ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕೆಲವು ವಚನಗಳು

೧) ಬಲ್ಲಿದನು ಬೆಲ್ಲವನು
ಹೊಂದಿಹನು
ಇಲ್ಲದವನ ಮನೆಗೆ
ಇರುವೆಯೂ ಹತ್ತದೂ ಕಾಣಾ ಭರತೇಶ

೨) ಹಣದ ಕುಪ್ಪರಿಗೆ ಏರಿದವನಿಗೆ
ಮಣ್ಣ ಗಂಧ ತಿಳಿಯದು
ಹೆಣದ ಪಕ್ಕದಲಿ ಎನಿತು
ಕೂತರೂ ಹೊರಡದು ಮಾತು ಕಾಣಾ ಭರತೇಶ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mahesha's picture

ಒಂದನೇ ವಚನ ಚನ್ನೈತೆ.

ಆದರೆ ಎರಡನೇದು :(
ಮಣ್ಣ ಗಂಧ = ಮಣ್ಣ ಕಂಪು?

ಮೊದಲೆರಡು ಸಾಲುಗಳಿಗೂ, ಮಿಕ್ಕರಡು ಸಾಲುಗಳಿಗೂ ನಂಟು ತಿಳೀಲಿಲ್ಲ!

ವೈಭವ's picture

ಸಿರಿವಂತನಿಗೆ ಬುದ್ದಿ ಹೇಳಕಾಗಕಿಲ್ಲ ( ಬುದ್ದಿ ನೆಟ್ಟಗಿರಕಿಲ್ಲ)
ಹೆಣದ ಜೊತೆ ಮಾತಾಡಕ್ಕಾಗಲ್ಲ.....ಇಂತ ಬಳಕೆಯಿಲ್ಲದ ಮೊಗಸು ಮಾಡಬೇಕಿಲ್ಲ ಎಂಬುದು ಅದರ ತಿಳುವಳಿಕೆ

mahesha's picture

ನನ್ನಿ..!!

ಇಲ್ಲಿ ದುಡ್ಡಿರುವವರನ್ನು ಹೆಣಕ್ಕೆ ಹೋಲಿಸಲಾಗಿದೆ. ಸರಿ.

hamsanandi's picture

ಚೆನ್ನಾಗಿವೆ ವಚನಗಳು ವೈಭವರೆ,

ದುಡ್ಡೇ ದೊಡ್ಡಪ್ಪ ಅನ್ನೋದನ್ನ ಚೆನ್ನಾಗಿ ಹೇಳಿದ್ದೀರ!

ಈ ಸಂದರ್ಭದಲ್ಲಿ ಸಂಸ್ಕೃತ ಸುಬ್ಗಾಷಿತವೊಂದು ನೆನಪಾಯಿತು:

ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ!
(ಭರ್ತಹರಿಯ ಸುಭಾಶಿತವೊಂದು)

ಹಣವಿದ್ದರವನೆ ತಾ ಸೊಗಸುಗಾರ
ಅವ ಪಂಡಿತ, ಅರಿತವ, ಮಾತುಗಾರ
ಗುಣಗ್ರಾಹಿಯವ, ನೋಡಿರೋ ಅವನನೆಲ್ಲ
ದುಡ್ಡು ಎಲ್ಲಿರಲಲ್ಲಿ ಹೋದವೋ ಗುಣಗಳೆಲ್ಲ!
(ಅನುವಾದ: ಹಂಸಾನಂದಿ)

-ಹಂಸಾನಂದಿ