ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ತಿರುವೈಯ್ಯಾರು, ಮಿಶನ್ ಸ್ಯಾನ್ ಹೋಸೆ ಮತ್ತು ಚಾರಿತ್ರಿಕ ತಿಳಿವು

June 16, 2007 - 6:02am — hamsanandi

ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.

 

ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ ಬರಹವಲ್ಲ Smiling ನನ್ನ ಉದ್ದೇಶವೇ ಬೇರೆ. ಎಲ್ಲ ನದಿಗಳೂ ಸಾಮಾನ್ಯ ಸಮುದ್ರ ಸೇರುವ ಬಳಿ ಕವಲೊಡೆದು, ಹಲವು ಭಾಗಗಳಾಗುತ್ತವೆ. ಕಾವೇರಿಯೂ ಇದಕ್ಕೆ ಹೊರತಲ್ಲ. ತಮಿಳುನಾಡಿನ ತಿರುಚ್ಚಿರಾಪಳ್ಳಿಯ ಬಳಿ ಕಾವೇರಿ ಐದು ಭಾಗಗಳಾಗಿ ಒಡೆಯುತ್ತಾಳೆ. ಈ ಶಾಖೆಗಳಿಗೆ ಕಾವೇರಿ, ವೆಣ್ಣಾರ್, ವೆಟ್ಟಾರ್, ಕೊಡಮುರುಟಿ ಮತ್ತು ಕೊಲ್ಲಿಡಮ್ ಎಂದು ಹೆಸರಾಗುತ್ತದೆ. ಇಲ್ಲಿ ಒಂದು ವಿಷಯ ಹೇಳಬೇಕು. ವೆಣ್ಣಾರ್, ವೆಟ್ಟಾರ್ ಎಂಬಲ್ಲಿ ಬರುವ ರ ಕಾರ, ಹಳೆಗನ್ನಡದ ಶಕಟರೇಫ; (ನನಗೆ ಅದನ್ನು ಇಲ್ಲಿ ಬರೆಯಬೇಕೆಂದು ತಿಳಿಯದು). ಮತ್ತೆ, ಈ ಪದಗಳು ರ್ ಎನ್ನುವ ವ್ಯಂಜನದಿಂದ ಕೊನೆಯಾಗಿಲ್ಲ. ಬದಲಿಗೆ, ಅರ್ಧ ಉಕಾರದಲ್ಲಿ ಮುಗಿಯುತ್ತವೆ. (ಈ ರೀತಿಯ ಉಕಾರ ಇರುವ ಪದ ನೆನಪಿಗೆ ಬರುತ್ತಿಲ್ಲ). ಕನ್ನಡದ ಆರು, ಮಗು, ನಗು ಮೊದಲಾದ ಪದಗಳಲ್ಲಿ ಬರುವ ಪೂರ್ಣ ಉಕಾರವನ್ನು ಉಪಯೋಗಿಸದೇ ಹೇಳಿದರೆ ಹೇಗಿರುತ್ತೋ ಆ ರೀತಿ ಇರಬೇಕು ತಮಿಳಿನಲ್ಲಿ ಪದದ ಕೊನೆಗೆ ಬರುವ ಉಕಾರಗಳ ಉಚ್ಚಾರ. ಇನ್ನೂ ಹೇಳಬೇಕೆಂದರೆ ವೆಣ್ಣಾರು ಅನ್ನುವ ಪದವನ್ನು ವೆಣ್ಣಾಋ ಎನ್ನುವ ರೀತಿಯಲ್ಲಿ ಉಚ್ಚರಿಸಿದರೆ, ಮೂಲಕ್ಕೆ ಹತ್ತಿರವಾಗುತ್ತದೆ.

 

ತಿರುವೈಯ್ಯಾರು ಸುತ್ತಮುತ್ತ

ತಿರುವೈಯ್ಯಾರು ಸುತ್ತಮುತ್ತ: ಕಾವೇರಿಯ ಕವಲುಗಳನ್ನು ಗಮನಿಸಿ.

 

ಆರು (ಅಥವ ಆಋ) ಎಂದರೆ, ನೀರು, ನದಿ ಎಂದರ್ಥ. ನಮ್ಮ ನಂದಿದುರ್ಗದಲ್ಲಿಯೂ ಪಾಲಾರ್, ಪೆನ್ನಾರ್ (ಪಿನಾಕಿನಿ) ಅನ್ನುವ ನದಿಗಳು ಹುಟ್ಟುತ್ತವಲ್ಲ, ಅದರಲ್ಲಿ ಬರುವ ಆರ್ ಎನ್ನುವುದೂ ಈ ನೀರಿನ ಸೂಚಕ ಪದವೇ.

 

ತಿರುಚ್ಚಿರಾಪಳ್ಳಿಯಿಂದ ಸುಮಾರು ೫೦-೬೦ ಕಿ.ಮೀ. ಪೂರ್ವದಲ್ಲಿ, ತಂಜಾವೂರಿನಿಂದ ಸುಮಾರು ೧೫-೨೦ ಕಿ.ಮೀ. ಉತ್ತರದಲ್ಲಿ ಕಾವೇರಿಯ ಐದು ಭಾಗಗಳನ್ನು ನೆನಪಿಸುವ ಒಂದು ಊರಿದೆ. ಅದೇ ತಿರುವೈಯ್ಯಾರು. ಇದು ಇರುವುದು ಕಾವೇರಿಯ ಮುಖ್ಯ ಕಾವೇರಿ ಕವಲಿನ ಮೇಲೆ. ತಿರು ಎನ್ನುವುದು ತಮಿಳಿನಲ್ಲಿ ಗೌರವಾರ್ಥವಾಗಿ ಉಪಯೋಗಿಸುವ ಪದ. ತಿರು+ಐ+ಆಋ ಅಂದರೆ, ಪವಿತ್ರವಾದ ಐದು ನದಿಗಳು (ಅಥವ , ಅವುಗಳ ನಡುವೆ ಇರುವ ಸ್ಥಳ) ಎಂದು ಅರ್ಥ ಮಾಡಿಕೊಳ್ಳಬಹುದು. ಈ ಊರಿನಲ್ಲಿ ಚೋಳರ ಕಾಲದ ಪಂಚನದೀಶ್ವರನ ದೇವಾಲಯವಿದೆ. ಇವನನ್ನು ಐಯಾರಪ್ಪರ್ ಅಂತಲೂ ಕರೆಯುತ್ತಾರೆ. (ಎರಡೂ ನೋಡಿ ಅದೇ ಅರ್ಥ - ಪಂಚ = ಐದು, ನದಿಗಳ ಒಡೆಯನಾದ, ತಂದೆಯಾದ ಶಿವ). ಶಿವನ ಈ ರೂಪಕ್ಕೆ ಮನೆಯೊಡತಿಯಾಗಿ ಇರುವವಳು ಧರ್ಮಸಂವರ್ಧಿನಿ ದೇವಿ.

ಪಂಚನದೀಶ ದೇವಾಲಯ - ತಿರುವೈಯ್ಯಾರು

ತಿರುವೈಯ್ಯಾರಿನ ಪಂಚನದೀಶ್ವರ ದೇಗುಲ: ಚಿತ್ರ ಕೃಪೆ ನ್ಯಾಶನಲ್ ಇನ್ಫರ್ಮ್ಯಾಟಿಕ್ಸ್

 

ಈ ಚೋಳಸೀಮೆಯಲ್ಲಿ ಭಾರೀ ದೇಗುಲಗಳಿಗೇನೂ ಕೊರತೆ ಇಲ್ಲ. ಹಾಗಿದ್ದರೆ ತಿರುವೈಯ್ಯಾರೆಂಬ ಈ ಚಿಕ್ಕ ಊರು ನಮಗೆ ಏಕೆ ಮುಖ್ಯವಾಗುತ್ತದೆ? ಅದಕ್ಕೆ ಮೂಲ ಕಾರಣ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜರು. ಇವರು ಇದೇ ಊರಿನಲ್ಲಿ ಬದುಕಿದವರು. ಹತ್ತಿರದ ತಿರುವಾರೂರಿನಲ್ಲು ೧೭೬೭ರಲ್ಲಿ ಜನಿಸಿದ ತ್ಯಾಗರಾಜರು ಸಂಗೀತದಲ್ಲಿ ಅಪರಿಮಿತ ಮೇಧಾವಿ. ತಮ್ಮ ತಾಯಿ ಹಾಡುತ್ತಿದ್ದ ಪುರಂದರ ದಾಸರ ರಚನೆಗಳಿಂದ ಇವರು ಬಹಳಷ್ಟು ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ.

 

ತ್ಯಾಗರಾಜರು ಸುಮಾರು ೮೦೦ ಕೃತಿಗಳನ್ನು ರಚಿಸಿ, ಹೊಸ ಹೊಸದಾದ ನೂರಾರು ರಾಗಗಳಿಗೆ ಲಕ್ಷ್ಯವನ್ನು ಸೃಷ್ಟಿಸಿದರು ೮೦ ವರ್ಷದ ತುಂಬು ಬಾಳ್ವೆ ನಡೆಸಿ, ೧೮೪೭ ರ ಪುಷ್ಯ ಬಹುಳ ಪಂಚಮಿಯಂದು ದೇಹತ್ಯಾಗ ಮಾಡಿದರು. ಅವರು ಸಮಾಹಿ ಹೊಂದಿದ ಸ್ಥಳದಲ್ಲಿ ೨೦ನೇ ಶತಮಾನದ ಪ್ರಾರಂಭದಲ್ಲಿ ಬೆಂಗಳೂರು ನಾಗರತ್ನಮ್ಮ ಎಂಬ ಕಲಾವಿದೆ ಬೃಂದಾವನವೊಂದನ್ನೂ, ಸಮಾಧಿ ಮಂಟಪವನ್ನೂ ಕಟ್ಟಿಸಿದರು. ಪ್ರತೀ ಜನವರಿಯಲ್ಲಿ ಇಲ್ಲೇ ತ್ಯಾಗರಾಜರ ನೆನಪಿನಲ್ಲಿ ಆರಾಧನೆ ನಡೆಸಲಾಗುತ್ತೆ. ಎಲ್ಲೆಡೆಗಳಿಂದಲೂ ಸಂಗೀತಗಾರರು, ಸಂಗೀತಪ್ರಿಯರು ತ್ಯಾಗರಾಜ ಆರಾಧನೆಗೆ ಬಂದು ಪಾಲ್ಗೊಳ್ಳುತ್ತಾರೆ.

ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಸಮಾಧಿ ಮತ್ತು ಮಂಟಪ

ತ್ಯಾಗರಾಜರ ಬೃಂದಾವನವಿರುವ ಸಮಾಧಿ ಮಂಟಪ, ತಿರುವೈಯ್ಯಾರು (ಚಿತ್ರ ಕೃಪೆ: ಹಿಂದೂ ದಿನಪತ್ರಿಕೆ)

 

ನನಗೂ ಸುಮಾರು ಹದಿನೈದು ವರ್ಷಗಳ ಹಿಂದೆ ತಿರುವೈಯ್ಯಾರಿಗೆ ಹೋಗುವ ಅವಕಾಶ ಸಿಕ್ಕಿತ್ತು. ಆಗ ಆರಾಧನೆಯ ಸಮಯವಲ್ಲ. ಆದರೆ, ಅಲ್ಲೇ ತಿರುಮಂಜನ ಬೀದಿಯಲ್ಲಿ ತ್ಯಾಗರಾಜರು ವಾಸಮಾಡಿದ ಮನೆಯಿದೆ ಎಂದು ಕೇಳಿದ್ದೆ. ಹೋದರೆ ಎದುರಾದ್ದು ಹಳೆಯ ಕಾಲದ ಸಣ್ಣ ನಾಡುಹಂಚಿನ ಮನೆ. ಒಳಗೆ ಕಡಿಮೆ ಬೆಳಕಿನ, ಪ್ರಶಾಂತ ವಾತಾವರಣ. ಸ್ವಲ್ಪ ಮಸಿಗಟ್ಟಿದ ಗೋಡಿಗಳು. ಅಲ್ಲೇ ತ್ಯಾಗರಾಜರ ಒಂದು ಮೂರ್ತಿ, ಮತ್ತೊಂದು ಕಡೆ, ಅವರು ಪೂಜೆ ಮಾಡುತ್ತಿದ್ದ ಅವರ ಇಷ್ಟದೈವ ರಾಮನ ಮೂರ್ತಿ. ಅರ್ಧ ಗಂಟೆ ಅಲ್ಲೇ ಕಣ್ಣು ಮುಚ್ಚಿ ಕುಳಿತೆ. ಒಂದು ಕ್ಷಣ ಮನಸ್ಸು ಹದಿನೆಂಟನೇ ಶತಮಾನಕ್ಕೇ ಹೋಯಿತು. ಇಲ್ಲೇ ಅಲ್ಲವೆ ಅವರು ಇದೇ ಮೂರ್ತಿಯ ಮುಂದೆ, ತವದಾಸೋಹಂ ದಾಶರಥೇ ಎಂದು ಹಾಡಿದ್ದು? ಇಲ್ಲೇ ಅಲ್ಲವೆ ಅವರು ಎಂದರೋ ಮಹಾನುಭಾವುಲು ಎಂಬ ಪಂಚರತ್ನ ಕೃತಿಯ ಮೂಲಕ ಜಗದ ಮೂಲೆಮೂಲೆಯಲ್ಲಿರುವ ಮಹಾತ್ಮರಿಗೂ ನಮನ ಸಲ್ಲಿಸಿದ್ದು? ಈ ಮನೆಯಲ್ಲಲ್ಲವೇ ಅವರು ತಂಜಾವೂರಿನ ರಾಜ ಅರಮನೆಯ ವಿದ್ವಾಂಸರಾಗಿ ಬರಲು ಹೇಳಿಕಳುಹಿದರೆ, ನಿಧಿ ಚಾಲಾ ಸುಖಮಾ? ರಾಮುನಿ ಸನ್ನಿಧಿ ಸೇವ ಸುಖಮಾ? (ನಿಧಿಯಿಂದ ಸುಖ ಕಾಣಲೋ? ಅಥವ ರಾಮನ ಸನ್ನಿಧಿಯಲ್ಲಿ ಸುಖ ಕಾಣಲೋ?) ಎಂದು ಹಣದ ಆಸೆಯನ್ನು, ರಾಜನ ಅಪ್ಪಣೆಯನ್ನೂ ಧಿಕ್ಕರಿಸಿದ್ದು? ಇದೇ ಮನೆಯ ಜಗಲಿಯ ಮೇಲೇ ಅಲ್ಲವೇ ತ್ಯಾಗರಾಜರ ಶಿಷ್ಯರು ಕುಳಿತು ಅಭ್ಯಾಸ ಮಾಡುತತಿದ್ದಿದ್ದು? ಇಂತಹ ಸ್ಥಳಕ್ಕೆ ಬಂದು ಕೂರಲೂ ನಾನು ಎಷ್ಟೋ ಪುಣ್ಯ ಮಾಡಿದ್ದೆ ಎನ್ನಿಸಿತ್ತು. ಇಂದಿಗೂ ನನ್ನ ಮನದಲ್ಲಿ ಆ ನೆನಪು ಹಚ್ಚಹಸಿರಾಗಿದೆ.

ತ್ಯಾಗರಾಜರ ಮೂರ್ತಿ - ಅವರು ವಾಸ ಮಾಡುತ್ತಿದ್ದ ಮನೆಯಲ್ಲಿ, ತಿರುವೈಯ್ಯಾರು

ತ್ಯಾಗರಾಜರು ವಾಸಮಾಡುತ್ತಿದ್ದ ಮನೆಯಲ್ಲಿರುವ ತ್ಯಾಗರಾಜರ ಕಂಚಿನ ಮೂರ್ತಿ.

 

 

ತ್ಯಾಗರಾಜರು ತಮ್ಮ ಕೃತಿಗಳಲ್ಲಿ ಹಲವನ್ನು ತಿರುವೈಯ್ಯಾರಿನ ಪಂಚನದೀಶ ಮತ್ತು ಧರ್ಮಸಂವರ್ಧನಿ ದೇವಿಯರ ಮೇಲೂ ರಚಿಸಿದ್ದಾರೆ. ತಮ್ಮ ಊರಿನ ದೇವತೆಗಳು ಸಂಗೀತ ಬಲ್ಲವರ ಬಾಯಲ್ಲಿ ಎಂದೆಂದೂ ನಿಲ್ಲುವ ಹಾಗೆ ಮಾಡಿದ್ದಾರೆ.

===== ೨ =======

 

ನಾನು ಈಗ ವಾಸವಾಗಿರುವುದು ಕ್ಯಾಲಿಫೋರ್ನಿಯದ ಸಿಲಿಕಾನ್ ಕಣಿವೆಯಲ್ಲಿ. ಇಲ್ಲಿನ ಮುಖ್ಯ ನಗರ ಸ್ಯಾನ್ ಹೋಸೆ. ತಿರುವೈಯ್ಯಾರಿನಲ್ಲಿ ತ್ಯಾಗರಾಜರು ತಮ್ಮ ಸಂಗೀತದಿಂದ ಹೊಸ ಕ್ರಾಂತಿ ಮಾಡುವ ಕಾಲದಲ್ಲಿ, ಇಲ್ಲಿಯೂ ಒಂದು ಹೊಸ ಕ್ರಾಂತಿ ನಡೆಯುತ್ತಿತ್ತು. ಸ್ಪ್ಯಾನಿಶ್ ಮಿಶನರಿಗಳು ಮೆಕ್ಸಿಕೋದಿಂದ ಧರ್ಮ ಪ್ರಚಾರಕ್ಕೆಂದು ತಮ್ಮ ಉತ್ತರಕ್ಕೆ ನಡೆದು ಬಂದರು. ಬರುತ್ತಾ ದಾರಿಯಲ್ಲಿ ಸಿಕ್ಕ ಮೂಲನಿವಾಸಿಗಳ ಊರುಗಳಲ್ಲಿ ಅಲ್ಲಲ್ಲಿ ಮಠ (ಮಿಶನ್) ಗಳನ್ನು ಕಟ್ಟುತ್ತಾ ಬಂದರು. ಹೀಗೆ ಪಶ್ಚಿಮ ಕ್ಯಾಲಿಫೋರ್ನಿಯದಲ್ಲಿ ೨೧ ಮಿಶನ್ ಗಳಿವೆ. ಸಿಲಿಕಾನ್ ಕಣಿವೆಯಲ್ಲೇ ಎರಡು ಮಿಶನ್ ಗಳಿವೆ. ಅವುಗಳಲ್ಲೊಂದು ಫ್ರಿಮಾಂಟ್ ನಲ್ಲಿರುವ ಮಿಶನ್ ಸ್ಯಾನ್ ಹೋಸೆ. ಇದನ್ನು ೧೭೯೭ರಲ್ಲಿ ಕಟ್ಟಲಾಯಿತಂತೆ. ನಂತರದ ಕಾಲದಲ್ಲಿ ಇದು ಹಲವು ಏಳು ಬೀಳುಗಳನ್ನು ಕಂಡರೂ, ಈಗ ಸುಸ್ಥಿತಿಯಲ್ಲಿದೆ. ಕಟ್ಟಡದ ದುರಸ್ತಿಯ ಅಗತ್ಯ ಬಿದ್ದರೂ, ಕಟ್ಟಡದ ಮೂಲ ರೂಪಕ್ಕೆ ಧಕ್ಕೆಯಾಗದಂತೆ ರಿಪೇರಿ ಮಾಡಲಾಗಿದ್ದು, ೨೦೦೭ ರಲ್ಲೂ ಇದು ಕಟ್ಟಿದಾದ ಹೇಗಿತ್ತೋ ಹಾಗೇ ಕಾಣುವ ಹಾಗೆ ಇಡಲಾಗಿದೆ. ಇದರ ಬಗ್ಗೆ, ಮತ್ತು ಇತರ ಸ್ಪ್ಯಾನಿಷ್ ಮಿಶನ್ ಗಳ ಬಗ್ಗೆ ವಿಕಿಪಿಡಿಯದಲ್ಲಿ ಬೇಕಾದಷ್ಟು ಮಾಹಿತಿ ನೀವು ಓದಬಹುದು.

ಮಿಶನ್ ಸ್ಯಾನ್ ಹೋಸೆ: ೨೦೦೪ರಲ್ಲಿ ( ಚಿತ್ರ ಕೃಪೆ: ವಿಕಿಪಿಡಿಯ)

 

ಇಂತಹ ಮಿಶನ್‍ಗಳಲ್ಲೆಲ್ಲ, ಆಗ ಪಾದ್ರಿಗಳು ಉಪಯೋಗಿಸುತ್ತಿದ್ದ ಪಾತ್ರೆ-ಪಡಗ, ಬಟ್ಟೆ, ಪ್ರಾರ್ಥನಾ ಸಲಕರಣೆಗಳು ಮೊದಲಾಗಿ ಎಲ್ಲವನ್ನೂ ಸಂರಕ್ಷಿಸಿ ಇಡಲಾಗಿದೆ. ಅದರಿಂದ ನಮಗೆ ಆಗಿನ ಜೀವನ ಶೈಲಿಯ ಪರಿಚಯವಾಗುತ್ತೆ. ಅಷ್ಟೇ ಅಲ್ಲದೆ, ಚಾರಿತ್ರಕ ಸ್ಮಾರಕವೊಂದು ತನ್ನ ಕಥೆಯನ್ನು ತಾನೇ ಸುಲಭವಾಗಿ ಹೇಳುವ ಕಾರ್ಯ ಇಲ್ಲಿ ಯಶಸ್ವಿಯಾಗಿ ಸಾಗುತ್ತದೆ.

==== ೩ ======

 

ತ್ಯಾಗರಾಜರ ಚರಿತ್ರೆಗೂ, ಮಿಶನ್ ಸ್ಯಾನ್ ಹೋಸೆಗೂ ಏನು ಸಂಬಂಧ - ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ ಎನ್ನೋ ಹಾಗೆ ಎಂದಿರಾ? ೨೦೦೬ ಜನವರಿಯಲ್ಲಿ ಪತ್ರಿಕೆಗಳಲ್ಲಿ ಬಂದ ಒಂದು ಸುದ್ದಿಯನ್ನು ಕೇಳಿ ನಾನು ಆಘಾತಗೊಂಡೆ.

ಆ ವರದಿಯನ್ನು ನೀವು ಈ ಕೆಳಗಿನ ಕೊಂಡಿಯಲ್ಲಿ ನೋಡಬಹುದು.

 

http://www.hindu.com/2006/01/03/stories/2006010304170500.htm

 

ಸಾರಾಂಶವೆಂದರೆ, ತ್ಯಾಗರಾಜರ ಮನೆಯನ್ನು ಕೆಡವಿ, ಅಲ್ಲಿ ಸ್ಮಾರಕವೊಂದರ ನಿರ್ಮಾಣವಾಗುತ್ತೆ. ಅಲ್ಲಿ ಬಂದಿರುವ ಚಿತ್ರವನ್ನು ನೋಡಿದರೆ, ಮೂಲ ರೂಪಕ್ಕೆ ಕಿಂಚಿತ್ತೂ ಬೆಲೆಕೊಡದೆ ನಿರ್ಮಾಣಕಾರ್ಯ ನಡೆಯುತ್ತಿರುವಂತೆ ತೋರುತ್ತಿದೆ. ವರದಿಯ ಪ್ರಕಾರ, ಅಲ್ಲೊಂದು ಧ್ಯಾನ ಮಂಟಪ ಬರುವುದಂತೆ. ತ್ಯಾಗರಾಜರ ಕೃತಿಗಳನ್ನೊಳಗೊಂಡ ಕ್ಯಾಸೆಟ್‍ಗಳನ್ನೂ, ಸಿಡಿಗಳನ್ನೂ ಪುಸ್ತಕಗಳನ್ನೂ ಪ್ರದರ್ಶಿಸಲಾಗುತ್ತದಂತೆ. ಮುಂದೆ ಒಂದು ಕಮಾನು, ಗೋಪುರ ಎಲ್ಲಾ ಇರುವುದಂತೆ. ಏಕೆ ಸ್ವಾಮೀ ಈ ಅಪದ್ಧ ಬೇಕು ನಮಗೆ? ತಿರುವೈಯ್ಯಾರಿನಲ್ಲಿ ೭-೮ ಅಂತಸ್ತಿನ ಪಂಚನದೀಶ-ಧರ್ಮಸಂವರ್ಧಿನಿಯ ದೇವಾಲಯದ ಗೋಪುರವಿಲ್ಲವೇ? ತ್ಯಾಗರಾಜರ ಮನೆಯೊಂದು ಚಾರಿತ್ರಿಕ ಸ್ಮಾರಕ -ಅದನ್ನು ಇದ್ದ ಸ್ಥಿತಿಯಲ್ಲೇ ರಿಪೇರಿ ಮಾಡಿ, ಮೊದಲಿನ ರೀತಿಯಲ್ಲೇ ಉಳಿಸಿಕೊಳ್ಳಲು ಆಗುತ್ತಿರಲಿಲ್ಲವೇ? ಈಗಾಗಲೆ ತ್ಯಾಗರಾಜ ಸಮಾಧಿಯ ಬಳಿ ಹೊಸದೊಂದು ಸ್ಮಾರಕ ಬರುತ್ತಿದೆಯಂತೆ. ಖಾಲಿ ಜಾಗದಲ್ಲಿ ಮನಸೋ ಇಚ್ಚೆ ಕಟ್ಟಲಿ. ಆದರೆ, ನಮ್ಮ ಸಂಗೀತ ಪರಂಪರೆಯ ಒಂದು ಮುಖ್ಯ ಪಾತ್ರ ವಹಿಸಿದ ಈ ಮನೆಯನ್ನು ಕೆಡವಿ ಅಲ್ಲಿ ಹೊಸ ಮಾದರಿಯ ಕಟ್ಟಡವೊಂದನ್ನು ಕಟ್ಟ ಹೊರಟಿರುವ ತ್ಯಾಗಬ್ರಹ್ಮ ಸಮಾಜದವರ ನಿರ್ಧಾರಕ್ಕೆ ಏನು ಹೇಳುವುದು? ಗೂಗಲಿಸಿ ನೋಡಿದಾಗ ಈ ಕಾರ್ಯಕ್ಕೆ ನ್ಯಾಯಾಲಯ ತಡೆಆಜ್ಞೆ ಕೊಟ್ಟಿದ್ದಿದ್ದೂ, ಆಮೇಲೆ ಅದೆಲ್ಲ ತೆರವಾಗಿ, ಮನೆಯನ್ನು ಕೆಡವಿದ್ದಾರೆ ಎಂದು ಕೇಳಿಬಂತು. ಇದಕ್ಕಿಂತ ದೌರ್ಭಾಗ್ಯ ಬೇಕೇ?

ತ್ಯಾಗರಾಜರ ಮನೆ - ಕೆಡವಲಾಗಿದೆ

ಕೆಡವಲಾಗಿರುವ ತ್ಯಾಗರಾಜರ ಮನೆ: ೨೦೦೭ ಜನವರಿಯಲ್ಲಿ (ಚಿತ್ರ್: ಹಿಂದೂ)

 

ತ್ಯಾಗರಾಜರ ಮನೆಯಂತೂ ಹೋಯಿತು. ಚಿತ್ರದಲ್ಲಿ ಕಾಣುವಂತಹ ಮಾಳಿಗೆಯ ಕಟ್ಟಡ ಬಂದ ಮೇಲೆ, ಅದಕ್ಕೂ ತ್ಯಾಗರಾಜರಿಗೂ ಯಾವುದೇ ಭಾವನಾತ್ಮಕ ಸಂಬಂಧ ಉಳಿಯುವುದು ದೂರವೇ ಉಳಿಯಿತು. ಮುಂದೆ ಎಂದಾದರೊಂದು ದಿನ ನಮಗೂ ಪಾಶ್ಚಾತ್ಯರ ಹಾಗೆ ತಮ್ಮ ಹಿಂದಿನ ಚರಿತ್ರೆಯನ್ನು ತೋರಿಸುವ ಕಟ್ಟಡಗಳನ್ನು ಕಾಯ್ದು ಜತನದಿಂದ ನೋಡಿಕೊಳ್ಳುವ ಬುದ್ದಿ ಬರಬಹುದೇನೋ? ಅಂತಹ ಕಾಲ ಬರಲಿ ಎಂದು ಆಶಿಸುವೆ. ಅದಕ್ಕೆ ಜನರಲ್ಲಿ ಇಂತಹ ವಿಷಯಗಳ ಬಗ್ಗೆ ಕಾಳಜಿ ಬರಬೇಕು. ಹಾಗೆ ಬಂದಾಗ ಮಾತ್ರ ಇಂತಹ ತುಂಬಲಾರದ ನಷ್ಟಗಳಿಂದ ನಮಗೆ ಮುಕ್ತಿ ಸಿಕ್ಕುವುದು.

 

( ನಾನು ತಿರುವೈಯ್ಯಾರಿಗೆ ಹೋದಾಗ ನನ್ನ ಬಳಿ ಕ್ಯಾಮರಾ ಇರಲಿಲ್ಲ. ರಸಿಕ ಫೋರಮ್ ಗೆಳೆಯರಾದ ಮಹಾಕವಿ (ಸುಬ್ರಮಣ್ಯಂ) ಅವರು ತಾವು ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಲು ಅನುಮತಿ ಇತ್ತಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು)

  • ಜ್ಞಾನವಾಹಿನಿ
~.~
  • Login or register to post comments
  • 901 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 16, 2007 - 2:33pm — Sunil Jayaprakash

ಉ: ತಿರುವೈಯ್ಯಾರು, ಮಿಶನ್ ಸ್ಯಾನ್ ಹೋಸೆ ಮತ್ತು ಚಾರಿತ್ರಿಕ ತಿಳಿವು

Sunil Jayaprakash's picture

ಹಂಸಾನಂದಿಯವರೇ,

ಬರಹವನ್ನು ಓದುತ್ತಾ ಓದುತ್ತಲೇ ನಾನೂ ಕೂಡ ಹಿನ್ನೆಪ್ಪನ್ನು ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ತ್ಯಾಗರಾಜರು, ರಾಜನ ಆಹ್ವಾನಕ್ಕೆ ಉತ್ತರವಾಗಿ, "ನಿಧಿ ಚಾಲಾ ಸುಖಮಾ..." ಎಂಬ ಮಾತನ್ನು ಹಾಡಿನ ರೂಪದಲ್ಲಿ ಹೇಳಿದರೋ, ಹೇಳಿದ್ದರೆ ಯಾವ ರಾಗ ಮುಂತಾಗಿ. ಸ್ಯಾನ್ ಹೋಸೆ ಚರಿತ್ರೆಯನ್ನು ಓದಿ, ನಂತರ ಮತ್ತೆ ತ್ಯಾಗರಾಜರ ಮನೆಗೆ ಬರುವಷ್ಟರಲ್ಲಿ ಆ ಕಲ್ಪನೆಗಳು ದೊಪ್ಪನೆ ಕುಸಿದು ಬಿದ್ದವು Sad

ನಾವು ಸೆಂಟಿಗಳಾಗಬಾರದು ನಿಜ. ಆದರೆ ನಮಗೇನು ಕೊರೆತೆಯಾಗಿತ್ತು ಈ ಭೂಮಿಯಲ್ಲಿ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 18, 2007 - 12:49pm — hamsanandi

ಉ: ತಿರುವೈಯ್ಯಾರು, ಮಿಶನ್ ಸ್ಯಾನ್ ಹೋಸೆ ಮತ್ತು ಚಾರಿತ್ರಿಕ ತಿಳಿವು

hamsanandi's picture

Quote:

ಬರಹವನ್ನು ಓದುತ್ತಾ ಓದುತ್ತಲೇ ನಾನೂ ಕೂಡ ಹಿನ್ನೆಪ್ಪನ್ನು ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ತ್ಯಾಗರಾಜರು, ರಾಜನ ಆಹ್ವಾನಕ್ಕೆ ಉತ್ತರವಾಗಿ, "ನಿಧಿ ಚಾಲಾ ಸುಖಮಾ..." ಎಂಬ ಮಾತನ್ನು ಹಾಡಿನ ರೂಪದಲ್ಲಿ ಹೇಳಿದರೋ, ಹೇಳಿದ್ದರೆ ಯಾವ ರಾಗ ಮುಂತಾಗಿ.

ತ್ಯಾಗರಾಜರು ರಾಜನಿಗೆ ಕೊಟ್ಟ ಉತ್ತರವೆಂದು ಹೇಳಲಾದ ನಿಧಿ ಚಾಲಾ ಸುಖಮಾ ಎಂಬುದು ಕಲ್ಯಾಣಿ ರಾಗದಲ್ಲಿರುವ ಅವರ ಒಂದು ಪ್ರಸಿದ್ಧ ಕೃತಿ. ಕಚೇರಿಗಳಲ್ಲಿ ಕಲ್ಯಾಣಿಯನ್ನು ಮುಖ್ಯ ರಾಗವನ್ನಾಗಿ ಹಾಡಲು ತೆಗೆದುಕೊಂಡಾಗ, ಈ ಕೃತಿ ಹಾಡುವ ಸಂಭವ ಬಹಳ!

ಈ ಕೃತಿ ಮ್ಯೂಸಿಕ್ ಇಂಡಿಯಾ ಅಥವ ಇತರ ತಾಣಗಳಲ್ಲಿ ಇರಬೇಕು ಎಂದುಕೊಂಡಿದ್ದೇನೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 19, 2007 - 3:34pm — phmd

ಉ: ತಿರುವೈಯ್ಯಾರು, ಮಿಶನ್ ಸ್ಯಾನ್ ಹೋಸೆ ಮತ್ತು ಚಾರಿತ್ರಿಕ ತಿಳಿವು

phmd's picture

ಹೌದು...
ಭಾರತೀಯರಲ್ಲಿ ಪುರಾತನ ಸ್ಮಾರಕಗಳು, ಸಾಧುಪುರುಷರು, ಮುಂತಾದವುಗಳ ಬಗ್ಗೆ ತುಂಬಾ ಅಸಡ್ಡೆ.
ಶ್ರೀರಾಮಚಂದ್ರ ವಾನರ ಸೇನೆಯ ನೆರವಿನಿಂದ ನಿರ್ಮಿಸಿದ "ರಾಮ ಸೇತು"ವನ್ನು ಸರ್ಕಾರ ಕೆಡವಿ ಹಾಕಲು ಯತ್ನಿಸುತ್ತಿದೆ(ಪಾಶ್ಚಿಮಾತ್ಯ ರಾಷ್ಟ್ರಗಳು ಪುರಾತನ ಸ್ಮಾರಕಗಳನ್ನು ರಕ್ಷಿಸಲು ಮುಂದಾಗಿರುವಾಗ).!!?
ಇದರ ಬಗ್ಗೆ ಅತೀ ಕಡಿಮೆ ವಿರೊಧ ವ್ಯಕ್ತವಾಯಿತು.ಉಳಿದ ಭಾರತೀಯರು ತಮ್ಮ ಕರ್ತವ್ಯಗಳನ್ನು ಮರೆತಂತಿದೆ. ನಾವು ಹಕ್ಕುಗಳಿಗಿಂತ ಕರ್ತವ್ಯದ ಕಡೆಗೆ ಹೆಚ್ಚು ಗಮನಹರಿಸುವುದು ಒಳ್ಳೆಯದೆಂದು ಅನ್ನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜೂಜುಕೋರನೊಬ್ಬನ ಅಳಲು
  • ಕನ್ನಡ ಅನುವಾದಕ್ಕೆ ನಿಮ್ಮ ಸಹಾಯ ಬೇಕು
  • ತಿರುವೈಯ್ಯಾರು ಮತ್ತು ಮಿಶನ್ ಸ್ಯಾನ್ ಹೊಸೆ
  • ಹೌದಾ ಪಪ್ಪಾ..?
  • ಒಂಥರಾ ಪ್ರೀತಿ...
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator