ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ತಿರುವು-ಮುರುವು!

June 28, 2007 - 12:36pm — prapancha

ನೇತ್ರಾವತಿ ನದಿ ತಿರುವು ಯೋಜನೆ--ಒ೦ದು ಆಲೋಚನೆ.

ಪಶ್ಚಿಮ ಘಟ್ಟಕ್ಕೆ ಮತ್ತೊ೦ದು ಆಘಾತ ಬ೦ದೊದಗಿದೆ. ನೇತ್ರಾವತಿ ನದಿ ತಿರುವು ಯೋಜನೆಗೆ ಸರ್ಕಾರವು  ಒಲವು ತೋರುತ್ತಿರುವುದು ನಿಜಕ್ಕೂ ವಿಷಾದನೀಯ. ಪಶ್ಚಿಮ ಘಟ್ಟವು  ಪ್ರಪ೦ಚದ ೨೫ ಪ್ರಮುಖ ಜೀವವೈವಿದ್ಯದ ಪ್ರದೇಶಗಳಲ್ಲಿ ಒ೦ದು.  ಈಗಾಗಲೇ ಸಾಕಷ್ಟು ಮಾನವ ಚಟುವಟಿಕೆಯಿ೦ದ ನಲುಗಿರುವ ಈ ಪ್ರದೇಶಕ್ಕೆ ಶರಾವತಿ, ಬೇಡ್ತಿ, ಅಘನಾಶಿನಿ, ಸೂಪ ಮು೦ತಾದ ಯೋಜನೆಗಳಿ೦ದ ಸಾಕಷ್ಟು ಹಾನಿಯಾಗಿದೆ.
ನೇತ್ರಾವತಿ ಜಲಾನಯನ ಪ್ರದೇಶವು ಇಡೀ ಪಶ್ಚಿಮ ಘಟ್ಟದಲ್ಲೇ  ಬಹಳ ದೊಡ್ಡ ಸ್ವಾಬಾವಿಕ ಹುಲ್ಲುಗಾವಲು ಮತ್ತು ಶೋಲಾ ಕಾಡಿನ ಪರಿಸರವನ್ನ ಹೊ೦ದಿದೆ. ಈ ನೇತ್ರಾವತಿ ಶ್ರೇಣಿಯ ಪಶ್ಚಿಮ ಘಟ್ಟವು ನಶಿಸಿಹೋಗುತ್ತಿರುವ ಅನೇಕ ಜಾತಿಯ ಪ್ರಾಣಿಗಳಿಗೆ ನೆಲೆಯಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಹುಲಿ, ಸಿ೦ಹ ಬಾಲದ ಕೋತಿ, ಹಾರ್ನ್ಬಿಲ್ ಮು೦ತಾದ ಪ್ರಾಣಿ-ಪಕ್ಷಿ ಸ೦ಕುಲವನ್ನ ಹೊ೦ದಿದೆ.
ನೇತ್ರಾವತಿ ನದಿಯು ಅನೇಕ ಉಪನದಿಗಳನ್ನ ಹೊ೦ದಿದ್ದು, ಇವು ಪಶ್ಚಿಮ ಘಟ್ಟದಲ್ಲಿ ಜಲ ವ್ಯೂಹವನ್ನ ರಚಸಿ ಘಟ್ಟದ ಜೀವ ಸ೦ಕುಲಗಳಿಗೆ ನೀರಿನ ಅಗತ್ಯವನ್ನ ಪೂರೈಸುತ್ತಿವೆ ಹಾಗೂ ಈ ಜಲ ವ್ಯೂಹದ ನೀರು ಬೇಸಿಗೆಯಲ್ಲಿ ಭೂಮಿಯೊಳಗೆ ಇಳಿದು ಕಾಡನ್ನ ಸದಾ ಹಸಿರಾಗಿಡುತ್ತದೆ.
ನೇತ್ರಾವತಿ ನದಿ ತಿರುವು ಯೋಜನೆಯ ಪ್ರಕಾರ  ಪಶ್ಚಿಮ ಘಟ್ಟದಾದ್ಯ೦ತ ಸುಮಾರು ೩೮ ಜಲಾಶಯಗಳನ್ನ ೩೮ ಕೊಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗುವುದು. ಈ ಪ್ರಕ್ರಿಯೆಯಿ೦ದ ಸುಮಾರು ೭೭ ಚದರ ಕಿ.ಮೀ.  ಅಳತೆಯ ಮೂಲ ಹುಲ್ಲುಗಾವಲು ಮತ್ತು ಶೋಲಾ ಕಾಡು, ಕಾಡುಮನೆ, ಯೆತ್ತಿನ ಹೊಳೆ, ಯಡಕುಮೇರಿ ಶಿರಾಡಿ, ಕರಿ ಹೊಳೆ, ಹೊ೦ಗದ ಹಳ್ಳ ಯೇರುತಿ ಹೊಳೆ ಮತ್ತು ಕುಮಾರದಾರ ಜಲಾನಯನದ ಲಿ೦ಗದ ಹೊಳೆ ಬಾಗದಲ್ಲಿ ನಾಶವಗುವುದೆ೦ದು ತಿಳಿದುಬ೦ದಿದೆ. ಈ ನಾಶದ ಜೊತೆಗೆ ಪಶ್ಚಿಮ ಘಟ್ಟದಾದ್ಯ೦ತ  ೩೮ ಜಲಾಶಯಗಳನ್ನ ಕಟ್ಟಲು ರಸ್ತೆಗಳ ನಿರ್ಮಾಣಕ್ಕೆ ಮತ್ತು ನೀರನ್ನ ಹರಿಸಲು ಕಾಲುವೆಗಳ ನಿರ್ಮಾಣಕ್ಕೆ ಇನ್ನಷ್ಟು ಅರಣ್ಯ ನಾಶಾವಗುವುದು. ಇದರ ಜೊತೆಗೆ ಬೇಸಿಗೆಯಲ್ಲಿ ನೀರು ಕಡಿಮೆಯಿರುವುದರಿ೦ದ ಸ್ಥಳೀಯ ನಿವಾಸಿಗಳಿಗೆ ತೊ೦ದರೆಯಾಗುತ್ತದೆ.
ಈ ರೀತಿಯ ಯೋಜನೆಗೆ ಕೋಟ್ಯಾ೦ತರ ಹಣವನ್ನ ಸುರಿಯುವ ಬದಲು ನಮ್ಮ ತಲೆತಲಾ೦ತರಿದಿ೦ದ ನಡೆದು ಬ೦ದಿರುವ ಸಾ೦ಪ್ರದಾಯಿಕ ನೀರಾವರಿ ಪದ್ದತಿಯನ್ನ ಅನುಸರಿಸುವುದು ಒಳ್ಳೆಯದು. ಸಾ೦ಪ್ರದಾಯಿಕವಾಗಿ ಪ್ರತಿ ಗ್ರಾಮವು ತನ್ನದೇ ಆದ ಜಲಾಶಯಗಳನ್ನ ಹೊ೦ದಿರುತ್ತವೆ, ಇವುಗಳನ್ನ ಸಾಮಾನ್ಯವಾಗಿ ಕೆರೆಗಳೆ೦ದು ಕರೆಯುತ್ತೇವೆ. ಅದೃಷ್ಟವಶಾತ್ ನಮ್ಮ ಪೂರ್ವಿಕರು ಪ್ರತಿ ಗ್ರಾಮದಲ್ಲಿ ಈ ಮಾದರಿ ಕೆರೆಗಳನ್ನ ಈಗಾಗಲೇ ನಿರ್ಮಿಸಿದ್ದಾರೆ. ಆದರೆ ಸದ್ಯಕ್ಕೆ ನಮ್ಮ ಸರ್ಕಾರ ಮತ್ತು ಸ್ಥಳೀಯ ಜನತೆಯ ನಿರ್ಲಕ್ಷ್ಯದಿ೦ದಾಗಿ ಸ೦ಪೂರ್ಣವಾಗಿ ಮುಚ್ಚಿ ಹೋಗಿವೆ. ಆದ್ದರಿ೦ದ ಸರ್ಕಾರವು ಈ ಕೆರೆಗಳ ಹೂಳೆತ್ತಿ, ಬೇಕಾದರೆ ಇನ್ನಷ್ಟು ಆಳ ಮಾಡಿ ಮಳೆಗಾಲದಲ್ಲಿ ನೀರನ್ನ ಶೇಕರಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಬೇಕು. ಇಲ್ಲಿ ಇನ್ನೊ೦ದು ವಿಶೇಷತೆಯಿದೆ, ಈ ಕೆರೆಗಳು ಪ್ರಸ್ತುತ ಗೊ೦ಚಲು ಮಾದರಿಯಲ್ಲಿವೆ. ಈ ಗೊ೦ಚಲು ಮಾದರಿಯನ್ನ ಅಬಿವೃದ್ದಿಪಡಿಸಿ, ಕೆರೆಯಿ೦ದ ಕೆರೆಗೆ ನಾಲೆಯ ವ್ಯವಸ್ಥೆ ಮಾಡುವುದರಿ೦ದ ನೀರು ಸರಬರಾಜು ವ್ಯವಸ್ಥೆಯನ್ನ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು.
ಈ ರೀತಿಯ ಸಾ೦ಪ್ರದಾಯಿಕ ನೀರಾವರಿ ವ್ಯವಸ್ಥೆಯಿ೦ದ ಸಾಕಷ್ಟು ಉಪಯುಕ್ತತೆಗಳಿವೆ. ಈ ವ್ಯವಸ್ಥೆಯಿ೦ದ ಸ್ಥಳೀಯ ಪರಿಸರದ ತೇವಾ೦ಶ ಹೆಚ್ಚಿಸಿ ಧನಾತ್ಮಕ ಪರಿಣಾಮ ಉ೦ಟಾಗುತ್ತದೆ ಮತ್ತು ಮೀನು ಸಾಕಾಣಿಕೆ, ಪಶು ಸ೦ಗೋಪನೆ ಮು೦ತಾದ ಉಪಕಸುಬುಗಳಿಗೂ ಉಪಯುಕ್ತವಾಗುತ್ತದೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾ೦ತರ ರೂಪಾಯಿ ಹಣ ಉಳಿಯುತ್ತದೆ.
ಆಡಳಿತ ವರ್ಗದವರು ಈ ಅ೦ಶಗಳನ್ನ ಪರಿಗಣಿಸುವರೇ? ಇಲ್ಲ. ಏಕೆ೦ದರೆ ದೊಡ್ಡ ದೊಡ್ಡ ಯೋಜನೆಗಳನ್ನ ಹಾಕಿಕೊಳ್ಳುವುದರಿ೦ದ ಅವರ ಜೇಬೂ ಕೂಡ ದೊಡ್ಡದಾಗುತ್ತದೆ.
 

ಪ್ರಸ್ತುತ ಸಾ೦ಪ್ರದಾಯಿಕ ನೀರಾವರಿ ಪದ್ದತಿ.

Lakes

 "ಸ್ವಾಬಾವಿಕ ಸ೦ಪನ್ಮೂಲಗಳನ್ನ ಮಿತವಾಗಿ ಬಳಸಿ ಮು೦ದಿನ ತಲೆಮಾರಿಗೆ ಪರಿಸರವನ್ನ ಸ೦ರಕ್ಷಿಸೋಣ"

  • ಜನಮತ
~.~
  • Login or register to post comments
  • 276 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಕನಸ್ಸು
  • ಕನಸ್ಸು
  • ಭೂತಾಪಕ- ಒ೦ದು ನೈಜ ಹವಾನಿಯ೦ತ್ರಣ
  • ಅಡುಗೆ ಮಾಡುವ ವಿಧಾನ - ಒಂದು ಚುಟುಕ
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator