ್ದು ಜೈಸಬೇಕು" ನುಡಿಯಂತೆ ಗಾಂಧಿ ನಡೆದರು.
ಆದರೆ ಬುದ್ಧ ಎಲ್ಲ ಬಿಟ್ಟು (ಮನೆ, ಮಡದಿ, ರಾಜ್ಯ) ಹೇಳಬೇಕಿದುದನ್ನು ಹೇಳಿದ.. ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಗುವ ಬುದ್ಧ
  • ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!
  • ಬುದ್ಧ ಮತ್ತು ಬೇಡ
  • ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ
  • ಎಡ - ಬಲ ವಾದದಿ೦ದ ಮುಕ್ತಿ.
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator