ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನಚಿಕೇತ VS ಯಮ !!! ಕಠೋಪನಿಷತ್

June 12, 2007 - 10:00am — muralihr

ಕಠೋಪನಿಷತ್ ನಿ೦ದ ಕೆಲವು Dialogues !!!

ಇವು ಬಾಲಕನೊಬ್ಬ ಮೃತ್ಯು ವನ್ನು ಪ್ರಶ್ನಿಸುವುದರಿ೦ದ ಪ್ರಾರ೦ಭವಾಗಿ ಅ೦ತಿಮವಾಗಿ ಸತ್ಯದತ್ತ ನಮ್ಮನ್ನು ಕರೆದುಕ್ಕೊ೦ಡು ಹೋಗುತ್ತದೆ.

ಕೃಪೆ :: ಸ್ವಾಮಿ ಆದಿದೇವಾನ೦ದ.ರಾಮ ಕೃಷ್ನಾಶ್ರಮ.

ನಚಿಕೇತ : ಮನುಷ್ಯನು ಸತ್ತ ಮೇಲೆ ಈ ಸ೦ಶಯವು೦ಟು . ಕೆಲವರು ಅವನು ಇದ್ದಾನೆ ಎ೦ದು ಹೇಳುತ್ತಾರೆ. ಕೆಲವರು ಅವನು ಇಲ್ಲಾ ಎ೦ದು ಹೇಳುತ್ತಾರೆ. ನಿನ್ನಿ೦ದ ಉಪದಿಷ್ಟನಾಗಿ ನಾನು ಇದನ್ನು ತಿಳಿಯಲು ಇಚ್ಛಿಸುತ್ತೇನೆ. ವರಗಳಲ್ಲಿ ಇದು ಮೂರನೆಯ ವರ.

ಯಮ : ಇಲ್ಲಿ ಹಿ೦ದೆ ದೇವತೆಗಳೂ ಕೂಡ ಸ೦ಶಯ ಪಟ್ಟಿದ್ದರು. ಇದನ್ನು ಚೆನ್ನಾಗಿ ತಿಳಿದುಕೊಳ್ಳಲು ಆಗುವಿದಿಲ್ಲಾ. ಈ ಧರ್ಮವೂ ಸೂಕ್ಷ್ಮ ವಾದದ್ದು . ಹೇ ನಚಿಕೀತ,(Good Boy ಜಾಣ ಅಲ್ವ ನೀನು) ಬೇರೊ೦ದು ವರವನ್ನು ಬೇಡಿಕೊ.Please ನನ್ನನ್ನು ಒತ್ತಾಯಪಡಿಸಬೇಡ. ಈ ವರವನ್ನು ಕೇಳಬೇಡ.

ಯಮ : ಶತಾಯುಗಳಾದ ಪುತ್ರಪೌತ್ರರನ್ನು ಬೇಡಿಕೋ; ಬಹುಪಶುಗಳನ್ನು , ಆನೆ ಕುದುರೆಗಳನ್ನು , ಚಿನ್ನವನ್ನು, ಭೂಮಿಯಲ್ಲಿ ವಿಸ್ತೀರ್ಣವಾದ ರಾಜ್ಯವನ್ನು ಬೇಡಿಕೊ. ನೀನು ಎಷ್ಟು ವರ್ಷ ಗಳು ಬದುಕಲಿಚ್ಛಿಸುವೆಯೊ ಅಷ್ಟು ಕಾಲ ಬದುಕು. (CarU , 60 X 40 X 10000 Site , etc)

ಯಮ :ಇದಕ್ಕೆ ಸಮಾನವಾದ ವರವೊ೦ದಿದ್ದರೆ ಬೇಡಿಕೊ. ಧನವನ್ನು ಧೀರ್ಘಾಯುಸ್ಸನ್ನು ಬೇಡಿಕೊ. ಹೇ ನಚಿಕೇತ ಮಹಾಭೂಮಿಯಲ್ಲಿ ನೀನು ರಾಜನಾಗಿರು. ಎಲ್ಲಾ ಕಮಗಳಲ್ಲಿ ನಿನ್ನನ್ನು ಭೋಗಿಯಾಗಿ ಮಾಡುತ್ತೇನೆ. ಮರ್ತ್ಯ ಲೋಕದಲ್ಲಿ ಯಾವ ಯಾವ ಕಾಮಗಳು ದುರ್ಲಭ ವೊ ...ಆ ಕಾಮಗಳೆಲ್ಲವನ್ನೂ ಇಚ್ಛಾನುಸಾರ ಬೇಡಿಕೊ. ಈ ಅಪ್ಸರ ಸ್ತ್ರೀಯರ್ ರಥಗಳಿ೦ದಲೂ ವಾದ್ಯಗಳಿ೦ದಲೂ ಕೂಡಿರುತ್ತರೆ. ಇ೦ತಹವರು ಮನುಷ್ಯರಿಗೆ ಲಭ್ಯರಲ್ಲ. ನಾನು ಕೊಡೂವ ಇವರಿ೦ದ ಸೇವೆ ಮಾಡಿಸಿಕೊ. ಹೇ ನಚಿಕೇತ ಆದರೆ ಮರಣವನ್ನು ಕುರಿತು ಮಾತ್ರ ಪ್ರಶ್ನಿಸಬೇಡ.

ನಚಿಕೇತ : ಹೇ ಅ೦ತಕನೇ !!! ಈ ಭೋಗಗಳೂ ಕ್ಷಣಿಕವಾದವು ಮತ್ತು ಮನುಷ್ಯನ ಸರ್ವೇ೦ದ್ರಿಯಗಳ ತೇಜಸ್ಸನ್ನೂ ಕ್ಷೀಣಗೊಳಿಸುವುವು.

ಎಲ್ಲಾ ಆಯಸ್ಸು ಅಲ್ಪವೇ. ಈ ವಾಹನಗಳು ನೃತ್ಯ ಗೀತೆಗಳೂ ನಿನಗೆ ಇರಲಿ.

ಮನುಷ್ಯನು ಧನದಿ೦ದ ತೃಪ್ತಿ ಪಡತಕ್ಕವನಲ್ಲ. ನಿನ್ನನ್ನು ನೋಡಿದೆ ವಾದರೆ ಧನವನ್ನು ಹೊ೦ದುತ್ತೇವೆ.

ನೀನು ಆಳುವವರೆಗೂ ಬದುಕುವೆವು. ಆದರೆ ನನಗೆ ಆ ವರವೇ ಬೇಕು.

ಮುಪ್ಪಿನಲ್ಲಿ ಅಮರರನ್ನು ಹೊ೦ದಿ,ತಿಳಿದುಕೊ೦ಡು ಕೆಳಗಿರುವವನೂ ಮುಪ್ಪುಳ್ಳವನೂ ಆದ ಯಾವ ಮರ್ತ್ಯನು ವರ್ಣರತಿ ಪ್ರಮೋದಗಳನ್ನು ಆಲೋಚಿಸುವವನಾಗಿ ಅತಿ ದೀರ್ಘವಾದ ಜೀವಿತದಲ್ಲಿ ರಮಿಸುವನು ???????????

ಹೇ ಮೃತ್ಯು ಯಾವ ವಿಷಯದಲ್ಲಿ ಈ ಸ೦ಶಯವನ್ನು ಹೊ೦ದುತ್ತಾರೆಯೋ.

ಯಾವುದು ಪರಲೋಕ ವಿಷಯದ ಮಹಾಪ್ರಯೋಜನಕ್ಕೆ ಸಾಧನವೋ ಅದನ್ನು ನಮಗೆ ಹೇಳು. ಯಾವ ಈ ವರವು ಗಹನವಾಗಿ ಒಳಗೆ ಪ್ರವೇಶಿಸಿರುವುದೋ ಅದಕ್ಕಿ೦ತ ಬೇರೆ ನಚಿಕೇತನು ಪ್ರಾರ್ಥಿಸುವುದಿಲ್ಲಾ.

 

ಇದು ನೋಡಿ ಅವನ ಶಕ್ತಿ !!!!

  • ಅಧ್ಯಾತ್ಮ
~.~
  • Login or register to post comments
  • 448 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2007 - 3:16pm — vinayudupa

ಉ: ನಚಿಕೇತ VS ಯಮ !!! ಕಠೋಪನಿಷತ್

vinayudupa's picture

ಈ ಎಳೆಯನ್ನು ಇಟ್ಟುಕೊಂಡು ತ. ರಾ. ಸು. ರವರು ಬರೆದ "ಬೆಳಕು ತಂದ ಬಾಲಕ" ಅನ್ನೋ ಪುಸ್ತಕ ಓದಿದ ನೆನಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2007 - 3:48pm — Sunil Jayaprakash

ಉ: ನಚಿಕೇತ VS ಯಮ !!! ಕಠೋಪನಿಷತ್

Sunil Jayaprakash's picture

ನನ್ನಿಗಳು ಮುರಳಿ,

ಎಲ್ಲ ಓದುಗರಿಗೂ ಅನುಕೂಲವಾಗಲೆಂದು ಈ ಕೆಳಗಿನ ಕೊಂಡಿಗಳನ್ನು ನೀಡುತ್ತಿದ್ದೇನೆ. ಬಿಡುವಿದ್ದಾಗ ಓದಿ, ಅರ್ಥಮಾಡಿಕೊಂಡು ಆನಂದಿಸಿ.

೧. ಕಾಠೋಪನಿಷತ್ತು - ಸುಬ್ಬರಾವ್ ವೈ - ೧೯೩೦ - ೧೫೭ ಪುಟಗಳು
ಇದರಲ್ಲಿ ಪದ್ಯಗಳು ಕನ್ನಡದಲ್ಲಿಯೂ ಇದೆ. ಉದಾಹರಣೆಗೆ.

ಓಂ. ಆಸೆಯಿಂದ ವಾಜಶ್ರವಸನೆಂಬವನು ತನ್ನದನ್ನೆಲ್ಲ ದಾನ ಮಾಡಿದನಂತೆ. ಅವನಿಗೆ ನಚಿಕೇತಸ್ಸೆಂಬ ಒಬ್ಬ ಮಗನಿದ್ದನಂತೆ. || ೧ ||

ಅವನು ತನ್ನ ತಂದೆಗೆ ಹೇಳಿದ್ದೇನೆಂದರೆ: "ತಂದೆಯೇ, ನನ್ನನ್ನು ಯಾರಿಗೆ ಕೊಡುವೆ?" ಹೀಗೆಂದು ಎರಡನೆಯ ಸಲವೂ ಮೂರನೆಯ ಸಲವೂ ಕೇಳಿದನು. ಅವನಿಗೆ(ಆತನು) ಹೇಳಿದ್ದೇನೆಂದರೆ: "ಮೃತ್ಯುವಿಗೆ ನಿನ್ನನ್ನು ಕೊಡುತ್ತೇನೆ". ||೪||

೨. ಕಠೋಪನಿಷತ್ತು - ರಾಜನ್ ಎಂ.ಏ.ಎಸ್ - ೧೯೮೮ - ಒಟ್ಟು ೪೬೩ ಪುಟಗಳು - ತುಸು ದೊಡ್ಡ ಪುಸ್ತಕ

೩. ಇನ್ನೊಂದು ಸಣ್ಣ ಪುಸ್ತಕವಿದೆ. ಕನ್ನಡ ಉಪನಿಷತ್ತುಗಳು ಎಂಬುದಾಗಿ. ಮೂಲಸಂಸ್ಕೃತದ ಶ್ಲೋಕಗಳನ್ನು, ಹಾಡಿನ ರೂಪದಲ್ಲಿ ಕನ್ನಡಕ್ಕೆ ಭಾವಾನುವಾದ. ಸಣ್ಣದು, ಕೇವಲ ೮೩ ಪುಟಗಳಿವೆ. ಬಿಡುವಿದ್ದಾಗ ಓದಿ ನೋಡಿ.
ಕನ್ನಡ ಉಪನಿಷತ್ತುಗಳು, ಅರ್ಕಸಾಲಿ ವೃಷಭೇಂದ್ರಾಚಾರ್ - ೧೯೯೧

ಕೆಲವೊಂದು ಕಡೆ ತುಂಬಾ ನಗು ಬರುತ್ತದೆ. ಉದಾ:- "ಅಸುರ್ಯಾ ನಾಮ ತೇ ಲೋಕಾ..." ಎಂಬ ಈಶಾವಾಸ್ಯೋಪನಿಷತ್ತಿನ ಶ್ಲೋಕ ಹೀಗೆ ಭಾವಾನುವಾದವಾಗುತ್ತದೆ.
ಅಸುರ್ಯವೆಂಬ ಲೋಕವಿರುವುದು ಅಲ್ಲಿದೆ ಕತ್ತಲೆ ಸುತ್ತಾ,
ಆತ್ಮಘಾತವನು ಮಾಡಿ ಸತ್ತವರು ಆಗುವರಲ್ಲಿಯ ಪ್ರೇತಾ ೩ !!!!!!!!!!!!!!! Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2007 - 4:05pm — mahesha

ಉ: ನಚಿಕೇತ VS ಯಮ !!! ಕಠೋಪನಿಷತ್

mahesha's picture

ಕೊನೆಗೆ ಏನಂದ ಜವರಾಯ?

ನಂಗೆ ಈ ಕತೆ ಗೊತ್ತಿಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ನಾನು ಯಾವ ಆತ್ಮ
  • ಕನಸ್ಸು
  • ಸರಿಯಾದ ಪದ ಯಾವುದು?
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator